ಕರಾವಳಿ

ಕಾರು ರಸ್ತೆ ಹೊಂಡಕ್ಕೆ ಬಿದ್ದು ವಿದ್ಯುತ್ ಕಂಬಕ್ಕೆ ಡಿಕ್ಕಿ

ಉಡುಪಿ : ಇಂದು ಬೆಳ್ಳಂಬೆಳ್ಳಗೆ ಕಾಪುವಿನಲ್ಲಿ ಕಾರು ರಸ್ತೆ ಹೊಂಡಕ್ಕೆ ಬಿದ್ದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆಯೊಂದು ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ಗುಂಡಿಗಳಿಂದ ಕೂಡಿದ್ದು ಮಳೆ ಬಂದ ಪರಿಣಾಮ ಗುಂಡಿಗಳಲ್ಲಿ ನೀರು ತುಂಬಿ ವಾಹನ ಸವಾರರಿಗೆ ಮೃತ್ಯುಕೂಪವಾಗಿ ಪರಿಣಮಿಸುತ್ತಿವೆ. ಕಾಪು ಬಳಿ ಕಾರು ರಸ್ತೆಯಲ್ಲಿದ್ದ ಹೊಂಡಕ್ಕೆ ಬಿದ್ದ ಪರಿಣಾಮ ಚಾಲಕಿಯ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಕಾರಿನ ಚಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಾಪು ಠಾಣಾ ಪೊಲೀಸರು

ಕಾರು ರಸ್ತೆ ಹೊಂಡಕ್ಕೆ ಬಿದ್ದು ವಿದ್ಯುತ್ ಕಂಬಕ್ಕೆ ಡಿಕ್ಕಿ Read More »

ಪುತ್ತೂರು: ಪೂಜೆಗೆಂದು ತಂದ ಬೆಲ್ಲದೊಳಗಿತ್ತು ಬ್ಯಾಟರಿ

ಸಮಗ್ರ ನ್ಯೂಸ್: ಪೂಜೆಗೆಂದು ತಂದ‌ ಬೆಲ್ಲದೊಳಗೆ ಬ್ಯಾಟರಿ ಪತ್ತೆಯಾದ ಘಟನೆ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರುನಲ್ಲಿ ನಡೆದಿದೆ. ಗ್ರಾಮದ ಪೆರ್ನಾಜೆ ರಾಮಕೃಷ್ಣ ಉಂಗ್ರುಪುಳಿತ್ತಾಯ ಎಂಬವರು‌ ಇಂದು ಬೆಳಗ್ಗೆ ಪೂಜೆಗೆಂದು ಬೆಲ್ಲ ತಂದಿದ್ದು ಈ ಬೆಲ್ಲದಲ್ಲಿ ಬ್ಯಾಟರಿ ಸಿಕ್ಕಿದೆ.

ಪುತ್ತೂರು: ಪೂಜೆಗೆಂದು ತಂದ ಬೆಲ್ಲದೊಳಗಿತ್ತು ಬ್ಯಾಟರಿ Read More »

ಮಂಗಳೂರು: ಕಂಬಕ್ಕೆ ಡಿಕ್ಕಿ ಹೊಡೆದ ರೈಲು

ರೈಲೊಂದು ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಕಂಕನಾಡಿ ರೈಲು ನಿಲ್ದಾಣದ ಬಳಿ ಶುಕ್ರವಾರ ತಡರಾತ್ರಿ ನಡೆದಿದೆ. ರೈಲಿನ ಎರಡು ಬೋಗಿಗಳು ಹಳಿ ತಪ್ಪಿದ ಪರಿಣಾಮ ಪಕ್ಕದಲ್ಲೇ ಇದ್ದ ಕಂಬಕ್ಕೆ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ‌ ಎಂದು ತಿಳಿದುಬಂದಿದೆ.

