Editor

ರಾಮನವಮಿಯ ಸಂಭ್ರಮ/ ನಾಳೆ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧಿಸಿದ ಬಿಬಿಎಂಪಿ

ಸಮಗ್ರ ನ್ಯೂಸ್: ರಾಮನವಮಿ ಆಚರಣೆ ಪ್ರಯುಕ್ತ ಬೆಂಗಳೂರಿನಲ್ಲಿ ನಾಳೆ (ಬುಧವಾರ) ಮಾಂಸ ಮಾರಾಟವನ್ನು ನಿಷೇಧಿಸಿ ಬಿಬಿಎಂಪಿ ಪಶುಸಂಗೋಪನಾ ಇಲಾಖೆಯು ಆದೇಶ ಹೊರಡಿಸಿದೆ. ಬಿಬಿಎಂಪಿ ಸಾಮಾನ್ಯವಾಗಿ ಪ್ರತಿ ಬಾರಿ ಬೆಂಗಳೂರಿನಲ್ಲಿ ಹಿಂದೂ ಹಬ್ಬಗಳ ಸಂದರ್ಭದಲ್ಲಿ ಈ ಕ್ರಮಗಳನ್ನು ನಡೆಸಲಾಗುತ್ತದೆ. ಹಿಂದೂ ಧರ್ಮದಲ್ಲಿ ರಾಮ ನವಮಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ರಾಮನವಮಿಯನ್ನು ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಇದು ಶ್ರೀರಾಮನ ಜನ್ಮದಿನವಾಗಿದೆ.

ರಾಮನವಮಿಯ ಸಂಭ್ರಮ/ ನಾಳೆ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧಿಸಿದ ಬಿಬಿಎಂಪಿ Read More »

ಬೀದರ್ : ಸಾಗರ್‌ ಖಂಡ್ರೆ ಸ್ಪರ್ಧಿಸುತ್ತಿರೋದು ಪಾಕಿಸ್ತಾನದಲ್ಲಾ..? : ಬಿಜೆಪಿ ಲೇವಡಿ!

ಸಮಗ್ರ ನ್ಯೂಸ್‌ : ಬೀದರ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಸಾಗರ್ ಖಂಡ್ರೆ ವಿರುದ್ಧ ಬಿಜೆಪಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ. ಸಾಗರ್ ಖಂಡ್ರೆ ಚುನಾವಣೆಗೆ ನಿಂತಿರುವುದು ಪಾಕಿಸ್ತಾನದಲ್ಲೋ ಅಥವಾ ಭಾರತದಲ್ಲೋ ಎಂಬುವುದೇ ಗೊತ್ತಾಗುತ್ತಿಲ್ಲ. ಏಕೆಂದರೆ ಮಾತೃ ಭಾಷೆ ಕನ್ನಡವನ್ನೇ ಸರಿಯಾಗಿ ಮಾತನಾಡಲು ತೊದಲುವ ಈ ಬಾಲಕ, ಮಾತನಾಡುತ್ತಿರುವ ಭಾಷೆ ಯಾವುದು ಎಂಬುದು ತಿಳಿಯುತ್ತಿಲ್ಲ. ಇನ್ನು ಕಾಂಗ್ರೆಸ್‌ಗೆ ರಾಜ್ಯ ರಾಜ್ಯಗಳ ಮಧ್ಯೆ, ಭಾಷೆ ಭಾಷೆಗಳ ಮಧ್ಯೆ ಕಡ್ಡಿ ಗೀರಿ ಬೆಂಕಿ ಹಚ್ಚುವುದೇ ನಿಮ್ಮ ಕೆಲಸನಾ ಎಂದು ಬಿಜೆಪಿ

ಬೀದರ್ : ಸಾಗರ್‌ ಖಂಡ್ರೆ ಸ್ಪರ್ಧಿಸುತ್ತಿರೋದು ಪಾಕಿಸ್ತಾನದಲ್ಲಾ..? : ಬಿಜೆಪಿ ಲೇವಡಿ! Read More »

ಜುಲೈ ತಿಂಗಳಲ್ಲಿ ಸುಲಭವಾಗಿ ತಿರುಪತಿಯ ದರ್ಶನ ಮಾಡಬಹುದು, ಹೇಗೆ ಗೊತ್ತಾ?

ಸಮಗ್ರ ನ್ಯೂಸ್: ತಿರುಮಲ ತಿರುಪತಿ ದೇವಸ್ಥಾನವು ಶ್ರೀವಾರಿ ದರ್ಶನಕ್ಕೆ ಲಕ್ಕಿ ಡಿಪ್ ದಿನಾಂಕಗಳನ್ನು ಪ್ರಕಟಿಸಿದೆ. ಯಾವ ದಿನಗಳಲ್ಲಿ ಯಾವ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂಬುದನ್ನು ನೀವು ಇಲ್ಲಿ ತಿಳಿದುಕೊಳ್ಳಬಹುದು. ತಿರುಮಲದಲ್ಲಿ ಶ್ರೀವಾರಿ ದರ್ಶನ ಬಯಸುವ ಭಕ್ತರಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಜುಲೈ ಕೋಟಾವನ್ನು ತಿರುಮಲ ತಿರುಪತಿ ದೇವಸ್ಥಾನ ಟಿಕೆಟ್‌ಗಳನ್ನು ಬಿಡುಗಡೆ ಮಾಡುತ್ತದೆ. ಏಪ್ರಿಲ್ 18 ರಂದು ಬೆಳಿಗ್ಗೆ 10 ಗಂಟೆಗೆ ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳ ಜುಲೈ ಕೋಟಾವನ್ನು ಟಿಟಿಡಿ ಆನ್ಲೈನ್‌ನಲ್ಲಿ ಬಿಡುಗಡೆ ಮಾಡಲಿದೆ. ಈ ಸೇವಾ

ಜುಲೈ ತಿಂಗಳಲ್ಲಿ ಸುಲಭವಾಗಿ ತಿರುಪತಿಯ ದರ್ಶನ ಮಾಡಬಹುದು, ಹೇಗೆ ಗೊತ್ತಾ? Read More »

ಅಕ್ರಮ ದನ ಸಾಗಾಟ ಪ್ರಕರಣ| ಹೊಸೂರು ಅತ್ತೂರು ಗ್ರಾಮದ ನಿವಾಸಿ ಎಸ್.ಕಿಶೋರ್ ಕೊಂಡಂಗೇರಿ ಹ್ಯಾರಿಸ್ ಬಂಧನ

ಸಮಗ್ರ ನ್ಯೂಸ್:ತನ್ನ ತೋಟದಲ್ಲಿ ದನಗಳನ್ನು ಸಂಗ್ರಹಿಸಿಟ್ಟು ನಂತರ ಅದನ್ನು ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಸಿದ್ದಾಪುರ ಪೊಲೀಸರು ಬೇದಿಸಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ಹೊಸೂರು ಬೆಟ್ಟಗೇರಿ ನಿವಾಸಿ ಪಟ್ಟಡ.ಟಿ.ಉತ್ತಯ್ಯ ಎಂಬುವರು ಎ. 4ರಂದು ಸಿದ್ದಾಪುರ ಠಾಣೆಗೆ ದೂರು ನೀಡಿ ತನ್ನ ಗದ್ದೆಯಲ್ಲಿ ಎಂದಿನಂತೆ ಹತ್ತು ಹಸುಗಳು ಮತ್ತು ಒಂದು ಗಿರ್ ತಳಿಯ ದನವನ್ನು ಮೇಯಲು ಬಿಟ್ಟಿದ್ದು ಸಂಜೆ ನೋಡಿದಾಗ ಒಂದು ಗಿರ್ ತಳಿಯೂ ಕಾಣದಾಗಿದೆ ಎಂಬ ದೂರಿನ ಅನ್ವಯ ಸಿದ್ದಾಪುರ ಪೊಲೀಸರು ಪ್ರಕರಣ ಸಂಖ್ಯೆ 37/24 ಮೊಕದಮೆ

