Editor

ಒಣ ತುಟಿ ಸಮಸ್ಯೆಯಿಂದ ಪಾರಾಗುವುದು ಹೇಗೆ?

ಸಮಗ್ರ ನ್ಯೂಸ್: ವಾಸ್ತವವಾಗಿ, ತುಟಿಗಳು ಅತ್ಯಂತ ಸೂಕ್ಷ್ಮವಾದ ಚರ್ಮವನ್ನು ಹೊಂದಿರುತ್ತದೆ. ಹಾಗಾಗಿಯೇ ಚಳಿಗಾಲದಲ್ಲಿ ತುಟಿಯು ಬಹು ಬೇಗನೆ ಒಡೆಯುತ್ತವೆ. ನೀವು ಬಳಸುವ ಲಿಪ್ ಬಾಮ್ ಗಳಿಗಿಂತ ಭಿನ್ನವಾಗಿ ಮನೆಯಲ್ಲಿಯೇ ದೊರೆಯುವ ನೈರ್ಸಗಿಕವಾದ ಪದಾರ್ಥಗಳಿಂದ ಒಡೆದ ತುಟಿಯನ್ನು ಹೇಗೆ ಮೃದುವಾಗಿಸಿಕೊಳ್ಳಬಹುದು ಎಂಬುದಕ್ಕೆ ಇಲ್ಲಿದೆ ಮಾಹಿತಿ. ತುಟಿಯು ನಿರ್ಜಲೀಕರಣಗೊಂಡಾಗ, ಅವು ಕ್ರಮೇಣ ಒಣಗಲು ಪ್ರಾರಂಭ ಮಾಡುತ್ತದೆ. ಕೆಲವೊಮ್ಮೆ ತುಟಿಗಳ ಚರ್ಮದಲ್ಲಿ ಸಿಪ್ಪೆ ಸುಲಿಕೆ, ರಕ್ತಸ್ರಾವವು ಉಂಟಾಗಬಹುದು. ಅಷ್ಟಕ್ಕೂ ತುಟಿಗಳು ಒಣಗಲು ಕಾರಣಗಳೇನು? ಎಂಬುದಕ್ಕೆ ಉತ್ತರ ಇಲ್ಲಿದೆ. ಸೂರ್ಯನ ತೀಕ್ಷ್ಣವಾದ ಬಿಸಿಲು

ಒಣ ತುಟಿ ಸಮಸ್ಯೆಯಿಂದ ಪಾರಾಗುವುದು ಹೇಗೆ? Read More »

ಪೊಲೀಸ್‌ ನೇಮಕಾತಿ ಪರೀಕ್ಷೆಯಲ್ಲಿ ಸನ್ನಿ ಲಿಯೋನ್‌ ಫೋಟೋ!

ಸಮಗ್ರ ನ್ಯೂಸ್: ನಟಿ ಸನ್ನಿಲಿಯೋನ್‌ ಅವರು ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ ಅದೇ ರೀತಿ ಈ ಬಾರಿ ಪೊಲೀಸ್‌ ನೇಮಕಾತಿ ಪರೀಕ್ಷೆಯಲ್ಲಿ ಸನ್ನಿ ಲಿಯೋನ್ (Sunny Leone) ಫೋಟೋ ಕಂಡುಬಂದಿದೆ. ಉತ್ತರ ಪ್ರದೇಶ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯ (UP Police Recruitment Exam) ಪ್ರವೇಶ ಪತ್ರದಲ್ಲಿ ನಟಿ ಫೋಟೋ ಕಾಣಿಸಿಕೊಂಡಿದೆ. ಸದ್ಯ ಈ ಪ್ರವೇಶ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಫೇ. 17 ರಂದು ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಮತ್ತು

