Editor

ಮೊತ್ತ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ ಬಿ.ವಿ ನಾಗರತ್ನ

ನವದೆಹಲಿ: 2027 ರಲ್ಲಿ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗುವ ಮೊದಲ ಮಹಿಳೆಯಾಗಲಿದ್ದಾರೆ ಎನ್ನಲಾಗಿದೆ. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು 2027 ರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗುವ ಮೊದಲ ಮಹಿಳೆಯಾಗಿದ್ದಾರೆ. ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದಲ್ಲಿ, ಸುಪ್ರೀಂ ಕೋರ್ಟ್ ಕೊಲಿಜಿಯಂ ಒಂಬತ್ತು ನ್ಯಾಯಾಧೀಶರ ಹೆಸರನ್ನು ಉನ್ನತ ನ್ಯಾಯಾಲಯದ ಮುಖ್ಯಮೂರ್ತಿಯಾಗಿ ನೇಮಕ ಮಾಡಲು ಶಿಫಾರಸು ಮಾಡಿದೆ. ಪ್ರಸ್ತುತ ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರನ್ನು ಸಹ ಕೊಲಿಜಿಯಂ ಶಿಫಾರಸು ಮಾಡಿದೆ. ನ್ಯಾಯಮೂರ್ತಿ ಹಿಮಾ […]

ಮೊತ್ತ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ ಬಿ.ವಿ ನಾಗರತ್ನ Read More »

ಎಕ್ಕದ ಗಿಡದಲ್ಲಿವೆ ಹಲವು ಔಷಧೀಯ ಗುಣಗಳು.

ಹಳ್ಳಿಯ ಕಡೆ ಎಕ್ಕೆಯ ಗಿಡಗಳನ್ನು ಸರ್ವೇಸಾಮಾನ್ಯವಾಗಿ ಕಾಣಬಹುದಾಗಿದೆ. ಎಕ್ಕೆಯ ಗಿಡಗಳಲ್ಲಿ ಹಲವಾರು ಔಷದಿಯ ಗುಣಗಳು ಇವೆ. ಎಕ್ಕೆಯ ಗಿಡದ ಹೂವುಗಳು ಪೂಜೆಗೆ ಶ್ರೇಷ್ಠವಾದ ಹೂವು. ಎಕ್ಕೆಯ ಗಿಡದ ಅನುಕೂಲವನ್ನು ಹಳ್ಳಿಯ ಕಡೆ ಜನರು ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ಎಕ್ಕೆಯ ಗಿಡದ ಉಪಯೋಗಗಳನ್ನು ನೋಡೋಣ. ಎಕ್ಕೆ ಎಲೆ ಹಲವು ಸಮಸ್ಯೆಗಳನ್ನು ನಿವಾರಿಸುವಲ್ಲಿ ಹೆಚ್ಚು ಸಹಕಾರಿಯಾಗಿದೆ, ಮನೆ ಮುಂದೆ ಎಕ್ಕೆ ಗಿಡ ಇರಬೇಕು ಎಂಬುದಾಗಿ ಹಿರಿಯರು ಹೇಳುತ್ತಿರುತ್ತಾರೆ, ಅದು ಯಾಕೆ ಅನ್ನೋದು ಇದನ್ನು ತಿಳಿದ ಮೇಲೆ ಗೊತ್ತಾಗುತ್ತದೆ. ಎಕ್ಕೆಯಲ್ಲಿ ಎಷ್ಟೊಂದು ಲಾಭದಾಯಕ

ಎಕ್ಕದ ಗಿಡದಲ್ಲಿವೆ ಹಲವು ಔಷಧೀಯ ಗುಣಗಳು. Read More »

