ಕರಾವಳಿ

ಮಂಗಳೂರು: ಸಿಟಿ ಬಸ್ ಮೇಲೆ ಉರುಳಿ ಬಿದ್ದ ತೆಂಗಿನಮರ.! ಬೊಂಡ ಕಿತ್ತ ಸಾರ್ವಜನಿಕರು

ಮಂಗಳೂರು: ಸಿಟಿ ಬಸ್ ಮೇಲೆ ತೆಂಗಿನಮರವೊಂದು ಬಿದ್ದ ಘಟನೆ ಆ. 17 ರ ನಗರದ ಮಲ್ಲಿಕಟ್ಟೆ ವೃತ್ತದ ಬಳಿ ನಡೆದಿದೆ. ಘಟನೆಯಲ್ಲಿ ಪ್ರಯಾಣಿಕರೆಲ್ಲರೂ ಪವಾಡ ಸದೃಶ್ಯವಾಗಿ ಪಾರಾಗಿದ್ದಾರೆ. ಬೆಳಗ್ಗೆ ಸುಮಾರು ಹತ್ತುಗಂಟೆ ವೇಳೆ ಚಲಿಸುತ್ತಿದ್ದ 15 ನಂಬರ್ ನ ಸಿಟಿ ಬಸ್ ಮೇಲೆ ಬಿದ್ದಿದೆ. ತೆಂಗಿನ ಮರ ಬಸ್ ನ ಹಿಂಬಂದಿಗೆ ಬಿದ್ದ ಕಾರಣ ಸಂಭವನೀಯ ಅಪಾಯ ತಪ್ಪಿದೆ. ಸ್ಥಳಕ್ಕೆ ಮಾಜಿ ಎಮ್.ಎಲ್.ಸಿ ಐವನ್ ಡಿಸೋಜ್ ಅವರು ಹಾಗು ಮಾಜಿಮೇಯರ್ ಶಶಿಧರ ಹೆಗ್ಡೆಯವರು ಭೇಟಿ ನೀಡಿದರು ಬಿದ್ದ […]

ಮಂಗಳೂರು: ಸಿಟಿ ಬಸ್ ಮೇಲೆ ಉರುಳಿ ಬಿದ್ದ ತೆಂಗಿನಮರ.! ಬೊಂಡ ಕಿತ್ತ ಸಾರ್ವಜನಿಕರು Read More »

ಆ. 30ರವರೆಗೆ ದ.ಕದಲ್ಲಿ ವೀಕೆಂಡ್, ನೈಟ್ ಕರ್ಫ್ಯೂ ಮುಂದುವರಿಕೆ | ಡಿ.ಸಿ ಡಾ| ರಾಜೇಂದ್ರ ಕೆ.ವಿ ಆದೇಶ

ದ.ಕ. ಜಿಲ್ಲೆಯಲ್ಲಿ ಆಗಸ್ಟ್ 30ರ ತನಕ ವೀಕೆಂಡ್ ಹಾಗೂ ನೈಟ್ ಕರ್ಫ್ಯೂ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ನೀಡಿದ್ದಾರೆ. ಆಗಸ್ಟ್ 30 ಬೆಳಗ್ಗೆ 6 ರ ತನಕ ಹೊಸ ಆದೇಶ ಅನ್ವಯವಾಗಲಿದೆ. ಜಿಲ್ಲಾಧಿಕಾರಿಗಳ ಆದೇಶದಲ್ಲಿ ಏನಿದೆ? ಜಿಲ್ಲೆಯಲ್ಲಿರುವ ಎಲ್ಲಾ ಪಬ್, ಬಾರ್ ಹಾಗೂ ರೆಸ್ಟೋರೆಂಟ್ ಗಳು ತೆರೆಯಬಹುದು. ಆದರೆ, ಸೋಮವಾರದಿಂದ ಶುಕ್ರವಾರವರೆಗೆ ರಾತ್ರಿ 7ರ ತನಕ ಮಾತ್ರ ಅವಕಾಶ ಕಲ್ಪಿಸಲಾಗಿದೆ. ರಾತ್ರಿ 9ರಿಂದ ಬೆಳಗ್ಗೆ 6ರ ತನಕ ರಾತ್ರಿ ಕರ್ಪ್ಯೂ ಜಾರಿಯಲ್ಲಿರುತ್ತದೆ. ವಾರಾಂತ್ಯ

