ಕರಾವಳಿ

ಸುಳ್ಯ: ಮಳೆಯಿಂದ ಕೊಚ್ಚಿಹೋದ ಉಪ್ಪುಕಳಕ್ಕೆ ಸಚಿವ ಅಂಗಾರ ಭೇಟಿ; ಸೇತುವೆಯ ಭರವಸೆ

ಸಮಗ್ರ ನ್ಯೂಸ್: ಮಳೆಯಿಂದ ಹಾನಿಗೊಳಗಾಗಿದ್ದ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಉಪ್ಪುಕಳ ಗ್ರಾಮಕ್ಕೆ ಬಂದರು ಹಾಗೂ ಮೀನುಗಾರಿಕೆ ಸಚಿವ ಅಂಗಾರ ಇಂದು(ಜು.14) ಭೇಟಿ ನೀಡಿದ್ದು, ಶೀಘ್ರದಲ್ಲೇ ಸೇತುವೆ ನಿರ್ಮಾಣದ ಭರವಸೆ ನೀಡಿದರು. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 124 ಸೇತುವೆಗಳು ನಿರ್ಮಾಣವಾಗಿವೆ. ವಿಶೇಷ ಪ್ರಾಶಸ್ತ್ಯ ನೀಡಿ ಗ್ರಾಮಗಳನ್ನು ಬೆಸೆಯುವ ಸಂಪರ್ಕ ಸೇತುವೆ ನಿರ್ಮಿಸಲಾಗುತ್ತದೆ. ಉಪ್ಪುಕಳದಲ್ಲೂ ಅತೀ ಶೀಘ್ರದಲ್ಲೇ ಸೇತುವೆ ರಚನೆಯಾಗಲಿದ್ದು, ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು. ಮಾಧ್ಯಮಗಳ ಮೇಲೆ ವಾಗ್ದಾಳಿ:ಇದೇ ವೇಳೆ ಸಚಿವ ಅಂಗಾರ

ಸುಳ್ಯ: ಮಳೆಯಿಂದ ಕೊಚ್ಚಿಹೋದ ಉಪ್ಪುಕಳಕ್ಕೆ ಸಚಿವ ಅಂಗಾರ ಭೇಟಿ; ಸೇತುವೆಯ ಭರವಸೆ Read More »

ಸುಳ್ಯ: ನಗರದ ಹೃದಯ ಭಾಗದಲ್ಲಿವೆ ಮೃತ್ಯುಕೂಪಗಳು|
ಜನಸಾಮಾನ್ಯರ ಜೀವದ ಮೇಲೆ ಚೆಲ್ಲಾಟವಾಡುತ್ತಿದ್ದರೂ ನಿರ್ಲಕ್ಷ್ಯ

ಸಮಗ್ರ ನ್ಯೂಸ್: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿರುವ ಸುಳ್ಯ ನಗರ ಸೇರಿದಂತೆ ನ.ಪಂ ವ್ಯಾಪ್ತಿಯಲ್ಲಿ ಹಲವು ಗುಂಡಿಗಳು ಬಿದ್ದಿದ್ದು ಜನಸಾಮಾನ್ಯರ ಪ್ರಾಣದ ಮೇಲೆ ಚೆಲ್ಲಾಟವಾಡುತ್ತಿವೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇದನ್ನು ನೋಡಿಯೂ ನೋಡದಂತೆ ತೆರಳುತ್ತಿದ್ದು, ಸಾರ್ವಜನಿಕರ ಪ್ರಾಣದ ಮೇಲೆ ಯಾಕಿಷ್ಟು ನಿರ್ಲಕ್ಷ್ಯ ಎಂಬ ಆಕ್ರೋಶ ಕೇಳಿಬರುತ್ತಿದೆ. ಸುಳ್ಯ ನ. ಪಂಚಾಯತ್ ನವರು ಗುಂಡಿ ಅಗೆದು ಕಾಮಗಾರಿ ನಡೆಸಿ ಅದನ್ನು ಸರಿಯಾಗಿ ಮುಚ್ಚದೆ ಇರುವುದು ನಗರದ ಹೃದಯ ಭಾಗವಾದ ಪೊಲೀಸ್ ಠಾಣೆಯ ಮುಂಭಾಗ ಮತ್ತು ಆಲೆಟ್ಟಿ ತಿರುವಿನಲ್ಲಿ

