Editor

ಮತ್ತೊಬ್ಬ ಬಿಜೆಪಿ ಶಾಸಕನ ಅಶ್ಲೀಲ ಸಿಡಿ ಬಿಡುಗಡೆ ಫೋಟೋ ವೈರಲ್| ಯತ್ನಾಳ ಬೆಂಬಲಿಗರಿಂದ ದೂರು ದಾಖಲು| ಅಂತದ್ದೇನೈತಿ ಆ ಫೋಟೋದಾಗ ಗೊತ್ತೇನ್ರಿ?

ವಿಜಯಪುರ: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಸಂಬಂಧಿಸಿದ ಅಶ್ಲೀಲ ಸಿಡಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಸದ್ದು ಮಾಡತೊಡಗಿದೆ. ‘ಹಿಂದೂ ಹುಲಿಯ ಸಿಡಿ ಬಿಡುಗಡೆಗೆ ಕ್ಷಣ ಗಣನೆ, ಭರ್ಜರಿ ಯಶಸ್ಸು ಕಾಣಲಿ’ ಎಂಬ ಬರಹ ಹಾಗೂ ಶಾಸಕ ಯತ್ನಾಳ ಅವರ ಭಾವಚಿತ್ರ ಇರುವ ಪೋಸ್ಟ್ ಹರಿದಾಡತೊಡಗಿದೆ. ಈ ಸಂಬಂಧ ಯತ್ನಾಳ ಅವರ ಆಪ್ತ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ ಲಕ್ಷ್ಮಣ ಜಾಧವ್ ಅವರು ವಿಜಯಪುರದ ಸೈಬರ್

ಮತ್ತೊಬ್ಬ ಬಿಜೆಪಿ ಶಾಸಕನ ಅಶ್ಲೀಲ ಸಿಡಿ ಬಿಡುಗಡೆ ಫೋಟೋ ವೈರಲ್| ಯತ್ನಾಳ ಬೆಂಬಲಿಗರಿಂದ ದೂರು ದಾಖಲು| ಅಂತದ್ದೇನೈತಿ ಆ ಫೋಟೋದಾಗ ಗೊತ್ತೇನ್ರಿ? Read More »

ಮಂಗಳೂರು: ದುಷ್ಕರ್ಮಿಗಳಿಂದ ಚೂರಿ ಇರಿತ

ಮಂಗಳೂರು: ವ್ಯಕ್ತಿಯೊಬ್ಬರಿಗೆ ದುಷ್ಕರ್ಮಿಗಳ ತಂಡವೊಂದು ಚೂರಿಯಿಂದ ಇರಿದು ಪರಾರಿಯಾದ ಘಟನೆ ತಡರಾತ್ರಿ ಮಾಲೆಮಾರ್ ಬಳಿ ಸಂಭವಿಸಿದೆ. ಪಂಜಿಮೊಗರು ನಿವಾಸಿ ರಾಜೇಶ್ (45) ಗಾಯಗೊಂಡವರು. ಇವರು ಕೊಟ್ಟಾರದಿಂದ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಮಾಲೆಮಾರ್ ಬಳಿ ದುಷ್ಕರ್ಮಿಗಳ ತಂಡ ಬೆನ್ನಿಗೆ ಚೂರಿಯಿಂದ ಇರಿದಿದ್ದಾರೆ. ರಾಜೇಶ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಾವೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಂಗಳೂರು: ದುಷ್ಕರ್ಮಿಗಳಿಂದ ಚೂರಿ ಇರಿತ Read More »

ಸುಳ್ಯ ತಾಲೂಕಿನಲ್ಲಿ ಅ. 16ರಂದು ದ.ಕ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

ಮಂಗಳೂರು: ಸರ್ಕಾರದ ಜನಪರ ಯೋಜನೆಗಳನ್ನು ತಳಮಟ್ಟದಲ್ಲಿ ಜನಸಾಮಾನ್ಯರಿಗೆ ನೇರವಾಗಿ ಒದಗಿಸಬೇಕೆಂಬ ಆಶಯದಂತೆ ಜಿಲ್ಲೆಯಲ್ಲಿ ಪ್ರತೀ ತಿಂಗಳ ಮೂರನೇ ಶನಿವಾರದಂದು ಗ್ರಾಮಗಳಿಗೆ ಭೇಟಿ ನೀಡಿ ವಾಸ್ತವ್ಯ ಮಾಡುವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳು ಹಮ್ಮಿಕೊಂಡಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಇದೇ ಅ.16ರ ಶನಿವಾರ ಸುಳ್ಯ ತಾಲೂಕಿನ ಅಮರಮುಡ್ನೂರು ಮತ್ತು ಅಮರಪಡ್ನೂರು ಗ್ರಾಮಕ್ಕೆ ಭೇಟಿ ನೀಡಿ, ಅಂದು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಈ ಹಿನ್ನಲೆ ಗ್ರಾಮ ಲೆಕ್ಕಾಧಿಕಾರಿಗಳು ಪ್ರತೀ ಮನೆಯ ಸರ್ವೇ ಮಾಡಿ, ಅಲ್ಲಿನ ಸಮಸ್ಯೆಗಳಿಗೆ ಸಂಬಂಧಿಸಿ ಅರ್ಜಿಗಳನ್ನು

ಸುಳ್ಯ ತಾಲೂಕಿನಲ್ಲಿ ಅ. 16ರಂದು ದ.ಕ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ Read More »

ಕಡಲನಗರಿಯಲ್ಲಿ ನವರಾತ್ರಿ ಸಡಗರ| ವಿವಿಧೆಡೆ ವಿಶೇಷ ಪೂಜೆ, ಪುನಸ್ಕಾರ ಸಂಭ್ರಮ

ಮಂಗಳೂರು: ಕರಾವಳಿ ನಗರಿ ಮಂಗಳೂರಿನಲ್ಲಿ ಗುರುವಾರ ಆಯುಧ ಪೂಜೆ ಮತ್ತು ಶುಕ್ರವಾರ ವಿಜಯದಶಮಿ ಹಬ್ಬ ಆಚರಿಸಲಾಗುತ್ತಿದ್ದು, ಕಡಲನಗರಿ‌ ಸಂಭ್ರಮದಿಂದ ಅಣಿಯಾಗುತ್ತಿದೆ. ಬೆಲೆ ಏರಿಕೆ ನಡುವೆಯೂ ನಗರ ಮತ್ತು ಹೊರವಲಯದ ಮಾರುಕಟ್ಟೆಗಳಲ್ಲಿ ಪೂಜೆಗಾಗಿ ಹೂವು, ಹಣ್ಣು ಖರೀದಿ ಭರಾಟೆಯು ಬಿರುಸು ಪಡೆದಿತ್ತು. ಬಹುತೇಕ ಕಡೆ ರಸ್ತೆ ಬದಿಯಲ್ಲಿ ಉತ್ತರ ಕರ್ನಾಟಕದಿಂದ ಆಗಮಿಸಿದ ಹೂವಿನ ವ್ಯಾಪಾರಿಗಳು ಬುಧವಾರ ಭರ್ಜರಿ ವ್ಯಾಪಾರ ನಡೆಸಿದ್ದಾರೆ. ಮುಂಜಾನೆಯಿಂದಲೇ ಲಾರಿಗಳಲ್ಲಿ ಸೇವಂತಿಗೆ, ಮಲ್ಲಿಗೆ, ಗುಲಾಬಿ ಹೂಗಳು ಮತ್ತು ಲಿಂಬೆ ಹಣ್ಣು ತಂದು ಅಲ್ಲಲ್ಲಿ ರಾಶಿ ಹಾಕಿ

