Editor

ಜಮ್ಮು ಕಾಶ್ಮೀರದಲ್ಲಿ ಜಗತ್ತಿನ ಅತೀ ಎತ್ತರದ ರೈಲ್ವೆ ಸೇತುವೆ/ ಯಶಸ್ವಿಯಾದ ಪ್ರಾಯೋಗಿಕ ರೈಲು ಸಂಚಾರ

ಸಮಗ್ರ ನ್ಯೂಸ್: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಚೆನಾಬ್ ನದಿ ಮೇಲೆ ನಿರ್ಮಿಸಿರುವ ಜಗತ್ತಿನ ಅತಿ ಎತ್ತರದ ಉಕ್ಕಿನ ಕಮಾನು ರೈಲ್ವೆ ಸೇತುವೆಯಲ್ಲಿ ರೈಲ್ವೆ ಇಲಾಖೆ ಉನ್ನತ ಅಧಿಕಾರಿಗಳು ಹಳಿ ಸೇರಿದಂತೆ ಇತರ ತಾಂತ್ರಿಕ ಕೆಲಸಗಳನ್ನು ಪರಿಶೀಲನೆ ನಡೆಸಿದ್ದು, ಇದೇ ವೇಳೆ ಚೆನಾಬ್ ಸೇತುವೆ ಮೇಲೆ ನಡೆಸಿದ ಪ್ರಾಯೋಗಿಕ ರೈಲು ಸಂಚಾರ ಯಶಸ್ವಿಯಾಗಿದೆ. ಜಮ್ಮುವಿನ ರಿಯಾಸಿ ಜಿಲ್ಲೆಯಿಂದ ಕಾಶ್ಮೀರಕ್ಕೆ ರೈಲು ಮಾರ್ಗದ ಮೂಲಕ ಸಂಪರ್ಕ ಕಲ್ಪಿಸುವ ಸಂಗಲ್ಲನ್‌ನಿಂದ ರಿಯಾಸಿ ನಡುವಿನ ಮೊದಲ ಪ್ರಾಯೋಗಿಕ ರೈಲು ಸಂಚಾರ, […]

ಜಮ್ಮು ಕಾಶ್ಮೀರದಲ್ಲಿ ಜಗತ್ತಿನ ಅತೀ ಎತ್ತರದ ರೈಲ್ವೆ ಸೇತುವೆ/ ಯಶಸ್ವಿಯಾದ ಪ್ರಾಯೋಗಿಕ ರೈಲು ಸಂಚಾರ Read More »

ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಖಂಡಿಸಿ ಇಂದು ಬಿಜೆಪಿ -ಜೆಡಿಎಸ್ ಪ್ರತಿಭಟನೆ

ಸಮಗ್ರ ನ್ಯೂಸ್: ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಖಂಡಿಸಿ ಜೂನ್‌ 17ರಂದು ಬೆಂಗಳೂರು ಸೇರಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ತೀರ್ಮಾನಿಸಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ,‌ ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.ರಾಜ್ಯದಲ್ಲಿ ಬೆಲೆ ಏರಿಕೆಯನ್ನು ಅಸ್ತ್ರ ಮಾಡಿಕೊಂಡು ಅಧಿಕಾರಕ್ಕೆ ಬಂದ ಕೈ ಸರ್ಕಾರಕ್ಕೆ ಈಗ ಬೆಲೆ ಏರಿಕೆಯೇ ಸಂಕಷ್ಟ ತಂದಿದೆ. ಪೆಟ್ರೋಲ್ ಬೆಲೆ 3 ರೂಪಾಯಿ, ಡೀಸೆಲ್‌ ಬೆಲೆ ಮೂರೂವರೆ ರೂಪಾಯಿ ಏರಿಕೆ ಮಾಡಿರುವುದಕ್ಕೆ ಸಾರ್ವಜನಿಕರು ಆಕ್ರೋಶ

ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಖಂಡಿಸಿ ಇಂದು ಬಿಜೆಪಿ -ಜೆಡಿಎಸ್ ಪ್ರತಿಭಟನೆ Read More »

