ಕರಾವಳಿ

ಮತ್ತೆ ಭೂಕಂಪ; ನಡುಗಿದ ಕಲ್ಲುಗುಂಡಿ, ಗೂನಡ್ಕ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಗಡಿಭಾಗದಲ್ಲಿ ಭೂಕಂಪನ ಮತ್ತೆ ಮುಂದುವರಿದಿದ್ದು, ಇಂದು ಮಧ್ಯಾಹ್ನ ‌1.21 ರ ಸುಮಾರಿಗೆ ಭೂಮಿ ನಡುಗಿದೆ ಭಾರೀ ಶಬ್ದದೊಂದಿಗೆ 6ನೇ ಬಾರಿ ಭೂಮಿ ಕಂಪಿಸಿದ್ದು, ಕಲ್ಲುಗುಂಡಿ , ಸಂಪಾಜೆ, ಗೂನಡ್ಕ ಭಾಗಗಳಲ್ಲಿ ಭೂಮಿ ನಡುಗಿದೆ. ಇದರಿಂದ ಜನ ಭೀತಿಗೊಂಡಿದ್ದಾರೆ. ಒಮ್ಮೆ ಕಂಪನವಾದಲ್ಲಿ ಅದರ ಪರಿಣಾಮ ಕೆಲವು ದಿನಗಳವರೆಗೆ ಇರುತ್ತದೆ. ಭೂಮಿಯ ಕೆಳಭಾಗದಲ್ಲಿ ನಡೆಯುತ್ತಿರುವ ನೈಸರ್ಗಿಕ ವಿದ್ಯಮಾನಗಳ ಪರಿಣಾಮ ಸಣ್ಣನೆಯ ಕಂಪನಗಳು ಸಂಭವಿಸಬಹುದು. 🛑 ಭೂಸ್ತರಭಂಗದಿಂದ ಕೆಲವು ದಿನ ಈ ನಡುಕ, ಕಂಪನಗಳು ನಡೆಯುವ

ಮತ್ತೆ ಭೂಕಂಪ; ನಡುಗಿದ ಕಲ್ಲುಗುಂಡಿ, ಗೂನಡ್ಕ Read More »

ಜುಲೈ 10 ಆದಿತ್ಯವಾರ ಈದುಲ್ ಅದ್’ಹಾ

ಸಮಗ್ರ ನ್ಯೂಸ್: ಗುರುವಾರ ರಾತ್ರಿ  ದ್ಸುಲ್ ಹಿಜ್ಜಃ  ತಿಂಗಳ  ಚಂದ್ರ  ದರ್ಶನವಾದ ಖಚಿತ ಮಾಹಿತಿಯ  ಹಿನ್ನೆಲೆಯಲ್ಲಿ  ಜುಲೈ 01  ಶುಕ್ರವಾರ  ದ್ಸುಲ್ ಹಿಜ್ಜ  ತಿಂಗಳ ಚಾಂದ್ ಒಂದು ಆಗಿದೆ,  ಅದರಂತೆ  ಜುಲೈ 09  ಶನಿವಾರ   ಅರಫಾ  ದಿನ  ಮತ್ತು ಜುಲೈ 10,  ಆದಿತ್ಯವಾರ  ಈದುಲ್ ಅದ್’ಹಾ  ( ಬೆಲಿಯೆ ಪೆರ್ನಾಲ್ )  ಆಚರಿಸಲಾಗುತ್ತದೆ  ಎಂದು ದ.ಕ  ಜಿಲ್ಲೆಯ ಉಳ್ಳಾಲ ಹಾಗು ನೂರಾರು ಮೊಹಲ್ಲಾಗಳ ಸಂಯುಕ್ತ  ಜಮಾಅತ್  ಖಾಝಿ  ಖುರ್ರತುಸ್ಸಾದಾತ್  ಅಸ್ಸಯ್ಯಿದ್  ಫಝಲ್  ಕೋಯಮ್ಮ  ಮದನಿ  ಅಲ್ 

