ಸಮಗ್ರ ಸಮಾಚಾರ

Public holiday; ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನಲೆ| ನಾಳೆ ಸಾರ್ವತ್ರಿಕ ರಜೆ ಘೋಷಣೆ

ಸಮಗ್ರ ನ್ಯೂಸ್: ಮೇ. 10 ಬುಧವಾರದಂದು ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಅಂದು ಮತದಾನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲಾ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ- ಕಾಲೇಜುಗಳಿಗೆ, ಸಂಘ-ಸಂಸ್ಥೆಗಳಿಗೆ ಹಾಗೂ ಖಾಸಗಿ ಸಂಸ್ಥೆಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಲಾಗಿದೆ. ಈ ಸಂಬಂಧ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೇ.10ರಂದು ಮತದಾನ ನಡೆಯಲಿದೆ. ಮತ ಚಲಾಯಿಸಲು ಅನುಕೂಲವಾಗುವಂತೆ ಆಯಾ ಮತ ಕ್ಷೇತ್ರಗಳ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಿಗೆ,

Public holiday; ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನಲೆ| ನಾಳೆ ಸಾರ್ವತ್ರಿಕ ರಜೆ ಘೋಷಣೆ Read More »

ವಿಧಾನಸಭಾ ಚುನಾವಣೆಗೆ ಹಿಂದೆಂದೂ ಕಾಣದ ಭದ್ರತೆ| ಸುಸೂತ್ರ ಮತದಾನಕ್ಕೆ ಬಿಗಿ ಕ್ರಮ

ಸಮಗ್ರ ನ್ಯೂಸ್: 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು ರಾಜ್ಯದೆಲ್ಲೆಡೆ ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಬಿಗಿ ಭದ್ರತೆ ಕ್ರಮಗಳನ್ನು ಕೈಗೊಂಡಿದೆ. ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್, ವಿಧಾನಸಭೆ ಚುನಾವಣೆ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ರಾಜ್ಯದಾದ್ಯಂತ ಒಟ್ಟು 1.60 ಲಕ್ಷ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಭದ್ರತಾ ಕಾರ್ಯದಲ್ಲಿ 304 ಡಿವೈಎಸ್‌ಪಿ, 991 ಪೊಲೀಸ್ ಸಬ್ ಇನ್ಸ್‌ಪೆಕ್ಟರ್, 2610

ವಿಧಾನಸಭಾ ಚುನಾವಣೆಗೆ ಹಿಂದೆಂದೂ ಕಾಣದ ಭದ್ರತೆ| ಸುಸೂತ್ರ ಮತದಾನಕ್ಕೆ ಬಿಗಿ ಕ್ರಮ Read More »

ಕೊನೆ ಓವರ್ ಗಳಲ್ಲಿ ಗೆಲುವಿನ ನಗೆಬೀರಿದ ಕೆಕೆಆರ್| ಮತ್ತೆ ಮಿಂಚಿದ ರಿಂಕುಸಿಂಗ್

ಸಮಗ್ರ ನ್ಯೂಸ್: ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ ಕಿಂಗ್ಸ್‌ ತಂಡ ನಾಯಕ ಶಿಖರ್‌ ಧವನ್‌ (57ರನ್‌, 47 ಎಸೆತ, 9 ಬೌಂಡರಿ, 1 ಸಿಕ್ಸರ್‌) ಹಾಗೂ ಇನ್ನಿಂಗ್ಸ್‌ನ ಕೊನೆಯಲ್ಲಿ ಶಾರುಖ್‌ ಖಾನ್‌ (21 ರನ್‌, 8 ಎಸೆತ, 3 ಬೌಂಡರಿ, 1 ಸಿಕ್ಸರ್‌) ನೆರವಿನಿಂದ 7 ವಿಕೆಟ್‌ಗೆ 179 ರನ್‌ ಪೇರಿಸಿತು. ವರುಣ್‌ ಚಕ್ರವರ್ತಿ ತಮ್ಮ 4 ಓವರ್‌ಗಳ ಕೋಟಾದಲ್ಲಿ 26 ರನ್‌ಗೆ 3 ವಿಕೆಟ್‌

