Editor

ಥಾಯ್ಲೆಂಡ್ ಓಪನ್ ಸೂಪರ್ ಬ್ಯಾಡ್ಮಿಂಟನ್/ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತದ ಚಿರಾಗ್ – ಸಾತ್ವಿಕ್ ಜೋಡಿ

ಸಮಗ್ರ ನ್ಯೂಸ್: ಭಾರತದ ಸ್ಟಾರ್ ಡಬಲ್ಸ್ ಬ್ಯಾಡ್ಮಿಂಟನ್ ಆಟಗಾರರಾದ ಚಿರಾಗ್ ಶೆಟ್ಟಿ- ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಥಾಯ್ಲೆಂಡ್ ಓಪನ್ ಸೂಪರ್ ಬ್ಯಾಡ್ಮಿಂಟನ್ 500 (Thailand Open 2024) ಫೈನಲ್ ಪಂದ್ಯದಲ್ಲಿ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಏಕಪಕ್ಷೀಯವಾಗಿ ಸಾಗಿದ ಫೈನಲ್ ಪಂದ್ಯದಲ್ಲಿ ಏಷ್ಯಾಡ್ ಚಾಂಪಿಯನ್ ಹಾಗೂ ಕೂಟದ ಅಗ್ರ ಶ್ರೇಯಾಂಕಿ ಭಾರತೀಯ ಜೋಡಿ ಚೀನದ ಚೆನ್‌ – ಬೊ ಯಾಂಗ್ – ಲಿಯು ಯಿ ವಿರುದ್ಧ 21-15, 21-15 ನೇರ ಅಂಕಗಳಿಂದ ಹಿಮ್ಮೆಟಿಸಿದರು. ಶನಿವಾರ ನಡೆದಿದ್ದ ಸೆಮಿಫೈನಲ್ […]

ಥಾಯ್ಲೆಂಡ್ ಓಪನ್ ಸೂಪರ್ ಬ್ಯಾಡ್ಮಿಂಟನ್/ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತದ ಚಿರಾಗ್ – ಸಾತ್ವಿಕ್ ಜೋಡಿ Read More »

ಇಬ್ರಾಹಿಂ ರೈಸಿ ನಿಧನ/ ಸಂತಾಪ ಸೂಚಿಸಿದ ನರೇಂದ್ರ ಮೋದಿ

ಸಮಗ್ರ ನ್ಯೂಸ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಅಧ್ಯಕ್ಷ ಡಾ. ಸೆಯದ್ ಇಬ್ರಾಹಿಂ ರೈಸಿ ಅವರ ದುರಂತ ನಿಧನದಿಂದ ತೀವ್ರ ದುಃಖ ಮತ್ತು ಆಘಾತವಾಗಿದೆ. ಭಾರತ-ಇರಾನ್ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಅವರ ಕೊಡುಗೆ ಯಾವಾಗಲೂ ಸ್ಮರಣೀಯವಾಗಿದೆ. ಅವರ ಕುಟುಂಬ ಮತ್ತು ಇರಾನ್ ಜನತೆಗೆ ನನ್ನ ಹೃತ್ತೂರ್ವಕ ಸಂತಾಪ. ಈ ದುಃಖದ ಸಮಯದಲ್ಲಿ ಭಾರತವು ಇರಾನ್‌ನೊಂದಿಗೆ ನಿಂತಿದೆ” ಎಂದು ಪ್ರಧಾನಿ ಮೋದಿ ಟ್ವೀಟ್

ಇಬ್ರಾಹಿಂ ರೈಸಿ ನಿಧನ/ ಸಂತಾಪ ಸೂಚಿಸಿದ ನರೇಂದ್ರ ಮೋದಿ Read More »

