ಕರಾವಳಿ

ಪುತ್ತೂರು: ಮುತ್ತಪ್ಪ ರೈ ಸಹೋದರನ ವಿರುದ್ದ ಸ್ಪೋಟಕ ದಾಸ್ತಾನು ಪ್ರಕರಣ ದಾಖಲು

ಸಮಗ್ರನ್ಯೂಸ್: ಪುತ್ತೂರಿನ ಪಟಾಕಿ ಗೊಡೌನ್ ಗೆ ನಲ್ಲಿ ಪಟಾಕಿ ಸ್ಫೋಟಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲಕ ಪುತ್ತೂರು ಅಶ್ವಿನಿ ಬಾರ್ & ರೆಸ್ಟೋರೆಂಟ್ ಪಾಲುದಾರ ಕರುಣಾಕರ ರೈ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪೊಲೀಸರು ಸೆಕ್ಷನ್ 9B ಅಡಿ ಸೊಮೋಟೋ ಪ್ರಕರಣ ದಾಖಲಿಸಿದ್ದಾರೆ. ಸೆಕ್ಷನ್ 9ಬಿ ಅಡಿ ಕರುಣಾಕರ್ ರೈ ವಿರುದ್ಧ ಸ್ಫೋಟಕ ದಾಸ್ತಾನು ಗಂಭೀರ ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ಪೊಲೀಸರು ತನಿಖೆ ಕೈಗೆತ್ತಿಕೊಳ್ಳಲಿದ್ದಾರೆ. ಪುತ್ತೂರು ದರ್ಬೆಯ ಅಶ್ವಿನಿ ಹೊಟೆಲ್ ಮಾಲಕರಾದ ಕರುಣಾಕರ ರೈ ಮಾಲಿಕತ್ವದ ದರ್ಬೆಯ ಆರಾಧ್ಯ

ಪುತ್ತೂರು: ಮುತ್ತಪ್ಪ ರೈ ಸಹೋದರನ ವಿರುದ್ದ ಸ್ಪೋಟಕ ದಾಸ್ತಾನು ಪ್ರಕರಣ ದಾಖಲು Read More »

ಪುತ್ತೂರು: ‘ರೈಟ್ ಪೋಯಿ’ ಎಂದ ವಿದ್ಯಾರ್ಥಿ|ನಿರ್ವಾಹಕನನ್ನು ಬಿಟ್ಟು ಬಸ್ ಚಲಾಯಿಸಿಕೊಂಡು ಹೋದ ಚಾಲಕ

ಸಮಗ್ರ ನ್ಯೂಸ್: ನಿರ್ವಾಹಕನನ್ನು ನಿಲ್ದಾಣದಲ್ಲಿಯೇ ಬಿಟ್ಟು ಚಾಲಕ ಬಸ್ ಚಲಾಯಿಸಿಕೊಂಡು ಹೋದ ಘಟನೆ ಪುತ್ತೂರಿನಲ್ಲಿ ನ.3ರಂದು ನಡೆದಿದೆ. ಪುತ್ತೂರುನಿಂದ ಮಂಗಳೂರಿಗೆ ಹೋಗುವ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಚಾಲಕ ನಿರ್ವಾಹಕನನ್ನು ಪುತ್ತೂರು ಬಸ್ ನಿಲ್ದಾಣದಲ್ಲಿ ಬಿಟ್ಟು ಬಂದಿದ್ದರು. ನಿಲ್ದಾಣದಿಂದ ಬಸ್ ಹೊರಡುವ ವೇಳೆ ವಿದ್ಯಾರ್ಥಿಯೋರ್ವ ‘ರೈಟ್ ಪೋಯಿ’ ಎಂದು ಹೇಳಿದ್ದ.‌ ನಿರ್ವಾಹಕನೇ ‘ರೈಟ್ ಪೋಯಿ’ ಎಂದು ಹೇಳಿದ್ದಾಗಿ ಭಾವಿಸಿದ ಚಾಲಕ ಬಸ್ ಚಲಾಯಿಸಿದ್ದಾರೆ. ಪುತ್ತೂರು ನಿಲ್ದಾಣದಿಂದ ಹೊರಟ ಬಸ್ ಎಂ.ಟಿ.ರಸ್ತೆಯಾಗಿ ತಾಲೂಕು ಕಛೇರಿ ರಸ್ತೆ ದಾಟಿ ಮುಖ್ಯ ರಸ್ತೆಗೆ ಪ್ರವೇಶಿಸುತ್ತಿದ್ದಂತೆಯೇ