ಫಾದರ್ಸ್ ಡೇ: ನೀವೇ ನನ್ನ ಹೀರೊ” ಎಂದು ದರ್ಶನ್ ಪುತ್ರ ಪೋಸ್ಟ್

ಸಮಗ್ರ ನ್ಯೂಸ್: ಜೂ.16, ವಿಶ್ವ ತಂದೆಯಂದಿರ ದಿನ, ಈ ಸಂದರ್ಭದಲ್ಲಿ ದರ್ಶನ್ ಪುತ್ರ ವಿನೀಶ್ ಸೋಶಿಯಲ್ ಮೀಡಿಯಾದಲ್ಲಿ ತಂದೆಯಂದಿರ ದಿನದ ಶುಭಾಶಯ ಕೋರಿದ್ದಾನೆ. ದರ್ಶನ್‌ ಮಗ ವಿನೀಶ್.”ಹ್ಯಾಪಿ ಫಾದರ್ಸ್ ಡೇ ಅಪ್ಪ. ನಾನು ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ತಿದ್ದೀನಿ. ಐ ಲವ್ ಯು. ಯಾವಾಗಲೂ ನೀವೇ ನನ್ನ ಹೀರೊ” ಎಂದು ವಿನೀಶ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾನೆ.. 15 ವರ್ಷ ವಯಸ್ಸಿನ ವಿನೀಶ್ ಹೈಸ್ಕೂಲ್‌ನಲ್ಲಿ ಓದುತ್ತಿದ್ದಾನೆ. ಇನ್ನೂ ತಂದೆ ಜತೆಗಿನ ಒಂದಷ್ಟು ಫೋಟೊಗಳನ್ನು ಕೊಲಾಜ್ ಮಾಡಿ ಹಾಕಿಕೊಂಡಿದ್ದಾನೆ. ಈ

ಫಾದರ್ಸ್ ಡೇ: ನೀವೇ ನನ್ನ ಹೀರೊ” ಎಂದು ದರ್ಶನ್ ಪುತ್ರ ಪೋಸ್ಟ್ Read More »

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪವಿತ್ರಾ ಗೌಡ ಮ್ಯಾನೇಜರ್ ಪೊಲೀಸರ ವಶ

ಸಮಗ್ರ ನ್ಯೂಸ್: ರೇಣುಕಾಸ್ವಾಮಿ ಕೊಲೆ ಪ್ರಕಣದಲ್ಲಿ ಇದೀಗ ಮತ್ತೊಬ್ಬ ಆರೋಪಿ ಪೊಲೀಸರ ವಶವಾಗಿದ್ದಾನೆ. ಈಗಾಗಲೆ 16ಜನ ಅರೆಸ್ಟ್ ಆಗಿದ್ದಾರೆ. ಈ ಮಧ್ಯೆ ಕೊಲೆ ಕೇಸ್ ನಲ್ಲಿ ಮತ್ತೊಬ್ಬ ವ್ಯಕ್ತಿಯನ್ನ ತಡರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪವಿತ್ರಾ ಗೌಡ ಮ್ಯಾನೇಜರ್ ದೇವರಾಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರು ರಸ್ತೆಯಲ್ಲಿ ದೇವರಾಜ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ನಡೆದ ದಿನ ರೇಣುಕಾಸ್ವಾಮಿ ಕೊಲೆಯಾದ ಶೆಡ್‌ಗೆ ಪವಿತ್ರಾ ಜತೆಗೆ ದೇವರಾಜ್ ಕೂಡ ಹೋಗಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ದೇವರಾಜ್‌ನನ್ನು ಪೊಲೀಸರು

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪವಿತ್ರಾ ಗೌಡ ಮ್ಯಾನೇಜರ್ ಪೊಲೀಸರ ವಶ Read More »

ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗಿಲ್ಲ‌ ಸೂಕ್ತ ರಕ್ಷಣೆ| ಒಳರೋಗಿಯಾಗಿ ದಾಖಲಾದವರು ಹೊರಗೆ!!

