Editor

ಕಾರ್ಕಳ: ಬೂತ್ ಗಳನ್ನು ಗೆದ್ದರೆ ಬಿಜೆಪಿ ಅಭ್ಯರ್ಥಿಗಳು ಗೆದ್ದಂತೆ; ವಿ.ಸುನಿಲ್ ಕುಮಾರ್

ಸಮಗ್ರ ನ್ಯೂಸ್‌ : ಲೋಕಸಭೆ ಚುನಾವಣೆಯಲ್ಲಿ ಬೂತ್ ಗಳನ್ನು ಗೆದ್ದರೆ ಬಿಜೆಪಿ ಅಭ್ಯರ್ಥಿಗಳು ಗೆದ್ದಂತೆ, ಆದ್ದರಿಂದ ಕಾರ್ಯಕರ್ತರು ಮುಂದಿನ 20 ದಿನಗಳಲ್ಲಿ ಎಲ್ಲರೂ ಪ್ರಧಾನಿ ಮೋದಿಯವರಿಗಾಗಿ ಒಗ್ಗಟ್ಟಾಗಿ ದುಡಿಯಬೇಕಿದೆ ಎಂದು ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರಿಗೆ ಮಾಜಿ ಸಚಿವ ಹಾಗು ರಾಜ್ಯ ಬಿಜೆಪಿ ಚುನಾವಣಾ ಸಂಚಾಲಕ ವಿ.ಸುನಿಲ್ ಕುಮಾರ್ ಕರೆ ನೀಡಿದರು. ಅವರು ಶುಕ್ರವಾರ ಕಾರ್ಕಳದ ಮಂಜುನಾಥ ಪೈ ಸಭಾಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರಿಗೆ, ಬಾಂಬ್ ಸ್ಪೋಟ ನಡೆಸುವ

ಕಾರ್ಕಳ: ಬೂತ್ ಗಳನ್ನು ಗೆದ್ದರೆ ಬಿಜೆಪಿ ಅಭ್ಯರ್ಥಿಗಳು ಗೆದ್ದಂತೆ; ವಿ.ಸುನಿಲ್ ಕುಮಾರ್ Read More »

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ| ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತ ಎನ್​ಐಎ ವಶ

ಸಮಗ್ರ ನ್ಯೂಸ್: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಶಿವಮೊಗ್ಗದ ಓರ್ವ ಎನ್​ಐಎ ವಶ ಸಮಗ್ರ ನ್ಯೂಸ್: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಮುಂದುವರೆಯುತ್ತಿದ್ದು, ಇದೀಗ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್​ಐಎ) ತೀವ್ರಗೊಳಿಸಿದೆ, ಈಗ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಸಾಯಿಪ್ರಸಾದ್ ಎನ್ನುವಾತನನ್ನು ಇಂದು ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಕಳೆದ ವಾರ ತೀರ್ಥಹಳ್ಳಿಯಲ್ಲಿ ಇಬ್ಬರು ಮುಸ್ಲಿಂ ಯುವಕರ ಮನೆ ಹಾಗೂ ಮೊಬೈಲ್ ಅಂಗಡಿ ಮೇಲೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿ ಶೋಧ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ| ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತ ಎನ್​ಐಎ ವಶ Read More »

ಬೆಂಗಳೂರಿನ ಆರ್.ಟಿ ನಗರದಲ್ಲಿ ಬೆಂಕಿ ಅವಘಡ

ಸಮಗ್ರ ನ್ಯೂಸ್: ಬೆಂಗಳೂರಿನ ಮಿರಾಕಲ್ ಡ್ರಿಂಕ್ಸ್ ಮತ್ತು ಐಡಿಎಸ್ ಕಟ್ಟಡದ ನೆಲಮಹಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಟ್ಟಡದಲ್ಲಿ 10ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಆರ್.ಟಿ.ನಗರ ಪೊಲೀಸರ ದೌಡಾಯಿಸಿದ್ದು, ಪಕ್ಕದ ಕಟ್ಟಡಕ್ಕೆ ಏಣಿ ಇಟ್ಟು ಕಟ್ಟಡದಲ್ಲಿದ್ದವರ ರಕ್ಷಣಾ ಕಾರ್ಯಚರಣೆ ನಡೆಸಿದ್ದಾರೆ.5 ನೀರಿನ ಟ್ಯಾಂಕರ್ ಗಳಲ್ಲಿ ನೀರಿನ ವ್ಯವಸ್ಥೆ ಮಾಡಿದ್ದು ಬೆಂಕಿ ನಂದಿಸಲು ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದಾರೆ.

