ಕರಾವಳಿ

ಪುತ್ತೂರಿನ ಯುವತಿ ಬೆಂಗಳೂರಿನಲ್ಲಿ ಆತ್ಮಹತ್ಯೆ

Samagra news: ಪುತ್ತೂರು ತಾಲೂಕಿನ ಕೆಯ್ಯೂರಿನ ಯುವತಿಯೋರ್ವರು ಬೆಂಗಳೂರುನಲ್ಲಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಕೆಯ್ಯೂರು ಗ್ರಾಮದ ಮಾಡಾವು ಸ್ಥಾನತ್ತಾರು ಚಂದ್ರಶೇಖರ ರೈ ಮತ್ತು ಆಶಾ ಕಾರ್ಯಕರ್ತೆಯಾಗಿರುವ ಸೋಮಾವತಿ ರೈ ದಂಪತಿಯ ಏಕೈಕ ಪುತ್ರಿ ಶ್ರುತಿ ಸಿ.ರೈ (22)ಮೃತಪಟ್ಟವರು. ಕಳೆದೆರಡು ವರ್ಷಗಳಿಂದ ಬೆಂಗಳೂರುನಲ್ಲಿ ಅನಿಮೇಷನ್ ಶಿಕ್ಷಣ ಪಡೆಯುತ್ತಿದ್ದ ಅವರು ಅಲ್ಲೇ ವಾಸ್ತವ್ಯವಿದ್ದರು. ಕೋರ್ಸ್‌ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿದ್ದರು. ಬಾಡಿಗೆ ರೂಮ್‌ನಲ್ಲಿದ್ದ ಅವರು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು

ಪುತ್ತೂರಿನ ಯುವತಿ ಬೆಂಗಳೂರಿನಲ್ಲಿ ಆತ್ಮಹತ್ಯೆ Read More »

ರಾಣಿ ಅಬ್ಬಕ್ಕ ಶಕ್ತಿ ದೇಶದ ಮಹಿಳೆಯರಲ್ಲಿ ಕಾಣುತ್ತಿದೆ| ಮೂಲ್ಕಿಯಲ್ಲಿ ಪ್ರಧಾನಿ ಮೋದಿ ಅಭಿಮತ

ಸಮಗ್ರ ನ್ಯೂಸ್: ರಾಣಿ ಅಬ್ಬಕ್ಕ ಶಕ್ತಿ ಏನೆಂದು ಎಲ್ಲರಿಗೂ ಗೊತ್ತಿದೆ. ದೇಶದ ಪ್ರತಿ ಮಹಿಳೆಯರಲ್ಲೂ ರಾಣಿ ಅಬ್ಬಕ್ಕ ಕಾಣಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಂಗಳೂರಿನ ಮುಲ್ಕಿಯಲ್ಲಿ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದಂತ ಪ್ರಧಾನಿ ನರೇಂದ್ರ ಮೋದಿಯವರು, ರಾಣಿ ಅಬ್ಬಕ್ಕ ಶಕ್ತಿ ಏನೆಂದು ಎಲ್ಲರಿಗೂ ಗೊತ್ತಿದೆ. ದೇಶದ ಪ್ರತಿ ಮಹಿಳೆಯರಲ್ಲೂ ರಾಣಿ ಅಬ್ಬಕ್ಕ ಕಾಣಿಸ್ತಿದ್ದಾರೆ. ರಾಣಿ ಅಬ್ಬಕ್ಕ ರೀತಿಯ ನಮ್ಮ ಮಹಿಳೆಯರಲ್ಲೂ ಸಾಮರ್ಥ್ಯ ಇದೆ. ಕಾಂಗ್ರೆಸ್​ ಆಡಳಿತದಲ್ಲಿ ಮಹಿಳೆಯರಿಗೆ ಸುರಕ್ಷತೆ ಇರಲಿಲ್ಲ. ಮಹಿಳೆಯರಿಗಾಗಿ ಶೌಚಾಲಯ ಇರಲಿಲ್ಲ,

