Editor

ಮಂಗಳೂರು: ನಗರದಲ್ಲಿ ಸಕ್ರಿಯಗೊಂಡ ‘ಚಡ್ಡಿ ಗ್ಯಾಂಗ್’| ರಾತ್ರಿ ವೇಳೆ ಮನೆ ದರೋಡೆಗೈದ ಕಳ್ಳರು

ಸಮಗ್ರ ನ್ಯೂಸ್: ಮಂಗಳೂರು ನಗರದ‌ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆ ಕಣಿಯ ಮನೆಯೊಂದರಲ್ಲಿ ಸೋಮವಾರದಂದು ರಾತ್ರಿ ಮನೆಮಂದಿ ಮಲಗಿದ್ದಾಗ ಕಿಟಕಿ ಮುರಿದು ಚಿನ್ನಾಭರಣ ಕಳವುಗೈದ ಘಟನೆ ನಡೆದಿದೆ. ಚಿನ್ನಾಭರಣದೊಂದಿಗೆ ಕಳ್ಳರು ಕಾರನ್ನು ಕೂಡ ಕಳವು ಮಾಡಿದ್ದಾರೆಂದು ತಿಳಿದುಬಂದಿದೆ. ಕೋಡಿಕಲ್ ಬಳಿಯಲ್ಲಿ ಕಳೆದ ಶನಿವಾರ ಕಳ್ಳತನ ನಡೆದಿದ್ದು, ಇದೇ ಚಡ್ಡಿಗ್ಯಾಂಗ್ ಆ ಕೃತ್ಯ ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.‌ಅದೇ ತಂಡ ಕೋಟೆಕಣಿಯಲ್ಲಿಯೂ ಕೃತ್ಯ ಎಸಗಿದೆ ಎಂದು ಅಂದಾಜಿಸಲಾಗಿದೆ.

ಮಂಗಳೂರು: ನಗರದಲ್ಲಿ ಸಕ್ರಿಯಗೊಂಡ ‘ಚಡ್ಡಿ ಗ್ಯಾಂಗ್’| ರಾತ್ರಿ ವೇಳೆ ಮನೆ ದರೋಡೆಗೈದ ಕಳ್ಳರು Read More »

ಮಣಿಪಾಲ: ಸಿಎ ವಿದ್ಯಾರ್ಥಿನಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಸಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆರ್ಗಾ ಗ್ರಾಮದಲ್ಲಿ ಜು.5ರಂದು ಸಂಜೆ ವೇಳೆ ನಡೆದಿದೆ. ಮೃತರನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಂದೂರು ಗ್ರಾಮದ ಮಹೇಶ್ ಎಂಬವರ ಮಗಳು ಶ್ರೀನಿಧಿ(20) ಎಂದು ಗುರುತಿಸಲಾಗಿದೆ. ಮಂಗಳೂರು ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಸಿಎ ವ್ಯಾಸಂಗ ಮಾಡುತ್ತಿದ್ದ ಶ್ರೀನಿಧಿ, ಮನೆಯಲ್ಲಿ ಯಾರು ಇಲ್ಲದ ವೇಳೆ ಯಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆ ಹೊಂದಿ ಬಾಡಿಗೆ ಮನೆಯ ರೂಮ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ

ಮಣಿಪಾಲ: ಸಿಎ ವಿದ್ಯಾರ್ಥಿನಿ ಆತ್ಮಹತ್ಯೆ Read More »

ಖ್ಯಾತ ಗಾಯಕಿ ಉಷಾ‌ ಉತ್ತುಪ್ ಗೆ ಪತಿ ವಿಯೋಗ

ಸಮಗ್ರ ನ್ಯೂಸ್: ಖ್ಯಾತ ಗಾಯಕಿ, ಇಂಡಿಯನ್‌ ಪಾಪ್‌ ಐಕಾನ್‌ ಉಷಾ ಉತ್ತುಪ್‌ ಅವರ ಪತಿ ಹೃದಯಸ್ತಂಭನದಿಂದ ನಿಧನರಾಗಿದ್ದಾರೆ. ಸೋಮವಾರ(ಜು.8ರಂದು) ಕೋಲ್ಕತ್ತಾದಲ್ಲಿ ಜಾನಿ ಚಾಕೋ ಉತ್ತುಪ್ (78) ನಿಧನ ಹೊಂದಿದ್ದಾರೆ. ತನ್ನ ನಿವಾಸದಲ್ಲಿ ಟಿವಿ ನೋಡುತ್ತಿರುವ ವೇಳೆ ಏಕಾಏಕಿ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಹಠಾತ್ ಹೃದಯಸ್ತಂಭನದಿಂದ ಅವರು ನಿಧನ ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.