ಸುಳ್ಯ: ನಗರದ ಹೃದಯ ಭಾಗದಲ್ಲಿವೆ ಮೃತ್ಯುಕೂಪಗಳು|
ಜನಸಾಮಾನ್ಯರ ಜೀವದ ಮೇಲೆ ಚೆಲ್ಲಾಟವಾಡುತ್ತಿದ್ದರೂ ನಿರ್ಲಕ್ಷ್ಯ
Read More »

ಸುಳ್ಯ: ಮತದಾನ ಬಹಿಷ್ಕಾರ ಅಳವಡಿಸಿದ ಬ್ಯಾನರ್‌ ಕಳವು ಪ್ರಕರಣ| ದೈವ ದೇವರಿಗೆ ಹರಕೆ‌ ಹೇಳಲು ಮುಂದಾದ ಗ್ರಾಮಸ್ಥರು| ಬ್ಯಾನರ್ ಹೊಳೆಗೆಸೆದರೇ ಕಿಡಿಗೇಡಿಗಳು?

ಸಮಗ್ರ ನ್ಯೂಸ್::ಅರಂತೋಡು – ಎಲಿಮಲೆ ರಸ್ತೆ ಅಭಿವೃದ್ಧಿ ಪಡಿಸಬೇಕೆಂದು ಊರವರು ಮನವಿ ಸಲ್ಲಿಸಿದ್ದರೂ ಅಭಿವೃದ್ಧಿ ಕಾಣದ ಹಿನ್ನೆಲೆಯಲ್ಲಿ‌ ನಾಗರಿಕ ಹಿತರಕ್ಷಣಾ ಸಮಿತಿಯನ್ನು‌ ರಚಿಸಿಕೊಂಡು ಹೋರಾಟಕ್ಕೆ‌ ನಡೆಸುತ್ತಿದ್ದು, ಅರಂತೋಡಿನಿಂದ ಮರ್ಕಂಜ ಮಾರ್ಗವಾಗಿ ಎಲಿಮಲೆ‌ಯವರೆಗೆ 26 ಕಡೆಗಳಲ್ಲಿ ಅಲ್ಲಿಯ ನೊಂದ‌ ಫಲಾನುಭವಿಗಳ ಹೆಸರಲ್ಲಿ ಮತದಾನದ ಬ್ಯಾನರ್‌ಗಳನ್ನು‌ ಅಳವಡಿಸಲಾಗಿತ್ತು. ಆದರೆ ಈ ಬ್ಯಾನರ್ ಅನ್ನು ಕೆಲದಿನಗಳ ಹಿಂದೆ ಕಿಡಿಗೇಡಿಗಳು ತೆಗೆದಿದ್ದಾರೆ. ಘಟನೆ ಕುರಿತಂತೆ ಇಲ್ಲಿಯ ಫಲನುಭವಿಗಳು ಬ್ಯಾನರ್ ಕಳವು ಮಾಡಿದ ವಿರುದ್ದ ದೈವ ದೇವರಿಗೆ ಹರಕೆ ಹೇಳಲು ಮುಂದಾಗಿದ್ದು, ಇದರ ಬೆನ್ನಲ್ಲೇ

ಸುಳ್ಯ: ಮತದಾನ ಬಹಿಷ್ಕಾರ ಅಳವಡಿಸಿದ ಬ್ಯಾನರ್‌ ಕಳವು ಪ್ರಕರಣ| ದೈವ ದೇವರಿಗೆ ಹರಕೆ‌ ಹೇಳಲು ಮುಂದಾದ ಗ್ರಾಮಸ್ಥರು| ಬ್ಯಾನರ್ ಹೊಳೆಗೆಸೆದರೇ ಕಿಡಿಗೇಡಿಗಳು? Read More »

