Editor

ರೇಣುಕಾಸ್ವಾಮಿ ಕೊಲೆ ಪ್ರಕರಣ| ದರ್ಶನ್ ಸೇರಿದಂತೆ ನಾಲ್ಕು‌ ಮಂದಿ ಪರಪ್ಪನ ಅಗ್ರಹಾರ ಜೈಲಿಗೆ

ಸಮಗ್ರ ನ್ಯೂಸ್: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್ ಸೇರಿದಂತೆ 4 ಆರೋಪಿಗಳು ಪರಪ್ಪನ ಅಗ್ರಹಾರ ಪಾಲಾಗಿದ್ದಾರೆ. ದರ್ಶನ್ ಸೇರಿದಂತೆ ಉಳಿದ ಮೂವರು ಆರೋಪಿಗಳ ಪೊಲೀಸ್ ಕಸ್ಟಡಿಯ ಅವಧಿ ಅಂತ್ಯವಾದ ಹಿನ್ನೆಲೆ ಇಂದು 5ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಲಾಯಿತು. ಈ ವೇಳೆ ನ್ಯಾಯಾಧೀಶರು ದರ್ಶನ್ ಸೇರಿದಂತೆ ಒಟ್ಟು 4 ಆರೋಪಿಗಳಿಗೆ ಜುಲೈ 4 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದ್ದಾರೆ. ಅದರಂತೆ ಎರಡನೇ ಬಾರಿಗೆ ನಟ ದರ್ಶನ್ ಜೈಲು ಪಾಲಾಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ| ದರ್ಶನ್ ಸೇರಿದಂತೆ ನಾಲ್ಕು‌ ಮಂದಿ ಪರಪ್ಪನ ಅಗ್ರಹಾರ ಜೈಲಿಗೆ Read More »

ವಯನಾಡಿನಿಂದ ಪ್ರಿಯಾಂಕಾ ಸ್ಪರ್ಧೆ/ ಪ್ರಚಾರಕ್ಕೆ ಬರಲಿದ್ದಾರೆ ಮಮತಾ ಬ್ಯಾನರ್ಜಿ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣಾ ಪೂರ್ವ ಹೋರಾಟದ ನಂತರ ತೃಣಮೂಲ ಕಾಂಗ್ರೆಸ್ ಮತ್ತು I.N.D.I.A ಬಣಗಳ ನಡುವಿನ ಸಂಬಂಧವು ಸುಧಾರಿಸುತ್ತಿದೆ ಎಂಬ ಸಂಕೇತವಾಗಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಪರ ಪ್ರಚಾರ ಮಾಡುವ ಸಾಧ್ಯತೆಯಿದೆ. ರಾಹುಲ್ ಗಾಂಧಿ ಗೆದ್ದ ಕೇರಳದ ಸೀಟಿನಿಂದ ಪ್ರಿಯಾಂಕಾ ಗಾಂಧಿ ಚುನಾವಣಾ ರಾಜಕೀಯಕ್ಕೆ ಕಾಲಿಡುತ್ತಿದ್ದಾರೆ. ರಾಹುಲ್ ಗಾಂಧಿ ಅವರು ರಾಯ್ ಬರೇಲಿ ಮತ್ತು ವಯನಾಡ್ ಲೋಕಸಭಾ ಚುನಾವಣೆಯಲ್ಲಿ ಮೂರು ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ

ವಯನಾಡಿನಿಂದ ಪ್ರಿಯಾಂಕಾ ಸ್ಪರ್ಧೆ/ ಪ್ರಚಾರಕ್ಕೆ ಬರಲಿದ್ದಾರೆ ಮಮತಾ ಬ್ಯಾನರ್ಜಿ Read More »

ಒಂದೇ ಮಳೆಗೆ ಬಿರುಕು ಬಿಟ್ಟ ನೂತನ ಅಟಲ್ ಸೇತುವೆ| ಬಹುಕೋಟಿ ವೆಚ್ಚದ ಸೇತುವೆ ಕಾಮಗಾರಿ ಕಳಪೆ

ಸಮಗ್ರ ನ್ಯೂಸ್: ವರ್ಷಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡಿದ್ದ ನವಿ ಮುಂಬೈನ ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಸೇವಾ ಅಟಲ್ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಅವರು ಇಂದು ಸೇತುವೆಯಲ್ಲಿ ಕಾಣಿಸಿಕೊಂಡಿರುವ ಬಿರುಕುಗಳನ್ನು ಪರಿಶೀಲಿಸಲು ಭೇಟಿ ನೀಡಿದ್ದರು. ಅಟಲ್ ಬಿಹಾರಿ ವಾಜಪೇಯಿ ಸೇವ್ರಿ ನ್ಹವಾ ಶೇವಾ ಅಟಲ್ ಸೇತು, ಭಾರತದ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ. 21.8 ಕಿಮೀ ಉದ್ದದ ಸೇತುವೆಯ 16.5 ಕಿಮೀ ಭಾಗ ಸಮುದ್ರದ ಮೇಲೆ ಇದೆ.

