ಕರಾವಳಿ

ಮೂಡುಬಿದಿರೆ‌: ಯುವಕ ಆತ್ಮಹತ್ಯೆ

ಸಮಗ್ರ ನ್ಯೂಸ್: ಮೂಡುಬಿದಿರೆಯಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.3ರ ರಾತ್ರಿ ನಡೆದಿದೆ. ಮೃತರನ್ನು ಸುಮಂತ್ (21) ಎಂದು ಗುರುತಿಸಲಾಗಿದೆ. ಸುಮಂತ್ ಸೋಮವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣಗಳು ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ನಡೆಸುತಿದ್ದಾರೆ.

ಮೂಡುಬಿದಿರೆ‌: ಯುವಕ ಆತ್ಮಹತ್ಯೆ Read More »

ಕುರುಂಜಿಬಾಗ್ ದ ಕೊರಗಜ್ಜ ವಿಡೀಯೋ ತುಳು ಭಕ್ತಿಗೀತೆ ಬಿಡುಗಡೆ ಕಾರ್ಯಕ್ರಮ

ಸಮಗ್ರ ನ್ಯೂಸ್: ಚಿತ್ತೆಶ್ ಕ್ರಿಯೇಷನ್ಸ್ ಸುಳ್ಯ ಅರ್ಪಿಸುವ ಕುರುಂಜಿಬಾಗ್ ದ ಕೊರಗಜ್ಜ ವೀಡಿಯೋ ತುಳು ಭಕ್ತಿಗೀತೆಯನ್ನು ಕುರುಂಜಿಬಾಗ್ ನಲ್ಲಿರುವ ಶ್ರೀ ಕೊರಗಜ್ಜ ದೇವಾಲಯದಲ್ಲಿ ಬಿಡುಗಡೆ ಮಾಡಲಾಯಿತು. ದೇವಸ್ಥಾನದ ಅರ್ಚಕರಾಗಿರುವ ಶ್ರೀ ನಾರಾಯಣ ಪೂಜಾರಿ ಯವರು ಭಕ್ತಿಗೀತೆಯನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು .ಸುಳ್ಯದ ಖ್ಯಾತ ಜ್ಯೋತಿಷಿ ಹಾಗೂ ಸಾಹಿತಿಗಳು ಮತ್ತು ಗಾಯಕರಾದ ಎಚ್ .ಭೀಮರಾವ್ ವಾಷ್ಠರ್ ರವರು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಶಿವಾನಂದ್ ಪೂಜಾರಿಯವರು ಮುಖ್ಯ ಅತಿಥಿಗಳಾಗಿದ್ದರು . ಈ ಭಕ್ತಿಗೀತೆಗೆ ಸಾಹಿತ್ಯ ರಚಿಸಿ ಹಾಡಿರುವ

ಕುರುಂಜಿಬಾಗ್ ದ ಕೊರಗಜ್ಜ ವಿಡೀಯೋ ತುಳು ಭಕ್ತಿಗೀತೆ ಬಿಡುಗಡೆ ಕಾರ್ಯಕ್ರಮ Read More »

ಸದನದ ಕಲಾಪಕ್ಕೂ ಮೊದಲು ಉಭಯ ಪಕ್ಷಗಳ ನಾಯಕರಿಂದ ಮಾತುಕತೆ

ಸಮಗ್ರ ನ್ಯೂಸ್: ಸದನದ ಕಲಾಪ ಪ್ರಾರಂಭವಾಗುವುದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪೀಕರ್ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.‌ ಈ ಸಂದರ್ಭ ಮಾಜಿ ಸಚಿವ ಸುನಿಲ್ ಕುಮಾರ್, ಸ್ಪೀಕರ್ ಯು.ಟಿ ಖಾದರ್ ಕೂಡಾ ಉಪಸ್ಥಿತರಿದ್ದರು.

