ಕರಾವಳಿ

ಬಂಟ್ವಾಳ: ಪೊಲೀಸರ ಮೇಲೆಯೇ ನೈತಿಕ ಪೊಲೀಸ್ ಗಿರಿ; ಆರೋಪಿಗಳ ಬಂಧನ

ಸಮಗ್ರ ನ್ಯೂಸ್: ಕರ್ತವ್ಯಕ್ಕೆ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಅವಾಚ್ಯ ಪದಗಳಿಂದ ಬೈದು, ಅವರ ಪತ್ನಿ ಜತೆ ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡಿದ ಆರೋಪದ ಮೇಲೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ತುಂಬೆ ನಿವಾಸಿಗಳಾದ ಮನೀಶ್ ಮತ್ತು ಮಂಜುನಾಥ್ ಆರೋಪಿಗಳು. ‘ಪೊಲೀಸ್‌ ಹಾಗೂ ಅವರ ಜೊತೆಗಿದ್ದ ಮಹಿಳೆಯರು ಬೇರೆಬೇರೆ ಧರ್ಮಕ್ಕೆ ಸೇರಿದವರಾಗಿರಬಹುದು ಎಂದು ಭಾವಿಸಿ, ಆರೋಪಿಗಳು ವಿಚಾರಿಸಿರುವ ಸಾಧ್ಯತೆ ಇದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗುರುವಾರ ರಾತ್ರಿ ಪೊಲೀಸ್ ಸಿಬ್ಬಂದಿ ಕುಮಾರ್ ಅವರು, ಪತ್ನಿ ಮತ್ತು ನಾದಿನಿ

ಬಂಟ್ವಾಳ: ಪೊಲೀಸರ ಮೇಲೆಯೇ ನೈತಿಕ ಪೊಲೀಸ್ ಗಿರಿ; ಆರೋಪಿಗಳ ಬಂಧನ Read More »

ಸೈನ್ಯ ಸಮಾಜದಲ್ಲಿ ನನ್ನನ್ನು ಗೌರವಿಸಲ್ಪಡುತ್ತಿದೆ: ನಿವೃತ್ತ ಯೋಧ ಉಮೇಶ್ ಕೈರಂಗಳ

ಸಮಗ್ರ ನ್ಯೂಸ್: ಸೇನೆಗೆ ಸೇರಬೇಕು ಎಂಬ ಆಕಾಂಕ್ಷೆ ಮೊಳಕೆಯೊಡೆದದ್ದು ನನ್ನ ಪ್ರೌಢಶಾಲಾ ದಿನಗಳಲ್ಲಿ. ಅಂದು ತರಗತಿಯಲ್ಲಿ ಅಧ್ಯಾಪಕರು ಸೇನೆಗೆ ಸೇರುವುದರಿಂದ ಆಗುವ ಪ್ರಯೋಜನಗಳು ಮತ್ತು ಗೌರವಗಳ ಬಗ್ಗೆ ವಿವರಿಸಿದ್ದು ಮತ್ತು ಸೇನೆಗೆ ಸೇರಿ ಗೌರವ ಪಡೆಯುತ್ತಿದ್ದ ನನ್ನ ಸಂಬಂಧಿಗಳನ್ನು ನೋಡಿ ನಾನು ಸೈನ್ಯವನ್ನು ಸೇರಿದೆ. ಇದರಿಂದಾಗಿ ನಾನು ಇವತ್ತು ಸಮಾಜದಿಂದ ಗೌರವಿಸಲ್ಪಡುತ್ತಿದ್ದೇನೆ ಎಂದು ನಿವೃತ್ತ ಯೋಧ ಉಮೇಶ್ ಕೈರಂಗಳ ಅವರು ಹೇಳಿದರು. ಅವರು ಜೇಸಿಐ ಜೋಡುಮಾರ್ಗ ನೇತ್ರಾವತಿಯ ಜ್ಯೂನಿಯರ್ ಜೇಸಿ ವಿಭಾಗ, ಅಳುಪ ಸಮಾಜ ವಿಜ್ಞಾನ ಸಂಘ

ಸೈನ್ಯ ಸಮಾಜದಲ್ಲಿ ನನ್ನನ್ನು ಗೌರವಿಸಲ್ಪಡುತ್ತಿದೆ: ನಿವೃತ್ತ ಯೋಧ ಉಮೇಶ್ ಕೈರಂಗಳ Read More »

