ಕರಾವಳಿ

ದ.ಕ ಜಿಲ್ಲೆಯಲ್ಲಿ ಕ್ಲಬ್ ಗಳನ್ನು ಬಂದ್ ಮಾಡಿ‌ ಡಿಸಿ ಆದೇಶ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲ ರಿಕ್ರಿಯೇಷನ್ ಕ್ಲಬ್‌ಗಳನ್ನು ಬಂದ್ ಮಾಡಲು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಈ ಕಾರಣದಿಂದ ಜಿಲ್ಲೆಯಲ್ಲಿನ ರಿಕ್ರಿಯೇಷನ್ ಕ್ಲಬ್‌ಗಳಲ್ಲಿ ಇಸ್ಪೀಟ್ ಕಾರ್ಡ್ ಆಟವಾಡುವ ವೇಳೆ, ಕಾರ್ಡ್‌ಗಳನ್ನು ಒಬ್ಬರು ಮತ್ತೊಬ್ಬರಿಗೆ ನೀಡುವ ಸಂದರ್ಭ ಕೋವಿಡ್ ಸೋಂಕು ಸಾಂಕ್ರಾಮಿಕವಾಗಿ ಪಸರಿಸುವ ಸಾಧ್ಯತೆಗಳು ಹೆಚ್ಚಾಗಿರುವುದು ಗಮನಿಸಲಾಗಿದೆ. ರಿಕ್ರಿಯೇಷನ್ ಕ್ಲಬ್‌ಗಳಲ್ಲಿ ಇಸ್ಪೀಟ್ ಆಡುವಾಗ ಕನಿಷ್ಠ ಒಂದು ಮೀಟರ್ ಸುರಕ್ಷಿತ ಅಂತರ ಸಾಧ್ಯತೆ […]

ದ.ಕ ಜಿಲ್ಲೆಯಲ್ಲಿ ಕ್ಲಬ್ ಗಳನ್ನು ಬಂದ್ ಮಾಡಿ‌ ಡಿಸಿ ಆದೇಶ Read More »

ಸಚಿವರು ಪ್ರಯಾಣಿಸುತ್ತಿದ್ದ ಜೀಪ್ ನಡುರಸ್ತೆಯಲ್ಲೇ ಬಾಕಿ. 3 ದಶಕಗಳಿಂದ ಬಿಜೆಪಿ ಗೆಲ್ಲಿಸಿದ ಸುಳ್ಯ ಬದಲಾಗೋದು ಯಾವಾಗ? ಜಾಲತಾಣಗಳಲ್ಲಿ ವ್ಯಾಪಕ ಟೀಕೆ !

ಸುಳ್ಯ: ಸುಳ್ಯ ವಿಧಾನ ಸಭಾ ಕ್ಷೇತ್ರದ ಹಲವು ರಸ್ತೆಗಳು ಅಭಿವೃದ್ದಿಗೊಂಡಿದೆ, ಇನ್ನು ಕೆಲವು ರಸ್ತೆಗಳ ಕಾಮಗಾರಿ ನಡೆಯುತ್ತಿದೆ, ಈ ನಡುವೆ ಕೆಲ ಕಡೆಗಳಲ್ಲಿ ಸಂಪರ್ಕ ರಸ್ತೆಗಳ ದುಸ್ಥಿತಿ ಹೇಳತೀರದು. ಈ ನಡುವೆ ಸುಳ್ಯ ಕ್ಷೇತ್ರದ ಶಾಸಕರೂ ರಾಜ್ಯದ ಬಂದರು ಹಾಗೂ ಮೀನುಗಾರಿಕಾ ಸಚಿವರೂ ಆಗಿರುವ ಎಸ್. ಅಂಗಾರ ಅವರು ತೆರಳುತ್ತಿದ್ದ ಜೀಪೊಂದು ಅರ್ಧದಲ್ಲಿ ಬಾಕಿಯಾಗಿರುವ ವೀಡಿಯೋ ವೈರಲ್ ಆಗಿದ್ದು ಜಾಲತಾಣಗಳಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ. ಸುಳ್ಯ ತಾಲೂಕಿನ ಆಲೆಟ್ಟಿ ಕೂಟೇಲು ಸಂಪರ್ಕ ರಸ್ತೆ ಹಲವಾರು ವರ್ಷಗಳಿಂದ ದುರಸ್ತಿ

