Editor

ಮೈಸೂರಿನ ಪಾರಂಪರಿಕ ಕಟ್ಟಡಗಳ ಜೀರ್ಣೊದ್ಧಾರ/ ಮರುನಿರ್ಮಾಣಕ್ಕೆ ಶಿಫಾರಸು ಮಾಡಿದ ಸರಕಾರ

ಸಮಗ್ರ ನ್ಯೂಸ್: ಮೈಸೂರಿನ 129 ಪಾರಂಪರಿಕ ಕಟ್ಟಡಗಳ ಸಮೀಕ್ಷೆಯನ್ನು ಪುರಾತತ್ವ ಇಲಾಖೆ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪಾರಂಪರಿಕ ಸಮಿತಿ ಪೂರ್ಣಗೊಳಿಸಿದ್ದು, 11 ಪಾರಂಪರಿಕ ಕಟ್ಟಡಗಳನ್ನು ತಕ್ಷಣ ಜೀರ್ಣೋದ್ದಾರ ಮಾಡುವಂತೆ ಶಿಫಾರಸು ಮಾಡಿದೆ. ಆದ್ದರಿಂದ ರಾಜ್ಯ ಸರ್ಕಾರ ಲ್ಯಾನ್ಸ್ ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆ, ಮಹಾರಾಣಿ ಕಾಲೇಜು ಹಾಗೂ ಹಾಸ್ಟೆಲ್ ಕಟ್ಟಡವನ್ನು ನೆಲಸಮಗೊಳಿಸಲು ನಿರ್ಧರಿಸಿದ್ದು, ಹಳೆ ಮಾದರಿಯಲ್ಲಿಯೇ ನಾಲ್ಕು ಹೊಸ ಕಟ್ಟಡಗಳ ನಿರ್ಮಾಣಕ್ಕೆ ವಿಸ್ತ್ರತ ಯೋಜನಾ ವರದಿ ಸಿದ್ಧಪಡಿಸುವಂತೆಯೂ ರಾಜ್ಯ ಸರ್ಕಾರ ಜವಾಬ್ದಾರಿಯುತ ಸಚಿವಾಲಯಕ್ಕೆ ಸೂಚಿಸಿದೆ. […]

ಮೈಸೂರಿನ ಪಾರಂಪರಿಕ ಕಟ್ಟಡಗಳ ಜೀರ್ಣೊದ್ಧಾರ/ ಮರುನಿರ್ಮಾಣಕ್ಕೆ ಶಿಫಾರಸು ಮಾಡಿದ ಸರಕಾರ Read More »

ರೈತರಿಗೆ ಶಾಕ್ ನೀಡಿದ ಬಿತ್ತನೆ ಬೀಜ/ 48% ಏರಿಕೆ ಕಂಡ ಬಿತ್ತನೆ ಬೀಜ ಬೆಲೆ

ಸಮಗ್ರ ನ್ಯೂಸ್: ಬರಬಿಸಿಲಿನಿಂದಾಗಿ ರಾಜ್ಯದಲ್ಲಿ ಹೈರಾಣಾಗಿದ್ದ ರೈತರಿಗೆ ಇದೀಗ ಆರಂಭವಾಗಿರುವ ಮಳೆ ಸಂತಸ ನೀಡಿರುವ ಬೆನ್ನಲ್ಲೇ. ಸರ್ಕಾರದಿಂದ ಅನ್ನದಾತನಿಗೆ ಕಹಿ ಸುದ್ದಿ ಸಿಕ್ಕಿದೆ. ಬರಗಾಲದಿಂದ ಬೀಜೋತ್ಪಾದನೆ ಕುಂಠಿತವಾದ ಹಿನ್ನಲೆಯಲ್ಲಿ ರಾಜ್ಯದಲ್ಲಿನ ವಿವಿಧ ಬೆಳೆಗಳ ಬಿತ್ತನೆ ಬೀಜಗಳಲ್ಲಿನ ದರ ವ್ಯತ್ಯಾಸವು 2023 ಕ್ಕೆ ಹೋಲಿಸಿದರೆ ಈ ಬಾರಿ ಶೇ.48.50 ರಷ್ಟು ಹೆಚ್ಚಾಗಿದೆ. ಸದ್ಯ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಬಿತ್ತನೆ ಕಾರ್ಯ ಮಾಡಲು ಸಜ್ಜಾಗುತ್ತಿದ್ದಾರೆ. ಆದರೆ ರಾಜ್ಯದ ರೈತರಿಗೆ ಬಿತ್ತನೆ ಬೀಜಗಳ ದರ ಹೆಚ್ಚಳ ಶಾಕ್ ನೀಡಿದೆ. ಹೆಸರು

