Editor

ಉಡುಪಿ: ಹೃದಯಾಘಾತಕ್ಕೆ ಎಸ್ಎಸ್ಎಲ್ ಸಿ ವಿದ್ಯಾರ್ಥಿನಿ ಬಲಿ

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯ ಶಿರ್ವದಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೋರ್ವಳು ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ. ಇಲ್ಲಿನ ಮೂಡುಬೆಳ್ಳೆ ಸಂತ ಲಾರೆನ್ಸ್ ಕನ್ನಡ ಮಾಧ್ಯಮ ಪ್ರೌಢ ಶಾಲಾ 10ನೇ ತರಗತಿ ವಿದ್ಯಾರ್ಥಿನಿ ಭಾಗ್ಯಶ್ರೀ (16) ಮೃತ ವಿದ್ಯಾರ್ಥಿನಿ. ಎಂದಿನಂತೆ ಶಾಲೆಗೆ ಹೋಗುತ್ತಿದ್ದ ಭಾಗ್ಯಶ್ರೀಗೆ ಇಂದು ಬೆಳಿಗ್ಗೆ ಎದೆ ನೋವು ಕಾಣಿಸಿದ್ದು ಕೂಡಲೇ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾಗ್ಯಶ್ರೀ ನಿಧನ ಹೊಂದಿದ್ದಾಳೆ. ಇವಳಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು. ಇವಳು ಪಳ್ಳಿ […]

ಉಡುಪಿ: ಹೃದಯಾಘಾತಕ್ಕೆ ಎಸ್ಎಸ್ಎಲ್ ಸಿ ವಿದ್ಯಾರ್ಥಿನಿ ಬಲಿ Read More »

‘ವಿಶ್ವ’ ಗೆದ್ದ ಟೀಂ ಇಂಡಿಯಾಗೆ ಅದ್ದೂರಿ ಸ್ವಾಗತ| ಇಂದು ಮೋದಿ ಭೇಟಿಯಾಗಲಿರುವ ಆಟಗಾರರು

ಸಮಗ್ರ ನ್ಯೂಸ್: ಟಿ20 ವಿಶ್ವಕಪ್ ಗೆದ್ದು ಭಾರತಕ್ಕೆ ಮರಳಿದ ಆಟಗಾರರಿಗೆ ದೆಹಲಿಯಲ್ಲಿ ಅದ್ದೂರಿ ಸ್ವಾಗತ ನೀಡಲಾಗಿದೆ. ಟೀಮ್ ಇಂಡಿಯಾ ಆಟಗಾರರು ವಿಶ್ವಕಪ್ ನೊಂದಿಗೆ ತವರಿಗೆ ಮರಳಿದ್ದು, ನವದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಟಗಾರರಿಗೆ ಅದ್ದೂರಿ ಸ್ವಾಗತ ನೀಡಿ ವಿಜಯೋತ್ಸವ ಆಚರಿಸಲಾಗಿದೆ. ಈಗಾಗಲೇ ಬಿಸಿಸಿಐನಿಂದ 125 ಕೋಟಿ ರೂ. ಬಹುಮಾನ ಘೋಷಿಸಲಾಗಿದೆ. ಚಂಡಮಾರುತ ದಿಂದಾಗಿ ಬಾರ್ಬಡೋಸ್ ನಲ್ಲಿ ಟೀಮ್ ಇಂಡಿಯಾ ಆಟಗಾರರು ಉಳಿದುಕೊಂಡಿದ್ದರು. ದೆಹಲಿಯಲ್ಲಿ ಇಂದು ಬೆಳಗ್ಗೆ ಟೀಂ ಇಂಡಿಯಾ ಆಟಗಾರರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದು, ಭೋಜನಕೂಟದಲ್ಲಿ