ಪುತ್ತೂರು: ‘ರೈಟ್ ಪೋಯಿ’ ಎಂದ ವಿದ್ಯಾರ್ಥಿ|ನಿರ್ವಾಹಕನನ್ನು ಬಿಟ್ಟು ಬಸ್ ಚಲಾಯಿಸಿಕೊಂಡು ಹೋದ ಚಾಲಕ Read More »

ಕಿನ್ನಿಗೋಳಿ: ಅತಿವೇಗದ ಕಾರ್ ಡಿಕ್ಕಿ, ಮಹಿಳೆ ಗಂಭೀರ

ಸಮಗ್ರ ನ್ಯೂಸ್: ಪಾದಚಾರಿ ಮಹಿಳೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಿಸಿದ ಕಾರ್ ಡಿಕ್ಕಿ ಹೊಡೆದ ಪರಿಣಾಮ ಆಕೆ ಗಂಭೀರ ಗಾಯಗೊಂಡ ಘಟನೆ ಕಿನ್ನಿಗೋಳಿಯ ಮುಖ್ಯರಸ್ತೆಯಲ್ಲಿ ಸಂಭವಿಸಿದೆ. ಗಾಯಾಳುವನ್ನು ಕೆಮ್ರಾಲ್ ಮನೋಲಿ ಬಲ್ಲೆ ನಿವಾಸಿ ಜಯಂತಿ ಶೆಟ್ಟಿ ಎಂದು ಗುರುತಿಸಲಾಗಿದೆ. ಜಯಂತಿ ಅವರು ಕಿನ್ನಿಗೋಳಿ ಚರ್ಚ್ ಕಡೆಯಿಂದ ತರಕಾರಿ ಹಿಡಿದುಕೊಂಡು ನಡೆದುಕೊಂಡು ಬರುತ್ತಿದ್ದ ಸಂದರ್ಭ ಕಿನ್ನಿಗೋಳಿ ಕಡೆಯಿಂದ ಮೂರುಕಾವೇರಿ ಕಡೆಗೆ ಸಂಚರಿಸುತ್ತಿದ್ದ ಬ್ರೀಜಾ ಕಾರು ಡಿಕ್ಕಿ ಹೊಡೆದಿದೆ, ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆ ದೂರಕ್ಕೆ ಹಾರಿದ್ದು ಗಂಭೀರ ಗಾಯಗೊಂಡಿದ್ದಾರೆ.

ಕಿನ್ನಿಗೋಳಿ: ಅತಿವೇಗದ ಕಾರ್ ಡಿಕ್ಕಿ, ಮಹಿಳೆ ಗಂಭೀರ Read More »

ಸುಳ್ಯ ಕೆ.ವಿ.ಜಿ.ಆಸ್ಪತ್ರೆಗೆ ಸೇರಿದ ‌ಆಂಬ್ಯುಲೆನ್ಸ್ ಗೆ ಲಾರಿ ಡಿಕ್ಕಿ

ಸಮಗ್ರ ನ್ಯೂಸ್: ಟಿಪ್ಪರ್ ಲಾರಿಯೊಂದು ಅಂಬ್ಯುಲೆನ್ಸ್ ವಾಹನಕ್ಕೆ ಡಿಕ್ಕಿಯಾದ ಘಟನೆ ಮೆಲ್ಕಾರ್ ಸಮೀಪದ ನರಹರಿ ಎಂಬಲ್ಲಿ ನ.2ರ ರಾತ್ರಿ ವೇಳೆ ಸಂಭವಿಸಿದೆ. ಸುಳ್ಯ ಕೆ.ವಿ.ಜಿ.ಆಸ್ಪತ್ರೆಗೆ ಸೇರಿದ ‌ಆಂಬ್ಯುಲೆನ್ಸ್ ಇದಾಗಿದ್ದು, ರೋಗಿಯೋರ್ವರನ್ನು ಕೆ.ವಿ.ಜಿ.ಆಸ್ಪತ್ರೆಯಿಂದ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಈ‌ ಘಟನೆ ನಡೆದಿದೆ. ದಿವ್ಯ ರೂಪ ಗುತ್ತಿಗೆ ಸಂಸ್ಥೆಗೆ ಸೇರಿದ ಲಾರಿ‌ ಇದಾಗಿದ್ದು, ಅಪಘಾತದಲ್ಲಿ ಚಾಲಕ ಸಹಿತ ರೋಗಿಗೆ ಯಾವುದೇ ಅಪಾಯವಾಗಿಲ್ಲ.

