Editor

ವಂದೇ ಭಾರತ್ ಮೆಟ್ರೋ/ ಜುಲೈನಲ್ಲಿ ಪ್ರಾಯೋಗಿಕ ಸಂಚಾರ

ಸಮಗ್ರ ನ್ಯೂಸ್: ಭಾರತೀಯ ರೈಲ್ವೆ ಇಲಾಖೆಯು ಜುಲೈನಲ್ಲಿ ಕಡಿಮೆ ಅಂತರದ ವಂದೇ ಮೆಟ್ರೋ ರೈಲು ಮತ್ತು ಮುಂದಿನ ತಿಂಗಳು ವಂದೇ ಭಾರತ್‍ನ ಸ್ಲೀಪರ್ ಆವೃತ್ತಿಯ ಗಳ ಪ್ರಾಯೋಗಿಕ ಸಂಚಾರ ಪ್ರಾರಂಭಿಸಲಿದೆ. ಮೊದಲ ಹಂತದಲ್ಲಿ ವಂದೇ ಭಾರತ್ ಮೆಟ್ರೋ ರೈಲು ದೆಹಲಿಯಿಂದ ಸಂಚಾರ ಕೈಗೊಳ್ಳುವ ಸಾಧ್ಯತೆ ಇದೆ. ವಂದೇ ಮೆಟ್ರೋ ರೈಲುಗಳು 100-250 ಕಿ.ಮೀ. ಮಾರ್ಗಗಳಲ್ಲಿ ಸಂಚರಿಸಿದರೆ, ವಂದೇ ಭಾರತ್ ಸ್ಲೀಪರ್ ರೈಲುಗಳು 1,000 ಕಿ.ಮೀ. ವ್ಯಾಪ್ತಿಯ ಮಾರ್ಗಗಳಲ್ಲಿ ನಿಯೋಜಿಸಲ್ಪಡುತ್ತವೆ. ವಂದೇ ಮೆಟ್ರೋ ರೈಲುಗಳು ಸುಮಾರು 124 ನಗರಗಳನ್ನು […]

ವಂದೇ ಭಾರತ್ ಮೆಟ್ರೋ/ ಜುಲೈನಲ್ಲಿ ಪ್ರಾಯೋಗಿಕ ಸಂಚಾರ Read More »

ಆಪ್ ಜೊತೆ ಮೈತ್ರಿ/ ದೆಹಲಿ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಜೀನಾಮೆ

ಸಮಗ್ರ ನ್ಯೂಸ್: ಆಮ್ ಆದ್ಮಿ ಪಕ್ಷ (ಆಪ್)ದ ಜತೆ ಮೈತ್ರಿ ಮಾಡಿಕೊಂಡಿರುವುದನ್ನು ವಿರೋಧಿಸಿ ದೆಹಲಿ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಅವರು ರಾಜೀನಾಮೆ ನೀಡಿದ್ದಾರೆ. ದೆಹಲಿಯ ಕಾಂಗ್ರೆಸ್ ಘಟಕ ಆಪ್ ಜತೆಗಿನ ಮೈತ್ರಿಗೆ ವಿರುದ್ಧವಿತ್ತು. ಆದರೂ ಪಕ್ಷದ ಹೈಕಮಾಂಡ್ ಮೈತ್ರಿ ಮಾಡಿಕೊಂಡಿದೆ. ದೆಹಲಿ ಘಟಕದ ನಾಯಕರು ಸರ್ವಾನುಮತದಿಂದ ತೆಗೆದುಕೊಳ್ಳುವ ನಿರ್ಧಾರಗಳನ್ನು ಎಐಸಿಸಿ ದೆಹಲಿ ಉಸ್ತುವಾರಿಯಾಗಿರುವ ದೀಪಕ್ ಬಾಬ್ರಿಯಾ ಅವರು ತಿರಸ್ಕರಿಸುತ್ತಿದ್ದಾರೆ ಎಂದು ದೂರಿ ಲವ್ಲಿ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ

ಆಪ್ ಜೊತೆ ಮೈತ್ರಿ/ ದೆಹಲಿ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಜೀನಾಮೆ Read More »

ಹೆಚ್ಚಾದ ಬಿಸಿಲಿನ ತಾಪ| ನೀರಿಲ್ಲದೆ ಕೆರೆಯಲ್ಲಿ ರಾಶಿರಾಶಿ ಮೀನುಗಳ ಮಾರಣಹೋಮ

ಸಮಗ್ರ ನ್ಯೂಸ್: ರಾಜ್ಯದೆಲ್ಲೆಡೆ ಬರ ಛಾಯೆ ತಟ್ಟಿದೆ. ನೀರಿಲ್ಲದೆ ಜನರು ಪರದಾಡುವ ಪರಿಸ್ಥಿತಿ ಬಂದೊದಗಿದೆ. ಜನರು ಮಾತ್ರವಲ್ಲ ಪ್ರಾಣಿ ಪಕ್ಷಿಗಳು ನೀರಿಲ್ಲದೆ ಹಾಹಾಕಾರ ಅನುಭವಿಸುತ್ತಿದೆ. ಈ ನಡುವೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದೊಡ್ಡಗೂಳ ಗ್ರಾಮದ ಕೆರೆಯಲ್ಲಿ ಬಿಸಿಲ ಬೇಗೆ ಮೀನುಗಳಿಗೂ ತಟ್ಟಿದೆ. ಕೆರೆಯ ನೀರು ಬತ್ತಿದ್ದರಿಂದ ಸಾವಿರಾರು ಮೀನುಗಳು ಮೃತಪಟ್ಟಿರುವ ಘಟನೆ ನಡೆದಿದೆ. ಮಳೆ ಕೊರತೆಯಿಂದ ಕೆರೆಕಟ್ಟೆಗಳು ಸಂಪೂರ್ಣವಾಗಿ ಖಾಲಿಯಾಗಿವೆ. ಕೆರೆಯ ಗುಂಡಿಗಳಲ್ಲಿ ಇದ್ದ ಅಲ್ಪಸ್ವಲ್ಪ ನೀರಿನಲ್ಲಿ ಮೀನುಗಳು ಜೀವ ಉಳಿಸಿಕೊಂಡಿದ್ದವು. ಅದರೆ ಇತ್ತೀಚೆಗೆ ಬಿಸಿಲಿಗೆ

ಹೆಚ್ಚಾದ ಬಿಸಿಲಿನ ತಾಪ| ನೀರಿಲ್ಲದೆ ಕೆರೆಯಲ್ಲಿ ರಾಶಿರಾಶಿ ಮೀನುಗಳ ಮಾರಣಹೋಮ Read More »

ಪುತ್ತೂರು: KFDC ರಬ್ಬರ್ ತೋಟಕ್ಕೆ ಬೆಂಕಿ

ಸಮಗ್ರ ನ್ಯೂಸ್: ಕೆ.ಎಫ್ .ಡಿ.ಸಿ ಯ ರಬ್ಬರ್ ತೋಟಕ್ಕೆ ಕರೆಂಟ್ ಶಾರ್ಟ್ ಆಗಿ ಬೆಂಕಿ ಹೊತ್ತಿಕೊಂಡ ಘಟನೆ ಪುತ್ತೂರು ತಾಲೂಕಿನ ಮೊಗಪ್ಪೆ ಗ್ರಾಮದ ನೆಟ್ಟಾರಿನಲ್ಲಿ ಎ.27 ರಂದು ನಡೆದಿದೆ. ಈ ಅವಘಡವೂ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಸಂಭವಿಸಿದ್ದು. ರಬ್ಬರ್ ಗುಡ್ಡೆಯಿಂದ ಬರುವ ಹೊಗೆಯ ಮೂಲಕ ತಿಳಿದು ಸ್ಥಳೀಯರು ನೀರು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ. ತೋಟದಲ್ಲಿ ರಬ್ಬರ್ ಮರಗಳಿಗೆ ಹಾನಿ‌ ಉಂಟಾಗಿದೆ ಎಂದು ತಿಳಿದುಬಂದಿದೆ.

