Editor

ಮಂಗಳೂರಿಗೆ ಮೋದಿ ಆಗಮನಕ್ಕೆ ಕ್ಷಣಗಣನೆ ಆರಂಭ|ಭರದ ಸಿದ್ಧತೆ

ಸಮಗ್ರ ನ್ಯೂಸ್‌ : ಏಪ್ರಿಲ್ 14 ರಂದು ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ರೋಡ್ ಶೋ ನಡೆಯುವ ಮಾರ್ಗದ ಮೇಲೆ ಎಸ್ ಪಿ ಜಿ ಅಧಿಕಾರಿಗಳು ಹದ್ದಿನ ಕಣ್ಣು ಇಟ್ಟಿದ್ದಾರೆ. ಸ್ಥಳೀಯ ಪೊಲೀಸರು, ಶ್ವಾನ ದಳ, ಹಾಗೂ ಮೆಟಲ್ ಡಿಟೆಕ್ಟರ್ ಬಳಸಿ ರಸ್ತೆಯ ಇಕ್ಕಲೆ ಇಕ್ಕಲೆಗಳಲ್ಲೂ ತಪಾಸಣೆ ನಡೆಸುತ್ತಿದ್ದಾರೆ. ಎಸ್ ಪಿ ಜಿ ಟೀಂ ರೋಡ್ ಶೋ ಸಾಗುವ ದಾರಿಯ ಇಕ್ಕಲೆಗಳ ಎಲ್ಲ ಕಟ್ಟಡಗಳ ಮಾಹಿತಿ

ಮಂಗಳೂರಿಗೆ ಮೋದಿ ಆಗಮನಕ್ಕೆ ಕ್ಷಣಗಣನೆ ಆರಂಭ|ಭರದ ಸಿದ್ಧತೆ Read More »

ಶಿವಮೊಗ್ಗ: ಪಕ್ಷೇತರ ಅಭ್ಯರ್ಥಿಯಾಗಿ ಈಶ್ವರಪ್ಪ ನಾಮಪತ್ರ ಸಲ್ಲಿಕೆ

ಸಮಗ್ರ ನ್ಯೂಸ್‌ : ಬಿರು ಬಿಸಿಲನ್ನು ಲೆಕ್ಕಿಸದೇ ಭಾರೀ ಸಂಖ್ಯೆಯಲ್ಲಿ ಹೆಜ್ಜೆ ಹಾಕಿದ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಇಂದು ನಗರದ ಜಿಲ್ಲಾಧಿಕಾರಿ ಕಚೇರಿಗೆ ಬಂದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ರಾಮಣ್ಣ ಶೆಟ್ಟಿ ಪಾರ್ಕ್ ನಿಂದ ಮೆರವಣಿಗೆ ಆರಂಭವಾಯಿತು. ರಾಷ್ಟ್ರ ಭಕ್ತರ ಬಳಗದ ಹೆಸರಿನಲ್ಲಿ ಮೆರವಣಿಗೆಯಲ್ಲಿ ಸಾಗಿಬಂದ ಈಶ್ವರಪ್ಪ ಬೆಂಬಲಿಗರು ಕೇಸರಿ ಧ್ವಜಗಳನ್ನು ಪ್ರದರ್ಶಿಸಿದರು. ಜೈ ಶ್ರೀರಾಮ್, ಭಾರತ ಮಾತಾಕಿ ಜೈ, ರಾಷ್ಟಭಕ್ತರ ಬಳಗದ ಅಭ್ಯರ್ಥಿ ಈಶ್ವರಪ್ಪನವರಿಗೆ ಜೈ ಎಂಬ

ಶಿವಮೊಗ್ಗ: ಪಕ್ಷೇತರ ಅಭ್ಯರ್ಥಿಯಾಗಿ ಈಶ್ವರಪ್ಪ ನಾಮಪತ್ರ ಸಲ್ಲಿಕೆ Read More »

