ಕರಾವಳಿ

ಮಲೆನಾಡಿನಲ್ಲಿ ಏರುತ್ತಿದೆ ಬಿಸಿಲಿನ ತಾಪ|ತಂಪು ಪಾನೀಯಕ್ಕೆ ಹೆಚ್ಚಿದ ಬೇಡಿಕೆ

•ಸಂತೋಷ್ ಅತ್ತಿಗೆರೆSamagra news: ಹವಾಮಾನದ ವೈಪರೀತ್ಯದಿಂದ ಸುಡು ಬಿಸಿಲಿಗೆ ಜನ ಹೈರಾಣಾಗುತ್ತಿದ್ದಾರೆ.ಸಕಾಲಕ್ಕೆ ಮಳೆಯೂ ಇಲ್ಲದೇ ಜನರು ಸೆಖೆಯ ದಾಹ ತೀರಿಸಲು ತಂಪು ಪಾನೀಯಗಳಿಗೆ ಹಾಗೂ ಹಣ್ಣಿನ ರಸಗಳ ಸೇವನೆಗೆ ಮೊರೆ ಹೋಗುತ್ತಿದ್ದಾರೆ. ಬೆಳಿಗೆ ಆರಂಭವಾಗುತ್ತಿದ್ದಂತೆ ಸ್ವಲ್ಪ ತಣ್ಣಗಿದ್ದ ಬಿಸಿಲ ತಾಪ ಮಧ್ಯಾಹ್ನವಾಗುತ್ತಿದ್ದಂತೆ ಬಿಸಿಲಿನ ಪ್ರಖರತೆ ತೀವ್ರವಾಗಿ ಜನರು ಹೊರಗೆ ಕಾಲಿಟ್ಟರೆ ಬಿಸಿಲು ತಲೆಯ ನೆತ್ತಿ ಸುಡುತ್ಥಿದೆ. ಮಾರ್ಚ್ ಗೆ ಹೋಲಿಸಿದರೆ ಮಲೆನಾಡಿನಲ್ಲಿ ಏಪ್ರಿಲ್ ಮಾಸದಲ್ಲಿ ಬಿಸಿಲಿನ ತಾಪ ಹೆಚ್ಚಳವಾಗುತ್ತಿದ್ದು ಮಲೆನಾಡಿನ ಸುತ್ತಮುತ್ತಲ ಜಿಲ್ಲೆಗಳಲ್ಲೂ ಕೂಡ ಹವಾಮಾನ ವೈಪರೀತ್ಯದಿಂದ

ಮಲೆನಾಡಿನಲ್ಲಿ ಏರುತ್ತಿದೆ ಬಿಸಿಲಿನ ತಾಪ|ತಂಪು ಪಾನೀಯಕ್ಕೆ ಹೆಚ್ಚಿದ ಬೇಡಿಕೆ Read More »

ಪಿಯುಸಿ ಫಲಿತಾಂಶ| ಕಲಾ ವಿಭಾಗದಲ್ಲಿ ಮಂಜುಶ್ರೀ ಕೆದಂಬಾಡಿ ದ.ಕ ಜಿಲ್ಲೆಗೆ ಪ್ರಥಮ

ಸಮಗ್ರ ನ್ಯೂಸ್: 2022–23ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಲಾ ವಿಭಾಗದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಅವರ ವಂಶಸ್ಥರಾದ ಮಂಜುಶ್ರೀ ಕೆದಂಬಾಡಿ ಅವರು ಪಿಯು ಪರೀಕ್ಷೆಯಲ್ಲಿ 591 ಅಂಕಗಳನ್ನು ಪಡೆದು ದ.ಕ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಮಂಜುಶ್ರೀ ಕೆದಂಬಾಡಿ ಸುಳ್ಯದ ಉಬರಡ್ಕ ಮಿತ್ತೂರು ಗ್ರಾಮದ ತೀರ್ಥರಾಮ ಕೆದಂಬಾಡಿ ಮತ್ತು ಸಂಧ್ಯಾ ಕೆದಂಬಾಡಿ ದಂಪತಿಯ ಪುತ್ರಿ. ಕೆದಂಬಾಡಿ ರಾಮಯ್ಯಗೌಡರ ಐದನೇ ತಲೆಮಾರಿನ ಮಂಜುಶ್ರೀ ಆಗಿದ್ದು, ರಾಮಯ್ಯಗೌಡರು ಬ್ರಿಟಿಷರ ವಿರುದ್ಧ ನಾನಾ ತಂತ್ರಗಾರಿಕೆಯಿಂದ

ಪಿಯುಸಿ ಫಲಿತಾಂಶ| ಕಲಾ ವಿಭಾಗದಲ್ಲಿ ಮಂಜುಶ್ರೀ ಕೆದಂಬಾಡಿ ದ.ಕ ಜಿಲ್ಲೆಗೆ ಪ್ರಥಮ Read More »