ಆರೋಗ್ಯಕ್ಕೂ ದಾಸವಾಳ‌ಕ್ಕೂ ಇದೆ ನಂಟು| ಇಲ್ಲಿ ಓದಿರಿ

ದಾಸವಾಳ ಅನ್ನೋದು ಕೇವಲ ಪೂಜೆ ಮತ್ತು ಅಲಂಕಾರಕ್ಕೆ ಮಾತ್ರವಲ್ಲ ಇದರಲ್ಲಿ ಹಲವು ರೀತಿಯಾದ ಆರೋಗ್ಯದ ಲಾಭಗಳಿವೆ ನಿಮಗೆ ಎಲ್ಲರಿಗೂ ಗೊತ್ತಿರುವ ಹಾಗೆ ಕೂದಲಿಗೆ ದಾಸವಾಳ ತುಂಬ ಉಪಯೋಗ ಅಂತ ಹೇಳುತ್ತಾರೆ ಆದರೆ ಇದು ಕೇವಲ ಕೂದಲಿಗೆ ಮಾತ್ರವಲ್ಲ ಇನ್ನು ಹಲವು ದೊಡ್ಡ ದೊಡ್ಡ ರೋಗಗಳನ್ನು ಹೋಗಲಾಡಿಸುತ್ತೆ, ಹಾಗಿದ್ದರೆ ನಿಮ್ಮ ಮನೆಯ ಹತ್ತಿರ ಇರುವ ದಾಸವಾಳ ಯಾವೆಲ್ಲ ರೋಗಗಳನ್ನು ಹೋಗಲಾಡಿಸುತ್ತೆ ಅನ್ನೋದು ಇಲ್ಲಿದೆ ನೋಡಿ. ಸಾಮಾನ್ಯವಾಗಿ ದಾಸವಾಳದಲ್ಲಿ ಹಲವು ಬಗೆಯ ದಾಸವಾಳಗಳು ಇವೆ ಅದೇ ರೀತಿ ಈ ಬಿಳಿ

ಆರೋಗ್ಯಕ್ಕೂ ದಾಸವಾಳ‌ಕ್ಕೂ ಇದೆ ನಂಟು| ಇಲ್ಲಿ ಓದಿರಿ Read More »

ಅಪ್ಘಾನ್ ಇನ್ನೂ ನಮ್ಮ ಕೈಯಲ್ಲಿದೆ| ತಾಲಿಬಾನ್ ಗೆ ಮಣಿಯಲ್ಲ – ಉಪಾಧ್ಯಕ್ಷ ಸಾಲೆಹ್

ಕಾಬೂಲ್: ತಾಲಿಬಾಲಿಗಳು ರಾಜಧಾನಿ ಕಾಬೂಲ್ ಸೇರಿದಂತೆ ಬಹುತೇಕ ಅಫ್ಘಾನಿಸ್ತಾನವನ್ನೇ ವಶಕ್ಕೆ ಪಡೆದುಕೊಂಡಿದೆ. ಕಾಬೂಲ್​ನಿಂದ ಅಲ್ಲಿನ ಅಧ್ಯಕ್ಷ ಅಶ್ರಫ್ ಘನಿ ಸೇರಿದಂತೆ ಬಹುತೇಕ ನಾಯಕರು ಪಲಾಯನಗೈದಿದ್ದಾರೆ. ಅಶ್ರಫ್ ಘನಿ ದೇಶವನ್ನೇ ತೊರೆದಿದ್ದಾರೆ. ಇದೆಲ್ಲದರ ಬೆನ್ನಲ್ಲೇ ತಾಲಿಬಾನಿಗಳು ಸರ್ಕಾರ ರಚಿಸಲು ಮುಂದಾಗಿದ್ದಾರೆ. ಹೀಗಿರುವಾಗಲೂ ಅಫ್ಘಾನಿಸ್ತಾನದ ಉಪಾಧ್ಯಕ್ಷ ಅಮ್ರುಲ್ಲಾಹ್ ಸಾಲೆಹ್​ ಈಗಲೂ ಸರ್ಕಾರ ನಮ್ಮ ಕೈನಲ್ಲಿದೆ ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಅಫ್ಘಾನಿಸ್ತಾನದ ಸಂವಿಧಾನದ ಪ್ರಕಾರ ಅಧ್ಯಕ್ಷರ ಗೈರು, ಪಲಾಯನ, ರಾಜೀನಾಮೆ ಅಥವಾ ಸಾವಿನ ನಂತರ ಉಪಾಧ್ಯಕ್ಷರು ಅಧ್ಯಕ್ಷರಾಗಿ

ಅಪ್ಘಾನ್ ಇನ್ನೂ ನಮ್ಮ ಕೈಯಲ್ಲಿದೆ| ತಾಲಿಬಾನ್ ಗೆ ಮಣಿಯಲ್ಲ – ಉಪಾಧ್ಯಕ್ಷ ಸಾಲೆಹ್ Read More »

