Editor

ಕರ್ನಾಟಕ ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ಕಾಯ್ದೆ-2021ಕ್ಕೆ ರಾಜ್ಯಪಾಲರಿಂದ ಅಂಕಿತ

ಬೆಂಗಳೂರು: ಕರ್ನಾಟಕ ಧಾರ್ಮಿಕ ಕಟ್ಟಡಗಳ (ಸಂರಕ್ಷಣೆ) ಕಾಯ್ದೆ-2021 ಮಸೂದೆಗೆ ರಾಜ್ಯಪಾಲ ಥಾವರ್​ ಚಂದ್‌ ಗೆಹ್ಲೋಟ್​​​ ಅಂಕಿತ ಹಾಕಿದ್ದಾರೆ. ಈ ಮೂಲಕ ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ಕಾಯ್ದೆ-2021 ಜಾರಿಗೆ ಜಾರಿಗೆ ಬಂದಿದೆ. ರಾಜ್ಯದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನು, ನ್ಯಾಯಾಲಯ, ನ್ಯಾಯಮಂಡಳಿ, ಪ್ರಾಧಿಕಾರದ ಯಾವುದೇ ತೀರ್ಪು ಅಥವಾ ಆದೇಶ ಇದ್ದರೂ ಕಾಯ್ದೆ ಜಾರಿಯಾದ ದಿನದವರೆಗೆ ಅಸ್ತಿತ್ವದಲಿರುವ ಧಾರ್ಮಿಕ ಕಟ್ಟಡಗಳನ್ನು (ದೇವಸ್ಥಾನ, ಚರ್ಚ್, ಮಸೀದಿ, ಗುರುದ್ವಾರ, ಬೌದ್ಧ ವಿಹಾರ, ಮಜರ್ ಇತರೆ) ಸಂರಕ್ಷಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸರ್ಕಾರ ಅಥವಾ ಯಾವುದೇ

ಕರ್ನಾಟಕ ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ಕಾಯ್ದೆ-2021ಕ್ಕೆ ರಾಜ್ಯಪಾಲರಿಂದ ಅಂಕಿತ Read More »

ಪುತ್ತೂರು: ವ್ಯಾಯಾಮದ ನೆಪದಲ್ಲಿ ಸೊಂಟ ಮುಟ್ಟಿದರೆಂಬ ಆರೋಪ| ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಶಿಕ್ಷಕ ಅಂದರ್

ಪುತ್ತೂರು: ವ್ಯಾಯಾಮ ಮಾಡಿಸುವಾಗ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪುತ್ತೂರಿನ ಖಾಸಗಿ ವಿದ್ಯಾಸಂಸ್ಥೆಯೊಂದರ ದೈಹಿಕ ಶಿಕ್ಷಣ ನಿರ್ದೇಶಕರೊಬ್ಬರನ್ನು ಪುತ್ತೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪುತ್ತೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರ ದೈಹಿಕ ಶಿಕ್ಷಣ ನಿರ್ದೇಶಕ ಕೊಂಬೆಟ್ಟು ನಿವಾಸಿ ಎಲ್ಯಾಸ್ ಪಿಂಟೋ ಬಂಧಿತ ಆರೋಪಿ. ಈ ಶಿಕ್ಷಕ ವಿದ್ಯಾಸಂಸ್ಥೆಯ ವಸತಿ ನಿಲಯದಲ್ಲಿರುವ ಮಡಿಕೇರಿ ಮೂಲದ ಅಪ್ರಾಪ್ತ ವಿದ್ಯಾರ್ಥಿನಿಗೆ ಅ.23ರಂದು ಲೈಂಗಿಕ ಕಿರುಕುಳ ನೀಡಿದ್ದು ಆಕೆ ಈ ವಿಚಾರವನ್ನು ತನ್ನ ಪೋಷಕರಿಗೆ ತಿಳಿಸಿದ್ದರು. ಆಕೆಯ ಪೋಷಕರು ಸಂಸ್ಥೆಗೆ ಬಂದು