ಸುಳ್ಯ ಕೆ.ವಿ.ಜಿ.ಆಸ್ಪತ್ರೆಗೆ ಸೇರಿದ ‌ಆಂಬ್ಯುಲೆನ್ಸ್ ಗೆ ಲಾರಿ ಡಿಕ್ಕಿ Read More »

ಭೀಮರಾವ್ ವಾಷ್ಠರ್ ಅವರಿಗೆ ಹಿರಿಯ ಜೇಸಿಗಳ ಸಂಘದಿಂದ ಸನ್ಮಾನ

ಸಮಗ್ರ ನ್ಯೂಸ್: ಸುಳ್ಯದ ಪಯಸ್ವಿನಿ ಹಿರಿಯ ಜೇಸಿಗಳ ಸಂಘದ ವತಿಯಿಂದ ಸುಳ್ಯದ ಸಾಹಿತಿ , ಜ್ಯೋತಿಷಿ ಮತ್ತು ಚಿತ್ರ ನಿರ್ದೇಶಕರಾದ ಹಿರಿಯ ಜೇಸಿ ಎಚ್ .ಭೀಮರಾವ್ ವಾಷ್ಠರ್ ಅವರಿಗೆ ನ.1 ರಂದು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆದ ಪಯಸ್ವಿನಿ ಹಿರಿಯ ಜೇಸಿಗಳ ಮಾಸಿಕ ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಾಹಿತ್ಯದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಹಿರಿಯ ಜೇಸಿಗಳ ಸಂಘದ ಅಧ್ಯಕ್ಷರಾದ ಜೇಸಿ ಪಿ ಎಸ್ ಗಂಗಾಧರ್ ಮತ್ತು ಜೇಸಿ ಎಂ ಬಿ ಸದಾಶಿವ ರವರು

ಭೀಮರಾವ್ ವಾಷ್ಠರ್ ಅವರಿಗೆ ಹಿರಿಯ ಜೇಸಿಗಳ ಸಂಘದಿಂದ ಸನ್ಮಾನ Read More »

“ಸುರತ್ಕಲ್ ಟೋಲ್ ವಿರೋಧಿ ಹೋರಾಟ ಇನ್ನಷ್ಟು ತೀವ್ರ” -ಇನಾಯತ್ ಅಲಿ

ಸುರತ್ಕಲ್: “ಸರಕಾರ ಜನರನ್ನು ಲೂಟಿ ಮಾಡಲು ನಿರ್ಮಾಣ ಮಾಡಿರುವ ಇಲ್ಲಿನ ಟೋಲ್ ಗೇಟ್ ತೆರವುಗೊಳ್ಳುವವರೆಗೆ ರಾತ್ರಿ ಹಗಲು ಧರಣಿ ಕೂರಬೇಕಾದ ಅನಿವಾರ್ಯತೆಯಿದೆ. ಟೋಲ್ ವಿರೋಧಿ ಸಮಿತಿ ಕೈಗೊಂಡಿರುವ ಹೋರಾಟಕ್ಕೆ ನನ್ನ ಪೂರ್ಣ ಬೆಂಬಲವಿದ್ದು ಮುಂದಿನ ದಿನಗಳಲ್ಲಿ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ” ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹೇಳಿದರು. ಅವರು ಟೋಲ್ ವಿರೋಧಿ ಹೋರಾಟ ಸಮಿತಿ ಕೈಗೊಂಡಿರುವ ಅಹೋರಾತ್ರಿ ಧರಣಿಯ ಆರನೇ ದಿನವಾದ ಇಂದು ಧರಣಿ ಸ್ಥಳದಲ್ಲಿ ಮಾತಾಡಿದರು.ಕೇರಳದ ಕೆಪಿಸಿಸಿ ಮುಖಂಡ ರೋಸಿ ಜಾನ್,

