Editor

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸರಳವಾಗಿ ಈದ್ ಮಿಲಾದ್ ಆಚರಣೆಗೆ ಡಿಸಿ ಸೂಚನೆ – ಸಾಮೂಹಿಕ ಮೆರವಣಿಗೆಳು ನಿಷೇಧ

ಮಂಗಳೂರು: ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಸರಳವಾಗಿ ಈದ್ ಮಿಲಾದ್ ಆಚರಣೆ ನಡೆಸುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸೂಚಿಸಿದ್ದಾರೆ. ಸುರಕ್ಷಿತ ಅಂತರ ಹಾಗೂ ಕೋವಿಡ್ ನಿಯಾಮಾವಳಿಗಳನ್ನು ಪಾಲಿಸಿಕೊಂಡು ಮಸೀದಿ ಹಾಗೂ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಬಹುದು. ಒಂದು ವೇಳೆ ಹೆಚ್ಚು ಜನ ಆಗಮಿಸಿದ್ದಲ್ಲಿ ಎರಡು ಅಥವಾ ಹೆಚ್ಚಿನ ಪಾಳಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಬಹುದು . ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕ, ಡಿಜಿಟಲ್ ಸೌಂಡ್ ಸಿಸ್ಟಮ್ ಬಳಕೆಯನ್ನು ನಿಷೇಧಿಸಲಾಗಿದೆ. ಪ್ರಾರ್ಥನಾ ಸ್ಥಳಗಳಲ್ಲಿ ಮುಖಗವಸನ್ನು ಕಡ್ಡಾಯವಾಗಿ ಧರಿಸತಕ್ಕದ್ದು. 60 ವರ್ಷ ಮೇಲ್ಪಟ್ಟ ನಾಗರಿಕರು

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸರಳವಾಗಿ ಈದ್ ಮಿಲಾದ್ ಆಚರಣೆಗೆ ಡಿಸಿ ಸೂಚನೆ – ಸಾಮೂಹಿಕ ಮೆರವಣಿಗೆಳು ನಿಷೇಧ Read More »

ವೈದ್ಯರ ನಿರ್ಲಕ್ಷ್ಯದಿಂದ ಪ್ರೈವೇಟ್ ಪಾರ್ಟ್ ಡ್ಯಾಮೇಜ್| ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು ಅಚಾತುರ್ಯ|

ಚಿಕ್ಕಮಗಳೂರು: ಆಪರೇಷನ್ ಗೆಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿಯೊಬ್ಬರ ಖಾಸಗಿ ಅಂಗಕ್ಕೆ ಗಾಯಗೊಳಿಸಿರುವ ಘಟನೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ಗಾಯಗೊಂಡಿರುವ ಗಾಯಾಳು ಪೊಲೀಸರ ಮೊರೆ ಹೋಗಿದ್ದಾರೆ. ಹರ್ನಿಯಾ ಆಪರೇಷನ್ ಗೆಂದು ಅಕ್ಟೋಬರ್ 12ರಂದು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಯೋಗೇಂದ್ರ ಎಂಬವರು ದಾಖಲಾಗಿದ್ದು, ಆಪರೇಷನ್ ವೇಳೆಯಲ್ಲಿ ಅವರ ಖಾಸಗಿ ಅಂಗಕ್ಕೆ ಪೈಪ್ ಸಿಕ್ಕಿಸಲಾಗಿತ್ತು.ತೀವ್ರ ತರವಾಗಿ ಪೈಪ್ ಚುಚ್ಚಿದ್ದರಿಂದ ಅವರ ಖಾಸಗಿ ಅಂಗಕ್ಕೆ ಗಾಯವಾಗಿತ್ತು. ಈ ಬಗ್ಗೆ ಅವರು ಆಸ್ಪತ್ರೆ ಸಿಬ್ಬಂದಿ ಸಹಿತ ವೈದ್ಯರ ಬಳಿಯಲ್ಲಿ ವಿಚಾರಿಸಿದಾಗ ಉಡಾಫೆಯಾಗಿ ಉತ್ತರಿಸಿದ್ದು

ವೈದ್ಯರ ನಿರ್ಲಕ್ಷ್ಯದಿಂದ ಪ್ರೈವೇಟ್ ಪಾರ್ಟ್ ಡ್ಯಾಮೇಜ್| ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು ಅಚಾತುರ್ಯ| Read More »