ಪುತ್ತೂರು: ವ್ಯಾಯಾಮದ ನೆಪದಲ್ಲಿ ಸೊಂಟ ಮುಟ್ಟಿದರೆಂಬ ಆರೋಪ| ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಶಿಕ್ಷಕ ಅಂದರ್ Read More »

100 ಕೋಟಿ ಲಸಿಕೆ ವಿತರಣೆಗೆ ಸಂಭ್ರಮಿಸಿದ್ದಾಯ್ತು| ಪೆಟ್ರೋಲ್ ಡೀಸೆಲ್ ರೂ.100 ಆಗಿದ್ದಕ್ಕೆ ಸಂಭ್ರಮಾಚರಣೆ ಯಾವಾಗ ಮೋದಿಜೀ..!?

ಡಿಜಿಟಲ್ ಡೆಸ್ಕ್: ಭಾರತದಲ್ಲಿ 100 ಕೋಟಿ ಕೋವಿಡ್ -19 ಲಸಿಕೆ ವಿತರಣೆ ನಡೆಸಿದ್ದನ್ನು ಆಚರಿಸಿದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಇತರ ‘ಶತಕಾಚರಣೆ’ ‘ಸಂಭ್ರಮ’ಗಳನ್ನು ಆಚರಿಸುವಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ವಕ್ತಾರ ಪಿ.ಚಿದಂಬರಂ ಭಾನುವಾರ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಕೇಂದ್ರದ ಆಡಳಿತಾರೂಡ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ರಾಜ್ಯಸಭಾ ಸಂಸದ ಪಿ.ಚಿದಂಬರಂ, ಪ್ರಧಾನಿ ನರೇಂದ್ರ ಮೋದಿಯವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಪ್ರತಿ ಲೀಟರ್‌ಗೆ 100 ರೂ.ಗಳನ್ನು ದಾಟಿದೆ. ಪ್ರಧಾನಿ ಮೋದಿಯವರು ತಮ್ಮ ಮಂತ್ರಿಗಳನ್ನು 100 ಬಿಲಿಯನ್

100 ಕೋಟಿ ಲಸಿಕೆ ವಿತರಣೆಗೆ ಸಂಭ್ರಮಿಸಿದ್ದಾಯ್ತು| ಪೆಟ್ರೋಲ್ ಡೀಸೆಲ್ ರೂ.100 ಆಗಿದ್ದಕ್ಕೆ ಸಂಭ್ರಮಾಚರಣೆ ಯಾವಾಗ ಮೋದಿಜೀ..!? Read More »

ಟಿಪ್ಪರ್ ಗೆ ಬೈಕ್ ಢಿಕ್ಕಿ| ತಾಯಿ- ಮಗು ಸಾವು

ಬೆಂಗಳೂರು: ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದು ತಾಯಿ, ಮಗು ಸ್ಥಳದಲ್ಲೇ ಮೃತಪಟ್ಟ ಮನಕಲಕುವ ಘಟನೆ ಬೆಂಗಳೂರಿನ ಮಾರತ್ತಹಳ್ಳಿ ಹೊರವರ್ತುಲ ರಸ್ತೆಯಲ್ಲಿ ನಡೆದಿದೆ. ಪುರಂನಿಂದ ತಮಿಳುನಾಡಿನ ಧರ್ಮಪುರಿಗೆ ಬುಲೆಟ್ನಲ್ಲಿ ತೆರಳುತ್ತಿದ್ದ ವೇಳೆ ಮಾರತ್ತಹಳ್ಳಿ ಹೊರವರ್ತುಲ ರಸ್ತೆಯಲ್ಲಿ ಟಿಪ್ಪರ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಬೈಕ್ನ ಹಿಂಬದಿ ಕುಳಿತಿದ್ದ ತಾಯಿ-ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತಿ ಶಿವಕುಮಾರ್ಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಹೆಚ್‌ಎಎಲ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಿಪ್ಪರ್ ಗೆ ಬೈಕ್ ಢಿಕ್ಕಿ| ತಾಯಿ- ಮಗು ಸಾವು Read More »