ಅಕ್ರಮ ದನ ಸಾಗಾಟ ಪ್ರಕರಣ| ಹೊಸೂರು ಅತ್ತೂರು ಗ್ರಾಮದ ನಿವಾಸಿ ಎಸ್.ಕಿಶೋರ್ ಕೊಂಡಂಗೇರಿ ಹ್ಯಾರಿಸ್ ಬಂಧನ Read More »

ವರ್ಷದ ಮೊದಲ ಮಳೆ ಆಗಿದ್ದು ಯಾವ ಜಿಲ್ಲೆಯಲ್ಲಿ? ಇಲ್ಲಿದೆ ನೋಡಿ ವೆದರ್ ಅಪ್ಡೇಟ್

ಸಮಗ್ರ ನ್ಯೂಸ್: ಹವಾಮಾನ ತಜ್ಞರು ಮಾರ್ಚ್ 20ರ ಬಳಿಕ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಮಳೆಯಾಗುವ ಕುರಿತು ಮುನ್ಸೂಚನೆಯನ್ನು ನೀಡಿದ್ದರು. ಆದರೆ ಅದಕ್ಕೂ ಮೊದಲೇ ದಕ್ಷಿಣ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಕೊಂಚ ಮಳೆಯಾಗಿದೆ. ಬಿರು ಬೇಸಿಗೆಯ ನಡುವೆ ರಾಜ್ಯದ ಜನರಿಗೆ ಸಂತಸದ ಸುದ್ದಿಯೊಂದು ಇಲ್ಲಿದೆ. ಈ ವರ್ಷದ ಮೊದಲ ಮಳೆಗೆ ಕರ್ನಾಟಕ ಸಾಕ್ಷಿಯಾಗಿದೆ. ಈ ಕುರಿತು ಮಾಹಿತಿ ನಿಮಗೆಂದೇ ಇಲ್ಲಿದೆ. ದಕ್ಷಿಣ ಕರ್ನಾಟಕದ ಹಲವು ಗ್ರಾಮಗಳಲ್ಲಿ ಬುಧವಾರ 2024 ರ ಮೊದಲ ಮಳೆ ದಾಖಲಾಗಿದೆ. ಮೈಸೂರು ಮತ್ತು ಕೊಡಗು

ವರ್ಷದ ಮೊದಲ ಮಳೆ ಆಗಿದ್ದು ಯಾವ ಜಿಲ್ಲೆಯಲ್ಲಿ? ಇಲ್ಲಿದೆ ನೋಡಿ ವೆದರ್ ಅಪ್ಡೇಟ್ Read More »

ಗಡಿ ಭದ್ರತಾ ಪಡೆಗೆ ಅರ್ಜಿ ಆಹ್ವಾನ, ಈಗಲೇ ಅಪ್ಲೈ ಮಾಡಿ

ಸಮಗ್ರ ಉದ್ಯೋಗ: ಗಡಿ ಭದ್ರತಾ ಪಡೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 82 ಸಬ್​ ಇನ್ಸ್​​ಪೆಕ್ಟರ್, ಕಾನ್ಸ್​ಟೇಬಲ್​ ಹುದ್ದೆಗಳು ಖಾಲಿ ಇದ್ದು,ಆಸಕ್ತರು ಅರ್ಜಿ ಸಲ್ಲಿಸಬಹುದು. ಗಡಿ ಭದ್ರತಾ ಪಡೆಯಲ್ಲಿ ಕೆಲಸ ಮಾಡುವ ಆಸಕ್ತಿ ಇದ್ದರೆ ಈಗಲೇ ಅರ್ಜಿ ಹಾಕಿ. ಅರ್ಜಿದಾರರು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು 2024ರ ಬಿಎಸ್​ಎಫ್ ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ಏಪ್ರಿಲ್ 25, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹುದ್ದೆಯ ಮಾಹಿತಿ: ಸಹಾಯಕ ಏರ್‌ಕ್ರಾಫ್ಟ್

ಗಡಿ ಭದ್ರತಾ ಪಡೆಗೆ ಅರ್ಜಿ ಆಹ್ವಾನ, ಈಗಲೇ ಅಪ್ಲೈ ಮಾಡಿ Read More »

ವಿಜಯಪುರ : ನೆಮ್ಮದಿಯ ಬದುಕು ಬೇಕೋ, ಬಿಜೆಪಿಯ ಸುಳ್ಳು ಬೇಕೋ ನಿರ್ಧರಿಸಿ ಎಂದ ಅಪ್ಪಾಜಿ ನಾಡಗೌಡ

ಸಮಗ್ರ ನ್ಯೂಸ್‌ : ಮೋದಿ ಸರಕಾರದ ಸುಳ್ಳು ಭರವಸೆ, ಭಾವನೆ ಕೆರಳಿಸುವ ವಿಚಾರ ಬೇಕೋ ಕಾಂಗ್ರೆಸ್ ಪಕ್ಷದ ಕಳಕಳಿ ಯೋಜನೆಗಳು ಬೇಕೊ ನೀವೇ ನಿರ್ಧರಿಸಿ ಎಂದು ಶಾಸಕ ಹಾಗೂ ಸಾಬೂನು-ಮಾರ್ಜಕ ನಿಗಮದ ಆಧ್ಯಕ್ಷರಾದ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು. ಮುದ್ದೇಬಿಹಾಳ ಕ್ಷೇತ್ರದ ಮಿಣಜಗಿಯಲ್ಲಿ ಮಂಗಳವಾರ ನಡೆದ ಜಿಪಂ ವ್ಯಾಪ್ತಿಯ ಸಭೆಯಲ್ಲಿ ಮಾತನಾಡಿ, ರಾಜ್ಯ ಸರಕಾರ ನುಡಿದಂತೆ ನಡೆದುಕೊಂಡು ಹೆಣ್ಣುಮಕ್ಕಳ, ಯುವಕರ ಮನಸ್ಸು ಗೆದ್ದಿದೆ. ಕೆಲವೇ ತಿಂಗಳಲ್ಲಿ ಹೇಳಿದ್ದ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದೆ. ಮೋದಿಯವರು ನೀಡಿದ್ದ ಯಾವೊಂದು ಮಾತನ್ನೂ ಉಳಿಸಿಕೊಂಡಿಲ್ಲ.

ವಿಜಯಪುರ : ನೆಮ್ಮದಿಯ ಬದುಕು ಬೇಕೋ, ಬಿಜೆಪಿಯ ಸುಳ್ಳು ಬೇಕೋ ನಿರ್ಧರಿಸಿ ಎಂದ ಅಪ್ಪಾಜಿ ನಾಡಗೌಡ Read More »

ಎಸ್ ಡಿಎಂ ಶಾಲೆಯ ಕಾಮುಕ ಶಿಕ್ಷಕನಿಂದ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

ಸಮಗ್ರ ನ್ಯೂಸ್‌ : ದ. ಕ ಜಿಲ್ಲೆಯ ಉಜಿರೆಯ ಎಸ್ ಡಿಎಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಕಾಮುಕ ಶಿಕ್ಷಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್ ಐಆರ್ ಪ್ರಕರಣ ದಾಖಲಾಗಿದೆ. ಶಿಕ್ಷಕ ವಿರಾಜ್ ಜೈನ್ ಎಂಬಾತ ಅಪ್ರಾಪ್ತ ವಿದ್ಯಾರ್ಥಿನಿಗೆ ಅಶ್ಲೀಲ ವಿಡಿಯೋ ತೋರಿಸಿ, ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಕಳೆದ 2023 ಜೂನ್ ನಿಂದ ಈತನ ಈ ವರ್ತನೆಯಿಂದ ಶಾಲೆಗೆ ತೆರಳಲು ವಿದ್ಯಾರ್ಥಿನಿಯರು ಹಿಂದೇಟು ಹಾಕುತ್ತಿದ್ದರು. ಪೋಷಕರು ವಿಚಾರಿಸಿದಾಗ 6ನೇ ತರಗತಿಯ ಅಪ್ರಾಪ್ತ ಬಾಲಕಿ ಅಳಲು ತೋಡಿಕೊಂಡಿದ್ದಳು.