‘ವಿಶ್ವ’ ಗೆದ್ದ ಟೀಂ ಇಂಡಿಯಾಗೆ ಅದ್ದೂರಿ ಸ್ವಾಗತ| ಇಂದು ಮೋದಿ ಭೇಟಿಯಾಗಲಿರುವ ಆಟಗಾರರು Read More »

ಭಾರೀ ಮಳೆ ಹಿನ್ನೆಲೆ| ಬಂಟ್ವಾಳ ತಾಲೂಕಿನಾದ್ಯಂತ ಶಾಲೆಗಳಿಗೆ ಇಂದು(ಜು.4) ರಜೆ ಘೋಷಣೆ

ಸಮಗ್ರ ನ್ಯೂಸ್: ಭಾರಿ ಮಳೆಯಾಗುತ್ತಿರುವ ಕಾರಣ ಬಂಟ್ವಾಳ ತಾಲೂಕಿನ ಎಲ್ಲ ಸರಕಾರಿ, ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಜುಲೈ 4ರಂದು ರಜೆ ಘೋಷಿಸಲಾಗಿದೆ. ಜುಲೈ 3ರಂದೂ ಭಾರಿ ಮಳೆಯಾಗಿದ್ದು, ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿತ್ತು. ಜುಲೈ 4ರಂದೂ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಳ್ತಂಗಡಿ ತಹಶೀಲ್ದಾರ್ ರಜೆ ಘೋಷಿಸಿದ್ದಾರೆ.

ಭಾರೀ ಮಳೆ ಹಿನ್ನೆಲೆ| ಬಂಟ್ವಾಳ ತಾಲೂಕಿನಾದ್ಯಂತ ಶಾಲೆಗಳಿಗೆ ಇಂದು(ಜು.4) ರಜೆ ಘೋಷಣೆ Read More »

ಭಾರೀ ಮಳೆ ಹಿನ್ನೆಲೆ| ಬೆಳ್ತಂಗಡಿ ತಾಲೂಕಿನಾದ್ಯಂತ ಶಾಲೆಗಳಿಗೆ ಇಂದು(ಜು.4) ರಜೆ ಘೋಷಣೆ

ಸಮಗ್ರ ನ್ಯೂಸ್: ಭಾರಿ ಮಳೆಯಾಗುತ್ತಿರುವ ಕಾರಣ ಬೆಳ್ತಂಗಡಿ ತಾಲೂಕಿನ ಎಲ್ಲ ಸರಕಾರಿ, ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಜುಲೈ 4ರಂದು ರಜೆ ಘೋಷಿಸಲಾಗಿದೆ. ಜುಲೈ 3ರಂದೂ ಭಾರಿ ಮಳೆಯಾಗಿದ್ದು, ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿತ್ತು. ಜುಲೈ 4ರಂದೂ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಳ್ತಂಗಡಿ ತಹಶೀಲ್ದಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ರಜೆ ನೀಡಿದ್ದಾರೆ.

ಭಾರೀ ಮಳೆ ಹಿನ್ನೆಲೆ| ಬೆಳ್ತಂಗಡಿ ತಾಲೂಕಿನಾದ್ಯಂತ ಶಾಲೆಗಳಿಗೆ ಇಂದು(ಜು.4) ರಜೆ ಘೋಷಣೆ Read More »

