ರಾಜಕೀಯ

ಸಿಎಂ ಸಿದ್ದರಾಮಯ್ಯ ಕುಳಿತಿದ್ದಾಗ ಕಿತ್ತುಬಂದ ಪೆಂಡಾಲ್‌

ಸಮಗ್ರ ನ್ಯೂಸ್: ಉಪಚುನಾವಣೆ ಪ್ರಚಾರಕ್ಕೆಂದು ಹಾವೇರಿ ಜಿಲ್ಲೆಗೆ ತೆರಳಿರುವ ಸಿಎಂ ಸಿದ್ದರಾಮಯ್ಯನವರು ನ.04 ರಂದು ಹುಲಗೂರು ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡರು. ಇದೇ ವೇಳೆ, ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಪೆಂಡಾಲ್ ಕಿತ್ತುಹೋಯಿತು. ಸಿಎಂ ಉಪಸ್ಥಿತರಿದ್ದ ವೇದಿಕೆ ಮುಂಭಾಗದಲ್ಲಿ ಪೆಂಡಾಲ್‌ ಹಾರಿತು. ತಕ್ಷಣ ಸ್ಥಳದಲ್ಲಿದ್ದ ಸಿಬ್ಬಂದಿ ಪೆಂಡಾಲ್ ಅನ್ನು ಹಿಡಿದುಕೊಂಡು ನಿಂತು ಹೆಚ್ಚಿನ ಸಮಸ್ಯೆಯಾಗದಂತೆ ತಡೆದರು.

ಸಿಎಂ ಸಿದ್ದರಾಮಯ್ಯ ಕುಳಿತಿದ್ದಾಗ ಕಿತ್ತುಬಂದ ಪೆಂಡಾಲ್‌ Read More »

ಡಿಸಿಎಂ ಡಿ.ಕೆ.ಶಿ ಗೆ ಬಿಗ್ ರಿಲೀಫ್: CBI ತನಿಖೆ ಹಿಂಪಡೆದ ಅರ್ಜಿ ವಿಚಾರಣೆ 4 ವಾರ ಮುಂದೂಡಿದ ಸುಪ್ರೀಂ ಕೋರ್ಟ್

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದಿಂದ ಡಿಸಿಎಂ ಡಿ.ಕೆ ಶಿವಕುಮಾ‌ರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದನ್ನು ಹಿಂಪಡೆಯಲಾಗಿತ್ತು.ಈ ಮೂಲಕ ಡಿಸಿಎಂ ಡಿಕೆಶಿಗೆ ಮತ್ತೆ ರಿಲೀಫ್ ನೀಡಿದೆ.ಇಂದು ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಉಜ್ಜಲ್ ಭುಯನ್ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ವಿಚಾರಣೆ ಕೈಗೆತ್ತಿಕೊಂಡರು. ಈ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ಅವರು ಕರ್ನಾಟಕ ಹೈಕೋರ್ಟ್ ನ ತೀರ್ಪಿನ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸಿದೆ ಎಂಬುದಾಗಿ ನ್ಯಾಯಪೀಠದ ಗಮನಕ್ಕೆ

ಡಿಸಿಎಂ ಡಿ.ಕೆ.ಶಿ ಗೆ ಬಿಗ್ ರಿಲೀಫ್: CBI ತನಿಖೆ ಹಿಂಪಡೆದ ಅರ್ಜಿ ವಿಚಾರಣೆ 4 ವಾರ ಮುಂದೂಡಿದ ಸುಪ್ರೀಂ ಕೋರ್ಟ್ Read More »

ಸುನ್ನತ್ ಕುರಿತು ವಿವಾದಾತ್ಮಕ ಹೇಳಿಕೆ| ಬೆಳ್ತಂಗಡಿ ಶಾಸಕ‌ ಹರೀಶ್ ಪೂಂಜಾ ಫೋಟೋ ಎಡಿಟ್ ಮಾಡಿದ ಕಿಡಿಗೇಡಿಗಳು