ಜುಲೈ 10 ಆದಿತ್ಯವಾರ ಈದುಲ್ ಅದ್’ಹಾ Read More »

ಸುಳ್ಯ; ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ

ಸುಳ್ಯ : ತಾಲೂಕಿನ 17 ವರ್ಷದ ಬಾಲಕಿಯ ಮೇಲೆ ಆಕೆಯ ಸಂಬಂಧಿಯೇ ಅತ್ಯಾಚಾರ ಎಸಗಿ ಗರ್ಭಿಣಿಯಾದ ಘಟನೆಯೊಂದು ನಡೆದಿದೆ. ಆರೋಪಿಯನ್ನು ಪುತ್ತೂರು ತಾಲೂಕಿನ ಅರಿಯಡ್ಕ ನಿವಾಸಿ ಸಂದೀಪ್ (22) ಎಂದು ಗುರುತಿಸಲಾಗಿದೆ. ಆದರೆ, ಅಕ್ಕ ಸಂತ್ರಸ್ತೆಯ ಚಟುವಟಿಕೆಗಳ ಬಗ್ಗೆ ಅನುಮಾನಗೊಂಡು ಜೂನ್ 22 ರಂದು ಹತ್ತಿರದ ಆಸ್ಪತ್ರೆಗೆ ಸ್ಕ್ಯಾನ್ ಮಾಡಲು ಕರೆದೊಯ್ದರು. ಅಪ್ರಾಪ್ತ ಬಾಲಕಿ ಗರ್ಭಿಣಿ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸುಳ್ಯ; ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ Read More »

ಸುಳ್ಯ: ಮರ್ಕಂಜ 12:30ಕ್ಕೆ ಮತ್ತೊಮ್ಮೆ ಕಂಪಿಸಿದ ಭೂಮಿ…! ಕಾರಣ??

ಸುಳ್ಯ: ಮರ್ಕಂಜದಲ್ಲಿ ಮತ್ತೊಮ್ಮೆ ಭೂ ಕಂಪನ ಆಗಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮಧ್ಯಾಹ್ನ ಸುಮಾರು 12:30 ಕ್ಕೆ ಭಾರಿ ಶಬ್ದ ದೊಂದಿಗಿ ಕಂಪನ ಅಗಿದ್ದು, ಭೂಮಿ ಕಂಪನದ ಅನುಭವ ಆಗಿದ್ದು, ಈ ಅನುಭವ ಮರ್ಕಂಜದ ಅಳವುಪಾರೆಯಲ್ಲಿ ಭಾರೀ ಸ್ಪೋಟಕ ಬಳಸಿ‌ ಗಣಿಗಾರಿಕೆ ನಡೆಸಿರುವ ಬಗ್ಗೆ ಸ್ಥಳೀಯ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ಅದರೆ ಈ ಕಂಪನ ಅಳವುಪಾರೆಯಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಆಗಿರುವುದೇ ಅಥವಾ ಭೂಕಂಪನ ಆಗಿರುವುದೇ ಎನ್ನುವ ಅನುಮಾನ ಮೂಡಿದೆ. ಒಟ್ಟಿನಲ್ಲಿ ಮರ್ಕಂಜ ಜನತೆ ಭಯಭೀತರಾಗಿದ್ದಾರೆ.

ಸುಳ್ಯ: ಮರ್ಕಂಜ 12:30ಕ್ಕೆ ಮತ್ತೊಮ್ಮೆ ಕಂಪಿಸಿದ ಭೂಮಿ…! ಕಾರಣ?? Read More »