ರೈತರಿಗೆ ಶುಭ ಸುದ್ದಿ ನೀಡಿದ ಹವಾಮಾನ ಇಲಾಖೆ| ಭಾರತಕ್ಕೆ ಪ್ರವೇಶಿಸಿದ ಮುಂಗಾರು ಮಳೆ

ಸಮಗ್ರ ನ್ಯೂಸ್: ಕಳೆದ ವರ್ಷ ಬರದಿಂದ ಕಂಗೆಟ್ಟಿದ್ದ ರೈತರಿಗೆ ಪ್ರಸಕ್ತ ಹಂಗಾಮಿಗೆ ಶುಭ ಸುದ್ದಿ ಹೊರಬಿದ್ದಿದೆ. ಕೇಂದ್ರ ಹವಾಮಾನ ಇಲಾಖೆ ಪ್ರಕಾರ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ. ಲಾ ನಿನಾ ಪರಿಸ್ಥಿತಿಯಿಂದಾಗಿ ಪೆಸಿಫಿಕ್ ಸಾಗರದ ತಂಪಾಗುವಿಕೆಯು ಈ ವರ್ಷ ಉತ್ತಮ ಮಳೆಯಾಗಲು ಕಾರಣವಾಗುತ್ತದೆ. ನೈರುತ್ಯ ಮುಂಗಾರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಈಗಾಗಲೇ ತಲುಪಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬಹಿರಂಗಪಡಿಸಿದೆ. ‘ನೈಋತ್ಯ ಮುಂಗಾರು ಮಾಲ್ಡೀವ್ಸ್‌ ಹಾಗೂ ಕಮೋರಿನ್‌ ದ್ವೀಪಗಳನ್ನು ದಾಟಿ ಬಂಗಾಳ ಕೊಲ್ಲಿಯ ನಿಕೋಬಾರ್‌

ರೈತರಿಗೆ ಶುಭ ಸುದ್ದಿ ನೀಡಿದ ಹವಾಮಾನ ಇಲಾಖೆ| ಭಾರತಕ್ಕೆ ಪ್ರವೇಶಿಸಿದ ಮುಂಗಾರು ಮಳೆ Read More »

ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಕೊನೆಯುಸಿರು

ಸಮಗ್ರ ನ್ಯೂಸ್: ಅಜರ್‌ಬೈಜಾನ್‌ ನಿಂದ ಮರಳುತ್ತಿದ್ದ ವೇಳೆ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಕೊನೆಯುಸಿರೆಳೆದಿದ್ದಾರೆ. ರವಿವಾರ ನಡೆದ ಘಟನೆಯಲ್ಲಿ ಇರಾನ್ ಅಧ್ಯಕ್ಷರು ಮೃತಪಟ್ಟಿದ್ದಾರೆ ಎಂದು ಇದೀಗ ಖಚಿತಪಡಿಸಲಾಗಿದೆ. ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಹೊಸೇನ್‌ ಅಮೀರಬ್‌ ದೊಲ್ಲಾಹಿಯನ್‌ ಮತ್ತು ಇರಾನ್‌ನ ಪರಮೋಚ್ಚ ನಾಯಕ ಖೊಮೇನಿಯವರ ಪ್ರತಿನಿಧಿ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನವಾಗಿದೆ. ಇರಾನ್ ಮಾಧ್ಯಮಗಳ ಪ್ರಕಾರ, ಹೆಲಿಕಾಪ್ಟರ್‌ನ ಅವಶೇಷಗಳು ಪತ್ತೆಯಾದ ಕೆಲವೇ ನಿಮಿಷಗಳಲ್ಲಿ, ಇರಾನ್ ಅಧ್ಯಕ್ಷ ರೈಸಿ

ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಕೊನೆಯುಸಿರು Read More »

ಹವಾಮಾನ ವರದಿ| ವಾಯುಭಾರ ಕುಸಿತ; 14 ಜಿಲ್ಲೆಗಳಲ್ಲಿ ಅಲರ್ಟ್

ಸಮಗ್ರ ನ್ಯೂಸ್: ಕಳೆದ 6 ತಿಂಗಳಿನಿಂದ ಬಿಸಿಲಿನ ಬೇಗೆಗೆ ಕಂಗೆಟ್ಟಿದ್ದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಈಗ ಮತ್ತೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗಿದ್ದು ಹವಾಮಾನ ಇಲಾಖೆ 14 ಜಿಲ್ಲೆಗಳಲ್ಲಿ ಆರೆಂಜ್, ಯೆಲ್ಲೋ ಅಲರ್ಟ್ ಘೋಷಿಸಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿಗೆ ಆರೆಂಜ್ ಅಲರ್ಟ್, ಉತ್ತರಕನ್ನಡದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ಮುಂದಿನ ಐದು ದಿನ ಆರೆಂಜ್ ಅಲರ್ಟ್ ನೀಡಲಾಗಿದೆ. ಇನ್ನೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು

ಹವಾಮಾನ ವರದಿ| ವಾಯುಭಾರ ಕುಸಿತ; 14 ಜಿಲ್ಲೆಗಳಲ್ಲಿ ಅಲರ್ಟ್ Read More »

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ

ಸಮಗ್ರ ನ್ಯೂಸ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭಾನುವಾರ (ಮೇ.19) ರಂದು ವಾಯುವ್ಯ ಇರಾನ್​ನ ಜೋಲ್ಫಾದಲ್ಲಿ ಪತನವಾಗಿದೆ ಎಂದು ಇರಾನ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹವಾಮಾನ ವೈಪರೀತ್ಯ ಹಿನ್ನೆಲೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು, ಅಧ್ಯಕ್ಷ ರೈಸಿ ಜತೆ ಇರಾನ್ ವಿದೇಶಾಂಗ ಸಚಿವ ಹುಸೇನ್ ಕೂಡ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇಬ್ರಾಹಿಂ ರೈಸಿ ಹಾಗೂ ವಿದೇಶಾಂಗ ಸಚಿವ ಹೂಸೈನ್ ಅಮಿರಾಬ್ದೊಲ್ಹೈನ್ ಇಬ್ಬರು ಪೂರ್ವ ಅಜರ್‌ಬೈಜಾನ್‌ನಲ್ಲಿ ಕಾರ್ಯಕ್ರಮಕ್ಕಾಗಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ದಟ್ಟ ಮಂಜು ಆವರಿಸಿರುವುದರಿಂದ ಹೆಲಿಕಾಪ್ಟರ್ ಅವಘಡದ ಶಂಕೆ ವ್ಯಕ್ತವಾಗಿದ್ದು,

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ Read More »

ಯುವತಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಬೈಕ್‌ ರೈಡ್| ಯುವಕ ಅರೆಸ್ಟ್

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಯುವತಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಬೈಕ್‌ ರೈಡ್ ಮಾಡಿದ್ದ ಯುವಕನನ್ನು ಹೆಬ್ಬಾಳ ಸಂಚಾರ ಪೊಲೀಸರು ಬಂಧಿಸಿದ್ದಾರೆ. ಅಪಾಯಕಾರಿ ಬೈಕ್‌ ರೈಡಿಂಗ್ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಹಿನ್ನೆಲೆಯಲ್ಲಿ ಯುವಕನನ್ನು ಪೊಲೀಸರು ಬಂಧಿಸಿ, ಬೈಕ್‌ ವಶಕ್ಕೆ ಪಡೆದಿದ್ದಾರೆ. ಶಾಂಪುರ ನಿವಾಸಿ ಸಿಲಂಬರಸನ್ (21) ಬಂಧಿತ ಯುವಕ. ಯುವತಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಯುವಕ ಸಿಲಂಬರಸನ್ ಬೈಕ್‌ ರೈಡ್ ಮಾಡಿದ್ದ. ಬೆಂಗಳೂರಿನ ಏರ್‌ಪೋರ್ಟ್ ರಸ್ತೆಯ ಯಲಹಂಕ ಫ್ಲೈ‌ಓವರ್‌ನಲ್ಲಿ ಮೇ 17ರ ರಾತ್ರಿ‌ ಈ ಘಟನೆ ನಡೆದಿತ್ತು.

ಯುವತಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಬೈಕ್‌ ರೈಡ್| ಯುವಕ ಅರೆಸ್ಟ್ Read More »

