ಒಕ್ಕಲಿಗರಿಗೆ ಪಕ್ಷ ನಾಯಕತ್ವ; ಬಿಜೆಪಿಗೆ ಸವಾಲೊಡ್ಡಿದ ಕಾಂಗ್ರೆಸ್ ?| ದ.ಕ ಲೋಕಸಭಾ ಕ್ಷೇತ್ರದ ಟಿಕೆಟ್ ಸುಳ್ಯದ ಕಿರಣ್ ಬುಡ್ಲೆಗುತ್ತು ‘ಕೈ’ಗೆ!?
ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ ದಿನಗಣನೆ ಶುರುವಾಗುತ್ತಿರುವಂತೆ ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯೂ ಹೆಚ್ಚಾಗುತ್ತಿರುವ ನಡುವೆ ದ.ಕ ಲೋಕಸಭಾ ಕ್ಷೇತ್ರದಲ್ಲಿ ಅಚ್ಚರಿಯ ನಡೆಯನ್ನು ಕಾಂಗ್ರೆಸ್ ತೆಗೆದುಕೊಳ್ಳುವ ನಿರ್ಧಾರ ಕೈಗೊಂಡಿದೆ. ತೀರಾ ಕುತೂಹಲದ ಕ್ಷೇತ್ರವಾಗಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನ ಪ್ರಮುಖ ಮೂರು ಅಭ್ಯರ್ಥಿ ಆಕಾಂಕ್ಷಿಗಳ ಪೈಕಿ ಭರವಸೆಯ ಒಕ್ಕಲಿಗ ಗೌಡ ಯುವನಾಯಕ ಸುಳ್ಯ ಮೂಲದ ಕಿರಣ್ ಬುಡ್ಲೆಗುತ್ತು ಹೆಸರು ಪ್ರಬಲ ಚಾಲ್ತಿಯೊಂದಿಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ










