Editor

ಸುಳ್ಯ: ಐವರ್ನಾಡಿನಲ್ಲಿ ಧ.ಗ್ರಾ.ಯೋ ಅಧಿಕಾರಿಗಳಿಗೆ ಗ್ರಾಮಸ್ಥರ ಮುತ್ತಿಗೆ| ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

ಸಮಗ್ರ ನ್ಯೂಸ್: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿಗಳ ಮೇಲೆ ಗ್ರಾಮಸ್ಥರು ಮುತ್ತಿಗೆ ನಡೆಸಿ ಛೀಮಾರಿ ಹಾಕಿದ ಘಟನೆ ದ.ಕ‌ ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ನಡೆದಿದೆ. ಏನಿದು ಪ್ರಕರಣ?ಕಳೆದ ಕೆಲ ತಿಂಗಳ ಹಿಂದೆ ಐವರ್ನಾಡಿನಲ್ಲಿ ಕುಂದಾಪುರ ಮೂಲದ ಯೂಟ್ಯೂಬ್ ಚಾನೆಲ್ ಒಂದು ಸಂದರ್ಶನ ನಡೆಸಿ ಕಾರ್ಯಕ್ರಮ ಬಿತ್ತರಿಸಿತ್ತು. ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಪ್ರಕರಣಗಳ ಕುರಿತಂತೆ ವರದಿ ಮಾಡಲಾಗಿದ್ದು, ಐವರ್ನಾಡಿನಲ್ಲಿ ನಡೆಸಿದ ಸಂದರ್ಶನದ ತುಣುಕಿನಲ್ಲಿ ಜಾತಿನಿಂದನೆ ಕುರಿತಂತೆ ಹೇಳಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಆ ಯೂಟ್ಯೂಬ್

ಸುಳ್ಯ: ಐವರ್ನಾಡಿನಲ್ಲಿ ಧ.ಗ್ರಾ.ಯೋ ಅಧಿಕಾರಿಗಳಿಗೆ ಗ್ರಾಮಸ್ಥರ ಮುತ್ತಿಗೆ| ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? Read More »

ಚಿಕ್ಕಮಗಳೂರು : ಕಾಲೇಜು ವಿದ್ಯಾರ್ಥಿನಿ ಡೆಂಗ್ಯೂಗೆ ಬಲಿ

ಸಮಗ್ರ ನ್ಯೂಸ್: ಚಿಕ್ಕಮಗಳೂರು ನಗರದ ಮಹಮ್ಮದ್ ಖಾನ್ ಗಲ್ಲಿಯ ನಿವಾಸಿ ಸಹರಾ ಬಾನು ಡೆಂಗ್ಯೂ ಜ್ವರದಿಂದ ಮೃತ ಪಟ್ಟ ಘಟನೆ ಫೆ.8 ರಂದು ನಡೆದಿದೆ. ಸಹನಾ ಬಾನು (18) ಕಾಲೇಜಿಗೆ ಹೋಗುತ್ತಿದ್ದು ಡೆಂಗ್ಯೂಗೆ ಬಲಿಯಾಗಿದ್ದಾಳೆ. ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಇದೀಗ ಸಹರಾ ಬಾನು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದೆ ಎಂದು ವರದಿಯಾಗಿವೆ.

ಚಿಕ್ಕಮಗಳೂರು : ಕಾಲೇಜು ವಿದ್ಯಾರ್ಥಿನಿ ಡೆಂಗ್ಯೂಗೆ ಬಲಿ Read More »

