ತಲೆಮರೆಸಿಕೊಂಡ ನಟಿ ಜಯಪ್ರದಾ/ ಅರೆಸ್ಟ್ ಮಾಡುವಂತೆ ಸೂಚಿಸಿದ ನ್ಯಾಯಾಲಯ
ಸಮಗ್ರ ನ್ಯೂಸ್: ವಿಚಾರಣೆಗೆ ಹಾಜರಾಗದೆ ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ತಲೆಮರೆಸಿಕೊಂಡಿದ್ದಾರೆ ಎಂದು ನ್ಯಾಯಾಲಯ ಘೋಷಿಸಿದ್ದು, ಅವರನ್ನು ಅರೆಸ್ಟ್ ಮಾಡುವಂತೆ ಪೋಲಿಸರಿಗೆ ಸೂಚನೆ ನೀಡಿದೆ. 2019ರ ಲೋಕಸಭೆ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ರಾಮಪುರದಲ್ಲಿ ಪ್ರಕರಣ ದಾಖಲಾಗಿದ್ದು, ಇದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಸಮನ್ಸ್ ನೀಡಿದ ಹೊರತಾಗಿಯೂ ಜಯಪ್ರದಾ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ, ನ್ಯಾಯಾಲಯ ಈ ಆದೇಶ ಹೊರಡಿಸಿದೆ. ನ್ಯಾಯಾಲಯದಿಂದ ಜಯಪ್ರದಾ ಅವರಿಗೆ ಹಲವು ಬಾರಿ ಸಮನ್ಸ್ ಜಾರಿಯಾಗಿತ್ತು.
ತಲೆಮರೆಸಿಕೊಂಡ ನಟಿ ಜಯಪ್ರದಾ/ ಅರೆಸ್ಟ್ ಮಾಡುವಂತೆ ಸೂಚಿಸಿದ ನ್ಯಾಯಾಲಯ Read More »