ಪೊಲೀಸ್‌ ನೇಮಕಾತಿ ಪರೀಕ್ಷೆಯಲ್ಲಿ ಸನ್ನಿ ಲಿಯೋನ್‌ ಫೋಟೋ! Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಈ ವಾರ ಯಾವ್ಯಾವ ರಾಶಿಯವರಿಗೆ ಶುಭ, ಅಶುಭ.. ಫಲಾಫಲಗಳು ಏನೇನು ಅನ್ನೋದನ್ನು ಇಲ್ಲಿ ತಿಳಿಸಲಾಗಿದೆ. ಯಾವ್ಯಾವ ರಾಶಿಗೆ ಏನಾಗುತ್ತೆ ಅನ್ನೋದು ಇಲ್ಲಿದೆ ನೋಡಿ. ಮೇಷ ರಾಶಿ:ಗ್ರಹಗಳ ಮಂಗಳ ಸ್ಥಾನವು ಈ ಅವಧಿಯಲ್ಲಿ ನಿಮಗೆ ದೊಡ್ಡ ಆರ್ಥಿಕ ಲಾಭ ನೀಡಲಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು. ಈ ಅವಧಿಯಲ್ಲಿ, ನಿಮಗಾಗಿ ಸಾಕಷ್ಟು ಸಮಯವನ್ನು ನೀವು ಪಡೆಯುತ್ತೀರಿ ಮತ್ತು ನೀವು ಬಹಳಷ್ಟು ವಿನೋದವನ್ನು ಹೊಂದಿರುತ್ತೀರಿ. ಇದರಿಂದ ನೀವು ತುಂಬಾ ರಿಫ್ರೆಶ್ ಆಗಿರುತ್ತೀರಿ.

ದ್ವಾದಶ ರಾಶಿಗಳ ವಾರಭವಿಷ್ಯ Read More »

ಬಿಗ್ ಬಾಸ್ ಮಾಜಿ ಸ್ಪರ್ಧಿಗೆ ಶಾಕ್| ತನಿಖೆ ನಡೆಸಿದ ಪೊಲೀಸರು

ಸಮಗ್ರ ನ್ಯೂಸ್: ಬಿಗ್ ಬಾಸ್ ಮಾಜಿ ಸ್ಪರ್ಧಿಗೆ ಶಾಕ್ ಎದುರಾಗಿದೆ. ತನ್ನ ಮೇಲೆ ಲಾರಿ ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಮಾಜಿ ಬಿಗ್ ಬಾಸ್ ಸ್ಪರ್ಧಿ ಆದಂ ಪಾಷಾ ಎಲೆಕ್ಟ್ರಾನಿಕ್ ಸಿಟಿ ಠಾಣೆಗೆ ದೂರು ನೀಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಆದಂ ಪಾಷಾ ಕಳ್ಳಾಟ ಬಯಲಾಗಿದೆ. ಸುಳ್ಳು ಪ್ರಕರಣ ದಾಖಲಿಸಿದ ಆದಂ ಪಾಷಾ ವಿರುದ್ಧ ಇದೀಗ ಪೊಲೀಸರು ಕ್ರಮಕೈಗೊಳ್ಳಲು

ಬಿಗ್ ಬಾಸ್ ಮಾಜಿ ಸ್ಪರ್ಧಿಗೆ ಶಾಕ್| ತನಿಖೆ ನಡೆಸಿದ ಪೊಲೀಸರು Read More »

