Editor

ರಸ್ತೆ ಅಪಘಾತದಿಂದ ಮಂಗಳೂರಿನ ಯುವತಿ ದುಬೈನಲ್ಲಿ ಸಾವು

ಸಮಗ್ರ ನ್ಯೂಸ್: ದುಬೈನಲ್ಲಿ ರಸ್ತೆ ಅಪಘಾತ ಸಂಭವಿಸಿ ಮಂಗಳೂರು ಮೂಲದ ಯುವತಿ ಮೃತಪಟ್ಟಿದ್ದಾಳೆ. ಮಂಗಳೂರು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ , ಕೋಟೆಕಾರಿನ ಬೀರಿಯ ಕೆಂಪುಮಣ್ಣು ನಿವಾಸಿ ರಾಜೀವಿ ಅವರ ಏಕೈಕ ಪುತ್ರಿ ವಿದಿಶಾ (28) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಂಗಳೂರು ಮೂಲದ ವಿದಿಶಾ ದುಬೈನಲ್ಲಿ ವಾಸವಿದ್ದರು. ಪ್ರತಿ ದಿನ ಕಂಪನಿಗೆ ಕ್ಯಾಬ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಆದರೆ ಫೆಬ್ರವರಿ 22 ರಂದು ಕ್ಯಾಬ್ ತಪ್ಪಿದ ಕಾರಣಕ್ಕೆ ತಮ್ಮದೇ ಕಾರನ್ನು ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಕಾರಿನ ನಿಯಂತ್ರಣ

ರಸ್ತೆ ಅಪಘಾತದಿಂದ ಮಂಗಳೂರಿನ ಯುವತಿ ದುಬೈನಲ್ಲಿ ಸಾವು Read More »

ಸುಳ್ಯ: ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಇನ್ಸ್ಪೈರ್ ಅವಾರ್ಡ್ ಗೆ ಆಯ್ಕೆ

ಸಮಗ್ರ ನ್ಯೂಸ್: ಕೇಂದ್ರ ಸರಕಾರದ ವಿಜ್ಞಾನ ಮತ್ತು ಪ್ರಪಂಚ ಜ್ಞಾನ ಇಲಾಖೆ ನೀಡುವ ಇನ್ಸ್ಪೈರ್ ಅವಾರ್ಡ್ ಗೆ ಅಜಿತ್ ಕೃಷ್ಣ ಕೆ. ಆಯ್ಕೆ. ಇವರು ಸುಳ್ಯ ಪಿ.ಎಲ್.ಡಿ. ಬ್ಯಾಂಕ್ ಇಲ್ಲಿನ ಕ್ಷೇತ್ರ ಅಧಿಕಾರಿಯಾಗಿರುವ ದಾಮೋದರ ಎಂ. ಮತ್ತು ಶೀಲಾವತಿ ದಂಪತಿಗಳ ಪುತ್ರ. ಇವರಿಗೆ ಶಾಲಾ ಆಡಳಿತ ಮಂಡಳಿ ಮತ್ತು ಮುಖ್ಯೋಪಾಧ್ಯಾಯರ ಸಹಕಾರದಲ್ಲಿ ವಿಜ್ಞಾನ ಶಿಕ್ಷಕಿ ಪೂರ್ಣಿಮಾ ಮಾರ್ಗದರ್ಶನ ನೀಡಿದ್ದಾರೆ.

ಸುಳ್ಯ: ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಇನ್ಸ್ಪೈರ್ ಅವಾರ್ಡ್ ಗೆ ಆಯ್ಕೆ Read More »

ಬಿಜೆಪಿ ಸರ್ಕಾರದ ವಿರುದ್ಧದ ಅಪಪ್ರಚಾರ/ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್‍ಗೆ ಕೋರ್ಟ್ ಸಮನ್ಸ್

ಸಮಗ್ರ ನ್ಯೂಸ್: ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ವಿಧಾನಸಭೆಯ ಚುನಾವಣೆಯ ವೇಳೆ ಅಪಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿಕೆ ಶಿವಕುಮಾರ್‍ಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಸರ್ಕಾರದ ವಿರುದ್ಧ ಅಪಪ್ರಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಖಾಸಗಿ ದೂರು ನೀಡಿತ್ತು. ಈ ದೂರಿನ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಮಾರ್ಚ್ 28ಕ್ಕೆ ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಕಾಂಗ್ರೆಸ್ 40%

ಬಿಜೆಪಿ ಸರ್ಕಾರದ ವಿರುದ್ಧದ ಅಪಪ್ರಚಾರ/ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್‍ಗೆ ಕೋರ್ಟ್ ಸಮನ್ಸ್ Read More »

