Editor

ಬಿ.ಎಸ್ ಯಡಿಯೂರಪ್ಪ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ| ದೂರುಕೊಟ್ಟ ಮಹಿಳೆ ಸಾವು

ಸಮಗ್ರ ನ್ಯೂಸ್: ಬಿ.ಎಸ್ ಯಡಿಯೂರಪ್ಪ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ದೂರುದಾರೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇವರು ಯಡಿಯೂರಪ್ಪ ವಿರುದ್ಧ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಮಾಡಿ ಇತ್ತೀಚೆಗೆ ದೂರು ನೀಡಿದವರು. ಯಡಿಯೂರಪ್ಪ ವಿರುದ್ಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಆದರೆ ಇದೀಗ ಬನ್ನೇರುಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೂರುದಾರೆ, ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿದ್ದು ಇಂದು ಮೃತ ಪಟ್ಟಿದ್ದಾರೆ. ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ ಎಸಗಿದ ಆರೋಪದಡಿ […]

ಬಿ.ಎಸ್ ಯಡಿಯೂರಪ್ಪ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ| ದೂರುಕೊಟ್ಟ ಮಹಿಳೆ ಸಾವು Read More »

ಮಂಗಳೂರು: ಕಂಕನಾಡಿಯ ನಡು ರಸ್ತೆಯಲ್ಲೇ ಮುಸ್ಲಿಮರು ನಮಾಜ್ ಮಾಡುವ ವೀಡಿಯೋ ವೈರಲ್

ಸಮಗ್ರ ನ್ಯೂಸ್: ಮಂಗಳೂರಿನ ಕಂಕನಾಡಿಯಲ್ಲಿ ನಡು ರಸ್ತೆಯಲ್ಲೇ ಮುಸ್ಲಿಮರು ನಮಾಜ್ ಮಾಡಿದ್ದಾರೆ. ಈ ಘಟನೆ ಕಳೆದ ಶುಕ್ರವಾರ ನಡೆದಿದ್ದು, ನಮಾಜ್ ಮಾಡಿದ ವಿಡಿಯೋ ಎಲ್ಲಡೆ ಹರಿದಾಡುತ್ತಿದೆ. ಕಂಕನಾಡಿಯಲ್ಲಿ ಮಸೀದಿ ಮುಂದೆ ಇರುವ ರಸ್ತೆಯಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಮಾಡಿದ್ದಾರೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ. ನಡು ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದರಿಂದ ವಾಹನ ಸವಾರರು ಯೂಟರ್ನ್ ತೆಗೆದುಕೊಂಡು ಹೋಗಿದ್ದಾರೆ. ಕದ್ರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮುಸ್ಲಿಮರು ನಮಾಜ್ ಮಾಡಿದನ್ನು ಮೊಬೈಲ್ನಲ್ಲಿ ಸೆರೆಹಿಡಿಯಲಾಗಿದ್ದು, ಇದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಮಂಗಳೂರು: ಕಂಕನಾಡಿಯ ನಡು ರಸ್ತೆಯಲ್ಲೇ ಮುಸ್ಲಿಮರು ನಮಾಜ್ ಮಾಡುವ ವೀಡಿಯೋ ವೈರಲ್ Read More »

ಐಪಿಎಲ್ ಕ್ರಿಕೆಟ್-2024| ಮೂರನೇ ಬಾರಿ ಕಪ್ ಗೆ ಮುತ್ತಿಕ್ಕಿದ ಕೆಕೆಆರ್

ಸಮಗ್ರ ನ್ಯೂಸ್: ಸಮರ್ಥ ಪ್ರದರ್ಶನ ನೀಡಿದ ಕೋಲ್ಕೊತಾ ನೈಟ್​ ರೈಡರ್ಸ್ ತಂಡ ಐಪಿಎಲ್​ 2024ರ ಆವೃತ್ತಿಯ (IPL 2024) ಟ್ರೋಫಿ ಗೆದ್ದಿದೆ. ಫೈನಲ್​ ಪಂದ್ಯದಲ್ಲಿ ಎದುರಾಳಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ 8 ವಿಕೆಟ್​ಗಳ ಗೆಲುವು ಸಾಧಿಸಿ ಮೂರನೇ ಬಾರಿಗೆ ಚಾಂಪಿಯನ್ ಆಗಿದೆ. ಈ ಹಿಂದೆ 2012 ಹಾಗೂ 2104ರಲ್ಲಿ ಗೌತಮ್ ಗಂಭೀರ್ ಅವರ ನಾಯಕತ್ವದಲ್ಲಿ ಈ ತಂಡ ಚಾಂಪಿಯನ್ ಆಗಿತ್ತು. ಇದೀಗ ಅವರದ್ದೇ ಕೋಚಿಂಗ್​ನಲ್ಲಿ ತಂಡ ಟ್ರೋಫಿ ಗೆದ್ದಿರುವುದು ವಿಶೇಷ ಎನಿಸಿದೆ. ಕೆಕೆಆರ್ ತಂಡ ಚೆನ್ನೈ ಸೂಪರ್

