ಕರಾವಳಿ

ಉಡುಪಿ: ಪವರ್ ಮ್ಯಾನ್ ಗಳಿಗೆ ಜೀವವಿಮೆ‌ ಮೌಲ್ಯ ಹೆಚ್ಚಳ – ಸಚಿವ ಸುನಿಲ್ ಕುಮಾರ್

ಸಮಗ್ರ ನ್ಯೂಸ್: ರಾಜ್ಯದ ಪವರ್ ಮನ್ ಗಳ ಜೀವವಿಮೆ ಪರಿಹಾರ ಮೊತ್ತವನ್ನು 25 ಲಕ್ಷ ರೂ.ನಿಂದ 50 ಲಕ್ಷ ರೂ.ಗೆ ಹೆಚ್ಚಿಸಲಾಗುವುದು ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿ ಪವರ್ ಮ್ಯಾನ್ ಗಳು ವಿದ್ಯುತ್ ಅಪಘಾತದಲ್ಲಿ ಮೃತಪಟ್ಟರೆ 25 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಈ ಜೀವ ಪರಿಹಾರ ಮೊತ್ತವನ್ನು 50 ಲಕ್ಷ ರೂ.ಗೆ ಹೆಚ್ಚಿಸಲಾಗುವುದು. ಗುಜರಾತ್ ಮಾದರಿಯಲ್ಲಿ ರಾಜ್ಯದ ಎಲ್ಲ ವಿದ್ಯುತ್ ಕಂಪನಿಗಳನ್ನು ಒಳಗೊಂಡ ಹೋಲ್ಡಿಂಗ್ ಕಂಪನಿ ನಿರ್ಮಾಣ ಪ್ರಸ್ತಾವನೆ ಇದೆ. ಇಲಾಖೆಯ

ಉಡುಪಿ: ಪವರ್ ಮ್ಯಾನ್ ಗಳಿಗೆ ಜೀವವಿಮೆ‌ ಮೌಲ್ಯ ಹೆಚ್ಚಳ – ಸಚಿವ ಸುನಿಲ್ ಕುಮಾರ್ Read More »

ಮಂಗಳೂರು: ಹಳೆಯಂಗಡಿ ತೋಕೂರು ಪ್ರದೇಶದಲ್ಲಿ ವಾಮಾಚಾರ ಶಂಕೆ|ಮುಖ್ಯರಸ್ತೆಯಲ್ಲೇ ರಾತ್ರಿ ಕೋಳಿ ಬಲಿ, ಲಿಂಬೆಹುಳಿ, ಕುಂಬಳಕಾಯಿ ಪ್ರಯೋಗ|

ಮಂಗಳೂರು: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ, ಇಂದಿರಾನಗರ, ತೋಕೂರು ಪ್ರದೇಶದಲ್ಲಿ ಸಂಜೆಯಾದರೆ ಸಾಕು ವಾಮಾಚಾರಿಗಳು ಸಕ್ರಿಯವಾಗುತ್ತಿದ್ದು ಇವರ ಹಾವಳಿಯಿಂದ ಸ್ಥಳೀಯರಲ್ಲಿ ಆತಂಕ ನಿರ್ಮಾಣವಾಗಿದೆ. ಈ ಬಗ್ಗೆ ಪೊಲೀಸರಿಗೆ ಮೌಖಿಕ ದೂರು ನೀಡಲಾಗಿದ್ದು ರಾತ್ರಿ ವೇಳೆ ಗಸ್ತು ಬಿಗಿಗೊಳಿಸುವಂತೆ ಆಗ್ರಹ ವ್ಯಕ್ತವಾಗಿದೆ. ತೋಕೂರು ಬಸ್ ನಿಲ್ದಾಣ ಪರಿಸರ, ಕೆರೆಕಾಡು ಬೆಳ್ಳಾಯರು ಮುಖ್ಯರಸ್ತೆಯಲ್ಲಿ ರಾತ್ರಿ ವೇಳೆ ಕೋಳಿ ಬಲಿ ನೀಡುವುದು, ಲಿಂಬೆಹುಳಿ, ಕುಂಬಳಕಾಯಿ ಕಡಿಯುವುದು ಇತ್ಯಾದಿ ವಾಮಾಚಾರ ಪ್ರಯೋಗ ನಡೆಸುತ್ತಿದ್ದು ಸ್ಥಳೀಯರು ಬೆಳಗ್ಗೆ ನಡೆದಾಡಲು ಭಯಪಡುವ ಸ್ಥಿತಿ ಎದುರಾಗಿದೆ.