ಸದನದ ಕಲಾಪಕ್ಕೂ ಮೊದಲು ಉಭಯ ಪಕ್ಷಗಳ ನಾಯಕರಿಂದ ಮಾತುಕತೆ Read More »

ಮಡಿಕೇರಿಯಲ್ಲಿ ಇಲಿ ಜ್ವರಕ್ಕೆ ಯುವಕ ಬಲಿ

ಸಮಗ್ರ ನ್ಯೂಸ್: ಇಲಿ ಜ್ಚರಕ್ಕೆ ಯುವಕನೋರ್ವ ಬಲಿಯಾದ ಘಟನೆ ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದಲ್ಲಿ ಸಂಭವಿಸಿದೆ. ಚೆಂಬೇರಿ ಆನೆಪಾರೆ ನಿವಾಸಿಯ ಕೂಲಿ ಕಾರ್ಮಿಕರಾದ ಬಾಲನ್ ಅವರ ಪುತ್ರ ಲಿಬೀನ್ ಇಲಿ ಜ್ವರಕ್ಕೆ ಬಲಿಯಾಗಿದ್ದಾನೆ. ಈತ ಜ್ವರ ಪೀಡಿತನಾಗಿ ಕೇರಳದ ಪೆರಿಯಾರಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಜಾಂಡೀಸ್ ಕಾಯಿಲೆ ಇದೆ ಎಂದು ವೈದ್ಯರು ತಿಳಿಸಿದ್ದರು. ನಂತರ ಇದರೊಂದಿಗೆ ಇಲಿ ಜ್ವರ ಕೂಡ ಬಾಧಿಸಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಇಲಿ ಜ್ವರದಿಂದ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಸದ್ಯ ಘಟನೆಯಿಂದ

ಮಡಿಕೇರಿಯಲ್ಲಿ ಇಲಿ ಜ್ವರಕ್ಕೆ ಯುವಕ ಬಲಿ Read More »

ಬೆಂಗಳೂರು: ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ

ಸಮಗ್ರ ನ್ಯೂಸ್ : ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಜು. 2ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಪವಿತ್ರಾ ಎಂದು ಗುರುತಿಸಲಾಗಿದೆ. ಪವಿತ್ರಾ ಮೊದಲ ಪತಿಗೆ ವಿಚ್ಛೇದನ ನೀಡಿ ಚೇತನ್ ಗೌಡ ಎಂಬಾತನನ್ನು ಎರಡನೇ ವಿವಾಹವಾಗಿದ್ದಳು. ಚೇತನ್​ ಕಂಪೆನಿಯೊಂದರ ಮಾಲೀಕನಾಗಿದ್ದು, ಇತ್ತೀಚೆಗೆ ಚೇತನ್​ಗೆ ಮತ್ತೊರ್ವ ಯುವತಿಯ ಸಂಪರ್ಕ ಬೆಳೆದಿದ್ದು, ಇದೇ ವಿಚಾರವಾಗಿ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಈ ಬಗ್ಗೆ ತನ್ನ

ಬೆಂಗಳೂರು: ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ Read More »

ಸುಳ್ಯ:ಜು.6 ರಂದು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಉದ್ಘಾಟನಾ ಸಮಾರಂಭ

ಸಮಗ್ರ ನ್ಯೂ ಸ್: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 9ನೆಯ ಶಾಖೆ ಬೆಳ್ಳಾರೆಯ ಕಾತ್ಯಾಯಿನಿ ಕಾಂಪ್ಲೆಕ್ಸ್ ಜು.6 ರಂದು ಪೂ.11ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮದ ದ್ವೀಪ ಪ್ರಜ್ವಲೆಯನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ,ಕಾವೂರು ಮಂಗಳೂರು ಇಲ್ಲಿಯ ಪರಮಪೂಜ್ಯ ಶ್ರೀ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿಯವರು ನೆರವೇರಿಸಲಿದ್ದಾರೆ.ಅಧ್ಯಕ್ಷತೆಯನ್ನು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಚಿದಾನಂದ ಬೈಲಾಡಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಭಾಗೀರಥಿ ಮುರುಳ್ಯ,ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ

ಸುಳ್ಯ:ಜು.6 ರಂದು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಉದ್ಘಾಟನಾ ಸಮಾರಂಭ Read More »