ಸಮಗ್ರ ನ್ಯೂಸ್: ‘ಮುಂದೊಂದು ದಿನ ಹಿಂದೂಗಳು ಸುನ್ನತ್ ಮಾಡಿಕೊಳ್ಳುವ ಸಂದರ್ಭ ಬರಬಹುದು’ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ವಿಚಾರ ಇದೀಗ ಮಂಗಳೂರಿನಲ್ಲಿ ಸದ್ದು ಮಾಡ್ತಿದೆ. ಬೆಳ್ತಂಗಡಿಯಲ್ಲಿ ನಡೆದ ‘ದೀಪಾವಳಿ ದೋಸೆ ಹಬ್ಬ’ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ನಮ್ಮ ಕಡೆಯ ಉಸಿರು ಇರುವವರೆಗೂ ಹಿಂದುತ್ವವೇ ಬದುಕು ಎಂಬ ರೀತಿಯ ರಾಜಕಾರಣ ಮಾಡದಿದ್ದರೆ, ಮುಂದೊಂದು ದಿನ ನಾವು ಸುನ್ನತ್ ಮಾಡಿಕೊಳ್ಳಬೇಕಾದ ಸಂದರ್ಭ ಬರಬಹುದು. ಆದ್ದರಿಂದ ನಾವು ಹಿಂದುತ್ವವನ್ನು ಮೈಗೂಡಿಸಿಕೊಂಡು ಕೆಲಸ ಮಾಡಬೇಕು ಎಂದು

ಸುನ್ನತ್ ಕುರಿತು ವಿವಾದಾತ್ಮಕ ಹೇಳಿಕೆ| ಬೆಳ್ತಂಗಡಿ ಶಾಸಕ‌ ಹರೀಶ್ ಪೂಂಜಾ ಫೋಟೋ ಎಡಿಟ್ ಮಾಡಿದ ಕಿಡಿಗೇಡಿಗಳು Read More »

ಉಪ ಚುನಾವಣೆ ಅಖಾಡಕ್ಕೆ ಮಾಜಿ ಪ್ರಧಾನಿ:ಚನ್ನಪಟ್ಟಣದಲ್ಲಿ ಇಂದು ನಿಖಿಲ್ ಪರ ದೇವೇಗೌಡರಿಂದ ಭರ್ಜರಿ ಪ್ರಚಾರ

ಸಮಗ್ರ ನ್ಯೂಸ್: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಘಟಾನುಘಟಿಗಳಿಂದ ಪ್ರಚಾರ ನಡೆಯಲಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಉಪಚುನಾವಣೆ ಅಖಾಡಕ್ಕೆ ಇಳಿಯಲಿದ್ದಾರೆ.ಎನ್.ಡಿ.ಎ. ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಇಂದು ದೇವೇಗೌಡರು ಪ್ರಚಾರ ನಡೆಸಲಿದ್ದಾರೆ. ಬಿಜೆಪಿ ಸಂಸದ ಯದುವೀರ್ ಒಡೆಯರ್ ಹೊಂಗನೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರೂ ಇಂದು ಚನ್ನಪಟ್ಟಣ ಕ್ಷೇತ್ರದಲ್ಲಿ ಬಿರುಗಾಳಿ ಪ್ರಚಾರ ನಡೆಸಲಿದ್ದಾರೆ. ಒಟ್ಟು 13 ಕಡೆಗಳಲ್ಲಿ ಎಂದು ಹೆಚ್‌.ಡಿ.ಕೆ. ನಿಖಿಲ್ ಪರವಾಗಿ ಮತಯಾಚಿಸಲಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ.

ಉಪ ಚುನಾವಣೆ ಅಖಾಡಕ್ಕೆ ಮಾಜಿ ಪ್ರಧಾನಿ:ಚನ್ನಪಟ್ಟಣದಲ್ಲಿ ಇಂದು ನಿಖಿಲ್ ಪರ ದೇವೇಗೌಡರಿಂದ ಭರ್ಜರಿ ಪ್ರಚಾರ Read More »

ರಾಜ್ಯದಲ್ಲಿ ಮಹಿಳೆಯರ ಉಚಿತ ಬಸ್‌ ಪ್ರಯಾಣದ `ಶಕ್ತಿ’ ಯೋಜನೆ ಸ್ಥಗಿತ : CM ಸಿದ್ದರಾಮಯ್ಯ ಸ್ಪಷ್ಟನೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಶಕ್ತಿ ಯೋಜನೆ ಪರಿಷ್ಕರಣೆ ಕುರಿತಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಶಕ್ತಿ ಯೋಜನೆ ಪರಿಷ್ಕರಣೆ ಸರ್ಕಾರದ ಹಂತದಲ್ಲಿಲ್ಲ ಎಂದು ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆ ಪರಿಷ್ಕರಣೆ ಉದ್ದೇಶ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಅನೇಕ ಮಂದಿ ಹೆಣ್ಣು ಮಕ್ಕಳು ನಮಗೆ ಟಿಕೆಟ್ ತೆಗೆದುಕೊಳ್ಳುವ ಶಕ್ತಿಯಿದೆ. ಉಚಿತ ಪ್ರಯಾಣ ಬೇಡ ಎಂದು ಟ್ವಿಟ್ ಹಾಗೂ ಇ-ಮೇಲ್ ಮೂಲಕ ವಿಚಾರ ತಿಳಿಸುತ್ತಿದ್ದಾರೆ. ಈ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. “ನಾವು ಹಣ ಕೊಡಲು ಮುಂದಾದರೂ,