ಜೆಡಿಎಸ್ ಶಾಸಕ ಎಸ್.ಮಂಜುನಾಥ್ ಬಂಧನ

ಬೆಂಗಳೂರು: ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯಲ್ಲಿ ಬಿಡಿಎ ಎನ್‌ಒಸಿ ಪಡೆದು ಕಟ್ಟಿದ್ದ ಮನೆಗಳನ್ನು ನೆಲಸಮ ಮಾಡುವುದನ್ನು ತಡೆಯಲು ಹೋದ ಜೆಡಿಎಸ್ ಪಕ್ಷದ ದಾಸರಹಳ್ಳಿ‌ ಕ್ಷೇತ್ರದ ಶಾಸಕ ಮಂಜುನಾಥ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯಲ್ಲಿ ಬಿಡಿಎ ಎನ್‌ಒಸಿ ಪಡೆದು ಕಟ್ಟಿದ್ದಂತ ಮನೆಗಳನ್ನೇ, ಪೊಲೀಸರ ನೆರವಿನಿಂದ ಬಿಡಿಎ ಅಧಿಕಾರಿಗಳು ಅಕ್ರಮದ ಹೆಸರಿನಲ್ಲಿ ನೆಲಸಮ ಮಾಡಲು ತೊಡಗಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ತೆರಳಿದಂತ ಜೆಡಿಎಸ್ ಶಾಸಕ ಮಂಜುನಾಥ್ ಅವರು ನೆಲಸಮ ಕಾರ್ಯಾಚರಣೆ ಅಡ್ಡಿ ಪಡಿಸಿದ್ದಾರೆ. ಇದರಿಂದ

ಜೆಡಿಎಸ್ ಶಾಸಕ ಎಸ್.ಮಂಜುನಾಥ್ ಬಂಧನ Read More »

ಪತಿ ಮೇಲೆ ಸಿಟ್ಟಿಗೆ – ಮೂರು ತಿಂಗಳ ಕಂದಮ್ಮನನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ| ಯುಟ್ಯೂಬ್ ನಲ್ಲಿ ಬಯಲಾಯ್ತು ಕೊಲೆ ಪ್ರಕರಣ !!!

ಭೋಪಾಲ್: ಪತಿ ಮೇಲೆ ಇರುವ ಕೋಪಕ್ಕೆ ತನ್ನ ಮೂರು ತಿಂಗಳ ಕಂದಮ್ಮನನ್ನು ತಾಯಿಯೇ ಕೊಂದು ಹಾಕಿರುವ ಘಟನೆ ಅಕ್ಟೋಬರ್ 12 ರಂದು ಮಧ್ಯಪ್ರದೇಶದಲ್ಲಿ ನಡೆದಿದೆ. ಸ್ವಾತಿ ಎಂಬಾಕೆ ತನ್ನ 3 ತಿಂಗಳ ಮಗಳನ್ನು ಹತ್ಯೆ ಮಾಡಿದ್ದಾಳೆ. ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ ಬಳಿಕ ಮಗು ಕಾಣೆಯಾಗಿದೆ ಎಂದು ಮನೆಯವರಿಗೆ ತಿಳಿಸಿದ್ದಾಳೆ. ಕಾಣೆಯಾದ ಮಗುವಿಗಾಗಿ ಮನೆಯವರೆಲ್ಲ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಮಗು ಸಿಗದೇ ಇದ್ದಾಗ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪಕ್ರರಣ ದಾಖಲಿಸಿಕೊಂಡ ಪೊಲೀಸರು ತನಿಖೆ

ಪತಿ ಮೇಲೆ ಸಿಟ್ಟಿಗೆ – ಮೂರು ತಿಂಗಳ ಕಂದಮ್ಮನನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ| ಯುಟ್ಯೂಬ್ ನಲ್ಲಿ ಬಯಲಾಯ್ತು ಕೊಲೆ ಪ್ರಕರಣ !!! Read More »

ಪುತ್ತೂರು: ಅಪ್ರಾಪ್ತೆಗೆ ಕಿರುಕುಳ ನೀಡಿದ ಅನ್ಯಕೋಮಿನ ವ್ಯಕ್ತಿ, ಫೋಕ್ಸೋ ದಾಖಲು.