ಉಪವಲಯ ಅರಣ್ಯಾಧಿಕಾರಿ ಸುಭಾಷ್ ಬಿ. ನಿಧನ

ಸಮಗ್ರ ನ್ಯೂಸ್: ಕಡಬ ತಾಲೂಕಿನ ನೆಟ್ಟಣದ ಕೇಂದ್ರೀಯ ಮರಗಳ ಸಂಗ್ರಹಾಲಯದಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿದ್ದ ಮೂಲತಃ ಕಾಸರಗೋಡು ಸಮೀಪದ ಹೊಸದುರ್ಗ ನಿವಾಸಿ ರಾಮನಾಥ ಅರಳೀಕಟ್ಟೆ ಅವರ ಪುತ್ರ ಸುಭಾಷ್ ಬಿ. (55) ಅವರು ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ನಿಧನ ಹೊಂದಿದರು. ಮೃತರು ಪತ್ನಿ, ಒರ್ವ ಪುತ್ರ, ಒರ್ವ ಪುತ್ರಿಯನ್ನು ಅಗಲಿದ್ದಾರೆ. ಸುಭಾಷ್ ಅವರು 1990ರಲ್ಲಿ ಬೆಳ್ತಂಗಡಿಯಲ್ಲಿ ಅರಣ್ಯ ವೀಕ್ಷಕರಾಗಿ ಇಲಾಖಾ ಸೇವೆಗೆ ಸೇರಿದ್ದರು. ಬೆಳ್ತಂಗಡಿಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ ಬಳಿಕ 2021ರಲ್ಲಿ ಉಪ

ಉಪವಲಯ ಅರಣ್ಯಾಧಿಕಾರಿ ಸುಭಾಷ್ ಬಿ. ನಿಧನ Read More »

ಐವರ್ನಾಡು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಶಿಕ್ಷಕರ ಮಂಜೂರಾತಿ ಪತ್ರ ವಿತರಣೆ

ಸಮಗ್ರ ನ್ಯೂಸ್:ದರ್ಖಾಸ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜ್ಞಾನದೀಪ ಶಿಕ್ಷಕರ ನೇಮಕಾತಿ ಮಂಜೂರಾಗಿದ್ದು, ವಲಯ ಮೇಲ್ವಿಚಾರಕರಾದ ಗೋಪಾಲಕೃಷ್ಣ ಅವರು ಶಿಕ್ಷಕರ ಮಂಜೂರಾತಿ ಪತ್ರವನ್ನು ಜ್ಞಾನದೀಪ ಶಿಕ್ಷಕಿಯಾದ ಶಮೀಮಾರವರಿಗೆ ವಿತರಿಸಿದರು. ಈ ಸಂಧರ್ಭ ಶಾಲೆಯ ಮುಖ್ಯ ಗುರುಗಳಾದ ಪಲ್ಲವಿ, ಹಾಗೂ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಯಶೋಧರವರು ಉಪಸ್ಥಿತರಿದ್ದರು.

ಐವರ್ನಾಡು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಶಿಕ್ಷಕರ ಮಂಜೂರಾತಿ ಪತ್ರ ವಿತರಣೆ Read More »

ಪುತ್ತೂರು: ಸವಣೂರು ಸೀತಾರಾಮ ರೈ ಸಾರಥ್ಯದಲ್ಲಿ ಜು.29 ಆಟಿಡೊಂಜಿ ದಿನ| 49 ಬಗೆಯ ತಿನಿಸುಗಳು

ಸಮಗ್ರ ನ್ಯೂಸ್: ಸವಣೂರು ಸೀತರಾಮಯ್ಯ ರೈ ಅವರ ಸಾರಥ್ಯದಲ್ಲಿ ಜು. 29ರಂದು ಪುತ್ತೂರಿನ ಪ್ರಶಾಂತ್ ಮಹಲ್ ನಲ್ಲಿ ಸಂಭ್ರಮದ ಆಟಿ ಉತ್ಸವ ನಡೆಯಲಿದೆ. ತುಳು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ, ಆಟಿಯ ಆಟಗಳು, ಸಭಾ ಕಾರ್ಯಕ್ರಮಗಳು ಶನಿವಾರ ಬೆಳಗ್ಗೆ 10 ಗಂಟೆಯಿಂದ 4ಗಂಟೆಯವರೆಗೆ ನಡೆಯಲಿದೆ. ಆಟಿ ಉತ್ಸವದಲ್ಲಿ ತುಳುವರ ಆಟಿಯ ವಿವಿಧ ಬಗೆಯ ಅಡುಗೆಗಳ ಮಹಾಪೂರವೇ ಪುತ್ತೂರಿನ ದರ್ಬೆಯಲ್ಲಿರುವ ಸನ್ನಿಧಿ ಸಭಾಂಗಣದ ಪ್ರಶಾಂತ್ ಮಹಲ್ ನಲ್ಲಿ ವಿಜೃಂಭನೆಯಿಂದ ನಡೆಯಲಿದೆ. ಆಟಿಯ ಸ್ಪೆಷಲ್ ಬಂಜರ ವನಸ್ ನ ಕೂಪನ್ ಹೋಟೆಲ್