ಮಂಗಳೂರು: ಪಂಪ್‌ವೆಲ್‌ ನ ಲಾಡ್ಜ್‌ನಲ್ಲಿ ಪಾರ್ಟಿ ವೇಳೆ ಕೊಲೆ ಪ್ರಕರಣ – ನಾಲ್ವರು ಪೊಲೀಸ್ ವಶಕ್ಕೆ

ಮಂಗಳೂರು: ನಗರದ ಪಂಪ್‌ವೆಲ್‌ ನ ಲಾಡ್ಜ್‌ನಲ್ಲಿ ಪಾರ್ಟಿ ನೆಪದಲ್ಲಿ ಯುವಕನೊಬ್ಬನ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಕಂಕನಾಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸುರತ್ಕಲ್ ನಿವಾಸಿ ಜೇಸನ್ (25) ವಶಕ್ಕೆ ಪಡೆದ ಆರೋಪಿ. ಅ.15 ರಂದು ರಾತ್ರಿ ದಸರಾ ಹಬ್ಬದ ಪ್ರಯುಕ್ತ ಪಾರ್ಟಿ ಮಾಡುವ ಉದ್ದೇಶದಿಂದ ಪಂಪವೆಲ್ ಬಳಿಯ ಲಾಡ್ಜ್ ಒಂದಕ್ಕೆ ಪ್ರಮೀತ್, ಜೇಸನ್, ಕಾರ್ತೀಕ್, ಧನುಷ್, ದುರ್ಗೇಶ್,ಪ್ರಜ್ವಲ್ ಎಂಬವರು ತೆರಳಿದ್ದರು. ಸರಿಸುಮಾರು ರಾತ್ರಿ 2 ಗಂಟೆಗೆ ಜೇಸನ್ ಸುರತ್ಕಲ್ ಮತ್ತು ಧನುಷ್ ಎಂಬುವರ ಮಧ್ಯೆ

ಮಂಗಳೂರು: ಪಂಪ್‌ವೆಲ್‌ ನ ಲಾಡ್ಜ್‌ನಲ್ಲಿ ಪಾರ್ಟಿ ವೇಳೆ ಕೊಲೆ ಪ್ರಕರಣ – ನಾಲ್ವರು ಪೊಲೀಸ್ ವಶಕ್ಕೆ Read More »

ಮಾಜಿ ಕ್ರಿಕೆಟ್ ತಾರೆ ಯುವರಾಜ್ ಸಿಂಗ್ ಬಂಧನ

ನವದೆಹಲಿ: ಜಾತಿ ನಿಂದನೆ ಆರೋಪದಡಿಯಲ್ಲಿ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನು ಹಿಸ್ಸಾರ್ ಪೊಲೀಸರು ಬಂಧಿಸಿದ್ದಾರೆ. ಕಳೆದ ವರ್ಷ ರೋಹಿತ್ ಶರ್ಮಾ ಜೊತೆಗಿನ ಸಂವಾದದಲ್ಲಿ ಪರಿಶಿಷ್ಟ ಜಾತಿ ಬಗ್ಗೆ ಯುವಿ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಸಂಬಂಧ ಹಂಸಿ ನಗರ ಪೊಲೀಸ್ ಠಾಣೆಯಲ್ಲಿ ಯುವರಾಜ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಯುವರಾಜ್ ಸಿಂಗ್ ಅವರನ್ನು ಬಂಧಿಸಿರುವ ಹಂಸಿ ಠಾಣಾ ಪೊಲೀಸರು ಘಟನೆಯ ಬಗ್ಗೆ ವಿಚಾರಣೆ ನಡೆಸಿದರು. ಆ ಬಳಿಕ ಹೈಕೋರ್ಟ್ ಆದೇಶದ ಮೇರೆಗೆ ಯುವರಾಜ್

ಮಾಜಿ ಕ್ರಿಕೆಟ್ ತಾರೆ ಯುವರಾಜ್ ಸಿಂಗ್ ಬಂಧನ Read More »