ಪುತ್ತೂರು: KFDC ರಬ್ಬರ್ ತೋಟಕ್ಕೆ ಬೆಂಕಿ Read More »

ಅಸ್ತಮಿಸಿದ ದಕ್ಷಿಣದ ದಲಿತ ಸೂರ್ಯ|ಸಂಸದ ವಿ.‌ ಶ್ರೀನಿವಾಸ ಪ್ರಸಾದ್ ಇನ್ನಿಲ್ಲ|

ಸಮಗ್ರ ನ್ಯೂಸ್: ವಯೋಸಹಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಚಾಮರಾಜನಗರ ಬಿಜೆಪಿ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ (76) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸ್ ಪ್ರಸಾದ್ ಬೆಂಗಳೂರಿನ‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಸಾದ್ ನಿಧನ ಹೊಂದಿದ್ದಾರೆ. ಮೂತ್ರಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರ ಆರೋಗ್ಯದಲ್ಲಿ ಕಳೆದ ವಾರ ಏರುಪೇರಾಗಿತ್ತು. ಸೋಮವಾರ ಬೆಳಗಿನ ಜಾವ 1:30ರ ಸುಮಾರಿಗೆ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ವೈದ್ಯ ಡಾ. ಸುದರ್ಶನ್ ಬಲ್ಲಾಳ್, ಪ್ರಸಾದ್ ಅವರಿಗೆ ಚಿಕಿತ್ಸೆ

ಅಸ್ತಮಿಸಿದ ದಕ್ಷಿಣದ ದಲಿತ ಸೂರ್ಯ|ಸಂಸದ ವಿ.‌ ಶ್ರೀನಿವಾಸ ಪ್ರಸಾದ್ ಇನ್ನಿಲ್ಲ| Read More »

ವಿಜಯಪುರ : ಮಾಜಿ ಶಾಸಕ ದೇಸಾಯಿಯವರನ್ನು ಭೇಟಿಯಾದ ಆಲಗೂರ್

ಸಮಗ್ರ ನ್ಯೂಸ್‌ : ಜಿಲ್ಲೆಯ ಹಿರಿಯ ಮುತ್ಸದ್ದಿ ಹಾಗೂ ಮಾಜಿ ಶಾಸಕರಾದ ಶಿವಪುತ್ರಪ್ಪ ದೇಸಾಯಿಯವರನ್ನು ಭಾನುವಾರ ತಾಳಿಕೋಟೆಯಲ್ಲಿ ಲೋಕಸಭೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಭೇಟಿಯಾದರು. ಈ ಸಂದರ್ಭ ಶಿವಪುತ್ರಪ್ಪ ಅವರಿಂದ ಶುಭಾಶಯ ಹಾಗೂ ಅನೇಕ ಸಲಹೆಗಳನ್ನು ಆಲಗೂರರು ಪಡೆದರು. ನಿಮ್ಮ ಹಾಗೂ ಪಕ್ಷದ ಪರ ಒಳ್ಳೆಯ ವಾತಾವರಣ ಇದೆ. ಜನ ಈ ಸಲ ಬದಲಾವಣೆ ಬಯಸಿದ್ದಾರೆ. ಅವರು ಬೇಸತ್ತಿದ್ದಾರೆ. ಜನಗಳಿಗೆ ಜಿಲ್ಲೆಯ ಅಭಿವೃದ್ಧಿ ಬೇಕಾಗಿದೆ. ನೀವು ಖಂಡಿತ ವಿಜಯಶಾಲಿಯಾಗುತ್ತೀರಿ ಎಂದು ದೇಸಾಯಿಯವರು ಹರಸಿದ್ದಾರೆ.