ಮಡಿಕೇರಿ: ʼತುರ್ತಾಗಿ ಒಂದು ಅಪಘಾತ ಮಾಡಿʼ ಸೂಚನಾ ಫಲಕ ವೈರಲ್

ಸಮಗ್ರ ನ್ಯೂಸ್: ಹೈವೆಗಳಲ್ಲಿ, ತಿರುವುಗಳಲ್ಲಿ ನಾವು ಅಪಘಾತ ವಲಯ, ಅವಸರವೇ ಅಪಘಾತಕ್ಕೆ ಕಾರಣ ಎಂಬ ಸೂಚನಾ ಫಲಕ ಅಳವಡಿಸಿರುವುದನ್ನು ನಾವು ನೋಡಿದ್ದೇವೆ. ಅದೇ ರೀತಿ ಕರ್ನಾಟಕದ ಕೊಡಗಿನ ಬಳಿಯ ಹೆದ್ದಾರಿಯಲ್ಲಿ ಅಳವಡಿಸಲಾಗಿರುವ ತುರ್ತು ಸೂಚನಾ ಫಲಕವೊಂದು ಇದೀಗ ಅಂತರ್ಜಾಲದಲ್ಲಿ ಫುಲ್ ವೈರಲ್ ಆಗಿದೆ. ಹೌದು ಅಂತದೇನಿದೆ ಆ ನಾಮಫಲಕದಲ್ಲಿ ಅಂತಿರಾ ಈ ಫೋಟೋ ನೋಡಿ ಅದರಲ್ಲಿ “ಅವಸರವೇ ಅಪಘಾತಕ್ಕೆ ಕಾರಣ” ಹಾಗೂ “Urgent Make An Accident” ಎಂದು ಬರೆಯಲಾಗಿದೆ. ಈ ಇಂಗ್ಲಿಷ್‌ ವಾಕ್ಯದ ಕನ್ನಡ ಅರ್ಥ

ಮಡಿಕೇರಿ: ʼತುರ್ತಾಗಿ ಒಂದು ಅಪಘಾತ ಮಾಡಿʼ ಸೂಚನಾ ಫಲಕ ವೈರಲ್ Read More »

ಎಲ್‌.ಕೆ.ಅಡ್ವಾಣಿ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು: ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಮಾಜಿ ಉಪ ಪ್ರಧಾನಿ, ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಉಂಟಾಗಿದ್ದು, ದೆಹಲಿಯಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಹೆಚ್ಚಿನ ನಿಗಾ ವಹಿಸಿದ್ದಾರೆ. ಆಸ್ಪತ್ರೆಯ ಮೂಲಗಳ ಪ್ರಕಾರ ಮಾಜಿ ಉಪ ಪ್ರಧಾನಿಯ ಆರೋಗ್ಯವು ಸ್ಥಿರವಾಗಿದೆ. ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿದುಬಂದಿದೆ. ರಾತ್ರಿ 9 ಗಂಟೆ ಸುಮಾರಿಗೆ ಎಲ್‌.ಕೆ.ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. 96 ವರ್ಷವಾದ ಎಲ್‌.ಕೆ.ಅಡ್ವಾಣಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಜೂನ್‌

ಎಲ್‌.ಕೆ.ಅಡ್ವಾಣಿ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು: ಆಸ್ಪತ್ರೆಗೆ ದಾಖಲು Read More »

ಮಂಗಳೂರು: ಕಟ್ಟಡ ಕಾಮಗಾರಿ ವೇಳೆ ಅವಘಡ ಪ್ರಕರಣ| ಬಿಹಾರ ಮೂಲದ ಓರ್ವ ಸಾವು, ಮತ್ತೊಬ್ಬ ಗಂಭೀರ| ಮ.ನ ಪಾಲಿಕೆಯಿಂದ ನಗರದಾದ್ಯಂತ ಕಾಮಗಾರಿ ನಿಷೇಧಿಸಿ ಆದೇಶ

