Editor

ಮಂಗಳೂರು: ರಸ್ತೆ ಮಧ್ಯೆ ನಮಾಜ್ ಮಾಡಿದ ಪ್ರಕರಣ| ಸುಮೋಟೋ‌ ಕೇಸ್ ದಾಖಲು

ಸಮಗ್ರ ನ್ಯೂಸ್: ಮಂಗಳೂರು ನಗರದ ಕಂಕನಾಡಿಯ ಮಸೀದಿಯೊಂದರ ಮುಂಭಾಗದ ರಸ್ತೆಯಲ್ಲಿ ಮೇ 24ರಂದು ನಮಾಝ್ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸುಮೊಟೊ‌ ಕೇಸ್ ದಾಖಲಿಸಲಾಗಿದೆ. ಈ ವೀಡಿಯೋ ಪರಿಶೀಲಿಸಲಾಗಿದ್ದು, ಸಾರ್ವಜನಿಕರಿಗೆ ಓಡಾಡಲು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡೆತಡೆಯನ್ನುಂಟು ಮಾಡಿದ ವ್ಯಕ್ತಿಗಳ ಮೇಲೆ ಸ್ವಯಂಪ್ರೇರಿತ (ಸುಮೊಟೊ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಮಂಗಳೂರು: ರಸ್ತೆ ಮಧ್ಯೆ ನಮಾಜ್ ಮಾಡಿದ ಪ್ರಕರಣ| ಸುಮೋಟೋ‌ ಕೇಸ್ ದಾಖಲು Read More »

‘ತುಳುನಾಡು ಕರುನಾಡಲ್ಲೇ ಇದೆ, ನಮ್ಮನ್ನು ಹೊರಗಿನವರಂತೆ ಕಾಣಬೇಡಿ’| ಮಂಗಳೂರಿನಲ್ಲಿ ಕಿಚ್ಚ ಸುದೀಪ್ ಹೇಳಿಕೆ

ಸಮಗ್ರ ನ್ಯೂಸ್: ‘ಎಲ್ಲರಿಗೂ ನಮಸ್ಕಾರ. ವೇದಿಕೆ ಮೇಲಿದ್ದವರು ನಮ್ಮ ತುಳುನಾಡಿಗೆ ನಮ್ಮ ತುಳುನಾಡಿಗೆ ಎಂದು ನಮ್ಮನ್ನು ಹೊರಗಿನವರನ್ನಾಗಿ ಮಾಡುತ್ತಿದ್ದಾರೆ. ತುಳುನಾಡು ಕರ್ನಾಕಟದಲ್ಲೇ ಇದೆ’ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ. ಅವರು ಮಂಗಳೂರಿನಲ್ಲಿ ‘ಯಕ್ಷ ಧ್ರುವ ಪಟ್ಲ ಫೌಂಡೇಶನ್​’ ಆಯೋಜಿಸಿದ್ದ ‘ಯಕ್ಷ ಧ್ರುವ ಪಟ್ಲ ಸಂಭ್ರಮ 2024’ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ‘ಕರ್ನಾಟಕ ನಮ್ಮ ಹೃದಯದಲ್ಲಿದೆ. ನಾವು ಅರ್ಧ ಈಕಡೆಯವರು ಎಂದು ನಿರೂಪಕರು ಹೇಳಿದರು. ಪ್ರತಿ ಬಾರಿ ಇಲ್ಲಿಗೆ ಕರೆದಾಗ ಬಹಳ ಖುಷಿ ಆಗುತ್ತದೆ. ಈ ಊರಿನ

‘ತುಳುನಾಡು ಕರುನಾಡಲ್ಲೇ ಇದೆ, ನಮ್ಮನ್ನು ಹೊರಗಿನವರಂತೆ ಕಾಣಬೇಡಿ’| ಮಂಗಳೂರಿನಲ್ಲಿ ಕಿಚ್ಚ ಸುದೀಪ್ ಹೇಳಿಕೆ Read More »