ರಾಮನಗರದ ರೇಷ್ಮೆ ನೂಲು ಕಾರ್ಖಾನೆಯಲ್ಲಿ‌ ಬಾಯ್ಲರ್ ಸ್ಫೋಟ| ಓರ್ವ ಸಾವು

ಸಮಗ್ರ ನ್ಯೂಸ್: ರಾಮನಗರದ ರೇಷ್ಮೆ ನೂಲು ಕಾರ್ಖಾನೆಯಲ್ಲಿ‌ ಬಾಯ್ಲರ್ ಸ್ಫೋಟಗೊಂಡು ಓರ್ವ ಕಾರ್ಮಿಕ‌ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ರಾಮನಗರದ ಟಿಪ್ಪುಬಡಾವಣೆಯ ಕಾರ್ಖಾನೆಯಲ್ಲಿ‌ ಈ ಘಟನೆ ಸಂಭವಿಸಿದೆ. ಸನಾವುಲ್ಲಾ ಖಾನ್(63)‌ ಮೃತ ವ್ಯಕ್ತಿ. ಬಾಯ್ಲರ್‌ಗೆ ಸೌದೆ ಹಾಕುವಾಗ ಏಕಾಏಕಿ ಸ್ಫೋಟಗೊಂಡು ಅನಾಹುತ ಸಂಭವಿಸಿದೆ. ಕಾರ್ಖಾನೆಯಲ್ಲಿ‌ 10ಕ್ಕೂ‌ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅದೃಷ್ಟವಶಾತ್‌ ಉಳಿದ ಕಾರ್ಮಿಕರು ದೂರವಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಈ ಕಾರ್ಖಾನೆ ಅಕ್ರಂ ಪಾಷಾ ಎಂಬುವವರಿಗೆ ಸೇರಿದ್ದು, ಅವರ

ರಾಮನಗರದ ರೇಷ್ಮೆ ನೂಲು ಕಾರ್ಖಾನೆಯಲ್ಲಿ‌ ಬಾಯ್ಲರ್ ಸ್ಫೋಟ| ಓರ್ವ ಸಾವು Read More »

ಪ್ರತಿಷ್ಠಿತ ಕಾರ್ ಶೋ ರೂಂ ಗೆ ಬೆಂಕಿ: ಕೋಟ್ಯಂತರ ರುಪಾಯಿ ನಷ್ಟ

ಸಮಗ್ರ ನ್ಯೂಸ್: ಶಿವಮೊಗ್ಗದ ಪ್ರತಿಷ್ಠಿತ ಕಾರ್ ಶೋ ರೂಂ ಗೆ ಬೆಂಕಿ ಬಿದ್ದು ಕೋಟಿ ಕೋಟಿಗೂ ಅಧಿಕ ಕಾರ್​ಗಳು ಬೆಂಕಿಗೆ ಆಹುತಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಸುಮಾರು 9.30 ಆಸುಪಾಸಿನಲ್ಲಿ ನಗರದ ಶಂಕರ ಮಠದ ರಸ್ತೆಯ ರಾಹುಲ್ ಹುಂಡೈ ಕಾರ್ ಶೋ ರೂಂನಲ್ಲಿ ಆಕಸ್ಮಿಕ ಬೆಂಕಿ ಕಂಡು ಬಂದಿದೆ. ನೋಡು ನೋಡುತ್ತಿದ್ದಂತೆ ಶೋಂ ನಲ್ಲಿ ಗ್ರಾಹಕರಿಗೆ ನೋಡಲು ಇಟ್ಟಿದ್ದ ಒಳಗೆ ಎರಡು ಕಾರ್​ಗಳು ಬೆಂಕಿಗೆ ಆಹುತಿಯಾಗಿವೆ. ಇನ್ನೂ ಪಕ್ಕದಲ್ಲಿ ಟಾಟಾ ಕಾರ್ ಶೋ ರೂಂ ಇದೆ.

ಪ್ರತಿಷ್ಠಿತ ಕಾರ್ ಶೋ ರೂಂ ಗೆ ಬೆಂಕಿ: ಕೋಟ್ಯಂತರ ರುಪಾಯಿ ನಷ್ಟ Read More »