ರೈತರಿಗೆ ಶಾಕ್ ನೀಡಿದ ಬಿತ್ತನೆ ಬೀಜ/ 48% ಏರಿಕೆ ಕಂಡ ಬಿತ್ತನೆ ಬೀಜ ಬೆಲೆ Read More »

ಜೂ.1 ರಿಂದ 3 ರವರೆಗೆ ದ.ಕ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧ

ಸಮಗ್ರ ನ್ಯೂಸ್: ಕರ್ನಾಟಕ ವಿಧಾನ ಪರಿಷತ್ತಿಗೆ ಕರ್ನಾಟಕ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಗಳ ಚುನಾವಣೆ- 2024ಕ್ಕೆ ಸಂಬಂಧಿಸಿದಂತೆ ಜೂನ್ 3 ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಜೂನ್ 01 ರಂದು ಸಂಜೆ 4 ಗಂಟೆಯಿಂದ ಜೂನ್ 3 ರಂದು ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಎಂ.ಪಿ. ಅವರು ಆದೇಶಿಸಿದ್ದಾರೆ. ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತ, ನಿಷ್ಪಕ್ಷಪಾತ

ಜೂ.1 ರಿಂದ 3 ರವರೆಗೆ ದ.ಕ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧ Read More »

ವಿಶ್ವಸಂಸ್ಥೆಯ ಪ್ರಶಸ್ತಿಗೆ ಭಾಜನರಾದ ಭಾರತೀಯ ಮಹಿಳಾ ಶಾಂತಿ ಪಾಲಕಿ ಮೇಜರ್ ರಾಧಿಕಾ ಸೇನಾ

ಸಮಗ್ರ ನ್ಯೂಸ್: ವಿಶ್ವಸಂಸ್ಥೆಯ ಪ್ರತಿಷ್ಠಿತ ಮಿಲಿಟರಿ ಅಡ್ವೋಕೆಟ್ ಪ್ರಶಸ್ತಿಗೆ, ಕಾಂಗೋದ ವಿಶ್ವಸಂಸ್ಥೆ ಮಿಷನ್‍ನಲ್ಲಿ ಸೇವೆ ಸಲ್ಲಿಸಿದ ಭಾರತೀಯ ಮಹಿಳಾ ಶಾಂತಿ ಪಾಲಕಿ ಮೇಜರ್ ರಾಧಿಕಾ ಸೇನಾ ಅವರು ಭಾಜನರಾಗಿದ್ದಾರೆ. ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟಾನಿಯೋ ಗ್ಯುಟೆರ್ರೆಸ್, ರಾಧಿಕಾ ಅವರನ್ನು ನಿಜ ನಾಯಕಿ, ಮಾದರಿ ಎಂದು ಬಣ್ಣಿಸಿದ್ದಾರೆ. ಕಾಂಗೋದಲ್ಲಿ ಯುನೈಟೆಡ್ ನೇಷನ್ಸ್ ಸ್ಟೆಬಿಲೆಷನ್ ಮಿಷನ್‍ನಲ್ಲಿ ಕಾರ್ಯ ನಿರ್ವಹಿಸಿದ್ದ ರಾಧಿಕಾ ಅವರಿಗೆ 2023ನೇ ಸಾಲಿನ ಮಿಲಿಟರಿ ಅಡ್ವೋಕೆಟ್ ಆಫ್ ದಿ ಇಯರ್ ಗೌರವ ದೊರೆತಿದ್ದು, ಮೇ.30ರಂದು ಅಂತರಾಷ್ಟ್ರೀಯ ಶಾಂತಿ ಪಾಲಕರ

ವಿಶ್ವಸಂಸ್ಥೆಯ ಪ್ರಶಸ್ತಿಗೆ ಭಾಜನರಾದ ಭಾರತೀಯ ಮಹಿಳಾ ಶಾಂತಿ ಪಾಲಕಿ ಮೇಜರ್ ರಾಧಿಕಾ ಸೇನಾ Read More »

ಆಂಟಿಯರ ಮೇಲೆ ‌ಹುಡುಗರಿಗೆ ಲವ್ ಆಗೋದ್ಯಾಕೆ ಗೊತ್ತಾ?

