Editor

ರಾಮಾಯಣ ಚಲನಚಿತ್ರಕ್ಕೆ 835 ಕೋಟಿ ರು. ವೆಚ್ಚ/ 2027ರ ವೇಳೆಗೆ ತೆರೆಗೆ

ಸಮಗ್ರ ನ್ಯೂಸ್: ಬಾಲಿವುಡ್‍ನ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಆಕ್ಷನ್ ಕಟ್ ಹೇಳುತ್ತಿರುವ, ರಣಬೀರ್ ಕಪೂರ್ ರಾಮನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಅಭಿನಯಿಸುತ್ತಿರುವ ಹಿಂದಿಯ ಹೊಸ ಚಲನಚಿತ್ರ ರಾಮಾಯಣವನ್ನು ಭರ್ಜರಿ 835 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಈ ಮೂಲಕ ಇದು ಈವರೆಗೆ ಭಾರತದಲ್ಲಿ ಅತಿ ಹೆಚ್ಚು ಬಜೆಟ್‍ನ ಸಿನೆಮಾ ಎಂಬ ದಾಖಲೆಗೆ ಪಾತ್ರವಾಗಲಿದೆ ಎಂದು ವರದಿಗಳು ಹೇಳಿವೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್‍ಗೆ ಬರೋಬ್ಬರಿ 600 ದಿನಗಳು ಬೇಕಾಗಲಿದ್ದು, ಸಿನಿಮಾ 2027ರ ವೇಳೆಗೆ ತೆರೆಗೆ ಬರುವ […]

ರಾಮಾಯಣ ಚಲನಚಿತ್ರಕ್ಕೆ 835 ಕೋಟಿ ರು. ವೆಚ್ಚ/ 2027ರ ವೇಳೆಗೆ ತೆರೆಗೆ Read More »

ಉಡುಪಿ : ಶಿರ್ವ ಫೈಝುಲ್ ಇಸ್ಲಾಂ ಮದ್ರಸದ 4 ಮಕ್ಕಳು ನಾಪತ್ತೆ

ಸಮಗ್ರ ನ್ಯೂಸ್ : ಶಿರ್ವ ಫೈಝುಲ್ ಇಸ್ಲಾಂ ಮದ್ರಸದ ನಾಲ್ವರು ಮಕ್ಕಳು ಮೇ 14ರಂದು ಮಧ್ಯಾಹ್ನದಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ವಿದ್ಯಾರ್ಥಿಗಳನ್ನು ಬಿಹಾರ ಮೂಲದ ತಬಾರಕ್, ಜಂಶೀದ್, ತಂಝೀರ್ ಆಲಮ್, ಶಾಹಿಲ್ ಎಂದು ಗುರುತಿಸಲಾಗಿದೆ. ಇವರಲ್ಲಿ ಇಬ್ಬರು ಅಪ್ರಾಪ್ತರಾಗಿದ್ದಾರೆ. ಮದ್ರಸ ಶಿಕ್ಷಣ ಕಲಿಯುತ್ತಿದ್ದ ಇವರು, ಮಂಗಳವಾರ ಮಧ್ಯಾಹ್ನ ವೇಳೆ ಮದ್ರಸದಿಂದ ಹೊರಗಡೆ ಹೋದವರು ಈವರೆಗೆ ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆಂದು ತಿಳಿದು ಬಂದಿದೆ. ಇಲ್ಲಿಂದ ಅವರು ತಮ್ಮ ಊರಿಗೆ ಹೋಗಿರಬಹುದು

ಉಡುಪಿ : ಶಿರ್ವ ಫೈಝುಲ್ ಇಸ್ಲಾಂ ಮದ್ರಸದ 4 ಮಕ್ಕಳು ನಾಪತ್ತೆ Read More »

ಒಡಿಶಾ : ಬಿಜೆಪಿಯು ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ನಾಶ ಎಂದ ರಾಹುಲ್

