ಕರಾವಳಿ

ಸುಳ್ಯ: ತಾಕತ್ತಿದ್ದರೆ ನನ್ನನ್ನು ಗಡಿಪಾರು ಮಾಡಿ – ವಜ್ರದೇಹಿ ಶ್ರೀ

ಸಮಗ್ರ ನ್ಯೂಸ್: ಹಿಂದೂ ಕಾರ್ಯಕರ್ತರ ಮೇಲೆ ಗಡಿಪಾರು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ವಿರುದ್ಧ ಮಂಗಳೂರು ಗುರುಪುರ ಮಠದ ವಜ್ರದೇಹಿ ಶ್ರೀ ಸುಳ್ಯದಲ್ಲಿ ಗುಡುಗಿದ್ದಾರೆ. ಸುಳ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ, ಮಂಗಳೂರಿನ ಬಜರಂಗದಳದ ಕೆಲವು ಕಾರ್ಯಕರ್ತರನ್ನು ಗಡಿಪಾರು ಮಾಡಿರುವ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಕತ್ತಿನ ಸವಾಲೊಂದನ್ನು ಕೂಡಾ ಹಾಕಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ತಾಕತ್ತಿದ್ರೆ ನನ್ನನ್ನು ಗಡಿಪಾರು ಮಾಡಲಿ. ಜಮೀರ್ ಅಹ್ಮದ್ ಖಾನ್‌ ಅವರನ್ನು ಗಡಿಪಾರು ಮಾಡಲಿ. ಜಮೀರ್ ಅವರನ್ನು ಪಾಕಿಸ್ತಾನಕ್ಕೆ ಗಡಿಪಾರು

ಸುಳ್ಯ: ತಾಕತ್ತಿದ್ದರೆ ನನ್ನನ್ನು ಗಡಿಪಾರು ಮಾಡಿ – ವಜ್ರದೇಹಿ ಶ್ರೀ Read More »

ಕುಕ್ಕೆ ಸುಬ್ರಹ್ಮಣ್ಯ: ಕೆಎಸ್ಎಸ್ ಕಾಲೇಜು ವಿದ್ಯಾರ್ಥಿನಿ ರಾಷ್ಟ್ರೀಯ ಭಾವೈಕ್ಯತೆ ಶಿಬಿರಕ್ಕೆ ಆಯ್ಕೆ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸ್ವಯಂ ಸೇವಕಿ ಕಲ್ಪನಾ ಅವರು ರಾಷ್ಟ್ರೀಯ ಭಾವೈಕ್ಯತೆ ಶಿಬಿರಕ್ಕೆ ಆಯ್ಕೆ. ದ್ವಿತೀಯ ಬಿಎ ವ್ಯಾಸಂಗ ಮಾಡುತ್ತಿರುವ ಕಲ್ಪನಾ ಅವರು ನ. 22 ರಿಂದ 28ರ ವರೆಗೆ ಕಾರವಾರದ ಕೂಡಿಬಾಗ್ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಕೇಂದ್ರದಲ್ಲಿ ನಡೆಯಲಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ: ಕೆಎಸ್ಎಸ್ ಕಾಲೇಜು ವಿದ್ಯಾರ್ಥಿನಿ ರಾಷ್ಟ್ರೀಯ ಭಾವೈಕ್ಯತೆ ಶಿಬಿರಕ್ಕೆ ಆಯ್ಕೆ Read More »

ಬೆಳ್ತಂಗಡಿ: ತಡರಾತ್ರಿ ಮನೆ ಬಾಗಿಲು ತಟ್ಟಿದ್ರಾ ನಕ್ಸಲರು? ಅಸಲಿ ಕಥೆ ಇಲ್ಲಿದೆ ನೋಡಿ…

ಸಮಗ್ರ ನ್ಯೂಸ್: ನಕ್ಸಲ್​ ಪೀಡಿತ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಅರಣ್ಯ ವ್ಯಾಪ್ತಿಯ ಕುತ್ಲೂರು ಗ್ರಾಮದ ಒಂಟಿ ಮನೆಯೊಂದರ ಬಾಗಿಲನ್ನು ನಿನ್ನೆ (ನ.21) ರಾತ್ರಿ ಐದು ಜನ ಅಪರಿಚಿತರ ತಂಡ ತಟ್ಟಿದ ಘಟನೆ ನಡೆದಿದೆ. ಇದು ಬಹಳ ಚರ್ಚೆಗೆ ಗ್ರಾಸವಾಗಿದ್ದು, ಇದೀಗ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸ್ಪಷ್ಟನೆ ನೀಡಿದ್ದಾರೆ. ‘ಜಮೀನು ರಿಜಿಸ್ಟರ್ ವಿಚಾರದಲ್ಲಿ ಹಣದ ವ್ಯತ್ಯಾಸದಿಂದ ದೂರು ಹಿನ್ನಲೆ ಆರೋಪಿ ಬೆಳಗ್ಗೆ ಸಿಗಲ್ಲವೆಂದು ರಾತ್ರಿಯೇ ಮೂಡಬಿದ್ರೆ ಪೊಲೀಸರು ಹಣ