ಒಂದೇ ಮಳೆಗೆ ಬಿರುಕು ಬಿಟ್ಟ ನೂತನ ಅಟಲ್ ಸೇತುವೆ| ಬಹುಕೋಟಿ ವೆಚ್ಚದ ಸೇತುವೆ ಕಾಮಗಾರಿ ಕಳಪೆ Read More »

ಮಡಿಕೇರಿ: ಜೂ.27 ರಿಂದ ಅಗ್ನಿವೀರ್ ಸೇನಾ ನೇಮಕಾತಿ ರ್‍ಯಾಲಿ

ಸಮಗ್ರ ನ್ಯೂಸ್: ಜೂನ್, 27 ರಿಂದ ಜುಲೈ, 02 ರವರೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಅಗ್ನಿವೀರ್ ಸೇನಾ ನೇಮಕಾತಿ ರ್‍ಯಾಲಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೈನಿಕ ಕಲ್ಯಾಣ ಇಲಾಖೆಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಗ್ನಿವೀರ್ ಸೇನಾ ನೇಮಕಾತಿ ರ್ಯಾಲಿಯು ಒಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು, ಯಾರಿಗೂ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಬೇಕು. ವಸತಿ ಊಟೋಪಚಾರ ಸೇರಿದಂತೆ ಹಲವು ಮೂಲ ಸೌಕರ್ಯಗಳನ್ನು

ಮಡಿಕೇರಿ: ಜೂ.27 ರಿಂದ ಅಗ್ನಿವೀರ್ ಸೇನಾ ನೇಮಕಾತಿ ರ್‍ಯಾಲಿ Read More »

ಎತ್ತಿನಭುಜ ಚಾರಣ ನಿರ್ಬಂಧಿಸಿ ರಾಜ್ಯ ಸರ್ಕಾರ ಆದೇಶ

ಸಮಗ್ರ ನ್ಯೂಸ್: ಚಾರಣ ಪ್ರಿಯರ ಮೆಚ್ಚಿನ ಸ್ಥಳ ಎತ್ತಿನಭುಜಕ್ಕೆ ಸದ್ಯ ಪ್ರವಾಸಿಗರು ಭೇಟಿ ನೀಡದಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಪ್ರವಾಸೋದ್ಯಮದ ಅಡಿ ರಾಜ್ಯದ ವಿವಿಧೆಡೆ ಆನ್‌ಲೈನ್ ಟಿಕೆಟ್ ವ್ಯವಸ್ಥೆ ಮಾಡಿ ಪ್ರವಾಸಿಗರ ಸಂಖ್ಯೆಯನ್ನು ಸೀಮಿತಗೊಳಿಸುವವರೆಗೆ ಚಾರಣ ಪ್ರದೇಶಗಳಲ್ಲಿ ಪ್ರವೇಶ ನಿರ್ಬಂಧಿಸಿ ಈಗಾಗಲೇ ಸೂಚನೆ ನೀಡಲಾಗಿದೆ. ಆದರೂ ಜೂ. 15, 16, 17ರಂದು ರಜೆ ಇದ್ದ ಕಾರಣ ಮುಳ್ಳಯನಗಿರಿ, ಎತ್ತಿನಭುಜದಲ್ಲಿ ಸಾವಿರಾರು ಚಾರಣಿಗರು ಬಂದು ಹೋಗಿರುವುದಾಗಿ ವರದಿಗಳಾಗಿವೆ. ತಾತ್ಕಾಲಿಕವಾಗಿ ಚಾರಣ ನಿರ್ಬಂಧವಾಗಿದ್ದರೂ ಅವಕಾಶ ನೀಡಿರುವ ಬಗ್ಗೆ ಪರಿಶೀಲಿಸಿ, ತಪ್ಪಿತಸ್ಥ

ಎತ್ತಿನಭುಜ ಚಾರಣ ನಿರ್ಬಂಧಿಸಿ ರಾಜ್ಯ ಸರ್ಕಾರ ಆದೇಶ Read More »