ಸಮಗ್ರ ನ್ಯೂಸ್ : ಬಿಜೆಪಿಯು ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ನಾಶಪಡಿಸಲು ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ. ಒಡಿಶಾದ ಬೋಲಂಗೀರ್ನಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಈ ಬಾರಿಯ ಚುನಾವಣೆ ಗೆದ್ದರೆ ದೇಶವನ್ನು 22 ಬಿಲಿಯನೇರ್ಗಳು ನಡೆಸಲಿದ್ದು, ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸಲಿದೆ ಎಂದರು. ಸಂವಿಧಾನದ ಪುಸಕ್ತದ ಪ್ರತಿಯನ್ನು ಕೈಯಲ್ಲಿ ಹಿಡಿದು ಭಾಷಣ ಮಾಡಿದ ರಾಹುಲ್ ಗಾಂಧಿ, ಈ ಪುಸ್ತಕವನ್ನು ಹರಿದು ಬಿಸಾಡಲು ಬಿಜೆಪಿ ಬಯಸುತ್ತಿದೆ. ಆದರೆ

ಒಡಿಶಾ : ಬಿಜೆಪಿಯು ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ನಾಶ ಎಂದ ರಾಹುಲ್ Read More »

ಕಲಬುರಗಿ : ಬಿಜೆಪಿ ಮುಖಂಡ ಸುರೇಶ ಸಜ್ಜನ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ

ಸಮಗ್ರ ನ್ಯೂಸ್ : ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿ.ಪಂ ಮಾಜಿ ಉಪಾಧ್ಯಕ್ಷ, ಬಿಜೆಪಿ ಮುಖಂಡ ಸುರೇಶ ಸಜ್ಜನ್ ಟಿಕೇಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದಾರೆ. ಬಿಜೆಪಿ ಟಿಕೆಟ್ ಮಾಜಿ ಎಂಎಲ್ ಸಿ ಅಮರನಾಥ ಪಾಟೀಲ್ ಸಿಕ್ಕಿದ್ದಕ್ಕೆ ಅಸಮಾಧಾನಗೊಂಡಿರುವ ಸಜ್ಜನ್ ಬಂಡಾಯ ಅಭ್ಯರ್ಥಿ ಯಾಗಿ ಕಣಕ್ಕೀಳಿಯಲು ನಿರ್ಧರಿಸಿದ್ದಾರೆ. ನಾಮಪತ್ರ ಸಲ್ಲಿಕೆ ಕೊನೆ ದಿನದಂದೇ ಅಮರನಾಥ ಪಾಟೀಲ್ ಬಿಜೆಪಿ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸುತ್ತಿದ್ದು, ಇದೇ ಸಮಯಕ್ಕೆ ಸಜ್ಜನ ಸಹ ನಾಮಪತ್ರ

ಕಲಬುರಗಿ : ಬಿಜೆಪಿ ಮುಖಂಡ ಸುರೇಶ ಸಜ್ಜನ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ Read More »

ಬೀದರ್ : ಬಸ್‌ ನಲ್ಲಿ ಮಹಿಳೆಯರ ಹೊಡೆದಾಟ

ಸಮಗ್ರ ನ್ಯೂಸ್ : ಬಸ್ ಸೀಟಿಗಾಗಿ ಇಬ್ಬರು ಮಹಿಳೆಯರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿರುವ ಘಟನೆ ಬೀದರ್ನಿಂದ ಕಲಬುರಗಿ ಬಸ್ನಲ್ಲಿ ಶಕ್ತಿ ಯೋಜನೆ ಅಡಿ ಉಚಿತ ಟಿಕೆಟ್ ಪಡೆದ ಬಳಿಕ ಮಹಿಳೆಯರು ಕಿತ್ತಾಟ ನಡೆಸಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಓರ್ವ ಮಹಿಳೆ, “ಸೀಟು ಬಿಡು, ಇದು ನನ್ನದು” ಎಂದು ಹೇಳಿದ್ದರೆ ಮತ್ತೊಬ್ಬಳು, “ನಾನು ಸೀಟ್ ಬಿಡಲ್ಲ. ಏನ್ ಮಾಡ್ತಿ” ಎಂದು ಪ್ರಶ್ನಿಸಿದ್ದಾಳೆ. ಇಬ್ಬರು ಪರಸ್ಪರ ಮಾತಿನಲ್ಲಿ ಜಗಳ ಮಾಡುತ್ತಿದ್ದರು. ಗಲಾಟೆ ಜೋರಾಗುತ್ತಿದ್ದಂತೆ ಓರ್ವ ಮಹಿಳೆ ತನ್ನ

