ರಾಜಕೀಯ

ಮೊದಲ ಹಂತದ ಮತ ಎಣಿಕೆ ಬಹುತೇಕ ಪೂರ್ಣ| ಯಾರಿಗೆ ಮುನ್ನಡೆ? ಇಲ್ಲಿದೆ ಡೀಟೈಲ್ಸ್

ಸಮಗ್ರ ನ್ಯೂಸ್: ರಾಜ್ಯದಲ್ಲಿ ಅಂಚೆ ಮತಗಳ ಎಣಿಕೆ ಬಹುತೇಕ ಮುಗಿದಿದ್ದು, ವರುಣ ಕ್ಷೇತ್ರದಲ್ಲಿ 855 ಅಂಚೆ ಮತಗಳ ಏಣಿಕೆಯಲ್ಲಿ ಸಿದ್ದರಾಮಯ್ಯ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕೆ.ಆರ್‌.ಪೇಟೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಮುನ್ನಡೆ. ಅಂಚೆ ಮತಗಳಲ್ಲಿ ಆರಂಭಿಕ ಮುನ್ನಡೆ. ಕಾರವಾರ, ಉತ್ತರಕನ್ನಡ ಭಟ್ಕಳ‌ ವಿಧಾನಸಭಾ ಕ್ಷೇತ್ರ. ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕ್ ಮುನ್ನಡೆ. 800 ಮತಗಳಿಂದ ಮುನ್ನಡೆಯಿರುವ ಸುನೀಲ್ ನಾಯ್ಕ್. ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಮುನ್ನಡೆ ಕೊಡಗಿನ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ . ವಿರಾಜಪೇಟೆ ವಿಧಾನಸಭಾ ಕ್ಷೇತ್ರ […]

ಮೊದಲ ಹಂತದ ಮತ ಎಣಿಕೆ ಬಹುತೇಕ ಪೂರ್ಣ| ಯಾರಿಗೆ ಮುನ್ನಡೆ? ಇಲ್ಲಿದೆ ಡೀಟೈಲ್ಸ್ Read More »

‘ದಿ ಕೇರಳ‌ ಸ್ಟೋರಿ’ ಯ ಆಸೀಫಾ ಪಾತ್ರಧಾರಿ ಆ ಪಾತ್ರ ಒಪ್ಪಿಕೊಂಡಿದ್ದೇಕೆ? ಇಲ್ಲಿದೆ ಫುಲ್ ಡೀಟೈಲ್ಸ್

ಸಮಗ್ರ ನ್ಯೂಸ್: ಹೌದು, ದಿ ಕೇರಳ ಸ್ಟೋರಿಯಲ್ಲಿ ಆಸೀಫಾ ಎಂಬ ನೆಗೆಟಿವ್​ ರೋಲ್​ ಮಾಡಿದ ನಟಿಯ ಹೆಸರು ಸೋನಿಯಾ ಬಾಲಾನಿ ಓರ್ವ ಹಿಂದೂ ಯುವತಿಯಾಗಿ ಮುಸ್ಲಿಂ ಯುವತಿಯ ಅದರಲ್ಲು ನೆಗೆಟಿವ್​ ರೋಲ್​ನಲ್ಲಿ ಜನಮನ ಗೆದ್ದಿರುವ ಸೋನಿಯಾ ಈಗ ಈ ಚಿತ್ರದ ಕುರಿತು ಮಾತನಾಡಿದ್ದಾರೆ. ನೆಗೆಟಿವ್​ ರೋಲ್​ನಲ್ಲಿ ತಾವು ಅಭಿನಯಿಸಲು ಒಪ್ಪಿಕೊಂಡದ್ದು ಏಕೆ ಎಂಬ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಅಂದಹಾಗೆ ಸೋನಿಯಾ ಬಾಲಾನಿ ಆಗ್ರಾ ನಿವಾಸಿ. ಇದಾಗಲೇ ಕಿರುತೆರೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಜನಪ್ರಿಯ ಧಾರಾವಾಹಿ ಬಡೇ

‘ದಿ ಕೇರಳ‌ ಸ್ಟೋರಿ’ ಯ ಆಸೀಫಾ ಪಾತ್ರಧಾರಿ ಆ ಪಾತ್ರ ಒಪ್ಪಿಕೊಂಡಿದ್ದೇಕೆ? ಇಲ್ಲಿದೆ ಫುಲ್ ಡೀಟೈಲ್ಸ್ Read More »

