ಸಮಗ್ರ ಸಮಾಚಾರ

ಕೆಂಪೇಗೌಡ ವಿಮಾನ ನಿಲ್ದಾಣ ಬಳಿ ಸ್ಫೋಟ : ಕಾರ್ಮಿಕರಿಗೆ ಗಾಯ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಇಂದು ಮದ್ಯಾಹ್ನ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, ಆರು ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. ವಿಮಾನ ನಿಲ್ದಾಣದ ಟರ್ಮಿನಲ್ ಹಾಗೂ ರಸ್ತೆಗೆ ಸಂಚಾರ ಸಂಕೇತಗಳ ಪಟ್ಟಿಗಳನ್ನು ಹಾಕುವ ಕೆಲಸ ಕೆಲ ದಿಗಳಿಂದ ನಡೆಯತ್ತಿತ್ತು. ಸ್ಥಳದಲ್ಲಿ ರಾಸಾಯನಿಕ ಡಬ್ಬಿ ಹಾಗೂ ಇತರೆ ಸಲಕರಣೆಗಳನ್ನು ಇರಿಸಲಾಗಿತ್ತು. ಇಂದು ಕೆಲಸಗಾರರು ಬಣ್ಣವನ್ನು ರಾಸಾಯನಿಕದ ಜೊತೆ ಮಿಶ್ರಣ ಮಾಡಿ ಸಿಲಿಂಡರ್ ಬಳಸಿ ಕಾಯಿಸುತ್ತಿದ್ದರು. ಇದೇ ಸಂದರ್ಭದಲ್ಲೇ ಏಕಾಏಕಿ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ ಪರಿಣಾಮ 6 ಮಂದಿ […]

ಕೆಂಪೇಗೌಡ ವಿಮಾನ ನಿಲ್ದಾಣ ಬಳಿ ಸ್ಫೋಟ : ಕಾರ್ಮಿಕರಿಗೆ ಗಾಯ Read More »

ಒಂದೇ ಮಾಸ್ಕನ್ನು ಹೆಚ್ಚಾಗಿ ಬಳಸುತ್ತೀರಾ…? | ಕೊರೋನಾ ಬರಲ್ಲ ಬ್ಲ್ಯಾಕ್ ಫಂಗಸ್ ಅಂಟುತ್ತೆ ಎಚ್ಚರ…!

ಬೆಂಗಳೂರು: ಒಂದೇ ಮಾಸ್ಕ್ ಅನ್ನು ಹೆಚ್ಚಾಗಿ ಬಳಸುವವರಿಗೆ ಎಚ್ಚರಿಕೆಯ ಸಂದೇಶವೊಂದು ರವಾನೆಯಾಗಿದ್ದು,ಇದರಿಂದ ಕೊರೊನಾ ಬದಲು ಬ್ಲಾಕ್ ಫಂಗಸ್ ಬಹುಬೇಗನೆ ಅಂಟಿಕೊಳ್ಳುತ್ತದೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ. ಈ ಸಂಬಂಧ ಏಮ್ಸ್​​​ನ ನ್ಯೂರೋಸರ್ಜನ್​​​ ವೈದ್ಯರೊಬ್ಬರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಸತತ 2ರಿಂದ 3 ವಾರಗಳ ಕಾಲ ಒಂದೇ ಮಾಸ್ಕನ್ನು ಧರಿಸುವುದರಿಂದ ಬ್ಲ್ಯಾಕ್​​ ಫಂಗಸ್​​ ಸೋಂಕು ಬರುವ ಸಂಭವ ಹೆಚ್ಚು ಎಂದಿದ್ದಾರೆ. ಈ ಮೂಲಕ ಸತತವಾಗಿ ಒಂದೇ ಮಾಸ್ಕ್ ಬಳಸುವವರಿಗೆ ವೈದ್ಯ ಡಾ. ಶರತ್ ಚಂದ್ರ ಎಚ್ಚರಿಕೆ ನೀಡಿದ್ದಾರೆ. ಇತ್ತೀಚಿನ