ಮಂಗಳೂರು: ಕಂಬಕ್ಕೆ ಡಿಕ್ಕಿ ಹೊಡೆದ ರೈಲು Read More »

ಕಡಬ: ಮುಸ್ಲಿಂ ಗೆಳತಿ ಮನೆಗೆ ಹೋದ ಹಿಂದೂ ಯುವತಿ| ಹಿಂದೂ ಯುವಕರ ಮೇಲೆ ದಾಂಧಲೆ ಆರೋಪಿಸಿ ದೂರು

ಸಮಗ್ರ ನ್ಯೂಸ್: ಕಡಬ ತಾಲ್ಲೂಕಿನ ಆತೂರು ಸಮೀಪದ ಕುದ್ಲೂರು ಗ್ರಾಮದ ಮುಸ್ಲಿಂ ಗೆಳತಿಯ ಮನೆಗೆ ಹಿಂದೂ ಯುವತಿ ತೆರಳಿದ್ದ ಸಂದರ್ಭ ಸಂಘ ಪರಿವಾರಕ್ಕೆ ಸೇರಿರುವ ಸಂಘಟನೆಯ ಕಾರ್ಯಕರ್ತರು ಮನೆಗೆ ನುಗ್ಗಿ ದಾಂದಲೆ ನಡೆಸಿದ ಬಗ್ಗೆ ಮುಸ್ಲಿಂ ಯುವತಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಸ್ಥಳೀಯ ನಿವಾಸಿಗಳಾದ ಸುದರ್ಶನ್ ಗೆಲ್ಗೊಡಿ, . ಕೆ ಪ್ರಶಾಂತ್ ಕೊಲ್ಯ, ತಮ್ಮ ಕಲ್ಕಡಿ, ಕೆ ಪ್ರಸಾದ್ ಕೊಲ್ಯ ಹಾಗೂ ಇತರರ ವಿರುದ್ದ ಕಡಬ ಠಾಣೆಯಲ್ಲಿ IPC ಕಲಂ : 143,147,504,506 ಜೊತೆಗೆ 149

ಕಡಬ: ಮುಸ್ಲಿಂ ಗೆಳತಿ ಮನೆಗೆ ಹೋದ ಹಿಂದೂ ಯುವತಿ| ಹಿಂದೂ ಯುವಕರ ಮೇಲೆ ದಾಂಧಲೆ ಆರೋಪಿಸಿ ದೂರು Read More »

ಮಂಗಳೂರು: ಡ್ಯೂಟಿ ಟೈಂನಲ್ಲಿ ರಸ್ತೆಗುಂಡಿ ಮುಚ್ಚಿದ ಪೊಲೀಸ್ ಕಾನ್ಸ್‌ಟೇಬಲ್| ಸಾರ್ವಜನಿಕರಿಂದ ಶಹಬ್ಬಾಷ್

ಸಮಗ್ರ ನ್ಯೂಸ್: ನಗರದಲ್ಲಿ ಟ್ರಾಫಿಕ್ ಪೋಲಿಸರು ದುಡ್ಡು ವಸೂಲಿಗೆ ನಿಲ್ಲುತ್ತಾರೆ, ಅವರಿಗೆ ಕಿಂಚಿತ್ತೂ ದಯೆ ಕರುಣೆ ಅನ್ನೋದೆ ಇಲ್ಲ ಎಂಬ ಆಪಾದನೆ ಮಧ್ಯೆ ಇಲ್ಲೊಬ್ಬ ಪೊಲೀಸ್ ಕಾನ್ಸ್‌ಟೇಬಲ್ ಸಮಾಜಮುಖಿ ಕಾರ್ಯ ಮಾಡಿ ಭೇಷ್ ಎನಿಸಿದ್ದಾರೆ. ಸಾರ್ವಜನಿಕರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಪೊಲೀಸ್ ಕಾನ್ ಸ್ಟೆಬಲ್ ಒಬ್ಬರು ವಾಹನ ಸವಾರರ ಕಷ್ಟ ಅರಿತು ಸ್ವತಃ ಗುಂಡಿ ಮುಚ್ಚಿ ಜನರ ಮನ ಗೆದ್ದಿದ್ದಾರೆ. ಮಂಗಳೂರು ನಗರ ಪಶ್ಚಿಮ ಪಾಂಡೇಶ್ವರ ಸಂಚಾರಿ ಪೊಲೀಸ್ ಠಾಣೆಯ ಕಾನ್ ಸ್ಟೆಬಲ್ ಶರಣಪ್ಪ ಎಂಬವರು