ಐಪಿಎಲ್ ಕ್ರಿಕೆಟ್-2024| ಮೂರನೇ ಬಾರಿ ಕಪ್ ಗೆ ಮುತ್ತಿಕ್ಕಿದ ಕೆಕೆಆರ್ Read More »

ಬಸ್ – ಬೈಕ್ ನಡುವೆ ಮುಖಾಮುಖಿ ಡಿಕ್ಕಿ| ಇಬ್ಬರು ಸಾವು

ಸಮಗ್ರ ನ್ಯೂಸ್: ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ರಸ್ತೆಯ ಸಬ್ಬಕೆರೆ ಗೇಟ್ ಬಳಿ ನಡೆದಿದೆ. ಬೈಕ್ ನಲ್ಲಿದ್ದ ಓರ್ವ ಮಹಿಳೆ ಹಾಗೂ ಬೈಕ್ ಚಾಲಕ ಸಾವನ್ನಪ್ಪಿದ್ದಾರೆ. ಮೃತರನ್ನು ಮಾಗಡಿ ತಾಲ್ಲೂಕಿನ ಹೊನ್ನಾಪುರ ಪಾಳ್ಯದ ನಿವಾಸಿಗಳು ಎಂದು ತಿಳಿದುಬಂದಿದೆ. ಇವರು ಕನಕಪುರದಿಂದ ರಾಮನಗರ ಕಡೆ ತೆರಳುತ್ತಿದ್ದರು. ರಾಮನಗರದಿಂದ ಕನಪುರಕ್ಕೆ ತೆರಳುತ್ತಿದ್ದ ಬಸ್ ಗೆ ಬೈಕ್ ಡಿಕ್ಕಿಯಾಗಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ

ಬಸ್ – ಬೈಕ್ ನಡುವೆ ಮುಖಾಮುಖಿ ಡಿಕ್ಕಿ| ಇಬ್ಬರು ಸಾವು Read More »

ಭಜನಾ ಮಂಡಳಿಗೆ ಸೇರಿಸಿಕೊಳ್ಳದ್ದಕ್ಕೆ ಚಾಕುವಿನಿಂದ ಇರಿದು ಹಲ್ಲೆ..!

ಸಮಗ್ರ ನ್ಯೂಸ್: ಗದಗದಲ್ಲಿ ಭಜನಾ ಮಂಡಳಿಗೆ ಸೇರಿಸಿಕೊಳ್ಳದ್ದಕ್ಕೆ ಕೋಪದಿಂದ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವಂತಹ ಘಟನೆ ಗದಗ ಜಿಲ್ಲೆಯ ಟಾಂಗಾ ಕೂಟ್ ಬಳಿ ನಡೆದಿದೆ. ಭಜನಾ ಮಂಡಳಿಗೆ ಸೇರಿಸಿಕೊಳ್ಳದಿದ್ದಕ್ಕೆ ವಿನಾಯಕ ಕಬಾಡಿಯಿಂದ ಗೋವಿಂದರಾಜ ಶಿರಹಟ್ಟಿ ಮೇಲೆ ಹಲ್ಲೆ ಮಾಡಲಾಗಿದೆ. ಇದೀಗ ಆರೋಪಿ ವಿನಾಯಕನನ್ನು ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ ನಡೆಸುತ್ತಿದ್ದಾರೆ. ಹಲ್ಲೆಗೊಳಗಾದ ಗೋವಿಂದರಾಜ ಶಿರಹಟ್ಟಿ ಇಸ್ಕಾನ್ ಕೀರ್ತನೆ ಸಂಘ ನಡೆಸುತ್ತಿದ್ದರು. ಇದೇ ಸಂಘದಿಂದ ವಿನಾಯಕನನ್ನ ತೆಗೆದು ಹಾಕಲಾಗಿತ್ತು. 2018ರಿಂದ 2023ರವರೆಗೆ ಕೀರ್ತನಾ ಸಂಘದಲ್ಲಿದ್ದ ವಿನಾಯಕ ಕಬಾಡಿ,