ದನಗಳನ್ನು ಕದ್ದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಸಮಗ್ರ ನ್ಯೂಸ್ : ದನಗಳನ್ನು ಕದ್ದು ಕೊಂಡೊಯ್ದು ಕಡಿದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ, ಹಾಗೆಯೇ ಸ್ಥಳದಲ್ಲಿದ್ದ ಸಾವಿರಾರು ರೂ.ಮೌಲ್ಯದ ದನದ ಮಾಂಸವನ್ನು ವಶಕ್ಕೆ ಪಡೆದ ಘಟನೆಯೊಂದು ವರದಿಯಾಗಿದೆ. ಬಂಧಿತ ಆರೋಪಿಗಳನ್ನು ಗೋಳ್ತಮಜಲು ನಿವಾಸಿ ಮಹಮ್ಮದ್ ಹಾಗೂ ಸಾದಿಕ್ ಎಂದು ಗುರುತಿಸಲಾಗಿದೆ. ಮಹಮ್ಮದ್ ಎಂಬಾತ ಮನೆಯಲ್ಲಿ ದನಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಬಗ್ಗೆ ಸ್ಥಳೀಯರಿಂದ ಮಾಹಿತಿ ಲಭ್ಯವಾದ ಹಿನ್ನೆಲೆ ಎಸ್.ಐ ಅವಿನಾಶ್ ನೇತೃತ್ವದ ನಗರ

ದನಗಳನ್ನು ಕದ್ದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ Read More »

ಸುಳ್ಯ: ವರದಿ‌ ಕೈಸೇರುವವರೆಗೆ ಮರ್ಕಂಜದಲ್ಲಿ ಗಣಿಗಾರಿಕೆ ನಿಲ್ಲಿಸುವ ಭರವಸೆ, ಪ್ರತಿಭಟನೆ ಹಿಂತೆಗೆತ, ಗಣಿ ಇಲಾಖೆಯ ಮಹಜರಿಗೆ ಸಹಿ ಹಾಕದ ಸ್ಥಳೀಯರು

ಸಮಗ್ರ ನ್ಯೂಸ್: ಗಣಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ‌ ವರದಿ ಪ್ರಕಟಿಸುವ ತನಕ ಗಣಿಗಾರಿಕೆ ನಿಲ್ಲಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನ ಮರ್ಕಂಜ ಅಳವುಪಾರೆಯಲ್ಲಿ ನಡೆದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿದೆ. ಗ್ರಾಮಸ್ಥರ ಆಕ್ರೋಶದ ಹಿನ್ನೆಲೆಯಲ್ಲಿ ಜಿಲ್ಲಾ ಗಣಿ ಅಧಿಕಾರಿಗಳು ಮರ್ಕಂಜದಲ್ಲಿ ನಡೆಯುತ್ತಿರುವ ಕಗ್ಗಲ್ಲಿನ ಗಣಿಗಾರಿಕೆ ಹಾನಿ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮರ್ಕಂಜದ ಮಿನುಂಗೂರು ದೇವಸ್ಥಾನ, ಮಾಡ್ನೂರು ಹಿ.ಪ್ರಾ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಈ ಕುರಿತು ವರದಿ ನೀಡುವುದಾಗಿ

ಸುಳ್ಯ: ವರದಿ‌ ಕೈಸೇರುವವರೆಗೆ ಮರ್ಕಂಜದಲ್ಲಿ ಗಣಿಗಾರಿಕೆ ನಿಲ್ಲಿಸುವ ಭರವಸೆ, ಪ್ರತಿಭಟನೆ ಹಿಂತೆಗೆತ, ಗಣಿ ಇಲಾಖೆಯ ಮಹಜರಿಗೆ ಸಹಿ ಹಾಕದ ಸ್ಥಳೀಯರು Read More »

