Editor

18 ವರ್ಷ ತುಂಬಿದವರಿಗೆಲ್ಲಾ ಮತದಾನಕ್ಕೆ ಅವಕಾಶ

ಸಮಗ್ರ ನ್ಯೂಸ್: ಈ ವರ್ಷ 18 ಪ್ರಾಯ ತುಂಬಿದವರಿಗೂ ಚುನಾವಣಾ ಆಯೋಗ ಗುಡ್ ನ್ಯೂಸ್ ನೀಡಿದ್ದು, 2016 ರ ಜನವರಿ 1 ಮಾರ್ಚ್ 31ರ ನಡುವೆ ಜನಿಸಿದವರಿಗೂ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ. ಈಗಷ್ಟೇ 18 ವರ್ಷ ಆದವರಿಗೆ ಈಗ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶ ನೀಡದಿದ್ದರೆ ಅವರು ಮೊದಲ ಬಾರಿಗೆ ಮತ ಚಲಾಯಿಸಲು ಮುಂದಿನ ಚುನಾವಣೆಯವರೆಗೆ ಕಾಯಬೇಕಾಗುತ್ತದೆ. ಹೀಗಾಗಿ ಫಾರ್ಮ್ 6 ರ ನಿಬಂಧನೆಯ

18 ವರ್ಷ ತುಂಬಿದವರಿಗೆಲ್ಲಾ ಮತದಾನಕ್ಕೆ ಅವಕಾಶ Read More »

ರಾಜ್ಯ ರಾಜಕೀಯದಲ್ಲಿ ಜೋರಾಗಿದೆ ಒಕ್ಕಲಿಗ ಪಾಲಿಟಿಕ್ಸ್‌| ಚಲುವರಾಯಸ್ವಾಮಿ, ಎಚ್‌ಡಿಕೆ ಮಧ್ಯೆ ಪೋನ್ ಟ್ಯಾಪಿಂಗ್ ಸಮರ

ಸಮಗ್ರ ನ್ಯೂಸ್: ರಾಜ್ಯ ರಾಜಕೀಯದಲ್ಲಿ ಒಕ್ಕಲಿಗ ಪಾಲಿಟಿಕ್ಸ್‌ ಇದೀಗ ಜೋರಾಗಿದೆ. ಒಕ್ಕಲಿಗ ಸಮುದಾಯದ ಸಿಎಂ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕೆಳಗೆ ಇಳಿಸಿದ್ದು ಯಾರು? ಇದನ್ನು ಕೇಳುವ ಶಕ್ತಿ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಇದೆಯಾ? ಎಂಬ ಡಿ.ಕೆ. ಶಿವಕುಮಾರ್‌ ಹೇಳಿಕೆಯು ಈಗ ಮತ್ತೊಂದು ತಿರುವನ್ನು ಪಡೆದುಕೊಂಡಿದೆ. ಎಚ್‌ಡಿಕೆ ಅವರು ನಿರ್ಮಲಾನಂದನಾಥ ಶ್ರೀಗಳ ಫೋನ್‌ ಟ್ಯಾಪ್‌ ಮಾಡಿಸಿದ್ದರು ಎಂದು ಸಚಿವ ಎನ್. ಚಲುವರಾಯಸ್ವಾಮಿ‌ ಆರೋಪ ಮಾಡಿದ್ದಾರೆ. ಇದಕ್ಕೆ ಎಚ್‌ಡಿಕೆ ತಿರುಗೇಟು ನೀಡಿದ್ದು, ನಾನು ಫೋನ್ ಟ್ಯಾಪಿಂಗ್

ರಾಜ್ಯ ರಾಜಕೀಯದಲ್ಲಿ ಜೋರಾಗಿದೆ ಒಕ್ಕಲಿಗ ಪಾಲಿಟಿಕ್ಸ್‌| ಚಲುವರಾಯಸ್ವಾಮಿ, ಎಚ್‌ಡಿಕೆ ಮಧ್ಯೆ ಪೋನ್ ಟ್ಯಾಪಿಂಗ್ ಸಮರ Read More »