ಹಾಸ್ಟೆಲ್​ ಊಟ ಸೇವಿಸಿ ನೂರಾರು ವಿದ್ಯಾರ್ಥಿಗಳು ಅಸ್ವಸ್ಥ

ಸಮಗ್ರ ನ್ಯೂಸ್: ಹಾಸ್ಟೆಲ್​ ಊಟ ಸೇವಿಸಿ ನೂರಾರು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಮಂಗಳೂರು ಹೊರವಲಯದ ವಲಚ್ಚಿಲ್ ಬಳಿ ನಡೆದಿದೆ. ಶ್ರೀನಿವಾಸ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಹಾಸ್ಟೆಲ್​ನಲ್ಲಿ ರಾತ್ರಿ ಊಟ ಸೇವಿಸಿದ ಬಳಿಕ ಹೊಟ್ಟೆನೋವಿನಿಂದ ಒದ್ದಾಡಿದ್ದಾರೆ. ಮಂಗಳೂರು ಮತ್ತು ತುಂಬೆಯ ಆಸ್ಪತ್ರೆಗಳಿಗೆ‌ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಊಟದಲ್ಲಿ ಹುಳ ಬಿದ್ದು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಶಂಕೆ ವ್ಯಕ್ತವಾಗಿದೆ. ಕಾಲೇಜಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಹಾಸ್ಟೆಲ್​ ಊಟ ಸೇವಿಸಿ ನೂರಾರು ವಿದ್ಯಾರ್ಥಿಗಳು ಅಸ್ವಸ್ಥ Read More »

ದೆಹಲಿಯಲ್ಲಿ ಕೇರಳ ಸರ್ಕಾರದ ಪ್ರತಿಭಟನೆ

ಸಮಗ್ರ ನ್ಯೂಸ್: ತೆರಿಗೆ ಹಂಚಿಕೆ ವಿಚಾರದಲ್ಲಿ ನಿನ್ನೆ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಇಂದು ತೆರಿಗೆ ಅನ್ಯಾಯದ ವಿರುದ್ಧ ಕೇರಳದ ಆಡಳಿತಾರೂಢ ಎಲ್‌ಡಿಎಫ್ ಸರ್ಕಾರ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿದೆ. ‘ಒಕ್ಕೂಟ ವ್ಯವಸ್ಥೆ ರಕ್ಷಿಸಲು ಹೋರಾಟ’ ಎಂಬ ಹೆಸರಿನಡಿ ಹೋರಾಟ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಪಕ್ಷದ ಶಾಸಕರು, ಸಚಿವರು ಭಾಗಿಯಾದರು. ಭಿತ್ತಿಚಿತ್ರಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ದೆಹಲಿಯಲ್ಲಿ ಕೇರಳ ಸರ್ಕಾರದ ಪ್ರತಿಭಟನೆ Read More »

ಪಾಕಿಸ್ತಾನದಲ್ಲಿ ಇಂದು ಸಾರ್ವತ್ರಿಕ ಚುನಾವಣೆ/ ಫೆ.7 ರಿಂದ 9 ರವರೆಗೆ ಹೈ ಅಲರ್ಟ್

ಸಮಗ್ರ ನ್ಯೂಸ್: ಪಾಕಿಸ್ತಾನದಲ್ಲಿ ಇಂದು ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, 4,807 ಪುರುಷರು, 312 ಹಿಳೆಯರು ಮತ್ತು ಇಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಸೇರಿ 5,121 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಜನರು ಮತದಾನ ಕೇಂದ್ರಗಳಿಗೆ ಬಾರದಂತೆ ಮತ್ತು ಅಭ್ಯರ್ಥಿಗಳನ್ನು ಭಯೋತ್ಪಾದಕರು ಟಾರ್ಗೆಟ್ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಬರೋಬ್ಬರಿ 6.50 ಲಕ್ಷ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಫೆ.7 ರಿಂದ 9 ರವರೆಗೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಒಟ್ಟಾರೆ 100 ಕ್ಕೂ ಹೆಚ್ಚು ವಿದೇಶಿ ವೀಕ್ಷಕರು ಪಾಕಿಸ್ತಾನದ ಚುನಾವಣೆ ಮೇಲೆ ಕಣ್ಣಿಟ್ಟಿದ್ದು,

ಪಾಕಿಸ್ತಾನದಲ್ಲಿ ಇಂದು ಸಾರ್ವತ್ರಿಕ ಚುನಾವಣೆ/ ಫೆ.7 ರಿಂದ 9 ರವರೆಗೆ ಹೈ ಅಲರ್ಟ್ Read More »

