ಕರಾವಳಿ

ಹವಾಮಾನ ಸಮಾಚಾರ| ಕರಾವಳಿ ಸೇರಿದಂತೆ ಈ ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಕರ್ನಾಟಕದ ಆರು ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ರಾಮನಗರ, ವಿಜಯನಗರದಲ್ಲಿ ಕೂಡ ಸಾಧಾರಣ ಮಳೆಯಾಗಲಿದೆ. […]

ಹವಾಮಾನ ಸಮಾಚಾರ| ಕರಾವಳಿ ಸೇರಿದಂತೆ ಈ ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆ ಮುನ್ಸೂಚನೆ Read More »

ಸತ್ಯಜಿತ್‌ ಸುರತ್ಕಲ್ ಗೆ ಮಾತೃವಿಯೋಗ

ಸಮಗ್ರ ನ್ಯೂಸ್: ಹಿಂದೂ ಸಂಘಟನೆ ಮುಖಂಡ ಸತ್ಯಜಿತ್ ಸುರತ್ಕಲ್ ಇವರ ತಾಯಿ ಭಾರತಿ ವಾಸುದೇವ ನಿಧನರಾಗಿದ್ದಾರೆ. ಇವರು ನ.12ರ ಬೆಳಿಗ್ಗೆ ಮೃತ ಹೊಂದಿದ್ದಾರೆ. ಮೃತರು ಪತ್ನಿ ವಾಸುದೇವ, ಪುತ್ರ ಸತ್ಯಜಿತ್ ಸುರತ್ಕಲ್ ಹಾಗೂ ಸಹೋದರ ಸಹೋದರಿಯನ್ನು ಅಗಲಿದ್ದಾರೆ.

ಸತ್ಯಜಿತ್‌ ಸುರತ್ಕಲ್ ಗೆ ಮಾತೃವಿಯೋಗ Read More »

ಪಕ್ಷಿಕೆರೆ ಕೊಲೆ ಪ್ರಕರಣ| ಕಾರ್ತಿಕ್ ಭಟ್ ತಾಯಿ, ಸಹೋದರಿ ಅರೆಸ್ಟ್| ಠಾಣೆಯಲ್ಲಿ ನಡೆಯಿತು ಮೆಗಾ ಹೈಡ್ರಾಮ!

ಸಮಗ್ರ ನ್ಯೂಸ್: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಕ್ಷಿಕೆರೆಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರ್ತಿಕ್ ಭಟ್ ತಾಯಿ ಹಾಗೂ ಅಕ್ಕನನ್ನು ಪೊಲೀಸರು ಬಂದಿಸಿದ್ದಾರೆ. ಶ್ಯಾಮಲಾ ಭಟ್(61) ಹಾಗೂ ಸುರತ್ಕಲ್ ಬಾಳ ನಿವಾಸಿ ಕಣ್ಮಣಿ ರಾವ್(36) ಬಂಧಿತರು. ಇಬ್ಬರ ವಿರುದ್ಧ ಕಾರ್ತಿಕ್ ಭಟ್ ಪತ್ನಿಯ ತಾಯಿ ಸಾವಿತ್ರಿ ನೀಡಿದ ದೂರಿನಂತೆ 308 ಭಾರತೀಯ ನ್ಯಾಯ ಸಂಹಿತೆ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ಮುಲ್ಕಿ ಪೊಲೀಸರು ಬಂಧಿಸಿ ಮೂಡಬಿದ್ರೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಳೆದ ದಿನದ ಹಿಂದೆ ಪೊಲೀಸ್

ಪಕ್ಷಿಕೆರೆ ಕೊಲೆ ಪ್ರಕರಣ| ಕಾರ್ತಿಕ್ ಭಟ್ ತಾಯಿ, ಸಹೋದರಿ ಅರೆಸ್ಟ್| ಠಾಣೆಯಲ್ಲಿ ನಡೆಯಿತು ಮೆಗಾ ಹೈಡ್ರಾಮ! Read More »

ರಾತ್ರಿ ವೇಳೆ ಪ್ರೇಯಸಿಯ ಮನೆಗೆ ಬಂದ ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ!