ಕುಕ್ಕೆ ಸುಬ್ರಹ್ಮಣ್ಯ: ರಾಜ್ಯದ ಶ್ರೀಮಂತ ದೇವಸ್ಥಾನದಲ್ಲಿ ಇದೆಂತಾ ಅ(ವ್ಯ)ವಸ್ಥೆ| ಬೀದಿಯಲ್ಲೇ ಮಲಗಿದ ಭಕ್ತಾಧಿಗಳು

ಸಮಗ್ರ ನ್ಯೂಸ್: ಬೇಸಿಗೆ ರಜೆ ಮತ್ತು‌ ‘ಶಕ್ತಿ’ ಯೋಜನೆಯಿಂದಾಗಿ ರಾಜ್ಯದ ಪ್ರಸಿದ್ಧ ಯಾತ್ರಾಕ್ಷೇತ್ರಗಳು ತುಂಬಿ ತುಳುಕುತ್ತಿದ್ದು, ಕರಾವಳಿಯ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಉಡುಪಿ ಸೇರಿದಂತೆ ಪ್ರಸಿದ್ಧ ದೇವಸ್ಥಾನಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ರಾಜ್ಯದ ನಂ. ೧ ಮುಜುರಾಯಿ ದೇವಸ್ಥಾನ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಕಳೆದ ಕೆಲ ದಿನಗಳಿಂದ ಭಕ್ತರ ದಂಡೇ ಕಂಡುಬರುತ್ತಿದ್ದು, ಮೂಲ ಸೌಕರ್ಯ ನೀಡಲು ದೇವಸ್ಥಾನದ ಆಡಳಿತ ಮಂಡಳಿ ಹರಸಾಹಸ ಪಡುತ್ತಿದೆ. ಶಕ್ತಿ ಯೋಜನೆ ಪರಿಣಾಮ ಮಹಿಳಾ ಭಕ್ತರ‌ ದಂಡು ಕುಕ್ಕೆ ಕ್ಷೇತ್ರದತ್ತ ಹರಿದು ಬರುತ್ತಿದ್ದು,

ಕುಕ್ಕೆ ಸುಬ್ರಹ್ಮಣ್ಯ: ರಾಜ್ಯದ ಶ್ರೀಮಂತ ದೇವಸ್ಥಾನದಲ್ಲಿ ಇದೆಂತಾ ಅ(ವ್ಯ)ವಸ್ಥೆ| ಬೀದಿಯಲ್ಲೇ ಮಲಗಿದ ಭಕ್ತಾಧಿಗಳು Read More »

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ವಿರುದ್ದ ಎರಡು ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಕೆ

ಸಮಗ್ರ ನ್ಯೂಸ್: ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿದ್ದನ್ನು ವಿರೋಧಿಸಿ ಪೊಲೀಸರ ವಿರುದ್ಧವೇ ಗುಡುಗಿದ್ದ ಶಾಸಕ ಹರೀಶ್ ಪೂಂಜ ವಿರುದ್ಧ ದಾಖಲಾಗಿದ್ದ ಎರಡೂ ಪ್ರಕರಣಗಳ ತ್ವರಿತ ತನಿಖೆ ನಡೆಸಿದ ಪೊಲೀಸರು ಶಾಸಕರ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಮೇ.28. ರಂದು ದೋಷಾರೋಪಣಾ ಪಟ್ಟಿ (ಚಾರ್ಜ್ ಶೀಟ್ ) ಸಲ್ಲಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಎಸ್.ಪಿ ಅವರಿಂದ ನಿಯೋಜಿಸಲ್ಪಟ್ಟಿದ್ದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದ ಪುತ್ತೂರು ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್ ಜಿ.ಜೆ‌ ಅವರು ಬೆಂಗಳೂರಿನ ನ್ಯಾಯಾಲಯಕ್ಕೆ ಈ ಆರೋಪ ಪಟ್ಟಿ

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ವಿರುದ್ದ ಎರಡು ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಕೆ Read More »