Breaking:ರಾಜ್ಯಾದ್ಯಂತ ಮತ ಎಣಿಕೆ ಪ್ರಕ್ರಿಯೆ ಆರಂಭ

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಹೇರಲಾಗಿದೆ. ಪ್ರತಿ ಕೇಂದ್ರದಲ್ಲಿ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯನ್ನ ನಿಯೋಜಿಸಲಾಗಿದೆ. ಹಾಗಾಗಿ ಮತ ಎಣಿಕೆ ಕೇಂದ್ರಗಳ ಬಳಿ 5ಕ್ಕಿಂತಲೂ ಹೆಚ್ಚು ಜನ ಗುಂಪು ಸೇರುವಂತಿಲ್ಲ. ಮೆರವಣಿಗೆ, ಸಮಾರಂಭ, ವಿಜಯೋತ್ಸವ, ಸಮಾವೇಶ ನಡೆಸುವಂತಿಲ್ಲ. ನಿನ್ನೆ ರಾತ್ರಿ 10ರಿಂದಲೇ ಇಂದು ಮಧ್ಯರಾತ್ರಿ 12ಗಂಟೆ ವರೆಗೂ ರಾಜ್ಯಾದ್ಯಂತ ಮದ್ಯ ಮಾರಾಟ ನಿರ್ಬಂಧಿಸಲಾಗಿದೆ. ಮತ ಎಣಿಕೆ ಕೇಂದ್ರದ 200

Breaking:ರಾಜ್ಯಾದ್ಯಂತ ಮತ ಎಣಿಕೆ ಪ್ರಕ್ರಿಯೆ ಆರಂಭ Read More »

ಮೈತ್ರಿಗೆ ಸಿದ್ಧ ಆದ್ರೆ ಷರತ್ತುಗಳು ಅನ್ವಯ – ಹೆಚ್ ಡಿಕೆ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಚುನಾವಣೆ ಫಲಿತಾಂಶ ಅತಂತ್ರ ಅನ್ನೋ ಸೂಚನೆ ಸಿಗುತ್ತಿದೆ. ಇದರ ಬೆನ್ನಲ್ಲೇ ಮೈತ್ರಿ ಮಾತು ಜೋರಾಗುತ್ತಿದೆ. ಮತದಾನದ ಬೆನ್ನಲ್ಲೇ ಸಿಂಗಾಪುರಕ್ಕೆ ಹಾರಿದ್ದ ಕುಮಾರಸ್ವಾಮಿ, ಇದೀಗ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಸಂಪೂರ್ಣ ಸ್ವಾತಂತ್ರವಿರಬೇಕು ಎಂದು ಹೆಚ್‌ಡಿ ಕುಮಾರಸ್ವಾಮಿ ಮೊದಲ ಕಂಡೀಷನ್ ಹಾಕಿದ್ದಾರೆ. ಈ ಮೂಲಕ ನಾನೇ ಸಿಎಂ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದರ ಜೊತೆಗೆ ಇನ್ನೂ 9 ಕಂಡೀಷನ್ ಹಾಕಿದ್ದಾರೆ. ಇತ್ತ ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಕಾಂಗ್ರೆಸ್ ನಾಯಕರಿಗೆ ಡಿಕೆ

ಮೈತ್ರಿಗೆ ಸಿದ್ಧ ಆದ್ರೆ ಷರತ್ತುಗಳು ಅನ್ವಯ – ಹೆಚ್ ಡಿಕೆ Read More »

ಮತ‌ಎಣಿಕೆಗೆ ಕೌಂಟ್ ಡೌನ್| ಎಣಿಕೆ‌ ಕೇಂದ್ರಗಳ‌ ಸುತ್ತಮುತ್ತ ಟೈಟ್ ಸೆಕ್ಯೂರಿಟಿ

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಮತದಾನ ಮುಗಿದು ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದ್ದು ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ. ನಾಳೆ ಮಧ್ಯಾಹ್ನ 12 ಗಂಟೆಗೆ ಹೊತ್ತಿಗೆ ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಸ್ಪಷ್ಟ ಚಿತ್ರಣ ಹೊರಬರಲಿದೆ. ಸಂಜೆ ವೇಳೆಗೆ ಪೂರ್ಣ ಫಲಿತಾಂಶ ಪ್ರಕಟವಾಗಲಿದೆ. ಹಲವು ಸುತ್ತುಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳು, ಅಂಚೆ ಮತಗಳ ಲೆಕ್ಕ ಹಾಕಲಾಗುತ್ತದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ 34 ಕೇಂದ್ರಗಳಲ್ಲಿ

ಮತ‌ಎಣಿಕೆಗೆ ಕೌಂಟ್ ಡೌನ್| ಎಣಿಕೆ‌ ಕೇಂದ್ರಗಳ‌ ಸುತ್ತಮುತ್ತ ಟೈಟ್ ಸೆಕ್ಯೂರಿಟಿ Read More »

