ಕರಾವಳಿ

ಭಾರೀ ಗಾಳಿ, ಮಳೆ ಸಾಧ್ಯತೆ|ಕೊಡಗು, ಕರಾವಳಿಗೆ ಎಲ್ಲೋ ಅಲರ್ಟ್|

ಸಮಗ್ರ ನ್ಯೂಸ್: ಕರಾವಳಿ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದಲೂ ಎಡೆಬಿಡದೆ ಸುರಿಯುತ್ತಿರುವ ಮಳೆ ರಾಯ ಮತ್ತೆ ಆರ್ಭಟಿಸುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಉಡುಪಿ, ದಕ್ಷಿಣ ಕನ್ನಡ ಮಾತ್ರವಲ್ಲದೇ ಕೊಡಗು ಜಿಲ್ಲೆಯಲ್ಲಿ ಇಂದು ಭಾರೀ ಮಳೆಯಾಗಲಿದ್ದು, ನಾಳೆ ಭಾರೀ ಗಾಳಿ ಬೀಸಲಿದೆ. ಅಲ್ಲದೇ ಜುಲೈ 13ರಿಂದ ಮತ್ತೆ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ರೆಡ್‌ ಅಲರ್ಟ್‌

ಭಾರೀ ಗಾಳಿ, ಮಳೆ ಸಾಧ್ಯತೆ|ಕೊಡಗು, ಕರಾವಳಿಗೆ ಎಲ್ಲೋ ಅಲರ್ಟ್| Read More »

ಉಳ್ಳಾಲ: ದನಗಳ ಮೇಲೆ ಹರಿದ ಕಾರು ಪಲ್ಟಿ- ನಾಲ್ವರಿಗೆ ಗಂಭೀರ ಗಾಯ

ಸಮಗ್ರ ನ್ಯೂಸ್: ರಸ್ತೆಯಲ್ಲಿ ಮಲಗಿದ್ದ ದನಗಳ ಮೇಲೆ ಕಾರೊಂದು ಹರಿದು ಪಲ್ಟಿಯಾದ ಘಟನೆ ತೊಕ್ಕೊಟ್ಟು ಸಮೀಪದ ಕುತ್ತಾರು ಪಂಡಿತ್ ಹೌಸ್ ಎಂಬಲ್ಲಿ ಇಂದು ಮುಂಜಾನೆ ನಡೆದಿದ್ದು, ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಬೆಳಗ್ಗಿನ ಜಾವ 3:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಮಲಗಿದ್ದ ದನಗಳ ಮೇಲೆ ವೇಗವಾಗಿದ್ದ ಕಾರು ಹರಿದ ಪರಿಣಾಮ ಈ ಅಪಘಾತ ಸಂಭವಿಸಿದೆ. ಇದರಿಂದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಉರುಳಿಬಿದ್ದಿದ್ದು, ಸಂಪೂರ್ಣ ಜಖಂಗೊಂಡಿದೆ. ಘಟನೆಯಿಂದ ಮೂರು ದನಗಳು ಸಾವಿಗೀಡಾಗಿವೆ ಎಂದು

ಉಳ್ಳಾಲ: ದನಗಳ ಮೇಲೆ ಹರಿದ ಕಾರು ಪಲ್ಟಿ- ನಾಲ್ವರಿಗೆ ಗಂಭೀರ ಗಾಯ Read More »

ಮಂಗಳೂರು: ಕೆಲಸಕ್ಕಿದ್ದ ಕಾರ್ಮಿಕನ ಕೊಲೆ|ಮಾಲೀಕ ಬಂಧನ

ಮಂಗಳೂರು : ತನ್ನ ಬಳಿ ಕೆಲಸಕ್ಕಿದ್ದ ಕಾರ್ಮಿಕನನ್ನು ಮಾಲೀಕನೇ ಬೆಂಕಿಹಚ್ಚಿ ಸುಟ್ಟು ಕೊಲೆ ಮಾಡಿರುವ ಘಟನೆ ಮಂಗಳೂರು ನಗರದ ಮುಳಿಹಿತ್ಲು ಜಂಕ್ಷನ್ ನಲ್ಲಿ ಶನಿವಾರ ನಡೆದಿದೆ. ಕೊಲೆಯಾದವನನ್ನು ಗಜ್ಞಾನ್ ಜಗು ಎಂದು ಗುರುತಿಸಲಾಗಿದ್ದು, ಅಂಗಡಿ ಮಾಲೀಕ ಪಾಂಡೇಶ್ವರ ನಿವಾಸಿ ತೌಸಿಫ್ ಹಸನ್ ( 32 ) ಕೊಲೆ ಆರೋಪಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಮುಳಿಹಿತ್ಲು ಮಾಷುಪಾ ಜನರಲ್ ಸ್ಕೋರ್ ಎಂಬ ಅಂಗಡಿಯಲ್ಲಿ ಕೆಲಸಕ್ಕಿದ್ದ ಗಜ್ಞಾನ್ ಜಗು ಎಂಬ ಕಾರ್ಮಿಕನಿಗೆ ಮಾಲೀಕ ಕ್ಷುಲ್ಲಕ ಕಾರಣಕ್ಕೆ ಬೆಂಕಿ ಹಚ್ಚಿದ್ದಾನೆ. ನಂತರ

