Editor

ಟೋಲ್ ಸಿಬ್ಬಂದಿ ಹಣ ಕೇಳಿದ್ದಕ್ಕೆ ಟೋಲ್ ಬೂತನ್ನೇ ನೆಲಸಮ ಮಾಡಿದ ಜೆಸಿಬಿ ಚಾಲಕ

ಸಮಗ್ರ ನ್ಯೂಸ್: ದೆಹಲಿ-ಲಕ್ನೋ ಹೆದ್ದಾರಿ ಎನ್ಎಚ್-9 ಪಿಲ್ಖುವಾ ಪೊಲೀಸ್ ಠಾಣಾ ವ್ಯಾಪ್ತಿಯ ಛಿಜರಾಸಿ ಟೋಲ್ ಪ್ಲಾಜಾ ಹಾದು ಹೋಗುತ್ತಿದ್ದ ಜೆಸಿಬಿ ಡ್ರೈವರ್ ಬಳಿ ಹಣ ಕೇಳಿದ್ದು ಆತ ಜಗಳಕ್ಕಿಳಿದಿದ್ದಾನೆ. ಬಳಿಕ ಬುಲ್ಡೋಸರ್ನಿಂದ ಟೋಲ್ ಪ್ಲಾಜಾವನ್ನು ನೆಲಸಮಗೊಳಿಸಿದ್ದಾನೆ. ಟೋಲ್ ಸಿಬ್ಬಂದಿ ಎಲ್ಲವನ್ನೂ ವಿಡಿಯೋ ಮಾಡಿದ್ದಾರೆ, ಆತ ಟೋಲ್ ಕೆಡಗುವ ಸಂಪೂರ್ಣ ವಿಡಿಯೋ ವೈರಲ್ ಆಗಿದೆ. ಜೆಸಿಬಿ ಚಾಲಕ ಟೋಲ್ ಬೂತ್ ಮೂಲಕ ಹಾದುಹೋಗುತ್ತಿದ್ದ, ಹಾಗಾಗಿ ಟೋಲ್ ಸಿಬ್ಬಂದಿ ಹಣ ಕೇಳಿದ್ದಾರೆ ಅದಕ್ಕೆ ಚಾಲಕ ಆವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು […]

ಟೋಲ್ ಸಿಬ್ಬಂದಿ ಹಣ ಕೇಳಿದ್ದಕ್ಕೆ ಟೋಲ್ ಬೂತನ್ನೇ ನೆಲಸಮ ಮಾಡಿದ ಜೆಸಿಬಿ ಚಾಲಕ Read More »

ಪುತ್ತೂರು: ಹಾಡುಹಗಲೇ ವ್ಯಕ್ತಿ ಮೇಲೆ ಚೂರಿ ಇರಿತ| ಗಾಯಾಳು ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಹಾಡುಹಗಲೇ ವ್ಯಕ್ತಿಯೊಬ್ಬರಿಗೆ ಚೂರಿ ಇರಿದ ಘಟನೆ ಜೂ.13ರಂದು ಪುತ್ತೂರು ಕೋರ್ಟ್ ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ ಗುಣಕರ ಶೆಟ್ಟಿ ಮತ್ತು ಸದಾಶಿವ ಪೈ ಎಂಬ ಇಬ್ಬರ ನಡುವೆ ಗಲಾಟೆ ನಡೆದಿದ್ದು, ನಗರದ ದರ್ಬೆ ನಿವಾಸಿ ಸದಾಶಿವ ಪೈ ಚೂರಿ ಇರಿತಕ್ಕೊಳಗಾಗಿದ್ದಾರೆ. ಚೂರಿ ಇರಿತದಿಂದ ಗಾಯಗೊಂಡ ಸದಾಶಿವ ಅವರನ್ನು ಪುತ್ತೂರು‌ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನ ಪಾರ್ಕಿಂಗ್ ವಿಚಾರದಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಪುತ್ತೂರು: ಹಾಡುಹಗಲೇ ವ್ಯಕ್ತಿ ಮೇಲೆ ಚೂರಿ ಇರಿತ| ಗಾಯಾಳು ಆಸ್ಪತ್ರೆಗೆ ದಾಖಲು Read More »