ಕರ್ನಾಟಕಕ್ಕೆ ಆಗಮಿಸುವ ಕೇರಳದ ರೋಗಿಗಳನ್ನು ಗಡಿಯಲ್ಲಿ ತಡೆಯುವಂತಿಲ್ಲ- ಕೇರಳ ಹೈಕೋರ್ಟ್ ಆದೇಶ

ಕಾಸರಗೋಡು: ಕರ್ನಾಟಕದ ಆಸ್ಪತ್ರೆಗಳಿಗೆ ತೆರಳುವ ರೋಗಿಗಳನ್ನು ಗಡಿಯಲ್ಲಿ ತಡೆಯದಂತೆ ಕೇರಳ ಹೈಕೋರ್ಟ್ ಕರ್ನಾಟಕಕ್ಕೆ ಆದೇಶ ನೀಡಿದೆ. ಈ ಕುರಿತು ಮಂಗಳವಾರ ಮಧ್ಯಂತರ ಆದೇಶ ನೀಡಿರುವ ಹೈಕೋರ್ಟ್ ಅಗತ್ಯ ದಾಖಲೆಗಳು ಇದ್ದಲ್ಲಿ ಆಸ್ಪತ್ರೆಗೆ ತೆರಳುವ ವರನ್ನು ತಡೆಯುವಂತಿಲ್ಲ. ಅಂಬ್ಯುಲೆನ್ಸ್, ಖಾಸಗಿ ವಾಹನಗಳಲ್ಲಿ ತೆರಳುವ ರೋಗಿಗಳನ್ನು ತಡೆಯಬಾರದು ಎಂದು ನ್ಯಾಯಾಲಯ ಆದೇಶಿಸಿದೆ. ಪ್ರಕರಣವನ್ನು ಆಗಸ್ಟ್ 25 ರಂದು ಮತ್ತೆ ವಿಚಾರಣೆಗೆ ಬರಲಿದೆ. ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಆರ್. ಜಯಾನಂದ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ

ಕರ್ನಾಟಕಕ್ಕೆ ಆಗಮಿಸುವ ಕೇರಳದ ರೋಗಿಗಳನ್ನು ಗಡಿಯಲ್ಲಿ ತಡೆಯುವಂತಿಲ್ಲ- ಕೇರಳ ಹೈಕೋರ್ಟ್ ಆದೇಶ Read More »

ಭಯ, ಆತಂಕಕ್ಕೆ ಬಲಿಯಾದ ದಂಪತಿ| ವಿಧಿಯೇ….ಈ ಸಾವು ನ್ಯಾಯವೇ…?

ಮಂಗಳೂರು: ಕೊರೊನಾ ಭಯದಲ್ಲಿ ಸಾವಿಗೆ ಶರಣಾಗಿರುವ ದಂಪತಿಯ ಪ್ರಕರಣ ಕರಾವಳಿಯಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಕೊರೊನಾ ಸೋಂಕಿನ ಎರಡನೇ ಅಲೆಯಲ್ಲಿ ಉಸಿರಾಟದ ತೊಂದರೆ, ಬ್ಲಾಕ್ ಫಂಗಸ್ ಕಂಡುಬಂದಿದ್ದರೂ, ಮೂರೇ ತಿಂಗಳಲ್ಲಿ ಸೋಂಕಿನ ತೀವ್ರತೆ ಕಡಿಮೆಯಾಗಿತ್ತು. ಸೋಂಕು ಕಡಿಮೆಗೊಂಡು ಜನಜೀವನ ಸಹಜಸ್ಥಿತಿಗೆ ಬರುತ್ತಿರುವಾಗಲೇ ದಂಪತಿ ಅನ್ಯಾಯವಾಗಿ ಸಾವು ಕಂಡಿರುವುದು ಕರಾವಳಿ‌ ಮುಮ್ಮಲ ಮರುಗುವಂತೆ ಮಾಡಿದೆ. ಪಡುಬಿದ್ರಿ ಮೂಲದ ರಮೇಶ್ ಸುವರ್ಣ (45) ಉದ್ಯಮಿಯಾಗಿದ್ದರೂ ಕೊರೊನಾ ಕಾರಣದಿಂದ ಅವರಿಗೇನೂ ದೊಡ್ಡ ನಷ್ಟ ಆಗಿರಲಿಲ್ಲ. ಮದುವೆಯಾಗಿ 21 ವರ್ಷ ಆಗಿದ್ದರೂ ಮಕ್ಕಳಾಗಿಲ್ಲ