ಬೆಂಗಳೂರಿನ ಆರ್.ಟಿ ನಗರದಲ್ಲಿ ಬೆಂಕಿ ಅವಘಡ Read More »

ಚಾಮರಾಜನಗರ:ಬಟ್ಟೆ ಒಗೆಯಲು ಹೋದ ತಾಯಿ, ಇಬ್ಬರು ಮಕ್ಕಳು ನೀರುಪಾಲು

ಸಮಗ್ರ ನ್ಯೂಸ್ : ಬಟ್ಟೆ ಒಗೆಯಲು ಹೋದ ತಾಯಿ ಮತ್ತು ಇಬ್ಬರು ಮಕ್ಕಳು ನೀರುಪಾಲಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುದೂರು ಗ್ರಾಮದ ಮೀನಾ (33) ಪವಿತ್ರ (13) ಕೀರ್ತಿ (12) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಶುಕ್ರವಾರ ಮಧ್ಯಾಹ್ನ ಗೋಪಿನಾಥಂ ಜಲಾಶಯಕ್ಕೆ ಬಟ್ಟೆ ತೊಳೆಯಲು ಹೋಗಿದ್ದ ವೇಳೆ ಅವಘಡ ಸಂಭವಿಸಿದ್ದು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ತಾಯಿಯನ್ನು ರಕ್ಷಣೆ ಮಾಡಲು

ಚಾಮರಾಜನಗರ:ಬಟ್ಟೆ ಒಗೆಯಲು ಹೋದ ತಾಯಿ, ಇಬ್ಬರು ಮಕ್ಕಳು ನೀರುಪಾಲು Read More »

Lok Sabha Election: ಪ್ರತಿ ಕುಟುಂಬಕ್ಕೆ ಒಂದು ಲಕ್ಷ ರೂ! ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

ಸಮಗ್ರ ನ್ಯೂಸ್: ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣಾ ಪ್ರಣಾಳಿಕೆ ಬಿಡುಗಡೆ. ನ್ಯಾಯ ಪತ್ರ ಎಂಬ ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆಯಾಗಿದೆ. ದೆಹಲಿಯಲ್ಲಿ ನಡೆದ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಭಾಗವಹಿಸಿದ್ದರು. ಮಲ್ಲಿಕಾರ್ಜುನ ಖರ್ಗೆ ಪ್ರಣಾಳಿಕೆಯ ಅಂಶಗಳನ್ನು ವಾಚಿಸಿದರು. ಈ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷಗಳು ಬಡವರ ಮೇಲೆ ಭರವಸೆಗಳ ಸುರಿಮಳೆಗೈದಿವೆ. ಪ್ರಣಾಳಿಕೆಯಲ್ಲಿ 25 ಬಗೆಯ ಭರವಸೆಗಳನ್ನು ನೀಡಲಾಗಿದೆ. ‘ಭಾಗಿದರಿ ನ್ಯಾಯ’, ‘ಕಿಸಾನ್ ನ್ಯಾಯ’, ‘ನಾರಿ ನ್ಯಾಯ’, ‘ಶ್ರಮಿಕ್ ನ್ಯಾಯ’ ಮತ್ತು

Lok Sabha Election: ಪ್ರತಿ ಕುಟುಂಬಕ್ಕೆ ಒಂದು ಲಕ್ಷ ರೂ! ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ Read More »

Boat Watch ಪರ್ಚೇಸ್ ಮಾಡಬೇಕು ಅಂತ ಇದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ ಸೂಪರ್ ಆಫರ್!

