Editor

ಲೋಕಸಭಾ ಚುನಾವಣೆ| ಇಂಡಿಯಾ ಒಕ್ಕೂಟದಿಂದ ನಿತೀಶ್, ನಾಯ್ಡುಗೆ ಬಿಗ್ ಆಫರ್| ಕಿಂಗ್ ಮೇಕರ್ ಆಗಲಿದ್ದಾರೆಯೇ ಟಿಡಿಪಿ, ಜೆಡಿಯು?

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರಿಯುತ್ತಿರುವ ನಡುವೆ ಪ್ರತಿ ಕ್ಷಣವೂ ಕುತೂಹಲ ಮೂಡಿಸುತ್ತಿದೆ. ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯದೇ ಇರುವ ಸಾಧ್ಯತೆ ಅಧಿಕವಾಗಿರುವ ಹಿನ್ನೆಲೆಯಲ್ಲಿ, ಬಿಜೆಪಿಯ ಮಿತ್ರ ಪಕ್ಷಗಳ ಪೈಕಿ ಯಾರು ಕಿಂಗ್‌ಮೇಕರ್‌ ಆಗಲಿದ್ದಾರೆಂಬ ಕುತೂಹಲ ಮೂಡಿದೆ. ಪ್ರಸ್ತುತ 16 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಟಿಡಿಪಿ ಹಾಗೂ 15ರಲ್ಲಿ ಮುನ್ನಡೆ ಸಾಧಿಸಿರುವ ಜೆಡಿಯು ಗೆದ್ದರೆ ಎನ್‌ಡಿಎಗೆ 31 ಅಧಿಕ ಸ್ಥಾನಗಳು ಲಭಿಸುವಂತಾಗುತ್ತದೆ. ಬಿಜೆಪಿ ಬಹುಮತ ಪಡೆಯದೇ ಇದ್ದಲ್ಲಿ ಈ ಎರಡೂ ಪಕ್ಷಗಳ ಬೆಂಬಲ […]

ಲೋಕಸಭಾ ಚುನಾವಣೆ| ಇಂಡಿಯಾ ಒಕ್ಕೂಟದಿಂದ ನಿತೀಶ್, ನಾಯ್ಡುಗೆ ಬಿಗ್ ಆಫರ್| ಕಿಂಗ್ ಮೇಕರ್ ಆಗಲಿದ್ದಾರೆಯೇ ಟಿಡಿಪಿ, ಜೆಡಿಯು? Read More »

ಚಿಕ್ಕೋಡಿ: ಪಾಕಿಸ್ತಾನ ಪರ ಘೋಷಣೆ!? | ಮೋದಿಗೆ ನಿಂದನೆಗೈದು ಅವಮಾನ!!

ಸಮಗ್ರ ನ್ಯೂಸ್: ಲೋಕ ಸಭಾ ಚುನಾವಣೆ ಫಲಿತಾಂಶ ಬರುವ ಮುನ್ನವೇ ಚಿಕ್ಕೋಡಿಯಲ್ಲಿ ಕೈ ಕಾರ್ಯಕರ್ತರು ನಾಲಗೆ ಹರಿಬಿಟ್ಟಿದ್ದಾರೆ. ಚಿಕ್ಕೋಡಿ ಲೋಕಸಭಾ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಮಗಳು ಪ್ರಿಯಾಂಕಾ ಜಾರಕಿಹೊಳಿ ಮುನ್ನಡೆ ಸಾಧಿಸಿದ್ದು, ಈ ವೇಳೆ ಅಭಿಮಾನಿಯೊಬ್ಬ ಮೋದಿ ಹಮಾರಾ ಕು# ಹೈ ಎಂದು ಕೂಗಿದ್ದಾನೆ. ಅಷ್ಟೇ ಅಲ್ಲದೆ ಪಾಕಿಸ್ತಾನ್‌ ಪರ ಘೋಷಣೆಗಳೂ ಕೇಳಿಬಂದಿದೆ ಎನ್ನಲಾಗುತ್ತಿದೆ. ಪ್ರಧಾನಿ ಮೋದಿಯವರಿಗೆ ಅಶ್ಲೀಲ ಪದಗಳಿಂದ ನಿಂದಿಸಲಾಗಿದ್ದು ಈ ವಿಡಿಯೋ ವೈರಲ್‌ ಆಗಿದೆ.