ಖ್ಯಾತ ಗಾಯಕಿ ಉಷಾ‌ ಉತ್ತುಪ್ ಗೆ ಪತಿ ವಿಯೋಗ Read More »

ಜಮ್ಮು: ಸೇನೆಯ ಗುರಿಯಾಗಿಸಿ ಉಗ್ರರ ದಾಳಿ| ಗ್ರೆನೇಡ್ ಸ್ಪೋಟಕ್ಕೆ ನಾಲ್ವರು ಯೋಧರು ಹುತಾತ್ಮ

ಸಮಗ್ರ ನ್ಯೂಸ್: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ಹೆಚ್ಚಾಗುತ್ತಿದೆ. ಕಳೆದೆರಡು ತಿಂಗಳಲ್ಲಿ ಸೇನೆ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಇದೀಗ ಕಥುವಾ ಬಳಿ ಭಾರತೀಯ ಸೇನಾ ವಾಹನ ಗುರಿಯಾಗಿ ಉಗ್ರರು ಭೀಕರ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ನಾಲ್ವರು ಯೋಧರು ಸ್ಥಳದಲ್ಲೇ ಹುತಾತ್ಮರಾಗಿದ್ದಾರೆ. ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೇನ ಪ್ರತಿ ದಾಳಿ ನಡೆಸುತ್ತಿದ್ದಂತೆ ಉಗ್ರರು ಕಾಡಿನೊಳಗೆ ಪರಾರಿಯಾಗಿದ್ದಾರೆ. ಈ ದಾಳಿಯ ಹೊಣೆಯನ್ನು ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಇಂದು ಮಧ್ಯಾಹ್ನ 3.30ರ ವೇಳೆಗೆ

ಜಮ್ಮು: ಸೇನೆಯ ಗುರಿಯಾಗಿಸಿ ಉಗ್ರರ ದಾಳಿ| ಗ್ರೆನೇಡ್ ಸ್ಪೋಟಕ್ಕೆ ನಾಲ್ವರು ಯೋಧರು ಹುತಾತ್ಮ Read More »

ಹೆಂಡತಿ ಜೊತೆ ಸರಸವಾಡಿದ ಗಂಡನಿಗೆ 7 ವರ್ಷ ಜೈಲು!!

ಸಮಗ್ರ ನ್ಯೂಸ್: ಹೆಂಡತಿ ಜೊತೆ ಸೆಕ್ಸ್ ಮಾಡಿದ ಗಂಡನಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಬರೇಲಿ ವಿಚಾರಣಾ ನ್ಯಾಯಾಲಯದ ಆದೇಶ ಬುಧವಾರ ಪ್ರಕಟ ಮಾಡಿದೆ. 2015ರಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ (ಈಗ 22 ವರ್ಷ) ಅತ್ಯಾಚಾರ ಎಸಗಿದ 30 ವರ್ಷದ ವ್ಯಕ್ತಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆ ಯುವತಿ 9 ವರ್ಷಗಳ ಹಿಂದೆ ಆತನನ್ನು ಪ್ರೀತಿಸಿ, ಆತನೊಂದಿಗೆ ಓಡಿಹೋಗಿ ವಿವಾಹವಾಗಿದ್ದಳು. ಆಗ ಆಕೆಗೆ ಇನ್ನೂ 18 ವರ್ಷ ತುಂಬಿರಲಿಲ್ಲ. ಮದುವೆಯಾದ

ಹೆಂಡತಿ ಜೊತೆ ಸರಸವಾಡಿದ ಗಂಡನಿಗೆ 7 ವರ್ಷ ಜೈಲು!! Read More »