ಬೆಳ್ತಂಗಡಿ: ತಡರಾತ್ರಿ ಮನೆ ಬಾಗಿಲು ತಟ್ಟಿದ್ರಾ ನಕ್ಸಲರು? ಅಸಲಿ ಕಥೆ ಇಲ್ಲಿದೆ ನೋಡಿ… Read More »

ಬಂಟ್ವಾಳ: ಮಹಿಳೆ ಸಾವು|ಇದು ಹೃದಯಾಘಾತ ಅಲ್ಲ ಕೊಲೆ?

ಸಮಗ್ರ ನ್ಯೂಸ್: ಬಂಟ್ವಾಳ ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಇದು ಸಂಶಯಾಸ್ಪದ ಸಾವು ಈ ಬಗ್ಗೆ ತನಿಖೆಯಾಗಬೇಕು ಎಂದು ದೂರು ದಾಖಲಾಗಿದೆ. ಬಂಟ್ವಾಳ, ಮೊಡಂಕಾಪು ರಾಜೀವಪಲ್ಕೆ ನಿವಾಸಿ ಯೋಗೀಶ್ ಅವರ ಪತ್ನಿ ಬೇಬಿ ಅವರು ಸಾವನ್ನಪ್ಪಿದ ಮಹಿಳೆ. ರಾತ್ರಿ ಸುಮಾರು 2 ಗಂಟೆ ವೇಳೆ ಇವರಿಗೆ ಹೃದಯ ನೋವು ಕಾಣಿಸಿಕೊಂಡಿದ್ದು,ಅಸ್ತಮಾ ರೋಗದಿಂದ ಬಳಲುತ್ತಿದ್ದರು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ಅವರು ಮನೆಯವರಿಗೆ ತಿಳಿಸಿದ್ದಾರೆ. ಇದೊಂದು ವ್ಯವಸ್ಥಿತವಾದ ಕೊಲೆ:

ಬಂಟ್ವಾಳ: ಮಹಿಳೆ ಸಾವು|ಇದು ಹೃದಯಾಘಾತ ಅಲ್ಲ ಕೊಲೆ? Read More »

ಮಂಗಳೂರು: ಗ್ರಾಹಕರ ಪರ ಆದೇಶ ಪಾಲಿಸದ ಐವರು ಬಿಲ್ಡರ್ ಗಳಿಗೆ ಜೈಲುಶಿಕ್ಷೆ

ಸಮಗ್ರ ನ್ಯೂಸ್: ಗ್ರಾಹಕರ ಪರವಾಗಿ ನೀಡಿದ್ದ ಆದೇಶವನ್ನು ಪಾಲಿಸದ ಐವರು ಬಿಲ್ಡರ್‌ಗಳು ತಲಾ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕು ಮತ್ತು ತಲಾ ₹ 1 ಲಕ್ಷ ದಂಡ ಪಾವತಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶ ಮಾಡಿದೆ. ಮಂಗಳೂರು ನಗರದ ಮಾರಿಯನ್ ಇನ್ಫ್ರಾಸ್ಟ್ರಕ್ಚರ್ಸ್‌ ಸಂಸ್ಥೆಯ ಪಾಲುದಾರರಾಗಿರುವ ಉಜ್ವಲ ಡಿಸೋಜ ಮತ್ತು ನವೀನ್ ಕಾರ್ಡೋಜ ಹಾಗೂ ಅವರೊಂದಿಗೆ ಅಭಿವೃದ್ಧಿ ಪಾಲುದಾರಾರಾಗಿರುವ ವಿಲಿಯಂ ಸಲ್ದಾನ, ಗಾಯತ್ರಿ ಪೈ ಬಿ., ಮತ್ತು ಲ್ಯೂಸಿ ಸಲ್ದಾನ