ನಟ ದುನಿಯಾ ವಿಜಯ್ ವಿಚ್ಛೇದನ ಅರ್ಜಿ ವಜಾ

ಸಮಗ್ರ ನ್ಯೂಸ್: ನಟ ದುನಿಯಾ ವಿಜಯ್ ಅವರು ವಿಚ್ಛೇಧನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಇಂತಹ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯವು ವಜಾಗೊಳಿಸಿದೆ. ನಟ ದುನಿಯಾ ವಿಜಯ್ ಕ್ರೌರ್ಯದ ಆಧಾರದಲ್ಲಿ ಪತ್ನಿ ನಾಗರತ್ನರಿಂದ ವಿಚ್ಛೇಧನ ನೀಡುವಂತೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೇ ಆರೋಪ ಸಾಭೀತು ಪಡಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ನಟ ದುನಿಯಾ ವಿಜಯ್ ಸಲ್ಲಿಸಿದ್ದಂತ ವಿಚ್ಛೇಧನ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಬೆಂಗಳೂರಿನ ಶಾಂತಿನಗರದಲ್ಲಿರುವಂತ ಕೌಟುಂಬಿಕ ನ್ಯಾಯಾಲಯಕ್ಕೆ ನಟ ದುನಿಯಾ ವಿಜಯ್ ವಿಚ್ಛೇಧನ ಕೋರಿ

ನಟ ದುನಿಯಾ ವಿಜಯ್ ವಿಚ್ಛೇದನ ಅರ್ಜಿ ವಜಾ Read More »

ಜೂ.24ರಿಂದ ಜು.3ರ ವರೆಗೆ ಸಂಸತ್ ಮೊದಲ ಅಧಿವೇಶನ/ ಜುಲೈ ಮೂರನೇ ವಾರದಲ್ಲಿ ಬಜೆಟ್

ಸಮಗ್ರ ನ್ಯೂಸ್: ಜೂ.24ರಿಂದ ಜು.3ರ ವರೆಗೆ ಸಂಸತ್ ಮೊದಲ ಅಧಿವೇಶನ ನಡೆಯಲಿದ್ದು, 18ನೇ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಸಂಸದರ ಪ್ರಮಾಣ ಸ್ವೀಕಾರ ಹಾಗೂ ಮಹತ್ವದ ಸ್ಪೀಕರ್ ಆಯ್ಕೆ ನಡೆಯಲಿದೆ ಎಂದು ಸಂಸದೀಯ ವ್ಯವಹಾರ ಸಚಿವ ಕಿರಣ್ ರಿಜಿಜು ಅವರು ಮಾಹಿತಿ ನೀಡಿದ್ದಾರೆ. ಆರಂಭದ ಮೂರು ದಿನ ರಾಷ್ಟ್ರಪತಿ ನೇಮಿಸುವ ಹಂಗಾಮಿ ಸ್ಪೀಕರ್ ನೂತನ ಸಂಸದರಿಗೆ ಪ್ರಮಾಣ ಬೋಧಿಸಲಿದ್ದಾರೆ. ಬಳಿಕ ಸ್ಪೀಕರ್ ಆಯ್ಕೆ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜೂ. 27 ರಂದು ಲೋಕಸಭೆ

ಜೂ.24ರಿಂದ ಜು.3ರ ವರೆಗೆ ಸಂಸತ್ ಮೊದಲ ಅಧಿವೇಶನ/ ಜುಲೈ ಮೂರನೇ ವಾರದಲ್ಲಿ ಬಜೆಟ್ Read More »