ಮೈಸೂರು: ವಿಜಯನಗರದ ಮಸಾಜ್ ಪಾರ್ಲರ್ ಮೇಲೆ ದಾಳಿ| ಮಡಿಕೇರಿ ಮೂಲದ ಓರ್ವ ಯುವತಿ ಸೇರಿದಂತೆ ನಾಲ್ವರು ಮಹಿಳೆಯರ ರಕ್ಷಣೆ

ಸಮಗ್ರ ನ್ಯೂಸ್: ಮೈಸೂರಿನ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂದೆ ನಡೆಸುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು ಮಡಿಕೇರಿಯ ಓರ್ವ ಯುವತಿ ಸೇರಿದಂತೆ ಐವರನ್ನು ರಕ್ಷಿಸಿದ ಘಟನೆ ನಡೆದಿದೆ. ವಿಜಯನಗರದಲ್ಲಿರುವ ಮಸಾಜ್ ಪಾರ್ಲರ್ ಮೇಲೆ ಪೊಲೀಸರು ದಾಳಿ ನಡೆಸಿದ್ದು ಈ ಪೈಕಿ ಇಬ್ಬರು ಪಶ್ಚಿಮ ಬಂಗಾಳದವರಾಗಿದ್ದು, ಓರ್ವ ಯುವತಿ ಮಡಿಕೇರಿಯ ಮೂಲದವಳು ಇನ್ನುಳಿದ ಇಬ್ಬರು ಸ್ಥಳೀಯರು ಎಂದು ತಿಳಿದು ಬಂದಿದೆ. ಈ ದಾಳಿಯಲ್ಲಿ ಓರ್ವ ದಂದೆ ಕೋರ ಮಹಿಳೆ ಒಬ್ಬ ಪಿಂಪ್

ಮೈಸೂರು: ವಿಜಯನಗರದ ಮಸಾಜ್ ಪಾರ್ಲರ್ ಮೇಲೆ ದಾಳಿ| ಮಡಿಕೇರಿ ಮೂಲದ ಓರ್ವ ಯುವತಿ ಸೇರಿದಂತೆ ನಾಲ್ವರು ಮಹಿಳೆಯರ ರಕ್ಷಣೆ Read More »

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ| ಮತ್ತಿಬ್ಬರು ಆರೋಪಿಗಳು ಎಸ್ಐಟಿ‌ ವಶಕ್ಕೆ

ಸಮಗ್ರ ನ್ಯೂಸ್: ನೂರಾರು ಮಹಿಳೆಯರೊಂದಿಗಿನ ಲೈಂಗಿಕ ಹಗರಣದಲ್ಲಿ ದೇಶ ಬಿಟ್ಟು ತಲೆಮರೆಸಿಕೊಂಡಿರುವ ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಹಂಚಿಕೆ ಪ್ರಕರಣದಲ್ಲಿ ಕೊನೆಗೂ ಇಬ್ಬರು ಪ್ರಮುಖ ಆರೋಪಿಗಳನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್ ಡ್ರೈವ್ ಹಂಚಿಕೆ ಆರೋಪದ ಮೇಲೆ ನವೀನ್ ಗೌಡ ಹಾಗು ಚೇತನ್ ಎಂಬ ಇಬ್ಬರನ್ನಿ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಈ ಇಬ್ಬರೂ ಹೈಕೋರ್ಟ್‌ಗೆ ಬಂದಿದ್ದ ವೇಳೆ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ| ಮತ್ತಿಬ್ಬರು ಆರೋಪಿಗಳು ಎಸ್ಐಟಿ‌ ವಶಕ್ಕೆ Read More »

