Editor

ಬೀದರ್‌ ಕ್ಷೇತ್ರದಲ್ಲಿ 11 ಗಂಟೆಯವರೆಗೆ ಶೇ.22.33ರಷ್ಟು ಮತದಾನ

ಸಮಗ್ರ ನ್ಯೂಸ್‌ : ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಆರಂಭವಾಗಿದೆ. ಬಿಜೆಪಿಯಿಂದ ಕೇಂದ್ರ ಸಚಿವ ಭಗವಂತ ಖೂಬಾ ಸ್ಪರ್ಧಿಯಾಗಿದ್ದರೆ, ಕಾಂಗ್ರೆಸ್‌ ನಿಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪುತ್ರ, ಯವ ನಾಯಕ ಸಾಗರ್ ಖಂಡ್ರೆ ಸ್ಪರ್ಧಿಸುತ್ತಿದ್ದಾರೆ. ಬೆಳಗ್ಗೆ 11 ಗಂಟೆಯವರೆಗೆ ಶೇ.22.33ರಷ್ಟು ಮತದಾನವಾಗಿದೆ. ಬೆಳಗ್ಗೆ 9 ಗಂಟೆವರೆಗೆ ಶೇ. 8.90ರಷ್ಟು ಮತದಾನವಾಗಿತ್ತು. ಒಟ್ಟು ಮತದಾರರು: 18,92,962, ಪುರುಷ ಮತದಾರರು :9,71,424, ಮಹಿಳಾ ಮತದಾರರು : 9,21,435, ಮೊದಲ ಬಾರಿ ಮತದಾನ: 42,404. ಕ್ಷೇತ್ರದಲ್ಲಿ ಒಟ್ಟು 2024 ಮತಗಟ್ಟೆಗಳಿವೆ. […]

ಬೀದರ್‌ ಕ್ಷೇತ್ರದಲ್ಲಿ 11 ಗಂಟೆಯವರೆಗೆ ಶೇ.22.33ರಷ್ಟು ಮತದಾನ Read More »

ಬಂಟವಾಳದ ಪ್ರತಿಷ್ಠಿತ ಮದುವೆ ಸಭಾಂಗಣದ ಅವರಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಸಮಗ್ರ ನ್ಯೂಸ್‌ : ಬಂಟವಾಳದ ಪ್ರತಿಷ್ಠಿತ ಮದುವೆ ಸಭಾಂಗಣದ ಅವರಣದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ. ತಲಪಾಡಿಯಲ್ಲಿರುವ ಬಂಟವಾಳದ ಬಂಟರ ಭವನದ ಕಂಪೌಂಡ್ ನ ಒಳಗಡೆಯಲ್ಲಿ ರಕ್ತಸಿಕ್ತವಾಗಿ ಬಿದ್ದುಕೊಂಡಿರುವ ವ್ಯಕ್ತಿಯ ಶವ ಪತ್ತೆಯಾಗಿದೆ. ಉಪ್ಪಿನಂಗಡಿ ವಳಾಲು ಮೂಲದ ನಿವಾಸಿ ಸಂತೋಷ್ ಎಂಬಾತನ ಶವ ಇದಾಗಿದೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ. ಬಂಟರ ಭವನದ ಹೊರಗಡೆಯಲ್ಲಿ ಈತನ ಸೇರಿದ ಬೈಕ್ ನಿಲ್ಲಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿಗೆ ಸ್ಪಷ್ಟವಾದ ಕಾರಣ ಗೊತ್ತಾಗಿಲ್ಲವಾದರೂ ಪೊಲೀಸ್ ಮೂಲಗಳ ಪ್ರಕಾರ ಈತ ಬೈಕ್ ನಿಲ್ಲಿಸಿ ಕಂಪೌಂಡ್

ಬಂಟವಾಳದ ಪ್ರತಿಷ್ಠಿತ ಮದುವೆ ಸಭಾಂಗಣದ ಅವರಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ Read More »