ದ.ಕ ದಲ್ಲಿ‌ ಕೊರೊನಾ ಮಾರ್ಗಸೂಚಿ ಕಟ್ಟುನಿಟ್ಟು| ಎರಡು ಡೋಸ್ ಲಸಿಕೆ ಹಾಕಿಸದವರಿಗೆ‌ ಮಾಲ್, ಚಿತ್ರಮಂದಿರಕ್ಕೆ ನಿರ್ಬಂಧ

ಮಂಗಳೂರು: ಮಂಗಳೂರಿನಲ್ಲಿ ಮಾಲ್‌ಗಳು, ಚಿತ್ರಮಂದಿರಗಳು, ಸಭಾಂಗಣಗಳ ಒಳಗೆ ಪ್ರವೇಶಿಸಲು ಕೊರೋನಾ ಲಸಿಕೆಯ ಎರಡು ಡೋಸ್‌ ಹಾಕಿಕೊಳ್ಳುವುದು ಕಡ್ಡಾಯ ಎಂದು ದಕ್ಷಿಣ ಕನ್ನಡ ಡಿಸಿ ಡಾ.ರಾಜೇಂದ್ರ ಕೆವಿ ಹೇಳಿದ್ದಾರೆ. ಕೋವಿಡ್ ಪಾಸಿಟಿವಿಟಿ ದರ ಶೇಕಡ 0.46ಕ್ಕೆ ಇಳಿದಿರುವುದರಿಂದ ಅಕ್ಟೋಬರ್ 14ರಿಂದ ಥಿಯೇಟರ್‌ಗಳು, ಮಲ್ಟಿಪ್ಲೆಕ್ಸ್‌ಗಳು, ಆಡಿಟೋರಿಯಂಗಳು 100 ಪ್ರತಿಶತ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ ಎಂದು ಡಿಸಿ ಆದೇಶದಲ್ಲಿ ತಿಳಿಸಿದ್ದಾರೆ. ಆದ್ದರಿಂದ, ಈ ಸ್ಥಳಗಳಿಗೆ ಭೇಟಿ ನೀಡುವ ಎಲ್ಲ ಜನರು ಎರಡು ಡೋಸ್ ಲಸಿಕೆಗಳನ್ನು ತೆಗೆದುಕೊಳ್ಳಬೇಕು. ಆದರೆ ವಯಸ್ಸಾದವರು ಮತ್ತು

ದ.ಕ ದಲ್ಲಿ‌ ಕೊರೊನಾ ಮಾರ್ಗಸೂಚಿ ಕಟ್ಟುನಿಟ್ಟು| ಎರಡು ಡೋಸ್ ಲಸಿಕೆ ಹಾಕಿಸದವರಿಗೆ‌ ಮಾಲ್, ಚಿತ್ರಮಂದಿರಕ್ಕೆ ನಿರ್ಬಂಧ Read More »

ಅರಬ್ಬಿ‌ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಏಕಕಾಲಕ್ಕೆ ವಾಯುಭಾರ ಕುಸಿತ| ಕೇರಳ, ಕರ್ನಾಟಕ, ಆಂದ್ರದಲ್ಲಿ ಎಡೆಬಿಡದ ಮಳೆ| ಜನಜೀವನ ದುಸ್ಥರ

ಬೆಂಗಳೂರು: ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಏಕಕಾಲಕ್ಕೆ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜ್ಯದ ದಕ್ಷಿಣ ಒಳನಾಡು ಸೇರಿದಂತೆ ಕೇರಳ ಹಾಗೂ ಆಂದ್ರ ಪ್ರದೇಶದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಮುನ್ಸೂಚನೆ ಪ್ರಕಾರ ಇನ್ನೂ ಎರಡು ದಿನಗಳ ಕಾಲ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮಳೆ ಮುಂದುವರೆಯಲಿದೆ. ಕಳೆದ ಎಂಟತ್ತು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಸಂಜೆ ಹಾಗೂ ರಾತ್ರಿ ವೇಳೆ ಮಳೆ ಆರಂಭವಾಗಿ ಕೆಲವೆಡೆ ಸಾಧಾರಣ ಮತ್ತೆ ಕೆಲವೆಡೆ ಭಾರೀ ಮಳೆಯಾಗಿದೆ. ಇಂದು ಬೆಳಗ್ಗೆ