ಕಡಲನಗರಿಯಲ್ಲಿ ನವರಾತ್ರಿ ಸಡಗರ| ವಿವಿಧೆಡೆ ವಿಶೇಷ ಪೂಜೆ, ಪುನಸ್ಕಾರ ಸಂಭ್ರಮ Read More »

ಹಾವು ಕಚ್ಚಿಸಿ ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆಯ ತೀರ್ಪು| ಅತಿ ಅಪರೂಪದ ಪ್ರಕರಣವೆಂದ ಕೋರ್ಟ್|

ಕೊಲ್ಲಂ: ತನ್ನ ಪತ್ನಿಗೆ ವಿಷಪೂರಿತ ನಾಗರ ಹಾವು ಕಚ್ಚಿಸಿ ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಸೂರಜ್ ಎಸ್ ಕುಮಾರ್‌ಗೆ ಬುಧವಾರ ಕೇರಳದ ಕೊಲ್ಲಂ ಹೆಚ್ಚುವರಿ ಸೆಷನ್ಸ್‌‌ ನ್ಯಾಯಾಲಯವು ಎರಡು ಬಾರಿ ಜೀವಾವಧಿ ಶಿಕ್ಷೆ ವಿಧಿಸಿದೆ. ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ ನ್ಯಾಯಾಧೀಶ ಎಂ.ಮನೋಜ್ ಅವರು ಈ ಪ್ರಕರಣವು ‘ಅಪರೂಪದಲ್ಲಿ ಅಪರೂಪ’ ಎಂದು ಹೇಳಿದ್ದಾರೆ. ಆರೋಪಿಗೆ ಮರಣ ದಂಡನೆ ನೀಡಬೇಕು ಎಂದು ಉತ್ರಾ ಪರವಾಗಿ ವಾದಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಜಿ ಮೋಹನರಾಜ್ ನ್ಯಾಯಾಲಯಕ್ಕೆ ವಿನಂತಿಸಿದ್ದರು. ಆದರೆ ಆರೋಪಿಯ

ಹಾವು ಕಚ್ಚಿಸಿ ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆಯ ತೀರ್ಪು| ಅತಿ ಅಪರೂಪದ ಪ್ರಕರಣವೆಂದ ಕೋರ್ಟ್| Read More »

ರಸ್ತೆ ಮಧ್ಯೆ ಬೈಕ್ ನಿಲ್ಲಿಸಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ‌ಮಾಡಿಕೊಂಡ ಯುವಕ

ಶಿವಮೊಗ್ಗ: ಯುವಕನೊರ್ವ ಮನೆಯಿಂದ ಬೈಕ್ ನಿಂದ ಹೊರಟು ಮಾರ್ಗ ಮಧ್ಯದಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾದ ವಿಲಕ್ಷಣ ಘಟನೆ ತೀರ್ಥಹಳ್ಳಿ ತಾಲೂಕಿನ ಕೊಣಂದೂರು ಸಮೀಪದ ಅಕ್ಲಾಪುರದಲ್ಲಿ ನಡೆದಿದೆ. ಮೃತ ಯುವಕ ಅಕ್ಲಾಪುರ ವಾಸಿ ರಾಘವೇಂದ್ರ(40) ಎಂದು ಗುರುತಿಸಲಾಗಿದೆ. ಮನೆಯಿಂದ ದತ್ತರಾಜಪುರ ಮಾರ್ಗದಲ್ಲಿ ಹೋಗುವಾಗ ಸೀಮೆಎಣ್ಣೆ ಕೊಂಡೊಯ್ದು ಮೈಮೇಲೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿ ಆಸ್ತಿವ್ಯಾಜ್ಯದ ವೈಯಕ್ತಿಕ ಸಮಸ್ಯೆ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಮೃತ ವ್ಯಕ್ತಿ ಪತ್ನಿ,ಎರಡು ಮಕ್ಕಳನ್ನು ಅಗಲಿದ್ದು, ಈ ಘಟನೆ ಸಂಬಂಧ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ

ರಸ್ತೆ ಮಧ್ಯೆ ಬೈಕ್ ನಿಲ್ಲಿಸಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ‌ಮಾಡಿಕೊಂಡ ಯುವಕ Read More »

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆಸ್ಪತ್ರೆಗೆ ದಾಖಲು

ದೆಹಲಿ: ಅನಾರೋಗ್ಯದ ಹಿನ್ನಲೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯ ಕಾರ್ಡಿಯಾಲಜಿ ವಿಭಾಗಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಏಪ್ರಿಲ್‌ನಲ್ಲಿ ಕೊವಿಡ್ ಸೋಂಕು ತಗುಲಿ ಮನಮೋಹನ್ ಸಿಂಗ್ ಏಮ್ಸ್ ಗೆ ದಾಖಲಾಗಿದ್ದರು. ಅಲ್ಲದೆ 2003ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಏಮ್ಸ್ ನಲ್ಲಿ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಈ ಹಿಂದೆ ಅಂದ್ರೆ, 1990 ರಲ್ಲಿ ಬೈಪಾಸ್ ಆಪರೇಷನ್ ಮತ್ತು 2004

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆಸ್ಪತ್ರೆಗೆ ದಾಖಲು Read More »

ಪಬ್ಲಿಕ್ ನಲ್ಲಿ ಡಿ.ಕೆ ಶಿವಕುಮಾರ್ ಮಾನ ಹರಾಜು| ಉಗ್ರಪ್ಪ, ಸಲಿಂ ವಿರುದ್ದ ಡಿಕೆಶಿ ಕೆಂಡಾಮಂಡಲ| ಕಾಂಗ್ರೇಸ್ ನಲ್ಲಿ ಮೊದಲ ವಿಕೆಟ್ ಪತನ

ಬೆಂಗಳೂರು: ಸಂಸದ ಉಗ್ರಪ್ಪ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ, ಆದರೀಗ ಈ ಹೇಳಿಕೆ ಕೊಟ್ಟ ನಾಯಕರಿಗೆ ಡಿ. ಕೆ. ಶಿವಕುಮಾರ್ ಫುಲ್ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಅಲ್ಲದೇ ಸಲೀಂರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಲು ಸೂಚಿಸಿದ್ದಾರೆ. ಡಿಕೆಶಿ ವಿರುದ್ಧ ಹೇಳಿಕೆ ಕೊಟ್ಟಿದ್ದ ಸಲೀಂ, ‘ಅವರು ದೊಡ್ಡ ಸ್ಕ್ರ್ಯಾಮ್ ಇದೆ, ಕೆದುಕುತ್ತಾ ಹೋದರೆ ಇವರದ್ದು ಹೊರಬರುತ್ತೆ. ಅವರ ಹುಡುಗನ ಹತ್ತಿರವೆ 50 ರಿಂದ 100 ಕೋಟಿ ಇದೆ ಎಂದರೆ,

ಪಬ್ಲಿಕ್ ನಲ್ಲಿ ಡಿ.ಕೆ ಶಿವಕುಮಾರ್ ಮಾನ ಹರಾಜು| ಉಗ್ರಪ್ಪ, ಸಲಿಂ ವಿರುದ್ದ ಡಿಕೆಶಿ ಕೆಂಡಾಮಂಡಲ| ಕಾಂಗ್ರೇಸ್ ನಲ್ಲಿ ಮೊದಲ ವಿಕೆಟ್ ಪತನ Read More »