ಚಿಕ್ಕೋಡಿ: ಪಾಕಿಸ್ತಾನ ಪರ ಘೋಷಣೆ!? | ಮೋದಿಗೆ ನಿಂದನೆಗೈದು ಅವಮಾನ!! Read More »

ತಮಿಳುನಾಡಿನಲ್ಲಿ ಡಿಎಂಕೆ ಕಮಾಲ್, ಅಣ್ಣಾ ಮಲೈಗೆ ಹೀನಾಯ ಸೋಲು| ಕೇರಳದಲ್ಲಿ ಖಾತೆ ತೆರೆದ‌‌ ಬಿಜೆಪಿ

ಸಮಗ್ರ ನ್ಯೂಸ್: ತಮಿಳುನಾಡಿನಲ್ಲಿ ಮತ ಎಣಿಕೆ ಆರಂಭವಾದ ಮೊದಲ ಮೂರು ಗಂಟೆಗಳ ಬಳಿಕ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಇಂಡಿ ಮೈತ್ರಿಕೂಟವು 39 ಸ್ಥಾನಗಳಲ್ಲಿ 32 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಕ್ಲೀನ್ ಸ್ವೀಪ್ ಸಾಧಿಸುವತ್ತ ಸಾಗುತ್ತಿದೆ. ರಾಜ್ಯ ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಅವರು ಕೊಯಮತ್ತೂರಿನಲ್ಲಿ ಡಿಎಂಕೆಯ ಗಣಪತಿ ಪಿ ಮತ್ತು ಎಐಎಡಿಎಂಕೆಯ ಸಿಂಗೈ ವಿರುದ್ಧ ಸ್ಪರ್ಧಿಸಿದರೆ, ಹಾಲಿ ಡಿಎಂಕೆ ಸಂಸದೆ ಕನಿಮೋಳಿ ತೂತುಕುಡಿಯಲ್ಲಿ ಎಐಎಡಿಎಂಕೆಯ ಆರ್.ಶಿವಸಾಮಿ ವೇಲುಮಣಿ ಅವರನ್ನು ಎದುರಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಮತ್ತು ತೆಲಂಗಾಣದ

ತಮಿಳುನಾಡಿನಲ್ಲಿ ಡಿಎಂಕೆ ಕಮಾಲ್, ಅಣ್ಣಾ ಮಲೈಗೆ ಹೀನಾಯ ಸೋಲು| ಕೇರಳದಲ್ಲಿ ಖಾತೆ ತೆರೆದ‌‌ ಬಿಜೆಪಿ Read More »

ದ.ಕನ್ನಡದಲ್ಲಿ ಬಿಜೆಪಿಗೆ ಭರ್ಜರಿ ಜಯ| ಕ್ಯಾಪ್ಟನ್ ಬ್ರಿಜೇಶ್ ಚೌಟಾ ಇನ್ಮುಂದೆ ಮಂಗಳೂರು ಎಂಪಿ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರ ಅಪಾರ ಅಭಿಮಾನಿಗಳನ್ನು ಹೊಂದಿರುವ ಕರ್ನಾಟಕದ ಬಲಿಷ್ಠ ಲೋಕ ಸಭಾ ಕ್ಷೇತ್ರವಾಗಿರುವ ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ಬ್ರಿಜೇಶ್​ ಚೌಟ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಪದ್ಮರಾಜ್​ ವಿರುದ್ಧ ಭರ್ಜರಿ ಮತಗಳ ಅಂತರದ ವಿಜಯ ಸಾಧಿಸಿದ್ದಾರೆ. ಈ ಮೂಲಕ ಕೇಸರಿ ಪಕ್ಷ ಪಾರಮ್ಯ ಇಲ್ಲಿ ಮುಂದುವರಿದಿದೆ. ಆಡಳಿತ ವಿರೋಧಿ ಅಲೆಯನ್ನು ಮೀರುವ ಬಿಜೆಪಿಯ ತಂತ್ರ ಫಲಿಸಿದ್ದು, ಹೊಸ ಮುಖವೊಂದು ಪಾರ್ಲಿಮೆಂಟ್​ಗೆ ಏರಿದೆ. ಬಿಜೆಪಿ, ವಿಶೇಷವಾಗಿ ನರೇಂದ್ರ ಮೋದಿ ಕರ್ನಾಟಕದ