ಸಿದ್ದರಾಮಯ್ಯ ಸಿಎಂ ಆಗಲೆಂದು ದೀರ್ಘ ದಂಡ ನಮಸ್ಕಾರ ಹಾಕಿದ ಅಭಿಮಾನಿ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಫಲಿತಾಂಶ ಶೀಘ್ರದಲ್ಲೇ ಹೊರಬೀಳಲಿದೆ. ಈಗಾಗಲೇ ಸೋಲು ಗೆಲುವಿನ‌ ಲೆಕ್ಕಾಚಾರಗಳು ನಡೆಯುತ್ತಿದ್ದು, ಬೆಳಗಾವಿಯ ಕಾಗವಾಡದಲ್ಲಿ ಸಿದ್ದರಾಮಯ್ಯ ಅಭಿಮಾನಿಯೊಬ್ಬ ದೀರ್ಘದಂಡ ನಮಸ್ಕಾರ ಹಾಕಿದ್ದಾನೆ. ಮೇ 13 ರಂದು ತಿಳಿಯಲಿರುವ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಸಿಗಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲಿ ಹಾಗೂ ಕಾಗವಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ರಾಜು ಕಾಗೆ ಅವರು ಜಯಗಳಿಸಲಿ ಎಂದು ಕಾಗವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಣಮಾಪೂರ ಗ್ರಾಮದ ನಿವಾಸಿಯಾದ ಅಶೋಕ ರೂಗಿ ಅವರು

ಸಿದ್ದರಾಮಯ್ಯ ಸಿಎಂ ಆಗಲೆಂದು ದೀರ್ಘ ದಂಡ ನಮಸ್ಕಾರ ಹಾಕಿದ ಅಭಿಮಾನಿ Read More »

ನಾಲ್ಕು ಬಾರಿ ಸಿಎಂ, ಎರಡು ಬಾರಿ ಪಿಎಂ ಆಗಿರುವ ಮೋದಿ ಅಧಿಕಾರ ಬಿಟ್ಟು ಕೊಡ್ತಾರಾ? – ಶೆಟ್ಟರ್

ಸಮಗ್ರ ನ್ಯೂಸ್: ನಿವೃತ್ತರಾಗಿ ಎಂದು ಹೇಳುತ್ತಾರಲ್ಲಾ… 4 ಬಾರಿ ಸಿಎಂ, 2 ಬಾರಿ ಪ್ರಧಾನಮಂತ್ರಿಯಾಗಿರುವ ಮೋದಿಯವರು ಅಧಿಕಾರ ಬಿಟ್ಟುಕೊಡುತ್ತಾರೆಯೇ ಎಂದು ಬಿಜೆಪಿ ಮಾಜಿ ನಾಯಕ ಜಗದೀಶ್ ಶೆಟ್ಟರ್ ಅವರು ಗುರುವಾರ ಹುಬ್ಬಳ್ಳಿಯಲ್ಲಿ ಪ್ರಶ್ನಿಸಿದ್ದಾರೆ. ಮೋದಿಯವರು ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದಾರೆ, ಎರಡು ಬಾರಿ ಪ್ರಧಾನಮಂತ್ರಿಗಳಾಗಿದ್ದಾರೆ. ಈ ಹಂತದಲ್ಲಿ ಅವರು ಅಧಿಕಾರ ಬಿಟ್ಟುಕೊಡುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಹ್ಲಾದ್ ಜೋಶಿ ಅವರು ನಾನೇ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಎಂದು ಹೇಳುತ್ತಿದ್ದಾರೆ. ಈ ಹೇಳಿಕೆ ಏಣಿ ಹತ್ತಿಸಿ ನಿಚ್ಚಣಿಕೆ

ನಾಲ್ಕು ಬಾರಿ ಸಿಎಂ, ಎರಡು ಬಾರಿ ಪಿಎಂ ಆಗಿರುವ ಮೋದಿ ಅಧಿಕಾರ ಬಿಟ್ಟು ಕೊಡ್ತಾರಾ? – ಶೆಟ್ಟರ್ Read More »