ವಿಜಯಪುರ : ಮಾಜಿ ಶಾಸಕ ದೇಸಾಯಿಯವರನ್ನು ಭೇಟಿಯಾದ ಆಲಗೂರ್ Read More »

7 ವರ್ಷದ ಹೆಣ್ಣು ಮಗಳೊಬ್ಬಳ ಮೇಲೆ ಕಾಮುಕರಿಂದ ಅತ್ಯಾಚಾರಕ್ಕೆ ಯತ್ನ… ಸ್ಥಳೀಯರಿಂದ ರಕ್ಷಣೆ

ಸಮಗ್ರನ್ಯೂಸ್:ಬೆಂಗಳೂರಿನಲ್ಲಿ 7 ವರ್ಷದ ಹೆಣ್ಣು ಮಗಳೊಬ್ಬಳ ಮೇಲೆ ಇಬ್ಬರು ಯುವಕರಿಂದ ಅತ್ಯಾಚಾರಕ್ಕೆ ಯತ್ನಿಸಿದ್ದ ಘಟನೆ ಬೆಳಕಿಗೆ ಬಂದಿದೆ. ಅದೃಷ್ಟವಶಾತ್‌ ಸ್ಥಳೀಯರಿಗೆ ಮಾಹಿತಿ ಗೊತ್ತಾಗಿ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೆ, ಇಬ್ಬರು ಯುವಕರಿಗೆ ಧರ್ಮದೇಟು ನೀಡಿದ್ದಾರೆ. ಒಬ್ಬ ಆರೋಪಿ ಮಾತ್ರ ಸಿಕ್ಕಿದ್ದು, ಇನ್ನೊಬ್ಬನಿಗಾಗಿ ಶೋಧ ಕಾರ್ಯ ನಡೆದಿದೆ.ಇನ್ನೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಘಟನೆ ಬೆಂಗಳೂರಿನ ಕಾಡುಗೋಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಾಕೋಲೆಟ್ ಮತ್ತು ಬೊಂಬೆ ಕೊಡಿಸುತ್ತೇನೆ ಎಂದು ಹೇಳಿ ಅಪ್ರಾಪ್ತ ಬಾಲಕಿಯನ್ನು ಈ ಕಾಮುಕರು

7 ವರ್ಷದ ಹೆಣ್ಣು ಮಗಳೊಬ್ಬಳ ಮೇಲೆ ಕಾಮುಕರಿಂದ ಅತ್ಯಾಚಾರಕ್ಕೆ ಯತ್ನ… ಸ್ಥಳೀಯರಿಂದ ರಕ್ಷಣೆ Read More »

ಚಿಕ್ಕಮಗಳೂರು: ಬಾಬಾಬುಡನ್ ಗಿರಿಯಲ್ಲಿ ಪ್ರವಾಸಿ ಬಸ್ ಪಲ್ಟಿ| ಬಾಲಕನೋರ್ವ ಸಾವು; ಹಲವರು ಗಂಭೀರ

ಸಮಗ್ರ ನ್ಯೂಸ್: ಮುಳ್ಳಯ್ಯನಗಿರಿ, ಬಾಬಾ ಬುಡನ್‍ಗಿರಿಗೆ ಮಿನಿ ಬಸ್‍ನಲ್ಲಿ ಪ್ರವಾಸಕ್ಕೆ ಬಂದಿದ್ದ ಬಸ್ ವೊಂದು ಪಲ್ಟಿಯಾಗಿ ಬಾಲಕನೋರ್ವ ಮೃತಪಟ್ಟು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಬಾಬಾ ಬುಡನ್‍ಗಿರಿ ಸಮೀಪದ ಮಾಣಿಕ್ಯಧಾರ ಎಂಬಲ್ಲಿ ರವಿವಾರ ನಡೆದಿದೆ. ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಆದಿವಾಲ ಗ್ರಾಮದವರು ಎಂದು ತಿಳಿದು ಬಂದಿದ್ದು, ಗಾಯಗೊಂಡವರಲ್ಲಿ ಓರ್ವ ಬಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ. ಘಟನೆಯಲ್ಲಿ ಹಲವು ಮಂದಿ ಗಂಭೀರವಾಗಿ