ಪುತ್ತೂರು: ಮರದ ಕೊಂಬೆ ಕಡಿಯುವ ವೇಳೆ ಶಾಕ್| ಪವರ ಮ್ಯಾನ್ ದುರ್ಮರಣ

ಸಮಗ್ರ ನ್ಯೂಸ್: ಮರದ ಗೆಲ್ಲು ಕಡಿಯುವ ವೇಳೆ ವಿದ್ಯುತ್ ಶಾಕ್ ಹೊಡೆದು ಮೆಸ್ಕಾಂ ಪವರ್‌ಮ್ಯಾನ್ ಮೃತಪಟ್ಟ ದಾರುಣ ಘಟನೆ ಪುತ್ತೂರಿನ ಕುಂಬ್ರ ಸಮೀಪದ ಪರ್ಪುಂಜದಲ್ಲಿ ಇಂದು(ಜು.12) ಮಧ್ಯಾಹ್ನ ನಡೆದಿದೆ. ಮೆಸ್ಕಾಂ ಕುಂಬ್ರ ಶಾಖೆಯ ಪವರ್‌ಮ್ಯಾನ್ ಬಸವರಾಜ್ (26ವ) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇವರು ಕೆಲ ವರ್ಷಗಳಿಂದ ಪುತ್ತೂರು ಮೆಸ್ಕಾಂ ಕುಂಬ್ರ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಪುತ್ತೂರು: ಮರದ ಕೊಂಬೆ ಕಡಿಯುವ ವೇಳೆ ಶಾಕ್| ಪವರ ಮ್ಯಾನ್ ದುರ್ಮರಣ Read More »

ಸುಳ್ಯ: ವಿಪಕ್ಷ ನಾಯಕರ ನಡೆಗೆ ನ.ಪಂ‌ ಅಧ್ಯಕ್ಷರ ಆಕ್ರೋಶ| ವೆಂಕಪ್ಪ ಗೌಡರದ್ದು ಹಂದಿ ರೀತಿಯ ಮನಸ್ಥಿತಿ ಎಂದ ವಿನಯ ಕಂದಡ್ಕ|
‘ಇವರಿಂದಲೇ ಕಾಂಗ್ರೆಸ್ ಮುಕ್ತವಾಗುತ್ತದೆ’ ಎಂದು ಕುಟುಕಿದ ಅಧ್ಯಕ್ಷರು

ಸಮಗ್ರ ನ್ಯೂಸ್: ಸ್ಥಳವನ್ನು ಸ್ವಚ್ಛ ಮಾಡಿ ಕೊಟ್ಟಷ್ಟು ಹಂದಿ ಕೊಳಚೆಯಲ್ಲೇ ಹೋಗಿ ಬೀಳುತ್ತದೆ. ವೆಂಕಪ್ಪ ಗೌಡರು ಕೂಡಾ ಇದೇ ರೀತಿ ವರ್ತಿಸುತ್ತಿದ್ದು, ಈ ಮನಸ್ಥಿತಿಯಿಂದ ಹೊರ ಬರಬೇಕು ಎಂದು ಸುಳ್ಯ ನ.ಪಂ ಅಧ್ಯಕ್ಷ ವಿನಯ್ ಕಂದಡ್ಕ ಹೇಳಿದ್ದಾರೆ. ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ಪಕ್ಷದಿಂದ ಪ್ರಮುಖ ಯೋಜನೆಗಳೆಲ್ಲಾ ತ್ವರಿತಗತಿಯಿಂದ ನಡೆಯುತ್ತಿದ್ದು ವಿರೋಧ ಪಕ್ಷದವರಿಗೆ ಬೊಬ್ಬೆ ಹೊಡೆಯಲು ಏನೂ ಸಿಗುತ್ತಿಲ್ಲ. ಅದಕ್ಕಾಗಿ ಈ ರೀತಿಯ ಬೇಜವಾಬ್ದಾರಿ ವರ್ತನೆಯನ್ನು ತೋರಿಸುತ್ತಿದ್ದಾರೆ. ಟ್ಯೂಬ್ ಲೈಟ್ ಒಡೆದು ನಮ್ಮ ಮಹಿಳಾ ಸದಸ್ಯರಿಗೆ