ಸಮಗ್ರ ನ್ಯೂಸ್ :ರಾತ್ರಿ ವೇಳೆ ಪ್ರೇಯಸಿಯ ಮನೆಗೆ ಬಂದ ಯುವಕನಿಗೆ ಅಮಾನುಷವಾಗಿ ಹಲ್ಲೆ ಮಾಡಿದ ಘಟನೆ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಸಜಿಪನಡು ಎಂಬಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು ಯುವಕನನ್ನು ಕಂಬಕ್ಕೆ ಕಟ್ಟಿ ಹಾಕಿ ಗುಂಪೊಂದು ಅಮಾನುಷವಾಗಿ ಹಲ್ಲೆ ಮಾಡಿದೆ.ಮಂಗಳೂರಿನ ಬೆಂಗರೆ ನಿವಾಸಿ ಮಹಮ್ಮದ್ ಮುಸ್ತಫಾ ಹಲ್ಲೆಗೊಳಗಾದ ಯುವಕನಾಗಿದ್ದು ಸಜಿಪನಡುವಿನ ಯುವತಿಯೊಂದಿಗೆ ಪ್ರೇಮದೊಂದಿಗಿದ್ದ ಎನ್ನಲಾಗಿದೆ. ರಾತ್ರಿ ವೇಳೆ ಯುವತಿಯನ್ನು ಭೇಟಿಯಾಗಲು ಹೋದ ಸಂದರ್ಭ ಮುಸ್ತಾಫಾನನ್ನು ಹಿಡಿದು ಅರೆ

ರಾತ್ರಿ ವೇಳೆ ಪ್ರೇಯಸಿಯ ಮನೆಗೆ ಬಂದ ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ! Read More »

ಮೂಲ್ಕಿ: ಪತ್ನಿ, ಮಗುವನ್ನು ಕೊಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಪತಿ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡದ ಮುಲ್ಕಿ ತಾಲೂಕಿನ ಪಕ್ಷಿಕೆರೆ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮಗನನ್ನು ಕೊಂದು ಬಳಿಕ ತಾನೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಪಕ್ಷಿಕೆರೆ ಗ್ರಾಮದಲ್ಲಿ ಕಾರ್ತಿಕ್ ಭಟ್ (32) ಪತ್ನಿ ಪ್ರಿಯಾಂಕ (28) ಪುತ್ರ ಹೃದಯ್ (4) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ವ್ಯಯಕ್ತಿಕ ಕಾರಣಕ್ಕೆ ಪತ್ನಿ ಮಗನನ್ನು ಕೊಂದು ಕಾರ್ತಿಕ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೊದಲು ಪತ್ನಿ ಪ್ರಿಯಾಂಕ ಹಾಗೂ ಹೃದಯ್

ಮೂಲ್ಕಿ: ಪತ್ನಿ, ಮಗುವನ್ನು ಕೊಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಪತಿ Read More »

ಮೀನು ಪ್ರಿಯರಿಗೆ ಗುಡ್ ನ್ಯೂಸ್|ಬಂಗುಡೆ ದರದಲ್ಲಿ ಭಾರೀ ಇಳಿಕೆ

ಸಮಗ್ರ ನ್ಯೂಸ್: ತಿಂಗಳ ಹಿಂದೆ ಕಿಲೋಗೆ 200-250 ರೂ. ದರವಿದ್ದ ಬಂಗುಡೆ ಮೀನು ಈಗ ಬಹಳಷ್ಟು ಅಗ್ಗ ವಾಗಿದ್ದು, 100-150 ರೂ.ಗಳಲ್ಲಿ ದೊರೆಯುತ್ತಿದೆ. ಕೆಲವು ದಿನಗಳ ಹಿಂದೆ ಮಂಗಳೂರಿನ ಕೇಂದ್ರ ಮೀನು ಮಾರುಕಟ್ಟೆಯಲ್ಲಿ 80 ರೂ.ಗೆ ಮಾರಾಟ ಆಗಿರುವುದೂ ಇದೆ! ವಿದೇಶಗಳಲ್ಲಿ ಬಂಗುಡೆ ಮೀನಿಗೆ ಬೇಡಿಕೆ ಕಡಿಮೆಯಾಗಿ ಸ್ಥಳೀಯ ಮಾರುಕಟ್ಟೆಗೆ ಹೆಚ್ಚು ಪ್ರಮಾಣದಲ್ಲಿ ಪೂರೈಕೆ ಆಗುತ್ತಿರುವುದು ಇದಕ್ಕೆ ಮುಖ್ಯ ಕಾರಣ. ಪ್ರಸ್ತುತ ವಿದೇಶಿ ಮಾರುಕಟ್ಟೆಯಲ್ಲಿ ಇತರ ತಳಿಯ ಮೀನಿಗೆ ಬೇಡಿಕೆ ಹೆಚ್ಚಿದ್ದು, ಬಂಗುಡೆಗೆ ಕೆಲವು ಸಮಯದಿಂದ ಬೇಡಿಕೆ

