ಕರಾವಳಿ

ಮಂಗಳೂರು: ಭಿನ್ನಕೋಮಿನ ಜೋಡಿ ತಡೆದ‌ ಪ್ರಕರಣ| ಇಬ್ಬರು ಆರೋಪಿಗಳ ಬಂಧನ

ಸಮಗ್ರ ನ್ಯೂಸ್: ಬೈಕ್‌ನಲ್ಲಿ ಹೋಗುತ್ತಿದ್ದ ಭಿನ್ನ ಕೋಮಿನ ಯುವಕ ಮತ್ತು ಯುವತಿಯನ್ನು ತಡೆದು ತರಾಟೆಗೆ ತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಕ್ಷಯ್‌ ರಾವ್‌ ಮತ್ತು ಶಿಬಿನ್‌ ಬಂಧಿತರು. ಸೋಮವಾರ ರಾತ್ರಿ 8 ಗಂಟೆಯ ಸುಮಾರಿಗೆ ನಗರದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ಯುವತಿಯನ್ನು ಆರೋಪಿಗಳು ತಡೆದು ಪ್ರಶ್ನಿಸಿದ್ದರು. ಆಗ ಪೊಲೀಸರು ಬಂದು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಈ ಕುರಿತಂತೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಭಿನ್ನಕೋಮಿನ ಜೋಡಿ ತಡೆದ‌ ಪ್ರಕರಣ| ಇಬ್ಬರು ಆರೋಪಿಗಳ ಬಂಧನ Read More »

ಸುಳ್ಯ: ಅಮಲಿನ ನಶೆಯಲ್ಲಿ ರಾಂಗ್ ಡ್ರೈವ್| ಸರ್ಕಾರಿ ವಾಹನ ತಡೆದು, ಅಧಿಕಾರಿಯ ತರಾಟೆಗೈದ ಸಾರ್ವಜನಿಕರು

ಸಮಗ್ರ ನ್ಯೂಸ್: ಸರ್ಕಾರಿ ಅಧಿಕಾರಿಯೊಬ್ಬರು ಮದ್ಯದ ನಶೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಸಾರ್ವಜನಿಕರಿಂದ ಬೈಗುಳ ತಿಂದ ಘಟನೆ ಸೋಮವಾರ(ನ.27) ರಾತ್ರಿ ನಡೆದಿದೆ. ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ನವೀನ್ ಕುಮಾರ್ ಎಂಬವರು ಕಂಠಪೂರ್ತಿ ಕುಡಿದ ಮದ್ಯದ ಮತ್ತಿನಲ್ಲಿಸುಳ್ಯ ಅರಂಬೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ, ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಹಲವಾರು ವಾಹನಗಳಿಗೆ ಡಿಕ್ಕಿ ಆಗುವಂತಹ ಸಂಭಾವ್ಯ ದುರಂತವೊಂದು ಸಾರ್ವಜನಿಕರ ಸಮಯಪ್ರಜ್ಞೆಯಿಂದ ತಪ್ಪಿದೆ. ರಸ್ತೆಯುದ್ದಕ್ಕೂ ವಿರುದ್ಧ ದಿಕ್ಕಿನಲ್ಲಿ, ಅಡ್ಡಾದಿಡ್ಡಿ ವಾಹನ ಚಲಾಯಿಸಿ ಅಪಘಾತ ಸಂಭವಿಸುವ

ಸುಳ್ಯ: ಅಮಲಿನ ನಶೆಯಲ್ಲಿ ರಾಂಗ್ ಡ್ರೈವ್| ಸರ್ಕಾರಿ ವಾಹನ ತಡೆದು, ಅಧಿಕಾರಿಯ ತರಾಟೆಗೈದ ಸಾರ್ವಜನಿಕರು Read More »