ರಾಣಿ ಅಬ್ಬಕ್ಕ ಶಕ್ತಿ ದೇಶದ ಮಹಿಳೆಯರಲ್ಲಿ ಕಾಣುತ್ತಿದೆ| ಮೂಲ್ಕಿಯಲ್ಲಿ ಪ್ರಧಾನಿ ಮೋದಿ ಅಭಿಮತ Read More »

Dharmasthala mass marriage| ಇಂದು(ಮೇ.3) ಧರ್ಮಸ್ಥಳದಲ್ಲಿ 51ನೇ ಉಚಿತ ಸಾಮೂಹಿಕ ವಿವಾಹ| ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ 201 ಜೋಡಿ

ಸಮಗ್ರ ನ್ಯೂಸ್: ಪ್ರಸಿದ್ಧ ಧರ್ಮಕ್ಷೇತ್ರ ಧರ್ಮಸ್ಥಳದಲ್ಲಿ 51ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಇಂದು (ಮೇ3) ನಡೆಯಲಿದ್ದು , 201 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ವಿವಾಹ ಸಮಾರಂಭ ಅವರವರ ಜಾತಿ ಸಂಪ್ರದಾಯದಂತೆ ಮೇ 3ರ ಬುಧವಾರ ಸಂಜೆ 6.40ರ ಗೋಧೂಳಿ ಲಗ್ನದಲ್ಲಿ 201 ಜೋಡಿಗಳು ಸಾಮೂಹಿಕ ವಿವಾಹ ನಡೆಯಲಿದೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಅವರ ಪತ್ನಿ ಹೇಮಾವತಿ ಹೆಗ್ಗಡೆ ಅವರು ಜೋಡಿಗಳಿಗೆ ಮಂಗಳಸೂತ್ರ ವಿತರಣೆ ಮಾಡುತ್ತಾರೆ. ಕಾರ್ಯಕ್ರಮದ ಎಲ್ಲಾ ವೆಚ್ಚವನ್ನು ಶ್ರೀ ಧರ್ಮಸ್ಥಳ

Dharmasthala mass marriage| ಇಂದು(ಮೇ.3) ಧರ್ಮಸ್ಥಳದಲ್ಲಿ 51ನೇ ಉಚಿತ ಸಾಮೂಹಿಕ ವಿವಾಹ| ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ 201 ಜೋಡಿ Read More »

ಪುತ್ತೂರಿನಲ್ಲಿ ನೈತಿಕ ಪೊಲೀಸ್ ಗಿರಿ| ಯುವತಿ ಜೊತೆ ಮಾತನಾಡಿದ್ದಕ್ಕೆ ಮುಸ್ಲಿಂ ಯುವಕನ ಮೇಲೆ ಹಲ್ಲೆಗೈದ ಹಿಂದೂ ಯುವಕರು

ಸಮಗ್ರ ನ್ಯೂಸ್: ಭಜರಂಗದಳ ನಿಷೇಧದ ಕುರಿತು ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ ಮಾಡಲಾಗಿದೆ. ಯುವತಿ ಜತೆ ಮಾತನಾಡಿದ್ದಕ್ಕೆ ಹಿಂದು ಸಂಘಟನೆ ಕಾರ್ಯಕರ್ತರು ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಮೊಹಮ್ಮದ್‌ ಪಾರಿಶ್ (18) ಎಂಬ ಯುವಕನಿಗೆ ಹಿಂದು ಕಾರ್ಯಕರ್ತರು ಥಳಿಸಿದ್ದು, ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಫಾರಿಶ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಿಂದೂ ಯುವತಿ ಜೊತೆ ಮಾತನಾಡಿದ್ದಕ್ಕಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿ ಮೇಲೆ