ಭಯ, ಆತಂಕಕ್ಕೆ ಬಲಿಯಾದ ದಂಪತಿ| ವಿಧಿಯೇ….ಈ ಸಾವು ನ್ಯಾಯವೇ…? Read More »

ದಕ್ಷಿಣ ಕನ್ನಡ ಗಡಿಯಲ್ಲಿ ಆಗಸ್ಟ್ 30ರ ವರೆಗೂ ಮದ್ಯದಂಗಡಿಗಳು ಬಂದ್-ಜಿಲ್ಲಾಧಿಕಾರಿ ಆದೇಶ

ಮಂಗಳೂರು: ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಸರ್ಕಾರದ ನಿರ್ದೇಶನದಂತೆ ಕಾಲಕಾಲಕ್ಕೆ ಎಲ್ಲಾ ಅವಶ್ಯಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸದ್ಯ ಗಡಿಯಲ್ಲಿರುವ ಮದ್ಯದಂಗಡಿಗಳನ್ನು ಆಗಸ್ಟ್ 30ರ ತನಕ ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ನೀಡಿದ್ದಾರೆ. ನೆರೆಯ ಕೇರಳ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಾಸರಗೋಡು ಜಿಲ್ಲೆಯ ಸಾರ್ವಜನಿಕರು ಮದ್ಯ ಸೇವನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳ ಮದ್ಯದಂಗಡಿಗಳನ್ನೇ ಅವಲಂಭಿಸಿದ್ದು ಇದರಿಂದ ಕೋವಿಡ್ ಹರಡುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ

ದಕ್ಷಿಣ ಕನ್ನಡ ಗಡಿಯಲ್ಲಿ ಆಗಸ್ಟ್ 30ರ ವರೆಗೂ ಮದ್ಯದಂಗಡಿಗಳು ಬಂದ್-ಜಿಲ್ಲಾಧಿಕಾರಿ ಆದೇಶ Read More »

ಒಂದೆಡೆ ಸಾವರ್ಕರ್ ರಥಯಾತ್ರೆ, ಮತ್ತೊಂದೆಡೆ ಆರೋಪಿಗಳಿಗೆ ಜಾಮೀನು- ಇದೆಂಥಾ ವಿಪರ್ಯಾಸ…!?

ಪುತ್ತೂರು: ಕಬಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಾತಂತ್ರ್ಯೋತ್ಸವದಲ್ಲಿ ಸಾವರ್ಕರ್ ಫೋಟೊ ಇದ್ದ ವಾಹನವನ್ನು ತಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಮೂವರು ಆರೋಪಿಗಳಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.ಕಬಕ ಗ್ರಾಮ ಪಂಚಾಯತ್ ವತಿಯಿಂದ ನಡೆಸಲಾಗಿದ್ದ ಸ್ವರಾಜ್ಯ ರಥ ಯಾತ್ರೆಯಲ್ಲಿ ಸಾವರ್ಕರ್ ಭಾವಚಿತ್ರವನ್ನು ಅಳವಡಿಸಿರುವುದನ್ನು ಆಕ್ಷೇಪಿಸಿ ರಥ ಯಾತ್ರೆ ತಡೆದು ಪ್ರತಿಭಟನೆ ವ್ಯಕ್ತಪಡಿಸಿದ್ದರು. ಪುತ್ತೂರು ತಾಲೂಕಿನ ಕಬಕ ಗ್ರಾಮದ ವಿದ್ಯಾಪುರ ಅಜೀಜ್ (43), ಶಮೀರ್ ಮುರ (40) ಹಾಗೂ ಕೊಡಿಪ್ಪಾಡಿ ಗ್ರಾಮದ ಅಬ್ದುಲ್ ರಹಿಮಾನ್‌ ಅವರನ್ನು ಪುತ್ತೂರು ನಗರ