ಸಮಗ್ರ ನ್ಯೂಸ್: ಇದೊಂದು ನಿಜಕ್ಕೂ ಶಾಕ್ ತರಿಸುವ ಸಂಗತಿ. ಈ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದವರು ಯಾವಾಗ ಬೇಕಾದರೂ, ಎಲ್ಲಿಗೆ ಬೇಕಾದರೂ ಹೋಗಿ ಬರಬಹುದು! ಇಂಥದ್ದೊಂದು ಪರಿಸ್ಥಿತಿ ಇರುವುದು ಸುಳ್ಯ ತಾಲೂಕಿನ ಸುಳ್ಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಂದರೆ ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ..! ಹೌದು, ಇಲ್ಲಿ ದಾಖಲಾದ ರೋಗಿಗಳು ಯಾವೂದೇ ಸುರಕ್ಷತೆಯಿಲ್ಲ. ರೋಗಿಯ ಸಹಾಯಕರು ಆತನನ್ನು ಬಿಟ್ಟು ಆಚೀಚೆ ಹೋದರೆ ರೋಗಿಗಳು ಎದ್ದು ಹೊರಗಡೆ ಹೋಗಬಹುದು. ಕೈಯಲ್ಲಿರುವ ಡ್ರಿಪ್ಸ್ ಪೈಪ್ ಸಹಿತ ಪೇಟೆಗೂ ಹೋಗಿ ಬರಬಹುದು. ಇದನ್ನು ಇಲ್ಲಿ

ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗಿಲ್ಲ‌ ಸೂಕ್ತ ರಕ್ಷಣೆ| ಒಳರೋಗಿಯಾಗಿ ದಾಖಲಾದವರು ಹೊರಗೆ!! Read More »

ಪುತ್ತೂರು: ಆಲ್ಟೋ – ಬೊಲೆರೋ ನಡುವೆ ಭೀಕರ ಅಪಘಾತ| ಸೋಮವಾರಪೇಟೆ ಮೂಲದ ಇಬ್ಬರು ದಾರುಣ ಸಾವು

ಸಮಗ್ರ ನ್ಯೂಸ್: ಆಲ್ಟೋ 800 ಹಾಗೂ ಮಹೀಂದ್ರಾ ಬೊಲೆರೋ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಮೃತಪಟ್ಟು, ಹಲವರು ಗಾಯಗೊಂಡ ಘಟನೆ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ಸಮೀಪದ ಕುಂಬ್ರ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ. ಮೃತರನ್ನು ಆಲ್ಟೋ ಕಾರಿನಲ್ಲಿದ್ದ ಸೋಮವಾರಪೇಟೆ ನಿವಾಸಿಗಳಾದ ಲೋಕೇಶ್ ಹಾಗೂ ರವೀಂದ್ರ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಆಲ್ಟೋ ಹಾಗೂ ಕುಂಬ್ರ ಸಮೀಪದ ಶೇಖಮಲೆ ಎಂಬಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೊಲೆರೋ ನಡುವೆ ಢಿಕ್ಕಿ

ಪುತ್ತೂರು: ಆಲ್ಟೋ – ಬೊಲೆರೋ ನಡುವೆ ಭೀಕರ ಅಪಘಾತ| ಸೋಮವಾರಪೇಟೆ ಮೂಲದ ಇಬ್ಬರು ದಾರುಣ ಸಾವು Read More »