ಸಮಗ್ರ ನ್ಯೂಸ್: ಮಂಗಳೂರು ನಗರದ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದ ತಳಪಾಯಕ್ಕೆ ತೆಗೆದ ಗುಂಡಿಯ ಪಕ್ಕದ ಮಣ್ಣು ಬುಧವಾರ ಮಧ್ಯಾಹ್ನ ಕುಸಿದು, ಕಾರ್ಮಿಕರಿಬ್ಬರು ಅದರಡಿ ಸಿಲುಕಿದ್ದರು.‌ ಅವರಲ್ಲಿ ಒಬ್ಬ ಕಾರ್ಮಿಕನನ್ನು ರಕ್ಷಿಸಲಾಗಿದೆ. ಇನ್ನೊಬ್ಬನ ರಕ್ಷಣಾ ಕಾರ್ಯಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌), ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಏಳು ಗಂಟೆಗಳ ಪ್ರಯತ್ನದ ಬಳಿಕ ಇನ್ನೊಬ್ಬ ಕಾರ್ಮಿಕನ ದೇಹವನ್ನು ಮಣ್ಣಿನಡಿಯಿಂದ ರಾತ್ರಿ 7.30ರ ಸುಮಾರಿಗೆ ಹೊರತೆಗೆಯಲಾಯಿತು. ಬಿಹಾರದ ರೋಹ್ಟಾಸ್‌ ಜಿಲ್ಲೆಯ

ಮಂಗಳೂರು: ಕಟ್ಟಡ ಕಾಮಗಾರಿ ವೇಳೆ ಅವಘಡ ಪ್ರಕರಣ| ಬಿಹಾರ ಮೂಲದ ಓರ್ವ ಸಾವು, ಮತ್ತೊಬ್ಬ ಗಂಭೀರ| ಮ.ನ ಪಾಲಿಕೆಯಿಂದ ನಗರದಾದ್ಯಂತ ಕಾಮಗಾರಿ ನಿಷೇಧಿಸಿ ಆದೇಶ Read More »

ಬೆಳ್ತಂಗಡಿ:‌ಮುಂಗಾರು ಮಳೆಯಬ್ಬರ ಹಿನ್ನೆಲೆ| ಗಡಾಯಿಕಲ್ಲು ಸೇರಿ ಹಲವು ಪ್ರವಾಸಿತಾಣ, ಜಲಪಾತ ವೀಕ್ಷಣೆಗೆ ನಿರ್ಬಂಧ

ಸಮಗ್ರ ನ್ಯೂಸ್: ಕರಾವಳಿ ಭಾಗದಲ್ಲಿ ವರುಣನ ಆರ್ಭಟ ಜೋರಾಗಿದ್ದು ಜಲಪಾತಗಳ ವೀಕ್ಷಣೆಗೆ ಹೆಚ್ಚಿನ ಪ್ರವಾಸಿಗರು ಬರುವ ಸಾಧ್ಯತೆ ಇದ್ದು ಪ್ರವಾಸಿಗರು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ತಾತ್ಕಾಲಿಕವಾಗಿ ಜಲಪಾತಗಳಿಗೆ ಹಾಗೂ ನರಸಿಂಹಗಡ (ಗಡಾಯಿಕಲ್ಲು) ಗೆ ಪ್ರವೇಶ ನಿರ್ಬಂಧಿಸಿ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಬೆಳ್ತಂಗಡಿ, ಕುದುರೆಮುಖ, ಸೋಮೇಶ್ವರ, ಆಗುಂಬೆ, ಸಿದ್ದಾಪುರ, ಕೊಲ್ಲೂರು ಕೆರೆಕಟ್ಟೆ ಮತ್ತು ಕಾರ್ಕಳ ಈ ವನ್ಯಜೀವಿ ವಲಯಗಳ ಅರಣ್ಯ ಪ್ರದೇಶಗಳಲ್ಲಿ ಬರುವ ಅರಶಿನಗುಂಡಿ, ಕೂಡ್ಲು, ಬರ್ಕಳ, ಹಿಡ್ಡು ಮನೆ,

ಬೆಳ್ತಂಗಡಿ:‌ಮುಂಗಾರು ಮಳೆಯಬ್ಬರ ಹಿನ್ನೆಲೆ| ಗಡಾಯಿಕಲ್ಲು ಸೇರಿ ಹಲವು ಪ್ರವಾಸಿತಾಣ, ಜಲಪಾತ ವೀಕ್ಷಣೆಗೆ ನಿರ್ಬಂಧ Read More »