“ಸುರತ್ಕಲ್ ಟೋಲ್ ವಿರೋಧಿ ಹೋರಾಟ ಇನ್ನಷ್ಟು ತೀವ್ರ” -ಇನಾಯತ್ ಅಲಿ Read More »

ದ. ಕ‌ ಜಿಲ್ಲಾಧಿಕಾರಿಯಾಗಿ ರವಿಕುಮಾರ್ ಎಂ.ಆರ್ ನೇಮಕ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಐಎಎಸ್ ಅಧಿಕಾರಿ ರವಿಕುಮಾರ್ ಎಂ ಆರ್ ನೇಮಕಗೊಂಡಿದ್ದಾರೆ. ರವಿಕುಮಾರ್ ಅವರು 2012 ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಎಎಸ್ ಆಗಿದ್ದಾರೆ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಡಾ. ರಾಜೇಂದ್ರ ಕೆ.ವಿ ವರ್ಗಾಣೆಯ ಬಳಿಕ ಡಾ. ಕುಮಾರ್ ಅವರಿಗೆ ಪ್ರಭಾರ ಜಿಲ್ಲಾಧಿಕಾರಿಯಾಗಿ ಜವಾಬ್ದಾರಿ ನೀಡಲಾಗಿತ್ತು. ಇದೀಗ ಆ ಜವಾಬ್ದಾರಿಯನ್ನು ರವಿಕುಮಾರ್ ಎಂ ಆರ್ ಅವರಿಗೆ ಹಸ್ತಾಂತರಿಸಿ ಸರಕಾರ ಆದೇಶ ಹೊರಡಿಸಿದೆ.

ದ. ಕ‌ ಜಿಲ್ಲಾಧಿಕಾರಿಯಾಗಿ ರವಿಕುಮಾರ್ ಎಂ.ಆರ್ ನೇಮಕ Read More »

ಜಾಲತಾಣಗಳಲ್ಲಿ ತುಳುಭಾಷೆ, ದೈವಾರಾಧನೆಯ ಅಶ್ಲೀಲ ಪೋಸ್ಟ್| ವಿಕೃತರ ವಿರುದ್ದ ಕಾನೂನು ಹೋರಾಟಕ್ಕೆ ದೈವಾರಾಧನಾ ವೇದಿಕೆ ನಿರ್ಧಾರ

ಸಮಗ್ರ ನ್ಯೂಸ್: ಸಾಮಾಜಿಕ ಜಾಲತಾಣಗಳಲ್ಲಿ ತುಳು ಭಾಷೆ, ದೈವಾರಾಧನೆಯ ಕುರಿತು ಅಶ್ಲೀಲವಾಗಿ ಪೋಸ್ಟ್ ಮಾಡುವ ವ್ಯಕ್ತಿಗಳ ವಿರುದ್ಧ ತುಳುನಾಡು ದೈವಾರಾಧನೆ ಸಂರಕ್ಷಣಾ ಯುವ ವೇದಿಕೆ ಕಾನೂನು ಸಮರಕ್ಕೆ ಮುಂದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತುಳು ಭಾಷಿಗರನ್ನು, ದೈವಾರಾಧನೆ, ತುಳು ಕಲಾವಿದರ ಕುರಿತು ಅಶ್ಲೀಲ ಪದ ಬಳಕೆ ಮಾಡಿರುವ ಕನ್ನಡಿಗ ಶಿವರಾಜ್ ಎಂಬವರ ಮೇಲೆ ಕಾನೂನು ಕ್ರಮ ಜರಗಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ಮನವಿ ಸಲ್ಲಿಸಿರುವ ಸಂಘಟನೆಯ ಪ್ರಮುಖರಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಶಾಸಕ ಕಾಮತ್ ತಕ್ಷಣವೇ ಪ್ರಕರಣ ದಾಖಲಿಸುವಂತೆ

ಜಾಲತಾಣಗಳಲ್ಲಿ ತುಳುಭಾಷೆ, ದೈವಾರಾಧನೆಯ ಅಶ್ಲೀಲ ಪೋಸ್ಟ್| ವಿಕೃತರ ವಿರುದ್ದ ಕಾನೂನು ಹೋರಾಟಕ್ಕೆ ದೈವಾರಾಧನಾ ವೇದಿಕೆ ನಿರ್ಧಾರ Read More »

