ಕರಾವಳಿ

ಚಿಕ್ಕಮಗಳೂರು : ಒಳಚರಂಡಿ ಕಾಮಗಾರಿ ವಿಳಂಬ

ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ಮಾಡಿ ಜೈಲಿಗೆ ಹಾಕಿ : ಬೋಜೇಗೌಡ ಚಿಕ್ಕಮಗಳೂರು : ಒಳಚರಂಡಿ ಕಾಮಗಾರಿ ವಿಳಂಬ ಹಿನ್ನೆಲೆ ಅಧಿಕಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಬೋಜೇಗೌಡರಿಂದ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ. ಅಮೃತ್ ಯೋಜನೆ ಹಾಗೂ ಒಳಚರಂಡಿ ಕಾಮಗಾರಿ ಮಾಡಲಾಗಿದ್ದು ಈ ಕಾಮಗಾರಿ ಕಳೆದ ನವಂಬರ್ ನಲ್ಲಿ ಮುಗಿಯಬೇಕಿತ್ತು, ಆದರೆ ಆಗಸ್ಟ್ ಬಂದರು ಕಾಮಗಾರಿ ಮುಗಿಸದ ಹಿನ್ನೆಲೆ ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ

ಚಿಕ್ಕಮಗಳೂರು : ಒಳಚರಂಡಿ ಕಾಮಗಾರಿ ವಿಳಂಬ Read More »

ತುಳುವಿಗೆ ಅಕಾಡೆಮಿಯೊಂದನ್ನು ಬಿಟ್ಟರೆ ಸರಕಾರ ಬೇರೆ ಏನೂ ಮಾಡಿಲ್ಲ: ತುಳು ಅಕಾಡೆಮಿ ಅಧ್ಯಕ್ಷರ ಬೇಸರ

ಮಂಗಳೂರು: ಪಂಚ ದ್ರಾವಿಡ ಭಾಷೆಯಲ್ಲಿಯೇ ತುಳುವಿಗೆ ಬಹಳ ಉನ್ನತ ಸ್ಥಾನವಿದೆ. ಕರ್ನಾಟಕದಲ್ಲಿ ತುಳು ಸಾಹಿತ್ಯ ಅಕಾಡೆಮಿಯೊಂದನ್ನು ಬಿಟ್ಟರೆ ಉಳಿದಂತೆ ಸರಕಾರ ಯಾವುದೇ ರೀತಿಯಲ್ಲಿ ನೆರವಾಗಿಲ್ಲ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ ಸಾರ್‌ ಬೇಸರ ವ್ಯಕ್ತಪಡಿಸಿದರು. ಅವರು ಭಾನುವಾರ ನಗರದ ಉರ್ವ ಸ್ಟೋರ್‌ನಲ್ಲಿರುವ ಡಾ.ಬಿಆರ್‌ ಅಂಬೇಡ್ಕರ್‌ ಭವನದಲ್ಲಿ ಜೈ ತುಳುನಾಡು ಮಂಗಳೂರು ಆಶ್ರಯದಲ್ಲಿ ತುಲುವೆರೆ ಆಟಿ ಕಾರ‍್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ದಯಾನಂದ ಜಿ ಕತ್ತಲ್‌ಸಾರ್, ಕರ್ನಾಟಕ ಸರಕಾರ ತುಳು ಅಕಾಡೆಮಿಯೊಂದನ್ನು ಕೊಟ್ಟಿದೆ.

ತುಳುವಿಗೆ ಅಕಾಡೆಮಿಯೊಂದನ್ನು ಬಿಟ್ಟರೆ ಸರಕಾರ ಬೇರೆ ಏನೂ ಮಾಡಿಲ್ಲ: ತುಳು ಅಕಾಡೆಮಿ ಅಧ್ಯಕ್ಷರ ಬೇಸರ Read More »

ಮೀನುಗಾರಿಕೆಗೆ ಈ ವರ್ಷವೂ ಆರಂಭದಲ್ಲೇ ಅಡ್ಡಿ| ಕಡಲಿಗಿಳಿಯದೆ ದಡದಲ್ಲೇ ಉಳಿದ ಬೋಟುಗಳು|ಹೋದ ದೋಣಿಗಳೂ ಬರಿಗೈಯಲ್ಲಿ ವಾಪಸ್‌