ಕೊನೆ ಓವರ್ ಗಳಲ್ಲಿ ಗೆಲುವಿನ ನಗೆಬೀರಿದ ಕೆಕೆಆರ್| ಮತ್ತೆ ಮಿಂಚಿದ ರಿಂಕುಸಿಂಗ್ Read More »

ರಾಜ್ಯದಲ್ಲಿ ಮೋಚಾ ಚಂಡಮಾರುತ ಅಬ್ಬರ| ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆ| ಇನ್ನೆರಡು ದಿನವೂ ಮುಂದುವರಿಯಲಿದೆ ವರ್ಷಧಾರೆ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಮೇ 10 ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಆದರೆ ಮುಂದಿನ ಐದು ದಿನಗಳಲ್ಲಿ ಕರ್ನಾಟಕದ ರಾಜಧಾನಿ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಹೀಗಾಗಿ ಮತದಾನದ ಪ್ರಮಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನ ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಚಾಮರಾಜನಗರ, ರಾಮನಗರ, ಚನ್ನಪಟ್ಟಣ, ಕೋಲಾರ, ದೊಡ್ಡಬಳ್ಳಾಪುರ ಸೇರಿದಂತೆ

ರಾಜ್ಯದಲ್ಲಿ ಮೋಚಾ ಚಂಡಮಾರುತ ಅಬ್ಬರ| ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆ| ಇನ್ನೆರಡು ದಿನವೂ ಮುಂದುವರಿಯಲಿದೆ ವರ್ಷಧಾರೆ Read More »

ಮೋಚಾ ಚಂಡಮಾರುತ ಪರಿಣಾಮ| ಮೇ.13ರವರೆಗೂ ರಾಜ್ಯದ ಹಲವೆಡೆ ವ್ಯಾಪಕ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಮೇ 13 ರವರೆಗೆ ಭಾರಿ ಮಳೆಯಾಗಲಿದೆ. ಚಂಡಮಾರುತ ಪರಿಣಾಮ ಮುಂದಿನ 5 ದಿನ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗದಲ್ಲಿ ಮೇ 11 ಮತ್ತು ಮೇ 12ರಂದು ಬಿರುಸಾಗಿ ಮಳೆ ಸುರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ತಮಿಳುನಾಡಿನ ಕರಾವಳಿ ಸಮೀಪದ ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ

ಮೋಚಾ ಚಂಡಮಾರುತ ಪರಿಣಾಮ| ಮೇ.13ರವರೆಗೂ ರಾಜ್ಯದ ಹಲವೆಡೆ ವ್ಯಾಪಕ ಮಳೆ ಸಾಧ್ಯತೆ Read More »

ರಜೆ ನೀಡಿಯೂ ಮತದಾನ ಮಾಡದವರಿಗೆ ಪ್ರವಾಸಿ ತಾಣಗಳಿಗೆ ನೋ ಎಂಟ್ರಿ!!

ಸಮಗ್ರ ನ್ಯೂಸ್: ಮೇ.10ರಂದು ರಾಜ್ಯ ವಿಧಾನಸಭಾ ಚುನಾವಣೆ ಮತದಾನ ನಡೆಯಲಿದೆ. ಮತದಾನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರ ಎಲ್ಲಾ ನೌಕರರಿಗೆ ಸಾರ್ವತ್ರಿಕ ರಜೆಯನ್ನು ನೀಡಿ ಆದೇಶಿಸಿದೆ. ಇದೇ ವೇಳೆಯಲ್ಲಿ ಮತದಾನದ ಮಹತ್ವವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದಿಂದ ಸೂಕ್ತ ನಿರ್ದೇಶನವನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಮತದಾನ ಮಾಡದವರಿಗೆ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶಿಸಿದೆ. ಮೇ.10ರಂದು ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳಾದಂತ ಕೆ ಆರ್ ಎಸ್, ಬೃಂದಾವನ ಗಾರ್ಡನ್, ಮುತ್ತತ್ತಿ, ಶಿವನಸಮುದ್ರ, ರಂಗನತಿಟ್ಟು,