ಕುಕ್ಕೆ ಸುಬ್ರಹ್ಮಣ್ಯ: ಹೃದಯಾಘಾತದಿಂದ ಯಾತ್ರಾರ್ಥಿ ಮಹಿಳೆ ಸಾವು

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದಿದ್ದ ಬೆಂಗಳೂರಿನ ಮಹಿಳೆಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ಬೆಂಗಳೂರಿನ ಎಂವಿ ಗಾರ್ಡನ್‌ ನಿವಾಸಿ ಶಿವಕುಮಾರ್‌ ಅವರ ಪತ್ನಿ ಲಕ್ಷ್ಮೀ (32) ಮೃತರು. ಶಿವಕುಮಾರ್‌ ಅವರು ಪತ್ನಿ, ಮಕ್ಕಳೊಂದಿಗೆ ಸಕಲೇಶಪುರದಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ವೇಳೆ ಲಕ್ಷ್ಮೀ ಹಾಗೂ ಮಕ್ಕಳು ಸಂಬಂಧಿಕರ ಜತೆ ಧರ್ಮಸ್ಥಳಕ್ಕೆ ತೆರಳಿ ರವಿವಾರ ಸುಬ್ರಹ್ಮಣ್ಯಕ್ಕೆ ಬಂದಿದ್ದರು. ರಾತ್ರಿ ಲಕ್ಷ್ಮೀ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಚಿಕಿತ್ಸೆಗೆ ಕಡಬ ಸರಕಾರಿ

ಕುಕ್ಕೆ ಸುಬ್ರಹ್ಮಣ್ಯ: ಹೃದಯಾಘಾತದಿಂದ ಯಾತ್ರಾರ್ಥಿ ಮಹಿಳೆ ಸಾವು Read More »

ಸುಳ್ಯ: ಸಾರಕುಟೇಲು ಮನೆಯಲ್ಲಿ ಬಲಿಯೇಂದ್ರ ಪೂಜೆ|

ಸಮಗ್ರ ನ್ಯೂಸ್: ಸಾರಕುಟೇಲು ಮನೆಯಲ್ಲಿ ನ. 27ರಂದು ಬಲಿಯೇಂದ್ರ ಪೂಜೆ ನಡೆಯಿತು. ಪೂಜೆ ಮುಗಿದ ನಂತರ ನಮ್ಮ ಊರಿನ ಕಲಾ ಪ್ರತಿಭೆಯನ್ನು ಎಲ್ಲೆಡೆ ಗುರುತಿಸುವ ಸಲುವಾಗಿ ನಮ್ಮ ಊರಿನ ಹೆಮ್ಮೆಯ ಆರ್ಟಿಸ್ಟ್ ಎಂದು ಗುರುತಿಸಿಕೊಂಡ ದಿವಾಕರ ಕುತ್ಯಾಡಿ ಇವರಿಗೆ ಸಾರಕುಟೆಲು ಕುಟುಂಬಸ್ಥರ ಪರವಾಗಿ ನಮ್ಮ ಮನೆಯಲ್ಲಿ ಗೆಳೆಯರು ಮತ್ತು ಊರವರು ಬಂಧುಗಳು ಸೇರಿ ಶ್ರೀ ದಿವಾಕರ್ ಅವರನ್ನು ಸನ್ಮಾನಿಸಲಾಯಿತು.

ಸುಳ್ಯ: ಸಾರಕುಟೇಲು ಮನೆಯಲ್ಲಿ ಬಲಿಯೇಂದ್ರ ಪೂಜೆ| Read More »

Wild elephant attack;ಬೆಳ್ತಂಗಡಿ: ಕಾರಿನ ಮೇಲೆ ದಾಳಿ ಮಾಡಿದ ಕಾಡಾನೆ| ಇಬ್ಬರು ಜಖಂ; ಮಗು ಸಹಿತ ಏಳು ಮಂದಿ ಪವಾಡ ಸದೃಶ ಪಾರು