ಬೇನಾಮಿ ಆಸ್ತಿ ಹೊಂದಿದ್ದ ಅಜಿತ್ ರೈ ಗ್ರೇಡ್ 2 ತಹಶಿಲ್ದಾರ್ ಆಗಿ ಸಿರಿವಾರಕ್ಕೆ ನಿಯೋಜನೆ| ಸರ್ಕಾರದ ನಡೆಗೆ ವ್ಯಾಪಕ ಆಕ್ರೋಶ

ಸಮಗ್ರ ವಾರ್ತೆ: 500 ಕೋಟಿಗೂ ಅಧಿಕ ಬೇನಾಮಿ ಆಸ್ತಿ ಸಂಪಾದಿಸಿದ ಆರೋಪ ಹೊತ್ತಿರುವ ಬೆಂಗಳೂರಿನ ಕೆಆರ್ ಪುರ ತಹಶೀಲ್ದಾರ್ ಗೆ ಅಜಿತ್ ಕುಮಾರ್ ರೈ ಅವರನ್ನು ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕಿನ ಗ್ರೇಡ್ -2 ತಹಶೀಲ್ದಾರ್ ಹುದ್ದೆಗೆ ಸರ್ಕಾರ ನೇಮಕ ಮಾಡಿದ್ದು, ಸರ್ಕಾರದ ಈ ನಡೆಗೆ ಆಕ್ರೋಶ ವ್ಯಕ್ತವಾಗಿದೆ. ಆದಾಯಕ್ಕಿಂತ ಭಾರಿ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವ ಅಜಿತ್ ರೈ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿದೆ. ಸಿರವಾರದಲ್ಲಿ ಗ್ರೇಡ್ 2 ತಹಶೀಲ್ದಾರ್ ಆಗಿದ್ದ ಪರಶುರಾಮ 500

ಬೇನಾಮಿ ಆಸ್ತಿ ಹೊಂದಿದ್ದ ಅಜಿತ್ ರೈ ಗ್ರೇಡ್ 2 ತಹಶಿಲ್ದಾರ್ ಆಗಿ ಸಿರಿವಾರಕ್ಕೆ ನಿಯೋಜನೆ| ಸರ್ಕಾರದ ನಡೆಗೆ ವ್ಯಾಪಕ ಆಕ್ರೋಶ Read More »

ಹವಾಮಾನ ವರದಿ| ರಾಜ್ಯಾದ್ಯಂತ ಬಿರುಸುಗೊಂಡ ಮುಂಗಾರು| ಮುಂದಿನ 4-5 ದಿನ ಭಾರೀ ಮಳೆ; ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಿಸಿದ ಐಎಂಡಿ

ಸಮಗ್ರ ನ್ಯೂಸ್: ಕಳೆಗುಂದಿದ್ದ ಮುಂಗಾರು ಮಾರುತ ಚುರುಕುಗೊಂಡಿದ್ದು ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಮಳೆ ಬಿರುಸಾಗಿದೆ. ಈ ನಡುವೆ ರಾಜ್ಯದಲ್ಲಿ ಮಳೆ ಕ್ರಮೇಣ ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದಿನಿಂದ ಮುಂದಿನ 4-5 ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗಲಿದ್ದು, ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿಯುವ ನಿರೀಕ್ಷೆ ಇದೆ. ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಈ ತಿಂಗಳವಿಡಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ

ಹವಾಮಾನ ವರದಿ| ರಾಜ್ಯಾದ್ಯಂತ ಬಿರುಸುಗೊಂಡ ಮುಂಗಾರು| ಮುಂದಿನ 4-5 ದಿನ ಭಾರೀ ಮಳೆ; ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಿಸಿದ ಐಎಂಡಿ Read More »

80Km ಮೈಲೇಜ್ ಇರುವ ಹೀರೋ ಬೈಕ್ ಕೊಳ್ಳಲು ಹಾತೊರೆಯುತ್ತಿರುವ ಜನ! | ಇದರ ಬೆಲೆ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ

ಸಮಗ್ರ ನ್ಯೂಸ್: ಸಾಕಷ್ಟು ವರ್ಷಗಳಿಂದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೀರೋ ಮೋಟೋಕಾರ್ಪ್ (Hero Motocorp) ಸಂಸ್ಥೆಯ ಒಂದು ದ್ವಿಚಕ್ರ ವಾಹನ ತನ್ನ ಮಾರುಕಟ್ಟೆಯನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಿಕೊಳ್ಳುತ್ತಲೇ ಇದೆ. ಬಜೆಟ್ ಹಾಗೂ ಮೈಲೇಜ್ ವಿಚಾರಕ್ಕೆ ಬಂದರೆ ಈ ಬೈಕಿನ ಮುಂದೆ ನಿಲ್ಲುವರು ಯಾರು ಇಲ್ಲ. ದಿನನಿತ್ಯದ ಪ್ರಯಾಣಕ್ಕೆ ವಾಹನವನ್ನು ಬಳಸುವ ಪ್ರತಿಯೊಬ್ಬರ ಫೇವರೆಟ್ ಬೈಕ್ ಇದಾಗಿದೆ. ಇದರ ಹೆಸರು ಹೇಳಿ ವಿವರಿಸಬೇಕಾದ ಅಗತ್ಯವಿಲ್ಲ. ಅದು Hero Splendor ಹೊರತು ಬೇರಾವುದಲ್ಲ. ಹೀರೋ ಸಂಸ್ಥೆಯ ಪ್ರತಿಯೊಂದು ಸೆಗ್ಮೆಂಟ್ ನಲ್ಲಿ

80Km ಮೈಲೇಜ್ ಇರುವ ಹೀರೋ ಬೈಕ್ ಕೊಳ್ಳಲು ಹಾತೊರೆಯುತ್ತಿರುವ ಜನ! | ಇದರ ಬೆಲೆ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ Read More »

ಸೌಜನ್ಯ ಅತ್ಯಾಚಾರ ಪ್ರಕರಣ| ನ್ಯಾಯಕ್ಕಾಗಿ ಕಾನತ್ತೂರು, ಧರ್ಮಸ್ಥಳದ ಕಾರಣಿಕ ಶಕ್ತಿಗಳಿಗೆ ಹರಕೆ ಹೊತ್ತ ವಿಠಲ ಗೌಡ

ಸಮಗ್ರ ನ್ಯೂಸ್: ಧರ್ಮಸ್ಥಳದ ಸಮೀಪ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿದ್ದ ಸೌಜನ್ಯ ಹತ್ಯೆ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದ್ದು ಪ್ರಕರಣ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಸಿಬಿಐ ವಿಶೇಷ ಕೋರ್ಟ್‌ ನಲ್ಲಿ ಸಂತೋಷ್ ರಾವ್ ನಿರಪರಾಧಿ ಎಂದು ತೀರ್ಪು ಬರುತ್ತಲೇ ನಿಜವಾದ ಅಪರಾಧಿ ಯಾರು ಅನ್ನುವ ಪ್ರಶ್ನೆ ಎದ್ದಿದೆ. ಈ ನಡುವೆಯೇ ಸೌಜನ್ಯಳ ಮಾವ ಇದೀಗ ದೈವ ದೇವರಿಗೆ ಹರಕೆ ಹೊತ್ತಿರುವುದು ಸುದ್ದಿಯಾಗಿದ್ದು, ಕೊಲೆಗೆ ಕಾರಣವಾದ ಅಪರಾಧಿಗಳಿಗೆ ಇನ್ನು ಆರು ತಿಂಗಳ ಒಳಗಾಗಿ ಸರಿಯಾದ ಶಿಕ್ಷೆಯಾಗಬೇಕು ಎಂದು ವಿಠಲ ಗೌಡ

ಸೌಜನ್ಯ ಅತ್ಯಾಚಾರ ಪ್ರಕರಣ| ನ್ಯಾಯಕ್ಕಾಗಿ ಕಾನತ್ತೂರು, ಧರ್ಮಸ್ಥಳದ ಕಾರಣಿಕ ಶಕ್ತಿಗಳಿಗೆ ಹರಕೆ ಹೊತ್ತ ವಿಠಲ ಗೌಡ Read More »