ಬಸ್‌ ಕಂಡಕ್ಟರ್‌ಗಳಿಗೆ ಲೋಹದ ವಿಸಿಲ್‌ ಉಡುಗೊರೆ ನೀಡಿದ ಚೆನ್ನೈ ಸೂಪರ್​ ಕಿಂಗ್ಸ್

ಸಮಗ್ರ ನ್ಯೂಸ್‌ : ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿಯು ಮೆಟ್ರೋಪಾಲಿಟನ್‌ ಟ್ರಾನ್ಸ್‌ಪೋರ್ಟ್ ಕಾರ್ಪೋರೇಶನ್‌ ಲಿಮಿಟೆಡ್‌ ಬಸ್‌ ಕಂಡಕ್ಟರ್‌ಗಳಿಗೆ 8 ಸಾವಿರ ಲೋಹದ ವಿಸಿಲ್‌ಗ‌ಳನ್ನು ಕಂಡಕ್ಟರ್‌ಗಳಿಗೆ ವಿಶೇಷ ಉಡುಗೊರೆಯಾಗಿ ನೀಡಿದೆ. ಈ ವಿಚಾರವನ್ನು ಚೆನ್ನೈ ತಂಡ ತನ್ನ ಅಧಿಕೃತ ಟ್ವೀಟರ್​ ಎಕ್ಸ್​ ಪೋಸ್ಟ್​ ಮೂಲಕ ತಿಳಿಸಿದೆ. ಪ್ಲಾಸ್ಟಿಕ್‌ ವಿಸಿಲ್‌ಗ‌ಳ ಬಳಕೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯ ಮಾಡಲಾಗಿದೆ ಎಂದು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್‌ ಹೇಳಿದ್ದಾರೆ. ವಿಸಿಲ್‌ ಪೋಡ್​ ಎನ್ನುವುದು ಚೆನ್ನೈ ತಂಡದ ಪ್ರಧಾನ ಸ್ಲೋಗನ್​ ಆಗಿದೆ. ಈ

ಬಸ್‌ ಕಂಡಕ್ಟರ್‌ಗಳಿಗೆ ಲೋಹದ ವಿಸಿಲ್‌ ಉಡುಗೊರೆ ನೀಡಿದ ಚೆನ್ನೈ ಸೂಪರ್​ ಕಿಂಗ್ಸ್ Read More »

ಮತ್ತೆ ಆರಂಭಗೊಳ್ಳುತ್ತಿದೆ ಭಾರತ-ಶ್ರೀಲಂಕಾ ನಡುವೆ ದೋಣಿ ಸೇವೆ

ಸಮಗ್ರ ನ್ಯೂಸ್: 40 ವರ್ಷದ ನಂತರ, ಕಳೆದ ಅಕ್ಟೋಬರ್‍ನಲ್ಲಿ ಪ್ರಾರಂಭಗೊಂಡು ಹವಾಮಾನ ವೈಪರೀತ್ಯದಿಂದ ಸ್ಥಗಿತಗೊಂಡಿದ್ದ ಭಾರತದ ನಾಗಪಟ್ಟಣಂ ಮತ್ತು ಶ್ರೀಲಂಕಾದ ಜಾಪ್ಪಾ ಜಿಲ್ಲೆಯ ಕಾಂಕೆಸಂತುರೈ (ಕೆಕೆಎಸ್) ನಗರದ ನಡುವಿನ ದೋಣಿ ಸೇವೆಯು ಮೇ 13ರಿಂದ ಪುನರಾರಂಭಗೊಳ್ಳಲಿದೆ ಎಂದು ಭಾರತೀಯ ಹೈಕಮಿಷನ್ ಸೋಮವಾರ ತಿಳಿಸಿದೆ. ದೋಣಿ ಸೇವೆಯನ್ನು ಮತ್ತೆ ಪ್ರಾರಂಭಿಸುತ್ತಿರುವುದು, ಭಾರತ ಸರ್ಕಾರದ ಜನಕೇಂದ್ರಿತ ನೀತಿಯ ದೃಢೀಕರಣವಾಗಿದೆ ಎಂದು ಹೈಕಮಿಷನ್ ಹೇಳಿಕೆಯಲ್ಲಿ ತಿಳಿಸಿದೆ. ಕಾಂಕೆಸಂತುರೈ ಬಂದರನ್ನು ಪುನಶ್ಚತನಗೊಳಿಸಲು ಯೋಜನಾ ವೆಚ್ಚವಾದ ರೂ. 531 ಕೋಟಿಯನ್ನು ಭಾರತವು ಶ್ರೀಲಂಕಾಕ್ಕೆ ನೀಡಿದೆ.ಶ್ರೀಲಂಕಾದ