ಕೊಡಗು: ಮುಂದುವರೆದ ಕಾಡಾನೆ ದಾಳಿ| ವೃದ್ಧೆಯ ಕಾಲು ಮುರಿತ

ಸಮಗ್ರ ನ್ಯೂಸ್: ಕಾಡಾನೆ ದಾಳಿಗೆ ವೃದ್ಧೆಯ ಕಾಲು ಮುರಿತ ಒಳಗಾದ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಚಿನ್ನೇನಹಳ್ಳಿಯಲ್ಲಿ ಇಂದು (ಫೆ.8) ಮುಂಜಾನೆ ನಡೆದಿದೆ. ವಯೋವೃದ್ಧೆ ಬಹಿರ್ದೆಸೆಗೆ ತೆರಳಿದಾಗ ದಿಢೀರನೇ ಸಲಗ ಧಾಳಿ ನಡೆಸಿದೆ. ಗಾಯಾಳು ವೆಂಕಟಮ್ಮ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ.

ಕೊಡಗು: ಮುಂದುವರೆದ ಕಾಡಾನೆ ದಾಳಿ| ವೃದ್ಧೆಯ ಕಾಲು ಮುರಿತ Read More »

ಬ್ಯಾಂಕ್ ಆಫ್ ಬರೋಡದಲ್ಲಿ ಉದ್ಯೋಗವಕಾಶ! ಬೇಗ ಅರ್ಜಿ ಸಲ್ಲಿಸಿ

ಸಮಗ್ರ ಉದ್ಯೋಗ: ಬ್ಯಾಂಕ್ ಆಫ್ ಬರೋಡಾ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಒಟ್ಟು 38 ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 9, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್​​ಲೈನ್ ಮೂಲಕ ಅರ್ಜಿ ಹಾಕಬೇಕು. ಉದ್ಯೋಗಾಂಕ್ಷಿಗಳು ತಡಮಾಡದೇ ಈ ಕೂಡಲೇ ಅಪ್ಲಿಕೇಶನ್ ಹಾಕಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು

ಬ್ಯಾಂಕ್ ಆಫ್ ಬರೋಡದಲ್ಲಿ ಉದ್ಯೋಗವಕಾಶ! ಬೇಗ ಅರ್ಜಿ ಸಲ್ಲಿಸಿ Read More »

Amazon ನಲ್ಲಿ iPhone 13 ಮೇಲೆ ಭಾರೀ ಡಿಸ್ಕೌಂಟ್!ಈಗಲೇ ಬುಕ್ ಮಾಡಿ

ಸಮಗ್ರ ನ್ಯೂಸ್: Amazon iPhone 13 ನಲ್ಲಿ ಬಂಪೆರಾಫರ್ ಅನ್ನು ಘೋಷಿಸಿದೆ. ಈಗ ಈ ಸಾಧನದಲ್ಲಿ ಶೇಕಡಾ 12 ರಷ್ಟು ರಿಯಾಯಿತಿ ಇದೆ. ಕೊಡುಗೆಗಳ ವಿವರಗಳನ್ನು ಪರಿಶೀಲಿಸೋಣ. ಆಪಲ್ ಐಫೋನ್‌ಗಳು ಈಗ ಸ್ಟೇಟಸ್ ಸಿಂಬಲ್ ಆಗಿ ಮಾರ್ಪಟ್ಟಿವೆ. ಹೆಚ್ಚು ವೆಚ್ಚವಾಗಿದ್ದರೂ, ಕನಿಷ್ಠ ಹಳೆಯ ಐಫೋನ್ ಬಳಸಬೇಕು ಎಂದು ಹಲವರು ಭಾವಿಸುತ್ತಾರೆ. ಪ್ರಸ್ತುತ, ಇತ್ತೀಚಿನ iPhone 15 ಸರಣಿಯ ಮಾದರಿಗಳು ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಕಳೆದ ವರ್ಷ ಬಿಡುಗಡೆಯಾದ ನಂತರ, ಹಳೆಯ ಸರಣಿಯ ಬೆಲೆಗಳು ತೀವ್ರವಾಗಿ ಇಳಿದಿವೆ

Amazon ನಲ್ಲಿ iPhone 13 ಮೇಲೆ ಭಾರೀ ಡಿಸ್ಕೌಂಟ್!ಈಗಲೇ ಬುಕ್ ಮಾಡಿ Read More »