ಆ. 30ರವರೆಗೆ ದ.ಕದಲ್ಲಿ ವೀಕೆಂಡ್, ನೈಟ್ ಕರ್ಫ್ಯೂ ಮುಂದುವರಿಕೆ | ಡಿ.ಸಿ ಡಾ| ರಾಜೇಂದ್ರ ಕೆ.ವಿ ಆದೇಶ Read More »

ಮಂಗಳೂರು: ಪಂಪ್ವೆಲ್, ಕಂಕನಾಡಿಯಲ್ಲಿ ಸಾವರ್ಕರ್ ಬ್ಯಾನರ್ ಅಳವಡಿಸಿದ ಭಜರಂಗದಳ

ಮಂಗಳೂರು: ಇಲ್ಲಿನ ಪ್ರಮುಖ ಜನನಿಬಿಡ ಪ್ರದೇಶ ಪಂಪ್ವೆಲ್ ಮೇಲ್ಸೇತುವೆ ಮೇಲೆ ಬಜರಂಗದಳದ ಕಾರ್ಯಕರ್ತರು ವೀರ ಸಾವರ್ಕರ್ ಬ್ಯಾನರ್ ಮತ್ತೆ ಅಳವಡಿಸಿರುವ ಘಟನೆ ಇಂದು ರಾತ್ರಿ ನಡೆದಿದೆ. ಪುತ್ತೂರು ಸಮೀಪದ ಕಬಕದಲ್ಲಿ ನಿನ್ನೆ ಎಸ್ ಡಿಪಿಐ ಕಾರ್ಯಕರ್ತರು ಸ್ವಾತಂತ್ರ್ಯ ರಥಯಾತ್ರೆಯಲ್ಲಿನ ಸಾವರ್ಕರ್ ಫೋಟೋ ತೆಗೆಯಲು ಕ್ಯಾತೆ ತೆಗೆದು ವಿವಾದಕ್ಕೀಡಾದ ಬೆನ್ನಲ್ಲೇ ಮತ್ತೆ ಕರಾವಳಿಯಲ್ಲಿ ಕೋಮುದ್ವೇಷ ಭುಗಿಲೇಳುವ ಲಕ್ಷಣಗಳು ಕಂಡುಬರುತ್ತಿವೆ. ಈ ಹಿಂದೆ ಪಂಪ್ವೆಲ್ ಮೇಲ್ಸೇತುವೆ ಮೇಲೆ ಅಳವಡಿಸಿದ್ದ ಸಾವರ್ಕರ್ ಬ್ಯಾನರ್ ಅನ್ನು ತೆರವುಗೊಳಿಸಲಾಗಿದ್ದು, ಇದೀಗ ಮತ್ತೆ ಭಜರಂಗದಳದ ಕಾರ್ಯಕರ್ತರು

ಮಂಗಳೂರು: ಪಂಪ್ವೆಲ್, ಕಂಕನಾಡಿಯಲ್ಲಿ ಸಾವರ್ಕರ್ ಬ್ಯಾನರ್ ಅಳವಡಿಸಿದ ಭಜರಂಗದಳ Read More »