ವೆಂಕಟರಮಣನ ಜಾತ್ರೆಯಲ್ಲಿ ಗಂಜಿ ಊಟವೇ ವೈಶಿಷ್ಟ್ಯ| ಮಂಗಳೂರಿನಲ್ಲೊಂದು ಅಪರೂಪದ ಪರಂಪರೆ

ಸಮಗ್ರ ವಿಶೇಷ: ಅದು ನೂರ ಇಪ್ಪತ್ತೈದು ವರ್ಷಗಳ ಅವಿಚ್ಚಿನ್ನ ಪರಂಪರೆ. ಆ ಬೆಳಗ್ಗಿನ ಗಂಜಿ ಊಟಕ್ಕೆ ಶತಮಾನಗಳ ಇತಿಹಾಸ. ಜನ ರಸ್ತೆಯುದ್ದಕ್ಕೂ ಸರತಿ ಸಾಲಿನಲ್ಲಿ ನಿಂತು ಬೆಳಗ್ಗಿನ ಗಂಜಿಗಾಗಿ ಕಾಯುತ್ತಿರುವ ದೃಶ್ಯ ಕಂಡು ಬಂದಿದ್ದು, ಮಂಗಳೂರಿನ ವಿಟಿ ರೋಡ್‌ನಲ್ಲಿರುವ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ. ಮಂಗಳೂರಿನ ಸುಪ್ರಸಿದ್ಧ ವೆಂಕಟರಮಣ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಯ ಐದು ದಿನ ಬೆಳಗ್ಗಿನ ಗಂಜಿಯನ್ನು ನೀಡಲಾಗುತ್ತದೆ. ಬ್ರಹ್ಮರಥೋತ್ಸವದ ದಿನದಂದು ಮಾತ್ರ ಉದ್ದಿನ ದೋಸೆ, ಕಿಚಡಿಗಳ ಉಪಹಾರವನ್ನು ನೀಡಲಾಗುತ್ತದೆ. ಸಾವಿರಾರು ಜನ

ವೆಂಕಟರಮಣನ ಜಾತ್ರೆಯಲ್ಲಿ ಗಂಜಿ ಊಟವೇ ವೈಶಿಷ್ಟ್ಯ| ಮಂಗಳೂರಿನಲ್ಲೊಂದು ಅಪರೂಪದ ಪರಂಪರೆ Read More »

ಶಾಲಾ ಬಸ್ ಪಲ್ಟಿ| 25ಕ್ಕೂ ಅಧಿಕ ಮಕ್ಕಳಿಗೆ ಗಾಯ

ಸಮಗ್ರ ನ್ಯೂಸ್: ಶಾಲಾ ಬಸ್ ಪಲ್ಟಿಯಾಗಿ 25 ಕ್ಕೂ ಅಧಿಕ ಮಕ್ಕಳಿಗೆ ಗಾಯವಾದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಬಿಳಕಿ ಗ್ರಾಮದ ಬಳಿ ನಡೆದಿದೆ. ಭದ್ರಾವತಿಯ ಸ್ಫೂರ್ತಿ ಇಂಟರ್ ನ್ಯಾಷನಲ್ ಶಾಲೆಗೆ ಸೇರಿದ ಶಾಲಾ ಬಸ್ ಇದಾಗಿದ್ದು, ಎದುರುಗಡೆಯಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ಕೊಡಲು ಹೋಗಿ ಪಲ್ಟಿಯಾಗಿದೆ. ಗಾಯಾಳು ಮಕ್ಕಳಿಗೆ ಭದ್ರಾವತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಶಾಲಾ ಬಸ್ ಪಲ್ಟಿ| 25ಕ್ಕೂ ಅಧಿಕ ಮಕ್ಕಳಿಗೆ ಗಾಯ Read More »