ಹರಿಹರ ಪಲ್ಲತ್ತಡ್ಕ ಹೈಸ್ಕೂಲ್ ನಿಂದ ಕಳವು: ಠಾಣೆಗೆ ದೂರು

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಸರಕಾರಿ ಪ್ರೌಢ ಶಾಲೆಯಿಂದ ಕಂಪ್ಯೂಟರ್ ಗಳಿಗೆ ಅಳವಡಿಸುವ ಬ್ಯಾಟರಿಗಳನ್ನು ಕಳವುಗೈದಿರುವ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕ ರಾಮಚಂದ್ರ ಕೆ. ಸುಬ್ ಠಾಣೆಗೆ ದೂರು ನೀಡಿದ್ದಾರೆ. ಎ. 15ರಂದು ಎಂದಿನಂತೆ ಹರಿಹರ ಪಲ್ಲತ್ತಡ್ಕ ಗ್ರಾಮದ ಪ್ರೌಢ ಶಾಲೆಯ ಕಛೇರಿಯ ಬಾಗಿಲು ಪೂರ್ವಾಹ್ನ ಸುಮಾರು 9:30ಕ್ಕೆ ಮುಚ್ಚಿ ಬೀಗ ಹಾಕಿದ್ದು ಬಳಿಕ ಎ.18ರ ಅಪರಾಹ್ನ ಸಂಬಳ ಬಿಲ್ಲು ತಯಾರಿಸುವ ಸಂಬಂದ ಹರಿಹರ ಪ್ಲಲತ್ತಡ್ಕ

ಹರಿಹರ ಪಲ್ಲತ್ತಡ್ಕ ಹೈಸ್ಕೂಲ್ ನಿಂದ ಕಳವು: ಠಾಣೆಗೆ ದೂರು Read More »

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ| ದ.ಕ ಪ್ರಥಮ; ಉಡುಪಿ ದ್ವಿತೀಯ

ಸಮಗ್ರ ನ್ಯೂಸ್: 2022-23ನೇ ಶೈಕ್ಷಣಿಕ ಸಾಲಿನ ಕರ್ನಾಟಕ ದ್ವಿತೀಯ ಪಿಯು ಫಲಿತಾಂಶವಾಗಿದ್ದು, ಕರಾವಳಿಯ ಉಭಯ ಜಿಲ್ಲೆಗಳು ಮೊದಲ ಸ್ಥಾನ ಪಡೆದುಕೊಂಡಿವೆ. ದ.ಕ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಉಡುಪಿ ದ್ವಿತೀಯ ಸ್ಥಾನಿಯಾಗಿದೆ. ಯಾದಗಿರಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ಶೇ.61.22, ವಾಣಿಜ್ಯ ವಿಭಾಗದಲ್ಲಿ ಶೇ.75.89, ವಿಜ್ಞಾನ ವಿಭಾಗದಲ್ಲಿ ಶೇ.85.71 ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ(ಶೇ.95) ಪ್ರಥಮ ಸ್ಥಾನ ಪಡೆದುಕೊಂಡಿದೆ. ಉಡುಪಿ ದ್ವಿತೀಯ, ಕೊಡಗು ತೃತೀಯ ಮತ್ತು ಉತ್ತರ ಕನ್ನಡ ನಾಲ್ಕನೇ ಸ್ಥಾನ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ| ದ.ಕ ಪ್ರಥಮ; ಉಡುಪಿ ದ್ವಿತೀಯ Read More »

ಕಟೀಲು: ಭಕ್ತರು ಅರ್ಪಿಸಿದ ಮಲ್ಲಿಗೆಯಲ್ಲಿ ನಡೆಯಿತು ಶ್ರೀದೇವಿಯ ಶಯನೋತ್ಸವ

ಸಮಗ್ರ ನ್ಯೂಸ್: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜಾತ್ರೆ ಪ್ರಯುಕ್ತ ದೇವರ ಬಲಿ ಉತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಗುರುವಾರ ರಾತ್ರಿ ಶ್ರೀ ದೇವಿಯ ಶಯನೋತ್ಸವ ನಡೆದಿದ್ದು, ಭಕ್ತರಿಂದ ದೇವರಿಗೆ ಸುಮಾರು 10 ಸಾವಿರ ಅಟ್ಟಿ ಮಲ್ಲಿಗೆ ಹೂವು ಸಮರ್ಪಣೆಯಾಯಿತು. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮಧ್ಯಾಹ್ನದಿಂದಲೇ ಸಾವಿರಾರು ಮಂದಿ ಮಲ್ಲಿಗೆ ಸಮರ್ಪಣೆ ಮಾಡಿದರು. ಎ. 21ರಂದು ಪ್ರಾತಃ ಕವಾಟೋದ್ಘಾಟನೆ, ವಸಂತ ಮಂಟಪದಲ್ಲಿ ಶಯನ – ಪುಷ್ಪ ವಿತರಣೆ, ಪ್ರಸಾದ ವಿತರಣೆ, ಅಭಿಷೇಕ ಸೇವೆಗಳು