ಸಚಿವರು ಪ್ರಯಾಣಿಸುತ್ತಿದ್ದ ಜೀಪ್ ನಡುರಸ್ತೆಯಲ್ಲೇ ಬಾಕಿ. 3 ದಶಕಗಳಿಂದ ಬಿಜೆಪಿ ಗೆಲ್ಲಿಸಿದ ಸುಳ್ಯ ಬದಲಾಗೋದು ಯಾವಾಗ? ಜಾಲತಾಣಗಳಲ್ಲಿ ವ್ಯಾಪಕ ಟೀಕೆ ! Read More »

ದ.ಕ ದಲ್ಲಿ‌ ಆ.15 ರ ನಂತರ ಲಾಕ್ ಡೌನ್? ಏನಂದ್ರು ಸಚಿವರು?

ಮಂಗಳೂರು: ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದ್ದು, ಪಾಸಿಟಿವಿಟಿ ದರ ಮತ್ತಷ್ಟು ಹೆಚ್ಚಾದ್ರೆ ಲಾಕ್ಡೌನ್ ಆಗುವ ಅಪಾಯವಿದೆ ಎಂದು ಮಂಗಳೂರಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಮಾತನಾಡಿದ ಅವರು, ಪಾಸಿಟಿವಿಟಿ ದರ ಶೇಕಡಾ 3 ತಲುಪಿದೆ. ಈ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಮಾಡಲಾಗಿದೆ. ಇದು ಹೆಚ್ಚಾದ್ರೆ ಲಾಕ್ ಡೌನ್ ಮಾಡುವ ಅಪಾಯವಿದೆ ಎಂದ ಅವರು, ಕೋವಿಡ್ ನಿಯಂತ್ರಣ ಮಾಡುವುದು ಆರೋಗ್ಯ ಇಲಾಖೆಯ ಜವಾಬ್ದಾರಿ. ಅದು ನಿಯಮಗಳನ್ನು ಪಾಲಿಸುವುದು

ದ.ಕ ದಲ್ಲಿ‌ ಆ.15 ರ ನಂತರ ಲಾಕ್ ಡೌನ್? ಏನಂದ್ರು ಸಚಿವರು? Read More »

ಕಡಬ: ರುದ್ರಭೂಮಿಯಲ್ಲಿ ಅರೆಬೆಂದ ಶವ ತಿಂದ ಬೀದಿನಾಯಿಗಳು…!

ಕಡಬ : ಹಿಂದೂ ರುದ್ರಭೂಮಿಯಲ್ಲಿ ಅರೆಬೆಂದ ಸ್ಥಿತಿಯಲ್ಲಿ ಮೃತದೇಹವನ್ನು ಸಂಬಂಧಿಕರು ಬಿಟ್ಟು ಹೋದ ಪರಿಣಾಮ ನಾಯಿಗಳು ದೇಹದ ಮಾಂಸವನ್ನು ಎಳೆದು ತಿಂದ ಘಟನೆ ಕಡಬದಲ್ಲಿ ನಡೆದಿದೆ. ಕಡಬ ಸಮೀಪದ ಗೋಳಿಯಡ್ಕ ವ್ಯಕ್ತಿ ಶನಿವಾರದಂದು ಮೃತಪಟ್ಟಿದ್ದು, ಕಡಬದ ಹಿಂದೂ ರುದ್ರಭೂಮಿಯಲ್ಲಿ ದಹನ ಕಾರ್ಯ ಮಾಡಲಾಗಿತ್ತು. ಮೃತ ವ್ಯಕ್ತಿಯ ಕುಟುಂಬ ಸದಸ್ಯರು ಮೃತದೇಹಕ್ಕೆ ಬೆಂಕಿ ಹಚ್ಚಿ ತೆರಳಿದ್ದರು. ಸ್ವಲ್ಪ ಹೊತ್ತಾದ ಮೇಲೆ ಮಾಂಸ ಬೆಂದ ವಾಸನೆಗೆ ಬಂದ ನಾಯಿಗಳು ಮಾಂಸವನ್ನು ತಿಂದಿವೆ. ಜೊತೆಗೆ ಉಳಿದ ಎಲುಬುಗಳನ್ನು ಕೆಲವು ಮನೆಗಳ ಅಂಗಳದಲ್ಲಿ