ಭಜನಾ ಮಂಡಳಿಗೆ ಸೇರಿಸಿಕೊಳ್ಳದ್ದಕ್ಕೆ ಚಾಕುವಿನಿಂದ ಇರಿದು ಹಲ್ಲೆ..! Read More »

ಮದುವೆ ಮನೆಗೆ ಕನ್ನ ಹಾಕಿದ ಖದೀಮ|ಹಿಗ್ಗಾಮುಗ್ಗಾ ಥಳಿಸಿದ ಮದುವೆ ಮನೆಯವರು

ಸಮಗ್ರ ನ್ಯೂಸ್: ಇಲ್ಲೊಂದು ಕತೆ ಇದೆ ನೋಡಿ, ಯಾರೋ ಒಬ್ಬ ಕಳ್ಳ ಸ್ಟೈಲ್ ಆಗಿ ಮದುವೆ ಮನೆಗೆ ಬಂದು ಕನ್ನ ಹಾಕಿದ್ದಾನೆ. ಮದುವೆ ಮನೆಗೆ ಬಂದ ಈ ಖತರ್ನಾಕ್ ಕಳ್ಳನಿಗೆ ವರ ಹಾಗೂ ವಧುವಿನ ಕಡೆಯವರು ಭರಪೂರ ಉಡುಗೊರೆ ಕೊಟ್ಟಿದ್ದಾರೆ. ಹೌದು ಮದುವೆ ಮನೆಯೊಳಗೆ ನುಗ್ಗಿದ ಕಳ್ಳನೊಬ್ಬ ಮಹಿಳೆ ಬಳಿ ಚಿನ್ನದ ಸರ ಕದಿಯುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಕಳ್ಳನನ್ನು ಹಿಡಿದ ಮದುವೆ ಮನೆಯವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಘಟನೆ ನಡೆದಿದ್ದು ಬೇರೆಲ್ಲೂ ಅಲ್ಲ

ಮದುವೆ ಮನೆಗೆ ಕನ್ನ ಹಾಕಿದ ಖದೀಮ|ಹಿಗ್ಗಾಮುಗ್ಗಾ ಥಳಿಸಿದ ಮದುವೆ ಮನೆಯವರು Read More »

ಇಂದು ಐಪಿಎಲ್ ಫೈನಲ್/ ಕಪ್ ಗೆಲ್ಲುವವರಾರು?

ಸಮಗ್ರ ನ್ಯೂಸ್: 2024ರ ಇಂಡಿಯನ್ ಪ್ರೀಮಿಯರ್ ಲೀಗ್ ನ ಅಂತಿಮ ಪಂದ್ಯ ಇಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಫೈನಲ್‍ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದೊಂದಿಗೆ ಐಪಿಎಲ್ 17ನೇ ಸೀಸನ್ ಅಂತ್ಯ ಕಾಣಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಈಗಾಗಲೇ ಎರಡು ಬಾರಿ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು, ಈ ಬಾರಿ ಮೂರನೇ ಬಾರಿಗೆ ಆತ್ಮವಿಶ್ವಾಸದಲ್ಲಿದೆ. ಹೈದರಾಬಾದ್ ಫ್ರಾಂಚೈಸಿ ಕೂಡ ಇದುವರೆಗೆ ಎರಡು ಬಾರಿ ಈ ಟ್ರೋಫಿಯನ್ನು ಗೆದ್ದಿದ್ದು,

ಇಂದು ಐಪಿಎಲ್ ಫೈನಲ್/ ಕಪ್ ಗೆಲ್ಲುವವರಾರು? Read More »