ಮಂಗಳೂರು: ಹಳೆಯಂಗಡಿ ತೋಕೂರು ಪ್ರದೇಶದಲ್ಲಿ ವಾಮಾಚಾರ ಶಂಕೆ|ಮುಖ್ಯರಸ್ತೆಯಲ್ಲೇ ರಾತ್ರಿ ಕೋಳಿ ಬಲಿ, ಲಿಂಬೆಹುಳಿ, ಕುಂಬಳಕಾಯಿ ಪ್ರಯೋಗ| Read More »

ಉಪ್ಪಿನಂಗಡಿ: ಕೆಂಪು ಕಲ್ಲಿನ ಅಟ್ಟಿ ಮಗುಚಿಬಿದ್ದು 3 ವರುಷದ ಮಗು ಸಾವು

ಸಮಗ್ರ ನ್ಯೂಸ್: ಮನೆಯಂಗಳದಲ್ಲಿ ಇರಿಸಿದ್ದ ಕೆಂಪು ಕಲ್ಲಿನ ಅಟ್ಟಿ ಮಗುಚಿ ಬಿದ್ದು ಮೂರೂವರೆ ವರ್ಷ ಪ್ರಾಯದ ಗಂಡು ಮಗುವೊಂದು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ಬಾಯ್ತಾರು ಎಂಬಲ್ಲಿ ಫೆ.28ರಂದು ಸಂಜೆ ನಡೆದಿದೆ. ಅಶ್ರಫ್ ಮತ್ತು ಸಮೀಮಾ ದಂಪತಿಯ ಮಗ ಮೊಹಮ್ಮದ್ ನೌಶೀರ್ ಮೃತ ಮಗು. ಕಟ್ಟಡ ನಿರ್ಮಾಣಕ್ಕೆ೦ದು ಮನೆಯಂಗಳದಲ್ಲಿ ತಂದಿರಿಸಲಾಗಿದ್ದ ಕೆಂಪು ಕಲ್ಲಿನ ಅಟ್ಟಿಯ ಬಳಿ ಮಗು ನೌಶೀರ್ ಆಟವಾಡುತ್ತಿದ್ದ ವೇಳೆ ಕಲ್ಲಿನ ಅಟ್ಟಿಯು ಮಗುಚಿ ಆತನ ಮೇಲೆಯೇ ಬಿದ್ದಿತ್ತು ಎಂದು

ಉಪ್ಪಿನಂಗಡಿ: ಕೆಂಪು ಕಲ್ಲಿನ ಅಟ್ಟಿ ಮಗುಚಿಬಿದ್ದು 3 ವರುಷದ ಮಗು ಸಾವು Read More »

ಮಂಗಳೂರು: ಕ್ರಿಕೆಟ್ ಕಾಮೆಂಟರಿ ನಿರ್ವಹಿಸಿ ಹಿಂದುರಿಗಿದ ಬಾಲಕನ ಶವ ನದಿಯಲ್ಲಿ ಪತ್ತೆ

ಸಮಗ್ರ‌ ನ್ಯೂಸ್: ಭಾನುವಾರದಂದು ನಾಪತ್ತೆಯಾಗಿದ್ದ ಬಾಲಕನ ಶವ ಫೆ.28 ರ ಸೋಮವಾರ ಇಲ್ಲಿನ ಹೊಯಿಗೆ ಬಜಾರ್ ಬಳಿ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಖಾಸಗಿ ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ದೃಶ್ಯಾಂತ್ (16) ಮೃತಪಟ್ಟವನು. ಇಲ್ಲಿನ ಮಹಾಕಾಳಿ ಪಡ್ಪು ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟಕ್ಕೆ ದೃಶ್ಯಾಂತ್ ಹೋಗಿ ಭಾನುವಾರ ಮಧ್ಯಾಹ್ನ 3.30ರವರೆಗೆ ಕ್ರಿಕೆಟ್ ಪಂದ್ಯಕ್ಕೆ ಕಾಮೆಂಟರಿ ನಿರ್ವಹಿಸುತ್ತಿದ್ದ. ಪಂದ್ಯ ಮುಗಿಯುತ್ತಿದ್ದಂತೆ ಆತನ ಸ್ನೇಹಿತರು ಪಂದ್ಯ ಮುಗಿಸಿ ತೆರಳಿದ್ದರು. ಆದರೆ ದೃಶ್ಯಾಂತ್ ಮಾತ್ರ ಮನೆ ತಲುಪಿಲ್ಲರಲಿಲ್ಲ. ಆತನ ಸ್ನೇಹಿತರು, ಸಂಬಂಧಿಕರು

ಮಂಗಳೂರು: ಕ್ರಿಕೆಟ್ ಕಾಮೆಂಟರಿ ನಿರ್ವಹಿಸಿ ಹಿಂದುರಿಗಿದ ಬಾಲಕನ ಶವ ನದಿಯಲ್ಲಿ ಪತ್ತೆ Read More »