ಮಂಗಳೂರು: ಗ್ರಾಹಕರ ಪರ ಆದೇಶ ಪಾಲಿಸದ ಐವರು ಬಿಲ್ಡರ್ ಗಳಿಗೆ ಜೈಲುಶಿಕ್ಷೆ Read More »

ಸುಳ್ಯ: ಕಲ್ಕಿ ಮೊಬೈಲ್ ನಲ್ಲಿ ಕೊನೆಯ ಲಕ್ಕಿ ಕೂಪನ್ ಡ್ರಾ

ಸಮಗ್ರ ನ್ಯೂಸ್: ಸುಳ್ಯದ ಪ್ರಭು ಬುಕ್ ಸ್ಟಾಲ್ ಎದುರಿನ ಕಾಮತ್ ಕಾಂಪ್ಲೆಕ್ಸ್ ನಲ್ಲಿರುವ ಕಲ್ಕಿ ಮೊಬೈಲ್ ನಲ್ಲಿ ದಸರಾ ಮತ್ತು ದೀಪಾವಳಿ ಪ್ರಯುಕ್ತ ಏರ್ಪಡಿಸಿದ ಲಕ್ಕಿ ಕೂಪನ್ ನ ಸ್ಮಾರ್ಟ್ ವಾಚ್ ನ ಕೊನೆಯ ಡ್ರಾವು ನ.20 ರಂದು ನಡೆಯಿತು. ಜ್ಯೋತಿಷ್ಯ ಭೀಮರಾವ್ ವಾಷ್ಠರ್ ನೆರವೇರಿಸಿದರು. ಸಂಸ್ಥೆಯ ಮಾಲಕ ಕೃಷ್ಣಪ್ರಸಾದ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸುಳ್ಯ: ಕಲ್ಕಿ ಮೊಬೈಲ್ ನಲ್ಲಿ ಕೊನೆಯ ಲಕ್ಕಿ ಕೂಪನ್ ಡ್ರಾ Read More »

ಸುಳ್ಯ: ಮದ್ಯದ ನಶೆಯಲ್ಲಿ ಹೆತ್ತವರ ಮೇಲೆ ಕತ್ತಿ ಬೀಸಿದ ಪುತ್ರ| ಆರೋಪಿಯನ್ನು ಹೆಡೆಮುರಿ ಕಟ್ಟಿದ ಪೊಲೀಸರು

ಸಮಗ್ರ ನ್ಯೂಸ್: ಕುಡಿತದ ನಶೆಯಲ್ಲಿ ಹೆತ್ತ ತಂದೆ ತಾಯಿ ಮೇಲೆ‌ ಮಗನೋರ್ವ ಕತ್ತಿಬೀಸಿದ ಘಟನೆ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಪಣೆಯಲ್ಲಿ ನ.20ರ ರಾತ್ರಿ ನಡೆದಿದೆ. ಕೊಡಿಯಾಲ ನಿವಾಸಿಗಳಾದ ಮಂಜುನಾಥ್, ಧರ್ಮಾವತಿ ಗಾಯಗೊಂಡ ದಂಪತಿಗಳು ಎಂದು ತಿಳಿದುಬಂದಿದೆ. ಮಗ ದೇವಿ ಪ್ರಸಾದ್ ಎಂಬಾತ ಕುಡಿದ ಮತ್ತಿನಿಂದ ಜಾಗದ ವಿಚಾರವಾಗಿ ತಕರಾರು ಎದ್ದು ತಂದೆ ತಾಯಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಮಗನನ್ನು ಪೊಲೀಸರು ಬಂದಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ತಂದೆ-ತಾಯಿಯನ್ನು ಮಂಗಳೂರಿನ

ಸುಳ್ಯ: ಮದ್ಯದ ನಶೆಯಲ್ಲಿ ಹೆತ್ತವರ ಮೇಲೆ ಕತ್ತಿ ಬೀಸಿದ ಪುತ್ರ| ಆರೋಪಿಯನ್ನು ಹೆಡೆಮುರಿ ಕಟ್ಟಿದ ಪೊಲೀಸರು Read More »