ಕಟೀಲು: ಭಕ್ತರು ಅರ್ಪಿಸಿದ ಮಲ್ಲಿಗೆಯಲ್ಲಿ ನಡೆಯಿತು ಶ್ರೀದೇವಿಯ ಶಯನೋತ್ಸವ Read More »

ಬಂಟ್ವಾಳ: ಮಹಡಿ ಮೇಲಿಂದ ಬಿದ್ದು ಯುವಕ ಸಾವು

ಸಮಗ್ರ ನ್ಯೂಸ್: ಯುವಕನೋರ್ವ ಮಹಡಿ ಮೇಲಿನಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ಮಾಡಮೆ ಎಂಬಲ್ಲಿ ನಡೆದಿದೆ. ಸಿದ್ದಕಟ್ಟೆ ದೇವಸ್ಯ ನಿವಾಸಿ ದುರ್ಗಾ ಪ್ರಸಾದ್ ಮೃತರು ಎಂದು ಗುರುತಿಸಲಾಗಿದೆ. ದುರ್ಗಾ ಪ್ರಸಾದ್ ಸಿದ್ಧಕಟ್ಟೆ ಸಮೀಪದ ಮಾಡಮೆ ಎಂಬಲ್ಲಿ ಮನೆಯೊಂದರಲ್ಲಿ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಮೇಲಿನಿಂದ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ‌ದೂರು ದಾಖಲಾಗಿದೆ.

ಬಂಟ್ವಾಳ: ಮಹಡಿ ಮೇಲಿಂದ ಬಿದ್ದು ಯುವಕ ಸಾವು Read More »

ಮಂಗಳೂರು: ICICI ಬ್ಯಾಂಕ್ ಹೆಸರಲ್ಲಿ ವಂಚನೆ| ಖಾತೆಯಿಂದ ₹ 83 ಸಾವಿರ ಎಗರಿಸಿದ ಖದೀಮರು

ಸಮಗ್ರ ನ್ಯೂಸ್: ಐಸಿಐಸಿಐ ಬ್ಯಾಂಕ್‌ನಿಂದ ಕರೆ ಮಾಡುವುದಾಗಿ ನಂಬಿಸಿ ಫಿರ್ಯಾದಿಯ ಬ್ಯಾಂಕ್ ಖಾತೆಯಿಂದ 83,999 ರೂ. ಅನಧಿಕೃತವಾಗಿ ವರ್ಗಾವಣೆ ಮಾಡಿಕೊಂಡು ವಂಚಿಸಿದ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫಿರ್ಯಾದಿದಾರರು ಐಸಿಐಸಿಐ ಕ್ರೆಡಿಟ್ ಕಾರ್ಡನ್ನು ಹೊಂದಿದ್ದು, ಅದರ ಸ್ಟೇಟ್‌ಮೆಂಟ್ ಪಡೆಯಲು ಗೂಗಲ್‌ನಲ್ಲಿ ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಿದಾಗ ಅದರಲ್ಲಿ ದೊರೆತ ನಂಬರ್‌ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಸ್ವಲ್ಪ ಸಮಯದ ಬಳಿಕ ಕರೆ ಮಾಡಿದ ಅಪರಿಚಿತ ವ್ಯಕ್ತಿಯು ಕ್ರೆಡಿಟ್ ಕಾರ್ಡ್‌ನ ಸ್ಟೇಟ್‌ಮೆಂಟ್ ಪಡೆಯಲು ಪ್ಲೇ

ಮಂಗಳೂರು: ICICI ಬ್ಯಾಂಕ್ ಹೆಸರಲ್ಲಿ ವಂಚನೆ| ಖಾತೆಯಿಂದ ₹ 83 ಸಾವಿರ ಎಗರಿಸಿದ ಖದೀಮರು Read More »

Weather report| ಉತ್ತರ ಮತ್ತು ದ. ಒಳನಾಡಿನ ಹಲವೆಡೆ ಹಗುರ ಮಳೆ ಸಂಭವ| ಕರಾವಳಿಯಲ್ಲಿ ಉಷ್ಣಾಂಶ ಏರಿಕೆ ಮುನ್ಸೂಚನೆ