ರಾಮಮಂದಿರದಲ್ಲಿ ಇನ್ನು ಮೊಬೈಲ್ ನ ಸದ್ದಿಲ್ಲ/ ಮೊಬೈಲ್ ನಿಷೇಧ ಆದೇಶ ಹೊರಡಿಸಿದ ಟ್ರಸ್ಟ್

ಸಮಗ್ರ ನ್ಯೂಸ್: ಅಯೋಧ್ಯೆಯ ರಾಮಮಂದಿರ ಆವರಣದಲ್ಲಿ ಮೊಬೈಲ್ ಪೋನ್ ಬಳಕೆಯನ್ನು ನಿಷೇಧಿಸಿ ರಾಮಮಂದಿರ ಟ್ರಸ್ಟ್ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಆದೇಶ ಹೊರಡಿಸಲಾಗಿದೆ. ಈಗಾಗಲೇ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಮೊಬೈಲ್ ಪೋನ್ ಗಳನ್ನು ನಿಷೇಧಿಸಲಾಗಿದ್ದು, ಇದೀಗ ವಿಐಪಿಗಳು ಮತ್ತು ವಿವಿಐಪಿಗಳು ಮೊಬೈಲ್ ಪೋನ್ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಐಜಿ ಹಾಗೂ ರಾಮಮಂದಿರ ಟ್ರಸ್ಟ್ ಅಧಿಕಾರಿ ಆಯುಕ್ತರ ಜತೆಗಿನ ಸಭೆಯಲ್ಲಿ ಮೊಬೈಲ್ ಪೋನ್ ಗಳನ್ನು ಸಂಪೂರ್ಣವಾಗಿ ನಿಷೇಧಿಸಲು ನಿರ್ಧರಿಸಲಾಗಿದೆ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟ್ರಸ್ಟಿ ಅನಿಲ್ ಮಿಶ್ರಾ

ರಾಮಮಂದಿರದಲ್ಲಿ ಇನ್ನು ಮೊಬೈಲ್ ನ ಸದ್ದಿಲ್ಲ/ ಮೊಬೈಲ್ ನಿಷೇಧ ಆದೇಶ ಹೊರಡಿಸಿದ ಟ್ರಸ್ಟ್ Read More »

ನನ್ನನ್ನು ಕೆಪಿಸಿಸಿ ಅಧ್ಯಕ್ಷನನ್ನಾಗಿ ಮಾಡಲಿ ನಾನು ಸಚಿವ ಸ್ಥಾನ ಬಿಡೋಕೆ ಸಿದ್ಧ; ಕೆ.ಎನ್.ರಾಜಣ್ಣ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ ಮುಗಿದ ನಂತರ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ತಿಳಿಯುತ್ತಿದ್ದಂತೆ ನನ್ನನ್ನು ಕೆಪಿಸಿಸಿ ಅಧ್ಯಕ್ಷನನ್ನಾಗಿ ಮಾಡಲಿ. ನಾನು ಸಚಿವ ಸ್ಥಾನ ಬಿಡೋಕೆ ಸಿದ್ಧನಿದ್ದೇನೆ ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ, ನಾನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಹೇಳಿದರು. ಅಧ್ಯಕ್ಷರ ಬದಲಾವಣೆ ಸನ್ನಿವೇಶ ಎದುರಾದರೆ ನಾನು ಅಧ್ಯಕ್ಷನಾಗಲು ಸಿದ್ಧನಿದ್ದೇನೆ. ಅಧ್ಯಕ್ಷ ಸ್ಥಾನ ಸಿಕ್ಕರೆ ಮಂತ್ರಿ ಸ್ಥಾನ ಬಿಡಲು ನಾನು ತಯಾರಿದ್ದೇನೆ. ನಾನು

ನನ್ನನ್ನು ಕೆಪಿಸಿಸಿ ಅಧ್ಯಕ್ಷನನ್ನಾಗಿ ಮಾಡಲಿ ನಾನು ಸಚಿವ ಸ್ಥಾನ ಬಿಡೋಕೆ ಸಿದ್ಧ; ಕೆ.ಎನ್.ರಾಜಣ್ಣ Read More »

ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತಕ್ಕೆ 11 ಜನ ಸಾವು

ಸಮಗ್ರ ನ್ಯೂಸ್: ಉತ್ತರ ಪ್ರದೇಶದಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದ ಬಸ್‌ಗೆ ಟ್ರಕ್‌ ಡಿಕ್ಕಿಯಾಗಿ 11 ಜನ ಸ್ಥಳದಲ್ಲೇ ದುರ್ಮರಣ ಹೊಂದಿ 10 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ನಿನ್ನೆ ರಾತ್ರಿ ಶಹಜಹಾನ್‌ಪುರ ಜಿಲ್ಲೆಯ ಖುತಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಉತ್ತರಾಖಂಡಕ್ಕೆ ತೆರಳುತ್ತಿದ್ದ ಬಸ್‌ಗೆ ಟ್ರಕ್ ಡಿಕ್ಕಿಯಾಗಿದೆ. ಇನ್ನು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಭಕ್ತರು ಸೀತಾಪುರ ಜಿಲ್ಲೆಯ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜೇಥಾ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ

ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತಕ್ಕೆ 11 ಜನ ಸಾವು Read More »