ಸುಳ್ಯದಲ್ಲಿ 5ನೇ ಬಾರಿ ಕಂಪಿಸಿದ ಭೂಮಿ| ಆತಂಕದಲ್ಲಿ ಹೊರಗೋಡಿ ಬಂದ ಜನತೆ

ಸಮಗ್ರ ನ್ಯೂಸ್: ಮಧ್ಯರಾತ್ರಿಯಲ್ಲಿ ಭೂಕಂಪವಾದ ನಂತರ ಇದೀಗ ಮತ್ತೆ ಸುಳ್ಯದಲ್ಲಿ ಭೂಮಿ ಕಂಪಿಸಿದೆ. ತಾಲೂಕಿನ ಉಬರಡ್ಕ, ಚೆಂಬು, ಗೂನಡ್ಕದಲ್ಲಿ 10.45ರ ಸುಮಾರಿಗೆ ಮತ್ತೆ ಭೂಮಿ ಕಂಪಿಸಿದ್ದು ಜನತೆ ಆತಂಕ ದಿಂದ ಹೊರಗೋಡಿ ಬಂದಿದ್ದಾರೆ. ಕರ್ನಾಟಕ ರಾಜ್ಯ ನ್ಯಾಚುರಲ್ ಡಿಸಾಸ್ಟರ್ ಮಾನಿಟರಿಂಗ್ ಸೆಂಟರ್ ಅಧಿಕೃತ ಬುಲೆಟಿನ್ ಬಿಡುಗಡೆಗೊಳಿಸಿದ್ದು, ಇದರ ಪ್ರಕಾರ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮ ಸಮೀಪ ಭೂ ಕಂಪನ ಉಂಟಾಗಿದ್ದು ರಿಕ್ಟರ್ ಮಾಪಕದಲ್ಲಿ 2.1 ತೀವ್ರತೆ ದಾಖಲಾಗಿದೆ. ಇದರ ಪ್ರಭಾವದಿಂದ ಸುಳ್ಯ ತಾಲೂಕಿನ ಹಲವೆಡೆ

ಸುಳ್ಯದಲ್ಲಿ 5ನೇ ಬಾರಿ ಕಂಪಿಸಿದ ಭೂಮಿ| ಆತಂಕದಲ್ಲಿ ಹೊರಗೋಡಿ ಬಂದ ಜನತೆ Read More »

ಸುಳ್ಯ: ಮಧ್ಯರಾತ್ರಿಯ ಭೂಕಂಪನ|ತೀವ್ರತೆ ಎಷ್ಟು? ಕೇಂದ್ರ ಬಿಂದು ಯಾವುದು?

ಸಮಗ್ರ ನ್ಯೂಸ್: ತಡರಾತ್ರಿ ಭಾರಿ ಕಂಪನದಿಂದ ಭೂಮಿ ಕಂಪಿಸಿದ್ದು ಕೊಡಗು ಹಾಗೂ ದಕ್ಷಿಣ ಕನ್ನಡದ ಗಡಿ ಭಾಗದಲ್ಲಿ ಸಿಹಿನಿದ್ರೆಯಲ್ಲಿದ್ದ ಜನರು ಹೌಹಾರಿದ್ದಾರೆ. ಭೂಕಂಪದ ತೀವ್ರತೆ 1.8ರಷ್ಟು ದಾಖಲಾಗಿತ್ತು ಎಂದು KSNDM ಕೇಂದ್ರ ಸ್ಪಷ್ಟಪಡಿಸಿದೆ. ಕಂಪನವು ಭೂಮಿಯ ೧೦ ಕಿ.ಮೀ ಅಡಿಯಲ್ಲಿ ನಡೆದಿದೆ ಎನ್ನಲಾಗಿದೆ. ಎಂ. ಚೆಂಬು ಹಾಗೂ ಪೆರಾಜೆ ಗ್ರಾಮದ ಕೇಂದ್ರ ಬಿಂದುವಿನಿಂದ ಭೂಕಂಪ ಸಂಭವಿಸಿದೆ. ಮುಂಜಾನೆ 1.15.12 ಸೆಕೆಂಡ್ ನಲ್ಲಿ ಭೂಕಂಪನ ಸಂಭವಿಸಿತ್ತು.