ಕಡಬ: ರುದ್ರಭೂಮಿಯಲ್ಲಿ ಅರೆಬೆಂದ ಶವ ತಿಂದ ಬೀದಿನಾಯಿಗಳು…! Read More »

ಆಟಿ ಅಮಾವಾಸ್ಯೆ| ಆಚಾರ ವಿಚಾರ

ತುಳುನಾಡು ಹಲವಾರು ಸಂಸ್ಕ್ರತಿ‌ ಸಂಪ್ರದಾಯಗಳ‌ ತವರೂರು. ಪರಶುರಾಮ ಸೃಷ್ಟಿಯ ಈ‌ ನಾಡಲ್ಲಿ ಅಣು ಅಣುವಿನಲ್ಲೂ ದೇವರನ್ನು ಕಾಣುವ, ಪ್ರಕೃತಿಯನ್ನು ಆರಾಧಿಸುವ ಪದ್ದತಿ ಇಂದಿಗೂ ಜನಜನಿತ. ಅಂತಹ ಆಚರಣೆಗಳಲ್ಲಿ ‘ಆಟಿ ಅಮಾವಾಸ್ಯೆ’ ಬಹುಮುಖ್ಯವಾದದ್ದು. ಸೌರಪಂಚಾಂಗದ ಪ್ರಕಾರ ಆಷಾಡ (ಆಟಿ)ಮಾಸದಲ್ಲಿ ಆಟಿ ಅಮವಾಸ್ಯೆ ತುಳುವರ ಪ್ರಮುಖ ಆಚರಣೆಗಳ ಒಂದು. ತುಳುವರು ಪ್ರಕೃತಿ ಆರಾಧಕರು. ರೋಗರುಜಿನಗಳು ಹೆಚ್ಚಾಗುವ ಈ ಮಳೆಗಾಲದಲ್ಲಿ ಔಷಧಕ್ಕಾಗಿ ಪ್ರಕೃತಿಯನ್ನೇ ನೆಚ್ಚಕೊಂಡವರು ತುಳುವರು. ಅಂತೆಯೇ ಈ ಅಮಾವಾಸ್ಯೆ ದಿನ ಔಷಧೀಯ ಗುಣಗಳಿರುವ ಹಾಲೆ ಮರದ ಕೆತ್ತೆಯ ಕಷಾಯವನ್ನು ಸೇವಿಸುವುದು

ಆಟಿ ಅಮಾವಾಸ್ಯೆ| ಆಚಾರ ವಿಚಾರ Read More »

ಭಾರೀ‌ಮಳೆಗೆ ತತ್ತರಿಸಿದ ಕುಕ್ಕೆ ಸುಬ್ರಹ್ಮಣ್ಯ| ಸ್ನಾನಘಟ್ಟ ಮುಳುಗಡೆ, ತಗ್ಗು‌ಪ್ರದೇಶಕ್ಕೆ ನುಗ್ಗಿದ ನೆರೆ

ಕುಮಾರಧಾರದ ಉಪನದಿಯಾದ ದರ್ಪಣತೀರ್ಥವು ತುಂಬಿ ಹರಿದು ದರ್ಪಣತೀರ್ಥ ಸೇತುವೆಯು ಮುಳು ಗಡೆಗೊಂಡಿತ್ತು. ಇದರಿಂದಾಗಿ ಸುಬ್ರ ಹ್ಮಣ್ಯ- ಪುತ್ತೂರು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕುಕ್ಕೆಯ ಪರಿಸರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ನದಿ ತೊರೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ. ಸ್ನಾನಘಟ್ಟ ಜಲಾವೃತ್ತ: ಘಟ್ಟ ಪ್ರದೇಶದಲ್ಲಿ ಸುರಿದ ಮಳೆಯ ಪರಿಣಾಮ ಕುಮಾರಧಾರ ನದಿಯು ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಕುಮಾರಧಾರ ಸ್ನಾನಘಟ್ಟವು ಮುಂಜಾನೆ ಮುಳುಗಡೆಯಾಗಿತ್ತು. ಸ್ನಾನಘಟ್ಟದಲ್ಲಿ ನಿರ್ಮಿತವಾಗಿದ್ದ ಶೌಚಾಲಯ ನೀರಿನಿಂದ ಆವೃತ ಗೊಂಡಿತ್ತು. ಕುಕ್ಕೆ ಸುಬ್ರಹ್ಮಣ್ಯ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಭಾರೀ

