ಕರಾವಳಿ

ಮಂಗಳೂರು: ನಿಷೇಧದ ಹತಾಶೆ ನಡುವೆ ಪಿಎಫ್ಐನಿಂದ ರಸ್ತೆಯಲ್ಲಿ ಎಚ್ಚರಿಕೆ ಬರಹ

ಸಮಗ್ರ ನ್ಯೂಸ್: ಬ್ಯಾನ್ ಬೆನ್ನಲ್ಲೇ ರಸ್ತೆ ಮೇಲೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದಿಂದ ಎಚ್ಚರಿಕೆಯ ಬರಹವೊಂದನ್ನು ಬರೆಯಲಾಗಿದೆ. ಬಂಟ್ವಾಳ ತಾಲೂಕಿನ ನೈನಾಡು ಎಂಬಲ್ಲಿ ರಸ್ತೆ ಮೇಲೆ ಎಚ್ಚರಿಕೆಯ ಬರಹ ಬರೆಯಲಾಗಿದೆ. ಚಡ್ಡಿಗಳೇ ಎಚ್ಚರ -ಪಿಎಫ್‍ಐ ನಾವು ಮರಳಿ ಬರುತ್ತೇವೆ ಅಂತಾ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ. ಯಾರೋ ಕಿಡಿಗೇಡಿಗಳು ತಡ ರಾತ್ರಿ ರಸ್ತೆಯಲ್ಲಿ ಈ ರೀತಿ ಬರೆದಿದ್ದಾರೆ. ಸ್ಥಳಕ್ಕೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು,ಪುಂಜಾಲಕಟ್ಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಂಗಳೂರು: ನಿಷೇಧದ ಹತಾಶೆ ನಡುವೆ ಪಿಎಫ್ಐನಿಂದ ರಸ್ತೆಯಲ್ಲಿ ಎಚ್ಚರಿಕೆ ಬರಹ Read More »

ಸುಳ್ಯ: ಪೊಲೀಸಪ್ಪನೊಂದಿಗೆ ವಿವಾಹಿತ ಮಹಿಳೆಯ ಪಲ್ಲಂಗದಾಟ| ಗಂಡನಿಂದ ಹಿಗ್ಗಾಮುಗ್ಗ ಗೂಸಾ

ಸಮಗ್ರ ನ್ಯೂಸ್: ಲಾಡ್ಜ್ ಒಂದರಲ್ಲಿ ವಿವಾಹಿತ ಮಹಿಳೆಯೊಬ್ಬಳು ಪೊಲೀಸ್ ಅಧಿಕಾರಿಯೊಂದಿಗೆ ಪಲ್ಲಂಗದಾಟದಲ್ಲಿ ತೊಡಗಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಅ.2ರ ತಡರಾತ್ರಿ ಬೆಳಕಿಗೆ ಬಂದಿದೆ. ಸಿಕ್ಕಿಬಿದ್ದಾಕೆ ಮುಂದಿನ ವಿಧಾನಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿ, ಪ್ರತಿಷ್ಠಿತ ವ್ಯಕ್ತಿಯೊಬ್ಬರ ಮಗಳು ಎನ್ನಲಾಗಿದ್ದು, ವಿಷಯ ತಿಳಿದ ಮಹಿಳೆಯ ಗಂಡ ಬಂದು ಪೊಲೀಸ್ ಅಧಿಕಾರಿಗೆ ಹಿಗ್ಗಾ ಮುಗ್ಗ ಗೂಸಾ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸುಳ್ಯ: ಪೊಲೀಸಪ್ಪನೊಂದಿಗೆ ವಿವಾಹಿತ ಮಹಿಳೆಯ ಪಲ್ಲಂಗದಾಟ| ಗಂಡನಿಂದ ಹಿಗ್ಗಾಮುಗ್ಗ ಗೂಸಾ Read More »