ಮಂಗಳೂರು: ಕಾಡುಪ್ರಾಣಿ ಬೇಟೆ – 12 ಮಂದಿ ಅರೆಸ್ಟ್, ಆಯುಧಗಳ ವಶ

ಮಂಗಳೂರು: ಮೂಡುಬಿದಿರೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕೊಡ್ಯಡ್ಕ ಗುಡ್ಡೆಯಂಗಡಿಯಲ್ಲಿ ಕಾಡು ಪ್ರಾಣಿ ಬೇಟೆಯಾಡುತ್ತಿದ್ದ12 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಜಾನ್‌ ಮನೆಜಸ್‌‌, ಶ್ರೀನಿವಾಸ್‌, ಗುರುಪ್ರಸಾದ್‌, ಜೋಯಲ್‌ ಅನಿಲ್‌ ಡಿಸೋಜಾ, ಅನಜಯ್‌‌, ಸನತ್‌, ಹರೀಶ್‌ ಪೂಜಾರಿ, ಮೋಹನ್‌ ಗೌಡ, ನೋಣಯ್ಯ, ವಿನಯ್‌‌ ಪೂಜಾರಿ, ರಮೇಶ್‌ ಹಾಗೂ ಗಣೇಶ್‌ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 4 ಗನ್, 1 ಗ್ಯಾಸ್ ಸಿಲಿಂಡರ್, 12 ಮೊಬೈಲ್ ಫೋನ್, 2ಮರದ ತುಂಡು, ಗ್ಯಾಸ್ ಬರ್ನರ್, ನೆಟ್, ಮತ್ತಿತ್ತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು: ಕಾಡುಪ್ರಾಣಿ ಬೇಟೆ – 12 ಮಂದಿ ಅರೆಸ್ಟ್, ಆಯುಧಗಳ ವಶ Read More »

ಮಂಗಳೂರು: ಕೆ.ಜಿ ಗಟ್ಟಲೆ ಅಪಾಯಕಾರಿ ಸ್ಫೋಟಕ ಪತ್ತೆ : ಓರ್ವ ಬಂಧನ

ಮಂಗಳೂರು: ಅಕ್ರಮವಾಗಿ 1725 ಕೆ.ಜಿ.ಗೂ ಅಧಿಕ ಅಪಾಯಕಾರಿ ಸ್ಫೋಟಕಳನ್ನು ನಗರದ ಬಂದರ್‍ನ ಗಾಂಧಿ ಸನ್ಸ್ ಕಟ್ಟಡದ ಕೊಠಡಿಯೊಂದರಲ್ಲಿ ದಾಸ್ತಾನು ಇರಿಸಿರುವ ವಿಷಯ ಬೆಳಕಿಗೆ ಬಂದಿದ್ದು, ಇದಕ್ಕೆ ಸಂಬಂಧಸಿದಂತೆ ಓರ್ವನ್ನು ಮಂಗಳೂರು ಪೆÇಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕು ಮುಡಿಪು ಕೈರಂಗಳ ನಿವಾಸಿ ಆನಂದ ಗಟ್ಟಿ (50) ಬಂಧಿತ ಆರೋಪಿ. ಈತನಿಂದ 400 ಕೆ.ಜಿ. ಸಲ್ಫರ್ ಪೌಡರ್, 350 ಕೆ.ಜಿ. ಪೆÇಟ್ಯಾಷಿಯಂ ನೈಟ್ರೇಟ್, 50 ಕೆ.ಜಿ. ಬ್ಯಾರಿಯಂ ನೈಟ್ರೇಟ್, 395 ಕೆ.ಜಿ. ಪೆÇಟ್ಯಾಷಿಯಂ ಕ್ಲೊರೈಟ್, 260 ಕೆ.ಜಿ. ತೂಕದ ವಿವಿಧ

ಮಂಗಳೂರು: ಕೆ.ಜಿ ಗಟ್ಟಲೆ ಅಪಾಯಕಾರಿ ಸ್ಫೋಟಕ ಪತ್ತೆ : ಓರ್ವ ಬಂಧನ Read More »