ಕೊರಗಜ್ಜನ ಹೆಸರಲ್ಲಿ ವಂಚನೆ; ನಕಲಿ‌ ಖಾತೆ ಸೃಷ್ಟಿಸಿ ದೇಣಿಗೆ ಸಂಗ್ರಹ

ಸಮಗ್ರ ನ್ಯೂಸ್: ತುಳುನಾಡಿನ ಆರಾಧನ ದೈವ ಕೊರಗಜ್ಜ ಅಂದರೆ ಅಷ್ಟು ನಂಬಿಕೆ. ಏನೇ ಕಷ್ಟ ಬಂದರು ಅಜ್ಜನನ್ನು ನೆನೆದರೆ ಪರಿಹಾರವಾಗುತ್ತದೆ. ಆದ್ರೆ, ಇದೀಗ ಕೆಲ ವಂಚಕರು ಇದೇ ಕೊರಗಜ್ಜನ ಹೆಸರಿನಲ್ಲಿ ಭಕ್ತರನ್ನು ವಂಚನೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ‘ಡಿವೊಟೀಸ್ ಆಫ್ ಕುತ್ತಾರು ಕೊರಗಜ್ಜ’ ಎಂಬ ಖಾತೆ ತೆರದು ಅದರಲ್ಲಿ ಅನ್ನದಾನ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಮಂಗಳೂರು ತಾಲೂಕಿನ ಆದಿಸ್ಥಳ ಕುತ್ತಾರು ಕೊರಗಜ್ಜ ಸನ್ನಿಧಾನ. ಇಲ್ಲಿನ ಫೋಟೋ ಮತ್ತು ಹೆಸರನ್ನು ಬಳಸಿಕೊಂಡು ದೈವಸ್ಥಾನದ ವೆಬ್

ಕೊರಗಜ್ಜನ ಹೆಸರಲ್ಲಿ ವಂಚನೆ; ನಕಲಿ‌ ಖಾತೆ ಸೃಷ್ಟಿಸಿ ದೇಣಿಗೆ ಸಂಗ್ರಹ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳ ವಾರ ಭವಿಷ್ಯ ಈ ವಾರ ಹೇಗಿರಲಿದೆ ನೋಡೋಣ. ಯಾರಿಗೆ ಲಾಭ? ಯಾವ ರಾಶಿಗೆ ಶುಭ? ಇಲ್ಲಿದೆ ಸಂಪೂರ್ಣ ಮಾಹಿತಿ… ಮೇಷರಾಶಿ:ಕೆಲಸದಲ್ಲಿ ಈ ದಿನ ನಿಮಗೆ ಉತ್ತಮವಾಗಿದೆ. ಉದ್ಯೋಗ ಅಥವಾ ವ್ಯವಹಾರವಾಗಿರಲಿ ಈ ವಾರ ನೀವು ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶ ಪಡೆಯುತ್ತೀರಿ. ಉದ್ಯೋಗಿಗಳಿಗೆ ಈ ಅವಧಿ ಅನುಕೂಲಕರವಾಗಿದೆ. ಕೆಲಸದಲ್ಲಿ ಜವಾಬ್ದಾರಿ ಹೆಚ್ಚಿರಲಿದೆ. ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಿದ್ದರೆ ಈ ಅವಧಿ ಅನುಕೂಲಕರವಾಗಿದೆ. ಆರ್ಥಿಕವಾಗಿ ಈ ಸಮಯ ತುಂಬಾ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಸರ್ಕಾರಿ ಶಾಲೆಯಲ್ಲಿ ಎಲ್.ಕೆ.ಜಿ. ಮತ್ತು ಯುಕೆಜಿ ಆರಂಭ/ಅಂಗನವಾಡಿ ಕಾರ್ಯಕರ್ತೆಯರ ವಿರೋಧ

ಸಮಗ್ರ ನ್ಯೂಸ್: ರಾಜ್ಯ ಸರಕಾರವು ಸರ್ಕಾರಿ ಶಾಲೆಯಲ್ಲಿ ಎಲ್.ಕೆ. ಜಿ. ಹಾಗೂ ಯು.ಕೆ.ಜಿ. ಆರಂಭಕ್ಕೆ ಮುಂದಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಾಯೋಗಿಕವಾಗಿ ಆಯ್ದ ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಿಂದಲೇ ಎಲ್.ಕೆ. ಜಿ. ಹಾಗೂ ಯು.ಕೆ.ಜಿ. ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದು ಅಂಗನವಾಡಿ ಕಾರ್ಯಕರ್ತೆಯರ ಆಕ್ರೋಶಕ್ಕೆ ಕಾರಣವಾಗಿದ್ದು, ಇದೀಗ ಬೀದಿಗಿಳಿದು ಹೋರಾಟ ಮಾಡಲು ಆರಂಭಿಸಿದ್ದಾರೆ. ಇಷ್ಟು ದಿನ ಮಕ್ಕಳ ಶಾಲಾ ಪೂರ್ವ ಶಿಕ್ಷಣ ನಡೆಯುತ್ತಿದ್ದದ್ದು ಅಂಗನವಾಡಿಗಳಲ್ಲಿ. ರಾಜ್ಯದಲ್ಲಿ ಖಾಸಗಿ ಶಾಲೆಗಳು ನಾಯಿಕೊಡೆಗಳಂತೆ ಆರಂಭವಾಗಿದ್ದರೂ ಕೂಡ ಅಂಗನವಾಡಿಗಳಲ್ಲಿ