ಬೆಂಗಳೂರಿಗರಿಗೆ ಸಿಹಿ ಸುದ್ದಿ/ ಬೆಳಿಗ್ಗೆ ಐದರಿಂದ ಓಡಾಡಲಿದೆ ಮೆಟ್ರೋ

ಸಮಗ್ರ ನ್ಯೂಸ್: ಮೆಟ್ರೋ ರೈಲು ನಿಗಮವು ಬೆಂಗಳೂರಿನ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದು, ಪೀಕ್ ಅವರ್ ಗಳಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಾದ ಹಿನ್ನೆಲೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಬೆಳಿಗ್ಗೆ 5 ಗಂಟೆಗೆ ರೈಲು ಸೇವೆ ಕೂಡ ಆರಂಭ ಹಾಗೂ ಕಡಿಮೆ ಸಮಯದಲ್ಲಿ ಹೆಚ್ಚು ರೈಲುಗಳನ್ನು ಸಂಚರಿಸಲು ನಿರ್ಧಾರ ಮಾಡಿದೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಬೆಳಿಗ್ಗೆ 5 ಗಂಟೆಗೆ ರೈಲು ಸೇವೆ ಕೂಡ ಆರಂಭವಾಗುತ್ತಿದ್ದು, ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ನಿಂದ ಎಲ್ಲಾ ದಿಕ್ಕುಗಳಿಗೆ ಮೊದಲ ರೈಲು

ಬೆಂಗಳೂರಿಗರಿಗೆ ಸಿಹಿ ಸುದ್ದಿ/ ಬೆಳಿಗ್ಗೆ ಐದರಿಂದ ಓಡಾಡಲಿದೆ ಮೆಟ್ರೋ Read More »

ಮಾಜಿ ಲವರ್ ಕಾಟ ತಾಳಲಾರದೆ ನಿಶ್ಚಿತಾರ್ಥವಾಗಿದ್ದ ಯುವತಿ ಸಾವು

ಸಮಗ್ರ ನ್ಯೂಸ್: ನಿಶ್ಚಿತಾರ್ಥವಾಗಿದ್ದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಹೊರವಲಯದ ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾಜಿ ಪ್ರಿಯಕರ ಪಕ್ಕದ ಮನೆಯಲ್ಲಿದ್ದು ನಿರಂತರ ಕಾಟ ಕೊಡುತ್ತಿದ್ದ, ಅವನ ಕಾಟ ತಾಳಲಾರದೆ, ನಿಶ್ಚಿತಾರ್ಥವಾಗಿದ್ದ ಚಂದ್ರಕಲಾ (19)ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಿಗಣಿ ಸಮೀಪದ ನಂಜಾಪುರದಲ್ಲಿ ಮೊನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಿಗಣಿ ಸಮೀಪದ ನಂಜಾಪುರದ ನಿವಾಸಿಯಾಗಿದ್ದ ಮೃತ ಚಂದ್ರಕಲಾ ಹಾಗೂ ಆರೋಪಿ ಅರುಣ್ ಕುಮಾರ್​ ಪರಸ್ಪರ ಪ್ರೀಸುತ್ತಿದ್ದರಂತೆ. ಬಳಿಕ ಚಂದ್ರಕಲಾ ಮದುವೆ ಪ್ರಸ್ತಾಪ ಮಾಡಿದ್ದಾಳೆ. ಇಲ್ಲ

ಮಾಜಿ ಲವರ್ ಕಾಟ ತಾಳಲಾರದೆ ನಿಶ್ಚಿತಾರ್ಥವಾಗಿದ್ದ ಯುವತಿ ಸಾವು Read More »

ಸುಳ್ಯ: ಫೆ.24, ಕೊಡೆಂಚಿಕಾರ್ ಶ್ರೀ ಕೊರಗತನಿಯ ದೈವದ ದೈವಸ್ಥಾನದಲ್ಲಿ 22ನೇ ವರ್ಷದ ಶ್ರೀ ಕೊರಗ ತನಿಯ ಮತ್ತು ಗುಳಿಗ ದೈವಗಳ ನೇಮೋತ್ಸವ