ಮತ್ತೆ ಆರಂಭಗೊಳ್ಳುತ್ತಿದೆ ಭಾರತ-ಶ್ರೀಲಂಕಾ ನಡುವೆ ದೋಣಿ ಸೇವೆ Read More »

ಲೋಕಸಭಾ ಚುನಾವಣೆ/ ಲೋಗೋ ಬದಲಿಸಿದ ಗೂಗಲ್

ಸಮಗ್ರ ನ್ಯೂಸ್: 2024 ರ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಗೂಗಲ್ ಡೂಡಲ್ ತನ್ನ ಸೇವೆಯನ್ನು ಒದಗಿಸಿದೆ. ಸರ್ಚ್ ಇಂಜಿನ್‍ನ ಮುಖಪುಟದಲ್ಲಿ ಐಕಾನಿಕ್ “ಗೂಗಲ್” ಲೋಗೋವನ್ನು ಬದಲಿಸುವ ಗೂಗಲ್ ಡೂಡಲ್, ಭಾರತೀಯ ಚುನಾವಣೆಗಳ ಸಾರವನ್ನು ಸಂಕೇತಿಸುವ ಅಳಿಸಲಾಗದ ಶಾಯಿಯಿಂದ ಗುರುತಿಸಲಾದ ಮೇಲಕ್ಕೆತ್ತಿದ ತೋರು ಬೆರಳನ್ನು ಹೊಂದಿದೆ. ಹನ್ನೊಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 93 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಲೋಕಸಭೆ ಚುನಾವಣೆಯ 3 ನೇ ಹಂತಕ್ಕೆ ರಾಷ್ಟ್ರವು ಪ್ರವೇಶಿಸುತ್ತಿದ್ದಂತೆ ಡೂಡಲ್ ಭಾರತದಾದ್ಯಂತ ವಾಸಿಸುವ ಜನರಿಗೆ ಮಾತ್ರ

ಲೋಕಸಭಾ ಚುನಾವಣೆ/ ಲೋಗೋ ಬದಲಿಸಿದ ಗೂಗಲ್ Read More »

ಹವಾಮಾನ ವರದಿ| ಬಂಗಾಳಕೊಲ್ಲಿಯಲ್ಲಿ ಸುಳಿಗಾಳಿ ಪರಿಣಾಮ| ರಾಜ್ಯದಲ್ಲಿ ಐದು‌ ದಿನ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಭಾರಿ ಮಳೆ ಆಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಐದು ದಿನಗಳ ಕಾಲ ಮಳೆ ಮುಂದುವರೆಯಲಿದ್ದು, ಹಳೆ ಮೈಸೂರು ಭಾಗದಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುವ ಸಂಭವ ಇದೆ. ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವುದರಿಂದ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕದ ಹಲವು ಭಾಗದಲ್ಲಿ ಮಳೆಯಾಗಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಕೊಡಗು,

ಹವಾಮಾನ ವರದಿ| ಬಂಗಾಳಕೊಲ್ಲಿಯಲ್ಲಿ ಸುಳಿಗಾಳಿ ಪರಿಣಾಮ| ರಾಜ್ಯದಲ್ಲಿ ಐದು‌ ದಿನ ಮಳೆ ಮುನ್ಸೂಚನೆ Read More »