ಒಂದೇ ಮಾಸ್ಕನ್ನು ಹೆಚ್ಚಾಗಿ ಬಳಸುತ್ತೀರಾ…? | ಕೊರೋನಾ ಬರಲ್ಲ ಬ್ಲ್ಯಾಕ್ ಫಂಗಸ್ ಅಂಟುತ್ತೆ ಎಚ್ಚರ…! Read More »

ಕೋವಿಡ್ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸೋಣ | ಲಾಕ್ಡೌನ್ ನಿಂದ ಹಿಂದೆ ಸರಿದ ಉದ್ಧವ್ ಠಾಕ್ರೆ

ಮಹಾರಾಷ್ಟ್ರ: ರಾಜ್ಯದಲ್ಲಿ ಸದ್ಯ ಲಾಕ್ಡೌನ್ ಇದ್ದು ಹಂತಹಂತವಾಗಿ ಅನ್ಲಾಕ್ ಮಾಡಲು ರಾಜ್ಯಸರ್ಕಾರ ನಿರ್ಧರಿಸಿದೆ. ಇನ್ನು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯದ ಜನತೆಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕರೆ ನೀಡಿದ್ದಾರೆ. ಸೋಮವಾರದಿಂದ ಮಹಾರಾಷ್ಟ್ರದಲ್ಲಿ ಹಂತಹಂತವಾಗಿ ಅನ್ಲಾಕ್ ಪ್ರಕ್ರಿಯೆ ಆರಂಭವಾಗಲಿದೆ. ಒಂದೇ ಬಾರಿಗೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುತ್ತಿಲ್ಲ. ಸೋಂಕು ದೃಢೀಕರಣ ಪ್ರಮಾಣ ಮತ್ತು ಆಮ್ಲಜನಕ, ಹಾಸಿಗೆಗಳ ಲಭ್ಯತೆ ಆಧಾರದಲ್ಲಿ ರಾಜ್ಯವನ್ನು ಐದು ಹಂತಗಳಲ್ಲಿ ವಿಂಗಡಿಸಿ ಲಾಕ್‌ಡೌನ್ ತೆರವು ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.ಯಾವ ರೀತಿಯ ನಿರ್ಬಂಧಗಳ ಅಗತ್ಯವಿದೆಯೆಂದು ಸ್ಥಳಿಯಾಡಳಿತ ನಿರ್ಧರಿಸಲಿದೆ. ಲಾಕ್ಡೌನ್

ಕೋವಿಡ್ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸೋಣ | ಲಾಕ್ಡೌನ್ ನಿಂದ ಹಿಂದೆ ಸರಿದ ಉದ್ಧವ್ ಠಾಕ್ರೆ Read More »

ಕಾರು-ಬೈಕ್ ಡಿಕ್ಕಿ: ಯಮನಪಾಲಾದ ಅಣ್ಣ-ತಂಗಿ ಹಾಗೂ ಮಗು

ರಾಯಚೂರು: ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂರು ವರ್ಷದ ಮಗು ಸಹಿತ ಅಣ್ಣ-ತಂಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ನಾಗರಾಳ ಕ್ರಾಸ್ ಬಳಿ ಈ ಅಪಘಾತ ನಡೆದಿದೆ. ಲಿಂಗಸುಗೂರು ತಾಲೂಕಿನ ಗುಂತಗೋಳ ಗ್ರಾಮದ ಬಸವರಾಜ (32), ಪಲ್ಲವಿ (23) ಮತ್ತು ಸಂಗಮೇಶ (3) ಮೃತಪಟ್ಟವರು. ಬಸವರಾಜ ಮತ್ತು ಪಲ್ಲವಿ ಸೋದರ ಸಂಬಂಧಿಗಳಾಗಿದ್ದು, ಇವರು ನಾಗರಹಾಳದಲ್ಲಿನ ಸಹೋದರಿಯ ಮನೆಗೆ ಹೋಗಿ ವಾಪಸ್​ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಬೈಕ್​ನಲ್ಲಿ ಪ್ರಯಾಣಿಸುತ್ತಿದ್ದ