ಸಮಗ್ರ ನ್ಯೂಸ್: ಕಾರೊಂದರ ಮೇಲೆ ಕಾಡಾನೆ ದಾಳಿ ಮಾಡಿ ಇಬ್ಬರನ್ನು ಗಾಯಗೊಳಿಸಿ, ಕಾರಿಗೆ ಹಾನಿ ಉಂಟು ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯದ ಅಣಿಯೂರಿನಲ್ಲಿ ಸೋಮವಾರ ನ.27 ರಾತ್ರಿ ಸಂಭವಿಸಿದೆ. ಕಾರಿನಲ್ಲಿ ಮಗು ಸಹಿತ ಏಳು ಮಂದಿಯಿದ್ದು ಅವರು ನೆರಿಯದ ಸಂಬಂಧಿಕರ ಮನೆಗೆ ಪ್ರಯಾಣಿಸುತ್ತಿದ್ದರು. ಪುತ್ತೂರು ಮೂಲದ ಅಬ್ದುಲ್ ರೆಹಮಾನ್ (40) ಮತ್ತು ನಾಸಿಯಾ (30) ಗಾಯಾಳುಗಳು ಎಂದು ತಿಳಿದು ಬಂದಿದೆ. ರೆಹಮಾನ್ ಅವರ ತಲೆ ಮತ್ತು ಕಾಲಿಗೆ ಹಾಗೂ ನಾಸಿಯಾ ಅವರ ಕಾಲಿಗೆ ಗಾಯವಾಗಿದ್ದು, ಅವರಿಗೆ

Wild elephant attack;ಬೆಳ್ತಂಗಡಿ: ಕಾರಿನ ಮೇಲೆ ದಾಳಿ ಮಾಡಿದ ಕಾಡಾನೆ| ಇಬ್ಬರು ಜಖಂ; ಮಗು ಸಹಿತ ಏಳು ಮಂದಿ ಪವಾಡ ಸದೃಶ ಪಾರು Read More »

ಅಡಿಕೆ ಬೆಳೆಗಾರರ ನಿದ್ದೆಗೆಡಿಸಿದ ಹುರಿದ ಅಡಿಕೆ| ಮಂಗಳೂರು ಮಾರುಕಟ್ಟೆಗೆ ಲಗ್ಗೆ ಇಟ್ಟ 20 ಕಂಟೈನರ್ ಆಮದು ಅಡಿಕೆ

ಸಮಗ್ರ ನ್ಯೂಸ್: ಹುರಿದ ಅಡಿಕೆ ರೂಪದಲ್ಲಿ ಕಸ್ಟಮ್ಸ್ ಸುಂಕ ತಪ್ಪಿಸಿಕೊಂಡು ಅವ್ಯಾಹತವಾಗಿ ವಿದೇಶ ಅಡಿಕೆ ಭಾರತಕ್ಕೆ ಬರುತ್ತಿರುವುದು ರಾಜ್ಯದ ಅಡಿಕೆ ವಹಿವಾಟು ಸಂಸ್ಥೆಗಳು ಹಾಗೂ ಬೆಳೆಗಾರರ ನಿದ್ದೆಗೆಡಿಸಿದೆ. ‘ತಿಂಗಳ ಈಚೆಗೆ ಸುಮಾರು 20 ಕಂಟೇನರ್ ಅಡಿಕೆ ವಿದೇಶದಿಂದ ಭಾರತಕ್ಕೆ ಬಂದಿದ್ದು, ಪ್ರತಿ ಕಂಟೇನರ್‌ನಲ್ಲಿ 20ರಿಂದ 24 ಟನ್ ಅಡಿಕೆ ಇರಬಹುದೆಂದು ಅಂದಾಜಿಸಲಾಗಿದೆ. ಇವುಗಳಲ್ಲಿ ಬಹುಪಾಲು ಹುರಿದ ಅಡಿಕೆ ಎಂಬ ಅಧಿಕೃತ ಮಾಹಿತಿ ಲಭ್ಯವಾಗಿದೆ. ಕಸ್ಟಮ್ಸ್ ಇಲಾಖೆಯವರು ಹೇಳುವಂತೆ ಹುರಿದ ಅಡಿಕೆಗೆ ಕನಿಷ್ಠ ಆಮದು ಸುಂಕ ಅನ್ವಯವಾಗುವುದಿಲ್ಲ. ಹೀಗಾಗಿ,