ಸುಳ್ಯ: ಮಧ್ಯರಾತ್ರಿಯ ಭೂಕಂಪನ|ತೀವ್ರತೆ ಎಷ್ಟು? ಕೇಂದ್ರ ಬಿಂದು ಯಾವುದು? Read More »

ಸುಳ್ಯದ ಜನತೆ ಗಮನಿಸಿ…ಈ ಮಾಹಿತಿ ನಿಮಗಾಗಿ

ಸಮಗ್ರ ನ್ಯೂಸ್: ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಕುಕ್ಕೆ ಸುಬ್ರಹ್ಮಣ್ಯದಿಂದ ಸುಳ್ಯ ಮಾರ್ಗವಾಗಿ ಮಡಿಕೇರಿಗೆ ಪ್ರಯಾಣಿಸಲಿದ್ದು, ಸುಳ್ಯ ನಗರ ಸೇರಿದಂತೆ ಸುಬ್ರಹ್ಮಣ್ಯ-ಸುಳ್ಯ- ಮಡಿಕೇರಿ ಮಾರ್ಗದಲ್ಲಿ ವಾಹನ ಚಾಲಕರು ಅಡ್ಡಾದಿಡ್ಡಿಯಾಗಿ ವಾಹನ ಪಾರ್ಕಿಂಗ್ ಮಾಡದಂತೆ, ವಾಹನ ಚಲಾಯಿಸದಂತೆ ಪೊಲೀಸ್ ಪ್ರಕಟಣೆ ಹೊರಡಿಸಲಾಗಿದೆ. ರಾಜ್ಯಪಾಲರಿಗೆ Z+ ಸೆಕ್ಯೂರಿಟಿ ಇದ್ದು ಸಾರ್ವಜನಿಕರು ಇಂದು ಮುಂಜಾನೆ 9 ರಿಂದ 11 ಗಂಟೆವರೆಗೆ ಸಹಕರಿಸುವಂತೆ ಕೋರಲಾಗಿದೆ.

ಸುಳ್ಯದ ಜನತೆ ಗಮನಿಸಿ…ಈ ಮಾಹಿತಿ ನಿಮಗಾಗಿ Read More »

ಸುಳ್ಯ: ಇಂದು ರಾತ್ರಿ ಮತ್ತೆ ಕಂಪಿಸಿದ ಭೂಮಿ

ಸಮಗ್ರ ನ್ಯೂಸ್: ಕೆಳವು ದಿನಗಳ ಹಿಂದಷ್ಟೇ ಭೂಕಂಪನವಾಗಿದ್ದ ದ.ಕ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಮತ್ತೆ ಭೂಮಿ ಕಂಪಿಸಿದೆ. ಜು 1 ರಂದು ತಡರಾತ್ರಿ1.15 ರ ಸುಮಾರಿಗೆ ಈ ಕಂಪನವಾದ ಅನುಭವವಾಗಿದೆ. ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ್ದು2 ಸೆಕೆಂಡುಗಳ ಕಾಲ ಈ ವಿದ್ಯಮಾನ ನಡೆದಿದೆ. ಈ ವೇಳೆ ಶೀಟ್ ಗಳು, ಕಟ್ಟಡ ನಲುಗಿದ ಅನುಭವವಾಗಿದೆ. ಸಂಪಾಜೆ, ಗೂನಡ್ಕ, ಪೆರಾಜೆ, ಅರಂಬೂರು, ಶಾಂತಿನಗರ, ಹಳೆಗೇಟು ಭಾಗದಲ್ಲಿ ಭೂಮಿ ಕಂಪಿಸಿದ್ದು ಇನ್ನು ಹಲವರಿಗೆ ದೊಡ್ಡ ಶಬ್ದದ ಅನುಭವವಾಗಿದೆ‌ ಎಂದು ತಿಳಿದುಬಂದಿದೆ. ಗ್ರಾಮೀಣ

ಸುಳ್ಯ: ಇಂದು ರಾತ್ರಿ ಮತ್ತೆ ಕಂಪಿಸಿದ ಭೂಮಿ Read More »