ಎರಡು ಕ್ಷೇತ್ರಗಳಲ್ಲಿ ಗೆದ್ದಿರುವ ರಾಹುಲ್/ ವಯನಾಡಿಗೆ ರಾಜೀನಾಮೆ ನೀಡುವ ಸಾಧ್ಯತೆ

ಸಮಗ್ರ ನ್ಯೂಸ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಯನಾಡು ಮತ್ತು ರಾಯ್‍ಬರೇಲಿಯಲ್ಲಿ ಎರಡೂ ಲೋಕಸಭಾ ಕ್ಷೇತ್ರಗಳಲ್ಲೂ ಗೆದ್ದಿದ್ದು, ಕೇರಳದ ವಯನಾಡು ಕ್ಷೇತ್ರ ತೊರೆಯುವ ಸಾಧ್ಯತೆ ದಟ್ಟವಾಗಿದೆ. ತಮ್ಮನ್ನು ಗೆಲ್ಲಿಸಿದ ವಯನಾಡು ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್, ವಯನಾಡು ಜನತೆ ಮತ್ತೆ ನನ್ನ ಕೈ ಹಿಡಿದಿದ್ದು, ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿದ್ದೀರಿ. ಎಲ್ಲರಿಗೂ ಧನ್ಯವಾದಗಳು. ನಾನು ಈಗ ಯಾವ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂಬುದು ತಿಳಿಯುತ್ತಿಲ್ಲ. ವಯನಾಡು, ರಾಯ್‍ಬರೇಲಿ ಯಾವುದಾದರೂ ಒಂದು ಕ್ಷೇತ್ರವನ್ನು

ಎರಡು ಕ್ಷೇತ್ರಗಳಲ್ಲಿ ಗೆದ್ದಿರುವ ರಾಹುಲ್/ ವಯನಾಡಿಗೆ ರಾಜೀನಾಮೆ ನೀಡುವ ಸಾಧ್ಯತೆ Read More »

ಕೇರಳ ವಿಶ್ವವಿದ್ಯಾನಿಲಯದಲ್ಲಿ ಸನ್ನಿ ಲಿಯೋನ್ ಡ್ಯಾನ್ಸ್/ ವಿದ್ಯಾರ್ಥಿ ಸಂಘದ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿದ ಉಪಕುಲಪತಿ

ಸಮಗ್ರ ನ್ಯೂಸ್: ಕೇರಳ ವಿಶ್ವವಿದ್ಯಾನಿಲಯ ಕ್ಯಾಂಪಸ್‍ನ ಯೂನಿವರ್ಸಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘವು ಆಯೋಜಿಸಲು ಸಿದ್ಧತೆ ನಡೆಸಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ ನೃತ್ಯ ಕಾರ್ಯಕ್ರಮಕ್ಕೆ ಉಪಕುಲಪತಿ ಬ್ರೇಕ್ ಹಾಕಿದ್ದಾರೆ. ವಿಶ್ವವಿದ್ಯಾಲಯದ ಅನುಮತಿ ಪಡೆಯದೇ ಜುಲೈ5 ರಂದು ಸನ್ನಿ ಲಿಯೋನ್ ನೃತ್ಯ ಪ್ರದರ್ಶನ ನಡೆಸಲು ಸಿದ್ಧತೆಗಳು ನಡೆದಿದ್ದವು. ಕಾಲೇಜಿನಲ್ಲಿ ಯಾವುದೇ ಸಂದರ್ಭದಲ್ಲೂ ಇಂತಹ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದು ಉಪಕುಲಪತಿ ಹೇಳಿದ್ದಾರೆ. ಈ ಹಿಂದೆ ವಿದ್ಯಾರ್ಥಿ ಸಂಘಟನೆಗಳು ಆಯೋಜಿಸಿದ್ದ ಕೆಲವು ಕಾರ್ಯಕ್ರಮಗಳಲ್ಲಿ ಅವಘಡ ಸಂಭವಿಸಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು.

ಕೇರಳ ವಿಶ್ವವಿದ್ಯಾನಿಲಯದಲ್ಲಿ ಸನ್ನಿ ಲಿಯೋನ್ ಡ್ಯಾನ್ಸ್/ ವಿದ್ಯಾರ್ಥಿ ಸಂಘದ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿದ ಉಪಕುಲಪತಿ Read More »

ರೈಲಿನೊಳಗೆ ಪ್ರೇಮಿಗಳ ಲವ್ವಿಡವ್ವಿ| ಪ್ರೀತಿ ಕುರುಡು ನಿಜ…ಆದ್ರೆ ಸಾರ್ವಜನಿಕವಾಗಿ ಸರಸವಾಡುವಷ್ಟೇ? ಮುಜುಗರಕ್ಕೀಡಾದ ಸಹ ಪ್ರಯಾಣಿಕರು!!