ಇದು ಬೋಟ್ ಕಂಪನಿ ತಯಾರಿಸಿದ Xtend ಸ್ಮಾರ್ಟ್ ವಾಚ್ ಆಗಿದೆ. ಇದು ಅಲೆಕ್ಸಾ ಅಂತರ್ನಿರ್ಮಿತವನ್ನು ಹೊಂದಿದೆ. ಇದು 1.69 ಇಂಚಿನ HD ಡಿಸ್ಪ್ಲೇ ಹೊಂದಿದೆ. ಇದು ಬಹು ವಾಚ್ ಫೇಸ್‌ಗಳನ್ನು ಸಹ ಹೊಂದಿದೆ. ಅಂದರೆ ನಾವು ಗಡಿಯಾರದ ನೋಟವನ್ನು ಬದಲಾಯಿಸಬಹುದು. ಇನ್ನಷ್ಟು ತಿಳಿದುಕೊಳ್ಳೋಣ. ಈ ಗಡಿಯಾರದಲ್ಲಿ ಒತ್ತಡ ಮಾನಿಟರ್ ಇದೆ. ಇದು ಹೃದಯ ಬಡಿತವನ್ನು ಪರಿಶೀಲಿಸುತ್ತದೆ. SpO2 ಮಾನಿಟರಿಂಗ್, 14 ಕ್ರೀಡಾ ವಿಧಾನಗಳು, ನಿದ್ರೆ ಮಾನಿಟರ್, 5 ATM, 7 ದಿನಗಳ ಬ್ಯಾಟರಿ ಬ್ಯಾಕಪ್ ಹೊಂದಿದೆ. ಆದಾಗ್ಯೂ,

Boat Watch ಪರ್ಚೇಸ್ ಮಾಡಬೇಕು ಅಂತ ಇದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ ಸೂಪರ್ ಆಫರ್! Read More »

ಉಡುಪಿ: ಎಸ್ ಡಿಪಿಐ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ- ಶಾಸಕ ಯಶ್ ಪಾಲ್

ಸಮಗ್ರ ನ್ಯೂಸ್‌ : ರಾಜ್ಯಾದ್ಯಂತ ಹತ್ತಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದ ಸೋಷಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ನಾಮಪತ್ರವನ್ನು ಸಲ್ಲಿಕೆ ಮಾಡದೆ ತಟಸ್ಥವಾಗಿದೆ. ರಾಜ್ಯ ಲೋಕಸಭಾ ಚುನಾವಣೆಯ ಮೊದಲ ಹಂತದ ನಾಮಪತ್ರ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈವರೆಗೆ ಯಾರೂ ಆ ಪಕ್ಷದಿಂದ ಉಮೇದುವಾರಿಕೆ ಸಲ್ಲಿಸಿಲ್ಲ. ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಗಿಂತ ಹೆಚ್ಚು ಪ್ರಭಾವಶಾಲಿಯಾಗಿ ಸ್ಪರ್ಧೆ ಕೊಡುತ್ತೇವೆ ಎಂದು ಈ ಹಿಂದೆ ಎಸ್ ಡಿಪಿಐ ಹೇಳಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ ಉಡುಪಿ ಶಾಸಕ ಯಶ್

ಉಡುಪಿ: ಎಸ್ ಡಿಪಿಐ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ- ಶಾಸಕ ಯಶ್ ಪಾಲ್ Read More »

ನವದೆಹಲಿ:ಕೇಜ್ರಿವಾಲ್‌ ಅವರು ಜೈಲಿಗೆ ಹೋಗಲು ಬಿಜೆಪಿ ಸಂಚು; ಸಂಜಯ್‌ ಸಿಂಗ್‌

ಸಮಗ್ರ ನ್ಯೂಸ್‌ : ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಜೈಲಿಗೆ ತಳ್ಳಲು ಬಿಜೆಪಿ ಹಿರಿಯ ನಾಯಕರು ಸಂಚು ರೂಪಿಸಿದ್ದಾರೆ ಎಂದು ಎಎಪಿ ಸಂಸದ ಸಂಜಯ್‌ ಸಿಂಗ್‌ ಹೇಳಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆರೋಪಿಯಾಗಿರುವ ರಾಘವ್‌ ಮಾಗುಂಟಾ ಅವರಿಗೆ ಕೇಜ್ರಿವಾಲ್‌ ಅವರ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ಬಿಜೆಪಿ ಒತ್ತಡ ಹೇರುತ್ತಿದೆ ಎಂದು ಆರೋಪ ಮಾಡಿದ್ದಾರೆ. ರಾಘವ್‌ ಮಾಗುಂಟಾ ಅವರ