ಸ್ವೀಟ್ ಕೊಟ್ಟಿಲ್ಲ ಎಂದು ಮದುವೆ ಕ್ಯಾನ್ಸಲ್| ವರನ ಕಡೆಯವರಿಂದ ಕಿರಿಕ್

ಸಮಗ್ರ ನ್ಯೂಸ್: ಮದುವೆಯಲ್ಲಿ ಸ್ವೀಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಕಲ್ಯಾಣ ಮಂಟಪದಲ್ಲೇ ಮದುವೆ ಮುರಿದುಬಿದ್ದ ವಿಚಿತ್ರ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ನಡೆದಿದೆ. ಹಾನಗಲ್‌ನ ಯುವತಿ ಜೊತೆಗೆ ತುಮಕೂರಿನ ಹರ್ಷಿತ್ ಎಂಬಾತನೊಂದಿಗೆ ವಿವಾಹ ನಿಶ್ಚಯವಾಗಿತ್ತು. ವಧು-ವರರಿಬ್ಬರು ಮ್ಯಾಟ್ರಿಮೊನಿಯಲ್ಲಿ ಪರಿಚಯವಾಗಿ, ಯುವತಿಯನ್ನು ವಿವಾಹವಾಗಲು ಹರ್ಷಿತ್ ಒಪ್ಪಿಕೊಂಡಿದ್ದ. ಆದರೆ ಮದುವೆಯ ಹಿಂದಿನ ದಿನ ಚಪ್ಪರ ಶಾಸ್ತ್ರದಲ್ಲಿ ವರನ ಕಡೆಯವರಿಗೆ ಊಟದಲ್ಲಿ ಸಿಹಿತಿಂಡಿ ನೀಡಿಲ್ಲ ಎಂದು ಸಣ್ಣ ಗಲಾಟೆ ಮಾಡಿ ರಾತ್ರಿ ಮದುವೆಯೇ ಬೇಡ ಎಂದು ವರ ಉಂಗುರ ಕಳಚಿಕೊಟ್ಟಿದ್ದಾನೆ. ಘಟನೆಯಿಂದ

ಸ್ವೀಟ್ ಕೊಟ್ಟಿಲ್ಲ ಎಂದು ಮದುವೆ ಕ್ಯಾನ್ಸಲ್| ವರನ ಕಡೆಯವರಿಂದ ಕಿರಿಕ್ Read More »

ಪ್ರಜ್ವಲ್ ವಿಡಿಯೋ ಲೀಕ್ ಹಿಂದೆ ಇರುವುದು ಡಿ.ಕೆ ಶಿವಕುಮಾರ್| ದೇವರಾಜೇಗೌಡ ಸ್ಫೋಟಕ ಹೇಳಿಕೆ

ಸಮಗ್ರ ನ್ಯೂಸ್: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೊ ಲೀಕ್‌ ಮಾಡಿದ್ದು ಯಾರು ಎಂಬ ಬಗ್ಗೆ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಇಂದು ಮಹತ್ವದ ವಿಚಾರವನ್ನು ಹೊರಹಾಕಿದ್ದಾರೆ. ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಈ ಎಲ್ಲ ಪ್ರಕರಣದ ಹಿಂದೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಪಾತ್ರ ಇದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಡಿಕೆಶಿಯದ್ದು ಎನ್ನಲಾದ ಆಡಿಯೊವನ್ನು ಪ್ಲೇ ಮಾಡಿದ್ದಾರೆ. ಜತೆಗೆ ತಮಗೆ ಎಸ್‌ಐಟಿ ಮೇಲೆ ಯಾವುದೇ ನಂಬಿಕೆ