ಕರಾವಳಿಯಲ್ಲಿ ಮತ್ತೆ ವಿವಾದದ ಕಿಡಿ ಹೊತ್ತಿಸಿದ ಎಸ್ ಡಿಪಿಐ| ಘಟನೆ ಖಂಡಿಸಿ ಆ.17ರಂದು ವೀರ ಸಾವರ್ಕರ್ ರಥಯಾತ್ರೆ|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕದಲ್ಲಿ ಸ್ವಾತಂತ್ರ್ಯ ರಥಯಾತ್ರೆಯನ್ನು ಎಸ್‌ಡಿಪಿಐ ಕಾರ್ಯಕರ್ತರು ತಡೆದ ವಿಚಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಾದದ ಕಿಡಿ ಹೊತ್ತಿಸಿದೆ. ಸ್ವಾತಂತ್ರ್ಯ ರಥ ಯಾತ್ರೆಯಲ್ಲಿದ್ದ ಸಾವರ್ಕರ್ ಭಾವಚಿತ್ರವನ್ನು ಹರಿಯಲು ಯತ್ನಿಸಿದ ಎಸ್‌ಡಿಪಿಐ ವಿರುದ್ಧ ಹಿಂದೂ ಸಂಘಟನೆಗಳು ತೊಡೆ ತಟ್ಟಿದ್ದು, ಕಬಕ ಜಂಕ್ಷನ್‌ನಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಪುತ್ತೂರು ತಾಲೂಕಿನ ಕಬಕ ಜಂಕ್ಷನ್‌ನಲ್ಲಿ ಹಿಂದೂಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಸೇರಿದ್ದು, ಸಾವರ್ಕರ್ ಫೋಟೋ ಹಿಡಿದು, ಎಸ್‌ಡಿಪಿಐ ವಿರುದ್ಧ ಘೋಷಣೆ ಕೂಗಿದ್ದಾರೆ.

ಕರಾವಳಿಯಲ್ಲಿ ಮತ್ತೆ ವಿವಾದದ ಕಿಡಿ ಹೊತ್ತಿಸಿದ ಎಸ್ ಡಿಪಿಐ| ಘಟನೆ ಖಂಡಿಸಿ ಆ.17ರಂದು ವೀರ ಸಾವರ್ಕರ್ ರಥಯಾತ್ರೆ| Read More »

ಸುಳ್ಯ: ವೈರಲ್ ಆಯ್ತು ಮಹಿಳೆಯ ಧ್ವಜವಂದನೆ| ಇದು ನಿಜವಾದ ದೇಶಭಕ್ತಿ

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ-ಏರಣಗುಡ್ಡೆಯಲ್ಲಿ ಗಾಂಧಿ ವಿಚಾರ ವೇದಿಕೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ನಡೆದಿತ್ತು. ಈ ಕಾರ್ಯಕ್ರಮದ ಬಳಿಕ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರು ಧ್ವಜವಂದನೆ ಮಾಡಿದ್ದು , ಈ ಫೋಟೋ ವೈರಲ್‌ ಆಗಿದೆ. ಗಾಂಧಿ ವಿಚಾರ ವೇದಿಕೆ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಮುಖರು ಸೇರಿದಂತೆ ಸ್ಥಳೀಯರು ಭಾಗವಹಿಸಿದ್ದರು. ಬೆಳಗ್ಗೆ 9 ಗಂಟೆಗೆ ಈ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಮುಗಿದ ಬಳಿಕ ಅತಿಥಿಗಳು ತೆರಳಿದ್ದರು. ಕಾರ್ಯಕ್ರಮ ಸಂಘಟಿಸಿದ ಕೆಲ ಮಂದಿ ಸ್ಥಳದಲ್ಲಿ ಮಾತುಕತೆ ನಡೆಸುತ್ತಿದ್ದರು.