ರಾಜ್ಯದಲ್ಲಿ ಮಹಿಳೆಯರ ಉಚಿತ ಬಸ್‌ ಪ್ರಯಾಣದ `ಶಕ್ತಿ’ ಯೋಜನೆ ಸ್ಥಗಿತ : CM ಸಿದ್ದರಾಮಯ್ಯ ಸ್ಪಷ್ಟನೆ Read More »

ಕೇರಳ ಸಿಎಂ ಪಿಣರಾಯಿ ವಿಜಯನ್ ಕಾರು ಸರಣಿ ಅಪಘಾತ

ಸಮಗ್ರ ನ್ಯೂಸ್: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ತುತ್ತಾಗಿದೆ. ಅವರ ಬೆಂಗಾವಲು ಕಾರುಗಳು ಸರಣಿಯಾಗಿ ಡಿಕ್ಕಿ ಹೊಡೆದುಕೊಂಡಿವೆ. ತಿರುವನಂತಪುರದಲ್ಲಿ ಈ ಘಟನೆ ನಡೆದಿದೆ. ಸಿಎಂ ಪಿಣರಾಯಿ ಅವರು ಎಂದಿನಂತೆ ತಮ್ಮ ಬೆಂಗಾವಲು ವಾಹನಗಳೊಂದಿಗೆ ಪ್ರಯಾಣಿಸುತ್ತಿದ್ದರು.ಈ ವೇಳೆ ಮುಖ್ಯರಸ್ತೆಯಲ್ಲೇ ಮುಂದಿದ್ದ ಕಾರು ತಕ್ಷಣ ಬ್ರೇಕ್ ಹಾಕಿದೆ. ಸ್ವಲ್ಪ ವೇಗವಾಗಿಯೇ ಬೆಂಗಾವಲು ವಾಹನಗಳು ಚಲಿಸುತ್ತಿದ್ದರಿಂದ ನಿಯಂತ್ರಣ ತಪ್ಪಿ, ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ ಎನ್ನಲಾಗಿದೆ. ಈ ವೇಳೆ ಹಿಂದೆಯೇ ವೇಗವಾಗಿ ಬರುತ್ತಿದ್ದ ಸಿಎಂ ವಾಹನ ಸೇರಿದಂತೆ ಕೊನೆಯ

ಕೇರಳ ಸಿಎಂ ಪಿಣರಾಯಿ ವಿಜಯನ್ ಕಾರು ಸರಣಿ ಅಪಘಾತ Read More »

ಕೇಂದ್ರ ಸಚಿವ ‘ಪ್ರಹ್ಲಾದ್ ಜೋಶಿ’ ಸಹೋದರ ‘ಗೋಪಾಲ್ ಜೋಶಿ’ಗೆ ಬಿಗ್ ರಿಲೀಫ್

ಸಮಗ್ರ ನ್ಯೂಸ್: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರನಿಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ಪ್ರಕರಣದಲ್ಲಿ ಅವರ ವಿರುದ್ಧದ ತನಿಖೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದ್ದು, ಬಿಡುಗಡೆಗೆ ಆದೇಶ ಹೊರಡಿಸಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಆರೋಪದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ ಅವರನ್ನು ಪೊಲೀಸರು ಬಂಧಿಸಿದ್ದರು. ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ

ಕೇಂದ್ರ ಸಚಿವ ‘ಪ್ರಹ್ಲಾದ್ ಜೋಶಿ’ ಸಹೋದರ ‘ಗೋಪಾಲ್ ಜೋಶಿ’ಗೆ ಬಿಗ್ ರಿಲೀಫ್ Read More »