ಸುಳ್ಯ: ರಸ್ತೆ ದುರಸ್ತಿ ಮಾಡಿಕೊಡುವಂತೆ ಸ್ಥಳೀಯರಿಂದ ಅಂಬೇಡ್ಕರ್ ರಕ್ಷಣೆ ವೇದಿಕೆಗೆ ಮನವಿ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಮಿತ್ತೂರು ಉಬರಡ್ಕ ಗ್ರಾಮದ ಕಟ್ಟಕೊಡಿ ಯಾವಟೆ ಸಂಪರ್ಕ ರಸ್ತೆ ಸಂಪೂರ್ಣವಾಗಿ ಹದಕ್ಕೆಟ್ಟು ಹೋಗಿದ್ದು ಇದನ್ನು ದುರಸ್ತಿ ಮಾಡಿಕೊಡುವಂತೆ ಸ್ಥಳೀಯರಿಂದ ಅಂಬೇಡ್ಕರ್ ರಕ್ಷಣೆ ವೇದಿಕೆಗೆ ಮನವಿ ನೀಡಲಾಯಿತು. ಮಿತ್ತೂರು ಉಬರಡ್ಕ ಗ್ರಾಮದ ಕಟ್ಟಕೊಡಿ ಯಾವಟೆ ಸಂಪರ್ಕ ರಸ್ತೆ ಸಂಪೂರ್ಣವಾಗಿ ಹದಕ್ಕೆಟ್ಟು ಹೋಗಿದ್ದು ರಸ್ತೆಗೆ ಕಾಂಕ್ರಿಟ್ ಮಾಡಿಕೊಡಿಯೆಂದ್ದು ಸುಳ್ಯ ಶಾಸಕರಿಗೆ ಮತ್ತು ಸಂಬಂಧ ಪಟ್ಟ ಇಲಾಖೆಗೆ ಹಲವು ವರ್ಷಗಳಿಂದ ಮನವಿ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಿಲ್ಲವೆಂದು ಪರಿಶಿಷ್ಟ ಪಂಗಡದವರು ಮತ್ತು ಅಲ್ಲಿಯ ನಿವಾಸಿಗಳು ಅಂಬೇಡ್ಕರ್

ಸುಳ್ಯ: ರಸ್ತೆ ದುರಸ್ತಿ ಮಾಡಿಕೊಡುವಂತೆ ಸ್ಥಳೀಯರಿಂದ ಅಂಬೇಡ್ಕರ್ ರಕ್ಷಣೆ ವೇದಿಕೆಗೆ ಮನವಿ Read More »

ಮಂಗಳೂರು: ಕಾನ್ಸ್ ಟೇಬಲ್ ಗೆ ಡಿಕ್ಕಿ ಹೊಡೆದ ಕಾರು ಪರಾರಿ

ಸಮಗ್ರ ನ್ಯೂಸ್: ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಮಂಗಳೂರು ದಕ್ಷಿಣ ಸಂಚಾರಿ ಕಾನ್ಸ್​ಟೇಬಲ್​ಗೆ ಅಪರಿಚಿತ ಕಾರು ಡಿಕ್ಕಿ ಹೊಡೆದು, ಅವರು ತಲೆಗೆ ಗಾಯಗೊಂಡಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಲಬೈಲ್ ರಸ್ತೆಯಲ್ಲಿ ಇಂದು ಸಂಜೆ ಸಂಭವಿಸಿದೆ. ಶಿವಮೊಗ್ಗ ನಿವಾಸಿ ಲೋಕೇಶ್ (35) ಗಾಯಾಳು ಕಾನ್ಸ್​ಟೇಬಲ್. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಹೈವೇ ಪ್ಯಾಟ್ರಲ್ ವಾಹನದಲ್ಲಿ ಚಾಲಕನಾಗಿದ್ದ ಇವರು ಉಳ್ಳಾಲಬೈಲ್ ಬಳಿ ತಪಾಸಣೆಗೈಯ್ಯುತ್ತಿದ್ದ ವೇಳೆ ಘಟನೆ ನಡೆದಿದೆ. ತೊಕ್ಕೊಟ್ಟು ಕಡೆಯಿಂದ ಉಳ್ಳಾಲ ಕಡೆಗೆ ಬರುತ್ತಿದ್ದ ಬಿಳಿ ಬಣ್ಣದ ಸ್ವಿಫ್ಟ್

ಮಂಗಳೂರು: ಕಾನ್ಸ್ ಟೇಬಲ್ ಗೆ ಡಿಕ್ಕಿ ಹೊಡೆದ ಕಾರು ಪರಾರಿ Read More »