ರಾಷ್ಟ್ರಧ್ವಜಕ್ಕೆ ಅವಮಾನ| ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದೂರು ದಾಖಲು|

ಸಮಗ್ರ ನ್ಯೂಸ್: ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಆರ್.ಎಸ್.ಎಸ್. ಪ್ರಮುಖ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳ್ಳಿಗೆ ಗ್ರಾಮದ ದೇವಂದಬೆಟ್ಟು ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ರಾಷ್ಟ್ರಧ್ವಜಕ್ಕೆ ಅವಮಾನವಾಗುವ ರೀತಿ ಭಾಷಣ ಮಾಡಿರುವ ಜತೆಗೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಸಮಾಜದ ಶಾಂತಿ ಕದಡಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಜೋರಾ

ರಾಷ್ಟ್ರಧ್ವಜಕ್ಕೆ ಅವಮಾನ| ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದೂರು ದಾಖಲು| Read More »

ಧರ್ಮಸ್ಥಳ: ಶಿವರಾತ್ರಿ ಹಿನ್ನೆಲೆ; ಕ್ಷೇತ್ರಕ್ಕೆ ಹರಿದು ಬಂದ ಭಕ್ತರ ಪಾದಯಾತ್ರೆ

ಸಮಗ್ರ ನ್ಯೂಸ್: ಮಹಾ ಶಿವರಾತ್ರಿ ಆಚರಣೆಗೆ ನಾಡಿನೆಲ್ಲೆಡೆ ವಿಶೇಷ ತಯಾರಿ ನಡೆಸಲಾಗುತ್ತಿದ್ದು, ರಾಜ್ಯದ ಪ್ರಸಿದ್ದ ಶಿವಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರಿಗಳ ದಂಡು ಹರಿದುಬಂದಿದೆ. ಶಿವನ ದೇವಾಲಯಗಳಲ್ಲಿ ಪಾರಾಯಣ ಜಾಗರಣೆ ವಿಶೇಷ ರೀತಿಯಲ್ಲಿ ಆಚರಿಸುತ್ತಾರೆ. ಅದೇ ರೀತಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಶಿವರಾತ್ರಿಗೆ ವಿಶೇಷ ಪೂಜೆಗಳು ಜರುಗುತ್ತವೆ. ಶಿವರಾತ್ರಿ ಸಂದರ್ಭ ರಾಜ್ಯದ ವಿವಿಧ ಕಡೆಗಳಿಂದ ಪಾದಯಾತ್ರೆಯ ಮೂಲಕ ಭಕ್ತರು ಧರ್ಮಸ್ಥಳ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಭಾನುವಾರ, ಸೋಮವಾರದಂದು ಚಾರ್ಮಾಡಿ ಕಡೆಯಿಂದ ಹೆಚ್ಚಿನ ಪಾದಯಾತ್ರಿಗಳು ಆಗಮಿಸಿದರು. ಹಗಲಲ್ಲಿ ಒಂದಿಷ್ಟು ಬಿಸಿಲಿನ ತಾಪ ಅಧಿಕ

ಧರ್ಮಸ್ಥಳ: ಶಿವರಾತ್ರಿ ಹಿನ್ನೆಲೆ; ಕ್ಷೇತ್ರಕ್ಕೆ ಹರಿದು ಬಂದ ಭಕ್ತರ ಪಾದಯಾತ್ರೆ Read More »

ಮಂಗಳೂರು: ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ದೇಶಕ್ಕೆ ಕೀರ್ತಿ ತಂದ ಭವಾನಿ

ಸಮಗ್ರ ನ್ಯೂಸ್: ಮಂಗಳೂರಿನ 64 ವರ್ಷದ ಮಹಿಳಾ ಕ್ರೀಡಾಪಟು ಭವಾನಿ ಜೋಗಿ ಇತ್ತೀಚಿಗೆ ಶ್ರೀಲಂಕಾದಲ್ಲಿ ನಡೆದ 35ನೇ ವಾರ್ಷಿಕ ಮಾಸ್ಟರ್ಸ್ (ಒಪನ್) ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಮೂರು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆಲ್ಲುವುದರೊಂದಿಗೆ ದೇಶಕ್ಕೆ ಕೀರ್ತಿ ತಂದಿದ್ದಾರೆ. ಇವರು ಇದುವರೆಗೆ ಫೀಲ್ಡ್ ಮತ್ತು ಟ್ರ್ಯಾಕ್ ಸ್ಪರ್ಧೆಗಳಲ್ಲಿ 200ಕ್ಕೂ ಅಧಿಕ ಪದಕಗಳನ್ನು ಗೆದಿದ್ದಾರೆ. ವೃತ್ತಿಯಲ್ಲಿ ನರ್ಸ್ ಆಗಿರುವ ಭವಾನಿ ಮೂಲತ: ಹಾಸನ ಜಿಲ್ಲೆ ಸಕಲೇಶಪುರದವರಾಗಿದ್ದು, ಪ್ರಸ್ತುತ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಬಾಲ್ಯದಿಂದಲೂ ಕ್ರೀಡೆಯಲ್ಲಿ