ಸುಳ್ಯ:ಹರಕೆ ಹೇಳಿ ದಿನದೊಳಗೆ ನಾಪತ್ತೆಯಾದ ಬಾಲಕಿ ಪತ್ತೆ| ಮತ್ತೊಂದು ಪವಾಡಕ್ಕೆ ಸಾಕ್ಷಿಯಾದ ಕೊರಗಜ್ಜ

ಸಮಗ್ರ ನ್ಯೂಸ್: ನಾಪತ್ತೆಯಾದ ಬಾಲಕಿಯ ಪತ್ತೆಗಾಗಿ ಕೊರಗಜ್ಜನಿಗೆ ಹರಕೆ ಹೇಳಿ ದಿನ ಕಳೆಯುವುದರ ಒಳಗೆ ಬಾಲಕಿ ಪತ್ತೆಯಾದ ಘಟನೆ ದ.ಕ‌ ಜಿಲ್ಲೆಯ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಉಜಿರಡ್ಕ ಕೊರಗಜ್ಜ‌ ಸಾನಿಧ್ಯದಲ್ಲಿ ನಡೆದಿದೆ. ಅ.17ರಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ಜಗನ್ನಾಥ್ ಹಾಗೂ ರೇಖಾ ದಂಪತಿಯ ಪುತ್ರಿ ಭಾರ್ಗವಿ ನಾಪತ್ತೆಯಾಗಿದ್ದಳು. ಈ ವಿಚಾರ ಅವರ ಸಂಬಂಧಿಕರಾದ ಕುಕ್ಕೆ ಸುಬ್ರಹ್ಮಣ್ಯದ ನಿತಿನ್ ಭಟ್ ರವರಿಗೆ ತಿಳಿದು ಅವರು‌ ಅ.19ರಂದು ಉಜಿರಡ್ಕದ ಕೊರಗಜ್ಜನ ಸಾನಿಧ್ಯದಲ್ಲಿ ಪ್ರಾರ್ಥಿಸಿದ್ದರು. ಈ ವೇಳೆ ಅಲ್ಲಿನ

ಸುಳ್ಯ:ಹರಕೆ ಹೇಳಿ ದಿನದೊಳಗೆ ನಾಪತ್ತೆಯಾದ ಬಾಲಕಿ ಪತ್ತೆ| ಮತ್ತೊಂದು ಪವಾಡಕ್ಕೆ ಸಾಕ್ಷಿಯಾದ ಕೊರಗಜ್ಜ Read More »

ಮಂಗಳೂರು: ಅಕ್ರಮ ಕಸಾಯಿಖಾನೆ ವಶಕ್ಕೆ ಪಡೆದ ಅಧಿಕಾರಿಗಳು|

ಸಮಗ್ರ ನ್ಯೂಸ್: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹೊಸ ಕಾನೂನಿನ ಅಡಿಯಲ್ಲಿ ಅಕ್ರಮ ಕಸಾಯಿಖಾನೆಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ-2020 ರ ಅಡಿಯಲ್ಲಿ ಈ ಅಕ್ರಮ ಕಸಾಯಿಖಾನೆ ಇದ್ದ ಮೂರು ಪ್ರದೇಶಗಳನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ವರ್ಷ ಕಾಯ್ದೆ ಜಾರಿಗೆ ಬಂದ ನಂತರ ಇದೇ ಮೊದಲ ಬಾರಿಗೆ ಇಂತಹ ಕ್ರಮ ಜರುಗಿಸಲಾಗಿದೆ. ಕಾಟಿಪಳ್ಳದಲ್ಲಿ ಅಕ್ರಮ ಕಸಾಯಿಖಾನೆಗಳನ್ನು ಹಕೀಮ್ ಹಾಗೂ ಮೊಹಮ್ಮದ್ ಪರ್ವೇಜ್ ನಡೆಸುತ್ತಿದ್ದರು ಹಾಗೂ ಗಂಜಿಮಠದಲ್ಲಿ ಮನೆಯೊಂದಕ್ಕೆ ಹೊಂದಿಕೊಂಡಂತೆ ಇದ್ದ ಪ್ರದೇಶದಲ್ಲಿ

ಮಂಗಳೂರು: ಅಕ್ರಮ ಕಸಾಯಿಖಾನೆ ವಶಕ್ಕೆ ಪಡೆದ ಅಧಿಕಾರಿಗಳು| Read More »