ಪುತ್ತೂರಿನಲ್ಲಿ ನೈತಿಕ ಪೊಲೀಸ್ ಗಿರಿ| ಯುವತಿ ಜೊತೆ ಮಾತನಾಡಿದ್ದಕ್ಕೆ ಮುಸ್ಲಿಂ ಯುವಕನ ಮೇಲೆ ಹಲ್ಲೆಗೈದ ಹಿಂದೂ ಯುವಕರು Read More »

ಇಂದು ಕರಾವಳಿಯಲ್ಲಿ ನಮೋ| ಮೂಲ್ಕಿಯಲ್ಲಿ ಬೃಹತ್ ರ್ಯಾಲಿ

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಮತ ಭೇಟೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೇ 3 ರಂದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 13 ವಿಧಾನಸಭಾ ಕ್ಷೇತ್ರಗಳಿಂದ 2.5 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ. ಕೊಳ್ನಾಡು ಮೈದಾನದಲ್ಲಿ 70 ಎಕರೆ ಜಾಗದಲ್ಲಿ ರ್ಯಾಲಿ ನಡೆಯಲಿದ್ದು, ಭಾಗವಹಿಸುವವರಿಗೆ ಆಸನ ವ್ಯವಸ್ಥೆ ಮಾಡಲು ಬೃಹತ್ ಪಂಗಡವನ್ನು ನಿರ್ಮಿಸಲಾಗುತ್ತಿದೆ. ಭದ್ರತಾ

ಇಂದು ಕರಾವಳಿಯಲ್ಲಿ ನಮೋ| ಮೂಲ್ಕಿಯಲ್ಲಿ ಬೃಹತ್ ರ್ಯಾಲಿ Read More »

ಕಡಬ: ಶಾಲೆಗಳಿಂದ ಬ್ಯಾಟರಿ, ಇಲೆಕ್ಟ್ರಾನಿಕ್ ವಸ್ತುಗಳ ಕದಿಯುತ್ತಿದ್ದ ಗ್ಯಾಂಗ್ ನ ಹೆಡೆಮುರಿ ಕಟ್ಟಿದ ಪೊಲೀಸರು| ಲಕ್ಷಾಂತರ ಮೌಲ್ಯದ ಸೊತ್ತು‌ ವಶ

ಸಮಗ್ರ ನ್ಯೂಸ್: ಬರೋಬ್ಬರಿ ಒಂಭತ್ತು ಸರ್ಕಾರಿ ಶಾಲೆಯಿಂದ ಕಳ್ಳತನ ಮಾಡಿದ ಖತರ್ ನಾಕ್ ಕಳ್ಳರ ಗ್ಯಾಂಗನ್ನು ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿ ನಾಲ್ವರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ದೋಲ ಮನೆ ಹೊನ್ನಪ್ಪ ಗೌಡರ ರಕ್ಷಿತ್ ಡಿ (24 ವರ್ಷ) ,ಮೀನಾಡಿಯ ಧರ್ಣಪ್ಪ ಗೌಡರ ಪುತ್ರ ತೀರ್ಥೇಶ್ಎಂ.( 29 ವರ್ಷ) ಉರುಂಬಿ ಮನೆಯ ಕುಶಾಲಪ್ಪ ಗೌಡರ ಪುತ್ರ ಯಜ್ಞೇಶ್‌ ಯು.ಕೆ (30 ವರ್ಷ) ,ಹಳ್ಳಿಮನೆಯ ವಿಶ್ವನಾಥ ಶೆಟ್ಟಿ ಎಂಬವರ ಮಗ ರೋಹಿತ್‌ ಹೆಚ್.‌ ಶೆಟ್ಟಿ,(

ಕಡಬ: ಶಾಲೆಗಳಿಂದ ಬ್ಯಾಟರಿ, ಇಲೆಕ್ಟ್ರಾನಿಕ್ ವಸ್ತುಗಳ ಕದಿಯುತ್ತಿದ್ದ ಗ್ಯಾಂಗ್ ನ ಹೆಡೆಮುರಿ ಕಟ್ಟಿದ ಪೊಲೀಸರು| ಲಕ್ಷಾಂತರ ಮೌಲ್ಯದ ಸೊತ್ತು‌ ವಶ Read More »