ಮಂಗಳೂರು: ಡ್ಯೂಟಿ ಟೈಂನಲ್ಲಿ ರಸ್ತೆಗುಂಡಿ ಮುಚ್ಚಿದ ಪೊಲೀಸ್ ಕಾನ್ಸ್‌ಟೇಬಲ್| ಸಾರ್ವಜನಿಕರಿಂದ ಶಹಬ್ಬಾಷ್ Read More »

ಈ ಪುಟ್ಟ ಬಾಲಕನ ಚಿಕಿತ್ಸೆಗೆ ನೆರವಾಗುವಿರಾ?

ಸಮಗ್ರ ನ್ಯೂಸ್ :ಸುಳ್ಯದ ಕಾಂತಮಂಗಲದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಗಣೇಶ ಮತ್ತು ಜ್ಯೋತಿ ದಂಪತಿಗಳ ಎರಡನೇ ಪುತ್ರನಾಗಿರುವ ತಶ್ವಿತ್ ಎಂಬ 11 ವರ್ಷದ ಬಾಲಕ ಎಲ್ಲಾ ಮಕ್ಕಳಂತೆ ಒಡಾಡಿಕೊಂಡು ಆರೋಗ್ಯವಾಗಿದ್ದ ಹುಡುಗ. ಸುಳ್ಯದ ರೋಟರಿ ಪ್ರಾಥಮಿಕ ಶಾಲೆಯಲ್ಲಿ 6 ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಹುಷಾರಾಗಿದ್ದ ಬಾಲಕ ಕಳೆದ 2 ತಿಂಗಳ ಹಿಂದೆ ಹಠಾತ್ ಆಗಿ ಆರೋಗ್ಯ ಕಳೆದು ಮಲಗಿದಲ್ಲೆ ಇರುವಂತಾಗಿದೆ. ಹಲವು ಕಡೆ ಚಿಕಿತ್ಸೆ ನೀಡಿದ್ದರೂ ಯಾವುದೇ ಪಲಕಾರಿಯಾಗಿಲ್ಲ. ಇದೀಗ ವೈದ್ಯರು ಬಯಾಪ್ಸಿ ಚಿಕಿತ್ಸೆಗಾಗಿ ಮಣಿಪಾಲ

ಈ ಪುಟ್ಟ ಬಾಲಕನ ಚಿಕಿತ್ಸೆಗೆ ನೆರವಾಗುವಿರಾ? Read More »

ಸಚಿವರಿಂದ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಶಿಫಾರಸ್ಸು ವಿವಾದ| ಜನಸಾಮಾನ್ಯರ ಸೇವೆ ಮಾಡಬೇಕಾದ ಶಾಸಕರು ಕೇವಲ ಕಾರ್ಯಕರ್ತರ ಸೇವೆ ಮಾಡುತ್ತಿದ್ದಾರೆ – ಪಿ.ಸಿ ಜಯರಾಮ

ಸಮಗ್ರ ನ್ಯೂಸ್: ಜನಸಾಮಾನ್ಯರ ಸೇವೆ ಮಾಡಬೇಕಾದ ಶಾಸಕರು ಕೇವಲ ಕಾರ್ಯಕರ್ತರ ಸೇವೆ ಮಾಡುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಹೇಳಿದರು. ಅವರು ಜು. 21 ರಂದು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆದು ಶಾಸಕರಾಗಿ ಹಾಗೂ ಸಚಿವರಾಗಿ ಸುಳ್ಯದಲ್ಲಿ ಎಸ್ ಅಂಗಾರ ಆಯ್ಕೆಯಾಗಿದ್ದಾರೆ. ಇವರು ಪಕ್ಷದ ಸೇವೆ ಮಾಡುವುದು ಮಾತ್ರವಲ್ಲದೆ ಜನಸಾಮಾನ್ಯರ ಸೇವೆ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರುವ ನಾವು ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇವೆ . ಪಕ್ಷದಲ್ಲಿ