ಉಡುಪಿ: ಮಳೆ, ಗಾಳಿಯಿಂದಾಗಿ ಸಮುದ್ರ ಪ್ರಕ್ಷುಬ್ಧವಾಗಿದ್ದು, ಯಾಂತ್ರಿಕ ಮೀನುಗಾರಿಕೆ ಆರಂಭದ ದಿನದಲ್ಲೇ ಅಡಚಣೆ ಉಂಟಾಗಿದೆ. 61 ದಿನಗಳ ರಜೆಯ ಬಳಿಕ ಬಹು ನಿರೀಕ್ಷೆಯೊಂದಿಗೆ ಆ. 1ರಿಂದ ಕಡಲಿಗಿಳಿಯಬೇಕಿದ್ದ ಮೀನುಗಾರರಿಗೆ ನಿರಾಶೆಯಾಗಿದೆ. ದೋಣಿಗಳನ್ನು ಕಡಲಿಗೆ ಇಳಿಸುವುದು ವಿಳಂಬವಾಗುತ್ತಿರುವುದರಿಂದ ಮಂಜುಗಡ್ಡೆ ವ್ಯವಹಾರ, ಮೀನು ಸಾಗಾಟ ವ್ಯವಸ್ಥೆ, ಮಾರಾಟಗಾರರು ಸೇರಿದಂತೆ ಮೀನುಗಾರಿಕೆಗೆ ಅವಲಂಬಿತ ಕ್ಷೇತ್ರಗಳೆಲ್ಲವೂ ಹಿನ್ನೆಡೆ ಕಂಡಿವೆ. ಕಳೆದ ಋತುವಿನಲ್ಲಿ ಮೀನಿನ ಕ್ಷಾಮದ ಜತೆಗೆ ಚಂಡಮಾರುತದಿಂದಾಗಿ ಪದೇಪದೆ ಸಮುದ್ರ ಪ್ರಕ್ಷುಬ್ಧವಾಗಿದ್ದು ಮೀನುಗಾರರು ಸಂಕಷ್ಟ ಎದುರಿಸಿದ್ದರು. ಈ ಋತುವಿನ ಆರಂಭವೂ ಅದೇ ರೀತಿ

ಮೀನುಗಾರಿಕೆಗೆ ಈ ವರ್ಷವೂ ಆರಂಭದಲ್ಲೇ ಅಡ್ಡಿ| ಕಡಲಿಗಿಳಿಯದೆ ದಡದಲ್ಲೇ ಉಳಿದ ಬೋಟುಗಳು|ಹೋದ ದೋಣಿಗಳೂ ಬರಿಗೈಯಲ್ಲಿ ವಾಪಸ್‌ Read More »

ಕುಂದಾಪುರ: ವಿದ್ಯುತ್ ತಂತಿ ತಗುಲಿ ನಾಲ್ಕು ಹಸುಗಳು ಮೃತ್ಯು

ಮೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ಕುಂದಾಪುರ: ಗದ್ದೆಯಲ್ಲಿ ಮೇಯುತ್ತಿದ್ದ ನಾಲ್ಕು ಹಸುಗಳು ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಘಟನೆ ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹರ್ಕೂರಿನಲ್ಲಿ ನಡೆದಿದೆ. ಪಶು ವೈದ್ಯಾಧಿಕಾರಿಗಳು ಹಾಗೂ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ತಂತಿಗಳು ತೀರಾ ಹಳೆಯದಾಗಿದ್ದು, ಇದರಿಂದ ಹಸುಗಳು ಸಾವನ್ನಪ್ಪಿರಬಹುದು ಎಂದು ಗ್ರಾಮಸ್ಥರು ಮೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಂದಾಪುರ: ವಿದ್ಯುತ್ ತಂತಿ ತಗುಲಿ ನಾಲ್ಕು ಹಸುಗಳು ಮೃತ್ಯು Read More »