ಕನ್ನಡದ ಖ್ಯಾತ ಸಾಹಿತಿ ಕಮಲಾ ಹಂಪನಾ‌ ನಿಧನ

ಸಮಗ್ರ‌ ನ್ಯೂಸ್: ಕನ್ನಡದ ಖ್ಯಾತ ಸಾಹಿತಿ ಕಮಲಾ ಹಂಪನಾ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.ಹೃದಯಾಘಾತದಿಂದ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ. ಕಮಲಾ ಹಂಪನಾ ಅವರು ಕನ್ನಡದ ಲೇಖಕರು. ಅವರು ವಿದ್ವಾಂಸರಾಗಿ, ಪ್ರಾಧ್ಯಾಪಕರಾಗಿ, ಪ್ರಾಚೀನ ಅರ್ವಾಚೀನ ಕೃತಿಗಳ ಅನುಸಂಧಾನಕಾರರಾಗಿ ಶ್ರಮಿಸಿದ್ದಾರೆ. ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಗಂಭೀರವಾದ ಅಧ್ಯಯನ ಮತ್ತು ಸಂಶೋಧನೆಯನ್ನು ಕೈಗೊಂಡು ಆ ಎಲ್ಲ ಪ್ರಕಾರಗಳಲ್ಲೂ ಕೊಡುಗೆಗಳನ್ನು ನೀಡಿದ್ದಾರೆ. ಸಾಹಿತ್ಯ ಕೃತಿಗಳು ನಕ್ಕಿತು ಹಾಲಿನ ಬಟ್ಟಲು,

ಕನ್ನಡದ ಖ್ಯಾತ ಸಾಹಿತಿ ಕಮಲಾ ಹಂಪನಾ‌ ನಿಧನ Read More »

ಹವಾಮಾನ ವರದಿ| ವೀಕೆಂಡ್ ‌ನಲ್ಲಿ ಕರಾವಳಿಗೆ ರೆಡ್ ಅಲರ್ಟ್| ಬೆಂಗಳೂರಿನಲ್ಲಿ ಧಾರಾಕಾರ ಮಳೆ

ಸಮಗ್ರ ನ್ಯೂಸ್: ಮುಂಗಾರು ಚೇತರಿಕೆ ಕಾಣುವ ಲಕ್ಷಣ ಕಾಣುತ್ತಿದ್ದು, ಭಾರತೀಯ ಹವಾಮಾನ ಇಲಾಖೆಯು ಜೂ.22 ಮತ್ತು 23ರಂದು ಕರಾವಳಿ ಭಾಗದಲ್ಲಿ “ರೆಡ್‌ ಅಲರ್ಟ್‌’ ಘೋಷಿಸಿದೆ. ಮಂಗಳೂರು ನಗರ ಸಹಿತ ದ.ಕ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಲ್ಲಿ ಮಳೆಯ ತೀವ್ರತೆ ತುಸು ಕಡಿಮೆಯಾಗಿದ್ದು, ಮತ್ತೆ ಮಳೆ ಬಿರುಸು ಪಡೆಯುವ ಸಾಧ್ಯತೆ ಇದೆ. “ರೆಡ್‌ ಅಲರ್ಟ್‌’ ಅವಧಿಯಲ್ಲಿ ಕರಾವಳಿ ಭಾಗದಲ್ಲಿ 204.5 ಮಿ.ಮೀ.ಗೂ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಗಾಳಿ ಮತ್ತು ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿರುವ ನಿರೀಕ್ಷೆ ಇದೆ.

ಹವಾಮಾನ ವರದಿ| ವೀಕೆಂಡ್ ‌ನಲ್ಲಿ ಕರಾವಳಿಗೆ ರೆಡ್ ಅಲರ್ಟ್| ಬೆಂಗಳೂರಿನಲ್ಲಿ ಧಾರಾಕಾರ ಮಳೆ Read More »

ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ| ಸಂತ್ರಸ್ತ ಚೇತನ್ ವಿರುದ್ಧವೇ ಎಫ್ಐಆರ್

ಸಮಗ್ರ ನ್ಯೂಸ್: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಹೋದರ, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ಯುವಕನ ವಿರುದ್ಧವೇ ಹಾಸನ ಜಿಲ್ಲೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸೂರಜ್ ಬ್ರಿಗೇಡ್‌ನ ಖಜಾಂಜಿ ಶಿವಕುಮಾರ್ ಹೆಚ್‌.ಎಲ್‌ ಎಂಬವರು ದೂರು ನೀಡಿದ್ದು “ಯುವಕ 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಹಣ ನೀಡದಿದ್ದರೆ ಸೂರಜ್ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ ಮಾಡುವುದಾಗಿ ಬೆದರಿಕೆ ಹಾಕಿದ್ದ” ಎಂದು ದೂರಿನಲ್ಲಿ ಆರೋಪಿಸಿದ್ದಾರೆ. “ಖಾಸಗಿ

ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ| ಸಂತ್ರಸ್ತ ಚೇತನ್ ವಿರುದ್ಧವೇ ಎಫ್ಐಆರ್ Read More »