ಲಖನೌ: ಅರ್ಚಕರಂತೆ ವಸ್ತ ಧರಿಸಿ ಕಾಶಿ ದೇಗುಲದಲ್ಲಿ ಕರ್ತವ್ಯ ನಿರ್ವಹಿಸಲಿರುವ ಪೊಲೀಸ್‌ ಸಿಬ್ಬಂದಿ

ಸಮಗ್ರ ನ್ಯೂಸ್: ಕಾಶಿ ದೇಗುಲದಲ್ಲಿ ಪೊಲೀಸರಿಗೆ ಹೊಸ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ. ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸಿ, ಹಣೆಯಲ್ಲಿ ಗಂಧ ಅಥವಾ ವಿಭೂತಿ ಹಚ್ಚಿಕೊಂಡು, ಕಿತ್ತಳೆ ಬಣ್ಣದ ವಸ್ತ ಧರಿಸಿಕೊಂಡು ಥೇಟ್‌ ಅರ್ಚಕರಂತೆ ಪ್ರಸಿದ್ಧ ವಾರಾಣಸಿಯ ಕಾಶಿ ವಿಶ್ವನಾಥ ದೇಗುಲದ ಗರ್ಭಗುಡಿಯಲ್ಲಿ ಉತ್ತರಪ್ರದೇಶದ ಪೊಲೀಸ್‌ ಸಿಬ್ಬಂದಿ, ಭಕ್ತರು ದರ್ಶನಕ್ಕೆ ಬರುವ ವೇಳೆ ಕರ್ತವ್ಯ ನಿರ್ವಹಿಸಲಿದ್ದಾರೆ.‌ ವಿಶ್ವನಾಥನ ಗರ್ಭಗುಡಿಯ ಕರ್ತವ್ಯಕ್ಕೆ ನಿಯೋಜಿಸಲಾದ ಪೊಲೀಸ್‌ ಸಿಬ್ಬಂದಿಗೆ ಮಾತ್ರ ಈ ಹೊಸ ವಸ್ತ್ರಸಂಹಿತೆ ಅನ್ವಯಿಸಲಿದೆ. ಗರ್ಭಗುಡಿಯಲ್ಲಿ ಕರ್ತವ್ಯ ನಿಯೋಜಿತ ಮಹಿಳಾ ಪೊಲೀಸ್‌ ಸಿಬ್ಬಂದಿಯೂ

ಲಖನೌ: ಅರ್ಚಕರಂತೆ ವಸ್ತ ಧರಿಸಿ ಕಾಶಿ ದೇಗುಲದಲ್ಲಿ ಕರ್ತವ್ಯ ನಿರ್ವಹಿಸಲಿರುವ ಪೊಲೀಸ್‌ ಸಿಬ್ಬಂದಿ Read More »