ದಾಖಲೆಯ ಮೊತ್ತಕ್ಕೆ ಮಾರಾಟವಾದ ‘ಕಾಂತಾರ’ ಡಿಜಿಟಲ್ ರೈಟ್ಸ್

ಸಮಗ್ರ ನ್ಯೂಸ್: ರಿಷಬ್ ಶೆಟ್ಟಿ ನಟನೆ-ನಿರ್ದೇಶನದ ಕೇವಲ 15-16 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಾಂತಾರ ಚಿತ್ರದ ಡಿಜಿಟಲ್ ರೈಟ್ಸ್ 125 ಕೋಟಿ ರೂಪಾಯಿಗೆ ಅಮೆಜಾನ್ ಪ್ರೈಮ್ ವೀಡಿಯೋ ಕಂಪನಿಗೆ ಸೇಲ್ ಆಗಿ ಅಚ್ಚರಿ ನೀಡಿದೆ. ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಜೋಡಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕಾಂತಾರ ಚಿತ್ರವು ಈ ಮೂಲಕ ಇದೀಗ ಮತ್ತೊಂದು ಮನ್ನಣೆಗೆ ಪಾತ್ರವಾಗಿದೆ. ಈಗಾಗಲೇ ಕಾಂತಾರ ಚಿತ್ರದ ಬಿಡುಗಡೆಯಿಂದ ಜಗತ್ತಿನಾದ್ಯಂತ 500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿದೆ. ರಿಷಬ್

ದಾಖಲೆಯ ಮೊತ್ತಕ್ಕೆ ಮಾರಾಟವಾದ ‘ಕಾಂತಾರ’ ಡಿಜಿಟಲ್ ರೈಟ್ಸ್ Read More »

ವಾಯುಭಾರ ಕುಸಿತ; ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಮುನ್ಸೂಚನೆ

ಸಮಗ್ರ ನ್ಯೂಸ್: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಸಂಭವವಿದ್ದು, ಇದೇ 22ರವರೆಗೆ ಕರಾವಳಿಯುದ್ಧಕ್ಕೂ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾಗಿ ಮೀನುಗಾರರು ಈ ಅವಧಿಯಲ್ಲಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಬಾರದು ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಸೂಚಿಸಿದೆ. ಇದೇ 20ರಂದು ಮತ್ತು ಇದೇ 22ರಂದು ಕರಾವಳಿಯಲ್ಲಿ ಪ್ರತಿಕೂಲ ಹವಾಮಾನ ಇರಲಿದ್ದು, ಗಂಟೆಗೆ 45 ಕಿ.ಮೀ ಯಿಂದ 55 ಕಿ.ಮಿ ವೇಗದಲ್ಲಿ ಗಾಳಿ ಬೀಸಲಿದೆ. ಗಾಳಿಯು ಗಂಟೆಗೆ 65 ಕಿ.ಮೀ.

ವಾಯುಭಾರ ಕುಸಿತ; ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಮುನ್ಸೂಚನೆ Read More »

ನಿನ್ನೆ ಆರ್​ಸಿಬಿ-ಚೆನ್ನೈ ಪಂದ್ಯ: ಆನ್​ಲೈನ್​ ವೀಕ್ಷಣೆಯಲ್ಲೂ ದಾಖಲೆ

ಸಮಗ್ರ ನ್ಯೂಸ್: ನಿನ್ನೆ ಚೆನ್ನೈ ಮತ್ತು ಆರ್​ಸಿಬಿ ಮ್ಯಾಚ್ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದೆ. ಈ ಪಂದ್ಯದಲ್ಲಿ ಆರ್​ಸಿಬಿ ಜಯಗಳಿಸಿದೆ. ಇನ್ನೂ ಈ ಪಂದ್ಯ ಜಿಯೋ ಸಿನಿಮಾದಲ್ಲಿ 50 ಕೋಟಿ ವೀಕ್ಷಣೆ ಕಾಣುವ ಮೂಲಕ ದಾಖಲೆಯೊಂದನ್ನು ಬರೆದಿದೆ. ಐಪಿಎಲ್(IPL 2024)​ ಇತಿಹಾಸದಲ್ಲೇ ಡಿಜಿಟಲ್​ ವೀಕ್ಷಣೆಯಲ್ಲಿ ಅತ್ಯಧಿಕ ವೀಕ್ಷಣೆ ಕಂಡ ಪಂದ್ಯವೆಂಬ ದಾಖಲೆ ನಿರ್ಮಿಸಿದೆ. ನಿನ್ನೆ ಮಳೆ ಪೀಡಿತ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 218

ನಿನ್ನೆ ಆರ್​ಸಿಬಿ-ಚೆನ್ನೈ ಪಂದ್ಯ: ಆನ್​ಲೈನ್​ ವೀಕ್ಷಣೆಯಲ್ಲೂ ದಾಖಲೆ Read More »