ಸುಳ್ಯ: ವಿಪಕ್ಷ ನಾಯಕರ ನಡೆಗೆ ನ.ಪಂ‌ ಅಧ್ಯಕ್ಷರ ಆಕ್ರೋಶ| ವೆಂಕಪ್ಪ ಗೌಡರದ್ದು ಹಂದಿ ರೀತಿಯ ಮನಸ್ಥಿತಿ ಎಂದ ವಿನಯ ಕಂದಡ್ಕ|
‘ಇವರಿಂದಲೇ ಕಾಂಗ್ರೆಸ್ ಮುಕ್ತವಾಗುತ್ತದೆ’ ಎಂದು ಕುಟುಕಿದ ಅಧ್ಯಕ್ಷರು
Read More »

ಸುಳ್ಯ: ಉಪ್ಪುಕಳಕ್ಕೆ ಶೀಘ್ರದಲ್ಲೇ ಸೇತುವೆ ನಿರ್ಮಾಣ| ಭರವಸೆ ನೀಡಿದ ತಹಶಿಲ್ದಾರ್ ಅನಿತಾಲಕ್ಷ್ಮೀ

ಸಮಗ್ರ ನ್ಯೂಸ್: ಭಾರೀ ಮಳೆಯಿಂದಾಗಿ ಬಾಳುಗೋಡು ಗ್ರಾಮದ ಉಪ್ಪುಕಳ ನಿವಾಸಿಗಳ ಸಂಪರ್ಕ ಕೊಂಡಿಯಾಗಿದ್ದ ಮಾನವ ನಿರ್ಮಿತ ಎರಡು ಕಾಲು ಸೇತುವೆಗಳು ಪ್ರವಾಹಕ್ಕೆ ಕೊಚ್ಚಿ ಹೋಗಿ ದ್ವೀಪದಂತಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರಗೊಂಡಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಸುಳ್ಯ ತಹಶೀಲ್ದಾರ್ ಕು.ಅನಿತಾಲಕ್ಷ್ಮೀ ಘಟನಾ ಸ್ಥಳಕ್ಕೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿದ್ದಾರೆ. ಈ ಕುರಿತಂತೆ ‘ಸಮಗ್ರ ಸಮಾಚಾರ’ದೊಂದಿಗೆ ಮಾತನಾಡಿದ ಅವರು ಸದ್ಯಕ್ಕೆ‌ ತುರ್ತಾಗಿ ತಾತ್ಕಾಲಿಕ ಕಾಲು ಸೇತುವೆ ನಿರ್ಮಿಸಲು ಸ್ಥಳೀಯ ಪಂಚಾಯತ್ ಗೆ ತಿಳಿಸಿದ್ದೇವೆ. ಮಳೆಗಾಲ ಕಡಿಮೆಯಾದ ಬಳಿಕ

ಸುಳ್ಯ: ಉಪ್ಪುಕಳಕ್ಕೆ ಶೀಘ್ರದಲ್ಲೇ ಸೇತುವೆ ನಿರ್ಮಾಣ| ಭರವಸೆ ನೀಡಿದ ತಹಶಿಲ್ದಾರ್ ಅನಿತಾಲಕ್ಷ್ಮೀ Read More »

ಸುಳ್ಯ : ರಸ್ತೆ ಅಭಿವೃದ್ಧಿಗಾಗಿ ಚುನಾವಣೆಯ ಬಹಿಷ್ಕಾರ ಬ್ಯಾನರ್| ಮುಖ್ಯಮಂತ್ರಿ ಬರುವ ಹಿನ್ನೆಲೆ ಕಿಡಿಗೇಡಿಗಳಿಂದ ತೆರವು ..??