ದ.ಕನ್ನಡದಲ್ಲಿ ಬಿಜೆಪಿಗೆ ಭರ್ಜರಿ ಜಯ| ಕ್ಯಾಪ್ಟನ್ ಬ್ರಿಜೇಶ್ ಚೌಟಾ ಇನ್ಮುಂದೆ ಮಂಗಳೂರು ಎಂಪಿ Read More »

ಉಡುಪಿ- ಚಿಕ್ಕಮಗಳೂರು ಕ್ಷೇತ್ರ| ಬಿಜೆಪಿ‌ ಕೈಹಿಡಿದ ಮತದಾರ| ಕೋಟಾಗೆ ಭರ್ಜರಿ‌ ಗೆಲುವು

ಸಮಗ್ರ ನ್ಯೂಸ್: ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಅವರು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ವಿರುದ್ಧ ಗೆಲುವು ಸಾಧಿಸಿದ್ದು, ಮತ ಎಣಿಕೆ ಕೇಂದ್ರ ಸಮೀಪ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಕೋಟ ಶ್ರೀನಿವಾಸ್ ಪೂಜಾರಿ ಅವರು ಗೆಲುವಿನ ನಗೆ ಬೀರಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಅವರನ್ನು ಮೇಲಕ್ಕೆತ್ತಿ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಈ ಸಂದರ್ಭ ಶಾಸಕರಾದ ಯಶ್ ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ,

ಉಡುಪಿ- ಚಿಕ್ಕಮಗಳೂರು ಕ್ಷೇತ್ರ| ಬಿಜೆಪಿ‌ ಕೈಹಿಡಿದ ಮತದಾರ| ಕೋಟಾಗೆ ಭರ್ಜರಿ‌ ಗೆಲುವು Read More »

ಜೆಡಿಎಸ್ ಗೆ ಮಂಡ್ಯದಲ್ಲಿ ಸಿಹಿ, ಹಾಸನದಲ್ಲಿ ಕಹಿ| ಕುಮಾರಸ್ವಾಮಿ ಗೆಲುವು; ಪ್ರಜ್ವಲ್ ಗೆ ಹೀನಾಯ ಸೋಲು

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಲೋಕಸಭಾ ಚುನಾವಣಾ ಫಲಿತಾಂಶದ ಬಿಸಿ ಜೋರಾಗಿದ್ದು, ಮಂಡ್ಯದಲ್ಲಿ ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹಾಸನ ಅಶ್ಲೀಲ ವಿಡಿಯೋ ಕೇಸ್​ನಿಂದ ಬೇಸತ್ತಿದ್ದ ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಮೂರು ದಿನಗಳ ಕಾಲ ಪ್ರವಾಸದಲ್ಲಿ ಇದ್ದರು. ಬಳಿಕ ಒಂದಷ್ಟು ದಿನ ಯಾರ ಕಣ್ಣಿಗೂ ಕಾಣಿಸಿಕೊಂಡಿರಲಿಲ್ಲ. ಇಂದು ತನ್ನ ಗೆಲುವಿನ ವಿಚಾರ ಗೊತ್ತಾಗುತ್ತಿದ್ದಂತೆಯೇ ಆದಿಚುಂಚನಗಿರಿ ಮಹಾ ಸಂಸ್ಥಾನದ ವಿಜಯನಗರ ಶಾಖಾ ಮಠಕ್ಕೆ ಭೇಟಿ ನೀಡಿ ಡಾ. ಶ್ರೀ

ಜೆಡಿಎಸ್ ಗೆ ಮಂಡ್ಯದಲ್ಲಿ ಸಿಹಿ, ಹಾಸನದಲ್ಲಿ ಕಹಿ| ಕುಮಾರಸ್ವಾಮಿ ಗೆಲುವು; ಪ್ರಜ್ವಲ್ ಗೆ ಹೀನಾಯ ಸೋಲು Read More »