ಅಡಿಕೆ ಬೆಳೆಗಾರರ ನಿದ್ದೆಗೆಡಿಸಿದ ಹುರಿದ ಅಡಿಕೆ| ಮಂಗಳೂರು ಮಾರುಕಟ್ಟೆಗೆ ಲಗ್ಗೆ ಇಟ್ಟ 20 ಕಂಟೈನರ್ ಆಮದು ಅಡಿಕೆ Read More »

ಸುಳ್ಯ: ಎಂಟು ಗ್ರಾಮ ಪಂಚಾಯತ್ ಗ್ರಂಥಾಲಯಗಳಿಗೆ ಡಿಜಿಟಲ್ ಸಾಧನ ಹಸ್ತಾಂತರ

ಸಮಗ್ರ ನ್ಯೂಸ್: ನ. 27ರಂದು ಶಿಕ್ಷಣ ಫೌಂಡೇಶನ್, ಡೆಲ್ ಸಂಸ್ಥೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ನಡೆಯುತ್ತಿರುವ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿಯಲ್ಲಿ ಸುಳ್ಯ ತಾಲೂಕಿನಲ್ಲಿ ಆಯ್ಕೆಯಾದ 8 ಗ್ರಾಮ ಪಂಚಾಯತ್ ಗ್ರಂಥಾಲಯಗಳಿಗೆ ಡಿಜಿಟಲ್ ಸಾಧನಗಳಾದ ಮೊಬೈಲ್ ಮತ್ತು ಸ್ಪೀಕರ್ ಗಳನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಹಾಗೂ ಸುಳ್ಯ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಅವರ ಮುಖೇನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಣ ಫೌಂಡೇಶನ್ ನ ಗ್ರಾಮ ಡಿಜಿ

ಸುಳ್ಯ: ಎಂಟು ಗ್ರಾಮ ಪಂಚಾಯತ್ ಗ್ರಂಥಾಲಯಗಳಿಗೆ ಡಿಜಿಟಲ್ ಸಾಧನ ಹಸ್ತಾಂತರ Read More »

ಬಂಟ್ವಾಳ: ನೆರೆಕರೆಯ ಹುಡುಗ, ಹುಡುಗಿ ಒಂದೇ ದಿನ ನಾಪತ್ತೆ

ಸಮಗ್ರ ನ್ಯೂಸ್: ಅಕ್ಕಪಕ್ಕದ ಮನೆಯ ಹುಡುಗ ಮತ್ತು ಹುಡುಗಿ ಇಬ್ಬರು ಒಂದೇ ದಿನ ನಾಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಎಂಬಲ್ಲಿ ನಡೆದಿದೆ. ಸಜೀಪ ಮುನ್ನೂರು ಗ್ರಾಮದ ಉದ್ದೊಟ್ಟು ನಿವಾಸಿ ಅಬ್ದುಲ್ ಹಮೀದ್ ಅವರ ಮಗಳು ಆಯಿಸತ್ ರಸ್ಮಾ (18) ಮತ್ತು ಹೈದರ್ ಎಂಬವರ ಮಗ ಮಹಮ್ಮದ್ ಸಿನಾನ್ (23) ಕಾಣೆಯಾದವರು. ದೇರಳಕಟ್ಟೆಯ ನಡುಪದವು ಪಿ.ಎ.ಕಾಲೇಜಿನಲ್ಲಿ ಫಾರ್ಮಸಿ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದು ಒಂದು ವಾರಗಳ ಕಾಲ ರಜೆಯಿದ್ದ ಕಾರಣ

ಬಂಟ್ವಾಳ: ನೆರೆಕರೆಯ ಹುಡುಗ, ಹುಡುಗಿ ಒಂದೇ ದಿನ ನಾಪತ್ತೆ Read More »