ಆಸ್ಟ್ರೇಲಿಯಾ ಸಂಸತ್ ಸದಸ್ಯರಾಗಿ ಕೊಡಗಿನ ಬೆಡಗಿ ಚರಿಷ್ಮಾ

ಸಮಗ್ರ ನ್ಯೂಸ್:ಮೇ 11, ಭಾರತೀಯ ನಾರಿ ಚರಿಷ್ಮಾ ಆಸ್ಟ್ರೇಲಿಯಾದ ಸಂಸತ್ ಸದಸ್ಯರಾಗಿ ನೇಮಕ ಮಾಡಲಾಯಿತು. ಕನ್ನಡತಿಯಾಗಿರುವ ಇವರು ಕೊಡಗು ಮೂಲದವರಾಗಿದ್ದು, ಇವರು ಆಸ್ಟ್ರೇಲಿಯಾದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಕೊಡಗಿನ ಚರಿಷ್ಮಾ ಮಾದಪ್ಪ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಚರಿಷ್ಮಾ ಅವರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕೊಡಗಿನ ಗರಿಮೆಯನ್ನು ವಿದೇಶಿಗರ ಮನ ಮುಟ್ಟುವಂತೆ ಮಾಡಿದರು. ಮೂಲತಃ ನಾಪೋಕ್ಲು ವಿಭಾಗದ ಕಲಿಯಂಡ ಚರಿಷ್ಮಾ ಆಸ್ಟ್ರೇಲಿಯಾದ ಲಿವರ್ ಪೂಲ್ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್ ಸದಸ್ಯೆಯಾಗಿ

ಆಸ್ಟ್ರೇಲಿಯಾ ಸಂಸತ್ ಸದಸ್ಯರಾಗಿ ಕೊಡಗಿನ ಬೆಡಗಿ ಚರಿಷ್ಮಾ Read More »

ಮತದಾನ ದಿನದಂದು ಒಂಟಿಯಾದ ಸಚಿವ ಎಸ್.ಅಂಗಾರ

ಸಮಗ್ರ ನ್ಯೂಸ್: ಎಸ್.ಅಂಗಾರ ಸುಳ್ಯದ ಶಾಸಕ ಹಾಗೂ ಬಂದರು, ಮೀನುಗಾರಿಕಾ ಸಚಿವ. ಆದರೆ ಕೆಲ ದಿನಗಳ ಹಿಂದಿನ ಬೆಳವಣಿಗೆಗಳು ಸಚಿವ ಎಸ್‌.ಅಂಗಾರರನ್ನು ಒಬ್ಬಂಟಿಯಾಗಿಸಿದೆ. ಹೊರಗೆ ಹೊರಟಾಗ ಜೊತೆಗಿರುತ್ತಿದ್ದ ಕಾರ್ಯಕರ್ತರು ಇದೀಗ ಅಂಗಾರರನ್ನು ಒಂಟಿಯಾಗಿರಿಸಿದ್ದಾರೆ. ಹೌದು. ನಿನ್ನೆ(ಮೇ.10) ಸಾರ್ವತ್ರಿಕ ಮತದಾನದ ದಿನದಂದು ಸಚಿವ ಎಸ್.ಅಂಗಾರ ತಮ್ಮ ಹಕ್ಕು ಚಲಾವಣೆಗಾಗಿ ಸುಳ್ಯ ತಾಲೂಕಿನ ದೊಡ್ಡತೋಟದ ಮತಗಟ್ಟೆಗೆ ಬಂದಿದ್ರು. ಸಚಿವರು ತಮ್ಮ ಕುಟುಂಬ ಸಮೇತರಾಗಿ ಬಂದಿದ್ದರೂ ಅವರನ್ನು ಮಾತನಾಡಿಸಲು ಬಿಜೆಪಿ ಪಕ್ಷದ ಕಾರ್ಯಕರ್ತರೇ ಇರಲಿಲ್ಲ. ಕೊನೆಗೆ ಕಾಂಗ್ರೆಸ್ ನ ಕಾರ್ಯಕರ್ತರೋರ್ವರು ಅಂಗಾರರನ್ನು

ಮತದಾನ ದಿನದಂದು ಒಂಟಿಯಾದ ಸಚಿವ ಎಸ್.ಅಂಗಾರ Read More »

ಮೇ.13 ದ.ಕ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ

ಸಮಗ್ರ ನ್ಯೂಸ್: ಮೇ 10 ರಂದು ನಡೆದ ರಾಜ್ಯ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮೇ 13 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ದ.ಕ ಜಲ್ಲೆಯಲ್ಲಿ 144 ಸೆಕ್ಷನ್‌ ಜಾರಿಗೊಳಿಸಿ ದ.ಕ ಜಿಲ್ಲಾಧಿಕಾರಿ ಎಮ್‌ ಆರ್‌ ರವಿ ಕುಮಾರ್‌ ಆದೇಶ ಹೊರಡಿಸಿದ್ದಾರೆ. ಮೇ 13 ಬೆಳಗ್ಗೆ 5 ರಿಂದ ರಾತ್ರಿ 12 ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ. ಶವ ಸಂಸ್ಕಾರ, ಮದುವೆ ಅಥವಾ ಧಾರ್ಮಿಕ ಮೆರವಣಿಗೆಗಳಿಗೆ ಹಾಗೂ ಕೋವಿಡ್‌ 19 ಕಾರ್ಯಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ

ಮೇ.13 ದ.ಕ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ Read More »