ತೆಲಂಗಾಣ: ಓವೈಸಿ ವಿರುದ್ದ ಹಿಂದೂ ಪೈರ್ ಬ್ರ್ಯಾಂಡ್ ಮಾಧವಿ ಲತಾ ಭಾರೀ ಮುನ್ನಡೆ

ಸಮಗ್ರ ನ್ಯೂಸ್: ತೆಲಂಗಾಣದ ಹೈದರಾಬಾದ್‌ ಲೋಕಸಭೆ ಕ್ಷೇತ್ರದ ಚುನಾವಣೆ ರಣಕಣವು ಈ ಬಾರಿ ಭಾರಿ ಕುತೂಹಲದಿಂದ ಕೂಡಿದೆ. ಎಐಎಂಐಎಂ ಪಕ್ಷದ ಅಸಾದುದ್ದೀನ್‌ ಓವೈಸಿ ವಿರುದ್ಧ ಬಿಜೆಪಿಯಿಂದ ಹಿಂದು ಫೈರ್‌ ಬ್ರ್ಯಾಂಡ್‌ ಮಾಧವಿ ಲತಾ ಕಣಕ್ಕಿಳಿದಿದ್ದು, ಆರಂಭಿಕ ಮುನ್ನಡೆ ಸಾಧಿಸಿದ್ದಾರೆ. ಪ್ರಖರ ಹಿಂದುತ್ವವಾದಿಯೂ ಆಗಿರುವ ಮಾಧವಿ ಲತಾ ಅವರು ಈಗ ಮುಸ್ಲಿಮರ ಮತಗಳನ್ನೂ ಸೆಳೆಯಲು ಪ್ರಯತ್ನಿಸಿದ್ದರು. ಇದಕ್ಕಾಗಿ ಅವರು ಹೈದರಾಬಾದ್‌ನಲ್ಲಿರುವ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ ಅವರು, ಮುಸ್ಲಿಂ ಗಲ್ಲಿಗಲ್ಲಿಗಳಲ್ಲಿ ಪ್ರಚಾರ ಕೈಗೊಂಡಿದ್ದರು. ಸದ್ಯ, ಒಂದು ಲಕ್ಷಕ್ಕೂ ಅಧಿಕ ಮತಗಳನ್ನು

ತೆಲಂಗಾಣ: ಓವೈಸಿ ವಿರುದ್ದ ಹಿಂದೂ ಪೈರ್ ಬ್ರ್ಯಾಂಡ್ ಮಾಧವಿ ಲತಾ ಭಾರೀ ಮುನ್ನಡೆ Read More »

ರಾಮನಾಡಿನಲ್ಲಿ ಬಿಜೆಪಿಗೆ ಹಿನ್ನಡೆ| ಅಯೋಧ್ಯೆಯಲ್ಲಿ ಮುನ್ನಡೆ ಸಾಧಿಸಿದ ಎಸ್ಪಿ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ 2024ರ ಮತ ಎಣಿಕೆ ನಡೆಯುತ್ತಿದ್ದು, ಎನ್‌ಡಿಎ ಆರಂಭಿಕ ಹಂತದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಉತ್ತರ ಪ್ರದೇಶವನ್ನು ಕ್ಲೀನ್ ಸ್ವೀಪ್ ಮಾಡುವ ಕನಸು ಕಂಡಿದ್ದ ಬಿಜೆಪಿಗೆ ಆಘಾತ ಎದುರಾಗಿದೆ. ಆರಂಭಿಕ ಹಂತದಲ್ಲಿ ಕೇವಲ 35 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಮುನ್ನಡೆ ಪಡೆದುಕೊಂಡಿದ್ದು, 35 ಕ್ಷೇತ್ರಗಳಲ್ಲಿ ಸಮಜಾವಾದಿ ಪಕ್ಷ ಮುನ್ನಡೆ ಸಾಧಿಸಿದೆ. ಅಯೋಧ್ಯೆ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುವ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ

ರಾಮನಾಡಿನಲ್ಲಿ ಬಿಜೆಪಿಗೆ ಹಿನ್ನಡೆ| ಅಯೋಧ್ಯೆಯಲ್ಲಿ ಮುನ್ನಡೆ ಸಾಧಿಸಿದ ಎಸ್ಪಿ Read More »