ಮಂಗಳೂರು: ಕೆಲಸಕ್ಕಿದ್ದ ಕಾರ್ಮಿಕನ ಕೊಲೆ|ಮಾಲೀಕ ಬಂಧನ Read More »

ನೆಲ್ಯಾಡಿ: ಕಂದಕಕ್ಕೆ ಬಿದ್ದ ಲಾರಿ

ಸಮಗ್ರ ನ್ಯೂಸ್: ಹಣ್ಣಿನ ಲಾರಿಯೊಂದು ರಸ್ತೆ ಯ ಪಕ್ಕದ ಕಂದಕಕ್ಕೆ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು ಮಂಗಳೂರಿನ ಮಧ್ಯೆ ನೆಲ್ಯಾಡಿ ಸಮೀಪದ ಎಂಜಿರ ಎಂಬಲ್ಲಿ ‌ ಜು.9 ರಂದು ಸಂಭವಿಸಿದೆ. ಹಾಸನದಿಂದ ಮಂಗಳೂರಿಗೆ ಹಣ್ಣುಗಳನ್ನು ಹೊತ್ತೊಯ್ದ ಲಾರಿ ಎಂಜಿರ ಸಮೀಪಿಸುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಇರುವ ಕಂದಕಕ್ಕೆ ಬಿದ್ದಿದೆ. ಲಾರಿಯಲ್ಲಿ ಚಾಲಕ ಹಾಗೂ ಕ್ಲೀನರ್ ಇಬ್ಬರೂ ಇದ್ದು ಅದೃಷ್ಟವಶಾತ್ ಪಾರಾಗಿದ್ದಾರೆ.

ನೆಲ್ಯಾಡಿ: ಕಂದಕಕ್ಕೆ ಬಿದ್ದ ಲಾರಿ Read More »

ಬ್ಲಡ್ ಡೋನರ್ಸ್ ಮಂಗಳೂರು ನೂತನ ಸಮಿತಿ ರಚನೆ|ಅಧ್ಯಕ್ಷರಾಗಿ ನವಾಝ್ ನರಿಂಗಾನ ಪ್ರಧಾನ ಕಾರ್ಯದರ್ಶಿಯಾಗಿ ಶಾಹುಲ್ ಹಮೀದ್ ಕಾಶಿಪಟ್ನ ಆಯ್ಕೆ

ಸಮಗ್ರ ನ್ಯೂಸ್: ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ವಾರ್ಷಿಕ ಮಹಾ ಸಭೆಯು ಡಾನ್ ಬಾಸ್ಕೊ ಹಾಲ್ ಬಲ್ಮಟ್ಟದಲ್ಲಿ ಜು. 6 ರಂದು ಸಂಸ್ಥೆಯ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಚುನಾವಣಾ ಉಸ್ತುವಾರಿಗಳಾದ ಶಾಹುಲ್ ಹಮೀದ್ ಕಾಶಿಪಟ್ನಾ ಹಾಗೂ ಫರ್ಝಾನ್ ಸಿದ್ದಕಟ್ಟೆ ಇವರ ನೇತೃತ್ವದಲ್ಲಿ ನೂತನ ಸಮೀತಿಯನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಸಿದ್ದೀಕ್ ಮಂಜೇಶ್ವರ, ಅಧ್ಯಕ್ಷರಾಗಿ ನವಾಝ್ ಕಲ್ಲರಕೋಡಿ, ಉಪಾಧ್ಯಕ್ಷರಾಗಿ ಅಶ್ರಫ್ ಉಪ್ಪಿನಂಗಡಿ, ಲತೀಫ್ ಎಚ್.ಎಸ್.ಎ ಉಪ್ಪಿನಂಗಡಿ, ಪ್ರದಾನ ಕಾರ್ಯದರ್ಶಿಯಾಗಿ