ಪುತ್ತೂರು:ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಣೆ

ಸಮಗ್ರ ನ್ಯೂಸ್: ಬನ್ನೂರು ಕೃಷ್ಣ ನಗರ ಅಲುಂಬುಡ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ. 15ರಂದು ಮಕ್ಕಳ ದಿನಾಚರಣೆಯನ್ನು ಆಚರಸಲಾಯಿತು. ನಂತರ ಆಟೋಟ ಸ್ಪರ್ಧೆಗಳಿಂದ ಆರಂಭಗೊಂಡು , ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಹುಭಾಷಾ ಮಕ್ಕಳ ಸಾಹಿತಿ ಉಲ್ಲಾಸಣ್ಣ (ಯು.ಕೆ.ಪೈ) ಅವರು ಪಾಲ್ಗೊಂಡು ಕಾರ್ಯಕ್ರಮದ ಔಚಿತ್ಯದ ಬಗ್ಗೆ ತಿಳಿಸಿದರು ಹಾಗೆಯೇ ಮಕ್ಕಳೊಂದಿಗೆ ಮಕ್ಕಳಾಗಿ ಶಿಶು ಗೀತೆಗಳನ್ನು ಮಕ್ಕಳಿಗೆ ಅಭಿನಯದ ಮೂಲಕ ಹೇಳಿಕೊಟ್ಟರು. ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ವಹಿಸಿದ್ದರು. ಮಕ್ಕಳ

ಪುತ್ತೂರು:ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಣೆ Read More »

ಉಬರಡ್ಕ: ಸೌಜನ್ಯ ನ್ಯಾಯಕ್ಕಾಗಿ ಬೃಹತ್ ಪ್ರತಿಭಟನೆ ಆರಂಭ

ಸಮಗ್ರ ನ್ಯೂಸ್: ಸೌಜನ್ಯ ಪರ ಹೋರಾಟ ಸಮಿತಿ ಉಬರಡ್ಕ ಮಿತ್ತೂರು ಆಶ್ರಯದಲ್ಲಿ ಸೌಜನ್ಯ ನ್ಯಾಯಕ್ಕಾಗಿ ಬೃಹತ್ ಪ್ರತಿಭಟನಾ ಸಭೆ ಉಬರಡ್ಕದಲ್ಲಿ ನ. 20ರಂದು ನಡೆಯಿತು. ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಉದ್ಘಾಟಿಸಿದರು. ತುಳು ಜಾನಪದ ವಾಗ್ಮಿ ತಮ್ಮಣ್ಣ ಶೆಟ್ಟಿ, ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್, ಸೌಜನ್ಯ ತಾಯಿ ಕುಸುಮಾವತಿ, ನ್ಯಾಯವಾದಿ ಮೋಹಿತ್ ಕುಮಾರ್, ಸಾಮಾಜಿಕ ಕಾರ್ಯಕರ್ತೆ ಪ್ರಸನ್ನರವಿ, ಗೌಡ ಯುವ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ವೆಂಕಟ್ರಮಣ ಗೌಡ ಕೆದಂಬಾಡಿ ಮತ್ತಿತರರು ಉಪಸ್ಥಿತರಿದ್ದರು. ಉಬರಡ್ಕ ಮಿತ್ತೂರು

ಉಬರಡ್ಕ: ಸೌಜನ್ಯ ನ್ಯಾಯಕ್ಕಾಗಿ ಬೃಹತ್ ಪ್ರತಿಭಟನೆ ಆರಂಭ Read More »

ಬೆಳ್ತಂಗಡಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ| ಬಿಜೆಪಿ‌ ಕಾರ್ಯಕರ್ತನ ಮೇಲೆ‌ ಬಿತ್ತು ಕೇಸ್

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ ಆಡಿಯೋ ವೈರಲ್ ಅಗಿದ್ದು, ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿರುವ ದೂರಿನಂತೆ ರಜಿತ್ ಕೊಕ್ಕಡ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಕೋರಿಗದ್ದೆ ನಿವಾಸಿ, ಸೆಲೂನ್ ನಲ್ಲಿ ಕೆಲಸ ಮಾಡುವ ಬಿಜೆಪಿ ಕಾರ್ಯಕರ್ತ ರಜಿತ್ ಕೊಕ್ಕಡ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಸಿದ್ದರಾಮಯ್ಯ ಬಗ್ಗೆ ಅಶ್ಲೀಲವಾಗಿ ನಿಂದಿಸಿ ಮಾತನಾಡಿರುವ ಬಗ್ಗೆ

ಬೆಳ್ತಂಗಡಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ| ಬಿಜೆಪಿ‌ ಕಾರ್ಯಕರ್ತನ ಮೇಲೆ‌ ಬಿತ್ತು ಕೇಸ್ Read More »