ಕಾರು-ಬೈಕ್ ಡಿಕ್ಕಿ: ಯಮನಪಾಲಾದ ಅಣ್ಣ-ತಂಗಿ ಹಾಗೂ ಮಗು Read More »

ಕಾಸರಗೋಡು: ಸಾವಿನ ಸಂಖ್ಯೆ 500 ದಾಟಿದರೂ ಲೆಕ್ಕ ಮಾತ್ರ 154 ಮೀರಿಲ್ಲ

ಕಾಸರಗೋಡು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿ ಇದುವರೆಗೆ ಮೃತಪಟ್ಟವರ ಸಂಖ್ಯೆ ಐನೂರು ದಾಟಿದ್ದು ಆರೋಗ್ಯ ಇಲಾಖೆ ದಾಖಲೆಗಳಲ್ಲಿ ಮಾತ್ರ 154 ದಾಟಿಲ್ಲ. ಆಸ್ಪತ್ರೆಗಳು ಕೊರೊನಾದಿಂದ ಸಾವು ಸಂಭವಿಸಿದೆ ಎಂದರು ಆರೋಗ್ಯ ಇಲಾಖೆ ಮಾತ್ರ ಅದನ್ನು ಅಲ್ಲಗಳೆದಿದೆ. ಇನ್ನು ಕೋವಿಡ್ ನಿಂದ ಸಾವು ಸಂಭವಿಸಿದಾಗ ಅದನ್ನು ದಾಖಲೆಗೆ ಸೇರಿಸಿಕೊಳ್ಳಲು ರಾಜ್ಯ ಸರ್ಕಾರದ ಕೆಲವು ನಿಬಂಧನೆಗಳಿವೆ. ಅದಕ್ಕನುಗುಣವಾಗಿ ಸಾವಿನ ಸಂಖ್ಯೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದ್ದು ಇನ್ನು ಸರಕಾರ ಕೈಗೊಂಡ ನಿಬಂಧನೆಗಳಲ್ಲಿರುವ ಕುಂದುಕೊರತೆಗಳಿಂದಾಗಿ ಈ ದಾಖಲೆಗಳಲ್ಲಿ ಕೊರತೆ ಉಂಟಾಗಿದೆ

ಕಾಸರಗೋಡು: ಸಾವಿನ ಸಂಖ್ಯೆ 500 ದಾಟಿದರೂ ಲೆಕ್ಕ ಮಾತ್ರ 154 ಮೀರಿಲ್ಲ Read More »

“ಮನೆಬಾಗಿಲಿಗೆ ಪಡಿತರ” ದಿಲ್ಲಿ ಸರ್ಕಾರದ ಯೋಜನೆಗೆ ತಡೆ | ಕೇಂದ್ರ ರೇಷನ್ ಮಾಫಿಯಾ ಪ್ರಭಾವಕ್ಕೊಳಗಾಗಿದೆ: ಕೇಜ್ರಿವಾಲ್

ನವದೆಹಲಿ: ದಿಲ್ಲಿ ರಾಜ್ಯ ಸರಕಾರದ ಮನೆಬಾಗಿಲಿಗೆ ಪಡಿತರ ತಲುಪಿಸುವ ಮಹತ್ತರ ಯೋಜನೆಗೆ ಕೇಂದ್ರ ಸರ್ಕಾರ ತಡೆಹಿಡಿದಿದೆ. ಕೇಂದ್ರ ಸರ್ಕಾರದ ಈ ನಡೆಗೆ ತೀವ್ರ ಆಕ್ರೋಶ ಹೊರಹಾಕಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕೇಂದ್ರ ಸರ್ಕಾರ ಸಂಪೂರ್ಣವಾಗಿ ರೇಷನ್ ಮಾಫಿಯಾದ ಪ್ರಭಾವಕ್ಕೊಳಗಾಗಿದೆ ಎಂದಿದ್ದಾರೆ. ರೇಷನ್ ಅಂಗಡಿಗಳಲ್ಲಿ ಜನ ಸೇರುವ ಕಾರಣ ಕೋವಿಡ್ ವ್ಯಾಪಕವಾಗಿ ಹರಡುತ್ತಿದೆ. ಅದನ್ನು ಹೋಗಲಾಡಿಸಲು ಮನೆಮನೆಗೆ ರೇಷನ್ ತಲುಪಿಸಿದರೆ ಒಳಿತು ಎಂದು ರಾಜ್ಯ ಸರ್ಕಾರ ತೀರ್ಮಾನಿಸಿ ಇನ್ನೆರಡು ದಿನಗಳಲ್ಲಿ ಯೋಜನೆಯ ಅನುಷ್ಠಾನಕ್ಕೆ ಕೈ ಹಾಕಿತ್ತು. ಈ ನಡುವೆ