ಬ್ಲಡ್ ಡೋನರ್ಸ್ ಮಂಗಳೂರು ನೂತನ ಸಮಿತಿ ರಚನೆ|ಅಧ್ಯಕ್ಷರಾಗಿ ನವಾಝ್ ನರಿಂಗಾನ ಪ್ರಧಾನ ಕಾರ್ಯದರ್ಶಿಯಾಗಿ ಶಾಹುಲ್ ಹಮೀದ್ ಕಾಶಿಪಟ್ನ ಆಯ್ಕೆ Read More »

ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಅರಿಕೋಡಿ ಧರ್ಮದರ್ಶಿಗಳು

ಸಮಗ್ರ ನ್ಯೂಸ್ : ಬೆಳ್ತಂಗಡಿ ತಾಲೂಕಿನ ಅರಿಕೊಡಿ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಹರೀಶ್ ರವರು ಜು.8ರಂದು ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ವೇಳೆ ಸುಬ್ರಹ್ಮಣ್ಯ ರವಿ ಕಕ್ಕೆ ಪದವು ಸೇವಾ ಟ್ರಸ್ಟಿನ ಸಂಸ್ಥಾಪಕರಾದ ರವಿ ಕಕ್ಕೆ ಪದವು ಶ್ರೀ ದೇವಳಕ್ಕೆ ಬರಮಾಡಿಕೊಂಡಿದ್ದು, ಆ ಹೊತ್ತಿಗಾಗಲೆ ಸುಮಾರು ನೂರಕ್ಕೂ ಹೆಚ್ಚು ಜನ ಅರಿಕೋಡಿ ದೇವಸ್ಥಾನದ ಭಕ್ತಾದಿಗಳು ಧರ್ಮದರ್ಶಿಗಳನ್ನ ಎದುರುಗೊಂಡರು. ಶ್ರೀ ದೇವಳಕ್ಕೆ ಆಗಮಿಸಿದ ಧರ್ಮದರ್ಶಿಗಳು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಅರಿಕೋಡಿ ಧರ್ಮದರ್ಶಿಗಳು Read More »

ಎನ್ನೆಂಸಿಯ ಕಾಲೇಜು ವಾರ್ತಾಪತ್ರ “ವಿದ್ಯಾಚೇತನ” ದ ಅನಾವರಣ

ಸಮಗ್ರ ನ್ಯೂಸ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವಾರ್ತಾಪತ್ರ “ವಿದ್ಯಾಚೇತನ”ದ ಅನಾವರಣ ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ವಾರ್ತಾಪತ್ರವನ್ನು ಅನಾವರಣಗೊಳಿಸಿ ಮಾತನಾಡಿ, ಕಾಲೇಜಿನಲ್ಲಿ ಹಮ್ಮಿಕೊಳ್ಳುವ ಕಾರ್ಯಚಟುವಟಿಕೆಗಳ ದಾಖಲೆಯ ದೃಷ್ಟಿಯಲ್ಲಿ ವಾರ್ತಾಪತ್ರ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಎಂದು ಹೇಳಿ ಇದು ಹೊರಬರಲು ಶ್ರಮಿಸಿದ ಸಂಪಾದಕ ಮಂಡಳಿಯನ್ನು ಶ್ಲಾಘಿಸಿದರು. ವಾರ್ತಾಪತ್ರದ ಕಾರ್ಯನಿರ್ವಾಹಕ ಸಂಪಾದಕಿ ಡಾ. ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿ ವಾರ್ತಾಪತ್ರ ಹೊರಬರುವಲ್ಲಿ ಸಹಕರಿಸಿದ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಹೋದ್ಯೋಗಿ ಮಿತ್ರರು, ಸಂಪಾದಕ ಮಂಡಳಿಯವರನ್ನು

ಎನ್ನೆಂಸಿಯ ಕಾಲೇಜು ವಾರ್ತಾಪತ್ರ “ವಿದ್ಯಾಚೇತನ” ದ ಅನಾವರಣ Read More »

ಬಂಟ್ವಾಳ: ನೇಣಿಗೆ ಶರಣಾದ ಸರಕಾರಿ ನೌಕರ

ಸಮಗ್ರ ನ್ಯೂಸ್: ಸರಕಾರಿ ನೌಕರನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದೆ. ಮೇಗಿನ‌ಪೇಟೆ ನಿವಾಸಿ ಪ್ರಶಾಂತ್ ( 30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವಿಟ್ಲ ಸರಕಾರಿ ಆಸ್ಪತ್ರೆಯಲ್ಲಿ ಡಿ.ಗ್ರೂಪ್ ನೌಕರರನಾಗಿ ಕೆಲಸ ಮಾಡುತ್ತಿದ್ದ ಈತ ಕೌಟುಂಬಿಕ ವಿಚಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ವಿಟ್ಲ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಟ್ವಾಳ: ನೇಣಿಗೆ ಶರಣಾದ ಸರಕಾರಿ ನೌಕರ Read More »