ಸುಳ್ಯ: ವೈರಲ್ ಆಯ್ತು ಮಹಿಳೆಯ ಧ್ವಜವಂದನೆ| ಇದು ನಿಜವಾದ ದೇಶಭಕ್ತಿ Read More »

ದೇಶಾದ್ಯಂತ 75 ನೇ ಸ್ವಾತಂತ್ರ ಸಂಭ್ರಮ| ಆದರೆ ಸ್ವಾತಂತ್ರ್ಯ ತಂದ ಗಾಂಧಿ‌ತಾತ ಇಲ್ಲಿ ಅನಾಥ…! ಗಬ್ಬು ವಾಸನೆ ನಡುವೆ ಅನಾಥವಾಗಿದೆ ಮಹಾತ್ಮನ ಪ್ರತಿಮೆ| ಏನಿದು ಸ್ಟೋರಿ ಗೊತ್ತಾ?

ಮಂಗಳೂರು: ದೇಶಾದ್ಯಂತ 75ನೇ ಸ್ವಾತಂತ್ರ್ಯೋತ್ಸವ ಕಳೆಕಟ್ಟಿದ್ದರೂ, ನಗರದ ಹೃದಯ ಭಾಗ ಹಂಪನಕಟ್ಟೆಯ ಗಾಂಧಿ ಪಾರ್ಕಿನಲ್ಲಿರುವ ಗಾಂಧಿ ತಾತ ಮಾತ್ರ ಅನಾಥರಾಗಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಪಾರ್ಕ್ ಆವರಣದಲ್ಲಿ ಕಾಮಗಾರಿ ನಡೆಯುತ್ತಿದ್ದು, ಇದರಿಂದಾಗಿ ಪಾರ್ಕ್ ಸ್ಥಿತಿ ಗಬ್ಬೆದ್ದು ಹೋಗಿದೆ. ಸ್ವಾತಂತ್ರ್ಯ ಕಾಲದಲ್ಲಿ ಗಾಂಧೀಜಿ ಮಂಗಳೂರಿಗೆ ಬಂದಿದ್ದ ನೆನಪಿನಲ್ಲಿ ಪಾರ್ಕ್ ಮಧ್ಯೆ ಗಾಂಧಿಯ ಪ್ರತಿಮೆ ಸ್ಥಾಪಿಸಲಾಗಿತ್ತು. ಸುಂದರ ಪಾರ್ಕ್ ಆಗಿದ್ದಲ್ಲದೆ, ಸತ್ಯಾಗ್ರಹ ಹೆಸರಿನ ಪ್ರತಿಭಟನೆ, ಉಪವಾಸಗಳು ಇದೇ ಜಾಗದಲ್ಲಿ ನಡೆಯುತ್ತಿದ್ದವು. ಇಂಥ ಹೆಗ್ಗಳಿಕೆ ಹೊಂದಿರುವ ಗಾಂಧಿ ಪಾರ್ಕ್ ನಲ್ಲಿ ವಿಶೇಷ

ದೇಶಾದ್ಯಂತ 75 ನೇ ಸ್ವಾತಂತ್ರ ಸಂಭ್ರಮ| ಆದರೆ ಸ್ವಾತಂತ್ರ್ಯ ತಂದ ಗಾಂಧಿ‌ತಾತ ಇಲ್ಲಿ ಅನಾಥ…! ಗಬ್ಬು ವಾಸನೆ ನಡುವೆ ಅನಾಥವಾಗಿದೆ ಮಹಾತ್ಮನ ಪ್ರತಿಮೆ| ಏನಿದು ಸ್ಟೋರಿ ಗೊತ್ತಾ? Read More »