ಮೀನು ಪ್ರಿಯರಿಗೆ ಗುಡ್ ನ್ಯೂಸ್|ಬಂಗುಡೆ ದರದಲ್ಲಿ ಭಾರೀ ಇಳಿಕೆ Read More »

ನಾಪತ್ತೆಯಾಗಿದ್ದ ಮಹಿಳೆ 5 ವರ್ಷದ ಬಳಿಕ ಪತ್ತೆ, ಒಂದಾದ ತಾಯಿ-ಮಕ್ಕಳು

ಸಮಗ್ರ ನ್ಯೂಸ್: 5 ವರ್ಷಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಆಸ್ಮಾ ಎಂಬ ಮಹಿಳೆ ಮಂಗಳೂರಿನಲ್ಲಿ ನ.8 ರಂದು ಪತ್ತೆಯಾಗಿದ್ದಾರೆ. ಮಕ್ಕಳು ಸಂತಸಗೊಂಡಿದ್ದಾರೆ. ಮೂಲತಃ ಮುಂಬೈನ ಥಾಣೆಯ ಮಂಬ್ರಿಲ್‌ನ ನಿವಾಸಿ ಆಸ್ಮಾ ಅವರು ಕೆಲ ವರ್ಷಗಳ ಹಿಂದೆ ಪತಿಯೊಂದಿಗೆ ವಿದೇಶದಲ್ಲಿದ್ದರು. ಬಳಿಕ, ದಂಪತಿ ಮುಂಬೈನ ಥಾಣೆಯ ಮಂಬ್ರಿಲ್‌ನಲ್ಲಿ ವಾಸವಾಗಿದ್ದರು. ಕೆಲ ಸಮಯದ ಬಳಿಕ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದ ಆಸ್ಮಾ, 2019ರ ಮೇನಲ್ಲಿ ಮನೆಯಿಂದ ನಾಪತ್ತೆಯಾಗಿದ್ದರು. ಪತಿ ಮನೆಯಿಂದ ಮುಂಬೈನ ಬೈಕಲಾದಲ್ಲಿರುವ ತವರು ಮನೆಗೆ ರೈಲಿನಲ್ಲಿ ತೆರಳುತ್ತಿದ್ದಾಗ ಆಸ್ಮಾ ನಾಪತ್ತೆಯಾಗಿದ್ದರು.

ನಾಪತ್ತೆಯಾಗಿದ್ದ ಮಹಿಳೆ 5 ವರ್ಷದ ಬಳಿಕ ಪತ್ತೆ, ಒಂದಾದ ತಾಯಿ-ಮಕ್ಕಳು Read More »

ಬೆಂಗಳೂರು ಸೇರಿ ಜಿಲ್ಲೆಯಾದ್ಯಂತ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ

ಸಮಗ್ರ ನ್ಯೂಸ್: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯನಗರ, ಯಾದಗಿರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ. ಚಂಡಮಾರುತ ಪರಿಶೀಲನೆಯಿಂದ ಕರಾವಳಿ ರಾಜ್ಯಗಳಲ್ಲಿ ಮಳೆಯಾಗಲಿದೆ. ಎರಡು

ಬೆಂಗಳೂರು ಸೇರಿ ಜಿಲ್ಲೆಯಾದ್ಯಂತ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ Read More »