ದೇಶದಲ್ಲಿ ನಡೆಯಲಿದೆ ಜನಗಣತಿ; ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರ ನಡೆಸುವ ಜನಗಣತಿಗೆ ಸಂಬಂಧಿಸಿದಂತೆ ಇದೀಗ ಪ್ರಮುಖ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಮುಂದಿನ ವರ್ಷದಿಂದ ದೇಶದಲ್ಲಿ ಜನಗಣತಿ ಆರಂಭವಾಗಬಹುದು ಎಂದು ಮೂಲಗಳು ತಿಳಿಸಿದ್ದು, ಜನಗಣತಿಯು ಮುಂದಿನ ವರ್ಷ 2025 ರಿಂದ 2026 ರವರೆಗೆ ನಡೆಯಲಿದೆ ಎನ್ನಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ 2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಅನಿವಾರ್ಯವಾಗಿ ಮುಂದೂಡಬೇಕಾಯಿತು. ಇಲ್ಲಿಯವರೆಗೆ ಪ್ರತಿ ಹತ್ತು ವರ್ಷಗಳಿಗೊಮ್ಮೆ ದಶಕದ ಆರಂಭದಲ್ಲಿ ಜನಗಣತಿ ನಡೆಸಲಾಗುತ್ತಿತ್ತು.ಇನ್ನು ಮುಂದೆ 2025ರ ನಂತರ ಮುಂದಿನ ಜನಗಣತಿ 2035, 2045, 2055ರಲ್ಲಿ ಈ ರೀತಿ

ದೇಶದಲ್ಲಿ ನಡೆಯಲಿದೆ ಜನಗಣತಿ; ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ Read More »

ಶಿಗ್ಗಾಂವಿ: ಬಂಡಾಯ ಶಮನಕ್ಕೆ ತೆರಳಿದ್ದ ಸಚಿವ ಜಮೀರ್ ಕಾರಿಗೆ ಕಲ್ಲೇಟು

ಸಮಗ್ರ ನ್ಯೂಸ್: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮುಖಂಡರ ನಡುವೆ ತಿಕ್ಕಾಟ ಶುರುವಾಗಿದ್ದು, ಸಚಿವ ಝಮೀರ್ ಅಹ್ಮದ್ ಖಾನ್ ಅವರ ಕಾರಿನ ಮೇಲೆ ಕೆಲ ಕಾರ್ಯಕರ್ತರು ಹುಲಗೂರಿನಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ. ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವ ಸೈಯದ್ ಅಜ್ಜಂಪೀರ್ ಖಾದ್ರಿ ಅವರ ಮನವೋಲಿಸಲು ಝಮೀರ್ ಅಹ್ಮದ್ ಅವರು ಮನೆಗೆ ಹೋಗಿದ್ದರು. ಇದೇ ಸಂದರ್ಭದಲ್ಲಿ ಅವರು ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಅವರ ಕಾರಿನಲ್ಲಿ ಹೋಗಿದ್ದರು. ಟಿಕೆಟ್ ಕೈ ತಪ್ಪಿದ್ದರಿಂದ ಆಕ್ರೋಶಗೊಂಡಿರುವ ಸೈಯದ್ ಖಾದ್ರಿ ಪರ ಬೆಂಬಲಿಗರು,

ಶಿಗ್ಗಾಂವಿ: ಬಂಡಾಯ ಶಮನಕ್ಕೆ ತೆರಳಿದ್ದ ಸಚಿವ ಜಮೀರ್ ಕಾರಿಗೆ ಕಲ್ಲೇಟು Read More »

ಜನಸಾಮಾನ್ಯರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರ ದೀಪಾವಳಿ ಹಬ್ಬಕ್ಕೆ ಜನಸಾಮಾನ್ಯರಿಗೊಂದು ಸಿಹಿ ಸುದ್ದಿಯೊಂದು ನೀಡಿದೆ. ಹೌದು.. ದೀಪಾವಳಿ ಹಬ್ಬದ ವೇಳೆ ಆಹಾರ ಧಾನ್ಯ ಬೆಲೆ ನಿಯಂತ್ರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಗ್ರಾಹಕರಿಗೆ ಎಂಆರ್ಪಿ ದರದಲ್ಲಿ ವಿತರಿಸಲು ಮುಂದಾಗಿದೆ. ನವದೆಹಲಿಯಲ್ಲಿ ಎಂಆರ್ಪಿ ದರದಲ್ಲಿ ಭಾರತ್ ಅಕ್ಕಿ, ಬೇಳೆ-ಕಾಳು ಪೂರೈಕೆಗೆ ಕ್ರಮ ಕೈಗೊಂಡಿದ್ದು, ಈ ಮೂಲಕ ಗ್ರಾಹಕರಿಗೆ ಬೆಲೆ ಏರಿಕೆ ಹೊರೆ ತಗ್ಗಿಸಲು ಕ್ರಮ ಕೈಗೊಂಡಿದೆ. ಈ ಬಗ್ಗೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಾಹಿತಿ

ಜನಸಾಮಾನ್ಯರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್ Read More »