ಪುತ್ತೂರು : ತಾಲೂಕಿನ ಬಡಗನ್ನೂರು ಗ್ರಾಮದ ಮೈಂದಿನಡ್ಕ ಸಮೀಪ ಅನ್ಯಕೋಮಿನ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ವ್ಯಕ್ತಿಯೋರ್ವನ ವಿರುದ್ದ ಪೊಕ್ಸೋ ಪ್ರಕರಣ ದಾಖಲಾಗಿದೆ. ಸ್ಥಳೀಯ ನಿವಾಸಿ ಆದಂ (56) ಎಂಬಾತ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯಾಗಿದ್ದು, ಬಾಲಕಿ ಬೀಡಿ ಬ್ರಾಂಚಿಗೆ ತೆರಳುತ್ತಿದ್ದ ಸಮಯದಲ್ಲಿ ಆಕೆಯ ಮೇಲೆ ಕೃತ್ಯ ಎಸಗಿರುವುದಾಗಿ ಆರೋಪಿಸಲಾಗಿದೆ.

ಪುತ್ತೂರು: ಅಪ್ರಾಪ್ತೆಗೆ ಕಿರುಕುಳ ನೀಡಿದ ಅನ್ಯಕೋಮಿನ ವ್ಯಕ್ತಿ, ಫೋಕ್ಸೋ ದಾಖಲು. Read More »

ಉಗ್ರ ಸಂಘಟನೆಯೊಂದಿಗೆ ಸಂಪರ್ಕ| ಬೆಂಗಳೂರಿನ ಯುವಕ ಅರೆಸ್ಟ್

ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಎನ್ನಲಾದ ಯುವಕನೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಶನಿವಾರ ಬಂಧಿಸಿ ಘಟನೆ ನಡೆದಿದೆ.ಬಂಧಿತ ಆರೋಪಿ ಬೆಂಗಳೂರಿನ ಮುಹಮ್ಮದ್ ತಾಖಿರ್ ಮೊಹಮ್ಮದ್ (33) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಸೆಕ್ಷನ್ 120ಬಿ, ಐಪಿಸಿ 125 ಮತ್ತು ಸೆಕ್ಷನ್ 17,18 ಹಾಗೂ ಯುಎ (ಪಿ) 18ಬಿ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎನ್‌ಐಎಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಮುಸ್ಲಿಂ ಸಮುದಾಯದ ಯುವಕರಲ್ಲಿ ಮೂಲಭೂತವಾದವನ್ನು ಪಸರಿಸಿ, ಅವರನ್ನು ಐಎಸ್ ಉಗ್ರ ಸಂಘಟನೆಗೆ ಸೇರಲು ಸಿರಿಯಾಕ್ಕೆ ಕಳುಹಿಸುತ್ತಿದ್ದ ಎಂಬ

ಉಗ್ರ ಸಂಘಟನೆಯೊಂದಿಗೆ ಸಂಪರ್ಕ| ಬೆಂಗಳೂರಿನ ಯುವಕ ಅರೆಸ್ಟ್ Read More »