ಸರ್ಕಾರಿ ಶಾಲೆಯಲ್ಲಿ ಎಲ್.ಕೆ.ಜಿ. ಮತ್ತು ಯುಕೆಜಿ ಆರಂಭ/ಅಂಗನವಾಡಿ ಕಾರ್ಯಕರ್ತೆಯರ ವಿರೋಧ Read More »

ವಿದ್ಯಾಮಾತಾ ಅಕಾಡೆಮಿ ಸುಳ್ಯ ಶಾಖೆಯಲ್ಲಿ ಕಂಪ್ಯೂಟರ್ ತರಗತಿ ಪ್ರಾರಂಭ| ಗ್ರಾಮೀಣ ಸರಕಾರಿ ಅಧಿಕಾರಿಗಳ ಬರವನ್ನು ವಿ. ಅಕಾಡೆಮಿ ನೀಗಿಸುತ್ತಿದೆ; ಲ.ವೀರಪ್ಪ ಕಣ್ಕಲ್

ಸಮಗ್ರ ನ್ಯೂಸ್: ಇಂದಿನ ಯುವ ಪೀಳಿಗೆಯ ಜೀವನದ ಆಶಾಕಿರಣವಾಗಿ 130ಕ್ಕೂ ಅಧಿಕ ಸ್ಪರ್ಧಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿ ಸರಕಾರಿ ಉದ್ಯೋಗ ಲಭಿಸುವಂತೆ ಮಾಡಿದ ವಿದ್ಯಾಮಾತಾ ಅಕಾಡೆಮಿಯು ಕಳೆದ ಕೆಲವು ತಿಂಗಳುಗಳ ಹಿಂದೆ ತನ್ನ ಶಾಖೆಯನ್ನು ಸುಳ್ಯಕ್ಕೆ ವಿಸ್ತರಿಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿಗೆ ಸಂಬಂಧಿಸಿದಂತೆ ತರಬೇತಿಯನ್ನು ನೀಡುತ್ತಾ ಸುಳ್ಯದ ಹೃದಯ ಭಾಗದಲ್ಲಿ ಕಾರ್ಯಾಚರಿಸುತಿದ್ದು, ಇದೀಗ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಜೊತೆಗೆ ಕೌಶಲ್ಯಯುಕ್ತ ಉದ್ಯೋಗಾಧರಿತವಾದ ಕಂಪ್ಯೂಟರ್ ಶಿಕ್ಷಣವನ್ನು ಪ್ರಾರಂಭಿಸಿದೆ. ಜೂನ್ 10ರಂದು ಸರಳವಾಗಿ ನಡೆದ ಕಂಪ್ಯೂಟರ್ ತರಗತಿಗಳ

ವಿದ್ಯಾಮಾತಾ ಅಕಾಡೆಮಿ ಸುಳ್ಯ ಶಾಖೆಯಲ್ಲಿ ಕಂಪ್ಯೂಟರ್ ತರಗತಿ ಪ್ರಾರಂಭ| ಗ್ರಾಮೀಣ ಸರಕಾರಿ ಅಧಿಕಾರಿಗಳ ಬರವನ್ನು ವಿ. ಅಕಾಡೆಮಿ ನೀಗಿಸುತ್ತಿದೆ; ಲ.ವೀರಪ್ಪ ಕಣ್ಕಲ್ Read More »