ಮಂಗಳೂರು: ಮತದಾನದ ಹಕ್ಕೆ ಇಲ್ಲದ ಕಶೆಕೋಡಿ‌ ಬಾಲಕಿಯಿಂದ ಮತದಾನ ಜಾಗೃತಿ

ಸಮಗ್ರ ನ್ಯೂಸ್‌ : ದಕ್ಷಿಣ ಕನ್ನಡ ಬಂಟ್ವಾಳದ ಬಾಳ್ತಿಲ‌ ಗ್ರಾಮದ ಕಶೆಕೋಡಿ‌ ನಿವಾಸಿ ನಾಲ್ಕನೇ ತರಗತಿಯ ಸನ್ನಿಧಿ ಎಲ್.ಎಸ್ ಪಂಚ ಭಾಷೆಗಳಲ್ಲಿ ಮತದಾನದ ಜಾಗೃತಿ‌ ಮೂಡಿಸುತ್ತಿದ್ದಾಳೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇಕಡಾ100 ರಷ್ಟು ಮತದಾನವಾಗಬೇಕು ಎಂದು ಪಣತೊಟ್ಟಿರುವ ಬಾಲಕಿ, ಪ್ರತಿ‌ದಿನ ಮನೆ ಮನೆ, ಮಾರ್ಕೆಟ್, ಹೊಟೇಲ್, ಅಂಗಡಿ, ಕಚೇರಿ, ಆಟೋ ನಿಲ್ದಾಣ ಭೇಟಿ ನೀಡುತ್ತಿದ್ದು, ಕನ್ನಡ, ತುಳು, ಇಂಗ್ಲಿಷ್, ಕೊಂಕಣಿ‌ ಹಾಗೂ ಮಲಯಾಳಂ ಸೇರಿ ಒಟ್ಟು 5‌ ಭಾಷೆಗಳಲ್ಲಿ ಸುಡು ಬಿಸಿಲಿನಲ್ಲೂ ಎಲ್ಲಡೆ ಸಂಚರಿಸಿ ಮತದಾನದ

ಮಂಗಳೂರು: ಮತದಾನದ ಹಕ್ಕೆ ಇಲ್ಲದ ಕಶೆಕೋಡಿ‌ ಬಾಲಕಿಯಿಂದ ಮತದಾನ ಜಾಗೃತಿ Read More »

ಇರಾನ್-ಇಸ್ರೇಲ್ ಯುದ್ಧ ಸಾಧ್ಯತೆ/ ಎರಡು ದೇಶಗಳಿಗೆ ಪ್ರಯಾಣಿಸದಂತೆ ಭಾರತೀಯರಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಸೂಚನೆ

ಸಮಗ್ರ ನ್ಯೂಸ್; ಮುಂದಿನ 48 ಗಂಟೆಗಳಲ್ಲಿ ಇರಾನ್- ಇಸ್ರೇಲ್ ಮೇಲೆ ದಾಳಿ ನಡೆಸುವ ಸಾಧ್ಯತೆಯಿದ್ದು, ಈ ಹಿನ್ನೆಲೆ ಮುಂದಿನ ಸೂಚನೆ ಬರುವವರೆಗೂ ಇರಾನ್ ಮತ್ತು ಇಸ್ರೇಲ್‍ಗೆ ಪ್ರಯಾಣಿಸುವುದನ್ನು ನಿಲ್ಲಿಸುವಂತೆ ಭಾರತೀಯರಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಪ್ರಸ್ತುತ ಇರಾನ್ ಅಥವಾ ಇಸ್ರೇಲ್‍ನಲ್ಲಿ ನೆಲೆಸಿರುವ ಭಾರತೀಯರು ಅಲ್ಲಿನ ಭಾರತೀಯ ರಾಯಭಾರಿ ಕಚೇರಿಗಳನ್ನು ಸಂಪರ್ಕಿಸಿ ತಮ್ಮನ್ನು ನೋಂದಾಯಿಸಿಕೊಳ್ಳುವಂತೆ ಸಚಿವಾಲಯ ತಿಳಿಸಿದೆ. ಸುರಕ್ಷತೆ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲು ಮತ್ತು ಓಡಾಟ ಕನಿಷ್ಠ ಮಟ್ಟಕ್ಕೆ ನಿಬರ್ಂಧಿಸಲು ವಿನಂತಿಸಲಾಗಿದೆ. ಮುಂದಿನ 48