ಭಾರೀ‌ಮಳೆಗೆ ತತ್ತರಿಸಿದ ಕುಕ್ಕೆ ಸುಬ್ರಹ್ಮಣ್ಯ| ಸ್ನಾನಘಟ್ಟ ಮುಳುಗಡೆ, ತಗ್ಗು‌ಪ್ರದೇಶಕ್ಕೆ ನುಗ್ಗಿದ ನೆರೆ Read More »

ನಾಳೆಯಿಂದ ಕೋವಿಡ್ ತೀವ್ರತೆ ಹೆಚ್ಚಿರುವ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಪ್ಯೂ ಜಾರಿ- ಸಿಎಂ ಬೊಮ್ಮಾಯಿ.

ಬೆಂಗಳೂರು: ರಾಜ್ಯದ ಅನೇಕ ಭಾಗಗಳಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಕರ್ನಾಟಕ ಸರಕಾರ ಮುಂದಾಗಿದೆ. ಬೆಂಗಳೂರು, ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸೋಂಕಿನ ತೀವ್ರತೆ ಮುಂದುವರಿದಿರುವುದರಿಂದ ರಾತ್ರಿ ಕರ್ಫ್ಯೂವನ್ನು ಮರಳಿ ಹೇರಿಕೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಣತರ ಜತೆ ಸಭೆ ನಡೆಸಲಾಗಿದ್ದು, ರಾಜ್ಯಾದ್ಯಂತ ರಾತ್ರಿ 9 ರಿಂದ ಬೆಳಿಗ್ಗೆ 5ರವರೆಗೆ ರಾತ್ರಿ ನಿಷೇಧಾಜ್ಞೆ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಹೇಳಿದರು. ನೈಟ್

ನಾಳೆಯಿಂದ ಕೋವಿಡ್ ತೀವ್ರತೆ ಹೆಚ್ಚಿರುವ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಪ್ಯೂ ಜಾರಿ- ಸಿಎಂ ಬೊಮ್ಮಾಯಿ. Read More »

ಮಂಗಳೂರಿಗೆ ಕಾಲಿಟ್ಟ ‘ಇಟಾ’ ವೈರಸ್| ಕತರ್ ನಿಂದ ಬಂತು ಮಹಾಮಾರಿ|

ಮಂಗಳೂರು:. ಕೊರೋನಾ ಏರಿಕೆಯ ನಡುವೆ ಡೆಲ್ಟಾ ಸೋಂಕಿನ ಜೊತೆಗೆ ಇದೀಗ ಮತ್ತೊಂದು ಶಾಕ್ ಗೆ ಕರಾವಳಿಯ ಜನತೆ ಬೆಚ್ಚಿಬಿದ್ದಿದ್ದಾರೆ. ಎರಡು ತಿಂಗಳ ಹಿಂದೆ ಕತರ್ ನಿಂದ ಮಂಗಳೂರಿಗೆ ಆಗಮಿಸಿದ್ದ ವ್ಯಕ್ತಿಯೋರ್ವರಲ್ಲಿ ಗುರುವಾರದಂದು ಕೊರೋನಾ ಸೋಂಕಿನ ಹೊಸ ತಳಿ ‘ಇಟಾ’ (ಬಿ.1.525) ವೈರಾಣು ಪತ್ತೆಯಾಗಿದೆ. ಇದರ ಜೊತೆಗೆ ಹೊಸದಾಗಿ ಒಂದು ಡೆಲ್ಟಾ ಪ್ಲಸ್‌ ಪ್ರಕರಣ ಕೂಡ ಕಂಡುಬಂದಿದ್ದು, ರಾಜ್ಯದಲ್ಲಿ ಡೆಲ್ಟಾ ಪ್ಲಸ್ ವೈರಾಣು ಹೊಂದಿದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಹೊಸದಾಗಿ ಕಂಡುಬಂದಿರುವ ಇಟಾ ವೈರಾಣುವಿನ ಬಗ್ಗೆ ತಿಳಿಯಲು ಇನ್ನಷ್ಟೇ