ರಜೆ ನೀಡಿಯೂ ಮತದಾನ ಮಾಡದವರಿಗೆ ಪ್ರವಾಸಿ ತಾಣಗಳಿಗೆ ನೋ ಎಂಟ್ರಿ!! Read More »

ಭಜರಂಗದಳ ಭಜರಂಗಬಲಿ ಆಗಿದ್ದೇಗೆ? ಚುನಾವಣಾ ಸಮಯದಲ್ಲಿ ಅಚ್ಚರಿಯ ಬದಲಾವಣೆ ಕುರಿತು ಕಾಂಗ್ರೆಸ್ ಪ್ರಶ್ನೆ

ಸಮಗ್ರ ನ್ಯೂಸ್: ಕಾಂಗ್ರೆಸ್ ಪಕ್ಷದ ಬಜರಂಗದಳ ಸಂಘಟನೆ ನಿಷೇಧ ವಿಚಾರವಾಗಿ ಬಿಜೆಪಿ ಆಕ್ರೋಶ ಭರಿತ ಪ್ರಚಾರ ಮುಂದುವರೆದಿರುವಂತೆ ಇದಕ್ಕೆ ತಿರುಗೇಟು ನೀಡಿರುವ ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಪ ಪಿ ಚಿದಂಬರಂ ಬಜರಂಗದಳ ‘ಬಜರಂಗಬಲಿ’ ಆಗಿದ್ದೇಗೆ? ಎಂದು ಪ್ರಶ್ನಿಸಿದ್ದಾರೆ. ರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ನಮ್ಮ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ಸಂಘಟನೆ ನಿಷೇಧಿಸುವುದಾಗಿ ಹೇಳಿಲ್ಲ. ಆದರೆ, ದ್ವೇಷ ಬಿತ್ತುವ ಎಲ್ಲ ಸಂಘಟನೆಗಳಿಗೆ ಎಚ್ಚರಿಕೆ

ಭಜರಂಗದಳ ಭಜರಂಗಬಲಿ ಆಗಿದ್ದೇಗೆ? ಚುನಾವಣಾ ಸಮಯದಲ್ಲಿ ಅಚ್ಚರಿಯ ಬದಲಾವಣೆ ಕುರಿತು ಕಾಂಗ್ರೆಸ್ ಪ್ರಶ್ನೆ Read More »

ಸುಳ್ಯ: ಆಮ್ ಆದ್ಮಿ ಪಾರ್ಟಿ ವತಿಯಿಂದ ನಾಳೆ (ಮೇ.8) ಬೃಹತ್ ರೋಡ್ ಶೋ

ಸಮಗ್ರ ನ್ಯೂಸ್: ಮೇ 8 ರಂದು ಆಮ್ ಆದ್ಮಿ ಪಾರ್ಟಿಯ ವತಿಯಿಂದ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿಬೃಹತ್ ವಾಹನ ಜಾಥಾ ಹಾಗೂ ರೋಡ್ ಶೋ ನಡೆಯಲಿದೆ. ಸಂಪಾಜೆ ಯಿಂದ ಜಾಥಾ ಪ್ರಾರಂಭವಾಗಿ ಕಲ್ಲುಗುಂಡಿ, ಅರಂತೋಡು, ಸುಳ್ಯ, ಪೈಚಾರು,ಸೋಣಂಗೇರಿ, ಗುತ್ತಿಗಾರು, ಸುಬ್ರಹ್ಮಣ್ಯ, ಕಡಬ, ಆಲಂಕಾರು,ಕಡಬ, ಪಂಜ, ನಿಂತಿಕಲ್ಲು, ಕಾಣಿಯೂರು, ಬೆಳಂದೂರು,ಸವಣೂರು, ಪೆರುವಾಜೆ, ಬೆಳ್ತಾರೆ, ಐವರ್ನಾಡು ಸೋಣಂಗೇರಿ, ಜಾಲ್ಸೂರು ನಿಂದ ಸುಳ್ಯಕ್ಕೆ ತೆರಳಲಿದೆ ಎಂದು ತಿಳಿಸಿದ್ದಾರೆ.