ಮಿಜೋರಾಂ ನಲ್ಲಿ ಕಲ್ಲು ಕ್ವಾರಿ‌ ಕುಸಿತ| 10 ಜನ ಸಾವು; ಹಲವರು ನಾಪತ್ತೆ

ಸಮಗ್ರ ನ್ಯೂಸ್: ಮಿಜೋರಾಂ ರಾಜ್ಯದ ರಾಜಧಾನಿ ಐಜ್ವಾಲ್ ನಲ್ಲಿ ಮಂಗಳವಾರ ಬೆಳಿಗ್ಗೆ ಕಲ್ಲಿನ ಕ್ವಾರಿ ಕುಸಿದು 10 ಜನ ಸಾವನ್ನಪ್ಪಿದ್ದು ಹಲವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಿರಂತರ ಮಳೆಯ ಪರಿಣಾಮ ಈ ಕ್ವಾರಿ ಕುಸಿದಿದೆ ಎಂದು ಪೊಲೀಸರು ಹೇಳಿದ್ದಾರೆ. ನಗರದ ದಕ್ಷಿಣ ಹೊರವಲಯದಲ್ಲಿರುವ ಮೆಲ್ಥಮ್ ಪ್ರದೇಶದಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. 10 ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು ಇನ್ನೂ ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಿಜೋರಾಂ ನಲ್ಲಿ ಕಲ್ಲು ಕ್ವಾರಿ‌ ಕುಸಿತ| 10 ಜನ ಸಾವು; ಹಲವರು ನಾಪತ್ತೆ Read More »

ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಿ| ಇಲ್ಲದಿದ್ದರೆ ಸಾಮೂಹಿಕ ಚಾಲಿಸಾ ಪಠಣ ಮಾಡ್ಬೇಕಾಗುತ್ತೆ| ಎಚ್ಚರಿಕೆ ನೀಡಿದ ವಿಹಿಂಪ

ಸಮಗ್ರ ನ್ಯೂಸ್: ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಿ ಇಲ್ಲದಿದ್ದರೆ ಸಾಮೂಹಿಕ ಹನುಮಾನ್ ಚಾಲೀಸಾ ಪಠಣದ ಮೂಲಕ ತಡೆಯುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ ನೀಡಿದೆ. ಕೆಲವು ಕಡೆ ರಸ್ತೆ ಮತ್ತು ಸಾರ್ವಜನಿಕ ಜಾಗದಲ್ಲಿ ನಮಾಜ್ ಮಾಡುತ್ತಿರುವ ಘಟನೆಗಳು ನಡೆಯುತ್ತಿರುವುದು ಜಿಲ್ಲೆಯಲ್ಲಿ ಅಶಾಂತಿ ನಿರ್ಮಿಸಲು ಸಂಚು ರೂಪಿಸುತ್ತಿದ್ದಾರೆ. ತಕ್ಷಣ ಜಿಲ್ಲಾಡಳಿತ ಇವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತೇವೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ಮರುಕಳಿಸಿದರೆ ಅದೇ ಸ್ಥಳದಲ್ಲಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ಮಾಡುವುದರ ಮೂಲಕ

ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಿ| ಇಲ್ಲದಿದ್ದರೆ ಸಾಮೂಹಿಕ ಚಾಲಿಸಾ ಪಠಣ ಮಾಡ್ಬೇಕಾಗುತ್ತೆ| ಎಚ್ಚರಿಕೆ ನೀಡಿದ ವಿಹಿಂಪ Read More »