ಮಂಗಳೂರಿಗೆ ಕಾಲಿಟ್ಟ ‘ಇಟಾ’ ವೈರಸ್| ಕತರ್ ನಿಂದ ಬಂತು ಮಹಾಮಾರಿ| Read More »

ದ.ಕ ದಲ್ಲಿ ಕೋವಿಡ್ ಏರಿಕೆ| ವಾರಾಂತ್ಯದಲ್ಲಿ ಪುಣ್ಯಕ್ಷೇತ್ರಗಳು ಲಾಕ್| ಭಕ್ತಾದಿಗಳಿಗೆ ನಿರ್ಬಂಧ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಅನುಷ್ಠಾನಗೊಳಿಸಿದ್ದು, ವಾರಾಂತ್ಯಕ್ಕೆ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಕ್ಷೇತ್ರಕ್ಕೆ ಭಕ್ತಾದಿಗಳ ಪ್ರವೇಶ ನಿರ್ಬಂಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ನೆರೆಯ ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದು, ನೆರೆಯ ರಾಜ್ಯ, ಜಿಲ್ಲೆಗಳಿಂದ ಜಿಲ್ಲೆಯ ಪ್ರಯಾಣಿಕರ ಓಡಾಟದಿಂದಾಗಿ ಕೆಲವೊಂದು ಕಠಿಣ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆ.5ರಿಂದ ಆ.15ರವರೆಗೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು,

ದ.ಕ ದಲ್ಲಿ ಕೋವಿಡ್ ಏರಿಕೆ| ವಾರಾಂತ್ಯದಲ್ಲಿ ಪುಣ್ಯಕ್ಷೇತ್ರಗಳು ಲಾಕ್| ಭಕ್ತಾದಿಗಳಿಗೆ ನಿರ್ಬಂಧ Read More »

ಕೋವಿಡ್ ಹಿನ್ನೆಲೆ: ಮಂಗಳೂರು ವಿವಿ ಪರೀಕ್ಷೆಗಳು ತಾತ್ಕಾಲಿಕ ರದ್ದು

ಮಂಗಳೂರು: ನೆರೆಯ ರಾಜ್ಯ ಕೇರಳದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಮಂಗಳೂರು ವಿಶ್ವವಿದ್ಯಾಲಯದಿಂದ ನಡೆಯುತ್ತಿರುವ ಎಲ್ಲಾ ಪದವಿ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಅವರು ಮಂಗಳೂರು ವಿಶ್ವವಿದ್ಯಾಲಯದ ರಿಜೆಸ್ಟಾರ್ ಅವರಿಗೆ ಪತ್ರದ ಮೂಲಕ ಸೂಚಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಅಂತರ್ ಜಿಲ್ಲೆಯಾದ ಕೇರಳದ ಕಾಸರಗೋಡಿನಿಂದ ಆಗಮಿಸುತ್ತಾರೆ. ನೆರೆಯ ರಾಜ್ಯ \ ಜಿಲ್ಲೆಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಯಾಣಿಕರ ಓಡಾಟದಿಂದಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಸೋಂಕು ಹರಡುವ ಸಾಧ್ಯತೆಗಳಿರುವುದರಿಂದ. ಸಂಭಾವ್ಯ

ಕೋವಿಡ್ ಹಿನ್ನೆಲೆ: ಮಂಗಳೂರು ವಿವಿ ಪರೀಕ್ಷೆಗಳು ತಾತ್ಕಾಲಿಕ ರದ್ದು Read More »