ಪುತ್ತೂರಿನಲ್ಲಿ ಗೂಂಡಾ ರಾಜ್ಯ ಸ್ಥಾಪನೆಗೆ ಅವಕಾಶ ಕೊಡಲ್ಲ – ಡಿವಿಎಸ್

ಸಮಗ್ರ ನ್ಯೂಸ್: ಪುತ್ತೂರಿನಲ್ಲಿ ಒಂದು ಕಾಲದಲ್ಲಿ ರೌಡಿಗಳ ಕೂಟವಿತ್ತು. ಪುತ್ತೂರನ್ನು ಗೂಂಡಾ ಸಾಮ್ರಾಜ್ಯ ಆಳುತ್ತಿತ್ತು. ಅಂಥ ಪುತ್ತೂರಿನಲ್ಲಿ ಸಾಮಾನ್ಯನಿಗೆ ಓಡುವ ವ್ಯವಸ್ಥೆ ಮಾಡಿದ್ದು ಬಿಜೆಪಿ. ಅಂಥಹ ವ್ಯವಸ್ಥೆ ಮತ್ತೆ ಮರುಕಳಿಸಲು ಅವಕಾಶ ನೀಡಲ್ಲ, ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ.ಸದಾನಂದ ಗೌಡ ಹೇಳಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಪ್ರಚಾರಕ್ಕೆ ಪುತ್ತೂರಿಗೆ ಆಗಮಿಸಿದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಪುತ್ತೂರು ಮಾಜಿ ಶಾಸಕರೂ ಆಗಿರುವ ಡಿವಿಎಸ್ ಪುತ್ತೂರಿನ ಅಂದಿನ ಸ್ಥಿತಿಯನ್ನು ಮಾದ್ಯಮಗಳಿಗೆ

ಪುತ್ತೂರಿನಲ್ಲಿ ಗೂಂಡಾ ರಾಜ್ಯ ಸ್ಥಾಪನೆಗೆ ಅವಕಾಶ ಕೊಡಲ್ಲ – ಡಿವಿಎಸ್ Read More »

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ಉಲ್ಲೇಖಕ್ಕೆ ಸುಳ್ಯ ಬಿಜೆಪಿ ಮಂಡಲ ಖಂಡನೆ

ಸಮಗ್ರ ನ್ಯೂಸ್: ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಹೊರತಂದ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಭಜರಂಗದಳವನ್ನು ನಿಷೇಧಿಸುತ್ತೇವೆ ಎಂಬುದನ್ನು ಸುಳ್ಯ ಮಂಡಲ ಭಾರತೀಯ ಜನತಾ ಪಾರ್ಟಿ ಖಂಡಿಸಿದೆ. ಈ ಬಗ್ಗೆ ಮಂಡಲದ ವತಿಯಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಅಧಿಕಾರ ಪಡೆಯುವ ಹಗಲು ಕನಸು ಕಾಣುತ್ತಿರುವ ಕಾಂಗ್ರೆಸ್ ಒಲೈಕೆ ರಾಜಕರಣದ ಭಾಗವಾಗಿ ತಾವು ಅಧಿಕಾರಕ್ಕೆ ಬಂದಲ್ಲಿ ಭಜರಂಗದಳವನ್ನು ನಿಷೇಧಿಸುತ್ತೇವೆ ಎಂದು ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವುದನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಸಮಿತಿ ತೀವ್ರವಾಗಿ

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ಉಲ್ಲೇಖಕ್ಕೆ ಸುಳ್ಯ ಬಿಜೆಪಿ ಮಂಡಲ ಖಂಡನೆ Read More »

ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಸಹೋದರನ ಮನೆಗೆ ಐಟಿ ದಾಳಿ| ಗಿಡದಲ್ಲಿ ಅಡಗಿಸಿಟ್ಟಿದ್ದ ಕೋಟಿ ರೂ ಪತ್ತೆ!

