ಸಚಿವ ಅಂಗಾರರದ್ದು ಪ್ರಜಾಪ್ರಭುತ್ವದ ಕಗ್ಗೊಲೆ; ಅನ್ಯಾಯವಾದವರಿಗೆ ನ್ಯಾಯ ಸಿಗಲೇಬೇಕು – ಬ್ಲಾಕ್ ಕಾಂಗ್ರೆಸ್
ಸಮಗ್ರ ನ್ಯೂಸ್: ಕಳೆದ ಮೂವತ್ತು ವರ್ಷಗಳಿಂದ ಶಾಸಕರಾಗಿದ್ದು ನನಗೆ ಯಾರೂ ಆಡಳಿತ ಹೇಳಿಕೊಡಬೇಕಾಗಿಲ್ಲ ಎಂದು ಹೇಳುತ್ತಿರುವ ಸಚಿವ ಎಸ್.ಅಂಗಾರರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಕಾರ್ಯಕರ್ತರಲ್ಲದವರಿಗೆ ಯೋಜನೆಯ ಲಾಭಕ್ಕೆ ಕೊಕ್ಕೆ ಹಾಕಿದ್ದು ಇದು ಅನ್ಯಾಯ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ ಹೇಳಿದ್ದಾರೆ. ಬಿಜೆಪಿ ಸುಳ್ಯ ಕಚೇರಿ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿರುವ ಆಡಿಯೋ ಕುರಿತಂತೆ ಪ್ರತಿಕ್ರಿಯಿಸಿದ ಅವರು ‘ಚುನಾಯಿತ ಜನಪ್ರತಿನಿಧಿಯಾಗಿ ಸಚಿವ ಅಂಗಾರರು ರಾಜ್ಯದ ಎಲ್ಲಾ ಜನರಿಗೆ ಸಮಾನರಾಗಿರಬೇಕು. ಪಕ್ಷಕ್ಕೆ ಸಂಬಂಧಪಟ್ಟವರಿಗೆ ಮಾತ್ರ ಯೋಜನೆಗಳ ಲಾಭಕ್ಕೆ […]