ಪ್ರಜ್ವಲ್ ವಿಡಿಯೋ ಲೀಕ್ ಹಿಂದೆ ಇರುವುದು ಡಿ.ಕೆ ಶಿವಕುಮಾರ್| ದೇವರಾಜೇಗೌಡ ಸ್ಫೋಟಕ ಹೇಳಿಕೆ Read More »

ಪ್ರಜ್ವಲ್ ರೇವಣ್ಣ ವಿಡಿಯೋ ಕುರಿತಂತೆ ಮೌನ ಮುರಿದ ಮೋದಿ| ಅಷ್ಟಕ್ಕೂ ಪ್ರಧಾನಿ‌ ಹೇಳಿದ್ದೇನು ಗೊತ್ತಾ?

ಸಮಗ್ರ ನ್ಯೂಸ್: ಪ್ರಜ್ವಲ್​ ರೇವಣ್ಣ ಅವರ ವಿರುದ್ಧ ಅಶ್ಲೀಲ ವಿಡಿಯೋ ಪ್ರಕರಣದ ಕುರಿತು ಖುದ್ದು ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಮಾತನಾಡಿದ್ದಾರೆ. ಪ್ರಜ್ವಲ್‌ ರೇವಣ್ಣ ಅವರಂತಹ ವ್ಯಕ್ತಿಗಳ ವಿರುದ್ಧ ನಾವು ಶೂನ್ಯ ಸಹಿಷ್ಣುರಾಗಿದ್ದೇವೆ. ಅಂತಹ ವ್ಯಕ್ತಿಗಳ ವಿರುದ್ಧ ಸಹನೆ ತೋರಬೇಕಾದ ಅಗತ್ಯ ಇಲ್ಲ. ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ ಕರ್ನಾಟಕದ ಕಾಂಗ್ರೆಸ್‌ ಸರ್ಕಾರವೇ ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ಅವರನ್ನ ದೇಶದಿಂದ ಹೊರಗೆ ಹೋಗಲು ಅವಕಾಶ ಮಾಡಿಕೊಟ್ಟಿದೆ ಎಂದು ಕಿಡಿಕಾರಿದ್ದಾರೆ. ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ

ಪ್ರಜ್ವಲ್ ರೇವಣ್ಣ ವಿಡಿಯೋ ಕುರಿತಂತೆ ಮೌನ ಮುರಿದ ಮೋದಿ| ಅಷ್ಟಕ್ಕೂ ಪ್ರಧಾನಿ‌ ಹೇಳಿದ್ದೇನು ಗೊತ್ತಾ? Read More »

ಇಂದು ದೇಶದಲ್ಲಿ 3ನೇ ಹಂತದ ಲೋಕಸಭಾ ಚುನಾವಣೆ| ಹಲವು ಘಟಾನುಘಟಿಗಳ ಭವಿಷ್ಯ ನಿರ್ಧರಿಸಲಿದ್ದಾನೆ ಮತದಾರ

ಸಮಗ್ರ ನ್ಯೂಸ್: ದೇಶದಲ್ಲಿ ಇಂದು ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ನಡೆಯುತ್ತಿದ್ದು, ಕರ್ನಾಟಕದ 14 ಸೇರಿ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 93 ಕ್ಷೇತ್ರಗಳ ಜನರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಕರ್ನಾಟಕದ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಲಿದೆ. 14 ಕ್ಷೇತ್ರಗಳಲ್ಲಿ ಒಟ್ಟು 2,59,17, 493 ಮತದಾರರಿದ್ದಾರೆ. ಈ ಪೈಕಿ 1,29,48,978 ಪುರುಷರು,

ಇಂದು ದೇಶದಲ್ಲಿ 3ನೇ ಹಂತದ ಲೋಕಸಭಾ ಚುನಾವಣೆ| ಹಲವು ಘಟಾನುಘಟಿಗಳ ಭವಿಷ್ಯ ನಿರ್ಧರಿಸಲಿದ್ದಾನೆ ಮತದಾರ Read More »