ಬೀದರ್ : ಬಸ್‌ ನಲ್ಲಿ ಮಹಿಳೆಯರ ಹೊಡೆದಾಟ Read More »

ಆರ್ಥಿಕ ಹೊಡೆತಕ್ಕೆ ಸಿಲುಕಿದ ಪಾಕ್/ ಸರ್ಕಾರಿ ಉದ್ದಿಮೆಗಳ ಖಾಸಗೀಕರಣದ ಘೋಷಣೆ

ಸಮಗ್ರ ನ್ಯೂಸ್: ಆರ್ಥಿಕ ದಿವಾಳಿತನದತ್ತ ಸಾಗುತ್ತಿರುವ ಪಾಕಿಸ್ತಾನ ಸರ್ಕಾರ ತನ್ನ ಕೊನೆಯ ಮಾರ್ಗ ಎನ್ನುವಂತೆ ದೇಶದಲ್ಲಿನ ಆಯಕಟ್ಟಿನ ಪ್ರಮುಖ ಉದ್ಯಮಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸರ್ಕಾರಿ ಉದ್ದಿಮೆಗಳ ಕಂಪನಿಗಳನ್ನು ಖಾಸಗೀಕರಣ ಮಾಡುವ ಘೋಷಣೆ ಮಾಡಿದೆ. ಖಾಸಗೀಕರಣ ಸಚಿವಾಲಯ ಮತ್ತು ಖಾಸಗೀಕರಣ ಆಯೋಗಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಪರಿಶೀಲನಾ ಸಭೆ ನಡೆಸಿದ ಬಳಿಕ, ಸರ್ಕಾರಿ ಕಂಪನಿಗಳನ್ನು ಖಾಸಗೀಕರಣಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ಷರೀಫ್ ಘೋಷಿಸಿದರು. ಎನ್ ಆರ್ ವೈ ನ್ಯೂಸ್‍ನ ವರದಿಯ ಪ್ರಕಾರ, ಇದರಲ್ಲಿ ವಿದ್ಯುತ್ ವಿತರಣಾ

ಆರ್ಥಿಕ ಹೊಡೆತಕ್ಕೆ ಸಿಲುಕಿದ ಪಾಕ್/ ಸರ್ಕಾರಿ ಉದ್ದಿಮೆಗಳ ಖಾಸಗೀಕರಣದ ಘೋಷಣೆ Read More »

ನೇಹಾ ಮಾದರಿಯಲ್ಲೇ ಮತ್ತೊಂದು ಹತ್ಯೆ| ಮತ್ತೆ ಬೆಚ್ಚಿಬಿದ್ದ ಹುಬ್ಬಳ್ಳಿ| ಆರೋಪಿ ಬಂಧನಕ್ಕೆ ಕಾರ್ಯಾಚರಣೆ ಶುರು

ಸಮಗ್ರ ವಾರ್ತೆ: ದೇಶವನ್ನೇ ಬೆಚ್ಚಿಬೀಳಿಸಿದ್ದ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಕಾಂಗ್ರೆಸ್​ ಸದಸ್ಯನ ಪುತ್ರಿ ನೇಹಾ ಹಿರೇಮಠ್ ಕೊಲೆ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯ ಮತ್ತೊಂದು ಘಟನೆ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್​ ಠಾಣಾ ವ್ಯಾಪ್ತಿಯ ವೀರಾಪುರ ಓಣಿಯಲ್ಲಿ ಬುಧವಾರ (ಮೇ 15) ನಡೆದಿದೆ. ಕೊಲೆಯಾದ ಯುವತಿಯನ್ನು ಅಂಜಲಿ ಅಂಬಿಗೇರ (20) ಎಂದು ಗುರುತಿಸಲಾಗಿದ್ದು, ವಿಶ್ವ ಅಲಿಯಾಸ್​ ಗಿರೀಶ್​ ಎಂಬಾತ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ತಲೆಮಾರಿಸಿಕೊಂಡಿದ್ದಾನೆ. ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಆರೋಪಿ ಹಲವು ದಿನಗಳಿಂದ ತನ್ನನ್ನು ಪ್ರೀತಿಸುವಂತೆ