ಸಮಗ್ರ ನ್ಯೂಸ್: ತಮಗಿಂತ ಹಿರಿಯ ಮಹಿಳೆಯರನ್ನು ಕೆಲ ಗಂಡಸರು ಇಷ್ಟ ಪಡುತ್ತಾರೆ. ಅನುಭವ, ಹೊಂದಾಣಿಕೆ, ಅರ್ಥ ಮಾಡಿಕೊಂಡು ಹೋಗುವಂತಹ ಸಂಗಾತಿಯನ್ನು ಹುಡುಕುವ ಪುರುಷರಿಗೆ ತಮಗಿಂತ ಹಿರಿಯ ಮಹಿಳೆಯರೇ ಹೆಚ್ಚು ಗಮನ ಸೆಳೆಯುತ್ತಾರೆ. ಅವರ ಮಾತು, ವರ್ತನೆ, ಕಾಳಜಿ ಪುರುಷರಿಗೆ ಹಿತ ಎನಿಸುತ್ತದೆ. ಚಿಕ್ಕ ವಯಸ್ಸಿನ ಪುರುಷರು ಆತ್ಮವಿಶ್ವಾಸ ಇರುವ ಸ್ತ್ರೀಯರನ್ನು ಇಷ್ಟ ಪಡುತ್ತಾರೆ. ಏಕೆಂದರೆ ಆತ್ಮವಿಶ್ವಾಸ ಇರುವ ಹೆಣ್ಣುಮಕ್ಕಳು ಎಲ್ಲದರಲ್ಲೂ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಹಾಗೂ ಬೇರೊಬ್ಬರಿಗಾಗಿ ತಮ್ಮನ್ನು ತಾವು ಬದಲಿಸಿಕೊಳ್ಳುವ ಬಗ್ಗೆ ಅರಿತುಕೊಳ್ಳುತ್ತಾರೆ. ಪ್ರಬುದ್ಧತೆ ಅಂದರೆ

ಆಂಟಿಯರ ಮೇಲೆ ‌ಹುಡುಗರಿಗೆ ಲವ್ ಆಗೋದ್ಯಾಕೆ ಗೊತ್ತಾ? Read More »

ಪ್ರಚಾರ ಮುಗಿಯುತ್ತಿದ್ದಂತೆ ಧ್ಯಾನದ ಮೊರೆಹೋಗಲಿದ್ದಾರೆ ನಮೋ| ಕನ್ಯಾಕುಮಾರಿಯತ್ತ ತೆರಳುತ್ತಾರಾ ಪ್ರಧಾನಿ?

ಸಮಗ್ರ ನ್ಯೂಸ್: ಚುನಾವಣಾ ಪ್ರಚಾರ ಮುಗಿಯುತ್ತಿದ್ದಂತೆ ಮೋದಿ ಅವರು ವಿಶ್ರಾಂತಿಗಾಗಿ ಆಧ್ಯಾತ್ಮಿಕದತ್ತ ಮುಖ ಮಾಡಲಿದ್ದಾರೆ. ಮೇ 30 ರಿಂದ ಜೂನ್​​ 1ನೇ ತಾರೀಖಿನವರೆಗೆ ಮೋದಿ ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಇರಲಿದ್ದಾರೆ. ಪ್ರಸಿದ್ಧ ವಿವೇಕಾನಂದ ಸ್ಮಾರಕದಲ್ಲಿ ಹಗಲು-ರಾತ್ರಿ ಧ್ಯಾನದಲ್ಲಿ ತೊಡಗಲಿದ್ದಾರೆ ಎನ್ನಲಾಗುತ್ತಿದೆ. ಪ್ರಧಾನಮಂತ್ರಿಯವರು ಗುರುವಾರ ಸಂಜೆ ಕನ್ಯಾಕುಮಾರಿಯ ಸಮುದ್ರ ಮಧ್ಯೆದಲ್ಲಿರುವ ತಮಿಳು ಸಂತ ತಿರುವಳ್ಳುವರ್ ಅವರ ಏಕಶಿಲೆಯ ಪ್ರತಿಮೆಯ ಸಮೀಪದಲ್ಲಿರುವ ಸುಂದರವಾದ VRM ಗೆ ಆಗಮಿಸುವ ನಿರೀಕ್ಷೆಯಿದೆ. ಜೂನ್ 1 ರಂದು ದೆಹಲಿಗೆ ತೆರಳಬಹುದು. ಅವರ ಭೇಟಿ ವೇಳೆ