ಬೆಂಗಳೂರು: ಕಾಲೇಜು ಯುವತಿಯರಿಗೆ ಮರ್ಮಾಂಗ ತೋರಿ ವಿಕೃತಿ ಮೆರೆದಾತನ ಅರೆಸ್ಟ್ ‌ಮಾಡಿದ ಪೊಲೀಸರು

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಕಾಲೇಜು ಯುವತಿಯರಿಗೆ ಮರ್ಮಾಂಗ ತೋರಿಸಿ ವಿಕೃತಿ ಮೆರೆದಿದ್ದ ಯುವಕನನ್ನು ಬೆಂಗಳೂರಿನ ವಿವಿಪುರಂ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅಯೂಬ್ ಉರ್ ರೆಹಮಾನ್(48) ಬಂಧಿತ ವಿಕೃತ ಕಾಮಿ. ನಗರದ ವಿವಿ ಪುರಂನಲ್ಲಿರುವ ಖಾಸಗಿ ಕಾಲೇಜೊಂದರ ಬಳಿ ಜು. 8ರಂದು ನಿಂತಿದ್ದ ಯುವತಿಯಿರಿಗೆ ತನ್ನ ಮರ್ಮಂಗವನ್ನು ತೋರಿಸಿದ್ದ ಕಾಮುಕ ವ್ಯಕ್ತಿಯೊಬ್ಬ ಪ್ಯಾಂಟ್ ಜಿಪ್ ತೆಗೆದು ಮರ್ಮಾಂಗ ತೋರಿಸಿ ಪರಾರಿಯಾಗಿದ್ದ. ಆತನನ್ನು ಇದೀಗ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ದ್ವಿಚಕ್ರ ವಾಹನದಲ್ಲಿ ಬರುವ ಕಾಮುಕ ಉರ್ ರೆಹಮಾನ್,

ಬೆಂಗಳೂರು: ಕಾಲೇಜು ಯುವತಿಯರಿಗೆ ಮರ್ಮಾಂಗ ತೋರಿ ವಿಕೃತಿ ಮೆರೆದಾತನ ಅರೆಸ್ಟ್ ‌ಮಾಡಿದ ಪೊಲೀಸರು Read More »

ಉಡುಪಿ: ನೆರೆನೀರಲ್ಲಿ ಕೊಚ್ಚಿ ಹೋದ ಕಾರು| ಪ್ರಯಾಣಿಕರು ಜಸ್ಟ್ ಮಿಸ್

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯಾದ್ಯಾಂತ ಮಳೆ ಆರ್ಭಟ ಜೋರಾಗಿದ್ದು, ಕನ್ನರ್ಪಾಡಿಯಲ್ಲಿ ಕಾರೊಂದು ರಸ್ತೆಯಿಂದ ಕೊಚ್ಚಿಹೋಗಿ, ಮೂವರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಕಾರೊಂದು ಕನ್ನರ್ಪಾಡಿಯಲ್ಲಿ ಮಳೆ ನೀರು ಸಾಗುವ ತೋಡಿನ ಸಮೀಪ ಸಾಗುತ್ತಿದ್ದ ವೇಳೆ, ಏಕಾಏಕಿ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿದ್ದು ಮೂವರು ಪ್ರಯಾಣಿಕರು‌ ಕಾರಿನ ಬಾಗಿಲು ಹೊಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕದಳ‌ ಸಿಬಂದಿ ಕೊಚ್ಚಿಹೋದ ಕಾರನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಉಡುಪಿ ನಗರದ ಸುತ್ತಮುತ್ತಲಿನ ಪ್ರದೇಶಗಳಾದ ಗುಂಡಿಬೈಲು, ಕಲ್ಸಂಕ, ಮಠದಬೆಟ್ಟು ಜಲಾವೃತವಾಗಿವೆ. ಅಗ್ನಿಶಾಮಕ ದಳ ನಿರಂತರ ಕಾರ್ಯಚರಣೆ ನಡೆಸುತ್ತಿದ್ದು

ಉಡುಪಿ: ನೆರೆನೀರಲ್ಲಿ ಕೊಚ್ಚಿ ಹೋದ ಕಾರು| ಪ್ರಯಾಣಿಕರು ಜಸ್ಟ್ ಮಿಸ್ Read More »

ಸುಳ್ಯ: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಚಾಂದಿನಿ| ‘ನೆರವಾಗಿ ಇಲ್ಲ ದಯಾಮರಣ ಕರುಣಿಸಿ’ ಎಂದು ಈಮೇಲ್