ಇರಾನ್-ಇಸ್ರೇಲ್ ಯುದ್ಧ ಸಾಧ್ಯತೆ/ ಎರಡು ದೇಶಗಳಿಗೆ ಪ್ರಯಾಣಿಸದಂತೆ ಭಾರತೀಯರಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಸೂಚನೆ Read More »

ಚೆನ್ನೈ: ಚುನಾವಣೆಯ ಬಗ್ಗೆ ಭವಿಷ್ಯ ನುಡಿದ ಗಿಳಿ ಮಾಲೀಕನ ಬಂಧನ

ಸಮಗ್ರ ನ್ಯೂಸ್‌ : ಲೋಕಸಭಾ ಚುನಾವಣೆಯ ಪ್ರಚಾರ ಜೋರಾಗಿದ್ದು, ತಮಿಳುನಾಡಿನಲ್ಲಿ PMK ಪಕ್ಷದ ಚುನಾವಣಾ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಗಿಳಿಯೊಂದು ಭವಿಷ್ಯ ನುಡಿದಿದ್ದು, ಗಿಳಿಯ ಮಾಲೀಕನನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಗಿಳಿಮರಿ ಕೈಯಲ್ಲಿ ಭವಿಷ್ಯ ಹೇಳಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಕಡಲೂರು ಲೋಕಸಭಾ ಕ್ಷೇತ್ರದಲ್ಲಿ ಪಿಎಂಕೆ ಪಕ್ಷದಿಂದ ಥಂಕರ್ ಬಚ್ಚನ್ ಅವರು ಸ್ಪರ್ಧಿಸಿದ್ದಾರೆ. ಇವರು ಬೀದಿ ಬದಿಯಲ್ಲಿ ಗಿಳಿ ಶಾಸ್ತ್ರ ಕೇಳಿದ್ದರು. ಸೆಲ್ವರಾಜ್ ಎಂಬುವವರು ಗಿಳಿ ಕೈಯಲ್ಲಿ ಭವಿಷ್ಯ ಹೇಳಿಸಿ ಥಂಕರ್

ಚೆನ್ನೈ: ಚುನಾವಣೆಯ ಬಗ್ಗೆ ಭವಿಷ್ಯ ನುಡಿದ ಗಿಳಿ ಮಾಲೀಕನ ಬಂಧನ Read More »

ತೆಲುಗು ನಟ ರಾಮ್ ಚರಣ್ ಅವರಿಗೆ ಗೌರವ ಡಾಕ್ಟರೇಟ್

ಸಮಗ್ರ ನ್ಯೂಸ್‌ : ತೆಲುಗಿನ ಖ್ಯಾತ ನಟ ರಾಮ್ ಚರಣ್ ಅವರಿಗೆ ಚೆನ್ನೈನ ವೇಲ್ಸ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ. ಸಿನಿಮಾ ರಂಗದಲ್ಲಿ ಸಲ್ಲಿಸಿದ ಸೇವೆಗಾಗಿ ಈ ಗೌರವನ್ನು ವಿಶ್ವವಿದ್ಯಾಲಯ ನೀಡುತ್ತಿದ್ದಾರೆ. ಅವರು ಹೊಸ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದು, ಆ ಚಿತ್ರಕ್ಕೆ RC 16 ಎಂದು ಟೈಟಲ್ ಇಡಲಾಗಿದೆ. ಈ ಚಿತ್ರದ ನಾಯಕಿ ಜಾನ್ವಿ ಕಪೂರ್ ಜೊತೆಗಿನ ಚಿತ್ರೀಕರಣದ ಫೋಟೋಗಳನ್ನು ರಾಮ್ ಚರಣ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. . ರಾಮ್ ಚರಣ್- ಜಾನ್ವಿ ಕಪೂರ್ ನಟನೆಯ

ತೆಲುಗು ನಟ ರಾಮ್ ಚರಣ್ ಅವರಿಗೆ ಗೌರವ ಡಾಕ್ಟರೇಟ್ Read More »