ಒಂದೆಡೆ ಸಾವರ್ಕರ್ ರಥಯಾತ್ರೆ, ಮತ್ತೊಂದೆಡೆ ಆರೋಪಿಗಳಿಗೆ ಜಾಮೀನು- ಇದೆಂಥಾ ವಿಪರ್ಯಾಸ…!? Read More »

ಪುತ್ತೂರು: ಮನೆಗೆ ನುಗ್ಗಿ ಒಂಟಿ ಮಹಿಳೆಗೆ ಹಲ್ಲೆ ಆರೋಪ: ಆಸ್ಪತ್ರೆಗೆ ದಾಖಲು

ಪುತ್ತೂರು: ತಡ ರಾತ್ರಿ ಯುವಕರ ತಂಡವೊಂದು ಮನೆಗೆ ಅಕ್ರಮವಾಗಿ ನುಗ್ಗಿ ಮಹಿಳೆಯೋರ್ವರಿಗೆ ಹಲ್ಲೆ ಮಾಡಿದ ಆರೋಪದ ಹಿನ್ನಲೆ ಮಹಿಳೆ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಗಾಳಿಮುಖದ ದಿ. ರಾಜು ಮಾದಿಗ ಎಂಬವರ ಪತ್ನಿ ಆಶಾ (35) ಎಂಬವರು ಸಂತ್ರೆಸ್ತೆ. ಖಾದರ್, ಮಹಮ್ನದ್, ಶಾಬೀರ್, ಶಾಪಿ, ಅಶ್ರಪ್ ಕೊಟ್ಯಾಡಿ ಪ್ರಕರಣದ ಆರೋಪಿಗಳು. `ನಾನು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದು ಆ.16ರ ರಾತ್ರಿ ಊಟಕ್ಕೆ ಕೂತ್ತಿದ್ದೆ. ಈ ವೇಳೆ ಗಾಳಿಮುಖದ ಯುವಕರು ಸೇರಿದಂತೆ ಸುಮಾರು 20 ಮಂದಿಯ ತಂಡವೊಂದು

ಪುತ್ತೂರು: ಮನೆಗೆ ನುಗ್ಗಿ ಒಂಟಿ ಮಹಿಳೆಗೆ ಹಲ್ಲೆ ಆರೋಪ: ಆಸ್ಪತ್ರೆಗೆ ದಾಖಲು Read More »

ಸುಳ್ಯ: ಅಪಘಾತಕ್ಕೀಡಾದ ಮಹಿಳೆ ಮೃತ್ಯು

ಸುಳ್ಯ: ಇಲ್ಲಿನ ಐವರ್ನಾಡು ಹೈಸ್ಕೂಲು ಸಮೀಪ ಬೈಕಿನಿಂದ ಬಿದ್ದ ಮಹಿಳೆಯೋರ್ವರು ಮೃತಪಟ್ಟ ಘಟನೆ ಆ.16ರಂದು ನಡೆದಿದೆ.ಮೃತರನ್ನು ಎಡಮಂಗಲದ ದೇವಸ್ಯ ವಿನೋದ ಶಶಿಧರ್(47) ಎಂದು ಗುರುತಿಸಲಾಗಿದೆ. ಇವರ ಮಗನಾದ ನಿಖಿಲ್ ಜೊತೆ ವಿನೋದರ ತಾಯಿಮನೆಗೆ ಹೋಗುತ್ತಿದ್ದರು. ಐವರ್ನಾಡು ಹೈಸ್ಕೂಲು ಸಮೀಪ ತಲುಪಿದಾಗ ಮಳೆ ಬಂದ ಕಾರಣ ವಿನೋದೆವರು ಕೊಡೆ ಬಿಡಿಸಲೆತ್ನಿಸಿದ್ದಾರೆ. ಈ ವೇಳೆ ಗಾಳಿಯ ರಭಸಕ್ಕೆ ಅವರು ನಿಯಂತ್ರಣ ಕಳೆದುಕೊಂಡು ರಸ್ತೆಗೆಸೆಯಲ್ಪಟ್ಟಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳೀಯರು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ತಲೆಗೆ ತೀವ್ರ ತರಹದ

ಸುಳ್ಯ: ಅಪಘಾತಕ್ಕೀಡಾದ ಮಹಿಳೆ ಮೃತ್ಯು Read More »