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ನಾವೂರು ಗ್ರಾಮದ ಬಡ ಕುಟುಂಬದ ಚಾಂದಿನಿ ಜಿ.ಡಿ. (33) ಎಂಬುವರು ‘ಹೈಪರ್‌ ಐಜಿಇ ಸಿಂಡ್ರೋಮ್‌’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ವೆಚ್ಚ ಭರಿಸಲು ಸರ್ಕಾರದ ನೆರವು ಕೋರಿದ್ದಾರೆ. ‘ಚಿಕಿತ್ಸೆಗೆ ನೆರವು ನೀಡಲು ಸಾಧ್ಯವಾಗದಿದ್ದರೆ ದಯಾಮರಣವನ್ನಾದರೂ ನೀಡಿ’ ಎಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಅವರಿಗೆ ಇ- ಮೇಲ್‌ ಕಳುಹಿಸಿದ್ದಾರೆ. ‘ನನ್ನ ಕಾಯಿಲೆಗೆ ಊರಿನಲ್ಲಿ ಚಿಕಿತ್ಸೆ ಪಡೆದರೂ ಪ್ರಯೋಜನವಾಗಿರಲಿಲ್ಲ. ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್‌ನ

ಸುಳ್ಯ: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಚಾಂದಿನಿ| ‘ನೆರವಾಗಿ ಇಲ್ಲ ದಯಾಮರಣ ಕರುಣಿಸಿ’ ಎಂದು ಈಮೇಲ್ Read More »

ರೆಡ್ ಅಲರ್ಟ್ ಹಿನ್ನೆಲೆ|ಜುಲೈ 9ರಂದು ದ.ಕ ಜಿಲ್ಲೆಯಲ್ಲಿ ಶಾಲೆ-ಪಿಯು ಕಾಲೇಜಿಗೆ ರಜೆ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯಲ್ಲಿ ಜು. 9ರಂದು ರೆಡ್ ಅಲರ್ಟ್ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಉಡುಪಿ ಜಿಲ್ಲಾಧಿಕಾರಿ ಮುಲ್ಲೈ‌ ಮುಗಿಲನ್ ಆದೇಶಿಸಿದ್ದಾರೆ. ಮಳೆಯಿಂದಾಗಿ ತಗ್ಗುಪ್ರದೇಶಗಳು ಜಲಾವೃತವಾಗಿದ್ದು, ಅಲ್ಲಲ್ಲಿ ಹಾನಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೇಂದ್ರಸ್ಥಾನ ಬಿಡದಂತೆ ಆದೇಶಿಸಲಾಗಿದ್ದು, ನಾಗರಿಕರು ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ.

ರೆಡ್ ಅಲರ್ಟ್ ಹಿನ್ನೆಲೆ|ಜುಲೈ 9ರಂದು ದ.ಕ ಜಿಲ್ಲೆಯಲ್ಲಿ ಶಾಲೆ-ಪಿಯು ಕಾಲೇಜಿಗೆ ರಜೆ Read More »

ಕಲಬುರಗಿ: ರಾತ್ರಿ ಪ್ರವಚನ ನೀಡಿದ ವಿರಕ್ತ ಮಠದ ಸ್ವಾಮೀಜಿ ಮುಂಜಾನೆ ಸಾವು!

ಸಮಗ್ರ ನ್ಯೂಸ್: ರಾತ್ರಿ ಪ್ರವಚನ ನೀಡಿದ್ದ ಸ್ವಾಮೀಜಿ ಬೆಳಗಾಗುವುದರೊಳಗೆ ಹೃದಯಾಘಾತಕ್ಕೆ ಬಲಿಯಾಗಿರುವ ದುಖಃಕರ ಘಟನೆ ಕಲಬುರಗಿಯ ವಿರಕ್ತ ಮಠದಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ರಠಕಲ್ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು (35) ವಿಧಿವಶರಾಗಿದ್ದಾರೆ. ನಸುಕಿನ ಜಾವ ತೀವ್ರ ಹೃದಯಾಘಾತಕ್ಕೊಳಗಾಗಿ ಮಠದಲ್ಲೇ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ಪ್ರಾಣ ಬಿಟ್ಟಿದ್ದಾರೆ. ಇಂದು ಸಂಜೆ 5 ಗಂಟೆಗೆ ರಟಕಲ್ ಗ್ರಾಮದಲ್ಲಿ ಧಾರ್ಮಿಕ ವಿಧಿ ವಿಧಾನದ ಪ್ರಕಾರ ಶ್ರೀಗಳ ಅಂತ್ಯಕ್ರಿಯೆ ನಡೆದಿದೆ. ಜು.7ರಂದು ರಟಕಲ್ ಗ್ರಾಮದಲ್ಲಿ ವಚನ ಸಂಗಮ

ಕಲಬುರಗಿ: ರಾತ್ರಿ ಪ್ರವಚನ ನೀಡಿದ ವಿರಕ್ತ ಮಠದ ಸ್ವಾಮೀಜಿ ಮುಂಜಾನೆ ಸಾವು! Read More »