‘ಕಾಂತಾರ’ ಸಿನಿಮಾ ವೀಕ್ಷಣೆ ವೇಳೆ ಪ್ರೇಕ್ಷಕನ ಮೈಮೇಲೆ ದೈವ| ಮಂಗಳೂರಿನಲ್ಲಿ ನಡೆಯಿತು ವಿಸ್ಮಯ

ಸಮಗ್ರ ನ್ಯೂಸ್: ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ‘ಕಾಂತಾರ’ ಸಪ್ಟೆಂಬರ್‌ 30 ರಂದು ತೆರೆ ಕಂಡಿದ್ದು, ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಹುತೇಕ ಸಿನಿಪ್ರಿಯರು ಪ್ರೀಮಿಯರ್‌ ಶೋ ಹಾಗೂ ಫಸ್ಟ್‌ ಡೇ ಶೋಗಳನ್ನೇ ನೋಡಿದ್ದು, ಚಿತ್ರ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ವಿಶ್ವದಾದ್ಯಂತ ತೆರೆ ಕಂಡಿರುವ ‘ಕಾಂತಾರಾ’ ಚಿತ್ರಕ್ಕೆ ಮನಸೋಲದವರೆ ಇಲ್ಲ. ಕರಾವಳಿಯ ಭಾಗಗಳಿಗೆ ಮೀಸಲಾಗಿದ್ದ ಕಂಬಳ ಮತ್ತು ಭೂತ ಕೋಲದ ಸಾಂಪ್ರದಾಯಿಕ ಸಂಸ್ಕೃತಿ ‘ಕಾಂತಾರ’ ಮೂಲಕ ದೇಶದ ಮೂಲೆ ಮೂಲೆಯಲ್ಲೂ ಮಾರ್ಧನಿಸುತ್ತಿದ್ದು, ಕೇವಲ ಸ್ಯಾಂಡಲ್‌ವುಡ್‌ ಮಾತ್ರವಲ್ಲ

‘ಕಾಂತಾರ’ ಸಿನಿಮಾ ವೀಕ್ಷಣೆ ವೇಳೆ ಪ್ರೇಕ್ಷಕನ ಮೈಮೇಲೆ ದೈವ| ಮಂಗಳೂರಿನಲ್ಲಿ ನಡೆಯಿತು ವಿಸ್ಮಯ Read More »

ಎಚ್ ಭೀಮರಾವ್ ವಾಷ್ಠರ್ ರವರು ಅಮರ ಜ್ಞಾನ ಪಂಡಿತಶ್ರೀ ರಾಜ್ಯ ಪ್ರಶಸ್ತಿಗೆ ಆಯ್ಕೆ

ಸಮಗ್ರ ನ್ಯೂಸ್: ಸುಳ್ಯದ ಖ್ಯಾತ ಜ್ಯೋತಿಷಿ , ಸಾಹಿತಿ , ಚಿತ್ರನಿರ್ದೇಶಕ , ಗಾಯಕ , ಚಿತ್ರನಟ , ಸಂಘಟಕರಾದ ಎಚ್ .ಭೀಮರಾವ್ ವಾಷ್ಠರ್ ಕೋಡಿಹಾಳರವರು ಅಮರ ಜ್ಞಾನ ಪಂಡಿತಶ್ರೀ ರಾಜ್ಯಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಅ.6ರಂದು ರಾಯಚೂರು ಜಿಲ್ಲೆಯ ನಾಗರಹಾಳ ಹಜರತ್ ದಾವಲಮಲಿಕ್ ಉರುಸ್ ಜಾತ್ರೆಯ ಪ್ರಯುಕ್ತ ನಡೆಯುವ ಸರ್ವಧರ್ಮ ಭಾವೈಕ್ಯ ಮಹಾ ಸಮ್ಮೇಳನದಲ್ಲಿ ಶಾಸಕರ , ಶಿವಶರಣರ , ಮಠಾಧಿಪತಿಗಳ ಗಣ್ಯ ಸಮಕ್ಷಮದಲ್ಲಿ ಭೀಮರಾವ್ ವಾಷ್ಠರ್ ಅವರಿಗೆ ರಾಜ್ಯಪ್ರಶಸ್ತಿ ನೀಡಿ ಗೌರವಿಸಲಾಗುವದು. ಎಂದು ಸರ್ವಧರ್ಮ ಭಾವೈಕ್ಯ