ಉಡುಪಿ: 22 ಮಂದಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರಕಟ

ಸಮಗ್ರ ನ್ಯೂಸ್: ಯಕ್ಷಗಾನ ಕಲಾರಂಗವು ಈ ಬಾರಿ ತೆಂಕು ಹಾಗೂ ಬಡಗುತಿಟ್ಟಿನ 22 ಯಕ್ಷಗಾನ ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಡಾ. ಬಿ. ಬಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿಗೆ ಎಚ್. ನಾರಾಯಣ ಶೆಟ್ಟಿ (ಉಡುಪಿ), ಪ್ರೊ. ಬಿ. ವಿ. ಆಚಾರ್ಯ ಸ್ಮರಣಾರ್ಥ ಪ್ರಶಸ್ತಿಗೆ ದೇವದಾಸ್ ರಾವ್ (ಉಡುಪಿ), ನಿಟ್ಟೂರು ಸುಂದರ ಶೆಟ್ಟಿ-ಮಹೇಶ ಡಿ.ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿಗೆ ಸುರೇಶ್ ಕುಪ್ಪೆಪದವು (ದಕ್ಷಿಣ ಕನ್ನಡ), ಬಿ. ಜಗಜ್ಜೀವನದಾಸ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿಗೆ ಪುರಂದರ ಹೆಗಡೆ (ಶಿವಮೊಗ್ಗ), ಕೆ. ವಿಶ್ವಜ್ಞ ಶೆಟ್ಟಿ

ಉಡುಪಿ: 22 ಮಂದಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರಕಟ Read More »

ಜಾಲತಾಣಗಳಲ್ಲಿ ವೈರಲ್ ಆದ ಹೆಬ್ಬಾವು ಹಿಡಿದ ಮಹಿಳೆ| ಈ ಗಟ್ಟಿಗಿತ್ತಿ ಶೋಭಾ ಯಾರು ಗೊತ್ತಾ? ಇಲ್ಲಿದೆ ಅವರ ಉರಗ ಪ್ರೇಮದ ಸಂಪೂರ್ಣ ಜರ್ನಿ…

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಮಹಿಳೆಯೊಬ್ಬರು ಹಾವು ಹಿಡಿಯುವ ವಿಡಿಯೋವೊಂದು ಭಾರೀ ವೈರಲ್ ಆಗಿತ್ತು. ಬೃಹತ್ ಗಾತ್ರದ ಹೆಬ್ಬಾವನ್ನು ಕೈಯಲ್ಲಿ ಹಿಡಿದುಕೊಂಡ ಮಹಿಳೆ ಅದನ್ನು ಗೋಣಿ ಚೀಲದಲ್ಲಿ ತುಂಬಿಸಲು ಅಲ್ಲಿ ನೆರೆದಿದ್ದವರ ನೆರವು ಯಾಚಿಸುವ ವಿಡಿಯೋ ಎಲ್ಲರನ್ನು ಹುಬ್ಬೇರುವಂತೆ ಮಾಡಿದೆ. ಸಾಮಾನ್ಯವಾಗಿ ಮಹಿಳೆಯರು ಹಾವು ಕಂಡರೇ ಭಯದಿಂದ ಮಾರುದ್ದ ಓಡುತ್ತಾರೆ ಎನ್ನುವ ಭಾವನೆ ಜನ ಸಾಮಾನ್ಯರಲ್ಲಿ ಇದೆ. ಆದರೇ ಇದಕ್ಕೆ ಅಪವಾದ ಎಂಬಂತೆ ಮಹಿಳೆಯೊಬ್ಬರು ಯಾವುದೇ ಆಳುಕಿಲ್ಲದೇ ಹಾವನ್ನು ಹಿಡಿದಿರುವುದು ಹಾಗೂ ಅಕ್ಕ

ಜಾಲತಾಣಗಳಲ್ಲಿ ವೈರಲ್ ಆದ ಹೆಬ್ಬಾವು ಹಿಡಿದ ಮಹಿಳೆ| ಈ ಗಟ್ಟಿಗಿತ್ತಿ ಶೋಭಾ ಯಾರು ಗೊತ್ತಾ? ಇಲ್ಲಿದೆ ಅವರ ಉರಗ ಪ್ರೇಮದ ಸಂಪೂರ್ಣ ಜರ್ನಿ… Read More »