ಮಂಗಳೂರು: ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ದೇಶಕ್ಕೆ ಕೀರ್ತಿ ತಂದ ಭವಾನಿ Read More »

ನಾಳೆ ಸಿಎಂ ಬೊಮ್ಮಾಯಿ ಮಂಗಳೂರು ಭೇಟಿ

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ಫೆ.28ರ ಸೋಮವಾರ ಮಂಗಳೂರಿಗೆ ಪ್ರವಾಸ ಕೈಗೊಂಡಿದ್ದಾರೆ. ಫೆ.28ರ ಸೋಮವಾರ ಮಧ್ಯಾಹ್ನ 3 ಗಂಟೆಗೆ ಹುಬ್ಬಳ್ಳಿಯಿಂದ ವಿಶೇಷ ವಿಮಾನದ ಮೂಲಕ ಹೊರಟು 3.45ಕ್ಕೆ ಮಂಗಳೂರಿನ ಬಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಸಂಜೆ 4.30ಕ್ಕೆ ನಗರದ ಕುಲಶೇಖರದ ಕಾರ್ಡೆಲ್ ಹಾಲ್‍ನಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಮಂತ್ರಾಲಯ, ಭಾರತೀಯ ಹೆದ್ದಾರಿಗಳ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆಯ ಸಹಯೋಗದಲ್ಲಿ ಆಯೋಜಿರುವ 15 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಲೋಕಾರ್ಪಣೆ ಸಮಾರಂಭದಲ್ಲಿ

ನಾಳೆ ಸಿಎಂ ಬೊಮ್ಮಾಯಿ ಮಂಗಳೂರು ಭೇಟಿ Read More »

ಬಂಟ್ವಾಳ: ಜೇನು ನೋಣ ದಾಳಿ; 9 ಮಂದಿ ಗಂಭೀರ

ಸಮಗ್ರ ನ್ಯೂಸ್: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಜೇನು ನೋಣ ಕಚ್ಚಿ ಗಂಭೀರ ಸ್ಥಿತಿಯಲ್ಲಿ ಒಂಬತ್ತು ಮಂದಿ ಆಸ್ಪತ್ರೆಗೆ ದಾಖಲಾದ ಘಟನೆ ಕಲಾಬಾಗಿಲು ಎಂಬಲ್ಲಿ ನಡೆದಿದೆ. ಕಲಾಬಾಗಿಲು ನಿವಾಸಿಗಳಾದ ಗಂಗಯ್ಯ ಗೌಡ (60) ಶೀನ ಶೆಟ್ಟಿ (48) ಐತಪ್ಪ ಶೆಟ್ಟಿ ( 76) ಅರುಣ್ ಶೆಟ್ಟಿ ( 34) ಲಲಿತಾ ,(49) ಎಂಬವರು ಜೊತೆ ಉಳಿದ ನಾಲ್ವರ ಜೇನು ನೊಣ ಕಚ್ಚಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ನಾಲ್ವರ ಹೆಸರು ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ. ಇರ್ವತ್ತೂರು ಗ್ರಾಮದ ಕಲಾಬಾಗಿಲು

ಬಂಟ್ವಾಳ: ಜೇನು ನೋಣ ದಾಳಿ; 9 ಮಂದಿ ಗಂಭೀರ Read More »

ಮಂಗಳೂರು: ನಾಳೆ ಜಿಲ್ಲೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ

ಸಮಗ್ರ ನ್ಯೂಸ್: ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಫೆ. 28ರಂದು ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಬಂಧಿಸಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ 66ರ ಎನ್‌ಎಂಪಿಟಿ ಸಂಪರ್ಕಿಸುವ ಕೆಪಿಟಿ ಜಂಕ್ಷನ್‌ನಲ್ಲಿ 34.61 ಕೋ.ರೂ. ವೆಚ್ಚದಲ್ಲಿ ವಿಯುಪಿ ನಿರ್ಮಾಣ, ರಾ.ಹೆ. 75ರ ಬೆಂಗಳೂರು -ಮಂಗಳೂರು ವಿಭಾಗದಲ್ಲಿ ಗುಂಡ್ಯ ಅಡ್ಡ ಹೊಳೆಯಿಂದ ಪೆರಿಯಶಾಂತಿ ವರೆಗೆ 442.87 ಕೋ.ರೂ.

ಮಂಗಳೂರು: ನಾಳೆ ಜಿಲ್ಲೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ Read More »