ಅರಬ್ಬಿ‌ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಏಕಕಾಲಕ್ಕೆ ವಾಯುಭಾರ ಕುಸಿತ| ಕೇರಳ, ಕರ್ನಾಟಕ, ಆಂದ್ರದಲ್ಲಿ ಎಡೆಬಿಡದ ಮಳೆ| ಜನಜೀವನ ದುಸ್ಥರ Read More »

ಖಾಝಿ ನೇಮಕ ವಿಚಾರ| ಮಸೀದಿಯೊಳಗೇ ಹೊಡೆದಾಟ‌ ನಡೆಸಿದ ಮುಖಂಡರು|

ಪುತ್ತೂರು: ಖಾಝಿ ನೇಮಕ ವಿಚಾರದಲ್ಲಿ ತಕರಾರು ಉಂಟಾಗಿ ಮಸೀದಿ ಜಮಾತ್ ಸಭೆಯಲ್ಲೇ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಮಸೀದಿ ಒಳಗೆ ಮತ್ತು ಹೊರಗಡೆ ತಳ್ಳಾಟ, ಹಲ್ಲೆ ನಡೆಸಿದ ದೃಶ್ಯಗಳ ವಿಡಿಯೋ ಸೆರೆಯಾಗಿದ್ದು ವೈರಲ್ ಆಗಿದೆ.‌ ಪುತ್ತೂರಿನ ಬದ್ರಿಯಾ ಜುಮ್ಮಾ ಮಸೀದಿಯ ಮದ್ರಸದಲ್ಲಿ ಘಟನೆ ನಡೆದಿದೆ. ಖಾಝಿ ನೇಮಕ ವಿಚಾರದಲ್ಲಿ ನಡೆದ ಜಮಾತ್ ಕಮಿಟಿ ಸಭೆಯಲ್ಲಿ ಶೈಖುನಾ ಸಯ್ಯದುಲ್ ಉಲಮಾ ಜಿಫ್ರಿ ತಂಙಳ ಅವರನ್ನು ಪುತ್ತೂರು ತಾಲೂಕು ಸಂಯುಕ್ತ ಖಾಝಿಯಾಗಿ ನೇಮಿಸುವ ಕುರಿತಾಗಿ ಕೆಲವರು ಆಕ್ಷೇಪ

ಖಾಝಿ ನೇಮಕ ವಿಚಾರ| ಮಸೀದಿಯೊಳಗೇ ಹೊಡೆದಾಟ‌ ನಡೆಸಿದ ಮುಖಂಡರು| Read More »

ಕೇರಳದಲ್ಲಿ ‘ಮಿನಿ ಮೇಘಸ್ಪೋಟ’| ಹಲವೆಡೆ ಭೂಕುಸಿತ, 18 ಮಂದಿ ಬಲಿ, ಹಲವರು ಕಣ್ಮರೆ| ಸಹಾಯಕ್ಕಾಗಿ ಸೇನೆಯ ಮೊರೆಯಾಚಿಸಿದ ಸಿಎಂ ಪಿಣರಾಯಿ

ತಿರುವನಂತಪುರ: ಕೇರಳದಲ್ಲಿ ವಾಡಿಕೆಗಿಂತ ಶೇಕಡ 74ರಷ್ಟು ಅಧಿಕ ಮಳೆ ಬಿದ್ದ ಪರಿಣಾಮವಾಗಿ ಭೀಕರ ಪ್ರವಾಹ ಪರಿಸ್ಥಿತಿ ಉದ್ಭವಿಸಿದ್ದು, ಮಳೆ ಸಂಬಂಧಿ ದುರಂತಗಳಿಗೆ 18 ಮಂದಿ ಬಲಿಯಾಗಿದ್ದಾರೆ. 20ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ. ಮಧ್ಯ ಹಾಗೂ ದಕ್ಷಿಣ ಕೇರಳದಲ್ಲಿ ಹಲವೆಡೆ ಭೀಕರ ಪ್ರವಾಹ ಹಾಗೂ ಭೂಕುಸಿತದ ಘಟನೆಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಗಳಿಗಾಗಿ ಸೇನೆ ಹಾಗೂ ನೌಕಾಪಡೆಯ ನೆರವು ಕೋರಲಾಗಿದೆ. ಹವಾಮಾನ ತಜ್ಞರು ತೀವ್ರ ಮಳೆಯನ್ನು “ಮಿನಿ ಮೇಘ ಸ್ಫೋಟ” ಎಂದು ಬಣ್ಣಿಸಿದ್ದಾರೆ. ಹಲವು ಕಡೆಗಳಲ್ಲಿ ಕೇವಲ