ಸಮಗ್ರ ನ್ಯೂಸ್: ಪ್ರೇಮಿಗಳು ಕುರುಡುತನ ತೋರಿದ್ರೆ ಸಾರ್ವಜನಿಕರಿಂದ ಧರ್ಮದೇಟು ಬೀಳುವುದಂತು ಪಕ್ಕಾ. ಏಕೆಂದರೆ ಬಸ್‌, ಟ್ರೈನ್‌, ಮೆಟ್ರೋ, ಪಾರ್ಕ್‌ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಕೆಲವೊಂದು ಎಲ್ಲೆ ಮೀರಿದ ಪ್ರೇಮಿಗಳು ಅಸಭ್ಯವಾಗಿ ವರ್ತಿಸುತ್ತಿರುತ್ತಾರೆ. ಇಂತಹ ಅನುಚಿತ ವರ್ತನೆಗಳು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುತ್ತವೆ. ಇತ್ತೀಚಿಗಂತೂ ಇಂತಹ ಕೆಲವೊಂದು ಸುದ್ದಿಗಳು ಆಗಾಗ್ಗೆ ಕೇಳಿಬರುತ್ತಿರುತ್ತವೆ. ಇದೀಗ ಅಂತಹದೇ ಸುದ್ದಿಯೊಂದು ವೈರಲ್‌ ಆಗಿದ್ದು, ಪ್ರೇಮಿಗಳಿಬ್ಬರು ರೈಲಿನಲ್ಲಿ ರೊಮ್ಯಾನ್ಸ್‌ ಮಾಡಿ ಸಹ ಪ್ರಯಾಣಿಕರಿಗೆ ಮುಜುಗರ ಉಂಟುಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್‌ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ

ರೈಲಿನೊಳಗೆ ಪ್ರೇಮಿಗಳ ಲವ್ವಿಡವ್ವಿ| ಪ್ರೀತಿ ಕುರುಡು ನಿಜ…ಆದ್ರೆ ಸಾರ್ವಜನಿಕವಾಗಿ ಸರಸವಾಡುವಷ್ಟೇ? ಮುಜುಗರಕ್ಕೀಡಾದ ಸಹ ಪ್ರಯಾಣಿಕರು!! Read More »

ಚಾರ್ಮಾಡಿ: ಬಸ್ಸಿಗೆ ಅಡ್ಡ ಬಂದ ಕಾಡಾನೆ| ಪ್ರಯಾಣಿಕರಿಗೆ ಫುಲ್ ಶಾಕ್

ಸಮಗ್ರ ನ್ಯೂಸ್ : ಕೆಎಸ್‌ಆರ್‌ಟಿಸಿ ಬಸ್ಸಿಗೆ ಕಾಡಾನೆಯೊಂದು ಅಡ್ಡ ಬಂದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ 7 ಮತ್ತು 8ನೇ ತಿರುವಿನಲ್ಲಿ ನಡೆದಿದೆ. ಬಸ್ಸಿನ ಪಕ್ಕದಲ್ಲೇ ಕಾಡಾನೆ ಹಾದು ಹೋಗಿದೆ. ಕಾಡಾನೆ ಕಂಡು ಪ್ರಯಾಣಿಕರು ಗಾಬರಿಗೊಂಡಿದ್ದರು. ಒಂಟಿ ಸಲಗ ಸುಮಾರು ಅರ್ಧ ಗಂಟೆ ರಸ್ತೆಯಲ್ಲೇ ನಿಂತಿತ್ತು. ಆನೆಯನ್ನ ಕಂಡು ತಕ್ಷಣ ಬಸ್ ನಿಲ್ಲಿಸಿದ್ದರು ಚಾಲಕ. ಚಾರ್ಮಾಡಿ ಘಾಟಿಯಲ್ಲಿ ಎರಡು ಕಿ.ಮೀ. ನಷ್ಟು ಟ್ರಾಫಿಕ್ ಜಾಮ್ ಆಗಿತ್ತು. ಚಿಕ್ಕಮಗಳೂರು-ಮಂಗಳೂರು ಎರಡೂ ಕಡೆಯಲ್ಲೂ ಟ್ರಾಫಿಕ್ ಜಾಮ್