ಕಾಸರಗೋಡು: ಭಾರೀ ಮಳೆಗೆ ನೋಡ ನೋಡುತ್ತಿದ್ದಂತೆಯೇ ಕುಸಿದು ಬಿದ್ದ ಕಟ್ಟಡ

ಸಮಗ್ರ ನ್ಯೂಸ್: ಭಾರೀ ಮಳೆಗೆ ಕಟ್ಟಡವೊಂದು ಕುಸಿದು ಬಿದ್ದ ಘಟನೆ ಭಾನುವಾರ ಬೆಳಿಗ್ಗೆ ವರ್ಕಾಡಿ ಸಮೀಪದ ಸುಂಕದಕಟ್ಟೆಯಲ್ಲಿ ನಡೆದಿದೆ. ಕಟ್ಟಡದಲ್ಲಿ ವಸತಿ ಕೊಠಡಿ, ವಾಣಿಜ್ಯ ಮಳಿಗೆ ಮಾಲ್ ಗಳಿದ್ದವು. ರಸ್ತೆ ಬದಿ ಇಳಿಜಾರು ಸ್ಥಳದಲ್ಲಿ ವರ್ಷಗಳ ಹಿಂದೆ ನಿರ್ಮಿಸಿದ್ದ ಈ ಕಟ್ಟಡ ಮಳೆಯ ತೀವ್ರತೆಗೆ ಜನರು ನೋಡು ನೋಡುತ್ತಿದ್ದಂತೆಯೇ ನೆಲಕಚ್ಚಿದೆ. ಇನ್ನು ಕೆಲ ದಿನಗಳ ಹಿಂದೆ ಈ ಕಟ್ಟಡ ದಲ್ಲಿ ಬಿರುಕು ಕಂಡು ಬಂದಿದ್ದು, ಇದರಿಂದ ಈ ಕಟ್ಟಡದಲ್ಲಿದ್ದವರು ಸ್ಥಳಾಂತರಗೊಂಡಿದ್ದರು. ಮೊದಲೇ ಮುಂಜಾಗ್ರತಾ ಕ್ರಮ ತೆಗೆದುಕೊಂಡ ಪರಿಣಾಮ

ಕಾಸರಗೋಡು: ಭಾರೀ ಮಳೆಗೆ ನೋಡ ನೋಡುತ್ತಿದ್ದಂತೆಯೇ ಕುಸಿದು ಬಿದ್ದ ಕಟ್ಟಡ Read More »

ಅಪರಾದ ಕೃತ್ಯಗಳ ತನಿಖೆ ವೇಳೆ ಕೈಕೊಡುತ್ತಿರುವ ಸಿಸಿ ಕ್ಯಾಮರಾಗಳು| ಗುಣಮಟ್ಟ ನಿರ್ವಹಣೆಯೇ ಸವಾಲು

ಸಮಗ್ರ ನ್ಯೂಸ್ : ಅಪರಾಧ ಕೃತ್ಯ ಗಳನ್ನು ಪತ್ತೆಹಚ್ಚಿ ಪ್ರಕರಣ ಭೇದಿಸಲು ನೆರವಾಗ ಬೇಕಾದ ಸಿಸಿ ಕೆಮರಾಗಳು ತನಿಖೆ ವೇಳೆ ಪೊಲೀಸರಿಗೆ ಕೈ ಕೊಡುತ್ತಿವೆ. ಇದಕ್ಕೆ ಕಾರಣ ಕಡಿಮೆ ಗುಣಮಟ್ಟದ ಕೆಮರಾಗಳು ಮತ್ತು ನಿರ್ವಹಣೆಯಲ್ಲಿ ನಿರ್ಲಕ್ಷ್ಯ. ಸಾರ್ವಜನಿಕ ಸ್ಥಳ, ವಾಣಿಜ್ಯ ಕಟ್ಟಡಗಳಲ್ಲಿ ಅಳವಡಿಸಿರುವ ಕೆಮರಾಗಳ ಪೈಕಿ ಹೆಚ್ಚಿನವುಗಳಲ್ಲಿ ದೃಶ್ಯಗಳು ಸೆರೆಯಾಗುತ್ತಿಲ್ಲ. ಸೆರೆಯಾಗಿದ್ದರೂ ಅಸ್ಪಷ್ಟವಾಗಿರುತ್ತದೆ. ಹಾಗಾಗಿ ಪೊಲೀಸರು “ಕರ್ನಾಟಕ ಸಾರ್ವಜನಿಕ ಸುರಕ್ಷೆಯ (ಕ್ರಮಗಳ) ಜಾರಿ ಅಧಿನಿಯಮ 2017’ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದ್ದು, ಅಲ್ಲಿ ಸೂಚಿಸಿರುವ ಮಾದರಿಯಲ್ಲೇ ಸಿಸಿ ಕೆಮರಾ