ಬಹುನಿರೀಕ್ಷಿತ ಸಿನಿಮಾ ‘ರಾಮಾಯಣ’ದ ಚಿತ್ರೀಕರಣ ಪ್ರಾರಂಭ/ ಚಿತ್ರ ನಿರ್ಮಾಣಕ್ಕೆ ಸಾಥ್ ನೀಡಿದ ಯಶ್

ಸಮಗ್ರ ನ್ಯೂಸ್: ಬಾಲಿವುಡ್‍ನ ಬಹುನಿರೀಕ್ಷಿತ ಸಿನಿಮಾ ‘ರಾಮಾಯಣ’ದ ಚಿತ್ರೀಕರಣ ಪ್ರಾರಂಭವಾಗಿದ್ದು, ಈ ಚಿತ್ರಕ್ಕಾಗಿ ಯಶ್ ಒಡೆತನದ ಮಾನ್‍ಸ್ಟರ್‍ಮೈಂಡ್ ಕ್ರಿಯೇಷನ್ ಹಾಗೂ ನಮಿತ್ ಮಲ್ಲೋತ್ರಾ ಸಾರಥ್ಯದ ಪ್ರೈಮ್ ಫೆÇೀಕಸ್ ಸ್ಟುಡಿಯೊ ಕೈ ಜೋಡಿಸಿದ್ದಾರೆ. ದಂಗಲ್’ ಸಿನಿಮಾ ಖ್ಯಾತಿಯ ನಿರ್ದೇಶಕ ನಿತೀಶ್ ತಿವಾರಿ ‘ರಾಮಾಯಣ’ ಸಿನಿಮಾವನ್ನು ಬಹಳ ಅದ್ದೂರಿಯಾಗಿ ದೃಶ್ಯ ರೂಪಕ್ಕೆ ಇಳಿಸುವುದಕ್ಕೆ ಸಜ್ಜಾಗಿದ್ದಾರೆ. ಚಿತ್ರದಲ್ಲಿ ಯಶ್ ಕೂಡಾ ನಟಿಸಲಿದ್ದಾರೆ ಎನ್ನುವ ಗಾಳಿಸುದ್ದಿ ಹಬ್ಬಿತ್ತು. ಆದರೆ ಯಶ್ ಈ ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಎನ್ನುವುದನ್ನು ಚಿತ್ರತಂಡವೇ ಘೋಷಿಸಿದೆ. ಯಶ್, ಗೀತು

ಬಹುನಿರೀಕ್ಷಿತ ಸಿನಿಮಾ ‘ರಾಮಾಯಣ’ದ ಚಿತ್ರೀಕರಣ ಪ್ರಾರಂಭ/ ಚಿತ್ರ ನಿರ್ಮಾಣಕ್ಕೆ ಸಾಥ್ ನೀಡಿದ ಯಶ್ Read More »

ಮಂಗಳೂರು: ನೀರು ಸೇದುವ ವೇಳೆ ಬಾವಿಗೆ ಬಿದ್ದ ಮಹಿಳೆಯ ರಕ್ಷಣೆ

ಸಮಗ್ರ ನ್ಯೂಸ್‌ : ಬಾವಿಯಿಂದ ನೀರು ಸೇದುವ ವೇಳೆ ಆಯಾ ತಪ್ಪಿದ ಮಹಿಳೆಯೊಬ್ಬರು ಬಾವಿಗೆ ಬಿದ್ದಿದ್ದು, ಕದ್ರಿ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ. ಬಿಕ್ಕರ್ನಕಟ್ಟೆ ಸಮೀಪದ ನಿವಾಸಿ ಟ್ರೆಸ್ಸಿ ಡಿಸೋಜಾ (58) ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಿಸಲ್ಪಟ್ಟ ಮಹಿಳೆ.ಸಂಜೆ 5 ಗಂಟೆ ಸುಮಾರಿಗೆ ಟ್ರೆಸ್ಸಿ ಬಾವಿಯಿಂದ ನೀರು ಸೇದುತ್ತಿದ್ದಾಗ ತಲೆ ಸುತ್ತಿ ಬಾವಿಗೆ ಬಿದ್ದಿದ್ದಾರೆ. ಕೂಡಲೇ ಆಕೆಯ ಕುಟುಂಬಸ್ಥರು ಅಗ್ನಿಶಾಮಕ ದಳದ ಸಿಬ್ಬಂದಿಗೆ ವಿಷಯ ತಿಳಿಸಿದ್ದು, ಅವರು ಸ್ಥಳಕ್ಕೆ ಧಾವಿಸಿ ಬಾವಿಯಿಂದ ಮೇಲಕ್ಕೆ ಎತ್ತಿದ್ದಾರೆ.