ಪುತ್ತೂರು: ಸವಣೂರು ಸೀತಾರಾಮ ರೈ ಸಾರಥ್ಯದಲ್ಲಿ ಜು.29 ಆಟಿಡೊಂಜಿ ದಿನ| 49 ಬಗೆಯ ತಿನಿಸುಗಳು Read More »

ಸೌಜನ್ಯ ಪ್ರಕರಣದ ಕುರಿತ ತನಿಖೆಗೆ ಮತ್ತೆ ಹೋರಾಟದ ಅಸಲಿಯತ್ತೇನು? – ವಿವೇಕಾನಂದ ಎಚ್.ಕೆ

ಸಮಗ್ರ ವಿಶೇಷ: ” ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?ಎದೆಯ ದನಿಗೂ ಮಿಗಿಲು‌ ಶಾಸ್ತ್ರವಿಹುದೇನು ” ಎಂಬ ರಾಷ್ಟ್ರಕವಿ ಕುವೆಂಪು ಅವರ ಮಾತುಗಳನ್ನು ನೆನೆಯುತ್ತಾ…. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೌಜನ್ಯ ಕೊಲೆ ಪ್ರಕರಣದ ವಿಶೇಷ ಮರು ತನಿಖೆಗೆ ಒತ್ತಾಯಿಸಿ ಅನೇಕ ಪ್ರಗತಿಪರ ಸಂಘಟನೆಗಳು ಇಂದು ಪ್ರತಿಭಟನೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುವ ಹೋರಾಟ ಹಮ್ಮಿಕೊಂಡಿದ್ದಾರೆ…… ಏಕೆ ಈ ಹೋರಾಟ ? ಇದರ ಅವಶ್ಯಕತೆ ಇದೆಯೇ ? ಇದು ದುರುದ್ದೇಶ ಪೂರಿತವೇ ? ರಾಜ್ಯ ಸರ್ಕಾರದ ಎಸ್

ಸೌಜನ್ಯ ಪ್ರಕರಣದ ಕುರಿತ ತನಿಖೆಗೆ ಮತ್ತೆ ಹೋರಾಟದ ಅಸಲಿಯತ್ತೇನು? – ವಿವೇಕಾನಂದ ಎಚ್.ಕೆ Read More »

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ| ದೂರು ಮರುದಾಖಲಿಸಿ‌ ತನಿಖೆ ನಡೆಸಿ – ಒಡನಾಡಿ ಸಂಸ್ಥೆಯಿಂದ ಗೃಹಸಚಿವರಿಗೆ ಪತ್ರ

ಸಮಗ್ರ ನ್ಯೂಸ್: ‘2012ರಲ್ಲಿ ನಡೆದ, ಮಂಗಳೂರಿನ ಬಾಲಕಿ ಸೌಜನ್ಯ ಅಪಹರಣ, ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣವನ್ನು ಪೋಷಕರ ದೂರಿನ ಅನ್ವಯ ಮರು ದಾಖಲಿಸಿಕೊಂಡು, ನಿವೃತ್ತ ನ್ಯಾಯಾಧೀಶರ ನಿರ್ದೇಶನದಲ್ಲಿ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು’ ಎಂದು ಕೋರಿ ಇಲ್ಲಿನ ಒಡನಾಡಿ ಸೇವಾ ಸಂಸ್ಥೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಬುಧವಾರ ಪತ್ರ ಬರೆದಿದೆ. ‘ಬಾಲಕಿಯ ಪೋಷಕರು ಹಾಗೂ ಧರ್ಮಸ್ಥಳದ ನಾಗರಿಕರು ಕೆಲವು ವ್ಯಕ್ತಿಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದರೂ ಅತ್ಯಾಚಾರವಾದ ಸ್ಥಳದಲ್ಲಿ ದ್ವಿಚಕ್ರವಾಹನಗಳು

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ| ದೂರು ಮರುದಾಖಲಿಸಿ‌ ತನಿಖೆ ನಡೆಸಿ – ಒಡನಾಡಿ ಸಂಸ್ಥೆಯಿಂದ ಗೃಹಸಚಿವರಿಗೆ ಪತ್ರ Read More »