ಸಮಗ್ರ ನ್ಯೂಸ್: ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ಐಟಿ ಅಧಿಕಾರಿಗಳು ರಾಜ್ಯದ ಹಲವೆಡೆ ದಾಳಿ ನಡೆಸಿ, ಅಕ್ರಮಗಳನ್ನು ಬಯಲಿಗೆಳೆಯುತ್ತಿದ್ದಾರೆ. ಇದೀಗ ಮೈಸೂರಿನಲ್ಲಿ ಕೆ.ಸುಬ್ರಹ್ಮಣ್ಯ ರೈ ಎಂಬುವವರ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಟಿ ಅಧಿಕಾರಿಗಳು ಕೆ.ಸುಬ್ರಹ್ಮಣ್ಯ ರೈ ಎಂಬುವವರ ಮನೆಗೆ ದಾಳಿ ನಡೆಸಿ, ಅವರ ಮನೆಯಂಗಳದಲ್ಲಿದ್ದ ಗಿಡದಲ್ಲಿ ನೇತು ಹಾಕಿದ್ದ ಒಂದು ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಖಚಿತ ಮಾಹಿತಿ ಮೇರೆಗೆ ಐಟಿ ಅಧಿಕಾರಿಗಳು ದಾಳಿ

ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಸಹೋದರನ ಮನೆಗೆ ಐಟಿ ದಾಳಿ| ಗಿಡದಲ್ಲಿ ಅಡಗಿಸಿಟ್ಟಿದ್ದ ಕೋಟಿ ರೂ ಪತ್ತೆ! Read More »

ಸುಳ್ಯ ಕಾಂಗ್ರೆಸ್ ನ ಆಂತರಿಕ ಗೊಂದಲಕ್ಕೆ ಎಳ್ಳುನೀರು| ಬಗೆಹರಿದ ಅಸಮಾಧಾನ; ಒಗ್ಗಟ್ಟಿನ ಮಂತ್ರ ಜಪಿಸಿದ ಕೈ ಪಾಳಯ

ಸಮಗ್ರ ನ್ಯೂಸ್: ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮತ್ತು ನಂತರದ ಪಕ್ಷದೊಳಗಿನ ಗೊಂದಲಗಳ ಬಗ್ಗೆ ಕೆಪಿಸಿಸಿ ಮತ್ತು ಎ ಐ ಸಿ ಸಿ ನಿರ್ದೇಶನದಂತೆ ಮಾಜಿ ಸಚಿವ ಬಿ ರಮಾನಾಥ ರೈ ಯವರ ನೇತೃತ್ವದಲ್ಲಿ ಎ ಐ ಸಿ ಸಿ ಸದಸ್ಯ ಮಹಾರಾಷ್ಟ್ರದ ಮಾಜಿ ಸಚಿವ ಸುನಿಲ್ ಕೇದಾರ್ ಉಪಸ್ಥಿತಿಯಲ್ಲಿ ಬಂಟ್ವಾಳ ದಲ್ಲಿ ರಮಾನಾಥ ರೈ ಯವರ ನಿವಾಸದಲ್ಲಿ ಸಭೆ ನಡೆಸಲಾಗಿದೆ. ಸುಳ್ಯ ಮತ್ತು ಕಡಬ ಬ್ಲಾಕ್ ಅಧ್ಯಕ್ಷರು ಅಭ್ಯರ್ಥಿ ಕೃಷ್ಣಪ್ಪ ಮತ್ತು ಅಭ್ಯರ್ಥಿ

ಸುಳ್ಯ ಕಾಂಗ್ರೆಸ್ ನ ಆಂತರಿಕ ಗೊಂದಲಕ್ಕೆ ಎಳ್ಳುನೀರು| ಬಗೆಹರಿದ ಅಸಮಾಧಾನ; ಒಗ್ಗಟ್ಟಿನ ಮಂತ್ರ ಜಪಿಸಿದ ಕೈ ಪಾಳಯ Read More »