ಅಪರಾದ ಕೃತ್ಯಗಳ ತನಿಖೆ ವೇಳೆ ಕೈಕೊಡುತ್ತಿರುವ ಸಿಸಿ ಕ್ಯಾಮರಾಗಳು| ಗುಣಮಟ್ಟ ನಿರ್ವಹಣೆಯೇ ಸವಾಲು Read More »

ದ.ಕ ಜಿಲ್ಲೆಯಲ್ಲಿ‌ ನಿರ್ಬಂಧಗಳಿಗೆ ಮುಕ್ತಿ; ಆ.14ರವರೆಗೆ 144 ಸೆಕ್ಷನ್ ಮುಂದುವರಿಕೆ – ಜಿಲ್ಲಾಧಿಕಾರಿ ಆದೇಶ

ಸಮಗ್ರ‌ ನ್ಯೂಸ್: ದ.ಕ ಜಿಲ್ಲೆಯಲ್ಲಿ ಅಪರಾಧ ಕೃತ್ಯ ನಡೆದ ಹಿನ್ನೆಲೆಯಲ್ಲಿ ಹೇರಲಾಗಿದ್ದ ಕೆಲವೊಂದು ನಿರ್ಬಂಧಗಳನ್ನು ‌ಸಡಿಲಿಸಿ ದ.ಕ‌. ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ‌ ಇದುವರೆಗೆ ರಾತ್ರಿ 9 ಗಂಟೆಗೆ ಅಂಗಡಿ‌ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಆದರೆ ಆ.8ರಿಂದ ರಾತ್ರಿ 9 ಗಂಟೆಯ ನಂತರವು ಅಂಗಡಿಗಳನ್ನು ಓಪನ್ ಇಡಬಹುದು. ಬಾರ್, ವೈನ್ ಶಾಪ್ ಎಂದಿನಂತೆ ಕಾರ್ಯಾಚರಿಸಲು ಅವಕಾಶ ನೀಡಲಾಗಿದೆ. ಜನರ ಓಡಾಟಕ್ಕೂ ಕೂಡ ಯಾವುದೇ ನಿರ್ಬಂಧವಿರುವುದಿಲ್ಲ. ಆಗಸ್ಟ್ 14 ರವರೆಗೆ 144 ಸೆಕ್ಷನ್ ಜಾರಿಯಲ್ಲಿರುತ್ತೆ ಎಂದು ದ.ಕ‌ ಜಿಲ್ಲಾಧಿಕಾರಿ

ದ.ಕ ಜಿಲ್ಲೆಯಲ್ಲಿ‌ ನಿರ್ಬಂಧಗಳಿಗೆ ಮುಕ್ತಿ; ಆ.14ರವರೆಗೆ 144 ಸೆಕ್ಷನ್ ಮುಂದುವರಿಕೆ – ಜಿಲ್ಲಾಧಿಕಾರಿ ಆದೇಶ Read More »

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ; 10 ಜನರು ಬಚಾವ್

ಸಮಗ್ರ ನ್ಯೂಸ್: ಮಂಗಳೂರು ಬಂದರಿನಿಂದ ಮೀನುಗಾರಿಕೆಗೆ ಹೊರಟಿದ್ದ ಬೋಟ್ ವೊಂದು ಮುಳುಗಿದ್ದು, 10 ಜನರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಮಂಗಳೂರು ಬಂದರಿನಿಂದ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ಹೊರಟಿದ್ದ ಜೈಶ್ರೀರಾಮ್ ಹೆಸರಿನ ಬೋಟ್ ಅಲೆಗಳ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಮಂಗಳೂರು ಬಂದರಿನಿಂದ 30 ನಾಟಿಕಲ್ ದೂರದಲ್ಲಿ ಆಳ ಸಮುದ್ರದಲ್ಲಿ ಬೋಟ್ ಮುಳುಗಿದೆ. ಈ ವೇಳೆ 10 ಜನರು ಈಜಿ ಮತ್ತೊಂದು ಬೋಟ್ ಗೆ ಹೋಗಿದ್ದಾರೆ.