ನೇಹಾ ಮಾದರಿಯಲ್ಲೇ ಮತ್ತೊಂದು ಹತ್ಯೆ| ಮತ್ತೆ ಬೆಚ್ಚಿಬಿದ್ದ ಹುಬ್ಬಳ್ಳಿ| ಆರೋಪಿ ಬಂಧನಕ್ಕೆ ಕಾರ್ಯಾಚರಣೆ ಶುರು Read More »

ಪುತ್ತೂರು: ಬಸ್ ಮತ್ತು ಬೈಕ್ ನಡುವೆ ಅಪಘಾತ| ಸವಾರ ಸ್ಥಳದಲ್ಲೇ ದುರ್ಮರಣ

ಸಮಗ್ರ ನ್ಯೂಸ್: ಕೆಎಸ್ಸಾರ್ಟಿಸಿ ಬಸ್ ಮತ್ತು ಬೈಕ್‌ ನಡುವಿನ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಜೇಶ್ವರ – ಸುಬ್ರಹ್ಮಣ್ಯ ಹೆದ್ದಾರಿಯ ನರಿಮೊಗರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ ಇಂದು (ಮೇ.15) ಬೆಳಗ್ಗೆ ನಡೆದಿದೆ. ಮೃತ ವ್ಯಕ್ತಿಯನ್ನು ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕುಂಡಡ್ಕ ನಿವಾಸಿ ಮೋಕ್ಷಿತ್ ಗೌಡ (23) ಎಂದು ಗುರುತಿಸಲಾಗಿದೆ. ಮೋಕ್ಷಿತ್ ಗೌಡ ಅವರು ಪುರುಷರಕಟ್ಟೆಯಲ್ಲಿರುವ ಬಿಂದು ಫ್ಯಾಕ್ಟರಿಯಲ್ಲಿ ಸಿಫಾನ್ ಮೆಷಿನ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪುರುಷರಕಟ್ಟೆಯಲ್ಲಿ ರೂಂ ಮಾಡಿಕೊಂಡು ಉಳಿದುಕೊಂಡಿದ್ದ ಮೋಕ್ಷಿತ್

ಪುತ್ತೂರು: ಬಸ್ ಮತ್ತು ಬೈಕ್ ನಡುವೆ ಅಪಘಾತ| ಸವಾರ ಸ್ಥಳದಲ್ಲೇ ದುರ್ಮರಣ Read More »

ಹವಾಮಾನ ವರದಿ| ಮೇ.18ರವರೆಗೂ ವರ್ಷಧಾರೆ| ಹಲವು ಜಿಲ್ಲೆಗಳಿಗೆ ಅಲರ್ಟ್

ಸಮಗ್ರ ನ್ಯೂಸ್: ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡು, ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ದಕ್ಷಿಣ ಒಳನಾಡಿನ ತುಮಕೂರು, ರಾಮನಗರದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಚಾಮರಾಜನಗರ ಮತ್ತು ಮೈಸೂರು, ಬೆಂಗಳೂರು ನಗರ , ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬೀದರ್, ಕಲಬುರಗಿ, ಯಾದಗಿರಿ,

ಹವಾಮಾನ ವರದಿ| ಮೇ.18ರವರೆಗೂ ವರ್ಷಧಾರೆ| ಹಲವು ಜಿಲ್ಲೆಗಳಿಗೆ ಅಲರ್ಟ್ Read More »

ಉಡುಪಿ: ಮನೆಮುಂದೆ ನಿಂತಿದ್ದ ಯುವಕ ಸಿಡಿಲಿಗೆ ಬಲಿ

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಸುರೇಶ್ ಶೆಟ್ಟಿ(38) ಮೃತಪಟ್ಟವರು ಎಂದು ಹೇಳಲಾಗಿದೆ. ಸಂಜೆ ಮಳೆ ಬರುತ್ತಿದ್ದಾಗ ಮನೆ ಬಳಿ ನಿಂತಿದ್ದ ಸುರೇಶ್ ಶೆಟ್ಟಿ ಸಿಡಿಲು ಬಡಿದು ಶಂಕರ ನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಉಡುಪಿ: ಮನೆಮುಂದೆ ನಿಂತಿದ್ದ ಯುವಕ ಸಿಡಿಲಿಗೆ ಬಲಿ Read More »