ಪ್ರಚಾರ ಮುಗಿಯುತ್ತಿದ್ದಂತೆ ಧ್ಯಾನದ ಮೊರೆಹೋಗಲಿದ್ದಾರೆ ನಮೋ| ಕನ್ಯಾಕುಮಾರಿಯತ್ತ ತೆರಳುತ್ತಾರಾ ಪ್ರಧಾನಿ? Read More »

ಅಂದು ನಾನು ಉಚ್ಚಾಟಿತ ವಿದ್ಯಾರ್ಥಿನಿ, ಇಂದು ನೀವು ಉಚ್ಚಾಟಿತ ವ್ಯಕ್ತಿ| ರಘುಪತಿ ಭಟ್ಗೆ ಆಲಿಯಾ ಟಾಂಗ್

ಸಮಗ್ರ ನ್ಯೂಸ್: ಹಿಜಾಬ್ ವಿವಾದ ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಗಲಾಟೆಯಲ್ಲಿ ಮುಂದುವರೆದಿತ್ತು. ಅದರಲ್ಲೂ ಉಡುಪಿ ಸರ್ಕಾರಿ ಕಾಲೇಜಿನ ಹಿಜಾಬ್ ವಿವಾದ ಭಾರೀ ಸುದ್ದಿಯಾಗಿತ್ತು. ಈ ಹಿಜಾಬ್ ವಿವಾದದ ಸಂಬಂಧ ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಅವರನ್ನು ಕಾಲೇಜಿನಿಂದ ಅಮಾನತು ಮಾಡಲಾಗಿತ್ತು. ಅದೇ ಸಮಯದಲ್ಲಿ ರಘುಪತಿ ಭಟ್ ಅವರು ಶಾಸಕರಾಗಿದ್ದು, ಕಾಲೇಜಿನ ಅಧ್ಯಕ್ಷರಾಗಿದ್ದರು ಸಹ ಆಗಿದ್ದರು. ಇದೀಗ ಕಾಲೇಜಿನಿಂದ ಉಚ್ಚಾಟನೆಯಾಗಿದ್ದ ವಿದ್ಯಾರ್ಥಿನಿ ಅಲಿಯಾ ಅಸ್ಸಾದಿ, ಸದ್ಯ ಮಾಜಿ ಶಾಸಕ ರಘುಪತಿ ಭಟ್‌ ಪಕ್ಷದಿಂದ ಉಚ್ಚಾಟನೆಯಾಗಿರುವ ಬಗ್ಗೆ ಟ್ವೀಟ್‌ ಮಾಡಿ

ಅಂದು ನಾನು ಉಚ್ಚಾಟಿತ ವಿದ್ಯಾರ್ಥಿನಿ, ಇಂದು ನೀವು ಉಚ್ಚಾಟಿತ ವ್ಯಕ್ತಿ| ರಘುಪತಿ ಭಟ್ಗೆ ಆಲಿಯಾ ಟಾಂಗ್ Read More »

ಭಾರತಕ್ಕೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ..!

ಸಮಗ್ರ ನ್ಯೂಸ್: ಪೆನ್ ಡ್ರೈವ್ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಸೋಮವಾರ ದಿಡೀರ್ ವಿಡಿಯೋ ಮುಖಾಂತರ ಪ್ರತ್ಯಕ್ಷರಾಗಿದ್ದಾರೆ. ಆಗ ಮೇ 31ಕ್ಕೆ ಭಾರತಕ್ಕೆ ಬರುವುದಾಗಿ ಮಾಹಿತಿ ನೀಡಿದ್ದರು, ಈಗ ಜರ್ಮನಿಯಿಂದ ವಾಪಸ್ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ಲುಫ್ತಾನ್ಸಾ ಸಂಸ್ಥೆಯ ವಿಮಾನದಲ್ಲಿ ಏರ್ ಟಿಕೆಟ್ ಬುಕ್ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ತನಿಖೆ ನಡೆಸುವ ಎಸ್ಐಟಿ ಪ್ರಜ್ವಲ್ ರೇವಣ್ಣಗಾಗಿ ಕಾಯುತ್ತಿದ್ದು ಭಾರತಕ್ಕೆ ಬಂದ ತಕ್ಷಣ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಪ್ರಜ್ವಲ್ ರೇವಣ್ಣ ಜರ್ಮನಿಯ

ಭಾರತಕ್ಕೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ..! Read More »

ತುಮಕೂರು: ಪತ್ನಿಯನ್ನು ಕೊಲೆಗೈದು ಚರ್ಮ ಸುಲಿದ ಕ್ರೂರಿ ಪತಿ…!