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ; 10 ಜನರು ಬಚಾವ್ Read More »

ಬಂಟ್ವಾಳ; ಚರಂಡಿ ನೀರಿಗೆ ಬಿದ್ದು ವ್ಯಕ್ತಿ ಮೃತ್ಯು

ಬಂಟ್ವಾಳ : ಚರಂಡಿಯ ನೀರಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ವಿಟ್ಲ ಪೇಟೆಯಲ್ಲಿ ರವಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಮೃತರನ್ನು ಚಂದಳಿಕೆ ನಿವಾಸಿ ಪಕ್ರು ಎಂದು ಗುರುತಿಸಲಾಗಿದೆ. ಅವರ ಮೃತದೇಹ ವಿಟ್ಲ ನಾಲ್ಕು ಮಾರ್ಗ ಜಂಕ್ಷನ್ ಬಳಿ ವಿಟ್ಲ- ಕಾಸರಗೋಡು ಮುಖ್ಯ ರಸ್ತೆಯಲ್ಲಿನ ತೆರೆದ ಸ್ಥಿತಿಯಲ್ಲಿದ್ದ ಚರಂಡಿಗೆ ಕವುಚಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮದ್ಯಪಾನದ ಅಮಲಿನಲ್ಲಿ ನಿಯಂತ್ರಣ ಕಳೆದುಕೊಂಡ ಪಕ್ರು ಸ್ಲ್ಯಾಬ್ ತೆರೆದ ಸ್ಥಿತಿಯಲ್ಲಿದ್ದ ಚರಂಡಿಗೆ ಆಕಸ್ಮಿಕವಾಗಿ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಚರಂಡಿಯಲ್ಲಿ ಮಳೆ ನೀರು ತುಂಬಿದ್ದು, ಕವುಚಿ

ಬಂಟ್ವಾಳ; ಚರಂಡಿ ನೀರಿಗೆ ಬಿದ್ದು ವ್ಯಕ್ತಿ ಮೃತ್ಯು Read More »

ಮಂಗಳೂರು: ಹೊಂಡ ತಪ್ಪಿಸಲು ಹೋಗಿ ಡಿವೈಡರ್‌‌ಗೆ ಸ್ಕೂಟರ್ ಢಿಕ್ಕಿ-ಯುವಕ ಸಾವು

ಮಂಗಳೂರು: ರಸ್ತೆಯ ಗುಂಡಿ ತಪ್ಪಿಸಲು ಹೋಗಿ ಡಿವೈಡರ್‌‌ಗೆ ಸ್ಕೂಟರ್ ಢಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ನಡೆದಿದೆ. ಕೊಂಚಾಡಿ ನಿವಾಸಿ ಆತೀಶ್ (20) ಮೃತಪಟ್ಟವರು. ಆತೀಶ್ ನಂತೂರು ಜಂಕ್ಷನ್ ಕಡೆಯಿಂದ ಬಿಕರ್ನಕಟ್ಟೆ ಕೈಕಂಬ ಕಡೆಗೆ ಹಾದು ಹೋಗಿರುವ ರಸ್ತೆಯಲ್ಲಿ ಸಂಜೆ 6.45ರ ಸುಮಾರಿಗೆ ಸಂಚರಿಸುತ್ತಿದ್ದರು. ಮಳೆ ಜೋರಾಗಿ ಸುರಿಯುತ್ತಿದ್ದುದರಿಂದ ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್‌ಗಿಂತ ಮೊದಲು ಡಿವೈಡರ್‍ ಪಕ್ಕದಲ್ಲಿದ್ದ ಹೊಂಡವನ್ನು ಅವರು ಗಮನಿಸಲಿಲ್ಲ. ಹೊಂಡದ ಸನಿಹಕ್ಕೆ ಬರುವಾಗ ಹೊಂಡ

ಮಂಗಳೂರು: ಹೊಂಡ ತಪ್ಪಿಸಲು ಹೋಗಿ ಡಿವೈಡರ್‌‌ಗೆ ಸ್ಕೂಟರ್ ಢಿಕ್ಕಿ-ಯುವಕ ಸಾವು Read More »