ಸುಳ್ಯ: ಮಗ ಮತ್ತು ಸೊಸೆ ವಿರುದ್ಧ ಮತ್ತೆ ದೂರು ನೀಡಿದ ವೃದ್ಧೆ| ಎಸಿ ಜುಬಿನ್ ಮೊಹಪಾತ್ರ ಮಾತುಕತೆ

ಸಮಗ್ರ ನ್ಯೂಸ್: ಮಗ ಮತ್ತು ಸೊಸೆ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ವೃದ್ಧೆಯೋರ್ವರು ತನ್ನ ಪುತ್ರಿಯರ ಜತೆಗೆ ಸುಳ್ಯ ತಾಲೂಕು ಕಚೇರಿಗೆ ಆಗಮಿಸಿ ಧರಣಿ ಕುಳಿತ ಘಟನೆ ಸುಳ್ಯದಲ್ಲಿ ನಡೆದಿದೆ. ಮಂಡೆಕೋಲು ಗ್ರಾಮದ ಕಲ್ಲಡ್ಕದ ಪೆರಾಜೆಯ ಶೇಷಮ್ಮ ಅವರು ಕೆಲವು ವಾರಗಳ ಹಿಂದೆ ಸುಳ್ಯ ತಹಶೀಲ್ದಾರ್‌ಗೆ ಮಗನ ವಿರುದ್ಧ ದೂರು ನೀಡಿದ್ದರು. ಅಂದು ತಹಶೀಲ್ದಾರ್‌ ನೇತೃತ್ವದಲ್ಲಿ ಅಧಿಕಾರಿಗಳು ಸಮಾಲೋಚಿಸಿ ಮಗನಿಗೆ ಹಿತವಚನ ನೀಡಿ ಮಂಡೆಕೋಲಿನ ಮನೆಗೆ ಬಿಟ್ಟು ಬಂದಿದ್ದರು. ಅಂದಿನಿಂದ ವೃದ್ಧೆ ಅದೇ ಮನೆಯಲ್ಲಿದ್ದು, ಮದುವೆ ಮಾಡಲಾಗಿರುವ

ಸುಳ್ಯ: ಮಗ ಮತ್ತು ಸೊಸೆ ವಿರುದ್ಧ ಮತ್ತೆ ದೂರು ನೀಡಿದ ವೃದ್ಧೆ| ಎಸಿ ಜುಬಿನ್ ಮೊಹಪಾತ್ರ ಮಾತುಕತೆ Read More »

ಉಪ್ಪಿನಂಗಡಿ: ಪೃಥ್ವಿ ಕಾಂಪ್ಲೆಕ್ಸ್ ನಲ್ಲಿ ಭಾರೀ ಅಗ್ನಿ ಅವಘಡ| ಹಲವು ಮಳಿಗೆಗಳು ಬೆಂಕಿಗಾಹುತಿ

ಸಮಗ್ರ ನ್ಯೂಸ್: ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಇಲ್ಲಿನ ಮುಖ್ಯ ಪೇಟೆಯಲ್ಲಿರುವ ಪೃಥ್ವಿ ಕಾಂಪ್ಲೆಕ್ಸ್ ನಲ್ಲಿನ ಹಲವು ಅಂಗಡಿಗಳು ಬೆಂಕಿಗಾಹುತಿಯಾಗಿರುವ ಮಾಹಿತಿ ಲಭಿಸಿದೆ. ನೂರಾರು ನಾಗರಿಕರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು, ಬೆಂಕಿಯ ಕೆನ್ನಾಲಗೆಗೆ ಹಲವು ಅಂಗಡಿಗಳು ಆಹುತಿಯಾಗಿವೆ. ಏಕಾಏಕಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಅಂಗಡಿಯವರು ಬೆಂಕಿಯನ್ನು ಆರಿಸಲು ಯತ್ನಿಸಿದರಾದರೂ ಅದಾಗಲೇ ಹಲವು ಅಂಗಡಿಗಳು ಬೆಂಕಿಗೆ ಆಹುತಿಯಾಗಿತ್ತು. ಬೆಂಕಿ ನಂದಿಸುವ ಕಾರ್ಯ ಬರದಿಂದ ನಡೆಯುತ್ತಿದ್ದು, ಇನ್ನೂ ಹತೋಟಿಗೆ ಬಂದಿಲ್ಲ ಎಂದು ತಿಳಿದುಬಂದಿದೆ.

ಉಪ್ಪಿನಂಗಡಿ: ಪೃಥ್ವಿ ಕಾಂಪ್ಲೆಕ್ಸ್ ನಲ್ಲಿ ಭಾರೀ ಅಗ್ನಿ ಅವಘಡ| ಹಲವು ಮಳಿಗೆಗಳು ಬೆಂಕಿಗಾಹುತಿ Read More »