ಸಮಗ್ರ ನ್ಯೂಸ್: ದೆಹಲಿಯಲ್ಲಿ ಶ್ರಧ್ಧಾ ವಾಕರ್ ಭೀಕರ ಕೊಲೆ ಪ್ರಕರಣ ಇಡೀ ದೇಶದಾದ್ಯಂತ ಭಾರೀ ಸದ್ದು ಮಾಡಿತ್ತು. ಆದರೆ ಇದೇ ತರಹದ ಘಟನೆ ತುಮಕೂರಿನ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪಟ್ಟಣದ ಹೊಸಪೇಟೆಯಲ್ಲಿ ನಡೆದಿದೆ. ಇಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಭೀಕರವಾಗಿ ಕೊಲೆ ಮಾಡಿ ಪತ್ನಿಯ ಕತ್ತು ಹಾಗೂ ದೇಹದ ಇತರ ಅಂಗಾಂಗಗಳನ್ನು ಕತ್ತರಿಸಿ ವಿಕೃತಿ ಮೆರೆದಿದ್ದಾನೆ. ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಪುಷ್ಪ (32), ಮೃತ ದುರ್ದೈವಿ. ಹುಲಿಯೂರುದುರ್ಗ ಬಳಿಯ ಸುಗ್ಗನಹಳ್ಳಿ ನಿವಾಸಿಯಾಗಿದ್ದ ಶಿವರಾಮ್ ಎಂಬಾತನೇ ಕೃತ್ಯ

ತುಮಕೂರು: ಪತ್ನಿಯನ್ನು ಕೊಲೆಗೈದು ಚರ್ಮ ಸುಲಿದ ಕ್ರೂರಿ ಪತಿ…! Read More »

ಗುಂಡು ಹಾರಿಸಲು ಸಿದ್ಧವಾದ ನಾಯಿ/ ಚೀನಾ ಸೇನೆ ಸಿದ್ಧಪಡಿಸಿದೆ ರೋಬೋಟ್ ನಾಯಿ

ಸಮಗ್ರ ನ್ಯೂಸ್: ಶತ್ರುಗಳ ಮೇಲೆ ದಾಳಿಗೆ ಅತ್ಯಾಧುನಿಕ ಕ್ಷಿಪಣಿ, ಯುದ್ಧ ವಿಮಾನ, ಸಬ್‍ಮರೀನ್ ಸೇರಿದಂತೆ ಅತ್ಯಾಧುನಿಕ ಯುದ್ಧ ಪರಿಕರಗಳನ್ನು ಜಗತ್ತಿನ ಎಲ್ಲಾ ದೇಶಗಳು ಅಭಿವೃದ್ಧಿಪಡಿಸುತ್ತಿರುವ ಹೊತ್ತಿನಲ್ಲಿ, ತನ್ನ ಬೇಡಿಕೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ಚೀನಾ ಸೇನೆ ಸ್ವಯಂ ಗುಂಡು ಹಾರಿಸುವ ಸಾಮಥ್ರ್ಯ ಹೊಂದಿರುವ ಅತ್ಯಾಧುನಿಕ ರೋಬೋಟ್ ನಾಯಿಗಳನ್ನು ಅಭಿವೃದ್ಧಿಪಡಿಸಿದೆ. ಕಳೆದ ಕೆಲ ದಿನಗಳಿಂದ ತೈವಾನ್ ಸುತ್ತಮುತ್ತಲೂ ಭಾರೀ ಪ್ರಮಾಣದ ನೌಕಾ ಕಸರತ್ತು ನಡೆಸುತ್ತಿರುವ ಚೀನಾ ಸೇನೆ, ಈ ವೇಳೆ ತನ್ನ ರೋಬೋಟ್ ನಾಯಿಯನ್ನು ಬಳಸಿ ಪ್ರದರ್ಶನ ನೀಡಿದೆ. ಈ

ಗುಂಡು ಹಾರಿಸಲು ಸಿದ್ಧವಾದ ನಾಯಿ/ ಚೀನಾ ಸೇನೆ ಸಿದ್ಧಪಡಿಸಿದೆ ರೋಬೋಟ್ ನಾಯಿ Read More »