ಸಚಿವರಿಂದ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಶಿಫಾರಸ್ಸು ವಿವಾದ| ಜನಸಾಮಾನ್ಯರ ಸೇವೆ ಮಾಡಬೇಕಾದ ಶಾಸಕರು ಕೇವಲ ಕಾರ್ಯಕರ್ತರ ಸೇವೆ ಮಾಡುತ್ತಿದ್ದಾರೆ – ಪಿ.ಸಿ ಜಯರಾಮ Read More »

ಮಂಗಳೂರು: ಕಾಲೇಜು ವಿದ್ಯಾರ್ಥಿಗಳ ಟ್ರುಥ್& ಡೇರ್ ಗೇಮ್ ಜೊತೆ ಸೆಕ್ಸ್| ನಾಲ್ಕೈದು ತಿಂಗಳ ಹಿಂದೆಯೇ ನಡೆದಿತ್ತು ಪ್ರಕರಣ!

ಸಮಗ್ರ ನ್ಯೂಸ್: ಮಂಗಳೂರು ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳ ಲಿಪ್ ಲಾಕ್ ಮತ್ತು ರಾಸಲೀಲೆ ಪ್ರಕರಣವು ಟ್ರುಥ್ ಅಂಡ್ ಡೇರ್ ಗೇಮ್ ಹಿನ್ನೆಲೆಯಲ್ಲಿ ನಡೆದಿದೆ. ಸದ್ಯ ಇದರ ವೀಡಿಯೋ ವೈರಲ್‌ಗೆ ಸಂಬಂಧಿಸಿದಂತೆ ಓರ್ವ ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ತಿಳಿಸಿದ್ದಾರೆ. ಈ ಬಗ್ಗೆ ಕಾಲೇಜಿಗೆ ಹೋಗಿ ಈಗಾಗಲೇ ಪರಿಶೀಲನೆ ನಡೆಸಲಾಗಿದೆ. ಆದರೆ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಈ ಘಟನೆ ನಾಲ್ಕೈದು ತಿಂಗಳ ಹಿಂದೆ ನಡೆದಿದೆ. ಆದರೆ

ಮಂಗಳೂರು: ಕಾಲೇಜು ವಿದ್ಯಾರ್ಥಿಗಳ ಟ್ರುಥ್& ಡೇರ್ ಗೇಮ್ ಜೊತೆ ಸೆಕ್ಸ್| ನಾಲ್ಕೈದು ತಿಂಗಳ ಹಿಂದೆಯೇ ನಡೆದಿತ್ತು ಪ್ರಕರಣ! Read More »