ಆಟಗಾರರ ಬದಲಾವಣೆಗೆ ಇಂದು ಕೊನೆಯ ದಿನ/ ಆರ್‍ಸಿಬಿಯಲ್ಲೂ ಒಂದು ಬದಲಾವಣೆ

ಸಮಗ್ರ ನ್ಯೂಸ್: ಐಪಿಎಲ್ ಟೂರ್ನಿಗೆ ಎಲ್ಲಾ ತಂಡಗಳು ಸಿದ್ದತೆ ನಡೆಸುತ್ತಿದ್ದು. ಅದಕ್ಕೂ ಮುನ್ನ ಆಟಗಾರರ ಹರಾಜು ಪಕ್ರಿಯೆ ನಡೆಯಲಿದೆ, ಇಂದು ಆಟಗಾರರ ಬದಲಾವಣೆಗೆ ಕಡೆಯ ದಿನವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಲ್‍ರೌಂಡರ್ ಶೆಹಬಾಜ್ ಅಹಮದ್ ಅವರನ್ನು ಸನ್‍ರೈಸರ್ಸ್ ಹೈದರಾಬಾದ್‍ಗೆ ನೀಡಿ, ಅಲ್ಲಿಂದ ಮಯಾಂಕ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶೆಹಬಾಜ್ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. ಶೆಹಬಾಜ್ ಅಹಮದ್ 10 ಪಂದ್ಯಗಳನ್ನಾಡಿ ಕೇವಲ 42 ರನ್ ಗಳನ್ನಷ್ಟೇ ಬಾರಿಸಿದ್ದರು.

ಆಟಗಾರರ ಬದಲಾವಣೆಗೆ ಇಂದು ಕೊನೆಯ ದಿನ/ ಆರ್‍ಸಿಬಿಯಲ್ಲೂ ಒಂದು ಬದಲಾವಣೆ Read More »

ಡಾ. ಅನುರಾಧಾ ಕುರುಂಜಿ ಅವರಿಗೆ ಕಾಸರಗೋಡಿನ ಮುಳ್ಳೇರಿಯಾದಲ್ಲಿ ಗೌರವಾರ್ಪಣೆ

ಸಮಗ್ರ ನ್ಯೂಸ್: ಸುಳ್ಯದ ಉಪನ್ಯಾಸಕರು, ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿಯವರನ್ನು ಕಾಸರಗೋಡಿನ ಮುಳ್ಳೇರಿಯಾದ ಶ್ರೀ ಧರ್ಮಶಾಸ್ತ್ರಾ ಭಜನಾ ಮಂದಿರ ದೇಲಂಪಾಡಿಯಲ್ಲಿ 18 ವರ್ಷಗಳ ಬಳಿಕ ನಡೆದ 4 ದಿನಗಳ ವಿಜೃಂಭಣೆಯ ಅಯ್ಸಪ್ಪನ ಉತ್ಸವ “ಅಯ್ಯಪ್ಪ ತಿರುವಳಕ್ಕ್ ಮಹೋತ್ಸವ”ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಕೇರಳ, ಕಾಸರಗೋಡಿನ ಸುತ್ತ ಮುತ್ತಲ ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಕ ಮೊದಲಾದ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿ, ತರಬೇತುದಾರರಾಗಿ, ಪ್ರಧಾನ ಭಾಷಣಕಾರರಾಗಿ, ಭಾಗವಹಿಸುತ್ತಿರುವ ಡಾ. ಅನುರಾಧಾ ಕುರುಂಜಿಯವರನ್ನು ವಿಜಯಕುಮಾರ್

ಡಾ. ಅನುರಾಧಾ ಕುರುಂಜಿ ಅವರಿಗೆ ಕಾಸರಗೋಡಿನ ಮುಳ್ಳೇರಿಯಾದಲ್ಲಿ ಗೌರವಾರ್ಪಣೆ Read More »