ನವದೆಹಲಿ:ಕೇಜ್ರಿವಾಲ್‌ ಅವರು ಜೈಲಿಗೆ ಹೋಗಲು ಬಿಜೆಪಿ ಸಂಚು; ಸಂಜಯ್‌ ಸಿಂಗ್‌ Read More »

ತುಮಕೂರು: ನೀರು ಕೇಳುವ ನೆಪದಲ್ಲಿ ಮನೆ ದರೋಡೆಗೆ ಯತ್ನ| ಆರೋಪಿಗಳ ಬಂಧನ

ಸಮಗ್ರ ನ್ಯೂಸ್‌ : ಮನೆಗೆ ಬಂದು ನೀರು ಕೇಳುವ ನೆಪದಲ್ಲಿ ಮಾಲೀಕನಿಗೆ ಪಿಸ್ತೂಲ್‍ನಿಂದ ಗುಂಡು ಹಾರಿಸಿ ಮನೆ ದರೋಡೆ ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಜಾರ್ಖಂಡ್ ಮೂಲದ ಏಜಾಸ್ ಮಿರ್ದಹ (30), ಸಹಿಬುಲ್ ಅನ್ಸಾರಿ (30) ಎಂದು ಗುರುತಿಸಲಾಗಿದೆ. ಆರೋಪಿಗಳು ಮಾ.26 ರಂದು ಕುಣಿಗಲ್‍ನ ಉರ್ಕೆಹಳ್ಳಿ ಗ್ರಾಮದ ಗಂಗಣ್ಣ ಎಂಬುವರ ತೋಟದ ಮನೆಗೆ ಕುಡಿಯುವ ನೀರು ಕೇಳಿಕೊಂಡು ಬಂದಿದ್ದರು. ಬಳಿಕ ಮನೆಯಲ್ಲಿದ್ದ ಹಣ ದೋಚಲು ಯತ್ನಿಸಿದ್ದರು. ಈ ವೇಳೆ ದರೋಡೆ

ತುಮಕೂರು: ನೀರು ಕೇಳುವ ನೆಪದಲ್ಲಿ ಮನೆ ದರೋಡೆಗೆ ಯತ್ನ| ಆರೋಪಿಗಳ ಬಂಧನ Read More »

ರಾಂಚಿ: ಹೇಮಂತ್‌ ಸೊರೇನ್‌ನ 31 ಕೋಟಿ ರೂ. ಮೌಲ್ಯದ ಆಸ್ತಿ, ಬಿಎಂಡಬ್ಲ್ಯೂ ಕಾರು ಇಡಿ ವಶಕ್ಕೆ

ಸಮಗ್ರ ನ್ಯೂಸ್‌ : ಅಕ್ರಮ ಹಣ ವರ್ಗಾವಣೆ & ಭೂ ಕಬಳಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ಜಾರ್ಖಂಡ್‌ನ ಮಾಜಿ ಸಿಎಂ ಹೇಮಂತ್‌ ಸೊರೇನ್‌ ಅವರಿಗೆ ಸೇರಿದ್ದ 31 ಕೋಟಿ ರೂ. ಮೌಲ್ಯದ ಆಸ್ತಿ ಜೊತೆಗೆ ದೆಹಲಿಯಲ್ಲಿರುವ ಅವರ ನಿವಾಸದಿಂದ 36 ಲಕ್ಷ ರೂ. ನಗದು ಹಾಗೂ ಬಿಎಂಡಬ್ಲ್ಯೂ ಕಾರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದುಕೊಂಡಿದೆ. ಹೇಮಂತ್‌ ಸೊರೇನ್‌ ವಿರುದ್ಧ ಜಾರಿ ನಿರ್ದೇಶನಾಲಯ ಜಾರ್ಜ್‌ಶೀಟ್‌ ದಾಖಲಿಸಿದ್ದು, ಪ್ರಕರಣದ ಹಲವು ರಹಸ್ಯಗಳು ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಇತರ ಆರೋಪಿಗಳಿಂದ ಸುಮಾರು 256

ರಾಂಚಿ: ಹೇಮಂತ್‌ ಸೊರೇನ್‌ನ 31 ಕೋಟಿ ರೂ. ಮೌಲ್ಯದ ಆಸ್ತಿ, ಬಿಎಂಡಬ್ಲ್ಯೂ ಕಾರು ಇಡಿ ವಶಕ್ಕೆ Read More »