ಮಂಗಳೂರು: ಪ್ರತಿಷ್ಠಿತ ಕಾಲೇಜಿನ ವಿಧ್ಯಾರ್ಥಿಗಳ ಲಿಪ್ ಲಾಕ್| ಜಾಲತಾಣದಲ್ಲಿ ವಿಡಿಯೋ ವೈರಲ್…!!ವಿಡಿಯೋ ಮಾಡಿದ ವಿದ್ಯಾರ್ಥಿ ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ಇಲ್ಲಿ ಪ್ರತಿಷ್ಠಿತ ಕಾಲೇಜಿನ ವಿಧ್ಯಾರ್ಥಿಗಳ ಕಿಸ್ಸಿಂಗ್ ಸೀನ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಲೇಜಿನ ಯೂನಿಫಾರಂ ನಲ್ಲಿರುವ ವಿಧ್ಯಾರ್ಥಿಗಳು ಟ್ರೂತ್ ಆ್ಯಂಡ್ ಡೇರ್ ಗೇಮ್‍ನ್ನು ಆಡುತ್ತಿದ್ದರು. ಈ ವೇಳೆ ಪಂದ್ಯದ ನಿಯಮದಂತೆ ವಿದ್ಯಾರ್ಥಿನಿಯನ್ನು ವಿದ್ಯಾರ್ಥಿ ಚುಂಬಿಸಿದ್ದಾನೆ. ತನ್ನ ಸಹಪಾಠಿಗಳ ಎದುರೇ ಖುಲ್ಲಂ ಖುಲ್ಲಾ ವಿದ್ಯಾರ್ಥಿಗಳು ಚುಂಬಿಸಿದ್ದು, ಈ ದೃಶ್ಯವನ್ನು ಉಳಿದವರು ವೀಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. 20 ಸೆಕೆಂಡ್‌ಗಳ ಈ ವಿಡಿಯೋವನ್ನ ಯಾವುದೋ ಖಾಸಗಿ ರೂಮ್‌ನಲ್ಲಿ ತೆಗೆಯಲಾಗಿದೆ. ಮೇಲ್ನೋಟಕ್ಕೆ ಯುವಕರು ವಾಸ್ತವ್ಯ

ಮಂಗಳೂರು: ಪ್ರತಿಷ್ಠಿತ ಕಾಲೇಜಿನ ವಿಧ್ಯಾರ್ಥಿಗಳ ಲಿಪ್ ಲಾಕ್| ಜಾಲತಾಣದಲ್ಲಿ ವಿಡಿಯೋ ವೈರಲ್…!!ವಿಡಿಯೋ ಮಾಡಿದ ವಿದ್ಯಾರ್ಥಿ ಪೊಲೀಸ್ ವಶಕ್ಕೆ Read More »

ಉಡುಪಿ: ಶಿರೂರು ಅಂಬ್ಯುಲೆನ್ಸ್ ಅಪಘಾತ ಪ್ರಕರಣ| ನಾಲ್ವರು ಸಾವು; ಹಸುವಿನ ಪ್ರಾಣ ರಕ್ಷಿಸಲು ಹೋಗಿ ನಡೆಯಿತೇ ಅಪಘಾತ?

ಸಮಗ್ರ ನ್ಯೂಸ್: ಚಾಲಕನ ನಿಯಂತ್ರಣ ತಪ್ಪಿ ಆಂಬುಲೆನ್ಸ್​ವೊಂದು ಟೋಲ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್ ಬಳಿ ನಡೆದಿದೆ. ಹೊನ್ನಾವರದಿಂದ ಕುಂದಾಪುರಕ್ಕೆ ರೋಗಿಗಳನ್ನು ಸಾಗಿಸುತ್ತಿದ್ದ ಆಂಬುಲೆನ್ಸ್​​ವೊಂದು ಟೋಲ್ ಹತ್ತಿರ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಆಂಬ್ಯುಲೆನ್ಸ್‌ನಲ್ಲಿದ್ದ ಗಜಾನನ ಲಕ್ಷ್ಮಣ ನಾಯ್ಕ (36), ಜ್ಯೋತಿ ಲೋಕೇಶ್‌ ನಾಯ್ಕ (32), ಲೋಕೇಶ್‌ ಮಾಧವ ನಾಯ್ಕ (38) ಹಾಗೂ ಮಂಜುನಾಥ ನಾಯ್ಕ (42)

ಉಡುಪಿ: ಶಿರೂರು ಅಂಬ್ಯುಲೆನ್ಸ್ ಅಪಘಾತ ಪ್ರಕರಣ| ನಾಲ್ವರು ಸಾವು; ಹಸುವಿನ ಪ್ರಾಣ ರಕ್ಷಿಸಲು ಹೋಗಿ ನಡೆಯಿತೇ ಅಪಘಾತ? Read More »