ಸುಳ್ಯ: ಶಾಲಾ ಮಕ್ಕಳಿಂದ ಹದಗೆಟ್ಟ ರಸ್ತೆ ದುರಸ್ತಿ| ಜಾಲತಾಣದಲ್ಲಿ ಫೋಟೋ ವೈರಲ್|

ಸುಳ್ಯ: ಶಾಲಾ ಕಾಲೇಜುಗಳು ಕೊನೆಗೂ ಪ್ರಾರಂಭವಾಗಿವೆ.ಆದರೆ ಅದಕ್ಕೆ ತಕ್ಕಂತೆ ನಮ್ಮೂರಿನ ಜನಪ್ರತಿನಿಧಿಗಳು ತಯಾರಾಗಿಲ್ಲ ಎನ್ನೋದಕ್ಕೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿ‌ನ ಬೆಳ್ಳಾರೆಯ ಮಂಡೇಪು ಎಂಬಲ್ಲಿ ಶಾಲಾ ಮಕ್ಕಳಿಬ್ಬರು ಮಾಡಿದ ಕೆಲಸವೇ ಸಾಕ್ಷಿ. ಈ ಪುಟ್ಟ ಮಕ್ಕಳು ಶಾಲೆಗೆ ತೆರಳುವ ಹಾದಿಯ ಹದಗೆಟ್ಟ ರಸ್ತೆಯನ್ನು ತಾವೇ ಹಾರೆ ಹಿಡಿದು ಸರಿಪಡಿಸಿದ್ದು, ಈ ಫೋಟೋಗಳು ವೈರಲ್ ಆಗಿದೆ. ಏನಿದು ಘಟನೆ? ಸೋಮವಾರ ಶಾಲೆ ಆರಂಭವಾಗಿದೆ. ಎಲ್ಲ ಮಕ್ಕಳು ಸರಿ ಸುಮಾರು ಎರಡು ವರ್ಷದ ನಂತರ ಶಾಲೆಗಳಿಗೆ ತೆರಳುತ್ತಿದ್ದಾರೆ. ಹೀಗೆ ಖುಷಿಯಲ್ಲಿದ್ದ

ಸುಳ್ಯ: ಶಾಲಾ ಮಕ್ಕಳಿಂದ ಹದಗೆಟ್ಟ ರಸ್ತೆ ದುರಸ್ತಿ| ಜಾಲತಾಣದಲ್ಲಿ ಫೋಟೋ ವೈರಲ್| Read More »

ಶಾಲೆಗೆ ಹೊರಟಿದ್ದಾರೆ ಚಿಣ್ಣರು| ಇಂದಿನಿಂದ 1ರಿಂದ 5ನೇ ತರಗತಿಗಳು ಕೂಡಾ ಓಪನ್

ಬೆಂಗಳೂರು: ಒಂದೂವರೆ ವರ್ಷದ ನಂತರ ರಾಜ್ಯದಲ್ಲಿ ಇಂದಿನಿಂದ 1 ರಿಂದ 5 ನೇ ತರಗತಿ ಆರಂಭವಾಗಿವೆ. ನೀಟಾಗಿ ಯೂನಿಫಾರ್ಮ್ ತೊಟ್ಟು ಪುಟ್ಟ ಪುಟಾಣಿಗಳು ವರ್ಷದ ಬಳಿಕ ಶಾಲೆಗೆ ಹೊರಟಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಕೋವಿಡ್ ಮಾರ್ಗಸೂಚಿಯಂತೆ ಭೌತಿಕವಾಗಿ ತರಗತಿ ನಡೆಸಲು ಸೂಚನೆ ನೀಡಿದ್ದು, ಶಾಲೆಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಲೆಗಳಲ್ಲಿ ಶಾಲಾ ಕೊಠಡಿ, ಶೌಚಾಲಯ, ಅಡುಗೆ ಮನೆ ಮತ್ತು ಶಾಲಾ ಆವರಣವನ್ನು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಿಸಬೇಕು. ಮಕ್ಕಳು ಶಾಲೆಗಳಿಗೆ ಬರಲು ಪೋಷಕರಿಂದ ಕಡ್ಡಾಯವಾಗಿ ಅನುಮತಿ ಪತ್ರ ಪಡೆದುಕೊಂಡು

ಶಾಲೆಗೆ ಹೊರಟಿದ್ದಾರೆ ಚಿಣ್ಣರು| ಇಂದಿನಿಂದ 1ರಿಂದ 5ನೇ ತರಗತಿಗಳು ಕೂಡಾ ಓಪನ್ Read More »