“ಮನೆಬಾಗಿಲಿಗೆ ಪಡಿತರ” ದಿಲ್ಲಿ ಸರ್ಕಾರದ ಯೋಜನೆಗೆ ತಡೆ | ಕೇಂದ್ರ ರೇಷನ್ ಮಾಫಿಯಾ ಪ್ರಭಾವಕ್ಕೊಳಗಾಗಿದೆ: ಕೇಜ್ರಿವಾಲ್ Read More »

ಪೊಲೀಸ್ ಬಲೆಗೆ ಬಿದ್ದ ಪೊಲೀಸ್ ಜೊತೆ ಮಂಚ ಹತ್ತಿದ್ದ ಪೊಲೀಸ್

ಹೈದರಾಬಾದ್​: ಸಹೋದ್ಯೋಗಿ ಮಹಿಳೆಯೊಂದಿಗೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾಗ ಪಿ ಎಸ್ ಐ ಪೊಲೀಸ್ ಬಲೆಗೆ ಬಿದ್ದ ಘಟನೆ ಹೈದರಬಾದ್ನಲ್ಲಿ ನಡೆದಿದೆ. ಸಹೋದ್ಯೋಗಿಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿ ಸಿಕ್ಕಿಬಿದ್ದ ಹೈದರಾಬಾದ್​ನ ಜವಹರ್​ ನಗರ ಠಾಣೆಯ ಸಬ್​ ಇನ್ಸ್​ಪೆಕ್ಟರ್​ನನ್ನು ರಾಚಕೊಂಡ ಪೊಲೀಸ್​ ಆಯುಕ್ತ ಮಹೇಶ್​ ಭಾಗವತ್​ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಪಿಎಸ್​ಐ ಅನಿಲ್​ ಎಂಬವರು ಮಹಿಳಾ ಸಿಬ್ಬಂದಿಯೊಂದಿಗೆ ಹಲವು ದಿನಗಳಿಂದ ಈ ಸಂಬಂಧ ಇಟ್ಟುಕೊಂಡಿದ್ದರು. ಇದರ ನಡುವೆ ತಿಮ್ಮೈಪಲ್ಲಿಯಲ್ಲಿರುವ ರೆಸಾರ್ಟ್​ನಒಂದರಲ್ಲಿ ಅನಿಲ್​ ಮತ್ತು ಮಹಿಳೆ ಇಬ್ಬರು ಸೇರಿರುವುದಾಗಿ ಕೀಸರ

ಪೊಲೀಸ್ ಬಲೆಗೆ ಬಿದ್ದ ಪೊಲೀಸ್ ಜೊತೆ ಮಂಚ ಹತ್ತಿದ್ದ ಪೊಲೀಸ್ Read More »