Inter Result ಬಂದೇ ಬಿಡ್ತು, ಈ ಲಿಂಕ್ ಅನ್ನು ಕ್ಲಿಕ್ ಮಾಡಿ, ರಿಸಲ್ಟ್ ಚೆಕ್ ಮಾಡಬಹುದು

ಸಮಗ್ರ ನ್ಯೂಸ್: ಆಂಧ್ರಪ್ರದೇಶ ಬೋರ್ಡ್ ಆಫ್ ಇಂಟರ್ಮೀಡಿಯೇಟ್ ಎಕ್ಸಾಮಿನೇಷನ್ (BIEAP) ಫಲಿತಾಂಶಗಳನ್ನು ಇಂದು (ಏಪ್ರಿಲ್ 12) ಪ್ರಕಟಿಸಲಾಗುವುದು. ಇಂದು ಬೆಳಗ್ಗೆ 11 ಗಂಟೆಗೆ ತಾಡೆಪಲ್ಲಿಯಲ್ಲಿ ಇಂಟರ್ ಬೋರ್ಡ್ ಕಾರ್ಯದರ್ಶಿ ಇಂಟರ್ ಫಲಿತಾಂಶಗಳನ್ನು ಬಿಡುಗಡೆ ಮಾಡಲಿದ್ದಾರೆ. ಇಂಟರ್ ಮೊದಲ ವರ್ಷ ಮತ್ತು ದ್ವಿತೀಯ ವರ್ಷದ ಫಲಿತಾಂಶಗಳನ್ನು ಏಕಕಾಲದಲ್ಲಿ ಪ್ರಕಟಿಸಲಾಗುವುದು. ಎಪಿ ಮಧ್ಯಂತರ ಮಂಡಳಿಯು ಈ ನಿಟ್ಟಿನಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ. ಈ ವರ್ಷ ಮಾರ್ಚ್ 1ರಿಂದ 20ರವರೆಗೆ ನಡೆದ ಇಂಟರ್ ಮೀಡಿಯೇಟ್ ಪರೀಕ್ಷೆಗೆ 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು

Inter Result ಬಂದೇ ಬಿಡ್ತು, ಈ ಲಿಂಕ್ ಅನ್ನು ಕ್ಲಿಕ್ ಮಾಡಿ, ರಿಸಲ್ಟ್ ಚೆಕ್ ಮಾಡಬಹುದು Read More »

ನೊಯಿಡಾ: ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ರೀಲ್ಸ್- ಮೂವರ ಬಂಧನ

.ಸಮಗ್ರ ನ್ಯೂಸ್‌ : ರೀಲ್ಸ್ ಮಾಡುತ್ತ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲವಾಗಿ ವರ್ತಿಸಿದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಉತ್ತರ ಪ್ರದೇಶದ ನೊಯಿಡಾ ಪೊಲೀಸರು ಗುರುವಾರ ಬಂಧಿಸಿರುವ ಘಟನೆ ನಡೆದಿದೆ. ವಿಡಿಯೊ ಅಶ್ಲೀಲವಾಗಿವೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಆರೋಪಿಸಿದ ಬಳಿಕ ಮೂವರನ್ನು ಬಂಧಿಸಿದ್ದಾರೆ. ಅಲ್ಲದೇ ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸದ ಕಾರಣ ₹80,500 ದಂಡ ವಿಧಿಸಲಾಗಿದೆ. ಮೂವರ ವಿರುದ್ಧ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಲಾಗಿದೆ. ಜಮುನಾ ಪ್ರಸಾದ್‌ ಅಲಿಯಾಸ್‌ ಪಿಯೂಷ್‌ ಎಂಬ ವ್ಯಕ್ತಿ ಅಜಾಗರೂಕತೆಯಿಂದ ಸ್ಕೂಟರ್‌

ನೊಯಿಡಾ: ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ರೀಲ್ಸ್- ಮೂವರ ಬಂಧನ Read More »

ಚಂಡೀಗಢ:ಇಂದಿರಾ ಗಾಂಧಿ ಹಂತಕನ ಪುತ್ರ ಲೋಕಸಭಾ ಚುನಾವಣೆಗೆ ಸ್ಪರ್ಧೆ

ಸಮಗ್ರ ನ್ಯೂಸ್‌ : ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹಂತಕನ ಪುತ್ರನೊಬ್ಬ ಪಂಜಾಬ್‌ನ ಸಂಸತ್ ಚುನಾವಣೆಯಲ್ಲಿ ಫರೀದ್‌ಕೋಟ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. 12ನೇ ತರಗತಿಯಲ್ಲಿ ಡ್ರಾಪ್ಔಟ್ ಆಗಿದ್ದ ಸರಬ್ಜಿತ್ ಸಿಂಗ್ ಖಾಲ್ಸಾ (45) ಚುನಾವಣೆಯಲ್ಲಿ ಸ್ಪರ್ಧೆಗಿಳಿದಿದ್ದಾರೆ. ಇವರು ದಿವಂಗತ ಪ್ರಧಾನಿಯ ಇಬ್ಬರು ಹಂತಕರಲ್ಲಿ ಒಬ್ಬನಾದ ಬಿಯಾಂತ್ ಸಿಂಗ್ ಮಗ. 2014 ಮತ್ತು 2009 ರಲ್ಲಿ ಸರಬ್ಜಿತ್ ಸಿಂಗ್ ಖಾಲ್ಸಾ ಅವರು ಅನುಕ್ರಮವಾಗಿ ಫತೇಘರ್ ಸಾಹಿಬ್ (ಮೀಸಲು) ಮತ್ತು ಬಟಿಂಡಾ ಕ್ಷೇತ್ರಗಳಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.