ಸಮಗ್ರ ನ್ಯೂಸ್: ರಸ್ತೆ ಅಭಿವೃದ್ಧಿಗಾಗಿ ಚುನಾವಣೆಯ ಬಹಿಷ್ಕಾರ ಬ್ಯಾನರ್ ಅಳವಡಿಸಿದನ್ನು ಯಾರೋ ಕಿಡಿಗೇಡಿಗಳು ತೆರವು ಮಾಡಿದ ಘಟನೆ ಅರಂತೋಡು ಎಲಿಮಲೆ ಭಾಗದಿಂದ ವರದಿಯಾಗಿದೆ. ಅರಂತೋಡು-ಎಲಿಮಲೆ ರಸ್ತೆ ಅಭಿವೃದ್ಧಿಗೆ ಅಗ್ರಹಿಸಿ ಕಳೆದ 2 ತಿಂಗಳ ಹಿಂದೆ ರಸ್ತೆಯುದ್ಧಕ್ಕೂ 26 ಕಡೆ ಈ ರಸ್ತೆಯ ನೊಂದ ಪಲಾನುಭವಿಗಳು ಹಾಕಿದ್ದ ಅಡ್ತಲೆಯ ಚುನಾವಣಾ ಬಹಿಷ್ಕಾರದ ಬ್ಯಾನರ್ ಗಳ ಪೈಕಿ ಹೆದ್ದಾರಿಗೆ ಕಾಣುವಂತೆ ವೈ ಎಮ್ ಕೆ ರಸ್ತೆ ಕ್ರಾಸ್ ಬಳಿ ಹಾಕಿದ್ದರು. ಈ ಬ್ಯಾನರ್ ಗಳನ್ನು ಕಳೆದ(ಜು.11) ರಾತ್ರಿ ಯಾರೋ ಕಿಡಿಗೇಡಿಗಳು

ಸುಳ್ಯ : ರಸ್ತೆ ಅಭಿವೃದ್ಧಿಗಾಗಿ ಚುನಾವಣೆಯ ಬಹಿಷ್ಕಾರ ಬ್ಯಾನರ್| ಮುಖ್ಯಮಂತ್ರಿ ಬರುವ ಹಿನ್ನೆಲೆ ಕಿಡಿಗೇಡಿಗಳಿಂದ ತೆರವು ..?? Read More »

ಕಾಣಿಯೂರು: 40 ಗಂಟೆ ಕಳೆದರೂ ಪತ್ತೆಯಾಗದ ಯುವಕರು| ನದಿನೀರಲ್ಲೂ ಏರಿಕೆ; ಹುಡುಕಾಟಕ್ಕೆ ಅಡಚಣೆ

ಸಮಗ್ರ ನ್ಯೂಸ್: ತೀವ್ರ ಆತಂಕಕ್ಕೆ ಕಾರಣವಾಗಿರುವ ಕಾಣಿಯೂರಿನ ಬೈತಡ್ಕ ಸೇತುವೆಯಲ್ಲಿ ಜ.10ರ ಮಧ್ಯರಾತ್ರಿ 12 ಕ್ಕೆ ಕಾರು ನದಿಗೆ ಬಿದ್ದು ನಾಪತ್ತೆಯಾದ ಘಟನೆಯಲ್ಲಿ ಕಾಣೆಯಾದದವರ ವಿವರ 40 ಗಂಟೆ ಕಳೆದರೂ ಇನ್ನೂ ಲಭ್ಯವಾಗಿಲ್ಲ. ಈ ನಡುವೆ ಬೈತ್ತಡ್ಕದಲ್ಲಿ ಕಾರು ಅಪಘಾತವಾಗಿ ಸೇತುವೆಯ ತುಂಡಾದ ತಡೆಬೇಲಿ ಅಪಾಯ ಆಹ್ವಾನಿಸುತ್ತಿದೆ. ತುಂಡಾದ ಕಬ್ಬಿಣದ ರಾಡ್ ಗಳು ಹಾಗೆ ಬಿಟ್ಟಿದ್ದಾರೆ. ಇಲಾಖೆ ಯಾವೂದೇ ತಡೆಬೇಲಿಯೂ ಹಾಕುವ ಕಾರ್ಯವೂ ಮಾಡಿಲ್ಲ. ಇದರಿಂದ ಇನ್ನಷ್ಟು ಅವಘಡಗಳು ಸಂಭವಿಸುವ ಸಾಧ್ಯತೆ‌ ಇದೆ. ಜ.10ರ ಮಧ್ಯರಾತ್ರಿ 12