ಸುಳ್ಯ: ಆಮ್ ಆದ್ಮಿ ಪಾರ್ಟಿ ವತಿಯಿಂದ ನಾಳೆ (ಮೇ.8) ಬೃಹತ್ ರೋಡ್ ಶೋ Read More »

ಉಡುಪಿ : ಕೊಳದ ಬಳಿ ಹೆಣ್ಣು ಮಗುವಿನ ಮೃತದೇಹ ಪತ್ತೆ

ಸಮಗ್ರ ನ್ಯೂಸ್: ಮೇ7 ರಂದು ಉಡುಪಿ ಸರಕಾರಿ ಕೊಳದ ಬಳಿ ಹೆಣ್ಣು ಮಗುವಿನ ಮೃತದೇಹ ಪತ್ತೆಯಾದ ಘಟನೆ ಶಿರ್ವ ಸಮೀಪದ ಬೆಳ್ಳೆ ಗ್ರಾಮ ಪಂಚಾಯಿತಿಯ ತಿರ್ಲಪಲ್ಕೆಯಲ್ಲಿ ಸಂಭವಿಸಿದೆ. ಬೆಳ್ಳೆ ಗ್ರಾಮ ಪಂಚಾಯತ್ ಒಂದನೇ ವಾರ್ಡಿನ ಸದಸ್ಯ ಅಶೋಕ್ ಅವರು ವಿಷಯ ತಿಳಿದ ತಕ್ಷಣ ಬೆಳ್ಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಧಾಕರ ಪೂಜಾರಿಯವರಿಗೆ ಮಾಹಿತಿ ನೀಡಿದ್ದಾರೆ. ಕೊಳದ ಪಕ್ಕದಲ್ಲಿ ಮೃತ ದೇಹ ಪತ್ತೆಯಾಗಿದ್ದು, ಮಗುವನ್ನು ಆಕೆಯ ಪೋಷಕರು ಉದ್ದೇಶಪೂರ್ವಕವಾಗಿ ಬಿಟ್ಟು ಹೋಗಿರಬಹುದು ಎಂಬ ಗುಮಾನಿಗೆ ಕಾರಣವಾಗಿದೆ. ಈ ಬಗ್ಗೆ

ಉಡುಪಿ : ಕೊಳದ ಬಳಿ ಹೆಣ್ಣು ಮಗುವಿನ ಮೃತದೇಹ ಪತ್ತೆ Read More »

ಚಿಕ್ಕಮಗಳೂರು:ಮಾಜಿ‌ ಶಾಸನರ ಮೇಲೆ ಹಲ್ಲೆಗೈದು ಮನೆ ದರೋಡೆ

ಸಮಗ್ರ ನ್ಯೂಸ್: ಮಾಜಿ‌ ಶಾಸಕರೊಬ್ಬರ ಮೇಲೆ ಹಲ್ಲೆಗೈದು ಅವರ ಮನೆ ದರೋಡೆಗೈದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ. ತರೀಕೆರೆಯ ಮಾಜಿ ಶಾಸಕ ಎಸ್ ಎಂ ನಾಗರಾಜ್ ಅವರ ಮನೆ ಮೇಲೆ ಕೆಲ ದುಷ್ಕರ್ಮಿಗಳು ಬಂದೂಕು, ಮಚ್ಚುನೊಂದಿಗೆ ದಾಳಿ ಮಾಡಿದ್ದಾರೆ. ಮನೆಯ ಬಾಗಿಲು ಮುರಿದು, ಮಾಜಿ ಶಾಸಕರ ಮೇಲೆ ನಡೆಸಿದ್ದಾರೆ. 1ಕೆ.ಜಿಗೂ ಅಧಿಕ ಚಿನ್ನಾಭರಣ, ಹಣ ದರೋಡೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಚುನಾವಣೆ ಸಮಯದಲ್ಲಿ ಈ ಘಟನೆ ನಡೆದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಸದ್ಯ ಸ್ಥಳಕ್ಕೆ

ಚಿಕ್ಕಮಗಳೂರು:ಮಾಜಿ‌ ಶಾಸನರ ಮೇಲೆ ಹಲ್ಲೆಗೈದು ಮನೆ ದರೋಡೆ Read More »