58ನೇ ಜ್ಞಾನಪೀಠ ಪ್ರಶಸ್ತಿ ಘೋಷಣೆ|ಉರ್ದು ಕವಿ ಗುಲ್ಜಾರ್ ಮತ್ತು ರಾಮಭದ್ರಾಚಾರ್ಯರಿಗೆ ಪ್ರಶಸ್ತಿ

ಸಮಗ್ರ ನ್ಯೂಸ್:58ನೇ ಜ್ಞಾನಪೀಠ ಪ್ರಶಸ್ತಿಯನ್ನು ಇಂದು ಘೋಷಣೆ ಮಾಡಲಾಗಿದೆ. ಪ್ರಸಿದ್ಧ ಉರ್ದು ಕವಿ ಮತ್ತು ಗೀತರಚನೆಕಾರ ಗುಲ್ಜಾರ್ ಮತ್ತು ಸಂಸ್ಕೃತ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಅವರು 58ನೇ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂದು ಜ್ಞಾನಪೀಠ ಆಯ್ಕೆ ಸಮಿತಿ ಪ್ರಕಟಿಸಿದೆ. ಗುಲ್ಜಾರ್ ಅವರು ಹಿಂದಿ ಚಿತ್ರರಂಗದಲ್ಲಿ ತಮ್ಮ ಸಾಹಿತ್ಯ ಕೃಷಿಗಾಗಿ ಹೆಸರುವಾಸಿಯಾಗಿದ್ದಾರೆ ಜೊತೆಗೆ ಪ್ರಸ್ತುತ ಅತ್ಯುತ್ತಮ ಉರ್ದು ಕವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.2002 ರಲ್ಲಿ ಉರ್ದುಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2013 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, 2004

58ನೇ ಜ್ಞಾನಪೀಠ ಪ್ರಶಸ್ತಿ ಘೋಷಣೆ|ಉರ್ದು ಕವಿ ಗುಲ್ಜಾರ್ ಮತ್ತು ರಾಮಭದ್ರಾಚಾರ್ಯರಿಗೆ ಪ್ರಶಸ್ತಿ Read More »

“ದಕ್ಷಿಣ ಕನ್ನಡದ ತೆರಿಗೆ ಮುಸ್ಲಿಮರ ಮನೆಗೆ” ಎಂಬ ವಿವಾದಾತ್ಮಕ ಪೋಸ್ಟರ್ ಪ್ರದರ್ಶನ ಮಾಡಿದ ಹರೀಶ್ ಪೂಂಜಾ| ಜನಪ್ರತಿನಿಧಿಯಾಗಲು ನಾಲಾಯಕ್: ಎಸ್‌ಡಿಪಿಐ ಆಕ್ರೋಶ

ಸಮಗ್ರ ನ್ಯೂಸ್: ಬಜೆಟ್ ಮಂಡನೆಯ ವಿಚಾರವಾಗಿ ಬಿಜೆಪಿ ಫೆ.17ರಂದು ವಿಧಾನಸೌಧದ ಹೊರಗೆ ಪ್ರತಿಭಟನೆಯ ಸಂದರ್ಭದಲ್ಲಿ ಬೆಳ್ತಂಗಡಿ ಕ್ಷೇತ್ರ ಶಾಸಕ ಹರೀಶ್ ಪೂಂಜ “ದಕ್ಷಿಣ ಕನ್ನಡದ ತೆರಿಗೆ ಮುಸ್ಲಿಮರ ಮನೆಗೆ” ವಿವಾದಾತ್ಮಕ ಪೋಸ್ಟರ್ ಪ್ರದರ್ಶನವು ಸಂವಿಧಾನ ಬಾಹಿರವಾಗಿದೆ. ಇಂತಹ ಕೋಮುವಾದಿ ಮನಸ್ಥಿತಿಯವರು ಜನಪ್ರತಿನಿಧಿಯಾಗಲು ನಾಲಾಯಾಕ್ ಎಂದು SDPI ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಅವರು ನಮ್ಮ ತೆರಿಗೆ ನಮ್ಮ ಹಕ್ಕು, ನಮ್ಮ ತೆರಿಗೆ ನಮಗೆ ಕೊಡಿ. ದಕ್ಷಿಣ ಕನ್ನಡದ

“ದಕ್ಷಿಣ ಕನ್ನಡದ ತೆರಿಗೆ ಮುಸ್ಲಿಮರ ಮನೆಗೆ” ಎಂಬ ವಿವಾದಾತ್ಮಕ ಪೋಸ್ಟರ್ ಪ್ರದರ್ಶನ ಮಾಡಿದ ಹರೀಶ್ ಪೂಂಜಾ| ಜನಪ್ರತಿನಿಧಿಯಾಗಲು ನಾಲಾಯಕ್: ಎಸ್‌ಡಿಪಿಐ ಆಕ್ರೋಶ Read More »