ಸಮಗ್ರ ನ್ಯೂಸ್: ಪೇರಾಲು ಕೊಡೆಂಚಿಕಾರ್ ಶ್ರೀ ಕೊರಗತನಿಯ ದೈವದ ದೈವಸ್ಥಾನದಲ್ಲಿ ಫೆ. 24ನೇ ಶನಿವಾರದಂದು 22ನೇ ವರ್ಷದ ಶ್ರೀ ಕೊರಗ ತನಿಯ ಮತ್ತು ಗುಳಿಗ ದೈವಗಳನೇಮೋತ್ಸವ ಕಾರ್ಯಕ್ರಮ ನಡೆಯಲಿದೆ. ಫೆ. 24ರಂದು ಬೆಳಗ್ಗೆ 8.00 ಕ್ಕೆ ಗಣಪತಿ ಹವನ ಮತ್ತು ನಾಗಪೂಜೆ, 10.00 ರಿಂದ ಶನಿಪೂಜೆ, ಹೂವಿನ ಪೂಜೆ, ಕಲಶ ಸ್ನಾನ, 10.00ರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 1.00ಕ್ಕೆ ಅನ್ನಸಂತರ್ಪಣೆ, ಸಂಜೆ 3.00ಕ್ಕೆ ಗುಳಿಗನ ಕೋಲ, ಪ್ರಸಾರ ವಿತರಣೆ, ರಾತ್ರಿ

ಸುಳ್ಯ: ಫೆ.24, ಕೊಡೆಂಚಿಕಾರ್ ಶ್ರೀ ಕೊರಗತನಿಯ ದೈವದ ದೈವಸ್ಥಾನದಲ್ಲಿ 22ನೇ ವರ್ಷದ ಶ್ರೀ ಕೊರಗ ತನಿಯ ಮತ್ತು ಗುಳಿಗ ದೈವಗಳ ನೇಮೋತ್ಸವ Read More »

ಖಾಸಗಿ ಕಂಪನಿಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ| ಈ ಸಂಬಂಧ ಹೋರಾಟ ಮಾಡಲು ಕರವೇ ಚಿಂತನೆ

ಸಮಗ್ರ ನ್ಯೂಸ್:ಕರ್ನಾಟಕ ರಕ್ಷಣಾ ವೇದಿಕೆ ನಾಮಫಲಕ ವಿಚಾರವಾಗಿ ಡಿಸೆಂಬರ್​ 27 ರಂದು ಹೋರಾಟ ಮಾಡಿ, ಫೆಬ್ರವರಿ 28ರ ವರೆಗೆ ಗಡುವು ನೀಡಿದ್ದರ ಪರಿಣಾಮ ನಾಮಫಲಕಗಳಲ್ಲಿ ಶೇ60 ರಷ್ಟು ಕನ್ನಡ ಕಡ್ಡಾಯ ಮಾಡಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಇದರ ಪರಿಣಾಮವಾಗಿ ಈಗ ಬೆಂಗಳೂರು ಕನ್ನಡಮಯ ಆಗುತ್ತಿದೆ. ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದರು. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇನ್ನೂ ಉದ್ಯೋಗ ಮೀಸಲಾತಿಗಾಗಿ ಹೋರಾಟ ಮಾಡುತ್ತೇವೆ. ಎಲ್ಲ ಖಾಸಗಿ ಕಂಪನಿಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಲೇಬೇಕು. ಈ

ಖಾಸಗಿ ಕಂಪನಿಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ| ಈ ಸಂಬಂಧ ಹೋರಾಟ ಮಾಡಲು ಕರವೇ ಚಿಂತನೆ Read More »

ಲೋಕ ಗೆಲ್ಲಲ್ಲು ತಂತ್ರ|ಕುಕ್ಕರ್‌ ಬಾಂಬ್‌ ಬ್ಲಾಸ್ಟ್ ಮಾಡಿದ ಬ್ರದರ್ಸ್‌ಗಳ ಬ್ರದರ್‌‌ರಿಂದ ಕುಕ್ಕರ್‌ ಹಂಚಿಕೆ ಎಂದು ಬಿಜೆಪಿ ಪೋಸ್ಟ್

ಸಮಗ್ರ ನ್ಯೂಸ್: ಇನ್ನೇನು ಲೋಕಸಭಾ ಚುನಾವಣೆ ಸಮೀಪದಲ್ಲಿ ಇದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಅವರು ಮತದಾರರನ್ನು ಸೆಳೆಯಲು ಕುಕ್ಕರ್ ವಿತರಿಸಿ ಆಮಿಷವೊಡ್ಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಿಜೆಪಿ ಟ್ವೀಟ್ ಮೂಲಕ ಕ್ರಮಕ್ಕೆ ಒತ್ತಾಯಿಸಿದೆ. ಕುಕ್ಕರ್‌ ಬಾಂಬ್‌ ಬ್ಲಾಸ್ಟ್ ಮಾಡಿದ ಬ್ರದರ್ಸ್‌ಗಳ ಬ್ರದರ್‌‌ರಿಂದ ಕುಕ್ಕರ್‌ ಹಂಚಿಕೆ! ದೇಶದ ವಿಭಜನೆ ಮಾಡುವ ಸಂಚು ರೂಪಿಸಿದ್ದ ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಅವರಿಗೆ ಚುನಾವಣೆ ಘೋಷಣೆ ಮುನ್ನವೇ ಸೋಲಿನ ಭೀತಿ ಶುರುವಾಗಿದೆ.