ಭಕ್ತರು ದೂರು ನೀಡಿದ ನಾಲ್ಕೇ ಗಂಟೆಗಳಲ್ಲಿ ಆರೋಪಿಗಳು ವಶಕ್ಕೆ |ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಜೈನಮುನಿ ಕೊಲೆ

ಸಮಗ್ರ ನ್ಯೂಸ್: ಹೀರೆಕುಡಿ ನಂದಿ ಪರ್ವತ ಆಶ್ರಮದ (Nandi Parvatha Ashram) ಜೈನಮುನಿ (Jain Muni) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಟ್ಟ ಹಣ ವಾಪಸ್ ಕೇಳಿದ್ದಕ್ಕಾಗಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಈ ಕುರಿತು ಖಟಕಬಾವಿ ಗ್ರಾಮದಲ್ಲಿ ಹೇಳಿಕೆ ನೀಡಿದ ಎಸ್ಪಿ ಸಂಜೀವ್ ಪಾಟೀಲ್, ಬುಧವಾರ ರಾತ್ರಿಯಿಂದ ಸ್ವಾಮೀಜಿ ನಾಪತ್ತೆಯಾಗಿದ್ದರು ಎಂದು ಭಕ್ತರು ದೂರು ನೀಡಿದ್ದರು. ಭಕ್ತರ ದೂರಿನ ಮೇರೆಗೆ ತನಿಖೆ ಕೈಗೊಳ್ಳಲಾಗಿದೆ. ತನಿಖೆ ವೇಳೆ ಆಶ್ರಮಕ್ಕೆ ಯಾರು ಬಂದು ಹೋಗಿದ್ದರು ಎಂಬ ಬಗ್ಗೆ ವಿಚಾರಣೆ

ಭಕ್ತರು ದೂರು ನೀಡಿದ ನಾಲ್ಕೇ ಗಂಟೆಗಳಲ್ಲಿ ಆರೋಪಿಗಳು ವಶಕ್ಕೆ |ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಜೈನಮುನಿ ಕೊಲೆ Read More »

ಕರಾವಳಿಯಲ್ಲಿ ಮತ್ತೆ ಬಿರುಸು ಪಡೆದ ಮಳೆ

ಸಮಗ್ರ ನ್ಯೂಸ್ : ಕರಾವಳಿ ಭಾಗದಲ್ಲಿ ನಿನ್ನೆ ಕೊಂಚ ಬಿಡುವು ನೀಡಿದ್ದ ಮಳೆರಾಯ ಇಂದು ಮತ್ತೆ ಪ್ರಾರಂಭವಾಗಿದೆ. ಕಳೆದ ವಾರದಿಂದ ಸುರಿಯುತ್ತಿರುವ ಮಳೆ ಮತ್ತೆ ಮುಂದುವರೆದಿದೆ. ನಿನ್ನೆ ಶುಕ್ರವಾರ ಹಗಲು ಮಳೆ ಸ್ವಲ್ಪ ಮಟ್ಟಿನ ವಿರಾಮ ಪಡೆದಿತ್ತು, ಆದರೆ ರಾತ್ರಿ ಇಡೀ ಧಾರಾಕಾರ‌ ಮಳೆಯಾಗಿದ್ದು, ಶನಿವಾರವೂ ಜಿಲ್ಲೆಯಾದ್ಯಂತ ಬಿರುಸಿನ‌ ಮಳೆಯಾಗುತ್ತಿದೆ. ಮಳೆಯಿಂದಾಗಿ‌ ಮಂಗಳವಾರ ವಾರದಿಂದ ಶುಕ್ರವಾರದವರೆಗರ ಜಿಲ್ಲಾಡಳಿತವು ಶಾಲೆಗಳಿಗೆ ರಜೆ‌ ನೀಡಿತ್ತು. ಶನಿವಾರ ಶಾಲೆಗಳು ಪುನರಾರಂಭಗೊಂಡಿವೆ. ಮೂಲ್ಕಿ ತಾಲ್ಲೂಕಿನ ಕಿಲ್ಪಾಡಿ ಗ್ರಾಮದ ಕೆಂಚನಕೆರೆ ಎಂಬಲ್ಲಿ ಶುಕ್ರವಾರ ರಾತ್ರಿ

ಕರಾವಳಿಯಲ್ಲಿ ಮತ್ತೆ ಬಿರುಸು ಪಡೆದ ಮಳೆ Read More »