ಕಡಬ: ಬೀದಿನಾಯಿಗಳ ಅಟ್ಟಹಾಸಕ್ಕೆ ಬಡಪಾಯಿ ಆಡು ಬಲಿ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆ ಯ ಕಡಬದಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದ್ದು ಜನರು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಕಡಬ ಪೇಟೆಯಲ್ಲಿ ಅಲೆದಾಡುತ್ತಿದ್ದ ಆಡನ್ನು ಬೆನ್ನಟ್ಟಿದ್ದ ಬೀದಿನಾಯಿಗಳು ಅದರ ಹಿಂಬದಿ ಕಚ್ಚಿ ಎಳೆದಾಡಿ ಸಿಗಿದು ಹಾಕಿದ ಘಟನೆ ನಡೆದಿದೆ. ಬಡಪಾಯಿ ಆಡಿನ ಕಾಲು ಸಹಿತ ಹಿಂಭಾಗದ ಮಾಂಸವನ್ನು ಬೀದಿನಾಯಿಗಳು ಕಚ್ಚಿ ತಿಂದಿದ್ದು ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡಿದ ಆಡು ಪ್ರಾಣ ಕಳೆದುಕೊಂಡಿದೆ. ಬೀದಿ ನಾಯಿಗಳ ದಾಳಿಯಿಂದ ಆಡನ್ನು ರಕ್ಷಿಸಲು ಸ್ಥಳೀಯ ವರ್ತಕರು ಮುಂದಾಗಿದ್ದರೂ ನಾಯಿಗಳ ಗುಂಪು ದಾಳಿಯಿಂದ

ಕಡಬ: ಬೀದಿನಾಯಿಗಳ ಅಟ್ಟಹಾಸಕ್ಕೆ ಬಡಪಾಯಿ ಆಡು ಬಲಿ Read More »

ಪುತ್ತಿಲ ಪರಿವಾರದ ಗಡುವಿಗೆ ಇನ್ನೊಂದು ದಿನ ಬಾಕಿ| ಡೋಂಟ್ ಕೇರ್ ಮಾಡುತ್ತಿರುವ ಪುತ್ತೂರು ಬಿಜೆಪಿಯ ನಡೆ ಏನು?

ಸಮಗ್ರ ನ್ಯೂಸ್: ತೀವ್ರ ಕುತೂಹಲ ಕೆರಳಿಸಿರುವ ಬಿಜೆಪಿ ಜೊತೆ ಪುತ್ತಿಲ ಪರಿವಾರ ವಿಲೀನ ಪ್ರಕ್ರಿಯೆಗೆ ಪುತ್ತಿಲ ಪರಿವಾರ ನೀಡಿದ್ದ ಮೂರು ದಿನಗಳ ಗಡುವಿನಲ್ಲಿ 2 ದಿನಗಳು ಮುಗಿದಿದ್ದು ಇನ್ನೊಂದೆ ದಿನ ಬಾಕಿ ಇದೆ. ಮೂರು ದಿನದಲ್ಲಿ ಅರುಣ್ ಕುಮಾರ್ ಪುತ್ತಿಲರಿಗೆ ಬಿಜೆಪಿಯಲ್ಲಿ ಅಪೇಕ್ಷಿಸಿದ ಹುದ್ದೆ ನೀಡಲು ಪುತ್ತೂರಿನಲ್ಲಿ ನಡೆದಿದ್ದ ಪುತ್ತಿಲ ಪರಿವಾರದ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ ಪುತ್ತಿಲ ಪರಿವಾರದ ಗಡುವಿಗೆ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಅತಂತ್ರವಾಗಿದ್ದರೂ ಬಿಜೆಪಿ ನಡೆ ಕುತೂಹಲಕ್ಕೆ ಕಾರಣವಾಗಿದೆ. ಹಿಂದುತ್ವದ ಶಕ್ತಿ

ಪುತ್ತಿಲ ಪರಿವಾರದ ಗಡುವಿಗೆ ಇನ್ನೊಂದು ದಿನ ಬಾಕಿ| ಡೋಂಟ್ ಕೇರ್ ಮಾಡುತ್ತಿರುವ ಪುತ್ತೂರು ಬಿಜೆಪಿಯ ನಡೆ ಏನು? Read More »