ದಸರಾ ಬಳಿಕ ಗಡಿಜಿಲ್ಲೆಗಳಲ್ಲಿ ನಿರ್ಬಂಧ ಸಡಿಲಕ್ಕೆ ಕ್ರಮ – ಸಿಎಂ ಬೊಮ್ಮಾಯಿ

ಮಂಗಳೂರು: ರಾಜ್ಯದ ಗಡಿ ಭಾಗಗಳಲ್ಲಿ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸಲು ದಸರಾ ಮುಗಿದ ಕೂಡಲೇ ಕೋವಿಡ್ ತಜ್ಞರ ಸಮಿತಿಯ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು. ಕರ್ನಾಟಕಕ್ಕೆ ಹೊಂದಿಕೊಂಡಿರುವ ಕೇರಳ ಮತ್ತು ಮಹಾರಾಷ್ಟ್ರ ದಲ್ಲಿ ಇರುವ ಕೋವಿಡ್ ಪರಿಸ್ಥಿತಿ ಬಗ್ಗೆ ತಜ್ಞರು ಮೌಲ್ಯಮಾಪನ ಮಾಡುತ್ತಿದ್ದಾರೆ. ದಸರಾ ಹಬ್ಬದ ಬಳಿಕ ಕೋವಿಡ್ ತಜ್ಞರ ಸಭೆ ಕರೆಯಲಾಗುವುದು. ಗಡಿ ಜಿಲ್ಲೆಗಳಲ್ಲಿ

ದಸರಾ ಬಳಿಕ ಗಡಿಜಿಲ್ಲೆಗಳಲ್ಲಿ ನಿರ್ಬಂಧ ಸಡಿಲಕ್ಕೆ ಕ್ರಮ – ಸಿಎಂ ಬೊಮ್ಮಾಯಿ Read More »

ಯಲ್ಲಾಪುರ: ಕೆಮಿಕಲ್ ತುಂಬಿದ್ದ ಗ್ಯಾಸ್ ಟ್ಯಾಂಕರ್ ಸ್ಪೋಟ| ರಾ.ಹೆ.63 ಬ್ಲಾಕ್, ಸಂಚಾರ‌ ಅಸ್ತವ್ಯಸ್ತ

ಉತ್ತರ ಕನ್ನಡ: ಇಂದು ಬೆಳಿಗ್ಗೆ 5.30ರ ಸುಮಾರಿಗೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಇಡಗುಂದಿ ಬಳಿ ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡಿದೆ. ಇದು ಮಂಗಳೂರಿನಿಂದ ಗುಜರಾತಿಗೆ ತೆರಳುತ್ತಿದ್ದ ಕೆಮಿಕಲ್ ತುಂಬಿದ ಗ್ಯಾಸ್ ಟ್ಯಾಂಕರ್ ಸ್ಪೋಟಗೊಂಡಿದೆ.ಸ್ಪೋಟದಿಂದಾಗಿ ಸುತ್ತಮುತ್ತ 300 ರಿಂದ 400 ಮೀಟರ್ ಬೆಂಕಿ ವ್ಯಾಪಿಸಿದೆ. ಸಾಕಷ್ಟು ದೂರ ವ್ಯಾಪ್ತಿಯಲ್ಲಿ ಹಬ್ಬಿಕೊಂಡಿದ್ದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕದಳದ ಸಿಬ್ಬಂದಿಗಳು ಹರಸಾಹಸ ಪಡಬೇಕಾಯಿತು. ಸದ್ಯ 300 ರಿಂದ 400 ಮೀಟರ್ ದೂರಗಳಷ್ಟು ಸ್ಪೋಟದಿಂದ ಏನಾಗಿದೆ ಎನ್ನುವ ಮಾಹಿತಿ ದೊರೆಯದೆ ಅಧಿಕಾರಿಗಳು ಕಂಗಾಲಾಗಿದ್ದಾರೆ.

ಯಲ್ಲಾಪುರ: ಕೆಮಿಕಲ್ ತುಂಬಿದ್ದ ಗ್ಯಾಸ್ ಟ್ಯಾಂಕರ್ ಸ್ಪೋಟ| ರಾ.ಹೆ.63 ಬ್ಲಾಕ್, ಸಂಚಾರ‌ ಅಸ್ತವ್ಯಸ್ತ Read More »