ಕೇರಳದಲ್ಲಿ ‘ಮಿನಿ ಮೇಘಸ್ಪೋಟ’| ಹಲವೆಡೆ ಭೂಕುಸಿತ, 18 ಮಂದಿ ಬಲಿ, ಹಲವರು ಕಣ್ಮರೆ| ಸಹಾಯಕ್ಕಾಗಿ ಸೇನೆಯ ಮೊರೆಯಾಚಿಸಿದ ಸಿಎಂ ಪಿಣರಾಯಿ Read More »

ಪುತ್ತೂರು:ಅಪ್ರಾಪ್ತೆಗೆ ಗರ್ಭದಾನ ಮಾಡಿದ ರಾಜಕೀಯ ಮುಂದಾಳು| ಆರೋಪಿಯ ಬಂಧನಕ್ಕೆ ದಲಿತ ಸಂಘಟನಾ ಸಮಿತಿ‌ ಆಗ್ರಹ

ಪುತ್ತೂರು: ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಪಕ್ಷವೊಂದರ ಹಿರಿಯ ಮುಖಂಡ ಅತ್ಯಾಚಾರ ನಡೆಸಿದ್ದು, ಆತನನ್ನು ತಕ್ಷಣವೇ ಬಂಧಿಸಬೇಕು ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಒತ್ತಾಯ ಮಾಡಿದೆ. ಈ ಬಗ್ಗೆ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಸಮಿತಿ ಸದಸ್ಯರು, ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ದಲಿತ ಸಮುದಾಯದ ಅಪ್ರಾಪ್ತ ಬಾಲಕಿಯ ಹಿರಿಯ ರಾಜಕೀಯ ನೇತಾರ ನಾರಾಯಣ ರೈ ಎಂಬಾತ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಕುಟುಂಬ ಅಲ್ಲಿನ ಭೂ ಮಾಲಕ

ಪುತ್ತೂರು:ಅಪ್ರಾಪ್ತೆಗೆ ಗರ್ಭದಾನ ಮಾಡಿದ ರಾಜಕೀಯ ಮುಂದಾಳು| ಆರೋಪಿಯ ಬಂಧನಕ್ಕೆ ದಲಿತ ಸಂಘಟನಾ ಸಮಿತಿ‌ ಆಗ್ರಹ Read More »

ಅ.19ರಂದು ಈದ್ ಮಿಲಾದ್ ಪ್ರಯುಕ್ತ ಸಾರ್ವತ್ರಿಕ ರಜೆ ಘೋಷಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಈದ್ ಮಿಲಾದ್ ಹಬ್ಬ ಆಚರಿಸುವ ಪ್ರಯುಕ್ತ ಈ ಹಿಂದೆ ಅ.20ರಂದು ರಜೆ ಘೋಷಿಸಲಾಗಿದ್ದ ರಜೆಯನ್ನು ಮೂನ್ ಕಮಿಟಿಯ ತೀರ್ಮಾನದಂತೆ ದಿನಾಂಕ ಅ.19ರಂದು ಬದಲಿಸಿ, ಸಾರ್ವತ್ರಿಕ ರಜೆಯನ್ನು ಘೋಷಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ವೀರಭದ್ರ ಹಂಚಿನಾಳ ಅವರು ಅಧಿಸೂಚನೆ ಹೊರಡಿಸಿದ್ದು, 2021ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ದಿನಾಂಕ 21-11-2020ರಂದು ಪ್ರಕಟಿಸಲಾಗಿತ್ತು. ಈ ರಜಾ ದಿನಗಳ ಪಟ್ಟಿಯಲ್ಲಿ ಈದ್ ಮಿಲಾದ್

ಅ.19ರಂದು ಈದ್ ಮಿಲಾದ್ ಪ್ರಯುಕ್ತ ಸಾರ್ವತ್ರಿಕ ರಜೆ ಘೋಷಿಸಿದ ರಾಜ್ಯ ಸರ್ಕಾರ Read More »