ನವದೆಹಲಿ: ಪೇಪರ್ ನೋಡದೇ ಪ್ರಮಾಣವಚನ ಸ್ವೀಕರಿಸಿದ ಸಂಸದೆ
ಸಮಗ್ರ ನ್ಯೂಸ್: ಅತ್ಯಂತ ಕಿರಿಯ ಸಂಸದರಲ್ಲಿ ಒಬ್ಬರಾಗಿರುವ ಶಾಂಭವಿ ಚೌಧರಿ ಅವರು ಪೇಪರ್ ಅನ್ನು ನೋಡದೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 18ನೇ ಲೋಕಸಭೆಯಲ್ಲಿ ಅತ್ಯಂತ ಕಿರಿಯ ಸಂಸದರಲ್ಲಿ ಒಬ್ಬರಾಗಿರುವ ಶಾಂಭವಿ ಚೌಧರಿ ಅವರು ಸಂಸತ್ತಿನಲ್ಲಿ ಹಿಂದಿಯಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ(ಆರ್‌ವಿ) ಪ್ರಕ್ಷದ ಶಾಂಭವಿ ಬಿಹಾರದ ಸಮಸ್ತಿಪುರದ ಪ್ರತಿನಿಧಿಯಾಗಿದ್ದಾರೆ. ಅವರು ಸಮಸ್ತಿಪುರದ ಮೊದಲ ಮಹಿಳಾ ಸಂಸದರಾಗಿದ್ದಾರೆ.
ನವದೆಹಲಿ: ಪೇಪರ್ ನೋಡದೇ ಪ್ರಮಾಣವಚನ ಸ್ವೀಕರಿಸಿದ ಸಂಸದೆ Read More »