ಆಶಾ ಕಾರ್ಯಕರ್ತೆಯರಿಗೆ ತಲಾ 3,000 ಪ್ರೋತ್ಸಾಹ ಧನ ಮಂಜೂರು

ಬೆಂಗಳೂರು: ಕೊರೊನಾ ಮಹಾಮಾರಿಯ ವಿರುದ್ಧ ಎಡೆಬಿಡದೆ ಹೋರಾಡುತ್ತಿರುವ 42,574 ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ತಲಾ 3,000 ರೂಪಾಯಿ ಪ್ರೋತ್ಸಾಹ ಧನ ಮಂಜೂರು ಮಾಡಿದೆ. ‌ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಶಿಕ್ಷಣ ಸಚಿವ ಸುಧಾಕರ್ ಈ ಕುರಿತು ಟ್ವೀಟ್​​ ಮಾಡಿ ಮಾಹಿತಿ ನೀಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಸಲ್ಲಿಸುತ್ತಿರುವ ಅನನ್ಯ ಸೇವೆಯನ್ನು ಗುರುತಿಸಿ ಆರ್ಥಿಕ ಪ್ಯಾಕೇಜ್-2 ರಲ್ಲಿ ಪರಿಹಾರ ಘೋಷಿಸಲಾಗಿದೆ, ರಾಜ್ಯದ 42,574 ಆಶಾ ಕಾರ್ಯಕರ್ತೆಯರಿಗೆ ಒಟ್ಟು ₹12.75 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.

ಆಶಾ ಕಾರ್ಯಕರ್ತೆಯರಿಗೆ ತಲಾ 3,000 ಪ್ರೋತ್ಸಾಹ ಧನ ಮಂಜೂರು Read More »

ಕುಂದಾಪುರ: ರೈಲಿನಡಿಗೆ ಬಿದ್ದು ಚಿರತೆ ಸಾವು

ಕುಂದಾಪುರ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಚಿರತೆಯೊಂದು ಮೃತಪಟ್ಟ ಘಟನೆ ತಾಲೂಕಿನ ಸೇನಾಪುರ ಬಳಿಯ ಕುಂದಬಾರಂದಾಡಿ ಎಂಬಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಘಟನೆ ನಡೆದಿದ್ದು, ಚಿರತೆ ರೈಲು ಹಳಿಯ ಮೇಲೆ ಸಂಚರಿಸುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಸಾವನ್ನಪ್ಪಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕುಂದಾಪುರ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಕುಂದಾಪುರ: ರೈಲಿನಡಿಗೆ ಬಿದ್ದು ಚಿರತೆ ಸಾವು Read More »

ಆಕ್ರೋಶದ ಬೆನ್ನೆಲ್ಲೆ ವಿವಾದಿತ ಚಿತ್ರ ತೆಗೆದು ಹಾಕಿದ ಅಮೆಜಾನ್

ಬೆಂಗಳೂರು ಕನ್ನಡದ ಬಾವುಟ ಹಾಗು ಲಾಂಛನವುಳ್ಳ ಬಿಕಿನಿಯನ್ನು ಮಾರಾಟಕ್ಕಿಟ್ಟಿದ್ದ ಅಮೆಜಾನ್ ಇದೀಗ ಆ ಚಿತ್ರವನ್ನು ಬದಲಾಯಿಸಿದೆ. ಕಳೆದೆರಡು ದಿನಗಳ ಹಿಂದೆ ಗೂಗಲ್ ಕೂಡ ಕನ್ನಡದ ಬಗ್ಗೆ ಅವಮಾನದ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ಮಣಿದು ಕ್ಷಮೆ ಯಾಚಿಸಿತ್ತು. ಇದೀಗ ಅಮೆಜಾನ್ ಕೂಡ ಕನ್ನಡಿಗರ ಆಕ್ರೋಶದ ಬೆನ್ನಲ್ಲೆ ಚಿತ್ರ ಬದಲಾಯಿಸಿ ಆ ಜಾಗದಲ್ಲಿ ಬೇರೊಂದು ಫೋಟೋವನ್ನು ಪ್ರಕಟಿಸಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗೆ

ಆಕ್ರೋಶದ ಬೆನ್ನೆಲ್ಲೆ ವಿವಾದಿತ ಚಿತ್ರ ತೆಗೆದು ಹಾಕಿದ ಅಮೆಜಾನ್ Read More »