ಚಾರ್ಮಾಡಿ: ಬಸ್ಸಿಗೆ ಅಡ್ಡ ಬಂದ ಕಾಡಾನೆ| ಪ್ರಯಾಣಿಕರಿಗೆ ಫುಲ್ ಶಾಕ್ Read More »

ಕುವೈತ್ ಅಗ್ನಿದುರಂತ| 40 ಭಾರತೀಯರು ಸಾವು| ಮೃತದೇಹ ತರಲು ಪ್ರಯತ್ನ – ಜೈಶಂಕರ್

ಸಮಗ್ರ ನ್ಯೂಸ್: ಕುವೈತ್‌ನ ಕಟ್ಟಡವೊಂದರಲ್ಲಿ ಬುಧವಾರ ನಡೆದ ಅಗ್ನಿ ದುರಂತದಲ್ಲಿ 40 ಭಾರತೀಯರು ಮೃತಪಟ್ಟಿದ್ದು, 50 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರಲ್ಲಿ ಒಟ್ಟು 49 ಮಂದಿ ಮೃತಪಟ್ಟಿದ್ದು ಅವರಲ್ಲಿ 40 ಜನ ಭಾರತೀಯರು ಎಂದು ತಿಳಿದುಬಂದಿದೆ. ಮೃತಪಟ್ಟ ಇತರರು ಪಾಕಿಸ್ತಾನ, ಫಿಲಿಪಿನೋ, ಈಜಿಪ್ಟ್‌ ಮತ್ತು ನೇಪಾಳ ಮೂಲದ ಕಾರ್ಮಿಕರು ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ಅಧಿಕೃತ ಮಾಹಿತಿ ತಿಳಿಸಿದೆ. ಘಟನೆಯ ಕುರಿತು ಪ್ರಧಾನಿ ಮೋದಿ, ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತುರ್ತು ಸಭೆ ನಡೆಸಿದ್ದಾರೆ. ಸಭೆಯ

ಕುವೈತ್ ಅಗ್ನಿದುರಂತ| 40 ಭಾರತೀಯರು ಸಾವು| ಮೃತದೇಹ ತರಲು ಪ್ರಯತ್ನ – ಜೈಶಂಕರ್ Read More »

ಫೋಕ್ಸೋ ಪ್ರಕರಣ| ಮಾಜಿ ಸಿಎಂ ಯಡಿಯೂರಪ್ಪಗೆ ಬಂಧನ ಭೀತಿ

ಸಮಗ್ರ ನ್ಯೂಸ್: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಪೋಕ್ಸೋ ಕೇಸ್‌ನಲ್ಲಿ ಅವರಿಗೆ ಬಂಧನ ಭೀತಿ ಎದುರಾಗಿದೆ. ಪ್ರಕರಣದ ವಿಚಾರಣೆಗೆ ಹಾಜರಾಗಲು ಸಿಐಡಿ ಅಧಿಕಾರಿಗಳು ನೋಟಿಸ್‌ ನೀಡಿದ್ದರು. ಆದರೆ ವಿಚಾರಣೆಗೆ ಹಾಜರಾಗಲು ಬಿಎಸ್ ಯಡಿಯೂರಪ್ಪ ಕಾಲಾವಕಾಶ ಕೇಳಿದ್ದಾರೆ. ನೋಟಿಸ್‌ ನೀಡಿದ ಬೆನ್ನಲ್ಲೇ ಇಂದೇ ಹೈಕೋರ್ಟ್‌ನಲ್ಲಿ ಎಫ್‌ಐಆರ್ ರದ್ದು ಕೋರಿ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಅರ್ಜಿ ಸಲ್ಲಿಸಿದ್ದು, ಇನ್ನಷ್ಟೇ ವಿಚಾರಣೆ ನಡೆಯಬೇಕಿದೆ. ಈ ನಡುವೆ ಯಡಿಯೂರಪ್ಪ

ಫೋಕ್ಸೋ ಪ್ರಕರಣ| ಮಾಜಿ ಸಿಎಂ ಯಡಿಯೂರಪ್ಪಗೆ ಬಂಧನ ಭೀತಿ Read More »