ದ.ಕ ದಲ್ಲಿ ಈ ಬಾರಿ ಸ್ವಾತಂತ್ರ್ಯ ಆಚರಣೆಗಿಲ್ಲ ಸ್ವಾತಂತ್ರ್ಯ| ವೀಕೆಂಡ್ ಕರ್ಪ್ಯೂ ‌ನಡುವೆ ಸರಳ ಆಚರಣೆಗೆ ಸೂಚನೆ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ಆತಂಕ ಮನೆ ಮಾಡಿದ್ದು, 75 ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಕತ್ತರಿ ಬಿದ್ದಿದೆ. ಜಿಲ್ಲಾದ್ಯಂತ ಆ.14 ಮತ್ತು 15 ರಂದು ವೀಕೆಂಡ್ ಕರ್ಪ್ಯೂ ಹೇರಿರುವ ಕಾರಣ ಸಾರ್ವಜನಿಕ ಸಮಾರಂಭಗಳಿಗೆ ಬ್ರೇಕ್ ಬಿದ್ದಿದೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳ ರೀತಿಯಲ್ಲಿ ಆಚರಿಸಲು ಜಿಲ್ಲಾಡಳಿತ ಸೂಚಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಕೇವಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಧ್ವಜಾರೋಹಣ ನೆರವೇರಿಸಲು ಸೂಚಿಸಿದ್ದು, ಸಾರ್ವಜನಿಕರ ಭಾಗವಹಿಸುವಿಕೆ ನಿಷೇಧಿಸಲಾಗಿದೆ. ಶನಿವಾರ ನಡೆಯಲಿದ್ದ ಮಂಗಳೂರು ವಿ.ವಿ ಪರೀಕ್ಷೆಗಳನ್ನೂ ಮುಂದೂಡಲಾಗಿದ್ದು,

ದ.ಕ ದಲ್ಲಿ ಈ ಬಾರಿ ಸ್ವಾತಂತ್ರ್ಯ ಆಚರಣೆಗಿಲ್ಲ ಸ್ವಾತಂತ್ರ್ಯ| ವೀಕೆಂಡ್ ಕರ್ಪ್ಯೂ ‌ನಡುವೆ ಸರಳ ಆಚರಣೆಗೆ ಸೂಚನೆ Read More »

ಚಾರ್ಮಾಡಿ ಘಾಟಿ: 24 ಗಂಟೆ ಲಘು ವಾಹನ ಸಂಚಾರಕ್ಕೆ ಅನುಮತಿ

ಚಾರ್ಮಾಡಿ: ಮಳೆ ಹೆಚ್ಚುತ್ತಿರುವ ಕಾರಣದಿಂದ ಗುಡ್ಡ ಕುಸಿತದ ಭೀತಿ ಎದುರಾಗುತ್ತಿದ್ದ ಚಾರ್ಮಾಡಿ ಘಾಟ್ ನಲ್ಲಿ ಇದೀಗ ರಾತ್ರಿ ಸಂಚಾರಕ್ಕೆ ಅನುಮತಿ ಸಿಕ್ಕಿದೆ. ರಾತ್ರಿ ಸಮಯದಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಚಿಕ್ಕಿಮಗಳೂರು ಜಿಲ್ಲಾಡಳಿತ ಆದೇಶ ನೀಡಿದೆ. ಇದರಿಂದಾಗಿ ದಿನದ 24 ಗಂಟೆ ಚಾರ್ಮಾಡಿ ಮೂಲಕ ಟೆಂಪೋ ಟ್ರಾವೆಲ್ಲರ್, ಆಂಬ್ಯುಲೆನ್ಸ್, ಕಾರು, ಜೀಪು, ವ್ಯಾನ್ ಹಾಗೂ ದ್ವಿಚಕ್ರ ವಾಹನಗಳು ಸಂಚಾರ ನಡೆಸಬಹುದಾಗಿದೆ. ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಆದೇಶ ಹೊರಡಿಸಿದ್ದಾರೆ. ಉಳಿದಂತೆ ಕೆಎಸ್ಆರ್ ಟಿಸಿ

ಚಾರ್ಮಾಡಿ ಘಾಟಿ: 24 ಗಂಟೆ ಲಘು ವಾಹನ ಸಂಚಾರಕ್ಕೆ ಅನುಮತಿ Read More »