ಲೋಕ ಗೆಲ್ಲಲ್ಲು ತಂತ್ರ|ಕುಕ್ಕರ್‌ ಬಾಂಬ್‌ ಬ್ಲಾಸ್ಟ್ ಮಾಡಿದ ಬ್ರದರ್ಸ್‌ಗಳ ಬ್ರದರ್‌‌ರಿಂದ ಕುಕ್ಕರ್‌ ಹಂಚಿಕೆ ಎಂದು ಬಿಜೆಪಿ ಪೋಸ್ಟ್ Read More »

Union Bank ನಲ್ಲಿ ಉದ್ಯೋಗವಕಾಶ, ತಿಂಗಳಿಗೆ 90,000 ಕೊಡ್ತಾರೆ!

ಸಮಗ್ರ ಉದ್ಯೋಗ: Union Bank of India ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 606 ಸ್ಪೆಷಲಿಸ್ಟ್ ಆಫೀಸರ್ (ಮ್ಯಾನೇಜರ್)​ ಹುದ್ದೆಗಳು ಖಾಲಿ ಇದ್ದು, ಅಸಕ್ತರು ಈಗಲೇ ಅರ್ಜಿ ಸಲ್ಲಿಸಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಫೆಬ್ರವರಿ 23, 2024 ಅಂದರೆ ಇವತ್ತೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ವಿದ್ಯಾರ್ಹತೆ:ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ

Union Bank ನಲ್ಲಿ ಉದ್ಯೋಗವಕಾಶ, ತಿಂಗಳಿಗೆ 90,000 ಕೊಡ್ತಾರೆ! Read More »

ಭಾರತೀಯ ನೌಕಾಪಡೆಯ ಬಲ ಹೆಚ್ಚಳ/ 200 ಬ್ರಹ್ಮೋಸ್ ಕ್ಷಿಪಣಿಗಳ ಖರೀದಿಗೆ ಭದ್ರತೆ ಕುರಿತ ಸಂಪುಟ ಸಮಿತಿ ಅನುಮೋದನೆ

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರವು ಭಾರತೀಯ ನೌಕಾಪಡೆಯ ಬಲ ಹೆಚ್ಚಿಸಲು ಮಹತ್ವದ ನಿರ್ಧಾರ ಕೈಗೊಂಡಿದ್ದು, 19,000 ಕೋಟಿ ವೆಚ್ಚದಲ್ಲಿ 200 ಬ್ರಹ್ಮಸ್ ಕ್ಷಿಪಣಿಗಳ ಖರೀದಿಗೆ ಭದ್ರತೆ ಕುರಿತ ಸಂಪುಟ ಸಮಿತಿ ಅನುಮೋದನೆ ನೀಡಿದೆ. ಸಮುದ್ರ ಪ್ರದೇಶವನ್ನು ಉತ್ತಮವಾಗಿ ನಿಯಂತ್ರಿಸಲು ಮತ್ತು ಯಾವುದೇ ಕಾರ್ಯಾಚರಣೆಗೆ ಸಿದ್ಧವಾಗಿರಲು ಭಾರತೀಯ ನೌಕಾಪಡೆಗೆ ಇದು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಮಾರ್ಚ್ ಕೊನೆಯ ವಾರದಲ್ಲಿ ಬ್ರಹ್ಮಸ್ ಏರೋಸ್ಪೇಸ್ ಮತ್ತು ಕೇಂದ್ರ ಸರ್ಕಾರವು ಕ್ಷಿಪಣಿಗಳ ಖರೀದಿಗೆ ಒಪ್ಪಂದಕ್ಕೆ ಸಹಿ ಹಾಕಲಿದೆ ಎಂದು ಉನ್ನತ ಮೂಲಗಳು

ಭಾರತೀಯ ನೌಕಾಪಡೆಯ ಬಲ ಹೆಚ್ಚಳ/ 200 ಬ್ರಹ್ಮೋಸ್ ಕ್ಷಿಪಣಿಗಳ ಖರೀದಿಗೆ ಭದ್ರತೆ ಕುರಿತ ಸಂಪುಟ ಸಮಿತಿ ಅನುಮೋದನೆ Read More »