ಪುತ್ತೂರು: ಕಣಿಲೆ ತರಲು ಹೋದ ವ್ಯಕ್ತಿ ಶವವಾಗಿ ಪತ್ತೆ

ಸಮಗ್ರ ನ್ಯೂಸ್: ಪುತ್ತೂರಿನ ಪಾಂಗಳಾಯಿ ಕಾಲುವೆ ಬಳಿಯಲ್ಲಿ ಕೊಳೆತ ಶವವೊಂದು ಪತ್ತೆಯಾಗಿದ್ದು. ಸದ್ಯ ಕಾಲುವೆಯಿಂದ ಶವವನ್ನು ಮೇಲಕ್ಕೆತ್ತಿರುವ ಪುತ್ತೂರು ನಗರ ಪೊಲೀಸರು ಅದನ್ನು ಶವಗಾರಕ್ಕೆ ವರ್ಗಾಯಿಸಿದ್ದಾರೆ. ಪುತ್ತೂರು ಪಾಂಗಳಾಯಿ ಪರಿಸರದಲ್ಲಿ ಬಿದಿರಿನ ಮೆಳೆಯಲ್ಲಿ ಈ ಮೃತ ದೇಹ ಸಿಲುಕಿ ಹಾಕಿಕೊಂಡಿತ್ತು. ಸ್ಥಳೀಯರು ಮೀನು ಹಿಡಿಯಲೆಂದು ತೋಡಿಗೆ ಹೋಗುವ ಸಂದರ್ಭದಲ್ಲಿ ದುರ್ನಾತ ಬಂದಿದ್ದು, ಹುಡುಕಾಟದ ವೇಳೆ ಯುವಕರಿಗೆ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಂತರ ಕೊಳೆತ ಅಪರಿಚಿತ ದೇಹ ಪತ್ತೆಯಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬುತ್ತಿದ್ದಂತೆ

ಪುತ್ತೂರು: ಕಣಿಲೆ ತರಲು ಹೋದ ವ್ಯಕ್ತಿ ಶವವಾಗಿ ಪತ್ತೆ Read More »

ಮಂಗಳೂರು: ಉಪನ್ಯಾಸಕನಿಂದ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ | ಆರೋಪಿಗೆ ಜೀವಾವಧಿ ಶಿಕ್ಷೆ

ಸಮಗ್ರ ನ್ಯೂಸ್: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯೊಂದಿಗೆ ಉಪನ್ಯಾಸಕನೋರ್ವನು ಅನೈಸರ್ಗಿಕ ರೀತಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿ ದೌರ್ಜನ್ಯ ಎಸಗಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅಪರಾಧಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್ ಟಿಎಸ್‌ಸಿ-1) ಜೀವಾವಧಿ ಶಿಕ್ಷೆ ವಿಧಿಸಿದೆ. ಆರೋಪಿ ಕುಳಾಯಿಯ ಪೃಥ್ವಿರಾಜ್‌ (33) ಈತ ಎಸೆಸ್ಸೆಲ್ಸಿ ವಿದ್ಯಾರ್ಥಿಯೋರ್ವನಿಗೆ 2014ರ ಆ. 1ರಿಂದ 2016ರ ಸೆ. 2ರ ವರೆಗೆ ಅನೈಸರ್ಗಿಕ ರೀತಿಯ ಲೈಂಗಿಕ ಕ್ರಿಯೆ ಮೂಲಕ ದೌರ್ಜನ್ಯ ಎಸಗಿದ್ದ. ಈ ಬಗ್ಗೆ ಸುರತ್ಕಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಪರಾಧಿ

ಮಂಗಳೂರು: ಉಪನ್ಯಾಸಕನಿಂದ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ | ಆರೋಪಿಗೆ ಜೀವಾವಧಿ ಶಿಕ್ಷೆ Read More »

ಭಾರೀ ಮಳೆ ಹಿನ್ನೆಲೆ ದ. ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್| ಇಂದು (ಜು.27) ಶಾಲೆಗಳಿಗೆ ರಜೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಕೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ, ಸರಕಾರಿ, ಅನುದಾನಿತ ಹಾಗೂ ಖಾಸಗಿ ವಿದ್ಯಾಸಂಸ್ಥೆಗಳಿಗೆ ಜುಲೈ 27 ರಂದು ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿನ ಪದವಿಪೂರ್ವ, ಪದವಿ , ಸ್ನಾತಕೋತ್ತರ, ಇಂಜಿನಿಯರಿಂಗ್‌ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ.

ಭಾರೀ ಮಳೆ ಹಿನ್ನೆಲೆ ದ. ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್| ಇಂದು (ಜು.27) ಶಾಲೆಗಳಿಗೆ ರಜೆ Read More »