ಕಾಣಿಯೂರು: 40 ಗಂಟೆ ಕಳೆದರೂ ಪತ್ತೆಯಾಗದ ಯುವಕರು| ನದಿನೀರಲ್ಲೂ ಏರಿಕೆ; ಹುಡುಕಾಟಕ್ಕೆ ಅಡಚಣೆ Read More »

ಸುಳ್ಯ: ಮತ್ತೆ ಎಂದಿನಂತೆ ಕಂಪಿಸಿದ ಭೂಮಿ

ಸಮಗ್ರ ನ್ಯೂಸ್: ಕಳೆದ ಕೆಲ ದಿನಗಳಿಂದ ಕಂಪನಕ್ಕೆ ಒಳಗಾಗುತ್ತಿರುವ ಸುಳ್ಯ ಪರಿಸರ ಇಂದೂ ಮತ್ತದೇ ಅನುಭವವನ್ನು ಹಂಚಿಕೊಂಡಿದೆ. ಸುಳ್ಯ ತಾಲೂಕಿನ ಅರಂತೋಡು, ಉಬರಡ್ಕ, ತೊಡಿಕಾನ, ಮಡಿಕೇರಿ ತಾಲೂಕಿನ ಚೆಂಬು, ಪೆರಾಜೆ, ಸಂಪಾಜೆ ಪರಿಸರದಲ್ಲಿ ಸೋಮವಾರ ಸಂಜೆ 4ರ ಸುಮಾರಿಗೆ ಭೂಕಂಪನವಾಗಿದೆ. ಈ ಕುರಿತಂತೆ ನಾಗರೀಕರು ಅನುಭವ ಹಂಚಿಕೊಂಡಿದ್ದು, ಭೂಕಂಪದ ಬಗ್ಗೆ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ನಿತ್ಯ ಸಂಭವಿಸುವ ಈ ಪ್ರಕೃತಿಯ ವಿದ್ಯಮಾನದಿಂದ ಜನರು ಗಾಬರಿಗೊಳಗಾದರೂ ಸುಧಾರಿಸಿಕೊಳ್ಳುತ್ತಿದ್ದಾರೆ.

ಸುಳ್ಯ: ಮತ್ತೆ ಎಂದಿನಂತೆ ಕಂಪಿಸಿದ ಭೂಮಿ Read More »

ದ.ಕ ನಾಳೆಯಿಂದ ಶಾಲಾ ಕಾಲೇಜುಗಳು ಎಂದಿನಂತೆ – ಡಿಸಿ

ಸಮಗ್ರ ನ್ಯೂಸ್: ಕಳೆದ ಕೆಲವು ದಿನಗಳಿಂದ ಬಿರುಸುಗೊಂಡಿದ್ದ ಮಳೆಯು ಕಡಿಮೆಗೊಂಡಿದ್ದು, ನಾಳೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಶಾಲಾ ಕಾಲೇಜುಗಳು ಎಂದಿನಂತೆ ತೆರೆದಿರಲಿದೆ. ಕಳೆದ ಎಂಟು ದಿನಗಳಿಂದ ಶಾಲೆಗಳಿಗೆ ನಿರಂತರವಾಗಿ ರಜೆ ನೀಡಲಾಗಿದ್ದು, ಮಳೆಯ ಪ್ರಮಾಣ ಕಡಿಮೆಗೊಂಡು ರೆಡ್ ಅಲೆರ್ಟ್ ನಿಂದ ಆರೆಂಜ್ ಅಲರ್ಟ್ ಗೆ ಬದಲಾವಣೆಗೊಂಡ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ನಾಳೆ ಎಂದಿನಂತೆ ತರಗತಿ ನಡೆಯಲಿದೆ. ಸ್ಥಳೀಯವಾಗಿ ಸಮಸ್ಯೆಗಳಿದ್ದಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ.

ದ.ಕ ನಾಳೆಯಿಂದ ಶಾಲಾ ಕಾಲೇಜುಗಳು ಎಂದಿನಂತೆ – ಡಿಸಿ Read More »