ಎಸ್ ಡಿಎಂ ಶಾಲೆಯ ಕಾಮುಕ ಶಿಕ್ಷಕನಿಂದ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ Read More »

ದಿ. ಪ್ರವೀಣ್ ನೆಟ್ಟಾರು ತಾಯಿಗೆ ಸಿಕ್ಕ ಮೋದಿ ಭೇಟಿ ಅವಕಾಶ ದಿ.ಸೌಜನ್ಯಳ ತಾಯಿಗೆ ಯಾಕಿಲ್ಲ? ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎ.14 ಸಂಜೆ ಮಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದು, ಏರ್ ಪೋರ್ಟ್ ನಲ್ಲಿ ಭಾರತೀಯ ಜನತಾ ಪಾರ್ಟಿಯ ಮುಖಂಡರೊಂದಿಗೆ ಸ್ವಾಗತಿಸುವ ಸಾಲಿನಲ್ಲಿ ಹುತಾತ್ಮ ಬಿಜೆಪಿ ಕಾರ್ಯಕರ್ತ ದಿ.ಪ್ರವೀಣ್ ನೆಟ್ಟಾರ್ ರವರ ತಾಯಿಗೆ ಅವಕಾಶವನ್ನು ನೀಡಲಾಗಿತ್ತು. ಈ ಭೇಟಿಯ ಅವಕಾಶ ಓರ್ವ ಸಾಮಾನ್ಯ ಕಾರ್ಯಕರ್ತನಿಗೆ ಸಿಕ್ಕ ಗೌರವವಾಗಿದ್ದು, ತಾಯಿಗೆ ಪ್ರಧಾನಿಯವರನ್ನು ಭೇಟಿಯಾಗಿಸಲು ಅವಕಾಶ ದೊರಕಿದ್ದು ವ್ಯಾಪಕ ಪ್ರಶಂಸೆಗೆ ಕಾರಣವಾಯಿತು. ಆದರೆ ಸದ್ಯ ಇದೇ ವಿಚಾರ ಸಾಮಾಜಿಕ ಜಾಲತಾಣದಲ್ಲಿ

ದಿ. ಪ್ರವೀಣ್ ನೆಟ್ಟಾರು ತಾಯಿಗೆ ಸಿಕ್ಕ ಮೋದಿ ಭೇಟಿ ಅವಕಾಶ ದಿ.ಸೌಜನ್ಯಳ ತಾಯಿಗೆ ಯಾಕಿಲ್ಲ? ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ Read More »

ಲೋಕಸಭಾ ಚುನಾವಣೆ/ ದಾಖಲೆಯ ಮೊತ್ತದ ಹಣ ಮತ್ತು ವಸ್ತುಗಳು ವಶ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಯ ವೇಳೆ ನಡೆಯುವ ಅಕ್ರಮಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣು ಇರಿಸಿದ್ದು, ಚುನಾವಣಾ ದಿನಾಂಕ ಘೋಷಣೆಯಾದ ದಿನದಿಂದ ಇಲ್ಲಿಯ ತನಕ ದೇಶದಲ್ಲಿ ಬರೋಬ್ಬರಿ 4,650 ಕೋಟಿ ರು. ಮೌಲ್ಯದ ವಸ್ತುಗಳು ಹಾಗೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಇದು ದೇಶದ 75 ವರ್ಷದ ಚುನಾವಣಾ ಇತಿಹಾಸದಲ್ಲೇ ದಾಖಲೆಯಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ. ಈ ಒಟ್ಟು ಅಕ್ರಮದಲ್ಲಿ 2069 ಕೋಟಿ ರು. ಮೌಲ್ಯದ ಮಾದಕ ವಸ್ತುಗಳು (ಡ್ರಗ್ಸ್) ಕೂಡ ಸೇರಿವೆ ಎಂದು ಅದು ಹೇಳಿದೆ.

ಲೋಕಸಭಾ ಚುನಾವಣೆ/ ದಾಖಲೆಯ ಮೊತ್ತದ ಹಣ ಮತ್ತು ವಸ್ತುಗಳು ವಶ Read More »