ಮಂಗಳೂರು: ನೀರು ಸೇದುವ ವೇಳೆ ಬಾವಿಗೆ ಬಿದ್ದ ಮಹಿಳೆಯ ರಕ್ಷಣೆ Read More »

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ/ ಮತ್ತಿಬ್ಬರು ಎನ್‍ಐಎ ವಶಕ್ಕೆ

ಸಮಗ್ರ ನ್ಯೂಸ್: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್‍ಐಎ ಅಧಿಕಾರಿಗಳು ಮತ್ತಿಬ್ಬರು ಶಂಕಿತರನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಇಬ್ಬರು ಶಂಕಿತರನ್ನು ಎನ್‍ಐಎ ಬಂಧಿಸಿದೆ ಎಂಬ ಮಾಹಿತಿ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಎನ್‍ಐಎ ಅಧಿಕಾರಿಗಳು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಮಾಜ್ ಮುನೀರ್ ಕೃತ್ಯ ಬಲವಾಗಿದ್ದು, ಈತ ಈ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದಾನೆ. ತಲೆಮರೆಸಿಕೊಂಡಿರುವ ಶಂಕಿತರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಎನ್‍ಐಎ ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶದ 18 ಸ್ಥಳಗಳಲ್ಲಿ ಶೋಧ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ/ ಮತ್ತಿಬ್ಬರು ಎನ್‍ಐಎ ವಶಕ್ಕೆ Read More »

ಮೂಡಿಗೆರೆ: ಕೃಷಿಕನ ಮೇಲೆ ಕಾಡುಕೋಣ ದಾಳಿ

ಸಮಗ್ರ ನ್ಯೂಸ್‌ : ಕೃಷಿಕರೊಬ್ಬರ ಮೇಲೆ ಕಾಡುಕೋಣ ದಾಳಿ ನಡೆಸಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ, ದುರ್ಗದಹಳ್ಳಿ ಸಮೀಪ ನಡೆದಿದೆ. ದುರ್ಗದಹಳ್ಳಿ ಗ್ರಾಮದ ಹಲಗಡ್ಕ ನಿವಾಸಿ ರಾಜೇಶ್ ಕಾಡುಕೋಣದಿಂದ ದಾಳಿಗೊಳಗಾದ ರೈತ. ತನ್ನ ಜಮೀನಿನಲ್ಲಿ ಇದ್ದಾಗ ಕಾಡುಕೋಣವೊಂದು ರಾಜೇಶ್ ಮೇಲೆ ದಾಳಿ ನಡೆಸಿದ್ದು, ಕಾಡುಕೋಣ ದಾಳಿಯಿಂದ ರಾಜೇಶ್ ತೀವ್ರವಾಗಿ ಗಾಯಗೊಂಡಿದ್ದಾರೆ. ಕಾಡುಕೋಣದ ತಿವಿತದಿಂದ ರಾಜೇಶ್ ಅವರ ತಲೆ, ಹೊಟ್ಟೆ ಮತ್ತು ಕಾಲಿನ ಭಾಗಕ್ಕೆ ತೀವ್ರವಾಗ ಪೆಟ್ಟಾಗಿದೆ. ತಲೆ ಮತ್ತು ಹೊಟ್ಟೆ ಭಾಗದಲ್ಲಿ ಆಳವಾದ

ಮೂಡಿಗೆರೆ: ಕೃಷಿಕನ ಮೇಲೆ ಕಾಡುಕೋಣ ದಾಳಿ Read More »