ಎಕ್ಸಿಟ್ ಪೋಲ್ ಸುಳ್ಳು ಮಾಡಿದ ಇಂಡಿಯಾ ಒಕ್ಕೂಟ| 225 + ಸ್ಥಾನಗಳಲ್ಲಿ ಲೀಡ್

ಸಮಗ್ರ ನ್ಯೂಸ್: 543 ಲೋಕಸಭಾ ಸ್ಥಾನಗಳ ಮತ ಎಣಿಕೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಆರಂಭಿಕ ಹಂತಗಳಲ್ಲಿ 272 ರ ಮೆಜಾರಿಟಿಯನ್ನು ದಾಟಿದೆ. ಆದರೆ ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್‌ಗಳು ನೀಡಿದ್ದ ಹಲವು ಸಮೀಕ್ಷೆಗಳನ್ನು ಇಂಡಿಯಾ ಒಕ್ಕೂಟ ಸುಳ್ಳು ಮಾಡಿಸಿದೆ. ಬಹುತೇಕ ಎಲ್ಲಾ ಎಕ್ಸಿಟ್ ಪೋಲ್‌ಗಳು ಕೂಡ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ 150 ರಿಂದ 180 ಸ್ಥಾನಗಳನ್ನು ದಾಟುವುದಿಲ್ಲ ಎಂದು ಫಲಿತಾಂಶ ನೀಡಿದ್ದವು. ಆದರೆ, ಈ ಫಲಿತಾಂಶವನ್ನು ಇಂಡಿಯಾ ಒಕ್ಕೂಟ ಸುಳ್ಳು ಮಾಡಿದ್ದು, ಬೆಳಗ್ಗೆ

ಎಕ್ಸಿಟ್ ಪೋಲ್ ಸುಳ್ಳು ಮಾಡಿದ ಇಂಡಿಯಾ ಒಕ್ಕೂಟ| 225 + ಸ್ಥಾನಗಳಲ್ಲಿ ಲೀಡ್ Read More »

ಅಧ್ಯಕ್ಷೀಯ ಚುನಾವಣೆಯಲ್ಲಿ ಕೌಡಿಯಾ ಶೇನ್‌ಬಾಮ್ ಗೆಲುವು/ ಮೆಕ್ಸಿಕೋ ದೇಶದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ದಾಖಲೆ

ಮೆಕ್ಸಿಕೋ ದೇಶದ 200 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆಮೆಕ್ಸಿಕೋ ಅಧ್ಯಕ್ಷೀಯ ಚುನಾವಣೆಯಲ್ಲಿ ಕೌಡಿಯಾ ಶೇನ್‌ಬಾಮ್ ಭಾರೀ ಅಂತರದಿಂದ ಜಯಗಳಿಸಿ ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿದ್ದು, ಮೊದಲ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶೇನ್‌ಬಾಮ್ 58.3 ರಿಂದ 60.7 ಪ್ರತಿಶತದಷ್ಟು ಮತಗಳನ್ನು ಪಡೆದು ವಿಜಯವನ್ನು ಸಾಧಿಸಿದ್ದಾರೆ ಎಂದು ಮೆಕ್ಸಿಕೋದ ಚುನಾವಣಾ ಸಂಸ್ಥೆಯು ಘೋಷಿಸಿತು. ನಾನು ಮೆಕ್ಸಿಕೋದ ಮೊದಲ ಮಹಿಳಾ ಅಧ್ಯಕ್ಷೆಯಾಗುತ್ತೇನೆ. ಮೆಕ್ಸಿಕೋ ಶಾಂತಿಯುತ ಚುನಾವಣೆಗಳೊಂದಿಗೆ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಎಂದು ನಾವು ತೋರಿಸಿದ್ದೇವೆ. ಇತರ ಸಂದರ್ಭಗಳಲ್ಲಿ ಹೇಳಿದಂತೆ, ನಾನು ಒಬ್ಬಂಟಿಯಾಗಿ

ಅಧ್ಯಕ್ಷೀಯ ಚುನಾವಣೆಯಲ್ಲಿ ಕೌಡಿಯಾ ಶೇನ್‌ಬಾಮ್ ಗೆಲುವು/ ಮೆಕ್ಸಿಕೋ ದೇಶದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ದಾಖಲೆ Read More »