ಸಮಗ್ರ ನ್ಯೂಸ್: ಬೆಂಗಳೂರು, ಮಂಗಳೂರು ಸೇರಿದಂತೆ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಅಲ್ಲಲ್ಲಿ ಗುಡುಗು ಸಹಿತ ಸಾಧಾರಣ ಅಥವಾ ಹಗುರ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ‌ಇಲಾಖೆ ನೀಡಿದೆ. ಇಂದು ಶುಕ್ರವಾರ ರಾಜ್ಯದ ಕೆಲವು ಕಡೆಗಳಲ್ಲಿ ಒಣಹವೆ, ಪ್ರಖರ ಬಿಸಿಲು ಮುಂದುವರೆಯಲಿದೆ. ಗುರುವಾರ ರಾಜ್ಯದ ವಿವಿಧೆಡೆ ಭಾರಿ ಮಳೆಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕೆಲವು ಕಡೆ ಚುನಾವಣಾ ಸಮಾವೇಶಗಳಲ್ಲಿ ಅನಿರೀಕ್ಷಿತ ಮಳೆಯು ಬಿಸಿಲಲ್ಲಿ ಬೆಂದ ಕಾರ್ಯಕರ್ತರನ್ನು ತಂಪಾಗಿಸಿದೆ. ಬೆಳಗಾವಿಯಲ್ಲಿ ಗಾಳಿಸಹಿತ ಮತ್ತು ಗದಗದಲ್ಲಿ ಗುಡುಗು

Weather report| ಉತ್ತರ ಮತ್ತು ದ. ಒಳನಾಡಿನ ಹಲವೆಡೆ ಹಗುರ ಮಳೆ ಸಂಭವ| ಕರಾವಳಿಯಲ್ಲಿ ಉಷ್ಣಾಂಶ ಏರಿಕೆ ಮುನ್ಸೂಚನೆ Read More »

ಸೌದಿ: ಭೀಕರ ಅಪಘಾತಕ್ಕೆ ವಿಟ್ಲದ ಯುವಕ ಬಲಿ

ಸಮಗ್ರ ನ್ಯೂಸ್: ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ಅಪಘಾತದಲ್ಲಿ ವಿಟ್ಲದ ಯುವಕ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಮೃತಪಟ್ಟ ಯುವಕನನ್ನು ವಿಟ್ಲದ ಉಕ್ಕುಡ ನಿವಾಸಿ ಮುಹಮ್ಮದ್ ಮುಸ್ಲಿಯಾರ್ ಎಂಬವರ ಪುತ್ರ ಹಬೀಬ್ ಉಕ್ಕುಡ ಎಂದು ಗುರುತಿಸಲಾಗಿದೆ. ಹಬೀಬ್ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಪಲ್ಟಿಯಾಗಿದ್ದು, ಹಬೀಬ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಬೀಬ್ ಉದ್ಯೋಗ ನಿಮಿತ್ತ ಮೂರು ತಿಂಗಳ ಹಿಂದೆಯಷ್ಟೇ ಸೌದಿ ಅರೇಬಿಯಾಗೆ ತೆರಳಿದ್ದರು.

ಸೌದಿ: ಭೀಕರ ಅಪಘಾತಕ್ಕೆ ವಿಟ್ಲದ ಯುವಕ ಬಲಿ Read More »

ಕರಾವಳಿ ಸೇರಿ ಎಲಡೆ ಎ.22ರಂದು ರಂಝಾನ್ ಆಚರಣೆ

ಸಮಗ್ರ ನ್ಯೂಸ್: ಕಳೆದ ಒಂದು ತಿಂಗಳಿನಿಂದ ಆಚರಿಸಲಾಗುತ್ತಿದ್ದ ರಂಜಾನ್ ಉಪವಾಸವನ್ನು ಮುಸ್ಲಿಂ ಸಮುದಾಯದವರು ಇಂದು ಅಂತ್ಯಗೊಳಿಸಲಿದ್ದಾರೆ. ಅಲ್ಲದೇ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ನಾಳೆ (ಎ.22) ರಂಜಾನ್ ಹಬ್ಬವನ್ನು ಆಚರಿಸಲಿದ್ದಾರೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಮಾಹಿತಿ ನೀಡಿದ್ದು, ಇಂದು ಚಂದ್ರನ ದರ್ಶನವಾದ ಕಾರಣ, ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಮುಸ್ಲಿಂ ಸಮುದಾಯದವರು ರಂಜಾನ್ ಉಪವಾಸವನ್ನು ಅಂತ್ಯಗೊಳಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಈ ದಿನದಂದು ಪ್ರತೀ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಗುತ್ತದೆ. ಹೊಸ ಉಡುಪುಗಳನ್ನು ತೊಟ್ಟುಕೊಂಡು

ಕರಾವಳಿ ಸೇರಿ ಎಲಡೆ ಎ.22ರಂದು ರಂಝಾನ್ ಆಚರಣೆ Read More »