ಎಚ್ ಭೀಮರಾವ್ ವಾಷ್ಠರ್ ರವರು ಅಮರ ಜ್ಞಾನ ಪಂಡಿತಶ್ರೀ ರಾಜ್ಯ ಪ್ರಶಸ್ತಿಗೆ ಆಯ್ಕೆ Read More »

ಸುಳ್ಯ: ಅಂಬೇಡ್ಕರ್ ಧ್ವಜ ತೆರವುಗೊಳಿಸಿದ ಪಿಡಿಒ/ಸರಿಗೊಳಿಸದಿದ್ದಲ್ಲಿ ಅಂಬೇಡ್ಕರ್ ರಕ್ಷಣೆ ವೇದಿಕೆಯಿಂದ ಪ್ರತಿಭಟನೆ ಎಚ್ಚರಿಕೆ

ಸಮಗ್ರ ನ್ಯೂಸ್: ಅಂಬೇಡ್ಕರ್ ಸಮುದಾಯ ಭವನದಲ್ಲಿ ಅಂಬೇಡ್ಕರ್ ಧ್ವಜವನ್ನು ಪಿಡಿಒ ತೆರವುಗೊಳಿಸಿದ್ದು ಹಾಗಾಗಿ ಇದನ್ನು ತಕ್ಷಣ ಸರಿಗೊಳಿಸದಿದ್ದಲ್ಲಿ ಅಂಬೇಡ್ಕರ್ ರಕ್ಷಣೆ ವೇದಿಕೆಯಿಂದ ಪ್ರತಿಭಟನೆ ಎಚ್ಚರಿಕೆ ನೀಡಲಾಗಿದೆ. ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಲಾದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಇತ್ತೀಚಿಗೆ ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯವರು ಕಾರ್ಯಕ್ರಮಯೊಂದರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಧ್ವಜವನ್ನು ಆ ಸಮುದಾಯ ಕಟ್ಟಡದಲ್ಲಿ ಅಳವಡಿಸಿದ್ದರು. ಹೀಗೆ ಅಳವಡಿಸಿದಂತ ಧ್ವಜವನ್ನು ಏಕಾಏಕಿ ಅಜ್ಜಾವಾರ ಗ್ರಾಮ ಪಂಚಾಯತ್ ನ ಪಿಡಿಒ ತೆರವುಗೊಳಿಸಿದರೆ ಎಂದು ಆರೋಪ

ಸುಳ್ಯ: ಅಂಬೇಡ್ಕರ್ ಧ್ವಜ ತೆರವುಗೊಳಿಸಿದ ಪಿಡಿಒ/ಸರಿಗೊಳಿಸದಿದ್ದಲ್ಲಿ ಅಂಬೇಡ್ಕರ್ ರಕ್ಷಣೆ ವೇದಿಕೆಯಿಂದ ಪ್ರತಿಭಟನೆ ಎಚ್ಚರಿಕೆ Read More »

ದ.ಕ ಜಿಲ್ಲೆಯಲ್ಲಿ ಪಿಎಫ್ಐನಿಂದ ಉಗ್ರ ತರಬೇತಿ| ಮಾಹಿತಿ ಬಿಚ್ಚಿಟ್ಟ ಎನ್ಐಎ ಅಧಿಕಾರಿಗಳು

ಸಮಗ್ರ ನ್ಯೂಸ್: ಪಿಎಫ್‌ಐ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು ಇದೀಗ ಸ್ಪೋಟಕ ಮಾಹಿತಿಯೊಂದನ್ನು ಕಲೆ ಹಾಕಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧೆಡೆ ಮುಸ್ಲಿಂ ಯುವಕರಿಗೆ ಪಿಎಫ್‌ಐನಿಂದ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ. ಇಡೀ ರಾಜ್ಯವೇ ಬೆಚ್ಚಿ ಬೀಳಿಸುವ ಸುದ್ದಿ ಇದ್ದಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕಿನ ‌ವಿವಿಧ ಕಡೆಗಳಲ್ಲಿ ಪಿಎಫ್‌ಐ ಟೆರರ್ ಟ್ರೈನಿಂಗ್ ನೀಡಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಪುತ್ತೂರು ಸಮೀಪದ ಮಿತ್ತೂರಿನಲ್ಲಿರುವ ಪ್ರೀಡಂ ಕಮ್ಯೂನಿಟಿ ಹಾಲ್ ನಲ್ಲಿ