ಕಾಗವಾಡ: ಶಾಸಕ ರಾಜು ಕಾಗೆ ಮುಂದೆ ವಿಡಿಯೋ ಮೂಲಕ ಮಾಧ್ಯಮದವರಿಗೆ ಧಮ್ಕಿ ಹಾಕಿದ ಆಪ್ತ

ಸಮಗ್ರ ನ್ಯೂಸ್: ಕಾಗವಾಡ ಶಾಸಕ ರಾಜು ಕಾಗೆ ಅವರ ಬೆಂಬಲಿಗನೋಬ್ಬ ಮಾಧ್ಯಮವರ ಮೇಲೆ ಧಮ್ಕಿ ಹಾಕಿದ ಘಟನೆಯೊಂದು ಬೆಳಕಿದೆ ಬಂದಿದೆ. ಕಾಗವಾಡ ಮತಕ್ಷೇತ್ರದ ಗ್ರಾಮವೊಂದರಲ್ಲಿ ಶಾಸಕ ರಾಜು ಕಾಗೆ ಅವರು ಮುಂದೆ ನಿಂತು ವಿಡಿಯೋ ಮಾಡಿದ ಬೆಂಬಲಿಗ ಸಂತೋಷ್ ಚೂರಮೋಲೆ ಎಂಬಾತ ಮಾಧ್ಯಮದವರು ರಾಜು ಕಾಗೆ ಅವರನ್ನ ಬೇರೆ ಬೇರೆ ರೀತಿಯಲ್ಲಿ ತೂರಿಸಿದ್ರ ಅವರನ್ನ ಮನೆಗೆ ಹೋಗಿ ಬಡೆಯುತ್ತೇವೆ ಎಂದು ಮಾತನಾಡಿದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗ್ತಾ ಇದೆ. ಶಾಸಕರ ರಾ ಮುಂದೆಯೆ ವಿಡಿಯೋದಲ್ಲಿ ಮಾಧ್ಯಮದವರಿಗೆ

ಕಾಗವಾಡ: ಶಾಸಕ ರಾಜು ಕಾಗೆ ಮುಂದೆ ವಿಡಿಯೋ ಮೂಲಕ ಮಾಧ್ಯಮದವರಿಗೆ ಧಮ್ಕಿ ಹಾಕಿದ ಆಪ್ತ Read More »

ಬೆಳ್ತಂಗಡಿ: ಅಕ್ರಮ ಗಣಿಗಾರಿಕೆ ಪ್ರಕರಣ| ಅವರವರ ಪ್ರಕಾರ ಎಲ್ಲರೂ ಅಮಾಯಕರೇ, ಯಾರನ್ನೂ ಬಿಡೋ‌ ಮಾತೇ ಇಲ್ಲ – ಎಸ್ಪಿ

ಸಮಗ್ರ ನ್ಯೂಸ್: ಶಾಸಕ ಹರೀಶ್‌ ಪೂಂಜ ಅವರ ಬಂಧನ ಹೈಡ್ರಾಮಾದಲ್ಲಿ ಪೊಲೀಸರು ಅನಗತ್ಯವಾಗಿ ಮನೆಗೆ ನುಗ್ಗಿದ್ದಾರೆ ಎಂಬ ಆರೋಪಕ್ಕೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದ.ಕ. ಜಿಲ್ಲಾ ಪೊಲೀಸ್‌ ಅಧೀಕ್ಷಕ ರಿಷ್ಯಂತ್‌ ಸಿ.ಬಿ. ಮಾಧ್ಯಮಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ. ಪೂಂಜ ಅವರ ಮನೆಗೆ ಆರಂಭದಲ್ಲಿ ನೋಟಿಸ್‌ ನೀಡುವ ಸಲುವಾಗಿ ಮೂವರು ತೆರಳಿದ್ದರು. ಆದರೆ ಅಲ್ಲಿ ಅವರು ಠಾಣೆಗೆ ಬಾರದೆ ಜನ ಸೇರಿಸಿ ದ್ದರಿಂದ ಭದ್ರತೆಗಾಗಿ ಹೆಚ್ಚುವರಿ ತಂಡ ಕಳುಹಿಸಬೇಕಾಯಿತು. ಬಳಿಕ ಅಲ್ಲಿನ ರಸ್ತೆ ಕಿರಿದಾಗಿದ್ದರಿಂದ ನೀವು ತೆರಳಿದರೆ

ಬೆಳ್ತಂಗಡಿ: ಅಕ್ರಮ ಗಣಿಗಾರಿಕೆ ಪ್ರಕರಣ| ಅವರವರ ಪ್ರಕಾರ ಎಲ್ಲರೂ ಅಮಾಯಕರೇ, ಯಾರನ್ನೂ ಬಿಡೋ‌ ಮಾತೇ ಇಲ್ಲ – ಎಸ್ಪಿ Read More »