ಚಂಡೀಗಢ:ಇಂದಿರಾ ಗಾಂಧಿ ಹಂತಕನ ಪುತ್ರ ಲೋಕಸಭಾ ಚುನಾವಣೆಗೆ ಸ್ಪರ್ಧೆ Read More »

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ| ಶಂಕಿತನನ್ನು ಪ.ಬಂಗಾಳದಲ್ಲಿ ಬಂಧಿಸಿದ ಎನ್ಐಎ

ಸಮಗ್ರ ನ್ಯೂಸ್: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಶಂಕಿತರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಶಕ್ಕೆ ಪಡೆದಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ. ಶಂಕಿತರನ್ನು ಪಶ್ಚಿಮ ಬಂಗಾಳದಿಂದ ಬಂಧಿಸಲಾಗಿದೆ ಎಂದು ಅದು ಹೇಳಿದೆ. ಆದಾಗ್ಯೂ, ಉನ್ನತ ಮಟ್ಟದ ಪ್ರಕರಣದ ಬೆಳವಣಿಗೆಯನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ. ಮೂಲಗಳ ಪ್ರಕಾರ, ಗುಪ್ತಚರ ಬ್ಯೂರೋ (ಐಬಿ) ನೀಡಿದ ಮಾಹಿತಿಯ ಮೇರೆಗೆ ರಾಮೇಶ್ವರಂ ಕೆಫೆಯಲ್ಲಿ ನಡೆದ ಭಯಾನಕ ಘಟನೆಯ ಹಿಂದಿನ ಇಬ್ಬರು ಮಾಸ್ಟರ್ ಮೈಂಡ್ಗಳಾದ ಮುಸ್ಸಾವಿರ್ ಹುಸೇನ್ ಶಾಜಿಬ್

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ| ಶಂಕಿತನನ್ನು ಪ.ಬಂಗಾಳದಲ್ಲಿ ಬಂಧಿಸಿದ ಎನ್ಐಎ Read More »

ಸುಳ್ಯದ ಕಲ್ಮಕಾರಿನಲ್ಲಿ ರಬ್ಬರ್ ಗೋಡೌನ್ ಗೆ ಬೆಂಕಿ; ಅಪಾರ ನಷ್ಟ

ಸಮಗ್ರ ನ್ಯೂಸ್: ರಬ್ಬರ್‌ ಗೋಡೌನ್‌ಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿರುವ ಘಟನೆ ಸುಳ್ಯ ತಾಲೂಕಿನ ಕಲ್ಮಕಾರಿನಲ್ಲಿ ಸಂಭವಿಸಿದೆ. ಇಲ್ಲಿನ ಕೊರಗಪ್ಪ ಮೆಂಟೆಕಜೆ ಅವರ ರಬ್ಬರ್‌ ಗೋಡೌನ್‌ಗೆ ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ಅಪಾರ ನಷ್ಟ ಸಂಭವಿಸಿದೆ.ಘಟನೆಯಲ್ಲಿ ಐದು ಕ್ವಿಂಟಾಲ್‌ ಗೂ ಅಧಿಕ ರಬ್ಬರ್‌ ಬೆಂಕಿಗಾಹುತಿಗಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳೀಯರ ಸಹಕಾರದಲ್ಲಿ ಬೆಂಕಿ ನಂದಿಸಲಾಯಿತು.