ಚಿಕ್ಕಮಗಳೂರು: ಬಾಬಾಬುಡನ್ ಗಿರಿಯಲ್ಲಿ ಪ್ರವಾಸಿ ಬಸ್ ಪಲ್ಟಿ| ಬಾಲಕನೋರ್ವ ಸಾವು; ಹಲವರು ಗಂಭೀರ Read More »

ಪೆನ್ ಡ್ರೈವ್ ಪ್ರಕರಣ: ಪ್ರಜ್ವಲ್ ಜೊತೆಗೆ ಎಚ್‌.ಡಿ.ರೇವಣ್ಣ ಮೇಲೂ ಎಫ್‌ಐಆರ್‌

ಸಮಗ್ರ ನ್ಯೂಸ್: ಪ್ರಜ್ವಲ್ ರೇವಣ್ಣದು ಎನ್ನಲಾದ ಅಶ್ಲೀಲ ವಿಡಿಯೊ ಪ್ರಕರಣ ತನಿಖೆಗಾಗಿ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಇದರ ಬೆನ್ನಲ್ಲೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ ಮಹಿಯೊಬ್ಬರು ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿ ತಂದೆ-ಮಗ ಇಬ್ಬರ ಮೇಲೂ ಮನೆ ಕೆಲಸದಾಕೆಯೇ ದೂರು ನೀಡಿದ್ದಾಳೆ. ಈ ದೂರು

ಪೆನ್ ಡ್ರೈವ್ ಪ್ರಕರಣ: ಪ್ರಜ್ವಲ್ ಜೊತೆಗೆ ಎಚ್‌.ಡಿ.ರೇವಣ್ಣ ಮೇಲೂ ಎಫ್‌ಐಆರ್‌ Read More »

ಉಡುಪಿ: ಇನ್ನೋವಾ ಕಾರು ಮರಕ್ಕೆ ಡಿಕ್ಕಿ; ಯುವತಿ ಸ್ಥಳದಲ್ಲೇ ಮೃತ್ಯು, ನಾಲ್ವರು ಗಂಭೀರ

ಸಮಗ್ರ ನ್ಯೂಸ್‌ : ಇನ್ನೋವಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಹೊಂಡಕ್ಕೆ ಬಿದ್ದ ಪರಿಣಾಮ ಯುವತಿಯೋರ್ವಳು ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ತೆಕ್ಕಟ್ಟೆ ಸಮೀಪದ ಗುಡ್ಡೆಅಂಗಡಿ ರಾ.ಹೆ.66ರಲ್ಲಿ ಕೊಯ್ಕಾಡಿ ತಿರುವಿನಲ್ಲಿ ಸಂಭವಿಸಿದೆ. ಮೃತರನ್ನು ಬೆಂಗಳೂರಿನ ಫೋನ್‌ ಪೇ ಖಾಸಗಿ ಕಂಪೆನಿಯ ಉದ್ಯೋಗಿ ಕೀರ್ತಿ (25) ಎಂದು‌ ಗುರುತಿಸಲಾಗಿದೆ. ಇವರ ಸ್ನೇಹಿತರಾದ ವಿಘ್ನೇಶ್‌ (28), ಚೇತನ್‌ (28), ಐಶ್ವರ್ಯಾ (27), ಲತಾ (26) ಅವರಿಗೆ ಗಂಭೀರವಾದ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನಿಂದ ಗೋಕರ್ಣದ

ಉಡುಪಿ: ಇನ್ನೋವಾ ಕಾರು ಮರಕ್ಕೆ ಡಿಕ್ಕಿ; ಯುವತಿ ಸ್ಥಳದಲ್ಲೇ ಮೃತ್ಯು, ನಾಲ್ವರು ಗಂಭೀರ Read More »