ದ.ಕ ಜಿಲ್ಲೆಯಲ್ಲಿ ಪಿಎಫ್ಐನಿಂದ ಉಗ್ರ ತರಬೇತಿ| ಮಾಹಿತಿ ಬಿಚ್ಚಿಟ್ಟ ಎನ್ಐಎ ಅಧಿಕಾರಿಗಳು Read More »

ಪ್ರವೀಣ್ ನೆಟ್ಟಾರು‌ ಪತ್ನಿಗೆ ಸಿಎಂ ಕಚೇರಿಯಲ್ಲಿ ನೇಮಕಾತಿ ಮಾಡಿ ಸರ್ಕಾರ ಆದೇಶ

ಸಮಗ್ರ ನ್ಯೂಸ್: ಇತ್ತೀಚೆಗೆ ಕೊಲೆಯಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ಸಿಎಂ ಸಚಿವಾಲಯದಲ್ಲಿ ನೇಮಕಾತಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರವೀಣ್ ಅವರ ಪತ್ನಿ ನೂತನ ಕುಮಾರಿ ಎಂ. ಅವರಿಗೆ ಸಿ ಗ್ರೂಪ್ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಿಸಿ ರಾಜ್ಯ ಸರ್ಕಾರದಿಂದ ಆದೇಶ ಮಾಡಲಾಗಿದೆ ಎಂದು ತಿಳಿದು ಬಂದಿದೆ. ದೊಡ್ಡಬಳ್ಳಾಪುರದಲ್ಲಿ ನಡೆದಿದ್ದ ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ಸರಕಾರಿ ಉದ್ಯೋಗ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ

ಪ್ರವೀಣ್ ನೆಟ್ಟಾರು‌ ಪತ್ನಿಗೆ ಸಿಎಂ ಕಚೇರಿಯಲ್ಲಿ ನೇಮಕಾತಿ ಮಾಡಿ ಸರ್ಕಾರ ಆದೇಶ Read More »

ಸುಳ್ಯ: ಕುರುಂಜಿಗುಡ್ಡೆ ಪಾರ್ಕ್ ನಲ್ಲಿ ಅವ್ಯವಸ್ಥೆ; ಪೊಲೀಸರಿಂದ ಗಸ್ತು

ಸಮಗ್ರ ನ್ಯೂಸ್: ಸುಳ್ಯ ನ.ಪಂ ವ್ಯಾಪ್ತಿಯ ಕುರುಂಜಿಗುಡ್ಡೆ ಪಾರ್ಕ್ ನಲ್ಲಿ ಅವ್ಯವಸ್ಥೆ ಕುರಿತು ‘ಸಮಗ್ರ ಸಮಾಚಾರ.ಕಾಂ’ ವರದಿ ಬೆನ್ನಲ್ಲೇ ಸುಳ್ಯ ಪೊಲೀಸರು ಗಸ್ತು ತಿರುಗಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಪಾರ್ಕ್ ನಲ್ಲಿ ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಮಗ್ರ ಸಮಾಚಾರವು ಸಾಕ್ಷಾತ್‌ವರದಿ ಮಾಡಿತ್ತು. ಸುದ್ದಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸ್ ಇಲಾಖೆ ಪಾರ್ಕ್ ಗೆ ಭೇಟಿ ನೀಡಿದೆ.

ಸುಳ್ಯ: ಕುರುಂಜಿಗುಡ್ಡೆ ಪಾರ್ಕ್ ನಲ್ಲಿ ಅವ್ಯವಸ್ಥೆ; ಪೊಲೀಸರಿಂದ ಗಸ್ತು Read More »