ಸುಳ್ಯದ ಕಲ್ಮಕಾರಿನಲ್ಲಿ ರಬ್ಬರ್ ಗೋಡೌನ್ ಗೆ ಬೆಂಕಿ; ಅಪಾರ ನಷ್ಟ Read More »

ಬೆಳ್ತಂಗಡಿ: ಬೈಹುಲ್ಲು ತರುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ| ಸ್ಥಳೀಯರ ಸಾಹಸದಿಂದ ಬಚಾವಾದ ವಾಹನ| ಕಣ್ಣೀರಾದ ಚಾಲಕ

ಸಮಗ್ರ ನ್ಯೂಸ್: ಬೈಹುಲ್ಲು ಮಾರಾಟಕ್ಕೆ ಆಗಮಿಸುತ್ತಿದ್ದ ಮಿನಿ ಲಾರಿಗೆ ಆಕಸ್ಮಿಕ ಬೆಂಕಿ ಬಿದ್ದ ಘಟನೆ ನಡೆ ಬೆಳ್ತಂಗಡಿ ತಾಲ್ಲೂಕಿನ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಟ್ಟೆಮಾರು ಎಂಬಲ್ಲಿ ನಡೆದಿದ್ದು, ಸ್ಥಳೀಯರು ಸಾಹಸ ಪ್ರದರ್ಶಿಸಿ ಬೆಂಕಿಯನ್ನು ನಂದಿಸಿ ಲಾರಿಯನ್ನು ಉಳಿಸಿದ್ದಾರೆ. ಹಾಸನದ ಸಕಲೇಶಪುರದ ಬೈಹುಲ್ಲು ವ್ಯಾಪಾರಸ್ಥರೋರ್ವರು ಹೈನುಗಾರಿಕೆ ಮಾಡುವ ಕೃಷಿಕರ ಮನೆ ಮನೆಗೆ ಬೈ ಹುಲ್ಲನ್ನು ಹಾಕಲು ತನ್ನ ಮಿನಿ ಲಾರಿಯಲ್ಲಿ ಹುಲ್ಲನ್ನು ತರುವಾಗ ಬಟ್ಟೆ ಮಾರು ವಿನಲ್ಲಿ ಏಕಾಏಕಿ ಬೆಂಕಿ ಹತ್ತಿಕೊಂಡಿದೆ. ಈ ವೇಳೆ ಸ್ಥಳೀಯವರೊಬ್ಬರು ಬೊಬ್ಬೆ

ಬೆಳ್ತಂಗಡಿ: ಬೈಹುಲ್ಲು ತರುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ| ಸ್ಥಳೀಯರ ಸಾಹಸದಿಂದ ಬಚಾವಾದ ವಾಹನ| ಕಣ್ಣೀರಾದ ಚಾಲಕ Read More »

ಏರ್​ಕ್ರಾಫ್ಟ್​ ಟೆಕ್ನಿಷಿಯನ್​ ಜಾಬ್ ಗೆ ಅಪ್ಲೈ ಮಾಡಿ, ಇಲ್ಲಿದೆ ಸಂಪೂರ್ಣ ವಿವರ

ಸಮಗ್ರ ಉದ್ಯೋಗ: ಏರ್​ ಇಂಡಿಯಾ ಎಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 40 ಏರ್​ಕ್ರಾಫ್ಟ್​ ಟೆಕ್ನಿಷಿಯನ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮೇ 2, 2024ರಂದು ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರು, ಚೆನ್ನೈ & ಹೈದರಾಬಾದ್​​ನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಶೈಕ್ಷಣಿಕ ಅರ್ಹತೆ:ಏರ್​ ಇಂಡಿಯಾ ಎಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ

ಏರ್​ಕ್ರಾಫ್ಟ್​ ಟೆಕ್ನಿಷಿಯನ್​ ಜಾಬ್ ಗೆ ಅಪ್ಲೈ ಮಾಡಿ, ಇಲ್ಲಿದೆ ಸಂಪೂರ್ಣ ವಿವರ Read More »