‘ಕೃಷ್ಣಪ್ಪ ಹಠಾವೋ ಸುಳ್ಯ ಕಾಂಗ್ರೆಸ್ ಬಚಾವೋ’ | ಬ್ಲಾಕ್ ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದ ಕಾರ್ಯಕರ್ತರು
ಸಮಗ್ರ ನ್ಯೂಸ್: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನಲೆಯಲ್ಲಿ ತಾ. ಪಂ ಮಾಜಿ ಸದಸ್ಯೆಯರಿಬ್ಬರ ಸಹಿತ 17 ಮಂದಿಯನ್ನು ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ. ಇದರಿಂದ ಸುಳ್ಯ ಬ್ಲಾಕ್ ಕಾಂಗ್ರೆಸ್ ವಿರುದ್ಧ ಕಾರ್ಯಕರ್ತರು ಗರಂ ಆಗಿದ್ದಾರೆ. ಉಚ್ಛಾಟನೆಗೊಂಡ ಕಾರ್ಯಕರ್ತರು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷೊಯಾಗಿದ್ದ ನಂದಕುಮಾರ್ ಜೊತೆ ಗುರುತಿಸಿಕೊಂಡಿದ್ದರು. ಆದರೆ ಟಿಕೇಟ್ ಘೋಷಣೆ ಆದ ನಂತರ ಕೃಷ್ಣಪ್ಪರಿಗೆ ದುಡಿದಿದ್ದರು ಎನ್ನಲಾಗಿದೆ. ಕಡಬ ತಾಲೂಕು ಪಂಚಾಯಿತಿ […]