ಹಾಸನ ಪೆನ್ ಡ್ರೈವ್ ಪ್ರಕರಣ| ನಾಲ್ಕು ತಿಂಗಳಿಗೊಮ್ಮೆ HIV ಪರೀಕ್ಷೆ ಮಾಡ್ತಿದ್ರಂತೆ ಪ್ರಜ್ವಲ್

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಹಾಸನದ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್‌ ಪ್ರಕರಣವು ಬಗೆದಷ್ಟು ಆಳಕ್ಕೆ ಹೋಗುತ್ತಿದ್ದು ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ, ಪ್ರತೀ 4 ತಿಂಗಳಿಗೊಮ್ಮೆ ಎಚ್‌ಐವಿ ಪರೀಕ್ಷೆಗೆ ಒಳಪಡುತ್ತಿದ್ದರು ಎಂಬ ಸಂಗತಿ ತನಿಖೆಯಿಂದ ಹೊರಬಿದ್ದಿದೆ ಎನ್ನಲಾಗಿದೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್‌ ರೇವಣ್ಣ ಅವರ ಹಿಂದಿನ ಚಟುವಟಿಕೆ ಬಗ್ಗೆ ಕೆದಕಿದಾಗ ಈ ವಿಚಾರ ಮುನ್ನೆಲೆಗೆ ಬಂದಿದೆ. ಪ್ರಜ್ವಲ್‌ ವಿರುದ್ಧ ಸಾಲು-ಸಾಲು ದೂರುಗಳು ದಾಖಲಾಗುತ್ತಿದ್ದಂತೆ ಅವರದ್ದು

ಹಾಸನ ಪೆನ್ ಡ್ರೈವ್ ಪ್ರಕರಣ| ನಾಲ್ಕು ತಿಂಗಳಿಗೊಮ್ಮೆ HIV ಪರೀಕ್ಷೆ ಮಾಡ್ತಿದ್ರಂತೆ ಪ್ರಜ್ವಲ್ Read More »

ಚಾಲಕ ರಹಿತ ಮೆಟ್ರೋ/ ಸಿಗ್ನಲಿಂಗ್ ಪರೀಕ್ಷೆ ಆರಂಭ

ಸಮಗ್ರ ನ್ಯೂಸ್‌: ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ‘ಹಳದಿ’ ಮಾರ್ಗದಲ್ಲಿ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿದ್ದ ಚಾಲಕ ರಹಿತ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದ್ದು, ಸಿಗ್ನಲಿಂಗ್ ಪರೀಕ್ಷೆ ಆರಂಭವಾಗಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ. ಪ್ರಸ್ತುತ ಆರಂಭವಾದ ಸಿಗ್ನಲಿಂಗ್‌ ತಪಾಸಣೆ ಮುಗಿಯುತ್ತಿದ್ದಂತೆ ದೂರಸಂಪರ್ಕ ಹಾಗೂ ವಿದ್ಯುತ್ ಪರೀಕ್ಷೆಗಳು ನಡೆಯಲಿದೆ. ಹಳದಿ ಮಾರ್ಗದಲ್ಲಿ ಒಟ್ಟು 16 ಮೆಟ್ರೋ ಸ್ಟೇಷನ್‌ಗಳು ಇದ್ದು, ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರವನ್ನು ಸಂಪರ್ಕಿಸಲಿದೆ. 18.82 ಕಿ.ಮೀ. ಉದ್ದದ ಈ ಮೆಟ್ರೋ ಮಾರ್ಗದಲ್ಲಿ ಹೊಸ ಮಾದರಿಯ ಚಾಲಕ ರಹಿತ

ಚಾಲಕ ರಹಿತ ಮೆಟ್ರೋ/ ಸಿಗ್ನಲಿಂಗ್ ಪರೀಕ್ಷೆ ಆರಂಭ Read More »